Skip to main content

ಕವಿಸಾಹಿತಿಗಳ ಜೀವಾಳ ಒಲವಿನ ಪಯಣ ಕಥೆ

ಕವಿ ಸಾಹಿತಿಗಳ ಜೀವಾಳ ಚಿತ್ರ ಕ್ಕೊಂದು ಕಥೆ ಸ್ಪರ್ಧೆಯಲ್ಲಿ.  ಮೆಚ್ಚುಗೆ

ಒಲವಿನ ಪಯಣ

ನಿರ್ಮಲಾಪುರದ ಜಮೀನುದಾರ ಶಿವಣ್ಣನ ಮಗ ರಂಜನ್ ವಿದ್ಯೆಬುದ್ಧಿಯಲ್ಲಿ ಜಾಣನಾಗಿದ್ದರೂ ಕೃಷಿಯ ಬಗ್ಗೆ ಒಲವು ಇದ್ದುದರಿಂದ ಕೃಷಿಯಲ್ಲಿ ಉನ್ನತ ವ್ಯಾಸಂಗ ಮಾಡಿ ಹಳ್ಳಿಯ ಮನೆಯಲ್ಲಿ ನೆಲೆಸಿ ತಂದೆಯ ಜತೆ ಕೃಷಿ ಕಾರ್ಯದಲ್ಲಿ ತೊಡಗಿದ್ದನು.  ಅವನ ಮಾವನ ಮಗಳಾದ ಮೀರಳಿಗೆ ರಂಜನ್ ನೆಂದರೆ ಅಚ್ಚುಮೆಚ್ಚು .ಆದರೆ ಅವಳ ತಂದೆ ಮಾತ್ರ ಅವಳನ್ನು ಆ ಹಳ್ಳಿಗೆ ಹೋಗಲು ಬಿಡುತ್ತಿರಲಿಲ್ಲ ಪ್ರಕೃತಿ ಪ್ರೇಮಿಯಾಗಿದ್ದ ಮೀರಳಿಗೆ ಅತ್ತೆಯ ಮನೆಗೆ ಹೋಗುವ ಆಸೆಯಿದ್ದರೂ ತಂದೆಯ ಮಾತನ್ನು ಮೀರಿ ಹೋಗುವುದು ಅಸಾಧ್ಯವಾಗಿತ್ತು. ತನಗೆ ಕೃಷಿಯಲ್ಲಿ ಆಸಕ್ತಿ ಇದ್ದರೂ ತಂದೆ ಯ ಒತ್ತಾಯಕ್ಕೆ ಇಂಜಿನೀಯರ್ ಕಲಿತ ಮೀರಾ ಕಲಿತ ತಕ್ಷಣ ಕೆಲಸಕ್ಕೂ ಸೇರಿದ್ದಳು.ಆದರೆ ಯಾವ ಹುಡುಗನನ್ನು ತೋರಿಸಿದರೂ ಮದುವೆಗೆ ಒಪ್ಪದ ಮೀರಾಳ ಮನಸು ರಂಜನನಲ್ಲಿಲೀನವಾಗಿತ್ತು.  ಅದೊಂದು ದಿನ  ಮೀರಾ ಅಮ್ಮ ಅಪ್ಪನನ್ನು  ಒಪ್ಪಿಸಿ ಅತ್ತೆಯ ಮನೆಗೆ ಬಂದಿಳಿದಳು .ಪೇಟೆಯಲ್ಲಿ ಕಲಿತ ಹೆಣ್ಣಾಗಿದ್ದರೂ, ಸೀರೆ ಉಡುವುದೆಂದರೆ ಮೀರಳಿಗೆ ತುಂಬಾ ಇಷ್ಟ   ಆಕೆ ಆ ದಿನ ಅಳ್ಳಕವಾಗಿ ಜಡೆ ಹೆಣೆದು  ಕಿವಿಯ ಬದಿಗೆ ಹೂ ಮುಡಿದು ಬಳುಕುತ್ತಾ ಬರುವುದನ್ನು ಕಂಡ ರಂಜನ್  ಅವಳ ಸೌಂದರ್ಯಕ್ಕೆ ಬೆರಗಾಗಿ  ತಮಾಷೆ ಮಾಡಿದಾಗ ನಸು ಲಜ್ಜೆಯಿಂದ ಮೀರಾ ನಗುಮುಖದಿಂದ ಅವನ ತಮಾಷೆ ಮಾತುಗಳನ್ನು ಕೇಳುತ್ತಿದ್ದಳು. ಆ ಹಳ್ಳಿಯ ಪ್ರಕೃತಿ ಸೌಂದರ್ಯ ವನ್ನು ಕಂಡು ಬೆರಗಾದ ಮೀರಾ ತನ್ನ ಆಯ್ಕೆಗಾಗಿ ಹೆಮ್ಮೆ ಪಟ್ಟುಕೊಂಡಳು .