[21/06, 4:15 PM] pankajarambhat: ಚಿತ್ರಕ್ಕೊಂದು ಜಾನಪದ ಗೀತೆ
ಚೆಲ್ವಿ
ಮಾರುದ್ದ ಜಡೆಯವಳೇ
ನಡುವಲ್ಲಿ ಕೊಡ ಇಟ್ಟವಳೇ
ನೀರನು ತರಲು ಹೊಂಟೆನವ್ವ
ಬೆಳ್ಳಾನೆ ಮುಖದಾಗೆ
ನಸು ನಗುವ ಬೀರೋಳೆ
ಕಣ್ಣಲ್ಲಿ ಕಾಡುತ್ತ ನಿಂತೊಳೆ
ಕುಪ್ಪಸ ತೊಡದೇನೆ
ಸೆರಗನ್ನು ಹೋದ್ದೋಳೆ
ನನ್ನ ಮನಸು ನಿನ್ನೆಡೆಗೆ ವಾಲೈತವ್ವ
ಕಿವಿಯಲ್ಲಿ ತೂಗಾಡೋಜುಮ್ಕಿನ
ಕಂಡರೆ ನನ ಮನಸು ತೂಗುತೈತೆ
ನಿನ್ನ ಮೇಲೆ ನನಗೆ ಮನಸಾಗೈತೆ
ಯಾವೂರ ಚೆಲುವೆ ನೀನವ್ವ
ನನ ಮನವ ಕದ್ದೊಳೆ ನೀನವ್ವ
ನಿನ್ನಂದ ಕಂಡು ನಾ ಸೋತೆನವ್ವ
ಕಂಬವ ಹಿಡಕೊಂಡು
ನಾಚುತ್ತ ನಿಂತ್ಕೊಂಡು
ಗೆಣೆಕಾರನ ನೆನಪು ಮಾಡ್ತಿಯೇನವ್ವ
ಪಾರಿವಾಳ ಕಳಿಸಿವ್ನಿ ನೋಡವ್ವ
ಒಲವ ಓಲೆ ಬರೆದಿವ್ನಿ ಓದವ್ವ
ನಗು ನಗುತ ನನ ಕೂಡೆ ಇರ್ಬೇಕವ್ವ
ಹೊತ್ತಾರೆ ಹೊಳೆದಂಡಕ್ಕೆ ಬರ್ತೀನಿ
ಬೇಗನೀ ಬಂದು ನನ್ನ ಮನ ತಣಿಸಬೇಕವ್ವ
ನನ್ನ ಜೀವ ನಿನ್ ಮೇಲೆ ಇರ್ತಯಿತೆವ್ವ
ಪಂಕಜಾ.ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
[21/06, 4:15 PM] pankajarambhat: *ಆತ್ಮೀಯ* *ಸ್ನೇಹಿತರೇ* *ಎಲ್ಲರಿಗೂ* *ನಮಸ್ಕಾರ*
*೧೮-೦೬-೨೦೨೦ ಗುರುವಾರದ* *"ಚಿತ್ರಕ್ಕೊಂದು ಜನಪದ ಗೀತೆ ರಚನೆ" ಸ್ಪರ್ಧೆಯ ಫಲಿತಾಂಶ .*🙏 ✍️📚✍️📚✍️📚
*ಅತ್ಯುತ್ತಮ ಜನಪದ ಗೀತೆ*
೧.ಜ್ಯೋತಿ ಕುಂಬ್ರ🏆
*ಉತ್ತಮ ಜನಪದ ಗೀತೆಗಳು*
೧.ಸಂಭ್ರಮ ಕಾರ್ತಿಕ್ ಭಟ್🥇
೨.ಲಕ್ಷ್ಮೀ ವಿ ಭಟ್🥇
*ಮೆಚ್ಚುಗೆ ಪಡೆದ ಜನಪದ ಗೀತೆಗಳು*
೧.ಪ್ರಿಯಾಶ್ರೀ ಕೆ.ಎಸ್ 🎁
೨.ಪಂಕಜಾ ಕೆ.ಮುಡಿಪು🎁
*ಎಲ್ಲರೂ ತುಂಬಾ ಸುಂದರವಾದ ಜನಪದ ಗೀತೆಯನ್ನು ರಚಿಸಿರುವಿರಿ.ಶುಭಹಾರೈಕೆಗಳು* .💐💐💐💐💐
*ನವಪರ್ವ ಅಡ್ಮಿನ್ ಬಳಗ.*✍️📚✍️📚✍️📚✍️📚✍️📚✍️📚✍️📚✍️📚✍️📚✍️📚✍️📚✍️📚✍️
Comments
Post a Comment