Skip to main content

Posts

Showing posts from February, 2021

21 2 2020 ಮೊದಲ ಮಳೆ

[21/02, 2:29 PM] pankajarambhat: ಗುರುಕುಲಾ ಚಾಮರಾಜನಗರ ಘಟಕದ ಸ್ಪರ್ಧೆಗಾಗಿ ಹನಿಕವನ ದತ್ತಪದ..ಮೊದಲ ಮಳೆ       ಪುಳಕ ಮೊದಲ ಮಳೆಯು ಇಳೆಗೆ ತಂದಿತು ಪುಳಕ ಬಿಸಿಲಿಗೆ ಬಾಡಿದ  ತರುಲತೆಗಳಿಗೆ ಹರುಷದ ಜಳಕ ಮಣ್ಣಿನ ಘಮಲು  ಸೆಳೆಯಿತು ರಸಿಕರ ನಾಸಿಕ ಸುರಿದ ವರ್ಷದಾರೆಗೆ ಬುವಿಗೆ ಸಂತಸದ ನಡುಕ  ಶ್ರೀಮತಿ.ಪಂಕಜಾ ಕೆ ಮುಡಿಪು [21/02, 3:07 PM] pankajarambhat: ಗುರುಕುಲಾ  ಕಲಾಪ್ರತಿಷ್ಠಾನ ಜಿಲ್ಲಾಘಟಕ ಕೊಡಗು  ವಾರಕ್ಕೊಂದು ಸ್ಪರ್ಧೆಗಾಗಿ ಹಾಸ್ಯಕವನ ವಿಷಯ..ಪತಿಮಹಾಶಯ        ನನ್ನ ದೇವರು ಮೊದಲ ರಾತ್ರಿ ಪತಿಮಹಾಶಯರು ಬದಿಗೆ ಸರಿದು ಕುಳಿತುಕೊಂಡು ಎದುರೆ  ಕುಳಿತ ನನ್ನ ಕಡೆಗೆ ನೋಡುತಿದ್ದರು ಚದುರೆ ನಿನ್ನ ರೂಪ ಚಂದ ಕುದುರೆಯಂತೆ ಕೆನೆವೆಯೇಕೆ ಮದುವೆ ಆಗಿ ಇಂದು ನಾವು ಖುಷಿಯಪಡೋಣ ಬಯಕೆ ಏನು  ನಿನ್ನದೆಂದು ನಯದಿ ಕೇಳಿ ನನ್ನ ಮೊಗವ ಕೈಯಲಿಡಿದು ಕಣ್ಣಿನಲ್ಲೇ ಕೆಣಕುತ್ತಿದ್ದರು ಮಯಣದಂತೆ ಅಂಟಿಕೊಂಡು ಹಯದ ತೆರದಿ ನನ್ನ ಸೆಳೆದು ಜಯವ ಪಡೆದ ಹಿಗ್ಗಿನಲ್ಲಿ ನಗುತ ನಿಂತರು ಹೆಣ್ಣೇ ನೀನೇಕೆ  ಮುನಿವೇ ಕಣ್ಣು ತುಂಬಾ ನಿದ್ದೆ ಮಾಡು ಬಣ್ಣವಿರುವ ಸೀರೆಯನ್ನು ತಂದು ಕೊಡುವೆನು ಹಣ್ಣು ಹಣ್ಣು ಮುದುಕರಂತೆ ಬೆನ್ನು ಬಗ್ಗಿಸಿ ನಟನೆ ಮಾಡಿ ನನ್ನ   ಮೊಗದಿ ನಗುವ ಕಂಡು ಖುಷಿಯ ಪಟ್ಟರು  ಇಂತು ಇರುವ ಪತಿಮಹಾಶಯ ದೇವರೆಂದು ತಿಳಿದು ನಾನು  ಖುಷಿಯಲಿರುವೆನು ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸಿಸ್ಟಂಟ್  ಪೋಸ್ಟ್ ಮಾಸ್ಟರ್ ಕುರ್ನಾಡು.ದ.ಕ.