ರಂಜನ್ ತಮ್ಮ ಹಳೆಯ ಮುಳಿಹುಲ್ಲಿನ ಮನೆಯನ್ನು ಹಾಗೆ ಉಳಿಸಿ ಹೊಸದಾಗಿ ಹಂಚಿನ ಮನೆಯನ್ನು ಕಟ್ಟಿದ್ದು  ಸದ್ಯದಲ್ಲಿಯೇ ಅದರ ಗೃಹಪ್ರವೇಶ ಮಾಡುವ ಮತ್ತು ಅದೇ ದಿನವೇ ತಾನು ಇಷ್ಟಪಟ್ಟ ಮೀರಳನ್ನು ಮನೆತುಂಬಿಸಬೇಕೆನ್ನುವ ಅಭಿಪ್ರಾಯವನ್ನು ಹೊಂದಿದ್ದ .ಇದಕ್ಕೆ ಮೀರಳೂ ಒಪ್ಪಿದ್ದಳು.ಇನ್ನು ಅತ್ತೆ ಮಾವನನ್ನು ಒಪ್ಪಿಸುವ ಕೆಲಸ ಮಾತ್ರ ಬಾಕಿ ಇತ್ತು .ಅದಕ್ಕಾಗಿ ಒಂದು ಶುಭದಿನ ಅತ್ತೆ ಮಾವನನ್ನು ತಮ್ಮೂರಿಗೆ ಆಹ್ವಾನಿಸಿದ ರಂಜನ್  ತಾನು ಸರಳವಾಗಿ ಪಂಚೆ ಶರಟು ಧರಿಸಿ  ನಗುಮುಖದಿಂದ ಅವರನ್ನು ಸ್ವಾಗತಿಸಿದ.ಅಳಿಯನ ಹೊಸಮನೆ  ಹಳ್ಳಿಯ ಸುಂದರ ಪರಿಸರವನ್ನು ಕಂಡ ಮೀರಳ ತಂದೆ ಅವರಿಬ್ಬರ ಮದುವೆಗೆ ತನ್ನ ಒಪ್ಪಿಗೆ ಕೊಟ್ಟು ಬಿಟ್ಟಿದ್ದರಿಂದ  ಮೀರಾ ಮತ್ತು ರಂಜನ್ ತುಂಬಾ ಖುಷಿಯಲ್ಲಿ ಇದ್ದರು.  ಮುಳಿಹುಲ್ಲಿನ ಹಳೆಯ ಮನೆಯ ಹತ್ತಿರ ನಿಂತು ಮಾತನಾಡುತ್ತಿದ್ದಾಗ.,ರಂಜನ್ ತನ್ನ  ಶಾಲಾದಿನಗಳ ನಗೆ ಪ್ರಸಂಗವನ್ನು ಹೇಳಿ ಮೀರಳನ್ನು ನಗಿಸುತ್ತಿದ್ದನು.ಮೀರಳಿಗೆ ಅವನನ್ನು  ಕಂಡಾಗಲೆಲ್ಲಾ ನಾಚಿಕೆಯಿಂದ  ಮುಖ ಕೆಂಪಾಗುತ್ತಿತ್ತು .ಅಂತೂ ಹಿರಿಯರ ಒಪ್ಪಿಗೆಯಿಂದ ಇಬ್ಬರ ಮದುವೆಯೂ ವಿಜೃಂಭಣೆಯಿಂದ ರಂಜನ್ ಇಷ್ಟದಂತೆ ನೆರವೇರಿ ಹೊಸಮನೆಯ ಗೃಹಪ್ರವೇಶವನ್ನು ನವ ದಂಪತಿಗಳು ಮಾಡಿ ಇಬ್ಬರೂ ಹಳ್ಳಿಯ ಪರಿಸರದಲ್ಲಿ ಜಕ್ಕವಕ್ಕಿಗಳಂತೆ  ನಲಿಯುತ್ತಿದ್ದರು ಹಳ್ಳಿಯ ಪರಿಸರ ಇಷ್ಟೊಂದು ಸುಂದರ ಇರಬಹುದೆನ್ನುವ ಕಲ್ಪನೆಯನ್ನೇ ಮಾಡಿರದ ಮೀರಾ ಈಗ ಪರಮಸುಖಿ. ಇವರಿಬ್ಬರ ಪ್ರೀತಿಯನ್ನು ಕಂಡು ಇಬ್ಬರ ತಂದೆ ತಾಯಿಯರು ಖುಷಿ ಪಡುತ್ತಿದ್ದರು.

ಶ್ರೀಮತಿ.ಪಂಕಜಾ. ಕೆ. ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...