Skip to main content

ಮೋಸದ ಜಾಲ

ಮೋಸದ ಜಾಲ 

 ಕಣ್ಣು ಬಿಟ್ಟಾಗ ಆ ಕತ್ತಲೆಯ  ಕೋಣೆಯಲ್ಲಿ ತಾನು ಬಂಧಿಯಾಗಿದ್ದು ತಿಳಿದ ಆಶಿಕಾ ತಾನು ಹೇಗೆ ಇಲ್ಲಿಗೆ ಬಂದೆ ಯಾವ ರೀತಿ ತಾನು ಮೂರ್ಖಳಾದೆ ಎಂದು ಯೋಚಿಸುತ್ತಾ , ತಾನು ಅಷ್ಟು ವಿದ್ಯೆ ಕಲಿತಿದ್ದರೂ, ದಿನ ನಿತ್ಯ ಪೇಪರಿನಲ್ಲಿ  ಇಂತಹ ವಿಷಯ  ಬರುತ್ತಾ ಇದ್ದರೂ ತಾನು ಹೇಗೆ ಈ ಬಲೆಯಲ್ಲಿ  ಬಿದ್ದೆ  ಎಂದು ಅವಳಿಗೆ  ಅರ್ಥವೇ ಆಗಲಿಲ್ಲ
               ತನ್ನಂತಹ ಡಬಲ್ ಡಿಗ್ರಿ ಪಡೆದ ವಿದ್ಯಾವಂತಳೆ  ಹೀಗಾದರೆ ಇನ್ನು ಅವಿದ್ಯಾವಂತ ಹೆಣ್ಣುಗಳ ಗತಿಯೇನು ಎಂದು ಯೋಚಿಸಿದಾಗ ಆಕೆಗೆ ದಿಕ್ಕೆ ತೋಚದಂತಾಗಿತ್ತು .ಈಗ ತಾನು ಧೈರ್ಯ  ಗೆಡಬಾರದು  ತನ್ನ ಮನಸ್ಸಿನ ಭಯವನ್ನು ಓಡಿಸಲೇ ಬೇಕು ಎಂದು ನಿಶ್ಚಯಿಸಿದ ಆಕೆ ಅದಕ್ಕಾಗಿ ತಾನೇನು ಮಾಡಬೇಕು ಎಂದು ತೀವ್ರವಾಗಿ ಚಿಂತಿಸಿದಳು
                     ತಾನು ಬಂಧಿಯಾದ ಈ ಕೋಣೆಯತ್ತ ಅವಳ ಗಮನ ಹೋಯಿತು .ಸುತ್ತ ಮುತ್ತ ನೋಡಿದಾಗ  ಒಂದು ಮೂಲೆಯಲ್ಲಿ ಒಂದು ಸಣ್ಣ ಸ್ಟೂಲಿನಂತಹದು ಕಣ್ಣಿಗೆ ಬಿತ್ತು ಧೈರ್ಯ ಮಾಡಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡ ಆಕೆ ಬಾಗಿಲು ತೆಗೆಯುವುದನ್ನೇ ಕಾಯುತ್ತಾ  ಬಾಗಿಲ ಬದಿಯಲ್ಲಿ ಅಡಗಿ ಕುಳಿತಳು.
