Skip to main content

ಸಾರ್ಥಕ ಬದುಕು

ಸಾರ್ಥಕ ಬದುಕು 

ಘಮವ ಬೀರುತ ಅರಳಿ ಬಿಟ್ಟಿದೆ
ಹೊನ್ನ ಬಣ್ಣದ ಹೂಗಳು
ಸುಮದ  ಮಧುವನು ಹೀರಲೆಂದು 
 ಮುತ್ತಿ ಬರುತಿವೆ   ದುಂಬಿಗಳು

ದೊಡ್ಡ ಗಾತ್ರದ  ಭೃಂಗ ಕುಳಿತಿದೆ 
ಸಣ್ಣ ಹೂವಿನ ಮಧ್ಯದಿ
ಪರಾಗ ಸ್ಪರ್ಶಕೆ ದಾರಿಯಾಗಿದೆ
ಭೃಂಗಗಳ ಒಡನಾಟದಿ 

ಕಣ್ಣು ತುಂಬುವ ಚೆಲುವ ಹೂವದು
ದುಂಬಿಯಾಟಕೆ ಬಳಲಿದೆ
ಮಧುವ ಸುರಿಸುತ ನಗುತ ನಲಿಯುತ
ಒಂದೇ ದಿನದಲಿ ಬಾಡಿದೆ 

ಒಂದೇ ದಿನದ ಬದುಕಿದರದಾದರೂ
ಜೀವ ಸಾರ್ಥಕ ಪಡೆದಿದೆ
ದೇವ ಪಾದದಿ  ಹೆಣ್ಣ ಮುಡಿಯಲಿ
ನಕ್ಕು ಕಂಗಳ ಸೆಳೆದಿದೆ
ಪಂಕಜಾ. ಕೆ.ರಾಮಭಟ್.

Comments