Skip to main content

ನೆನಪಿನ ಕಾಣಿಕೆ ಕಥೆ ಮಣ್ಣಿನ ಋಣ ನವಪರ್ವದಲ್ಲಿ ಅತ್ಯುತ್ತಮ

ನವಪರ್ವ ಬಳಗದಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ನನ್ನ ಕಿರು ಕಥೆ

ಕೊಟ್ಟಪದ..ನೆನಪಿನ ಕಾಣಿಕೆ

ಮಣ್ಣಿನ ಋಣ
  
ತುಂಬು ಬಡತನದಲ್ಲಿ ಬೆಳೆದ ಸಾಕೇತನಿಗೆ ತನ್ನ ಬಾಲ್ಯ ಮಿತ್ರ ದನುಷ್ ಎಂದರೆ ಅಚ್ಚುಮೆಚ್ಚು .ಇಬ್ವರೂ ಒಬ್ಬರಿನ್ನೊಬ್ಬರು  ಬಿಟ್ಟಿರಲಾರದಷ್ಟು ಆತ್ಮೀಯರಾಗಿದ್ದರು.ಬಡವನಾಗಿದ್ದ ಸಾಕೇತನು ಓದು ಬರಹದಲ್ಲಿ ಮುಂದಿದ್ದರೂ ,ತನ್ನ ಬಡತನದ ಕಾರಣದಿಂದಾಗಿ ಮುಂದೆ ಕಲಿಯುವ ತನ್ನ ಹಂಬಲವನ್ನು  ಬಿಟ್ಟು ಬಿಡಬೇಕಾದ  ಪರಿಸ್ಥಿತಿ ಬಂತು .ಇದನ್ನು ತಿಳಿದ ಆತನ ಗೆಳೆಯ ದನುಷ್ ತನ್ನ ತಂದೆ ತನಗೆ ಕೊಟ್ಟ ಪ್ಯಾಕೆಟ್ ಮನಿಯಿಂದ ಗೆಳೆಯನ ಶಾಲೆಯ ಶುಲ್ಕ ವನ್ನು ಕಟ್ಟಿ ಗೆಳೆಯನ ವಿದ್ಯಾಭ್ಯಾಸ ಪೂರ್ಣವಾಗುವಂತೆ ನೋಡಿಕೊಂಡ .ಮಿತ್ರನ ಈ ಒಂದು ಉಪಕಾರದಿಂದ ಕಣ್ಣು ತುಂಬಿ ಬಂದ  ಸಾಕೇತ್ ಗೆಳೆಯನ ಕೈಯನ್ನು ಹಿಡಿದುಕೊಂಡು ಅತ್ತು ಬಿಟ್ಟ   .ಗೆಳೆಯ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುವ ತನ್ನ ನಿರ್ಧಾರವನ್ನು ತಿಳಿಸಿದಾಗ ಆತನಿಗೆ ತನ್ನ ನೆನಪಿನ ಕಾಣಿಕೆಯಾಗಿ ಸಾಕೇತ್ ಚಿಕ್ಕದಾದ ಒಂದು   ಬಾಟಲಿಯನ್ನು ಕೊಟ್ಟು ನಿನಗೆ ಕೊಡಲು ನನ್ನಲ್ಲಿ ಇದರ ಹೊರತು ಬೇರೇನೂ ಇಲ್ಲ  ದಯವಿಟ್ಟು ಇದನ್ನು ತೆಗೆದುಕೊ ಮತ್ತು ಜೋಪಾನವಾಗಿ  ಇಟ್ಟುಕೊ ನಿನ್ನ ವಿದ್ಯೆ ನಿನ್ನ ತಾಯ್ನಾಡಿನ ಉನ್ನತಿಗೆ ಉಪಯೋಗವಾಗಲಿ ಎಂದು ಹಾರೈಸಿ ಗೆಳೆಯನನ್ನು ಅಪ್ಪಿ ಕಣ್ಣೀರಿಟ್ಟು ಬೀಳ್ಕೊಟ್ಟ. ಹೋಗುವ ಅವಸರದಲ್ಲಿ ಇದ್ದ  ಧನುಷ್ ಗೆಳೆಯನು ಕೊಟ್ಟ  ಬಾಟಲಿಯನ್ನು ತೆರೆದು ನೋಡುವ ಗೊಡವೆಗೆ ಹೋಗದೆ ತನ್ನ ಬಟ್ಟೆ ಬರೆಗಳ ಜತೆ ಅದನ್ನು ಸೇರಿಸಿ ಕೊಂಡೊಯ್ದ.