Skip to main content

ಚೋರ

ಚೋರ
ಮೆಲ್ಲ ಮೆಲ್ಲನೆ ಬಂದು
ಮನಕೆ ಲಗ್ಗೆಯನಿಟ್ಟು
ಮನವ ಕೆಣಕುತನಿಂದು

ಮನದ ಮಲ್ಲಿಗೆಯೊಳಗೆ
ಮೌನ ರಾಗದಿ ಹಾಡಿ
ಮನಕೆ ಮುದ ತಂದೆ

ಮನವ  ಕದ್ದಿಹ ಚೋರ
ಮುತ್ತೊಂದ ಕೊಟ್ಟಾಗ
ಮೂಡಿತಲ್ಲಿ ಕಾಮನಬಿಲ್ಲು

ಮಿನುಗುತ್ತಿದೆ ಬಾಳಿನಲಿ ಚುಕ್ಕಿ
ಮನಸು ಆಗಿದೆ ಆಗಸದ ಹಕ್ಕಿ
ಮೂಡಿದ ಕನಸುಗಳ ಹೆಕ್ಕಿ

ಮಾಲೆಯನು ಮಾಡಿಕಟ್ಟಿ
ಮನಕೆ ತೋರಣವ ಕಟ್ಟಿ
ಮನದಲ್ಲಿ ನಿಂತೆ ನೀ ಬಾಳ ಚೋರ
ಪಂಕಜಾ.ಕೆ.

Comments