Skip to main content

ಗಜಲ್ ಜೇಳದೆ ಕೊಟ್ಟಿರುವೆ ಕಾವ್ಯಾಕುಟ ಉತ್ತಮ

[12/06, 10:34 PM] pankajarambhat: ಗಜಲ್

ದತ್ತಪದ  .. ಕೇಳದೆ ಕೊಟ್ಟಿರುವೆ ಹೃದಯವನ್ನು ನಿನಗೆ

ಒಲವ ಸೂಸುತ ನೀನು ನನ್ನೆದೆಯ ಕದ್ದಿರುವೆ ನಲ್ಲ
ಪ್ರೀತಿ ಪ್ರೇಮದ ಪಾಶದಲಿ ನನ್ನನು ಬಂಧಿಸಿರುವೆ ನಲ್ಲ

ಕೇಳದೆ  ಕೊಟ್ಟಿರುವೆ ಹೃದಯವನ್ನು  ನಿನಗೆ
ನನ್ನೊಡಲ ಪ್ರೇಮಧಾರೆಯ ಹರಿಸಿರುವೆ ನಲ್ಲ

ಕನಸಿನಲ್ಲೂ ನೀನೇ ನನ್ನ ಮನದರಸನಾಗಿರುವೆ
ಬಾಂದಳದ ಚಂದ್ರನಂತೆ  ನಗು ಬೀರುತಿರುವೆ ನಲ್ಲ

ಬಂಗಾರದ ಒಡವೆ  ಬೇಕೆಂದು ನಾ ಕೇಳಲಿಲ್ಲ
ನನ್ನದೆಲ್ಲವನೂ ನಿನಗೆ ಅರ್ಪಿಸಿರುವೆ ನಲ್ಲ

ಪಂಕಜಾಕ್ಷಿಯ ಮನವು ನಿನ್ನ ಒಳಿತನ್ನೇ ಹಾರೈಸುತ್ತಿದೆ
ಒಡನಾಡಿಯಾಗಿ ನಿನ್ನೊಡನೆ ಬಾಳತೇರನ್ನು ಎಳೆದಿರುವೆ ನಲ್ಲ

ಪಂಕಜಾ.ಕೆ. ಮುಡಿಪು
[12/06, 10:34 PM] pankajarambhat: *ದಿನಾಂಕಃ೧೨/೦೬/೨೦೨೦*
*ದಿನಃ ಶುಕ್ರವಾರ*

ಕಾವ್ಯ ಸಿಂಧುವಿನ ಅಮೂಲ್ಯ ಬಿಂದುಗಳೇ...ಎಲ್ಲರಿಗೂ ನಮಸ್ಕಾರ*
📔📔📔📔📔📔
*ಬರೆವವರ ಮುಕ್ತ ಮನ ರಚನೆಯಲಿ ಹೊಳೆದಿದೆ... ಬರೆದದ್ದೆಲ್ಲವೂ ಸುಂದರವಾಗಿದೆ ಯೋಜನಾತೀತದ ಯೋಚನೆಗಳಿಗೆ ನಮ್ಮ ನಮನ... ನರ್ವಹಣೆಯ ಕಾರ್ತವ ಸರಿ ಮಾಡದಿದ್ದುದಕೆ ನಾನೇ ಕ್ಷಮೆಯಾಚಿಸಬೇಕಿದೆ.... ನನಗೊಂದು ಸಮಾಧಾನವೆಂದರೆ, ಸಮಯದಭಾವದಲೂ ನಿಮ್ಮೆಲ್ಲರ ಗಜ಼ಲ್ ನ ಭಾವ ಹಿಡಿದಿಡಲು ಸಾಧ್ಯವಾದುದ್ದಕ್ಕೆ...*
📖📖📖📖📖📖
*ಫಲಿತಾಂಶ ಹೀಗಿದ್ದರೆ ಸ್ವೀಕರಿಸುವಿರಲ್ಲವೇ?😊*
📒📒📒📒📒📒

*ಅತ್ಯುತ್ತಮ*
==============
*ಸುರೇಶ್ ನೆಗಳಗುಳಿ*
*ಇಕ್ಬಾಲ್ ಕೈರಂಗಳ*
*ಶ್ಯಾಮ್ ಪ್ರಸಾದ್*
📗📗📗📗📗📗
*ಉತ್ತಮ*
=============
*ದೀಪ ಸದಾನಂದ*
*ಪಂಕಜ*
*ವಿರೂಕಾಕ್ಷಿ*
*ರತ್ನಮ್ಮ*
📘📘📘📘📘📘
*ಪ್ರಥಮ*
===============
*ಈಶ್ವರ್ ಮಮದಾಪುರ*
*ಸೌಗಂಧಿಕಾ*
*ಅಶೋಕ್ ಬೆಳಂಜೆ*
*ಭಾಷಿಣಿ*
*ಅನಸೂಯ*
📙📙📙📙📙📙
*ದ್ವಿತೀಯ*
=============
*ಜ್ಯೋತಿ*
*ಸುನಂದ*
*ಗೋವಿಂದಪ್ಪ*
*ಕುಮಾರ ಚಲವಾದಿ*
*ಅಮೃತ*
*ಮಂಜುನಾಥ ಕುಲಾಲ್*
📚📚📚📚📚📚
*ತೃತೀಯ*
============
*ವೆನ್ನಲ ಕೃಷ್ಣ*
*ಪ್ರೇಂ*
*ಜಯಲಕ್ಷ್ಮಿ*
*ಬಸವರಾಜು*
📰📰📰📰📰📰
*ಉಳಿದೆಲ್ಲವೂ ಮೆಚ್ಚುಗೆ ಪಡೆದಿದೆ*

