ಶೈಲಪುತ್ರಿ
ಭಾಮಿನಿ ಷಟ್ಪದಿ
ಕಮಲ ಹೂವನು ಕರದಲಿಡಿದಿಹ
ಕಮಲ ನಾಭನ ರಮಣಿ ಗೌರಿಯೆ
ವಿಮಲ ಚರಿತಳೆ ಬೇಡಿ ಕೊಳ್ಳುವೆ ಸಿಂಹವಾಹಿನಿಯೇ
ನಮನ ನಿನ್ನಯ ಪಾದ ಕಮಲಕೆ
ಸುಮಗಳರ್ಪಿಸಿ ಕರವ ಮುಗಿಯುವೆ
ಜನುಮ ಪಾವನವಾಯ್ತು ನನ್ನದು ತಾಯಿ ಪಾರ್ವತಿಯೇ
ವರದ ಹಸ್ತವ ತೋರಿ ನಗುತಲಿ
ಧರೆಗೆ ಬರುವಳು ಮೊದಲ ದಿನದಲಿ
ಕರವ ಮುಗಿಯುತ ಬೇಡಿಕೊಳ್ಳುವ ಶೈಲ ಪುತ್ರಿಯನು
ಕರುಣೆಯಿಂದಲಿ ಕಾವಳಮ್ಮನು
ಹರುಷದಿಂದಲಿ ವರವ ಕೊಡುವಳು
ಭರದಿ ಕರಪಿಡಿದೆತ್ತಿ ಬಕುತರ ಮೊರೆಯನಾಲಿಸುತ
ಪಂಕಜಾ. ಕೆ.ರಾಮಭಟ್
Comments
Post a Comment