Skip to main content

ಪಾವನಿ ಕಥೆ

ಪಾವನಿ
            
ಕಡಲ ತಡಿಯಲ್ಲಿ  ಕಲ್ಲು ಬೆಂಚಿನಲ್ಲಿ ಕುಳಿತು ಹಾರಿ ಬರುತ್ತಿರುವ ಅಲೆಗಳನ್ನೇ ನೋಡುತ್ತಾ ಇದ್ದ  ಪಾವನಿಯ ಮನಸ್ಸು ಹುಚ್ಚೆದ್ದ ಕುದುರೆಯಂತೆ ಅಶಾಂತಿಯಿಂದ ಕೂಡಿತ್ತು.
            ಬೇಡ ಬೇಡವೆಂದರೂ ಕಳೆದುಹೋದ ಜೀವನದ ಪುಟನೆಗಳ ನೆನಪುಗಳು ಒಂದರ ಹಿಂದೊಂದು ಬಂದು ಘಾಸಿ ಗೊಳಿಸಿದಾಗ ,ಪಾವನಿ ಕಣ್ಣು ಮುಚ್ಚಿ ನೆನಪಿನಾಳದಲ್ಲಿ ಮುಳುಗಿ  ಹೋದಳು .
          ಹಿ ಪಾವ್ ಪ್ಲೀಸ್ ಕಣೆ ನನಗೆ ಸ್ನೇಹಿತರ ಜತೆ ಪಿಕ್ನಿಕ್ ಹೋಗಲೇ ಬೇಕು ಅಪ್ಪ ಅಮ್ಮನನ್ನು  ಒಪ್ಪಿಸು ಎಂದು ಪ್ರತಿಯೊಂದಕ್ಕೂ ತನಗೆ ದುಂಬಾಲು ಬೀಳುವ ತಮ್ಮ ಪ್ರವೀಣನೆಂದರೆ ಪಾವನಿಗೂ ಅಚ್ಚುಮೆಚ್ಚು .ತನ್ನ ನಂತರ 5 ವರ್ಷಗಳ ನಂತರ ಹುಟ್ಟಿದ ತವರಿನ ಏಕೈಕ ಕುಡಿ ಎಲ್ಲರ ಕಣ್ಮಣಿಯಾಗಿದ್ದರೂ ಅವನು ಹೆಚ್ಚು ಅಂಟಿಕೊಂಡಿದ್ದು ತನ್ನನ್ನೇ. ಪ್ರತಿಯೊಂದಕ್ಕೂ ಅಕ್ಕ ಅಕ್ಕಾ ಎಂದು ತನ್ನ ಹಿಂದೆ ಮುಂದೆ ತಿರುಗುವ ತಮ್ಮನೆಂದರೆ ತನಗೂ ಇಷ್ಟ ಅವನ  ಬೇಕು ಬೇಡಗಳನ್ನೆಲ್ಲಾ ನೋಡಿಕೊಳ್ಳುವುದೆಂದರೆ ತನಗೆ ಇಷ್ಟ . ತನ್ನ ಶಾಲೆಯ ಕೆಲಸಗಳ ಜತೆ ತಮ್ಮನನ್ನು ನೋಡಿಕೊಳ್ಳುತ್ತಾ ಅವನ ವಿದ್ಯಾಭ್ಯಾಸದಲ್ಲೂ ಸಹಾಯ ಮಾಡುತ್ತಿದ್ದ ಪಾವನಿಯನ್ನು ಕಂಡು  ತಂದೆ ತಾಯಿ   ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು .
