ಪ್ರೀತಿ ಮಳೆ
ಬೇಸಿಗೆಯ ಬಿಸಿಲಲ್ಲಿ
ಬೆಂದು ಬಸವಳಿದಾಗ
ಸೋನೆ ಮಳೆಯಂತೆ
ಬಂದು ನೀ ಬಡಿದೆಬ್ಬಿಸಿದೆ
ನಸುನಗುತ ಬಳಿ ಬಂದು
ನಿನ್ನೊಲವ ಉಣಬಡಿಸಿ
ಮುಂಗಾರು ಮಳೆಯಂತೆ
ಮೈಮನಕೆ ಮುದ ತುಂಬಿದೆ
ನಿನ್ನ ಪ್ರೀತಿಯಾಲಿಂಗನದಲಿ
ಮೈ ಮರೆತು ನಿಂತಾಗ
ತುಂತುರು ಮಳೆಯಲ್ಲಿ
ನೆನೆದಂತ ಉಲ್ಲಾಸಹಾಸ
ಬರಡಾದ ಮನವಿಂದು
ನಿನ್ನೊಲವ ಸವಿ ಸವಿದು
ಸ್ವಾತಿ ಮಳೆಹನಿಯಂತೆ
ಬಾಳೆಲ್ಲಾ ಮುತ್ತಾಗಿದೆ
ನನ್ನೆದೆಯ ಭಾವಗಳು
ಎದೆ ಬಿರಿದು ಹೊರಬಂದು
ಕುಂಭದ್ರೋಣ ಮಳೆಯಲ್ಲಿ
ನೆನೆದಂತೆ ಹುಚ್ಚೆದ್ದಿದೆ
ಪಂಕಜಾ.ಕೆ.ಮುಡಿಪು
13.06.2020
Comments
Post a Comment