Skip to main content

ಮೌನ ಬಂಗಾರ ಕಥೆ

ಮೌನ ಬಂಗಾರ

ತನ್ನ  ಬಾಲ್ಯ ಸ್ನೇಹಿತ ರಮೇಶನ ಮದುವೆಗೆ  ಬರಲಾಗದಿದ್ದದ್ದು  ಸಂದೇಶನಿಗೆ ತುಂಬಾ ಬೇಸರವಾಗಿತ್ತು.     ದೇಹ ಎರಡು ಒಂದೇ ಜೀವ ಎನ್ನುವ ತರ ಬೆಳೆದ ಅವರು  ಸ್ನಾತಕೋತ್ತರ ಪದವಿಯವರೆಗೂ ಒಟ್ಟಿಗೆ  ಶಾಲೆ ಕಾಲೇಜುಗಳಿಗೆ ಹೋಗಿ ಬರುತ್ತಿದ್ದರು .ಉದ್ಯೋಗದ ನಿಮಿತ್ತ ದೂರವಿದ್ದರೂ  ತಿಂಗಳಿಗೆ  ಒಮ್ಮೆ ತಪ್ಪಿದರೆ ಎರಡು ತಿಂಗಳಿಗೆ ಒಮ್ಮೆಯಾದರೂ ಭೇಟಿಯಾಗಿ ಸುಖ ದುಃಖ ಹಂಚಿ ಕೊಳ್ಳುತ್ತಿದ್ದರು . ಅಂತ ಸ್ನೇಹಿತ ತನ್ನ ಮದುವೆಗೆ ಖುದ್ದಾಗಿ  ಬಂದು  ತನ್ನ  ಮನದನ್ನೆಯನ್ನು ಪರಿಚಯಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಆಕೆಯ ಫೋಟೋವನ್ನು  ಕೂಡಾ ಗೆಳೆಯನಿಗೆ ಕಳಿಸಿಲ್ಲ .
          ಗೆಳೆಯನ  ಮದುವೆಗೆ ಹೋಗಬೇಕೆಂದಿದ್ದಾಗ ಅತ್ಯವಸರದ ಕೆಲಸದ ಮೇಲೆ  ಡೆಲ್ಲಿಗೆ ಹೋಗಬೇಕಾಗಿದ್ದುದರಿಂದ ಗೆಳೆಯನ ಮದುವೆಗೆ ಬರಲು ಸಂದೇಶನಿಗೆ  ಆಗಲಿಲ್ಲ  . ಒಮ್ಮೆ ಹೋಗಿ ಬರಬೇಕು ಎಂದು ಇದ್ದರೂ ಆ ಕೆಲಸ ಈ ಕೆಲಸ ಎಂದು  ಬಿಡುವು  ಸಿಗದೆ ಇದ್ದ ಕಾರಣ ಸಂದೇಶನಿಗೆ ಗೆಳೆಯನನ್ನು ಭೆಟ್ಟಿಯಾಗುವುದು  ಸಾಧ್ಯವಾಗಲಿಲ್ಲ
                ಹಾಗೆಯೇ ತಿಂಗಳುಗಳುರುಳಿ  ತಿಂಗಳು ಕಳೆಯಿತು  ದಿನಾ  ಫೋನ್ ಮಾಡಿ ಜಗಳ ಮಾಡುವ ಸ್ನೇಹಿತ  ರಮೇಶನ ಕಾಟ ತಾಳಲಾರದೆ  ವಾರದ ರಜೆ  ಮೇಲೆ  ಸಂದೇಶ ಗೆಳೆಯನನ್ನು ಕಾಣಲು ಹೊರಟಿದ್ದ 
             . ಮದುವೆಯಾದ ಲಾಗಾಯ್ತು ಗೆಳೆಯನ ಪತ್ರದ ಮುಖಾಂತರ ಅವರಿಬ್ಬರೂ ಎಷ್ಟೊಂದು  ಪ್ರೀತಿಸುತ್ತಾರೆ ಎನ್ನುವುದನ್ನು ತಿಳಿದಿದ್ದ ಸಂದೇಶ ಇಷ್ಟು ಅತ್ಯಲ್ಪ ಅವಧಿಯಲ್ಲಿ ಕೋಪಿಷ್ಠ ನಾದ  ರಮೇಶನನ್ನು ಸಮಾಧಾನಿಯನ್ನಾಗಿಸಿದ ಅವನ ಹುಡುಗಿಯನ್ನು ನೋಡುವ ಕುತೂಹಲವನ್ನು ಮನಸಿನಲ್ಲಿ ತುಂಬಿ ಅವನ ಮನೆಗೆ ಬಂದು ಇಳಿದಿದ್ದ ತನ್ನ ಹೊಸ ಕಾರಿನಲ್ಲಿ.
