Skip to main content

ರಾಯಚೂರು ಘಟಕ 7 ಕವನ

[14/03, 4:34 pm] Pankaja K: ಗುರುಕುಲಾ  ಜಿಲ್ಲಾಘಟಕ ರಾಯಚೂರು

ವಾರಕ್ಕೊಂದು ಕವನ. ಸ್ಪರ್ಧೆಗಾಗಿ
 ವಿಷಯ..ಅಂತರಂಗದ ಮೌನ ಮಾತು
 
       ಒಲವಿನ ಸರದಾರ

 ಭಾವನೆಗಳ ಭಾರದಲಿ ಹೃದಯ ಜಗ್ಗುತಿದೆ
 ಅಂತರಂಗದ ಮೌನ ಮಾತಾಗಿ ಹರಿದಿದೆ
 ಒಲವಿನ ಪಯಣಕ್ಕೆ ನೀ ಜತೆಯಾದಾಗ
 ಮನದಲಿ ಚೆಲುವಾದ ಕನಸುಗಳರಲಿದೆ
 
ಎದೆಯಾಳದಲಿ ಅವಿತಿರುವ ಕನಸುಗಳು
ಗರಿಬಿಚ್ಚಿ ನವಿಲಿನಂತೆ  ನರ್ತಿಸುತ್ತಿದೆ
ಇನಿಯಾ ನಿನ್ನೊಡನಾಟದಲಿ
ಮನವು ಸಂತಸದ ಕಡಲಾಗಿದೆ

ಬಾಳಿನ ಪಯಣದಲಿ  ನೀ ಜತೆಯಿರಲು
ದಾರಿಯ ಕಲ್ಲು ಮುಳ್ಳುಗಳೆಲ್ಲಾ ಹೂವಾಗಿದೆ
ನನ್ನ ಮನದ ಒಲವಿನ  ಸರದಾರ ನೀನು
ಹೃದಯವು ರಾಗವಾಗಿ ಮಧುರ ಗೀತೆ ಹಾಡಿದೆ

ನಿನ್ನೆದೆಯ ಪಿಸುಮಾತುಗಳಿಗೆ
ಕಿವಿಯಾಗುತ ನಾ ನಲಿಯುತಿರುವೆ
ಬಾಂದಳದ ಬೆಳ್ಳಿ ಚುಕ್ಕೆಯಂತೆ
ನೀನಿರಲು ಬಾಳೆಲ್ಲಾ ನವ ವಸಂತವೇ

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.574153
[21/03, 8:13 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ 
ಜಿಲ್ಲಾ ಘಟಕ ರಾಯಚೂರು

ವಾರಕ್ಕೊಂದು ಸ್ಪರ್ಧೆಗಾಗಿ ಹಾಯ್ಕುಗಳು

 ಹಾಯ್ಕು. 1 ಜೀವನ

ಗುರಿಯಿರಲಿ
ಯಶಸ್ಸು ಪಡೆಯಲು
ಜೀವನದಲ್ಲಿ

 ಹಾಯ್ಕು 2   ಶಿಕ್ಷಣ

ಸಿಗಬಹುದು
ಜಗತ್ತಿನ ಅರಿವು
ಶಿಕ್ಷಣದಿಂದ

ಹಾಯ್ಕು 3 ರಾಜಕೀಯ

ರಾಜಕೀಯವು
ಕಾಲೆಳೆಯುವವರ
ಡೊಂಬರಾಟವು

ಹಾಯ್ಕು 4  ಉದ್ಯೋಗ

ಉದ್ಯೋಗದಿಂದ
ಭವಿಷ್ಯಕ್ಕೆ ಭದ್ರತೆ
ನಿರಾಳಮನ

ಹಾಯ್ಕು 5 ಪ್ರೀತಿ

ಪ್ರೀತಿಯಿದ್ದರೆ
ಜೀವನ ಸುಂದರವು
ಜೀವದುಸಿರು

ಶ್ರೀಮತಿ. ಪಂಕಜಾ.ಕೆ.. ಮುಡಿಪು
ಕುರ್ನಾಡು.ದ.ಕ.
[28/03, 8:17 pm] Pankaja K: ಗುರುಕುಲಾ ರಾಯಚೂರುಘಟಕ
ವಾರಕ್ಕೊಂದು ಸ್ಪರ್ಧೆಗಾಗಿ
ವಿಷಯ..ಹುಟ್ಟುಹಬ್ಬ

ಹುಟ್ಟಿದ ದಿನಾಚರಣೆ

ತಾಯ ಗರ್ಭದಲಿದ್ದು ಬೆಳೆಯುತ
ಬುವಿಗೆಬಂದ ದಿನವನು
ವರುಷವಾಗುತಲಿರಲು
ಹರುಷದಿ ಹುಟ್ಟು ಹಬ್ಬವ ಮಾಡುವರು

ಹೊಸ ಬಟ್ಟೆಯ ಉಟ್ಟು ನಲಿಯುತ
ಪ್ರೀತಿ ಪ್ರೇಮವ ಹಂಚುತ
ಗುರು ಹಿರಿಯರ ಆಶೀರ್ವಾದವ
ಪಡೆದು  ಗೆಲುವಲಿ ಬೀಗುತ

