Skip to main content

Posts

Showing posts from March, 2021

ಗುರುಕುಲಾ ರಾಯಚೂರು ಘಟಕದಲ್ಲಿ ಉತ್ತಮ ವೆಂದು ಆಯ್ಜೆ ಈ ಶತಮಾನದ ಮಾದರಿ ಹೆಣ್ಣು

     ಮಾದರಿ ಹೆಣ್ಣು ಈ ಶತಮಾನದ ಹೆಣ್ಣು ಮಾದರಿಯಾಗಿರುವಳು  ಪ್ರತಿಮನೆಯ ಕಣ್ಣು ಇವಳಾಗಿರುವಳು  ಒಳಗೂ ಹೊರಗೂ ದುಡಿಯುವಳು  ಮನೆ ಬೆಳಗುವ ದೀಪವಾಗಿರುವಳು   ಒತ್ತಡಗಳೇನೇ ಇದ್ದರೂ ನಿಭಾಯಿಸುವಳು ಒಲಿದರೆ ನಾರಿ ಮುನಿದರೆ ಮಾರಿ ಇವಳು ಯಾವುದಕ್ಕೂ ಹೆದರದ ಗಂಡೆದೆಯವಳು ಸ್ವಾಭಿಮಾನ ತುಂಬಿ ತುಳುಕುವ ಹೆಣ್ಣಿವಳು ಅನ್ಯಾಯದ ವಿರುದ್ಧ ಸಿಡಿದೇಳುವಳು ಗಂಡಿನ ದೌರ್ಜನ್ಯವ ಪ್ರತಿಭಟಿಸುವಳು ದೇಶಸೇವೆ ಮಾಡಲು ಕಂಕಣಬದ್ಧಳಾಗಿರುವಳು ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿರುವಳು ಅಬಲೆ ಎನ್ನುವುದನ್ನು ಮರೆತು ದುಡಿಯುವಳು ತಾಯಿಅಕ್ಕ ತಂಗಿಯರಾಗಿ ಮಮತೆ ತೋರುವಳು ಆಗಸದಲ್ಲಿ ಹಾರುವ ಗಗನ ಸಖಿಯಾಗಿರುವಳು ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವಳು ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು.ದ.ಕ. ಶ್ರೀಮತಿ ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ . ಪೋಸ್ಟ್ಮಾಸ್ಟರ್  ಕುರ್ನಾಡು.ದ.ಕ.

ಶಾಯರಿ ಸ್ನೇಹ ಸಂಗಮ ಉತ್ತಮ

ಸ್ನೇಹ ಸಂಗಮ ಸ್ಪರ್ಧೆಗಾಗಿ   ಶಾಯರಿ ಹೂವಿನಲಿರುವ  ಮಕರಂದವನು  ಹೀರಬಯಸಿತ್ತು  ದುಂಬಿ ಅದನರಿಯದೆ ತೆರೆದಿಟ್ಟಳು  ಒಲವನು ಮೈದುಂಬಿ ಶ್ರೀಮತಿ.ಪಂಕಜಾ.ಕೆ. ಮುಡಿಪು

ಹಾಯ್ಕು ಮಲ್ಲಿಗೆ ಕನ್ನಡಕವಿಗುಚ್ಛ

*ಕನ್ನಡಕವಿಗುಚ್ಛ* *ದಿನಾಂಕ*‌ *೦೨.೦೩.೨೦೨೧* *ವಾರ* *ಮಂಗಳವಾರ* *ಇಂದಿನ ವಿಷಯ* *ಹಾಯ್ಕು* *೨* *ದತ್ತ ಪದ*: *ಮಲ್ಲಿಗೆ* *ಹಾಯ್ಕು ೧* *ಮಲ್ಲಿಗೆ ಹೂವು* *ಮುಡಿದ ಚೆಲುವೆಯು* *ನಿದ್ದೆ ಕದ್ದಳು* *ಹಾಯ್ಕು೨* *ಮಲ್ಲಿಗೆ ಘಮ* *ಸೆಳೆಯುತಿದೆ ಮನ* *ರಸಿಕತನ* ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು.ದ.ಕ.

