ಉತ್ತರಾಯಣ ಕಾಲ
ನೇಸರನು ಬದಲಿಸಿದ ತನ್ನ ಪಥ
ತುಂಬಿತು ಮನೆ ಮನದಲ್ಲಿ ಸಂತಸ
ಉತ್ತರಾಯಣದ ಪುಣ್ಯಕಾಲ
ಧ್ಯಾನ ಜಪ ತಪಕ್ಕಿದು ಸಕಾಲ
ಮಾಗಿಯ ಚಳಿಗಾಳಿಯು ಕಳೆದು
ಮೂಡುತಿದೆ ತನುಮನದಲ್ಲಿ ಚುರುಕು
ಸುಗ್ಗಿಯ ಸಂಭ್ರಮದ ಹಬ್ಬ
ಮನೆಯಲ್ಲಿ ಫಸಲು ತುಂಬಿದ ಹರ್ಷ
ಎಳ್ಳು ಬೆಲ್ಲದ ಹೂರಣ
ತರಲಿ ಸುಖಶಾಂತಿಯ ಜೀವನ
ಎಳ್ಳು ಬೆಲ್ಲವ ಮನೆಮನೆಗೆ ಬೀರಿ
ಸಂತಸವ ಮನೆ ಮನದಲ್ಲಿ ತೂರಿ
ಮಾಗಿಯ ಚಳಿಯ ಜಡತೆ ಕಳೆಯಲಿ
ಹೊಸ ಹುರುಪನು ಜೀವನಕೆ ತುಂಬಲಿ
ಮಕರಸಂಕ್ರಾಂತಿಯ ಜ್ಯೋತಿ
ಕಳೆಯಲಿ ನಮ್ಮೆಲ್ಲರ ಭೀತಿ
ಅರಳಲಿ ಹೊಸತನದ ಹೂವು
ತುಂಬಲಿ ಪ್ರೀತಿವಿಶ್ವಾಸದ ಕಾವು
ಪಂಕಜಾ.ಕೆ
Comments
Post a Comment