ದೀಪ ಉರಿಸಿ ದೇವರಿಗೆ  ವಂದಿಸಿ
ತಂದೆ ತಾಯಿಗೆ ನಮಿಸುತ
ನಮ್ಮ ಸಂಸ್ಕೃತಿ ಬಿಂಬಿಸುವ
ಹುಟ್ಟು ಹಬ್ಬವೇ ಶ್ರೇಷ್ಠವು

ಆಡಂಭರದಾಚಾರಣೆಗೆ ಒತ್ತು ಕೊಡದೆ
ಸರಳವಾಗಿ ಆಚರಿಸುತ
ಅನಾಥಮಕ್ಕಳಿಗೆ ಊಟ ಕೊಡುತಲಿ
ಹುಟ್ಟು ಹಬ್ಬವನಾಚರಿಸಿರಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್. ಮಾಸ್ಟರ್
ಕುರ್ನಾಡು..ದ.ಕ.574153
[04/04, 7:53 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ 
ಜಿಲ್ಲಾ ಘಟಕ ರಾಯಚೂರು
ವಾರಕ್ಕೊಂದು ಸ್ಪರ್ಧೆಗಾಗಿ
ಚುಟುಕುಗಳು

 1    ಹಣ
 
 ಎಲ್ಲರಿಗೂ ಬೇಕು  ಕೈ ತುಂಬಾ ಹಣ
 ಅದಕಾಗಿ ಉರುಳಿಸುವರು ಹೆಣ
 ಸವಕಲು ನಾಣ್ಯದಂತಾಗಿದೆ ಗುಣ
 ಹಣದ ಬೆನ್ನತ್ತಿ ಕಳೆಯುವರು ಪ್ರಾಣ

2  ಜಾತಿ

ಜಾತಿ ಭೇದಗಳನ್ನು  ಅಳಿಸಬೇಕು
ನಾವೆಲ್ಲಾ ಒಂದೇ ಎಂದು ತಿಳಿಯಬೇಕು
ನುಡಿದಂತೆ  ನಡೆಯಲು  ಕಲಿಯಬೇಕು
ಜೀವನ ಸಾರ್ಥಕ ಪಡಿಸಿಕೊಳ್ಳಬೇಕು

 3  ರಾಜಕೀಯ
ರಾಜಕೀಯವೊಂದು  ಡೊಂಬರಾಟ
ಕುರ್ಚಿಗಾಗಿ ಮಾಡುವರು ಕಾದಾಟ
ಅಶ್ವಾಸನೆಗಳನು ಕೊಡುವುದೇ ಆಟ
ಬಡ ಜನರ  ಜೀವನಕೆ ತಪಿಲ್ಲ ಪರದಾಟ

4  ಸಿ.ಡಿ.

ಸಿ.ಡಿ.ಹಗರಣಗಳು ಮನೆ ಮಾತಾಗಿದೆ
ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿದೆ
ಮೋಸ ವಂಚನೆಗಳೇ ಜೀವನವಾಗಿದೆ
ಜಗತ್ತನ್ನು ದೇವರೇ  ಕಾಯಬೇಕಾಗಿದೆ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ
[11/04, 7:41 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾಘಟಕ ರಾಯಚೂರು
ಗಜಲ್ ರಚನಾ ಸ್ಪರ್ಧೆಗಾಗಿ