                      ಯಾರೋ ಬರುವ ಸಪ್ಪಳವಾದಂತೆ ಆಕೆ ಧೈರ್ಯವನ್ನು ಒಗ್ಗೂಡಿಸಿಕೊಂಡು ನಿಂತಳು ಬಾಗಿಲು ತೆಗೆದ  ತಕ್ಷಣ ಬಂದ ವ್ಯಕ್ತಿಯ ಮೇಲೆ ತನ್ನ ಬಲವನ್ನೆಲ್ಲಾ   ಒಟ್ಟುಗೂಡಿಸಿ , ಕೈಯಲ್ಲಿದ್ದ ಸಾಧನದಿಂದ  ಒಂದು ಏಟು ಕೊಟ್ಟೇ ಬಿಟ್ಟಳು .ಒಂದೇ ಏಟಿಗೆ ಕಮಕ್ ಕಿಮಕ್ ಎನ್ನದೆ  ಕೆಳಗುರಿಳಿದ  ಆ ವ್ಯಕ್ತಿಯನ್ನುಒಳಗೆ ಎಳೆದು ಬೇಗ  ಬೇಗನೆ ಅವಳ ಡ್ರೆಸ್ ತಾನು  ಹಾಕಿ ತನ್ನ ಡ್ರೆಸ್ ಅನ್ನು ಅವಳಿಗೆ ತೊಡಿಸಿ ಬಾಗಿಲನ್ನು ಭದ್ರ ಪಡಿಸಿ ಬೀಗದ ಕೈಯನ್ನು ತನ್ನ ಜತೆಯೇ ತೆಗೆದುಕೊಂಡು ಸರ ಸರನೇ ಕಂಡ ದಾರಿಯಲ್ಲಿ ಹೊರಟು ಬಿಟ್ಟಳು .
                      ಒಂದಿಬ್ಬರು ಅವಳನ್ನು ಗಮನಿಸಿದರೂ ಯಾರೋ ನಮ್ಮವರೇ ಅಂತ ತಿಳಿದು ಬಿಟ್ಟಿದ್ದರಿಂದ ಅವಳಿಗೆ ಅನುಕೂಲವೆ ಆಯಿತು . ತಾನು ತಪ್ಪಿಸಿಕೊಂಡ ವಿಷಯ ಅವರಿಗೆ  ತಿಳಿಯುವ ಮೊದಲು  ತಾನು ಸುರಕ್ಷಿತ  ಸ್ಥಳವನ್ನು ಹುಡುಕಿಕೊಳ್ಳಬೇಕೆನ್ನುವ  ಆತುರದಲ್ಲಿ  ಆದಷ್ಟು ಕತ್ತಲಿರುವ  ಸ್ಥಳವನ್ನು ಆಯ್ದುಕೊಂಡು ವೇಗವಾಗಿ ಹೋಗಿ ಮುಖ್ಯರಸ್ತೆಗೆ ತಲುಪಿ ನಿಟ್ಟುಸಿರು ಬಿಡುವಷ್ಟರಲ್ಲೇ ಬಂದ ಒಂದು ಕಾರಿಗೆ ಕೈ ಅಡ್ಡ ಹಿಡಿದು ಕಾರು ನಿಂತ ತಕ್ಷಣ  ಬಾಗಿಲು ತೆಗೆದು ಒಳಗೆ ಕುಳಿತು ಕಣ್ಣುಗಳನ್ನು ಮುಚ್ಚಿಕೊಂಡ ಆಕೆಯನ್ನು ನೋಡಿ ಕಾರಿನಲ್ಲಿದ್ದ .ಶ್ರೀಕರನಿಗೆ ಆಶ್ಚರ್ಯವಾಯಿತು.
