Skip to main content

ಹನಿ ಹನಿ ಇಬ್ಬನಿ

ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ

ಗುರಿ

ಮನದ ತುಂಬಾ ಕನಸುಗಳು
ತುಂಬಿ ನಿಂತು ಕಾಡಿದೆ
ನನಸು ಮಾಡ ಲದಕೆ ನಾವು
ನಿತ್ಯ ಶ್ರಮಿಸಬೇಕಿದೆ

ಭರವಸೆಯ ಬೆಳಕಿನಲಿ
ಬಾಳ ದೋಣಿ ಸಾಗಿದೆ
ಗುರಿಯ ಸೇರಲದಕೆ ನಾವು
ಛಲವ ತುಂಬ ಬೇಕಿದೆ

ಕಲ್ಲು. ಮುಳ್ಳು ಏನೇ ಇರಲಿ
ಸರಿಸಿ  ನಡೆಯ ಬೇಕಿದೆ
ಕಷ್ಟ ಸುಖವ ಸಹಿಸಿಕೊಂಡು
ತೀರ ಸೇರಬೇಕಿದೆ

ಕೋಪ ದ್ವೇಷ ಮರೆತು ನಾವು
ಒಂದುಗೂಡಬೇಕಿದೆ
ನಾವು ಎಲ್ಲಾ ಒಂದೇ ಎನುತ
ನಗುತ ಬಾಳಬೇಕಿದೆ

ಪಂಕಜಾ.ಕೆ.ಮುಡಿಪು

Comments