               ಒಮ್ಮೆ ಯಾವುದೋ ನೆಂಟರ ಮನೆಯ ಕಾರ್ಯಕ್ರಮಕ್ಕೆಂದು ತಂದೆ ತಾಯಿಯ ಜತೆ ಹೋದ ಪ್ರವೀಣ ಬರುವಾಗ ಬಸ್ ಅಪಘಾತವಾಗಿ ತಂದೆ ತಾಯಿಯರನ್ನು ಕಳೆದುಕೊಂಡು ಪವಾಡ ಸದೃಶವಾಗಿ ಉಳಿದು ಕೊಂಡಾಗ ತಾನಿನ್ನು ಪಿ. ಯು.ಸಿ ಮುಗಿಸಿದ್ದೇನಷ್ಟೇ  ತನಗೆ ಸಿ ಇ ಟಿ ಬರೆಯಲು ಇದ್ದುದರಿಂದ ಅವರ ಜತೆ ತಾನು ಹೋಗಿರಲಿಲ್ಲ . ಡಾಕ್ಟರ್ ಆಗಿ ಸೇವೆ ಸಲ್ಲಿಸಬೇಕು ಎನ್ನುವ ಮಹತ್ವಾಕಾಕ್ಷೆ ಇದ್ದ ತನಗೆ   ಇದು ಒಂದು  ದೊಡ್ಡ ಆಘಾತವಾಗಿತ್ತು .ಅಂದಿನಿಂದ ತಮ್ಮನ ವಿದ್ಯಾಭ್ಯಾಸಕ್ಕಾಗಿ ತಾನು ತನ್ನ ಆಸೆಯನ್ನು  ಬದಿಗಿಟ್ಟು ತಂದೆಯ ಸ್ನೇಹಿತರ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ತಮ್ಮನನ್ನು ಓದಿಸಿ ಅವನನ್ನು ಒಂದು ನೆಲೆಗೆ ಹಚ್ಚುವುದರರಲ್ಲಿ ತನ್ನ ಯೌವ್ವನದ ದಿನಗಳು ವ್ಯರ್ಥವಾಗುತ್ತಿರುವುದು ತಿಳಿದರೂ ಈ ಬಗ್ಗೆ ಗಮನ ಹರಿಸದೆ ತಮ್ಮನನ್ನು ಒಂದು ನೆಲೆಗೆ ಸೇರಿಸಿದಾಗ ಧನ್ಯತೆಯಿಂದ ತಾನು ಎಷ್ಟು ಖುಷಿ ಪಟ್ಟಿದ್ದೆ .ಆದರೆ ಕೆಲಸಕ್ಕೆ ಸೇರಿದ ಒಂದೇ ವರ್ಷದಲ್ಲಿ ತಮ್ಮ ತನಗೆ ಒಂದು ಮಾತೂ ತಿಳಿಸದೆ ತನ್ನ ಕಂಪೆನಿಯ ಓನರ್ ಮಗಳನ್ನೇ ಮದುವೆಯಾಗಿ ಅವರ ಮನೆ ಅಳಿಯನಾಗಿ ಹೋಗಿ  ತನ್ನನ್ನು ಮರೆತೇ ಬಿಟ್ಟಿದ್ದು ,ಒಮ್ಮೆಯೂ ತನ್ನನ್ನು ನೋಡಲು ಬಾರದ ತಮ್ಮನನ್ನು ತಾನಾಗಿ ಒಮ್ಮೆ ನೋಡಲು ಹೋದಾಗ ,ತಮ್ಮನ ಹೆಂಡತಿ  ಮಾಡಿದ ಅವಮಾನ, ಅದನ್ನು ಕಂಡರೂ ಕಾಣದಂತೆ ಮೌನವಾಗಿದ್ದ ತಮ್ಮ ಪ್ರವೀಣ, ದುಃಖ ಉಕ್ಕಿ  ಬಂದು  ಇಷ್ಟೇನೆ ಇಷ್ಟಕ್ಕಾಗಿ ತಾನು ತನ್ನ  ಆಸೆ ಆಕಾಂಕ್ಷೆಗಳನ್ನು ಬಿಟ್ಟು   ಹಗಲಿರುಳೂ ದುಡಿದದ್ದೇ ಎಂದು ಕಣ್ಣು ತುಂಬಿ  ಬಂದು ದುಃಖ ತಡೆಯಲಾರದೆ  ಕಡಲತಡಿಯಲ್ಲಿ  ಕುಳಿತು ಮನಸಾರೆ ಅತ್ತು  ಬಿಟ್ಟಿದ್ದೆ.