                  ಗೆಳೆಯ ಬರುತ್ತಾನೆ ಎಂದು ವಿಶೇಷ ಅಡಿಗೆ ಮಾಡಿಸಿದ್ದ ರಮೇಶ  ಗೆಳೆಯನನ್ನು  ಕಂಡು ಭಾವೋದ್ರೇಕದಿಂದ ತಬ್ಬಿಕೊಂಡೆ ಮನೆಯ ಒಳಗೆ ಕರೆತಂದು  ಕುಡಿಯಲು ತಾನೇ  ಸ್ವತಃ  ಗೆಳೆಯನಿಗೆ ಇಷ್ಟವಾದ  ಕಿತ್ತಳೆ ಜ್ಯೂಸ್ ತಂದು ಉಪಚರಿಸಿ  ಪ್ರಯಾಣದ ಆಯಾಸ ಪರಿಹಾರಕ್ಕಾಗಿ ಸ್ನಾನ ಮಾಡಿ ಬಾ ನಂತರ ಒಟ್ಟಿಗೆ  ಕಾಪಿ ಕುಡಿಯೋಣ ಎಂದು ಅವನನ್ನು ರೂಮಿಗೆ ಕರೆದೊಯ್ದು ಬಿಡುವನು.
             ರಮೇಶ ಎಷ್ಟೊಂದು ಬದಲಾಗಿದ್ದಾನೆ ಅಬ್ಬಾ  ಮದುವೆಯಾಗಿ  ಮೂರು ತಿಂಗಳಲ್ಲಿ ಗುರುತು ಸಿಗಲಾರದಷ್ಟು  ಬದಲಾದ ಅವನನ್ನು ಕಂಡು ಖುಷಿಯಾದರೂ  ಅವನ ಹೆಂಡತಿಯನ್ನು ನೋಡುವ ಕುತೂಹಲ  ತಡೆದುಕೊಳ್ಳಲಾಗಲಿಲ್ಲ ಸಂದೇಶನಿಗೆ 
                ಬೇಗ ಬೇಗ ಸ್ನಾನ ಮಾಡಿ ಬೇರೆ ಬಟ್ಟೆ  ತೊಟ್ಟು ಕೆಳಗೆ ಬರಬೇಕೆಂದಿದ್ದಾಗ   ರಮೇಶನೇ  ಮೇಲೆ ಬಂದು ಗೆಳೆಯನನ್ನು ಊಟದ ಮೇಜಿಗೆ ಕರೆತಂದಿದ್ದ. ಊಟದ ಮೇಜಿನಲ್ಲಿ  ಕುಳಿತು ಅದು ಇದು ಹರಟುತ್ತಿರುವಂತೆ ಬಿಸಿ ಬಿಸಿ ಇಡ್ಲಿ ತಂದ ತರುಣಿಯನ್ನು ನೋಡಿ ಒಂದು  ಕ್ಷಣ ಅವಾಕ್ಕಾದ  ಸಂದೇಶ್ ಮರುಕ್ಷಣವೇ ಸಾವರಿಸಿಕೊಂಡು ಕುಳಿತಾಗ ,ಸುಶಾಂತ್ ಇವಳೇ ಕಣೋ ನನ್ನ ಬೆಟರ್ ಹಾಪ್ ಹಾಗೂ ಈ ಮನೆಯ ಸಾಮ್ರಾಜ್ಞಿ ಎಂದು ಪರಿಚಯಿಸುವನು
            ಮಾತಿನ ಮಲ್ಲ ಸಂದೇಶ  ಮಾತಿಲ್ಲದೆ ಮೌನವಾಗಿದ್ದು ಕಂಡು   ರಮೇಶ ಏನಯ್ಯ ಡೆಲ್ಲಿಗೆ ಹೋಗಿ ಬಂದ ಮೇಲೆ ತುಂಬಾ ಸೈಲೆಂಟ್ ಆಗಿದ್ದಿಯಾ  ಏನು ಕಾರಣ  ಯಾವುದಾದರೂ ಮಿಕ ಬಲೆಗೆ ಬಿತ್ತೆ ಎಂದು ತಮಾಷೆ ಮಾಡಿದ 