ಮೊದಲ ಮಳೆ ಕವನ

  ಮೊದಲ ಮಳೆ  ಕರಿಯ ಮೋಡವು ನಭದಿ ತುಂಬಲು ಇಳೆಯ ಮನದಲಿ ಹರ್ಷವು ಒಲವ  ಧಾರೆಯ ಸವಿಯುವಾತುರ ತುಂಬಿ  ತನುವಲಿ ನಡುಕವು ಬೀಸು  ಗಾಳಿಗೆ ಅಡುತಿರುವುದು ತರುಲತೆಗಳು  ಮುದದಲಿ ವರುಣನೊಲವನು  ಸವಿಯ ಸವಿಯುತ ಕುಣಿಯುತಿರುವುದು ಭರದಲಿ ಗುಡುಗು ಸಿಡಿಲಿನ ಆರ್ಭಟಕೆ ಬೆಚ್ಚಿ ಬೆದರಿತು ಮನಗಳು ಸುರಿದ ಮಳೆಯಲಿ ತೊಳೆದು ಹೋಯಿತು ಇಳೆಯ  ಮೇಲಿನ ಕೊಳೆಗಳು ಮೊದಲ ಮಳೆಯ ಮಣ್ಣ ಪರಿಮಳ ಹರಿದು ಬಂದಿತು  ಮೂಗಿಗೆ ವರುಣ ದೇವನ ಒಲವ  ಕಾಣುತ ಹರುಷ ತಂದಿತು  ಮನಸಿಗೆ  ಶ್ರೀಮತಿ.ಪಂಕಜಾ..ಕೆ. ಮುಡಿಪು

ಪತಿಮಹಾಶಯ ಹಾಸ್ಯಕವನ ಕೊಡಗು ಘಟಕದಲ್ಲಿ ಮೆಚ್ಚುಗೆ

ಗುರುಕುಲಾ  ಕಲಾಪ್ರತಿಷ್ಠಾನ ಜಿಲ್ಲಾಘಟಕ ಕೊಡಗು  ವಾರಕ್ಕೊಂದು ಸ್ಪರ್ಧೆಗಾಗಿ ಹಾಸ್ಯಕವನ  ವಿಷಯ..ಪತಿ ಮಹಾಶಯ        ನನ್ನ ದೇವರು ಮೊದಲ ರಾತ್ರಿ ಪತಿಮಹಾಶಯರು ಬದಿಗೆ ಸರಿದು ಕುಳಿತುಕೊಂಡು ಎದುರೆ  ಕುಳಿತ ನನ್ನ ಕಡೆಗೆ ನೋಡುತಿದ್ದರು ಚದುರೆ ನಿನ್ನ ರೂಪ ಚಂದ ಕುದುರೆಯಂತೆ ಕೆನೆವೆಯೇಕೆ ಮದುವೆ ಆಗಿ ಇಂದು ನಾವು ಖುಷಿಯಲಿರೋಣ ಬಯಕೆ ಏನು  ನಿನ್ನದೆಂದು ನಯದಿ ಕೇಳಿ ನನ್ನ ಮೊಗವ ಕೈಯಲಿಡಿದು ಕಣ್ಣಿನಲ್ಲೇ ಕೆಣಕುತ್ತಿದ್ದರು ಮಯಣದಂತೆ ಅಂಟಿಕೊಂಡು ಹಯದ ತೆರದಿ ನನ್ನ ಸೆಳೆದು ಜಯವ ಪಡೆದ ಹಿಗ್ಗಿನಲ್ಲಿ ನಗುತ ನಿಂತರು ಹೆಣ್ಣೇ ನೀನೇಕೆ  ಮುನಿವೇ ಕಣ್ಣು ತುಂಬಾ ನಿದ್ದೆ ಮಾಡು ಬಣ್ಣವಿರುವ ಸೀರೆಯನ್ನು ತಂದು ಕೊಡುವೆನು ಹಣ್ಣು ಹಣ್ಣು ಮುದುಕರಂತೆ ಬೆನ್ನು ಬಗ್ಗಿಸಿ ನಟನೆ ಮಾಡಿ ನನ್ನ   ಮೊಗದಿ ನಗುವ ಕಂಡು ಖುಷಿಯ ಪಟ್ಟರು ಇಂತು ಇರುವ ಪತಿಯ ನಾನು ದೇವರೆಂದು ತಿಳಿದುಕೊಂಡು ಖುಷಿಯಲಿರುವೆನು ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸಿಸ್ಟಂಟ್  ಪೋಸ್ಟ್ ಮಾಸ್ಟರ್ ಕುರ್ನಾಡು.ದ.ಕ.

ಚುಟುಕು ಸುಜ್ಞಾನ ಸ್ನೇಹ ಸಂಗಮ

ಚುಟುಕು ದತ್ತಪದ..ಸುಜ್ಞಾನ ಸುಜ್ಞಾನವಿರುವವಗೆ ಎಲ್ಲೆಡೆಯೂ ಸಮ್ಮಾನ ಕೆಣಕಬೇಡಿ ಇತರರ ಆತ್ಮಾಭಿಮಾನ ಇರಲಿ ನಿಮ್ಮಲ್ಲಿ  ಸ್ವಾಭಿಮಾನ ಎಂದಿಗೂ  ಬಾರದಿರಲಿ ದುರಭಿಮಾನ ಶ್ರೀಮತಿ.ಪಂಕಜಾ.ಕೆ ಮುಡಿಪು