                      ಬದುಕು ಕೊನೆಗಾಣಿಸಬೇಕೆಂದಿದ್ದಾಗ ಇದೇ ಕಡಲ ತಡಿಯಲ್ಲಿ ಅಲ್ಲವೇ ಅವರ ಪರಿಚಯವಾದುದು ಅವರೂ ತನ್ನಂತೆ ನೊಂದವರೆಂದು ತಿಳಿದಾಗ ತನ್ನ ಮನ ಅವರಿಗಾಗಿ ಮಿಡಿದಿತ್ತಲ್ಲವೇ?  ಅಂದು ಕಡಲ ತಡಿಯಲ್ಲಿ  ಪರಿಚಯವಾದ  ಸಾಕೇತ ತನ್ನನ್ನು ಸಮಾಧಾನಿಸಿ ಸಾಯುವುದು ದೊಡ್ಡದಲ್ಲ ಬದುಕಿ ಸಾಧಿಸಿ  ತೋರಿಸಬೇಕು ನಿನಗೆ ಕೆಲಸವಿದೆ ನಿನ್ನ ಅನ್ನ ನೀನು ಸಂಪಾದಿಸುತ್ತಿದ್ದಿಯಾ ನಿನ್ನ ಚಿಕ್ಕಂದಿನ ಆಸೆಯ ಗುರಿಯನ್ನು ತಲುಪಲು ಇದು ಸಕಾಲ ಎಂದು ದೈರ್ಯ ತುಂಬಿ   ತನ್ನನ್ನು ಮದುವೆಯಾಗಿ ಸ್ನೇಹಿತನಂತೆ ಜತೆಯಲ್ಲಿದ್ದು ತನ್ನ ಬೇಕು ಬೇಡಗಳನ್ನು ನೋಡುತ್ತಾ ತಾನು ಒಬ್ಬ ವೈದ್ಯೆ ಯಾಗಿ ತನ್ನ ಕನಸನ್ನು ನನಸು ಮಾಡಲು ಸ್ಫೂರ್ತಿ ತುಂಬಿದ ದೇವರು 
               ಆ ದಿನ ಸಾಕೇತ್ ಸಿಗದೇ ಇರುತ್ತಿದ್ದರೆ , ತಾನೇನಾಗುತ್ತಿದ್ದೇನೋ ಅವರ ಸಹಕಾರದಿಂದ ಇಂದು ತಾನು ಒಬ್ಬ ಬಹುಜನಪ್ರಿಯ ವೈದ್ಯೆ ಯಾಗಿದ್ದು ತನ್ನದೇ ಆದ ನರ್ಸಿಂಗ್ ಹೋಮ್ ಒಂದರ ಒಡತಿಯಾಗಿದ್ದೇನೆ. ತಾವಿಬ್ಬರು  ಮದುವೆಯಾಗಲು ನಿಶೈಯಿಸಿ ತನ್ನ ತಮ್ಮನನ್ನು ಕಾಣಲು ಹೋಗಿದ್ದಾಗ ತಮ್ಮನ ಹೆಂಡತಿ ಆಡಿದ ಮಾತು  ಈಗಲೂ ಕಿವಿಯಲ್ಲಿ ಗುಯ್ಗುಡುತ್ತಿದೆ 
              .ಇಷ್ಟು ದಿನ ಅಕ್ಕ ಬದುಕಿದ್ದಾಳೋ ಸತ್ತಿದ್ದಾಳೋ ಎಂದು ನೋಡದ ತಮ್ಮ ಇಂದು  ಹೆಂಡತಿ ಜತೆ ಬಂದು ತನ್ನ  ಕಾಲು ಹಿಡಿದು ಬೇಡಿಕೊಂಡಾಗ ತಾನೇನು ಮಾಡಬೇಕಾಗಿತ್ತು. ಪ್ಲೀಸ್ ಅಕ್ಕ ಇದೊಂದು ಬಾರಿ ಕ್ಷಮಿಸಿ ಬಿಡು ದಯವಿಟ್ಟು ನನ್ನ ಮಗನನ್ನು ಉಳಿಸಿಕೊಡು ಎಂದು  ಬೇಡಿಕೊಂಡಾಗ ಮನಸ್ಸು ಕುದಿದರೂ ರಕ್ತ ಸಂಬಂಧದ  ಮುಂದೆ ಮಿಕ್ಕಿದ್ದೆಲ್ಲವೂ ಗೌಣವಾಯ್ತು ಎನ್ನುವಂತೆ ತಾನು ಅವನ ಕೈಯನ್ನು ಅದುಮಿ ಸರ ಸರನೆಂದು ವಾರ್ಡಿಗೆ ಹೊರಟು ಹೋಗಿದ್ದೆ.
