Skip to main content

ಬದುಕಿನಲಿ ನಾ ಕಲಿತ ಪಾಠ

[1/12/2020, 10:03 PM] pankajarambhat: ಗುರುಕುಲಾ ಚಿಕ್ಕಮಗಳೂರು ಘಟಕದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನನ್ನ ಕವನ

ವಿಷಯ ...ನಾ ಕಂಡ ಇಳೆಯ ಸಂಜೆ

     ಮುಸ್ಸಂಜೆ

ನಾ ಕಂಡ ಇಳೆಯ ಸಂಜೆಯ ಸೊಬಗು
ತಂದಿತು ಮನಸಿಗೆ ಬೆರಗು
ಬಾನಲಿ ಕಲಸಿದ ಚೆಲುವಿನ ಬಣ್ಣ
ಸೆಳೆಯಿತು ರಸಿಕರ ಕಣ್ಣ

ಪಡುಗಡಲಲಿ ಮುಳುಗಿದ ರವಿ
ಇಳೆಯಲಿ ತುಂಬಿದ  ಬಣ್ಣದ ಸವಿ
ತಂಪಿನ ಗಾಳಿಯು ಸೊಂಪಲಿ ಬೀಸಿ
ಹರಡಿತು ಸುಮಧುರ ಗಂಧವ ಸೂಸಿ

ಹಸಿರಿನ ಸಿರಿಯೆಡೆ   ಬಣ್ಣದ  ಕಾಂತಿ
ಧರೆಯಲಿ  ತುಂಬಿತು ಮೌನದ ಶಾಂತಿ
ನೇಸರ ಹೊರಳಿದ  ನಿಶೆಯನು ಅಪ್ಪಿ
ಮನದಲಿ ಚೆಲುವಿನ ಕನಸನು ಬಿತ್ತಿ

ಹಕ್ಕಿಗಳ ಚಿಲಿಪಿಲಿ ಗಾನದ ರಾಗ
ಗುನುಗಿತು ಮನದಲಿ ಹೊಸರಾಗ
ಸೊಬಗಿನ ಸಿರಿಯಲಿ ಮೈಮನ ಮರೆತು 
ತನುವಲಿ ತುಂಬಿತು ಹೊಸ ಕನಸು

ದಿನಕರ ತೆರಳಲು ಮೂಡಿದ ಶಶಿ
ಬಾನಿನ  ತುಂಬಾ ಬೆಳ್ಳಿಯ ಚುಕ್ಕಿ
ಕೊಳದಲಿ ಅರಳಿತು ನೈದಿಲೆ ಹೂವು
ಶಶಿಯನು ಕಾಣುತ ಬಿರಿಯಿತು ಚೆಲುವು

ಶ್ರೀಮತಿ.ಪಂಕಜಾ.ಕೆ. ಮುಡಿಪು
[2/12/2020, 10:24 PM] pankajarambhat: ಧಾರವಾಡ ಯುವ ಬರಹಗಾರರ ಒಕ್ಕೂಟದ ಲೇಖನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನನ್ನ ಲೇಖನ