                      ಈ ಕತ್ತಲ ಸಮಯದಲ್ಲಿ ಈ ಹೆಣ್ಣು ಒಂಟಿಯಾಗಿ ಎಲ್ಲಿಗೆ ಹೋಗುತ್ತಿರಬಹುದು ಎಂದು ಯೋಚಿಸುತ್ತಾ ಇರುವಾಗ ಆಕೆಯೇ  ದಯವಿಟ್ಟು ಕಾರನ್ನು ಆದಷ್ಟು ಬೇಗ ಇಲ್ಲಿಂದ  ದೂರ  ಕೊಂಡು ಹೋಗಿ ಎಂದು ಹೇಳಿ ಆಯಾಸದಿಂದ   ಕಾರಿನಲ್ಲಿಯೇ ಬಿದ್ದು ಬಿಟ್ಟಳು .ಗಾಬರಿಯಾದ ಶ್ರೀಕರ ಶರವೇಗದಲ್ಲಿ ಕಾರು ಓಡಿಸಿ ತನ್ನ ಸ್ನೇಹಿತ ಸಾಕೇತನ ಕ್ಲಿನಿಕ್ ಗೆ ಬಂದು  ಕಾರಿನ ಹಿಂದಿನ ಸೀಟಿನಲ್ಲಿ ಬುಡ  ಕಡಿದ ಬಾಳೆಯಂತೆ ಬಿದ್ದಿದ್ದ ಅವಳನ್ನು ಎತ್ತಿಕೊಂಡು ಸ್ನೇಹಿತನ   ಕೋಣೆಯತ್ತ  ಓಡು  ನಡಿಗೆಯಲ್ಲಿ ಹೋಗಿ ಅಲ್ಲಿ ಸ್ನೇಹಿತನನ್ನು ಕಂಡು ಸಮಾಧಾನಗೊಂಡು  ಅವಳನ್ನು ಸ್ನೇಹಿತನಿಗೆ ಒಪ್ಪಿಸಿ ,ಆತ ಕಣ್ಣಿನಲ್ಲಿಯೆ ಏನೆಂದು ಕೇಳಿದಾಗ ದಯವಿಟ್ಟು ಮಾತು ಬೇಡ ಮೊದಲು ಅವಳಿಗೆ ಟ್ರೆಟ್ಮೆಂಟ್ ಕೊಡು ಮತ್ತೆ ಎಲ್ಲಾ ವಿವರ  ಹೇಳುತ್ತೇನೆ ಎಂದು ಹೇಳಿದಾಗ  ಮರುಮಾತಡದೆ ಸಾಕೇತ ಅವಳ ನಾಡಿ ಚೆಕ್ ಮಾಡಿ  ಭಯಪಡುವ ಅಗತ್ಯವಿಲ್ಲವೆಂದೂ ಗಾಬರಿಗೆ ಹೀಗಾಗಿದೆ ಎಂದು ಹೇಳಿ ಅಲ್ಲಿಯೇ ಒಂದು ಕಡೆ ಅಡ್ಮಿಟ್ ಮಾಡಿಕೊಂಡು ಆಕೆಗೆ ಔಷದೋಪಚಾರ ಫ್ರಾಂಭಿಸಿದ
                      ಸ್ವಲ್ಪ ಹೊತ್ತಿನಲ್ಲಿ ಕಣ್ಣು ತೆರೆದ. ಆಶಿಕಾ ಕ್ಷೀಣವಾಗಿ ನರಳುತ್ತ ನಾನು ಎಲ್ಲಿದ್ದೇನೆ ಎಂದು ಕೇಳಿದಾಗ , ಶ್ರೀಕರ ಮುಂದೆ ಬಂದು ಆಕೆಗೆ ನೀವೀಗ ಸುರಕ್ಷಿತರಾಗಿದ್ದೀರಿ  ನೀವು  ಈಗ ಯೋಚನೆ ಮಾಡದೆ  ಚೆನ್ನಾಗಿ ವಿಶ್ರಮಿಸಿ ಎಂದು ಹೇಳಿ ಆಕೆಗೆ  ಹೊದಿಕೆ ಹೊದಿಸಿ ,.ನಿದ್ದೆ ಮಾತ್ರೆಯ ಪ್ರಭಾವದಿಂದ  ಪುನಃ ನಿದ್ದೆಗೆ ಜಾರಿದ ಅವಳನ್ನು ಕಂಡು  ಯಾರೀಕೆ  ಏನಾಗಿರಬಹುದು ಇವಳ ಬಾಳಿನಲ್ಲಿ ಎಂದು ಯೋಚಿಸದ 
                     ಆಕೆಯನ್ನು  ನೋಡುತ್ತಾ ಇದ್ದಂತೆ  ಆತನಿಗೆ ಅಶ್ವರ್ಯವಾಯಿತು ಅಬ್ಬಾ   ಎಂತಹ ಅದ್ಬುತ ಸೌಂದರ್ಯ ಈಕೆಯದು .ಇಂತಹ ಹೆಣ್ಣನ್ನು ಇಲ್ಲಿತನಕ  ನೋಡಿಲ್ಲ ಎಂದು ಯೋಚಿಸುತ್ತಾ ಕುಳಿತಿದ್ದಂತೆಯೇ ಆಕೆ ಕಣ್ಣು ಬಿಟ್ಟು ದಯವಿಟ್ಟು ನನ್ನನ್ನು  ಮನೆಗೆ ಸೇರಿಸುವಿರಾ? ನೀವಾರೆಂದು ತಿಳಿಯದೆ ಇದ್ದರೂ ನಿಮ್ಮ ಬಗ್ಗೆ ಒಳ್ಳೆಯ  ಭಾವನೆ ಬಂದಿದೆ ಎನ್ನುವಳು. 
