Skip to main content

ಹಣದ ಬೆಲೆ. ಕಥೆ

ಹಣದ ಬೆಲೆ
 
ಶರತನದು ದುಂದು  ವೆಚ್ಚದ ಸ್ವಭಾವ. ತನಗೆ ಬಂದ ಸಂಬಳವನ್ನೆಲ್ಲಾ  ಗೆಳೆಯರ ಜತೆ ಪಾರ್ಟಿ ಅದು ಇದು ಎಂದು ಖರ್ಚುಮಾಡುತ್ತಿದ್ದ .ತಂದೆ ತಾಯಿ ಎಷ್ಟೋ ಹೇಳಿ   ನೋಡಿದರು. ಸ್ವಲ್ಪವಾದರೂ ಉಳಿತಾಯ ಮಾಡಬೇಕು . ನಾಳೆ  ನಿನ್ನ ಮದುವೆ ಆದ ಮೇಲೆ ಸಂಸಾರದ ಖರ್ಚಿಗೆ ಬೇಡವೇನೋ  ಎಂದು,.ಆಗ ಆತ ಉಡಾಫೆಯಿಂದ ಆಗ ನೋಡೋಣಮ್ಮ ಅದಕ್ಕಾಗಿ ಈಗಲೇ ಯಾಕೆ ಉಳಿತಾಯ  ಮಾಡಬೇಕು ಎಂದು ಮಾತು ಹಾರಿಸಿ ಬಿಡುತಿದ್ದ.  ತಂದೆ ತಾಯಿಗೆ ಮಗನದೆ ಚಿಂತೆ .ಮದುವೆ ಆದರೆ ಸರಿಯಾದಾನೆಂದು ತಾವೇ ಹುಡುಕಿ ಒಳ್ಳೆ ಹೆಣ್ಣಿನ ಜತೆ ಮದುವೆ ಮಾಡಿಸುತ್ತಾರೆ.
           ಮದುವೆ ಆದಮೇಲೆಯೂ ತನ್ನ ಹಳೆ  ಚಾಳಿಯನ್ನು ಬಿಡದೆ ಇದ್ದ ಅವನನ್ನು ಕಂಡು  ಬೇಸರಿಸುವರು .ಮಗನಿಗೆ ಉಳಿತಾಯದ ಮಹತ್ವವನ್ನು ತಿಳಿಸಲೆಂದು ತಂದೆ ತಾಯಿ ಇಬ್ಬರೂ ತಾವು ಒಂದು ತಿಂಗಳ ಮಟ್ಟಿಗೆ ಪ್ರವಾಸ ಹೋಗಲು ನಿಶ್ಚಯಿಸುತ್ತಾರೆ. 
            ತಂದೆ ತಾಯಿ ಪ್ರವಾಸ ಹೋದ ಸಮಯದಲ್ಲಿ  ಮನೆ ಖರ್ಚುಗಳನ್ನು ನಿಭಾಯಿಸಲಾಗದೆ ಸೋತ ಆತನು ತನ್ನ ಸ್ನೇಹಿತರಲ್ಲಿ ಸಾಲ ಕೇಳಬೇಕಾಯಿತು .ಆಗ ಅವರಲ್ಲಿ ಒಬ್ಬ ಗೆಳೆಯ ಏನೋ ನೀನು ನಮಗಿಂತ ಹೆಚ್ಚು ಸಂಪಾದಿಸುತ್ತಿದ್ದಿಯಾ  ಉಳಿತಾಯ ಮಾಡಲಿಲ್ಲ ಎಂದರೆ ಹೇಗೋ ನಂಬುವುದು?.ನಮಗೆ ಬಂದ ಹಣದಲ್ಲಿ ಪ್ರತೀ ತಿಂಗಳು ನಿರ್ಧಿಷ್ಟ ಹಣವನ್ನು ನಾನು ಪೋಸ್ಟ್ ಆಫೀಸಿನ ಆರ್.ಡಿ ಖಾತೆಯಲ್ಲಿ  ಹಾಕುತ್ತಿರುವುದರಿಂದ   .ನಾಳೆ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ  ಯಾರ ಕೈಯನ್ನು ಕಾಯಬೇಕಾಗಿಲ್ಲ  ಎಂದು ಸಂತೃಪ್ತಿಯಿಂದ ನುಡಿಯುವನು ಈಗಲೂ ಕಾಲ  ಮೀರಿಲ್ಲ ಬರುವ ತಿಂಗಳಿನಿಂದವೇ ಉಳಿತಾಯ ಮಾಡು ಎಂದು ಬುದ್ದಿ ಹೇಳುತ್ತಾನೆ .ಅಮ್ಮ ಅಪ್ಪ ಎಷ್ಟು ಹೇಳಿದರೂ  ಕೇಳದ ಶರತ್ .ಗೆಳೆಯನ ಒಂದೇ ಮಾತಿಗೆ ಕರಗಿದ 
            ಗೆಳೆಯನ ಸಂತೃಪ್ತಿ ನೋಡಿ  ಅವನಿಗೆ ಅಸೂಯೆಯಾಯಿತು ತಾನೂ ತನ್ನ ಗೆಳೆಯನಂತೆ ಉಳಿತಾಯ ಮಾಡಿ  ತನ್ನದೇ ಸ್ವಂತ ಮನೆ ಇತ್ಯಾದಿ ಐಷಾರಾಮ ವಸ್ತುಗಳನ್ನು ಕೊಳ್ಳಬೇಕು  ಎಂದು ಯೋಚಿಸಿ , ಬರುವ ತಿಂಗಳಿನಿಂದವೇ ತನ್ನ ಸಂಬಳದ ಅರ್ಧವನ್ನು  ವಿವಿಧ ಖಾತೆಗಳಲ್ಲಿ ತೊಡಗಿಸಿದ.ಇದರಿಂದಾಗಿ ಅವನು ಮುಂದೆ ತನ್ನದೇ ಆದ ಸ್ವಂತ ಮನೆ ಕಾರು ಇತ್ಯಾದಿ  ಸೌಲಭ್ಯಗಳ ಜತೆ ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನೂ ಸಾಲವಿಲ್ಲದೆ ನಿಭಾಯಿಸುವಂತಾಯಿತು .ಈಗ ಆತನದು ಕಂಡವರು ಕರುಬುವಂತ ಸುಖೀ ಜೀವನ. ತನ್ನ ಕಣ್ಣು ತೆರೆಸಿ  ತನಗೆ ಉಳಿತಾಯದ ಮಹತ್ವ ತಿಳಿಸಿದ ಗೆಳೆಯನನ್ನು ಆತ ಕೃತಜ್ಞತೆಯಿಂದ ನೆನೆಯುತ್ತಿದ್ದ
            
ಪಂಕಜಾ.ಕೆ. ರಾಮಭಟ್.ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...