////--ಆಸೆ////
ಸಂಜೆಯಾಯಿತೆಂದರೆ ಬಾನಲಿ
ಮೇಲೇರಿ ಬರುತಿದೆ
ಕರಿ ಮೋಡಗಳು ಆಸೆಯ
ಅಲೆಗಳನು ಎಬ್ಬಿಸುತ
ತಂಪಿನ ಗಾಳಿಯು ಬೀಸಿ
ಕರಿಮೋಡಗಳು ಚದುರಿ
ನೀಲಕಾಶದಲಿ ಮಿನುಗುವ
ನಕ್ಷತ್ರಗಳ ಕಂಡು ನಿಟ್ಟುಸಿರು
ತಂಪು ತಾರದ ಬಿಸಿ ಗಾಳಿ
ಸೆಖೆಯ ಉರಿಯನು ಹೆಚ್ಚಿಸಿ
ಮೈಮನದಲಿ ತುಂಬಿತು ತಾಪ
ಮನದಲ್ಲಿ ತುಂಬುವ ಆಲಸ್ಯ
ಆಶೆ ನಿರಾಸೆಯಾದಾಗ
ಕುದಿವ ಲಾವಾರಸ
ಮೈಯಲಿ ಬೆವರ ಹನಿ
ಮನದಲಿ ತುಂಬುವ ಆಕ್ರೋಶ
ಪಂಕಜಾ.ಕೆ.
Comments
Post a Comment