Skip to main content

ಅರಿವು ಮೂಡಿದಾಗ ಕಥೆ

ಅರಿವು ಮೂಡಿದಾಗ
 
ಶ್ರೀಮಂತನಾದ ರಮೇಶನಿಗೆ ತಂದೆ ಕೇಳಿ ಕೇಳಿದಾಗಳೆಲ್ಲಾ  ಹಣ ಕೊಡುತ್ತಿದ್ದುದರಿಂದ  , ಹಣದ ಬೆಲೆ ತಿಳಿದಿರಲಿಲ್ಲ .  ಕಾಲೇಜಿಗೆ ನೆಪ ಮಾತ್ರಕ್ಕೆ ಹೋಗುತ್ತಾ ಗೆಳೆಯರ ಜತೆ  ಅಲ್ಲಿ ಇಲ್ಲಿ ತಿರುಗಾಡಿ ಮಜಾ ಮಾಡುವುದೇ ಅವನ ಕಾಯಕವಾಗಿತ್ತು. ಬಡವರೆಂದರೆ  ತಾತ್ಸಾರ ಮನೊಭಾವ ಹೊಂದಿದ್ದ ಆತ,  ಹರಿದ ಬಟ್ಟೆ ಹಾಕಿದ  ಬಡವರನ್ನು ಕಂಡರೆ ದೂರ ಸರಿಯುತ್ತಿದ್ದ.
                ಒಂದು ದಿನ ಸ್ನೇಹಿತರೆಲ್ಲ ಸೇರಿ ಜಾಲಿ ರೈಡ್ ಹೋಗುವುದೆಂದು ನಿರ್ಣಯಿಸಿದರು. ನಿಶ್ಚಿತ  ಸ್ಥಳಕ್ಕೆ ಯಾರು ಮೊದಲು ತಲುಪುತ್ತಾರೋ. ಅವರಿಗೆ 10000  ಬಹುಮಾನ ಎಂದು ಘೋಷಿಸಿದ ರಮೇಶ, ತಾನು ಅವರ   ಜತೆ  ತನ್ನ ಬೈಕಿನಲ್ಲಿ ಹೊರಡುವ ನಿರ್ಧಾರ ಮಾಡಿದ.  ಎಲ್ಲರೂ ಒಂದೊಂದು ದಾರಿ ಹಿಡಿದು ತಮ್ಮತಮ್ಮ ಬೈಕ್ ಚಲಾಯಿಸಿದರು. ರಮೇಶನೂ ವೇಗವಾಗಿ ಬೈಕ್ ಓಡಿಸುತ್ತಾ ಇರುವಾಗ ತಿರುವಿನಲ್ಲಿ ಆಯ ತಪ್ಪಿ ಕೆಳಗಿನ ಪ್ರಪಾತಕ್ಕೆ ಬೈಕ್ ಸಮೇತ ಉರುಳಿ ಬಿಟ್ಟ .
             ಕಣ್ಣು ಬಿಟ್ಟಾಗ ತಾನೊಂದು ಹುಲ್ಲಿನ ಗುಡಿಸಿಲಿನಲ್ಲಿ ಇರುವುದು ತಿಳಿದು ಆತ ಮೆಲ್ಲಗೆ ಏಳಲು ಪ್ರಯತ್ನಿಸಿದಾಗ , ಮೈ ಕೈಯೆಲ್ಲ ನೋವಾಗಿ ಸಣ್ಣಗೆ ನರಳಿದ  .ಅಷ್ಟರಲ್ಲಿ ಅಲ್ಲಿಗೆ ಬಂದ ಕೆದರಿದ ಕೂದಲ ಹರಿದ ಬಟ್ಟೆ ತೊಟ್ಟ ಒಬ್ಬ ತರುಣ ಅವನನ್ನು ಹಿಡಿದು  ಮೃದುವಾಗಿ  ಗೋಡೆಗೆ ಒರಗಿಸಿ ಕುಳಿತುಕೊಳ್ಳಲು  ಸಹಾಯ  ಮಾಡಿ,ಅಣ್ಣಾ ಈಗ   ಹೇಗಿದ್ದೀರಿ? ನೋವು ಕಡಿಮೆಯಾಗಿದೆಯೇ ?ಎಂದು ವಿಚಾರಿಸಿ  ತಾನು ತಂದ ಪಾನೀಯವನ್ನು ನಿಧಾನವಾಗಿ ಕುಡಿಸಿ ಮಲಗಿಸಿ ತನ್ನ ಕೆಲಸಕ್ಕೆ ಹೊರಟನು. . ನಿದ್ದೆ ಬಾರದೆ ಕಣ್ಣು ಮುಚ್ಚಿ ಮಲಗಿದ್ದ ರಮೇಶನಿಗೆ ಒಳಗಿನ ಸಂಭಾಷಣೆ ಕೇಳುತ್ತಿತ್ತು. ಮನೆಯಲ್ಲಿ ಸಾಮಾನು ಇಲ್ಲ.