           ಅವನ ತಮಾಷೆ ಮಾತುಗಳನ್ನು ಸ್ವೀಕರಿಸುವ ಮನಸಿಲ್ಲದ ಸಂದೇಶ ಪ್ರಯಾಣದ ಆಯಾಸದ ನೆಪ ಹೇಳಿ ರೂಮಿನಲ್ಲಿ ಹೋಗಿ ಮಲಗಿ ಯೋಚನೆಯಲ್ಲಿ ಮುಳುಗುವನು.  ಗೆಳೆಯನಿಗೆ ಆಯಾಸವಾಗಿದೆಯೆಂದೇ ತಿಳಿದ ರಮೇಶ ಅವನಿಗೆ ತೊಂದರೆ ಕೊಡದೆ  ಅಡಿಗೆ ಕೋಣೆಯಲ್ಲಿ ಕೆಲಸದಲ್ಲಿದ್ದ ಪತ್ನಿ ಸಾರಿಕಾಳಿಗೆ ಸಹಾಯ  ಮಾಡುತ್ತಾ  ಆಗಾಗ ಅವಳನ್ನು ಬಿಗಿದಪ್ಪಿ  ತುಂಟಾಟವಾಡುತ್ತಾ  ಇರುವಾಗ ನೀರು ಕುಡಿಯಲೆಂದು ಬಂದ  ಸಂದೇಶ್ ಅವರನ್ನು ನೋಡಿ  ತಕ್ಷಣ ರೂಮಿಗೆ ಹೊರಟು ಹೋಗುವನು
             ಅವನ ಮನ ಈಗ್ಗೆ  ಆರು ತಿಂಗಳ ಹಿಂದೆ ನಡೆದ ಘಟನೆಯ ಸುತ್ತ ಸುಳಿಯುತ್ತಿತ್ತು  ಅದೊಂದು ದಿನ  ಯಾರದೋ ಕರೆಯ ಮೇರೆಗೆ  ಒಂದು ಮನೆಗೆ ದಾಳಿ ಮಾಡಿದ ಸಂದೇಶ್ ಹಾಗೂ ಅವರ ಸಿಬ್ಬಂದಿಗೆ ಸಿಕ್ಕಿ ಬಿದ್ದ ತರುಣಿಯರಲ್ಲಿ ಒಬ್ಬಳು ತುಂಬಾ ಹೆದರಿದಂತೆ ಕಂಡಿದ್ದರಿಂದ ಅವಳನ್ನು ಮಾಧ್ಯಮದ  ಕಣ್ಣಿಗೆ ಬೀಳದಂತೆ  ತನ್ನ ಜತೆ ಇರಿಸಿಕೊಂಡು  ಅವಳನ್ನು ವಿಚಾರಿಸಿದಾಗ ಆಕೆ ಬಿಕಿ ಬಿಕ್ಕಿ ಅಳುವುದು ಕಂಡು ಅವಳನ್ನು ಸಮಾಧಾನಿಸಿ ""ನೀನು ಯಾರು ಈ ದಂದೆಗೆ ನೀನು ಹೊಸಬಳಂತೆ ಕಾಣುತ್ತಿರುವೆ  ನಿನ್ನನ್ನು ನೋಡಿದಾಗ ಉತ್ತಮ ಮನೆತನದ ಹುಡುಗಿಯಂತೆ ಕಾಣುತ್ತಿರುವೆ  ಯಾಕೆ ಇಲ್ಲಿಗೆ  ಬಂದಿದ್ದು" ಎಂದು ವಿಚಾರಿಸಿದಾಗ  ಸ್ವಲ್ಪ ಸಮಾಧಾನಗೊಂಡ ಆಕೆ ತನ್ನ ಕಥೆ ಬಿಚ್ಚಿದ್ದು ಕಂಡು ಸಂದೇಶ್ ಅವಳಿಗೆ ಬುದ್ದಿ ಹೇಳಿ ಅವಳನ್ನು ಅವಳ  ಮನೆತನಕ ಬಿಟ್ಟು ಬಂದಿದ್ದ.