                     ನೋಡಿ ಮೇಡಂ  ಏನಾಯಿತು ಏನು ವಿಷಯ ನೀವು ನನ್ನಲ್ಲಿ ಹೇಳಬಹುದು .ನಿಮ್ಮನ್ನು ಮನೆ ತಲುಪಿಸುವ ಜವಾಬ್ದಾರಿ ನನ್ನದು ಎಂದಾಗ ಆಕೆ ತನ್ನ ಕಥೆಯನ್ನು ಅವನೊಡನೆ ಬಿಚ್ಚಿಡುವಳು. ಕೂಡಲೇ ಶ್ರೀಕರ ನೋಡಿ ಮೇಡಂ ಇದೊಂದು ದೊಡ್ಡ ಗ್ಯಾಂಗೆ ಇದೆ ನೀವು ಸ್ವಲ್ಪ ದಿನ ಇಲ್ಲೇ ಇರುವುದ ಒಳಿತು . ನಿಮ್ಮ ತಂದೆ ತಾಯಿಯರಿಗೆ ವಿಷಯ ತಿಳಿಸುವ ವ್ಯವಸ್ಥೆ ನಾನು ಮಾಡುತ್ತೇನೆ .. ನಾನೀಗ ನಿಮಗೆ ಕೆಲವರ ಫೋಟೋ ತೋರಿಸುವೆ ನೀವು ಅವರನ್ನು ಗುರುತು ಹಿಡಿದರೆ ಅವರನ್ನು ಒಳಗೆ ಹಾಕಲು ಅನುಕೂಲ ಎಂದುಹೇಳುವನು
                     ಅವನ   ಮಾತನ್ನು ಕೇಳಿದ  ಆಶಿಕಾಳಿಗೆ ಅಶ್ವರ್ಯವಾಯಿತು .ಆಕೆ ಕುತೂಹಲದಿಂದ ನೀವು ಪೊಲೀಸರೇ ಎಂದು ಕೇಳಿದಾಗ ಆತ ಹೌದೆಂದು   ಹೇಳಿ  ತನ್ನಲ್ಲಿದ್ದ ಫೈಲಿನಿಂದ ಕೆಲವೊಂದು ಫೋಟೋಗಳನ್ನು ಅವಳಿಗೆ ತೋರಿಸಿದಾಗ  ಆಕೆ  ತಕ್ಷಣ  ಅವರ ಗುರುತು ಹಿಡಿಯುತ್ತಾಳೆ .ಅವರಲ್ಲಿ ಒಬ್ಬ ತನ್ನನ್ನು ಮರುಳುಮಾಡಿ  ಕರೆದೊಯ್ದವ ಇನ್ನಿಬ್ಬರು ತನಗೆ ಕಾವಲಿದ್ದವರು ಎನ್ನುವುದನ್ನು ಆಕೆ ಗುರುತಿಸಿದ್ದೆ ತಡ ಆತ ತನ್ನ ಸಿಬ್ಬಂದಿಯರನ್ನು ಕರೆದುಕೊಂಡು ಕೂಡಲೇ ಆಶಿಕಾ ಹೇಳಿದ ಸ್ಥಳದತ್ರ ದೌಡಾಯಿಸಿದ .
