ಧೈರ್ಯ
ನೀತಿಕಥೆ
ಶ್ರೇಯಸ್ ಆ ಊರಿಗೆ ಅದೀಗ ತಾನೇ ಕೆಲಸಕ್ಕೆ ಸೇರಿದ್ದ . ಇನ್ನೂ ಸಣ್ಣ ಪ್ರಾಯ ದೈರ್ಯಶಾಲಿಯೂ ವಿವೇಕಿಯು ಆದ ಆತನನ್ನು ಕಂಡರೆ ಕಳ್ಳ ಕಾಕರು ತುಂಬಾ ಭಯ ಪಡುತ್ತಿದ್ದರು.ಆ ಊರಿನಲ್ಲಿ ಕಳ್ಳರ ಕಾಟ ಜೋರಿತ್ತು.ಶ್ರೇಯಸ್ ಕಳ್ಳರನ್ನು ಹಿಡಿಯಲು ತುಂಬಾ ಉತ್ಸುಕನಾಗಿದ್ದ.ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕಳ್ಳರ ಜಾಡು ಹಿಡಿಯುವುದು ಅವನಿಂದ ಆಸಾಧ್ಯವಾಗಿತ್ತು
ಆದರೂ ಆತ ತನ್ನ ಪ್ರಯತ್ನ ಬಿಡಲಿಲ್ಲ .ಆ ಊರಿನ ಪಶ್ಚಿಮ ದಿಕ್ಕಿನಲ್ಲಿ ಒಂದು ದೊಡ್ಡ ಕಾಡು ಇತ್ತು.ಕಾಡಿನ ಆ ಭಾಗ ಭಯನಕವಾಗಿತ್ತು.ಅಲ್ಲಿಗೆ ಹೋಗಲು ಎಲ್ಲರೂ ಹೆದರುತ್ತಿದ್ದರು. ಅಲ್ಲಿಗೆ ಹೋದವರು ಯಾರು ಹಿಂತಿರುಗಿ ಬಂದಿಲ್ಲ . ಕಳ್ಳರು ಅದೇ ಕಾಡಿನಲ್ಲಿ ಅಡಗಿರಬಹುದು ಎನ್ನುವ ಯೋಚನೆ ಬಂದು ಶ್ರೇಯಸ್ ತಾನು ಅಲ್ಲಿಗೆ ಹೋಗಿ ನೋಡಬೇಕು ಎಂದು ನಿಶ್ಹೈಸುತ್ತಾನೆ.ಅದನ್ನು ತನ್ನ ಆತ್ಮೀಯ ಗೆಳೆಯ ಸ್ವಾಗತ್ ನಲ್ಲಿ ಮಾತ್ರ ತಿಳಿಸಿ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿ ಒಂದು ದಿನ ಅಲ್ಲಿಗೆ ಹೊರಡುತ್ತಾನೆ.ಶ್ರೇಯಸ್ ಹೋಗಿ ವಾರವಾದರೂ ಅವನ ಸುದ್ದಿಯೇ ಇಲ್ಲಾ ಮೊಬೈಲ್ ಬಹುಶ ಚಾರ್ಜ್ ಮುಗಿಯಿತೇನೋ ಎಂದು ಯೋಚಿಸಿದ ಸ್ವಾಗತ್ ಇನ್ನೆರಡು ದಿನ ನೋಡಿ ಬಾರದಿದ್ದರೆ ಆತನ ಆಫೀಸಿಗೆ ಹೇಳಬೇಕು ಎಂದು ಯೋಚಿಸಿದ. ಆದರೆ ಮರುದಿನ ವಿಶ್ವಾಸ್ ಕಳ್ಳರನ್ನು ಹೆಡೆಮುರಿ ಕಟ್ಟಿ ಎಳೆದು ಕೊಂಡು ಬರುವುದು ಕಂಡು ಊರಿನ ಎಲ್ಲರೂ ವಿಶ್ವಾಸನ ಧೈರ್ಯವನ್ನು ಕೊಂಡಾಡಿದರು. ಆ ವರ್ಷದ ಶೌರ್ಯ ಪ್ರಶಸ್ತಿಗೆ ಆತ ಆಯ್ಕೆಯಾದ
ನೀತಿ..ದೈರ್ಯವಿದ್ದರೆ ಯಾವುದೇ ಕಾರ್ಯವನ್ನು ಸಾಧಿಸಬಹುದು
ಪಂಕಜಾ ಕೆ.ಮುಡಿಪು .
Comments
Post a Comment