ಆಶೆ..ನಿರಾಶೆ
ಮುಂಜಾನೆಯರವಿಕಿರಣದ ಬಿಸಿ ಸ್ಪರ್ಶಕ್ಕೆ ಅರಳುತಿರುವ ಹೂಗಳು
ಮಕರಂದವನು ಕುಡಿದು ನಲಿಯುತ್ತಿದೆ ದುಂಬಿಗಳು
ಬಾನ ತುಂಬಾ ತುಂಬಿರುವ ಕರಿಮುಗಿಲು
ಮಳೆಯನಿರೀಕ್ಷೆಯಲಿ ತಪವಗೈಯುತ್ತಿದೆ ಬಯಲು
ಮೋಡಗಳು ಮಳೆಯ ಸುರಿಸದೆ ಹೊರತು ಹೋಗುತ್ತಿದೆ
ಸೂರ್ಯನ ಬಿಸಿ ಕಿರಣಗಳು ಮೈಯ ಸುಡುತ್ತಿದೆ
ನೀರು ಕುಡಿದರೂ ತೀರದ ದಾಹ
ನಿತ್ಯವೂ ಮಳೆ ಬರಬಹುದೆನ್ನುವ ಮೋಹ
ಆಶೆ....ನೀರೀಕ್ಷೆಯಲಿಮನವು ತುಂಬಿ
ಮಳೆ ಎಂದು ಬಂದೀತು ಕಾಯುವುದೇ ಆಯ್ತು ದೇವರ ನಂಬಿ
ಕರುಣೆಯಿಲ್ಲದೆ ಸುಡುತಿಹನು ರವಿ
ಮನವು ಬಯಸುತ್ತಿದೆ ಮಳೆಯ ಸವಿ
ಪಂಕಜಾ. ಕೆ.
Comments
Post a Comment