                     ಇತ್ತ ರೂಮಿನಲ್ಲಿ ಬಿದ್ದಿದ್ದ ಅವಳಿಗೆ ಎಚ್ಚರಿಕೆಯಾದಾಗ ಬೆಳಗ್ಗಿನ ಜಾವವಾಗಿತ್ತು .ಆಕೆ ಮೆಲ್ಲನೆ ಎದ್ದು ಬಾಗಿಲನ್ನು ತೆರೆಯಲು ಪ್ರಯತ್ನಿಸಿದರೂ ತೆಗೆಯಲಾಗದೆ ಇದ್ದುದರಿಂದ ಹತಾಶೆಯಿಂದಲೂ ತಲೆಗೆ ತಾಗಿದ ಪೆಟ್ಟಿನ ನೋವಿನಿಂದಲೂ ಜರ್ಝರಿತಳಾಗಿ  ಪುನಃ ತಲೆ ತಿರುಗಿ ಬಿದ್ದು ಬಿಟ್ಟಳು .
                      ಎಂದಿನಂತೆ ಆ ರೂಮಿಗೆ ತಿಂಡಿ ಕೊಡಲು ಹೋಗಬೇಕಾಗಿದ್ದ ವಿನುತಾ ಎಲ್ಲಿಯೂ ಕಾಣದೆ ಇರುವುದು ಮೊದಲು ಗಮನಕ್ಕೆ ಬಂದಿದ್ದು ಅಡಿಗೆಯವರಿಗೆ  .ಅವರು ವಿಷಯ  ಮುಟ್ಟಿಸುತ್ತಿದ್ದಂತೆ  ಎಲ್ಲಾ ಕಡೆಯೂ ಅವಳನ್ನು ಹುಡುಕುತ್ತಾ ಇರುವಾಗ ಹೊಸದಾಗಿ ಬಂದ ರೂಮಿನ ಬೀಗ ಇನ್ನೂ ತೆಗೆಯದೆ ಇರುವುದು ಒಳಗಿನಿಂದ  ಸಣ್ಣಗೆ ನರಳುವ ಧ್ವನಿ ಕೇಳಿ  ಆ ರೂಮಿನ ಇನ್ನೊಂದು ಕೀ ಸಹಾಯದಿಂದ ಬಾಗಿಲು ತೆಗೆದು ನೋಡಿದಾಗ ವಿಷಯ ತಿಳಿದ ವ್ಯವಸ್ಥಾಪಕಿ ಅವಳಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಅವಳಿಂದ ವಿಷಯ ತಿಳಿದು ಎಲ್ಲಾ ಕಡೆ ನಿನ್ನೆ ಬಂದ ಹುಡುಗಿಯನ್ನು ಅರಸಲು ತೊಡಗಿದರು.
                       ಅವರು ಹುಡುಗಿಯನ್ನು ಅರಸುತ್ತಾ ಇರುವಾಗಲೇ ಮಪ್ತಿಯಲ್ಲಿದ್ದ ಪೊಲೀಸರು ಅವರ ಅಡ್ಡೆಯನ್ನು ಸುತ್ತುವರಿದು ಒಂದೇ ಸಲ ಎಲ್ಲರನ್ನು ಹಿಡಿದು . ವ್ಯಾನಿಗೆ  ತುಂಬಿ ಕೊಂಡು ಹೋದ್ದು ತಿಳಿದಾಗ ಆಶಿಕಾ ನಿಟ್ಟುಸಿರಿಟ್ಟಳು   ಅಷ್ಟರಲ್ಲಿ ಅವಳ ತಂದೆ ತಾಯಿ ವಿಷಯ ತಿಳಿದು ಮಗಳನ್ನು ಕಾಣಲು ಓಡೋಡಿ ಬಂದು ತಮ್ಮ ಮಗಳು ಯಾವ ಅಪಾಯವಿಲ್ಲದೆ ಅಲ್ಲಿಂದ ಬಂದಿದ್ದು  ತಿಳಿದು ಶ್ರೀಕರ ರ ಎರಡೂ ಕೈಗಳನ್ನು ಹಿಡಿದು ಕೃತಜ್ಞತೆ ವ್ಯಕ್ತ ಪಡಿಸಿದರು.