ಶೆಟ್ಟರ  ಅಂಗಡಿಯ ಸಾಲ ಹನುಮಂತನ ಬಾಲದಂತೆ ಬೆಳೆದಿದೆ . ಈಗ ಒಂದುವಾರದಿಂದ ನಾನು ಕೆಲಸಕ್ಕೆ ಹೋಗಲು ಆಗಲಿಲ್ಲ ಇಂದಾದರು ಅವನಿಗೆ ಪ್ರಜ್ಞೆ ಬಂದರೆ  ನಾನು ಕೆಲಸಕ್ಕೆ ಹೋಗಬಹುದು ಇಲ್ಲದಿದ್ದರೆ  ನಾಳೆಯಿಂದ ತಣ್ಣೀರು ಕುಡಿದು ಮಲಗಬೇಕಾದೀತು .ನಮಗೆ ಇದು ಅಭ್ಯಾಸವಾಗಿದೆ.ಅದರೆ ಆ ಮಗುವಿನ ಹೊಟ್ಟೆಗಾದರೂ ಏನಾದರೂ ಕೊಡಬೇಕಲ್ಲ ಎಂದು  ಹೇಳಿದ್ದು ಕೇಳಿ ರಮೇಶನಿಗೆ ಅವರಮನೆ ಪರಿಸ್ಥಿತಿ ಅರಿವಾಯಿತು
               .ಬಡವರೆಂದರೆ ತಾತ್ಸಾರವಿದ್ದ ಅವನಿಗೆ ಈ ಘಟನೆಯಿಂದ ಮನ  ಪರಿವರ್ತನೆಯಾಯಿತು. ತಾನು ಒಂದು ದಿನದಲ್ಲಿ ಖರ್ಚು ಮಾಡುವ ಹಣದಲ್ಲಿ ಬಡವರು ಒಂದು ತಿಂಗಳು ಹೊಟ್ಟೆ ತುಂಬಿಸಬಹುದೆನ್ನುವ  ಅರಿವಾದುದೆ, ಆತ ಒಂದು ದೃಢ ನಿರ್ಧಾರಕ್ಕೆ ಬಂದ ತಾನು ಅವರನ್ನು ಒಪ್ಪಿಸಿ ತಮ್ಮ  ಮನೆಗೆ  ಅವರನ್ನು ಕರೆದೊಯ್ಯಬೇಕು ಮುಂದೆ ಹಣವನ್ನು ಹಾಳು ಮಾಡದೆ ಬಡ ಮಕ್ಕಳ ಕಲ್ಯಾಣಕ್ಕಾಗಿ ಅದನ್ನು ಸದ್ವಿನಿಯೋಗಿಸಬೇಕೆಂದು  ನಿರ್ಧರಿಸಿದ .
                 ಅದರಂತೆ ಆ ದಂಪತಿಗಳನ್ನು ಒಪ್ಪಿಸಿ ಅಂದೆ ಅವರನ್ನು ಕರೆದುಕೊಂಡು ತನ್ನ ಮನೆಗೆ  ಬಂದಾಗ ತಿಂಗಳಿನಿಂದ ಮಗನ ಸುಳಿವು ಇಲ್ಲದೆ ನೊಂದಿದ್ದ ತಂದೆ ತಾಯಿ ಖುಷಿಯಿಂದ ಅವನನ್ನು ತಬ್ಬಿಕೊಂಡರು. ಅವನನ್ನು ಬದುಕಿಸಿ ಮರಳಿ ತಮಗೆ ಒಪ್ಪಿಸಿದ ದಂಪತಿಗಳನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡರು..ಮಗನ ಮನ ಪರಿವರ್ತನೆಯಾದುದು ತಿಳಿದು ತಂದೆ ತಾಯಿ ತುಂಬಾ ಖುಷಿ  ಪಟ್ಟು ಕಾಣದ ದೇವರಿಗೆ ಭಕ್ತಿಯಿಂದ ಕೈ ಮುಗಿದರು.