                 ಈಗ ಅವಳೇ ತನ್ನ  ಗೆಳೆಯನ ಪತ್ನಿ ಎಂದು ತಿಳಿದಾಗ , ತಾನು ಈ ವಿಷಯವನ್ನು ಗೆಳೆಯನಿಗೆ ಹೇಳಲೋ  ಬೇಡವೋ ಎಂದು ಯೋಚಿಸುತ್ತಾ  ಕಣ್ಣು ಮುಚ್ಚಿ  ಮಲಗಿದ್ದ ಅವನನ್ನು  ಏನಯ್ಯ ಇನ್ನು ಆಯಾಸ ಹೋಗಿಲ್ಲವೇ ಊಟ ಮಾಡೋಣ ಬಾ ಎಂದು  ಗೆಳೆಯ ರಮೇಶ್   ಕೆಳಗೆ ಕರೆದೊಯ್ದು  ತನ್ನ ಪತ್ನಿಗೆ ತನ್ನ ಮತ್ತು ಸಂದೇಶನ ಸ್ನೇಹದ ಬಗ್ಗೆ ವಿವರಿಸುವನು .
                   ಅವನನ್ನು ಮೊದಲ ಬಾರೀ ನೋಡಿದಾಗಲೇ ಗಾಬರಿಗೊಂಡಿದ್ದ ಸಾರಿಕಾ ಆತನೆಲ್ಲಿ ತನ್ನ ವಿಷಯವನ್ನು ಹೇಳುವನೋ ಎನ್ನುವ ಆತಂಕದಲ್ಲೇ ಅವನಿಗೆ ಕೈಮುಗಿದು ಕಣ್ಣಿನಲ್ಲಿಯೇ ಬೇಡಿಕೆಯನ್ನು  ಇಟ್ಟಿದ್ದು  ಕಂಡು ಸಂದೇಶನ ಮನದಲ್ಲಿದ್ದ ಮಾತಿನ ಮುತ್ತು  ಮೌನದ ಚಿಪ್ಪನ್ನೊಡೆದು   ಹೊರಗೆ  ಬರಲೇ ಇಲ್ಲ 
         ಗೆಳೆಯನ ಸುಂದರ ಸಂಸಾರದಲ್ಲಿ  ಹುಳಿ ಹಿಂಡುವ ಮನಸಿಲ್ಲದೆ ಸಂದೇಶ್ ಎಂದಿನಂತೆ ತನ್ನ ಗೆಳೆಯನಲ್ಲಿ ಆತ್ಮೀಯವಾಗಿ ಹರಟುತ್ತಾ , ಆತನ ಪತ್ನಿ  ಸಾರೀಕಾಳನ್ನು   ತಮಾಷೆ ಮಾಡಿ  ಕಾಲು  ಎಳೆಯುವುದು  ಕಂಡು ರಮೇಶ ತೃಪ್ತಿಯಿಂದ ನಕ್ಕು, ನೀನು ಬೇಗನೆ ಮದುವೆಯಾಗಿ ಸಂಸಾರವಂದಿಗನಾಗು   ಎಂದು ಬುದ್ದಿ  ಹೇಳುವನು  ಮೌನದ ಮೊರೆ ಹೊಕ್ಕ ಸಂದೇಶ್ ,ಪಾಪ  ಅವಳದೇನು ತಪ್ಪು ಇದರಲ್ಲಿ?  ಸದ್ಯ ನನ್ನ ಗೆಳೆಯ ರಮೇಶನಂತಹ ಒಳ್ಳೆಯ ಹುಡುಗ ಅವಳ ಕೈ ಹಿಡಿದಿದ್ದಾನೆ   ಸುಖವಾಗಿರಲಿ ಎಂದು ಮನದುಂಬಿ ಹಾರೈಸಿದ .
       ಶ್ರೀಮತಿ.ಪಂಕಜಾ.ಕೆ. ರಾಮಭಟ್

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...