                        ಆಶಿಕಾಳನ್ನು ಕಂಡಂದಿನಿಂದಲೂ ಅವಳ ಸೌಂದರ್ಯ ದೈರ್ಯಕ್ಕೆ ಮನಸೋತ ಶ್ರೀಕರ ತನ್ನಾಸೆಯನ್ನು ಅವಳ ತಂದೆ ತಾಯಿಯರಲ್ಲಿ ತಿಳಿಸಿ ಆಶಿಕಾಳ ಅಭಿಪ್ರಾಯ ಕೇಳಲು ಆಕೆ ಲಜ್ಜೆಯಿಂದ ಮುಖ ಕೆಳಗೆ ಹಾಕಿದಳು   ತಾನು ಅಂದು  ಭಯವನ್ನು ಬಿಡದೇ ಇರುತ್ತಿದ್ದರೆ  ತನ್ನ ಸ್ಥಿತಿ ಏನಾಗುತ್ತಿತ್ತು ಎನ್ನುವುದು  ನೆನೆಸಿದಾಗ ಭಯದಿಂದ ಆಶಿಕಾಳಾ ತನು ಕಂಪಿಸಿತು. ಆ  ಕೇಡಿ ಎಷ್ಟು ಸುಲಭದಲ್ಲಿ ತನ್ನನ್ನು ವಂಚಿಸಿದ ತಾನಾದರೂ ಹೇಗೆ ಅವನ ಮಾತನ್ನು ನಂಬಿದೆ ಎಂದು ಆಶಿಕಾಳಿಗೆ ಅಶ್ವರ್ಯವಾಯಿತು
                         ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಯೋಚಿಸುತ್ತಾ ಆಕೆ ಕುಳಿತಿರುವಾಗ ಶ್ರೀಕರ ಏನು ಮೇಡಂ ಅಷ್ಟೊಂದು ಗಹನವಾದ ಯೋಚನೆ ಎಂದು ಛೇಡಿಸುತ್ತಾನೆ . ಆಶಿಕಾ ನಾಚಿಕೆಯಿಂದ ಮುಖವನ್ನು ಕೈಗಳಿಂದ ಮುಚ್ಚಿ  ಒರೆನೋಟ ಬೀರಿದ್ದು ತಿಳಿದು ಶ್ರೀಕರ  ಸುಹಾಸದಿಂದ ಅವಳ ಕೈಗಳನ್ನು ಹಿಡಿದು ಇನ್ನೆಷ್ಟು ದಿನ ನಾನು ನಿನಗಾಗಿ ಕಾಯಬೇಕು ಎಂದು ಮುಖ ಚಿಕ್ಕದು ಮಾಡಿದಾಗ ಆಶಿಕಾ ನಮ್ಮ ತಂದೆ ತಾಯಿ ಒಪ್ಪಿದರೆ ನಾಳೆಯೇ ಬೇಕಿದ್ದರೂ ನಿಮ್ಮೊಡನೆ ನಾನು ಬರುತ್ತೇನೆ ಎನ್ನುವಳು ಅವಳ ಮಾತನ್ನು ಕೇಳಿದ ಶ್ರೀಕರ ಅವಳ ಎರಡೂ ಕೈಗಳನ್ನು ಹಿಡಿದು ತುಟಿಗೆ ಒತ್ತಿಕೊಳ್ಳುವನು . ಶ್ರೀಖರ ನ ಸ್ಪರ್ಶದಿಂದ ಲಘುವಾಗಿ ಕಂಪಿಸಿದ  ಅವಳನ್ನು ಕಂಡು ಶ್ರೀಖರ ಅವಳಿಗೆ ಮಾತ್ರ ಕೇಳುವಂತೆ ಪಿಸು ನುಡಿಯಿಂದ ಆವಳನ್ನು ಕೆಣಕಿ ಅವಳ ಮುಖವನ್ನು ಇನ್ನಷ್ಟು ಕೆಂಪಗಾಗಿಸಿ ಅದನ್ನು ಕಣ್ಣುಗಳಿಂದ ತುಂಬಿ ಕೊಳ್ಳುವನು
                        ಪಂಕಜಾ.ಕೆ. ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...