Skip to main content

ಚಿತ್ರಕ್ಕೊಂದು ಮಕ್ಕಳ ಕವನ ಆನೆ ಬಂತೊಂದಾನೆ

ಚಿತ್ರಕ್ಕೊಂದು ಮಕ್ಕಳ ಕವನ

ಆನೆ ಬಂತೊಂದಾನೆ

ಹಕ್ಕಿಯು ಹಾರುತ
ಬರುತಿದೆ ಬೆನ್ನಿಗೆ
ಆನೆಯು ಸರ ಸರ ಓಡುತಿದೆ

ಸೊಂಡಿಲಲೊಂದು
ಹೂವನು ಹಿಡಿದು
ದೇವರ ಪೂಜೆಗೆ ಸಾಗುತಿದೆ

ಹಕ್ಕಿಯ ಜತೆಯಲಿ
ಹಾಡನು ಗುನುಗುತ
ನಡೆಯುವ ಆನೆಯ ಚಂದ

ಉದ್ದನೆ ಸೊಂಡಿಲು
ಸಣ್ಣನೆ ಬಾಲ
ಬಾಯಲಿ ಇರುವುದು ಕೋರೆ ಹಲ್ಲು

ದೊಡ್ಡ ಹೊಟ್ಟೆಯ
ಸಣ್ಣ ಕಣ್ಣಿನ
ಕಾಡಿನ ಗಜರಾಜನಿವನು

ದಪ್ಪನೆ ಕಾಲ್ಗಳ
ಎತ್ತುತ ಓಡಿತು
ಬಾರಿ ಗಾತ್ರದ ಈ ಆನೆ

ಆನೆ ಬಂತೊಂದು ಆನೆ
ದೇವರ ಸೇವೆಯ ಆನೆ
ಮದವೂರ ದೇವರ ಮುದ್ದಾನೆ

ಪಂಕಜಾ .ಕೆ.ಮುಡಿಪು

Comments