📑📑📑📑📑📑

*ಭಾವನೆಗಳು ಮನುಷ್ಯನನ್ನು ಬಂಧಿಸುತ್ತವೆಯೋ ಅಥವಾ ಮನುಷ್ಯನೇ ಭಾವನೆಗಳಲ್ಲಿ ಬಂಧಿಯಾಗುತ್ತಾನೋ ಎನ್ನುವುದು ತಿಳಿಯದು. ಅದರೆ ಮನುಷ್ಯನ ಆಚಾರ, ವಿಚಾರ, ಕಾರ್ಯ, ಕೃತಿಗಳು ಭಾವನೆಗಳೊಂದಿಗೆ ಬೆಸೆದುಕೊಂಡಿರುತ್ತವೆ. ಭಾವನೆಗಳಿಲ್ಲದ ವ್ಯಕ್ತಿಯೇ ಇಲ್ಲ ಎಂದರೆ ತಪ್ಪಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಭಾವಲೋಕವಿರುತ್ತದೆ. ಅಲ್ಲಿ ಅವರ ಕಲ್ಪನೆಗಳು, ಕನಸುಗಳು, ಆಸೆಗಳು, ವಿಚಾರಗಳು ಜೀವ ತಳೆಯುತ್ತವೆ. ಒಂದು ವೇಳೆ ಬುದ್ಧಿಮಾತ್ರದಿಂದಲೇ ಆಕಾಂಕ್ಷೆ, ಚಿಂತನೆಗಳು ಹುಟ್ಟಿಕೊಂಡರೂ ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ. ಭಾವನೆ ಹಾಗೂ ಬುದ್ಧಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವು ಪರಸ್ಪರ ಹೊಂದಿಕೊಂಡು ಕೆಲಸ ಮಾಡಿದರೆ ಕಾರ್ಯ ಸುಗಮ; ಮನಸ್ಸಿಗೆ ಹಿತ. ಅದೇ ಅವೆರಡು ವಿರುದ್ಧ ದಿಕ್ಕಾದರೆ ಕೆಲಸಕ್ಕೆ ಅಡ್ಡಿ; ಮನಸ್ಸಿಗೆ ಗೊಂದಲ. ಆಗ ಸುಖ-ಸಂತೋಷಗಳು ನಮ್ಮಿಂದ ದೂರ ಸರಿಯುತ್ತವೆ. 
ನಮ್ಮ ಬದುಕು ಸುಖವಾಗಿ ಇರಬೇಕು ಅಂತಾದರೆ ಭಾವನೆಗಳ ನಿಯಂತ್ರಣ ಹಾಗೂ ಬುದ್ಧಿಯ ಹತೋಟಿ ಎರಡೂ ಅತೀ ಅವಶ್ಯಕ. ಭಾವನೆಯೇ ಬದುಕಾದರೂ ಕಷ್ಟ. ಅದೇ ರೀತಿ ಎಲ್ಲವನ್ನೂ ಬುದ್ಧಿಗೇ ಮೀಸಲಿಟ್ಟರೂ ಸಲ್ಲದು. ಆದ್ದರಿಂದ ಅವೆರಡರ ಸಮತೋಲನ ಅತ್ಯಂತ ಅಗತ್ಯವಾದುದು. ಪ್ರೀತಿ, ಸ್ನೇಹ, ಮೋಹ, ಕೋಪ ಹೀಗೆ.. ಯಾವ ರೀತಿಯ ಭಾವನೆಗಳು ಅತಿಯಾದರೂ ಮನಸ್ಸು ದಾರಿ ತಪ್ಪುತ್ತದೆ.* 
🗞🗞🗞🗞🗞🗞🗞
*ಅರಿತು ಬಾಳೋಣ...*
*ಜಗದಿ ನಲಿಯೋಣ...*
*ಅವರಿವರ ಅನುಭವದಿ ಬೆರೆತು ಕಲಿಯೋಣ*
*🙏ಶುಭವಾಗಲಿ🙏*

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...