2 ಗಜಲ್ ಗಳು

ಗಜಲ್  (ಕಡಲು ವಿಷಯದ ಬಗ್ಗೆ) ಅಂತರಾಳದಲಿ ಭಾವನೆಗಳು ಬೋರ್ಗರೆಯುತಿದೆ ಗೆಳತಿ ಮುಖವು ಕಡಲಾಳದ ನೀರಿನ ತೆರದಿ ಶಾಂತವಾಗಿದೆ ಗೆಳತಿ. *ನೆನಪುಗಳ ಭಾರದಿಂದ ಮನ ಜರ್ಝರಿತವಾಗಿದೆ* ಚಿಂತೆಗಳು ಮನಸಿನಾಳವ ಕೆದಕಿ ರಾಡಿಗೊಳಿಸಿದೆ ಗೆಳತಿ ಸಾಗರದ  ಅಲೆಯಂತೆ ಜೀವನದ ತೊರೆಗಳು ಏರಿಳಿಯುತಿವೆ ಒಡಲಲ್ಲಿ ತುಂಬಿರುವ ನೋವನು ಹಂಚಬೇಕೆನಿಸಿದೆ ಗೆಳತಿ ಕ್ರೂರ ಮೃಗಗಳಂತಿರುವ ಮನುಜರ  ಕಂಡು ನೆತ್ತರು ಕುದಿಯುತಿದೆ  ಹೆಣ್ಣಿನ ಮೇಲೆ ಏಕಿಷ್ಟು ದೌರ್ಜನ್ಯವಾಗುತಿದೆ ಗೆಳತಿ ಹೆಣ್ಣಿಲ್ಲದ ಜೀವನ ಪರಿಪೂರ್ಣವಾಗಲಾರದು ಅಲ್ಲವೇ  ಕಣ್ಣಿದ್ದೂ ಕುರುಡರಾಗಿರುವ  ಕಾಮಾಂಧರಿಗೆ ಶಿಕ್ಷೆಯಾಗಬೇಕಾಗಿದೆ ಗೆಳತಿ *ನಿತ್ಯವೂ ಕಾಮಾಂಧರ ಆರ್ಭಟವ ನೋಡಿ ಮನಸ್ಸು ಕಲ್ಲಾಗಿದೆ* ಸಮಾಜಘಾತುಕರ ಸಂತತಿಯನ್ನೇ ಹೊಸಕಿ ಹಾಕಬೇಕಿದೆ ಗೆಳತಿ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಸಬೇಕು ಪಂಕಜಾ *ಒಡಹುಟ್ಟಿದವರಂತೆ ಹೆಣ್ಣನ್ನು ರಕ್ಷಿಸಬೇಕಾಗಿದೆ ಗೆಳತಿ* ಪಂಕಜಾ.ಕೆ. : ಗಜಲ್ ಹಗಲಿರುಳು ದುಡಿಯುತ್ತಿತ್ತು ಆ ಜೀವ  ಮಮತೆಯ ಕಡಲನ್ನು ಹರಿಸಿತ್ತು  ಆ ಜೀವ  ಗರ್ಭದಲ್ಲಿ ನವಮಾಸ ಹೊತ್ತು ಹೆತ್ತಳು ಅವಳು ಹೊಟ್ಟೆ ಬಟ್ಟೆ ಕಟ್ಟಿ ವಿದ್ಯೆ ಬುದ್ದಿ ಕಲಿಸಿತ್ತು ಆ ಜೀವ ಕಂದನಿಗಾಗಿ ನೋವಲ್ಲೂ ನಗು ಬೀರುವಳು ಅವಳು ಆತನ ಏಳಿಗೆಗಾಗಿಯೇ ಜೀವ ಸವೆಸಿತ್ತು ಆ ಜೀವ ವೃದ್ದಾಪ್ಯದಲ್ಲಿ ಅಸರೆಯಾಗಬಹುದೆನ್ನುವ ಆಸೆ  ನಿತ್ಯವೂ ಮಗನ ದಾರಿ ಕಾಯುತ್ತಿತ್ತು ಆ ಜೀವ ಹೆತ್ತಮ್ಮನನ್ನು ವೃದ್ಧಾಶ್ರಮಕೆ ಅಟ್ಟಬಹು