ಅಲ್ಲಿತನ್ನ ವಿದ್ಯಾಭ್ಯಾಸದಲ್ಲಿ ಸಂಪೂರ್ಣ ತೊಡಗಿಕೊಂಡ ಆತನಿಗೆ ಹೆಚ್ಚು ಕಡಿಮೆ ಗೆಳೆಯ ಹಾಗೂ ಅವನ ಕಾಣಿಕೆಯ ನೆನಪು ಮರೆತೆ  ಹೋಗಿತ್ತು .ಅದೊಂದು ದಿನ ಆತನ ಸಹಪಾಠಿ  ಧನುಷ್ ನ ವಸ್ತುಗಳನ್ನು ತೆಗೆದಿಡುವಾಗ ಆ  ಬಾಟಲಿಯನ್ನು ಕಂಡು ಕುತೂಹಲದಿಂದ ಅದರ ಮುಚ್ಚಳ ತೆಗೆದು ನೋಡಲಾಗಿ ಅದರಲ್ಲಿ ಕೇವಲ ಮಣ್ಣು ಮಾತ್ರ ಇರುವುದು ಕಂಡು ಧನುಷ್ ನನ್ನು ವಿಚಾರಿಸಲು  ತನ್ನ ಬಾಲ್ಯಗೆಳೆಯ ತನಗೆ ಕೊಟ್ಟ ನೆನಪಿನ ಕಾಣಿಕೆ ಅದು ಎಂದು ಹೇಳುತ್ತಾನೆ ಮತ್ತು ಗೆಳೆಯ ಆ ಸಂಧರ್ಭದಲ್ಲಿ ಹೇಳಿದ ಮಾತುಗಳು ನೆನಪಾಗಿ ಆತ ತನ್ನ ಮುಂದಿನ ಗುರಿಯನ್ನು  ಸ್ಪಷ್ಟಪಡಿಸಿಕೊಳ್ಳುತ್ತಾನೆ . ಅದರಂತೆ ತನ್ನ ವಿದ್ಯಾಭ್ಯಾಸ ಪೂರ್ತಿಯಾದ ತಕ್ಷಣ ತಾಯ್ನಾಡಿಗೆ ಮರಳಿ ಅಲ್ಲಿಯೇ  ತನ್ನ ವಿದ್ಯೆಯಿಂದ ಹಲವರ ಜೀವನಕ್ಕೆ ಬೆಳಕಾಗು ತ್ತಾನೆ.ಈ ಸಂಧರ್ಭದಲ್ಲಿ ತನ್ನ ಪ್ರೀತಿಯ ಗೆಳೆಯನನ್ನು ಭೇಟಿಯಾದ ಧನುಷ್ ತಾಯ್ನಾಡಿಗೆ ವಾಪಸ್ ಬರಲು ನೀನು ಕೊಟ್ಟ ನೆನಪಿನ ಕಾಣಿಕೆಯೇ ಕಾರಣ ತಾಯ್ನಾಡಿನ ಮಣ್ಣಿನ  ವಾಸನೆ ನನ್ನನ್ನು ಮರಳಿ ಇಲ್ಲಿಗೆ ಬರುವಂತೆ ಮಾಡಿತು ಎಂದು ಹೇಳಿ ಗೆಳೆಯನನ್ನು ಆಲಂಗಿಸಿಕೊಳ್ಳುತ್ತಾನೆ. ಧನುಷ್ ನ  ಸಹಾಯದಿಂದ   ಸಾಕೇತನು ಈಗ ಒಳ್ಳೆಯ ಕೆಲಸವನ್ನು ಸಂಪಾದಿಸಿದ್ದು. ಗೆಳೆಯನ ನೆನಪಿನ ಕಾಣಿಕೆ ನನ್ನ ಜೀವನವನ್ನೇ ಬದಲಿಸಿದೆ ಎಂದು ಕಣ್ತುಂಬಿ ಕೊಳ್ಳುತ್ತಾನೆ

 ನೀತಿ.. ತಾಯ್ನಾಡಿನ ಮಣ್ಣಿನ ಋಣವನ್ನು ನಾವು ಎಲ್ಲಿದ್ದರೂ  ತೀರಿಸಬೇಕು
 
 ಪಂಕಜಾ.ಕೆ.ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...