              ಅಲ್ಲಿ ಹಾಸಿಗೆಯಲ್ಲಿ ಶವದಂತೆ  ಮಲಗಿದ್ದ ತನ್ನ ತವರಿನ ಕುಡಿಯನ್ನು  ಕಂಡಾಗ ಕಣ್ಣು ತುಂಬಿ  ಬಂದಿತ್ತು.ಈ ಮುದ್ದು ಮಗು  ತನ್ನ ತಮ್ಮನ ಪಡಿಯಚ್ಚು ತನ್ನ ತವರಿನ ದೀಪ ಎನ್ನುವ ಯೋಚನೆ ಬಂದುದೆ ತಡ  ಕೂಡಲೇ ಕಾರ್ಯೋನ್ಮುಖಳಾಗಿ .ಮಗುವನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದೆ   .ತಮ್ಮ ಮತ್ತು ತಮ್ಮ ನ  ಹೆಂಡತಿ  ಕೃತಜ್ಞತೆಯಿಂದ ಕಣ್ಣಲ್ಲಿ ನೀರು ತುಂಬಿಕೊಂಡಾಗ ಸಾರ್ಥಕದ ಭಾವ ತುಂಬಿ ಬಂದು ತನ್ನ ಕಣ್ಣಲ್ಲೂ ನೀರಾಡಿತ್ತು ಅದನ್ನು ತೋರಗೊಡಬಾರದೆಂದು  ಅವಸರದಲ್ಲಿ ತನ್ನ ಸುಖ ದುಃಖಗಳಿಗೆ ಹೆಗಲಾಗುತ್ತಿದ್ದ ಕಡಲ ತಡಿಗೆ  ಓಡೋಡಿ ಬಂದಿದ್ದೆ .ಎಂದು ಯೋಚಿಸುತ್ತಿರುವಾಗ   ಪಾವನಿಯನ್ನು  ಹುಡುಕಿಕೊಂಡು ಬಂದ ಸಾಕೇತ್ ಅಲ್ಲಿ ಪಾವನಿಯನ್ನು ಕಂಡು ತಾನು ಮೊದಲ ಬಾರಿ ಅವಳನ್ನು ಕಂಡ ನೆನಪು ಉಕ್ಕಿ ಬಂದು ಧಾವಿಸಿ ಹೋಗಿ ಪಾವನಿಯ ಭುಜ ತಟ್ಟಿ ಏಳು ಪಾವನಿ ಮನೆಗೆ ಹೋಗೋಣ ನೀನು ಮಾಡಿದ್ದು ಸರಿ ಇದೆ.ಎಷ್ಟಾದರೂ ಅವನು ನಿನ್ನ ತಮ್ಮ , ರಕ್ತ ಸಂಬಂದದ  ಮುಂದೆ  ಯಾವದೂ ಇಲ್ಲ .ಒಂದು ಜೀವ ಉಳಿಸುವ ಪುಣ್ಯ ಕಾರ್ಯ ನೀನು ಮಾಡಿದ್ದಿಯಾ ಅದು ನಿನ್ನ ತಮ್ಮನ ಮಗನಲ್ಲದೆ ಇದ್ದರೂ ನಿನ್ನ ಕರ್ತವ್ಯವೇ ಆಗಿತ್ತು ಅಲ್ಲವೇ ಎಂದು ಸಮಾಧಾನಿಸಿ  ತನ್ನ ಭುಜಕ್ಕೆ ಒರಗಿಸಿ ಅವಳನ್ನು ತನ್ನೆರಡು ಕೈಗಳಿಂದ ಬಿಗಿಯಾಗಿ ಹಿಡಿದು ಮುದ್ದಿಸಿ ಅವಳ ದುಗುಡ ನಿವಾರಿಸಿ ಕಾರಿನೆಡೆಗೆ ಕರೆದೊಯ್ದ 

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...