ಗಜಲ್. 10
ಮಳೆಗಾಲದಲಿ ನೀರು ಇಂಗಿಸದಿದ್ದರೆ ಆದೀತೆ
ಬೇಸಿಗೆಯಲ್ಲಿ ಬಿಸಿಲಿನ ಝಳಸಹಿಸದಿದ್ದರೆ ಆದೀತೆ
ಕಾಲಕಾಲಕ್ಕೆ ಸರಿಯಾಗಿ ಮಳೆ ಬರಬೇಕು
ಇಳೆಯಲಿ ಚೆನ್ನಾಗಿ ಬೆಳೆ ಬಾರದಿದ್ದರೆ ಆದೀತೆ
ಜೀವಕೋಟಿಯ ಉಳಿವಿಗೆ ಭೂಮಿಯೇ ಆಧಾರ
ಹಸಿರು ಕಾಡಿನ ಮಹತ್ವ ತಿಳಿಯದಿದ್ದರೆ ಆದೀತೆ
ಮಾನವತೆಯನುಮರೆತು ಬದುಕುವುದು ಸಲ್ಲ
ಸುಂದರ ಪ್ರಕೃತಿಯಲಿ ವಿಹರಿಸದಿದ್ದರೆ ಆದೀತೆ
ಪಂಕಜಾಳ ಗಮನವೆಲ್ಲ ಇರುವುದು ಗುರಿಯತ್ತ
ಕರುಬುವವರ ಜತೆ ಹೊಂದಾಣಿಕೆಯಲಿ ಇರದಿದ್ದರೆ ಆದೀತೆ
ಪಂಕಜಾ.ಕೆ.
Comments
Post a Comment