ವಿಷಯ ..ಯುಗಾದಿ 
         ಗಜಲ್

ಹೊಸವರುಷದ ಹರುಷ ತಂದಿದೆ ಯುಗಾದಿ ಹಬ್ಬ
ಹಳತು ಕೊಳೆಗಳನು ಕಳೆದಿದೆ ಯುಗಾದಿ ಹಬ್ಬ

ಬೇವು ಬೆಲ್ಲದ ಸಮ್ಮಿಶ್ರಣ ವನು ಸವಿಯಬೇಕು
ನೋವು ನಲಿವುಗಳ ಸಂಕೇತವಾಗಿದೆ ಯುಗಾದಿಹಬ್ಬ

ಗಿಡಮರಗಳು ಎಲೆಗಳನು ಉದುರಿಸಿ ಚಿಗುರಿ ನಿಂತಿದೆ
ನವ ವಸಂತನಾಗಮನವ ಸಾರುತಿದೆ ಯುಗಾದಿ ಹಬ್ಬ

ಹಸಿರುಟ್ಟು ಭೂದೇವಿ ಮದುಮಗಳಂತೆ ಕಂಗೊಳಿಸಿದೆ
ನವೋಲ್ಲಾಸದ ಹಾಸವನು  ತುಂಬಿದೆ ಯುಗಾದಿ ಹಬ್ಬ

ಪಂಚಾಂಗ ಶ್ರವಣ ಮಾಡುವುದು ಈ ದಿನದ ವಿಶೇಷ
ಹೊಸಕನಸುಗಳ ಮನದಲಿ ಬಿತ್ತಿದೆ ಯುಗಾದಿ ಹಬ್ಬ

ದ್ವೇಷ ಅಸೂಯೆಗಳನ್ನು ಕಳೆದು ಒಗೆಯಬೇಕು 
ಪ್ರೀತಿ ವಿಶ್ವಾಸವ ಮರಳಿ  ಮೂಡಿಸಿದೆ ಯುಗಾದಿ ಹಬ್ಬ

ಸಿಹಿ ಕಹಿಗಳನು  ಸಮಾನವಾಗಿ ಕಾಣಬೇಕು ಪಂಕಜಾ
ಹಳೆಯ ವೈಮನಸ್ಸನ್ನು ಮರೆಸುತಿದೆ ಯುಗಾದಿ ಹಬ್ಬ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸುಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ
[25/04, 8:34 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ ರಾಯಚೂರು
ವಾರಕ್ಕೊಂದು ಸ್ಪರ್ಧೆಗಾಗಿ
ಕವನ ರಚನೆ
ದತ್ತಪದ..ಈ ಸಲ ಕಪ್ ನಮ್ಮದೇ (ಆತ್ಮವಿಶ್ವಾಸ)

ಸ್ಪೂರ್ತಿ ಸೆಲೆ

ಹುರುಪಿನಿಂದ ಆಟ ಆಡಿ
ಗೆದ್ದೇ  ಗೆಲುವೆ ಎನುತ ಕೂಡಿ
ಗೆಲುವ ಛಲವ ಮನದಿ ತುಂಬಿ ಆಡುತ್ತಿದ್ದರು

ಎರಡು ತಂಡದೊಡನೆ ಸ್ಪರ್ಧೆ
ನಡೆಯುತಿರಲು ಮನದಲೆಲ್ಲಾ
ಆತ್ಮವಿಶ್ವಾಸ ತುಂಬಿಕೊಂಡು ಆಡುತಿದ್ದರು

ಗೆಲುವ ಗುರಿಯು ಇರಲು ಮನದಿ
ಜಯವು ಸಿಗದೆ ಇರದು ಎಂದು
ಆಟ ಆಡಿದಾಗ ನಮಗೆ  ಗೆಲುವು ನಿಶ್ಚಿತ

ಈ ಸಲ ಕಪ್ ನಮದೇ ಎಂದು
ಮನದ ತುಂಬಾ ಆತ್ಮವಿಶ್ವಾಸ ವಿಡುತ
ಗಟ್ಟಿಯಾಗಿ ನಂಬಿಕೊಂಡು ಜಯವ ಪಡೆದರು

ಪಂಕಜಾ.ಕೆ..
ಮುಡಿಪು.ಕುರ್ನಾಡು.ದ.ಕ.
[09/05, 8:24 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ  ರಾಯಚೂರು 
ತಾಯಿ ಕವನ ಸ್ಪರ್ಧೆಗಾಗಿ

 ಅಮ್ಮನೆಂಬ ದೇವತೆ

ನವಮಾಸ ಗರ್ಭದಲ್ಲಿ ಹೊತ್ತು ಹೆತ್ತಾಕೆ
ಮಮತೆ ವಾತ್ಸಲ್ಯವ ಧಾರೆ ಎರೆದಾಕೆ
ಕೈತುತ್ತನಿಟ್ಟು ವಿದ್ಯೆ ಬುದ್ದಿ ಕಲಿಸಿದಾಕೆ
ಮಮತೆಯ ಮೂರ್ತಿ ಪ್ರತ್ಯಕ್ಷ ದೇವತೆಯೀಕೆ

ಕಷ್ಟವ ಸಹಿಸಿ ಜಗವ ಪರಿಚಯಿಸಿದಳು
ತ್ಯಾಗ ಪ್ರೀತಿ  ಮಮತೆಯ ಕಡಲವಳು
ವಿದ್ಯೆ ಬುದ್ದಿಗಳ ಕಲಿಸಿದ ಮಮಾತಾಮಯಿಯವಳು
ಸಹನೆಯ ಸಾಕಾರ ಮೂರ್ತಿಯಿವಳು

ಪ್ರತಿ ಮನೆಯ ನಂದಾದೀಪವಾಗಿರುವಳು
ತನ್ನ ಕಷ್ಟವ ತೋರಿಸದೆ ನಗುನಗುತಿರುವಳು
ತನ್ನವರಿಗಾಗಿ ಸದಾ ತುಡಿಯುವ ಧಾತ್ರಿಯವಳು
ಅಮೃತ ಸಮಾನ ಹಾಲುಣಿಸಿ ಕಂದನ ಪೊರೆದವಳು

ಕಂದನ ಏಳಿಗೆಗಾಗಿ ಅನುದಿನವೂ ಬೇಡುವಳು
ತನಗಾಗಿ ಏನನ್ನು ಬೇಡದೆ ತನ್ನವರಿಗಾಗಿ ಬೇಡುವಳು
ಕಷ್ಟ  ಸುಖಕೆ ಹೆಗಲಾಗುವಳು
 ಆತ್ಮವಿಶ್ವಾಸ ತುಂಬಿ ಮಕ್ಕಳನು ಬೆಳೆಸುವಳು

ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...