ಸಾಸಿವೆ ಗಜಲ್
ನನ್ನೆದೆಯ ತುಂಬಾ ಚೆಲು ಕನಸಿತ್ತು ನಲ್ಲ
ಮನದಲ್ಲಿ ಬಯಕೆಗಳು ತುಂಬಿತ್ತು ನಲ್ಲ
ನಿನ್ನ ಮೋಹಕ ನಗೆಯು ಮಾಡಿತು ಮೋಡಿ
ಒಲವ ಬಲೆಯಲಿ ನನ್ನ ಕೆಡವಿತ್ತು ನಲ್ಲ
ಕಣ್ಣನೋಟದ ಬಾಣಕೆ ಚಿಮ್ಮಿತು ಅನುರಾಗ
ನಸುನಗುವ ತುಟಿಗಳು ಕೆಣಕಿತ್ತು ನಲ್ಲ
ಮಾತಿಲ್ಲದೆಯೇ ಉಸುರುತಿದೆ ಒಲವಗಾನ
ಸವಿಕನಸುಗಳೆಲ್ಲಾ ನನಸಾಗಲು ಕಾದಿತ್ತು ನಲ್ಲ
ಸಾಸಿವೆಯಷ್ಟು ಪ್ರೀತಿಯೇ ಸಾಕು ಪಂಕಜಾಕ್ಷಿಗೆ
ಮೃದು ಹೃದಯ ನಿನ್ನೆಡೆಗೆ ವಾಲಿತ್ತು ನಲ್ಲ
ಪಂಕಜಾ.ಕೆ.ಮುಡಿಪು
Comments
Post a Comment