ಕುರುಡು ಪ್ರೀತಿ
ಆದಿನ ಸಾರಿಕ ಮನೆ ಬಿಟ್ಟಾಗಳೇ ತುಂಬಾ ತಡವಾಗಿತ್ತು .ಬಸ್ ಸ್ಟ್ಯಾಂಡ್ ಗೆ ಬಂದಾಗ ಬಸ್ ಗಳೆಲ್ಲಾ ಹೋಗಿ ಆಗಿತ್ತು .ಇಂದು ಪರೀಕ್ಷೆ ಬೇರೆ ಇದೆ ಏನು ಮಾಡಲಿ ಎಂದು ಯೋಚಿಸುತ್ತಿದ್ದಾಗ ಬೈಕೊಂದು ಹತ್ತಿರ ಬಂದು ನಿಂತಿತು ಅದರಲ್ಲಿದ್ದ ತರುಣ ಏನು ಮೇಡಂ ಕಾಲೇಜಿಗೆ ಹೊರಟಿರ. ಇನ್ನು ಅರ್ಧ ಗಂಟೆ ಬಸ್ ಇಲ್ಲ ನಿಮ್ಮ ಅಭ್ಯಂತರ ಇಲ್ಲದಿದ್ದರೆ ನನ್ನ ಜತೆ ಬನ್ನಿ ಎಂದು ಕರೆದಾಗ ಹೋಗದೆ ಇರಲು ಸಾರಿಕಾಳಿಗೆ ಆಗಲಿಲ್ಲ .ಆತ ತನ್ನ ಕಾಲೇಜಿನವನೆ ಎಷ್ಟೋ ಬಾರಿ ಲೈಬ್ರರಿ ಯಲ್ಲಿ ಭೇಟಿಯಾಗಿದ್ದರೂ ಒಬ್ಬರಿನ್ನೊಬ್ಬರ ಪರಿಚಯ ಆಗಿರಲಿಲ್ಲ .ಸಾರಿಕಾ ಕಾಲೇಜಿಗೆ ಹೋತ್ತಾಯಿತೆಂದು ಅವನ ಬೈಕ್ ನಲ್ಲಿ ಕುಳಿತಳು. ಶರವೇಗದಿಂದ ಬೈಕ್ ನ್ನು ಓಡಿಸಿದ ವಿಶ್ವಾಸ್ ಕಾಲೇಜಿಗೆ 5 ನಿಮಿಷದಲ್ಲಿಯೇ ತಲಪಿದ್ದ. ಭಯದಿಂದ ಉಸಿರು ಬಿಗಿಹಿಡಿದು ಅವನನ್ನು ತಬ್ಬಿ ಹಿಡಿದ ಸಾರಿಕಳನ್ನು ಆತನೇ ಎಚ್ಚರಿಸಬೇಕಾಯಿತು .ಆಕೆ ನಾಚಿಕೆಯಿಂದ ಥಾಂಕ್ಸ್ ಎಂದು ಮಾತ್ರ ಹೇಳಿ ತನ್ನ ಕ್ಲಾಸ್ ರೂಮ್ ಗೆ ಹೊರಟು ಹೋದಳು..ಈ ಪರಿಚಯ ನಿಧಾನವಾಗಿ ಸ್ನೇಹ ನಂತರ ಪ್ರೇಮಕ್ಕೆ ತಿರುಗಿತು .ಇಷ್ಟು ದಿನ ಆದರೂ ಸಾರಿಕಾ ಅವನ ಬಗ್ಗೆ ಏನೊಂದನ್ನು ವಿಚಾರಿಸಲೇ ಇಲ್ಲ .ಆಕೆ ಆತನನ್ನು ಸಂಪೂರ್ಣ ನಂಬಿದ್ದಳು .ಪ್ರೀತಿ ಎನ್ನುವುದು ಒಂದು ಮಾಯೆ ಸಾರಿಕಾ ಮಾಯೆಯ ಬಂಧನದಲ್ಲಿ ಬಿದ್ದು ಕುರುಡಾಗಿ ತನ್ನ ಹೆತ್ತ ತಂದೆ ತಾಯಿಯನ್ನು ಬಿಟ್ಟು ಒಂದು ದಿನ ಮನೆಯವರಿಗೆ ತಿಳಿಸದೆ ಅವನ ಜತೆ ಮನೆಬಿಟ್ಟು ಬಂದು ಬಿಟ್ಟಳು ಆತ ಅವಳನ್ನು ನಗರದ ಹೋಟೆಲಿ ಗೆ ಕರೆದು ಕೊಂಡು ಬಂದು, ಮದುವೆಯಾಗುವುದಾಗಿ ನಂಬಿಸಿ ಆ ರಾತ್ರಿ ಅವಳದೆಲ್ಲವನ್ನು ಸೂರೆಗೊಂಡ ಬೆಳಗ್ಗೆ ತಾನು ಹೊರಗೆ ಹೋಗಿ ಬರುತ್ತೇನೆ ಎಂದು ಹೋದವನು ವಾಪಸ್ ಬರಲೇ ಇಲ್ಲಾ. ಸಾರಿಕಾ ಅವನಿಗೆ ಏನಾಯಿತೋ ಎನ್ನುವ ಆತಂಕದಲ್ಲಿದ್ದಾಗ ಅಲ್ಲಿಗೆ ಒಬ್ಬ ಧಡೂತಿ ಬಂದು ರೂಮಿನ ಬಾಗಿಲು ಹಾಕುತ್ತಾನೆ ಸಾರಿಕಾ ಭಯಪಟ್ಟರೂ ಧೈರ್ಯದಿಂದ ಅವನನ್ನು ಎದುರಿಸಿದಾಗ ಆತ ನಿನ್ನನ್ನು ನಾನು 1 ಲಕ್ಷಕ್ಕೆ ಕೊಂಡಿದ್ದು ಸುಮ್ಮನೆ ಬಿಡುತ್ತೇನೆಯೇ ಎಂದು ಹೇಳಿದಾಗ ಸಾರಿಕಾಳಿಗೆ ಏನೊಂದು ಅರ್ಥವಾಗದೆ ಆತನ ಮುಖ ನೋಡಿದಾಗ ಆತ ಅಯ್ಯೋ ಪೆದ್ದಿ ಆತ ನಿನ್ನನ್ನು ನನಗೆ ಮಾರಿ ಹೋಗಿದ್ದಾನೆ ಇದು ಮೊದಲು ಅಲ್ಲಾ ಹೀಗೆ ಆಗಾಗ ಆತ ಹೆಣ್ಣುಗಳನ್ನು ತಂದು ನನಗೆ ಮಾರುತ್ತಾನೆ ನೀನು ಎಷ್ಟನೆಯವಳೋ ಎಂದು ವಿಕೃತವಾಗಿ ನಗುತ್ತಾನೆ ಸಾರಿಕಾ ದುಃಖದಿಂದ ಕುಸಿದು ಕುಳಿತು ಕೊಳ್ಳುತ್ತಾಳೆ .
ನೀತಿ .....ಯೌವನ ದಲ್ಲಿ ಪ್ರೀತಿ ಪ್ರೇಮ ಎಂದು ಯಾರನ್ನು ಅತಿಯಾಗಿ ಹಚ್ಚಿಕೊಳ್ಳಬಾರದು
ಪಂಕಜಾ.ಕೆ. ಮುಡಿಪು
Comments
Post a Comment