ಮುನಿಸು
ಏಕೆ ಮುನಿದೆ ಹೇಳು ವರುಣ
ಇಲ್ಲವೇ ನಿನಗೆ ಇನಿತೂ ಕರುಣ
ಬಾನು ತುಂಬಾ ಮುಗಿಲು ಕಟ್ಟುವೆ
ಮಳೆಸುರಿಸದೆ ಎಲ್ಲಿಗೆ ಹೋಗುವೆ
ಆಶೆಯಮೋಡವನುಕಟ್ಟಿಹನುರೈತ
ಮಳೆಯ ನಿರೀಕ್ಷೆಯಲಿ ಆನವರತ
ನಿನ್ನಾಗಮನಕೆಕಾಯುತಿಹರೆಲ್ಲ
ಬಂದೊಮ್ಮೆ ತಣಿಸಬಾರದೆ ನಲ್ಲ
ನೀನಿಲ್ಲದೆ ಸೊರಗಿವೆ ಮರಗಿಡಗಳು
ನೀಬಂದರೆ ಅರಳಬಹುದು ಹೂಗಳು
ಬಿರುಬಿಸಿಲಿಗೆ ಸೊರಗುತ್ತಿದೆ ಮೈ ಮನ
ಕೋಪ ಬಿಟ್ಟು ಬೇಗ ಬಾ ವರುಣ
ಪಂಕಜಾ.ಕೆ.
Comments
Post a Comment