ವಿಷಯ.. ಬದುಕಿನಲ್ಲಿ ನಾ ಕಲಿತ ಪಾಠವಿ

ಬದುಕಿನಲ್ಲಿ ತುಂಬಾ ಕಷ್ಟ ಪಟ್ಟು.ಮೇಲೇರಿದವಳು ನಾನು.ನನ್ನ ಸ್ವಪ್ರಯತ್ನದಿಂದ ವಿದ್ಯೆ ಕಲಿತು  , ಕೆಲಸಕ್ಕೆ ಸೇರಿ, ನಿವೃತ್ತಿಯ ನಂತರ ಪ್ರವೃತ್ತಿಯಾಗಿ  ಬಿಡುವಿನ ವೇಳೆಯಲ್ಲಿ  ಬರವಣಿಗೆ ಹವ್ಯಾಸ ದಲ್ಲಿ ತೊಡಗಿದ್ದ, ನನ್ನ ಬಾಳಿನಲ್ಲಿ ಆಕೆಯ ಆಗಮನವಾದಾಗ ನಾನು ತುಂಬಾ ಖುಷಿ ಯಲ್ಲಿ ಇದ್ದೆ .ಸ್ನೇಹಿತರಿಲ್ಲದ ನಾನು ಆಕೆಯನ್ನು ತುಂಬಾ ನಂಬಿದೆ. ಮೊದಲಿನಿಂದ ಎಲ್ಲರನ್ನು ನಂಬುವ ಅಭ್ಯಾಸ ವಿದ್ದ ನಾನು ಆಕೆಯಲ್ಲಿ ಇಟ್ಟ ನಂಬಿಕೆಯ ಸೌಧ ಕಳಚಿ ಬಿತ್ತು .ನನ್ನ ಏಳ್ಗೆಯನ್ನು ಸಹಿಸದ ಆಕೆ ಇಲ್ಲ ಸಲ್ಲದ  ವಿಷಯವನ್ನು ಹರಡಿ ಚುಚ್ಚು ಮಾತಿನಿಂದ  ನೋಯಿಸಿದ್ದು ನನಗೆ ಅತೀವ ಬೇಸರವಾಯಿತು. ನನ್ನ ಆತ್ಮೀಯರೆಂದು ತಿಳಿದು ನನ್ನೆಲ್ಲಾ ಭಾವನೆಗಳನ್ನು ಹಂಚಿಕೊಂಡ ನಾನು ಅವರಿಂದಾದ ನಂಬಿಕೆ ದ್ರೋಹದಿಂದಾಗಿ ಯಾರನ್ನು ಅತಿಯಾಗಿ ನಂಬಬಾರದು  ಈ ಜಗತ್ತಿನಲ್ಲಿ ನಂಬಿಕೆ  ವಿಶ್ವಾಸಕ್ಕೆ ಯೋಗ್ಯರಾದವರು ಯಾರು ಇಲ್ಲ .,ನಮ್ಮ ಸ್ವಂತ ವಿಷಯಗಳನ್ನು ಯಾರಲ್ಲೂ ಹೇಳಬಾರದು ಎನ್ನುವ ಪಾಠವನ್ನು ಕಲಿತೆ

 ಶ್ರೀಮತಿ.ಪಂಕಜಾ.ಕೆ. ಮುಡಿಪು
 ದಕ್ಷಿಣ ಕನ್ನಡ

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

*ಆರೋಗ್ಯದ ಗುಟ್ಟು*ಒಂದು ಹನಿ ಪೋಲಿಯೋ ಬಿಂದು ಮಕ್ಕಳ ಪಾಲಿನ ಅಮೃತದ ಸಿಂಧು ಹಾಕಿರಿ ಮಕ್ಕಳಿಗೆ ಪೋಲಿಯೋ ಲಸಿಕೆಬಾರದಂತೆ ಅಂಗವಿಕಲತೆಯ ಕುಣಿಕೆಆರೋಗ್ಯವಂತರಾಗಿರಲು ನಾವುತಿನ್ನಬೇಕು ಆಹಾರದ ಜತೆ ಬೇವುಕಾಲಕ್ಕೆ ಸರಿಯಾಗಿ ಊಟ ತಿಂಡಿ ಮಾಡಿಸಾಕಷ್ಟು ನೀರು ಕುಡಿಯುವುದು ನೋಡಿಸಮತೋಲನ ಆಹಾರ ಸೇವಿಸಬೇಕುಕಾಲಕಾಲಕ್ಕೆ ಊಟ ತಿಂಡಿ ಮಾಡಬೇಕುಹಣ್ಣು ಹಂಪಲುಗಳು ನಿಮ್ಮ ಆಹಾರದಲ್ಲಿರಲಿಆರೋಗ್ಯಕ್ಕಾಗಿ ಯೋಗ ನಡಿಗೆಯ ಅಭ್ಯಾಸವಿರಲಿಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸಿ ಕುರುಕಲು ತಿಂಡಿಗಳ ಸೇವನೆಯನ್ನು ನಿವಾರಿಸಿಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ನಿತ್ಯವೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿಕನಿಷ್ಠ ಆರು ಗಂಟೆಗಳ ನಿದ್ದೆ ಅವಶ್ಯಕದೇಹ ಮನಸಿಗೆ ಆರಾಮದಾಯಕಹಸಿವೆ ಆದಾಗ ಮಾತ್ರ ಆಹಾರ ಸೇವಿಸಿಮಾದಕ ವಸ್ತುಗಳ ಸೇವನೆ ನಿಲ್ಲಿಸಿ*ಪಂಕಜಾ.ಕೆ.ರಾಮ ಭಟ್**ಮುಡಿಪು.ಕುರ್ನಾಡು*