ಪಂಕಜಾ.ಕೆ. ಮುಡಿಪು

Comments

Popular posts from this blog

ನವಪರ್ವಕ್ಕೆ ಕಳಿಸಿದ ಪದ್ಯ

[13/01, 10:13 PM] pankajarambhat: ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ [13/01, 10:17 PM] pankajarambhat: ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಗಜಲ್ ಬಗ್ಗೆ

[06/06, 9:41 AM] pankajarambhat: ಗಜಲ್ ಪಾಠ ಗಜಲ್ ಕಲಿಯಲು ಆಸಕ್ತಿ ಇದ್ದವರಿಗಾಗಿ ಒಂದು ಪ್ರಯತ್ನ ಗಜಲ್ ಮುಖ್ಯವಾಗಿ ಇರಬೇಕಾದ ಅಂಶಗಳು *ದ್ವೀಪದಿ* *ಮತ್ಲಾ* *ರದೀಫ್* *ಕಾಫಿಯ* *ಷೇರುಗಳು* *ಮಖ್ತ* ಇಷ್ಟು ವಿಷಯಗಳು ನೆನಪಿರಬೇಕಾದ ಅಂಶಗಳು *ದ್ವೀಪದಿ*- ಗಜಲ್ ಮುಖ್ಯವಾಗಿ ದ್ವೀಪದಿ ಗಳಲ್ಲಿ ಇರಬೇಕು.ಎರಡೆರಡು ಸಾಲುಗಳಲ್ಲಿ *ಮತ್ಲಾ*- ಎಂದರೆ ಗಜಲ್ ನ ಮೊದಲ ಚರಣ. ಇದು ದ್ವೀಪದಿಯಲ್ಲಿದ್ದು ಇದರ ಎರಡು ಚರಣದ ಕೊನೆಯಲ್ಲಿ ಒಂದೇ ರೀತಿಯ ಪ್ರಾಸಗಳು ಬರಬೇಕು ಕಾಫಿಯ ದ ಕೊನೆಯ ಮತ್ತು ರದೀಫ್ ಪ್ರಾಸವಾಗಿದ್ದು ಮುಂದಿನ ಎಲ್ಲಾ ಷೇರುಗಳಲ್ಲಿ ಇದು ಕಡ್ಡಾಯವಾಗಿ ಬರಬೇಕು *ರದೀಫ್*- ಇದು ಒಂದು ಪ್ರಾಸ . ಕಾಫಿಯ ದ ನಂತರ ಎಲ್ಲಾ ಷೇರು ಗಳಲ್ಲಿ  ಮತ್ತೆ ಮತ್ತೆ ಬರುವ ಪದ. ಇವು ಅರ್ಥವುಳ್ಳದಾಗಿದ್ದು ಗಜಲ್ ಗೆ ಮೆರಗು ನೀಡಲು ಸಹಕಾರಿ ರದೀಪ್ ಇಲ್ಲದೆ ಗಜಲ್ ಬರೆಯಬಹುದು ಆದರೆ ಹೆಚ್ಚ ಚಾಲ್ತಿ ಇರೋದು ರದೀಪ್ ಇರುವ ಗಜಲ್ *ಕಾಫಿಯ*- ಇದು ರದೀಪ್ ನ ಹಿಂದೆ ಬರುವ ಪದದ ಕೊನೆಯ ಅಕ್ಷರ. ಇಲ್ಲಿ ಇದಕ್ಕೆ ರವಿ ಎನ್ನುತ್ತಾರೆ ಇದು ಪ್ರಾಸವಾಗಿರುತ್ತದೆ ಆದರೆ ಕೊನೆಯ ಅಕ್ಷರ ಮಾತ್ರ ಒಂದೇ ಆಗಿರಬೇಕು ಕಾಫಿಯಾ ಯಾವಾಗಲು ಒಂದೇ ಆಗಿರಬಾರದು. ಉದಾ: ಬದುಕಿಸಿ, ಸಾಯಿಸಿ,ಬಯಸಿ ಹೀಗೆ ಇಲ್ಲಿ *ಸಿ*  ರವಿ ಆಗಿರುತ್ತದೆ ರವಿ ಇರುವ ಪದ ಕಾಫಿಯ ಆಗುತ್ತದೆ ಅವು ಬೇರೆ ಬೇರೆ ಆಗಿರಬೇಕು *ಷೇರುಗಳು*- ಎಂದರೆ ದ್ವಿಪದಿಯಲ್ಲಿರುವ ಚರಣಗಳು *ಮಖ್ತ*- ಇದು ಕೊನೆಯ ದ್ವಿಪ...