Skip to main content

ಚಿತ್ರಕ್ಕೊಂದು ಕವನ ಬೇರು ಬಳಗ ಬೆಂದ ಬದುಕು

ಬೇರು ಬಳಗ ಸ್ಪರ್ಧೆಗಾಗಿ
ಚಿತ್ರಕ್ಕೊಂದು ಅಶುಕವನ

ಬೆಂದ ಬದುಕು

ಹರಿದ ಚಪ್ಪಲಿ
ಕೈಯಲಿ ಡಿದು
ಹೊಲಿಯುತಿರುವನು ಮೋಚಿಯು

ಕುಲದ ಕಸುಬನು
ಬಿಡದೆ ಉಳಿಸಲು
ಶ್ರಮದಿ ದುಡಿಯುವನು ಮೋದದಿ

ದುಡಿದು ದಣಿದಿದೆ
ದೇಹ ಸೊರಗಿದೆ
ಕಣ್ಣು ಕೈಗಳು ಸೋತಿದೆ

ಬೆನ್ನು ಬಾಗಿದೆ 
ಕಾಯ ನಶಿಸಿದೆ
ಜೀವನ ಭಾರವೆನಿಸಿದೆ

ಹೊಟ್ಟೆ ಬಟ್ಟೆಯ
ಚಿಂತೆಕಳೆಯಲು
ದುಡಿಯಬೇಕಿದೆ ನಿತ್ಯವೂ

ಪಂಕಜಾ.ಕೆ.ಮುಡಿಪು

Comments