ಹಾಸ್ಯಕವನ ಸ್ಪರ್ಧೆಗಾಗಿ
ತಂಟೆಕೊರ ಪುಟ್ಟ
ಮುಖಕ್ಕೆಲ್ಲಾ ಕ್ರೀಮ್ ಹಚ್ಚಿ
ಗಡ್ಡ ಮೀಸೆ ತೆಗೆಯುತ್ತಿಯೇನೋ ಪುಟ್ಟ
ಅಪ್ಪನ ನೋಡಿ ನೀನೂ ಕೂಡಾ
ಮುಖ ಬೋಳಿಸಲು ಕಲ್ತೆಯೇನೋ ಪುಟ್ಟ
ಅಮ್ಮನ ನೋಡಿ ನಾಲಿಗೆ ಚಾಚಿ
ಅಣಕಿಸುತ್ತಿಯೇನೋ ಪುಟ್ಟ
ಗಡ್ಡ ಮೀಸೆ ಇಲ್ಲದೆ ಇದ್ರು
ಯಾಕಿಂಗೆ ಕೆರೆಯೋಕೆ ಹತ್ಯಾ
ನಿನ್ನನ್ನು ನೋಡಿ ಎಲ್ಲಾರೂ ನಗ್ತಾರಲ್ಲ ಪುಟ್ಟ
ಅಪ್ಪ ನೋಡಿದರೆ ಬೈತರಲ್ಲೊ ಸಾಕು ಬಾರೋ ಪುಟ್ಟ
ಲೂಟಿ ಪಾಟಿ ಮಾಡಿ ನನಗೆ
ಕಾಟ ಕೊಡ್ತೀಯಲ್ಲೋ ಪುಟ್ಟ
ತುಂಟ ನೀನು ಹೇಗೆ ಹಿಡಿಯಲೊ
ಒಂದು ನಿಮಿಷವೂ ಕುಳಿತಲ್ಲಿ ಕೂರಲ್ವಲ್ಲ
ಪಂಕಜಾ.ಕೆ. ಮುಡಿಪು
Comments
Post a Comment