5

[14/12/2019, 7:47 PM] pankajarambhat: ಕಾವ್ಯಾಂತರಂಗ  ಸ್ಪರ್ಧೆಗಾಗಿ ವಿಷಯ ....ಬರಗಾಲದ ಲ್ಲಿ ರೈತನ ಗೋಳು  ಅನ್ನದಾತನ ಬವಣೆ ಭೂಮಿ ಬಿರಿದಿದೆ  ಒಡಲು  ನೊಂದಿದೆ ಜೀವನ ಬಾರವೆನಿಸಿದೆ ಕಣ್ಣು ತುಂಬಿದೆ ಮನಸು ಅಳುತಿದೆ ದೇವ ಕರುಣೆಯು ಬಾರದೆ ಬಾನ ಬಯಲಲಿ ಮುಗಿಲು ತುಂಬಿದೆ ಮಳೆಯ ಸುರಿಸದೆ ಸರಿದಿದೆ  ಬೆಳೆದ ಬೆಳೆಗಳು ನೀರ ಕೊರತೆಗೆ ಬಾಡಿ ಉದುರಿ ಹೋಗಿದೆ ಪಟ್ಟ ಕಷ್ಟಕೆ  ಫಲವು ಇಲ್ಲದೆ  ಬಾಳ ದೋಣಿಯು ಮುಳುಗಿದೆ ಹರಿದ ಬಟ್ಟೆಯು ಹಸಿದ ಹೊಟ್ಟೆಯು ಬರಗಾಲದ ಬವಣೆಯ ತಿಳಿಸಿದೆ ಕಾಲ ಕಾಲಕೆ  ಮಳೆಯು  ಸುರಿಯುತ ಬದುಕ ಬವಣೆಯು ನೀಗಲಿ ಅನ್ನ ಬೆಳೆಯುವ ರೈತನರಮನೆಯಲಿ ಹೊನ್ನ ಕಣಜವು ತುಂಬಲಿ ಪಂಕಜಾ.ಕೆ ಮುಡಿಪು [18/12/2019, 11:14 AM] pankajarambhat: ತಿಂಗಳ ಬೆಳಕು ತಿಂಗಳ ಬೆಳಕಲಿ ಅಂಗಳ ಬದಿಯಲಿ  ಹಾಲಿನ ಹೊಳೆಯೇ ಹರಿಯುತಿದೆ ತಂಪಿನ  ಕಿರಣವು ಇಂಪಿನ ಗಾನವು ಮೈಮನವನ್ನು ಮರೆಸುತಿದೆ ಚಂದದ ಹೂಗಳು ಅಂದದಿ ಅರಳುತ ಕಂಪನು ಎಲ್ಲೆಡೆ ಹರಡುತಿದೆ ಕೊಳದಲಿ ಅರಳಿದ ತಳದಲಿ ನಲಿದಿಹ ನೈದಿಲೆ ನಗುವನು ಬೀರುತಿದೆ ಚಂದಿರ ಬರಲು ಕಂದರ ವಿರಲು ಮನದಲಿ ಸಂತಶ ತುಂಬುತಿದೆ ಬಾನಲಿ ಓಡುತ ಎಡೆಯಲಿ ಮಿನುಗುತ ರಸಿಕರ ಮನವನು ಸೆಳೆಯುತಿದೆ ಪಂಕಜಾ.ಕೆ [22/12/2019, 9:08 PM] pankajarambhat: ವಚನ ಹಸಿರು ಕಾಡನು ಕಡಿದೆಸೆದು ಕಾಂಕ್ರೀಟ್ ಕಾಡು ಕಟ್ಟುವರಲ್ಲ ಭೂಮಿತಾಯಿಯ ಒಡಲು ಬಗೆದು ಸಿಹಿನೀರ ಒರತೆಯನು ಬತ್ತಿಸುವರಲ್ಲ ಭೂತಾಯಿಯ ನಿಟ್ಟುಸಿರು  ಬಡಬಾಗ್ನಿ

ಗಜಲ್ ತುಳುಕನ್ನಡ

ತುಳು ಕನ್ನಡ ಕಾವ್ಯ ಸಂಗಮಸ್ಪರ್ಧೆಗಾಗಿ ಗಜಲ್ ದತ್ತಪದ.    ಹೇಳಿಬಿಡು ಆಸೆ ತೋರಿಸಿ ಕೈ ಕೊಡುವುದಿದ್ದರೆ ಹೇಳಿಬಿಡು ಪ್ರೀತಿ ಸುರಿಸಿ ಮೋಸಮಾಡುವುದಿದ್ದರೆ ಹೇಳಿಬಿಡು ಜಕ್ಕವಕ್ಕಿಗಳಂತೆ ನಲಿದಾಡುವ ಆಸೆ ನನಗೆ ನನ್ನ ಜತೆಯಲಿ ಬರಲಾಗದಿದ್ದರೆ ಹೇಳಿಬಿಡು ಬಾನಿನಲಿ ಸ್ವಚ್ಛಂದವಾಗಿ ನಾವಿಬ್ಬರು ಹಾರಾಡೋಣ ನಿರಾಸೆ ಮಾಡಿ ಹೋಗುವುದಿದ್ದರೆ  ಹೇಳಿಬಿಡು ಒಬ್ಬರಿನ್ನೊಬ್ಬರ ಕಷ್ಟಸುಖಕ್ಕೆ ಜತೆಯಾಗೋಣ ಮನಸು ಮುದುಡಿಸಿ ಬೇಸರಿಸುವುದಿದ್ದರೆ ಹೇಳಿಬಿಡು ನಗು ನಗುತ ಜೀವನವನು ಕಳೆಯಬೇಕು ಪಂಕಜಾ ಹೊಸಹೂವಿನಂತೆ ಅರಳಲಾಗದಿದ್ದರೆ ಹೇಳಿಬಿಡು ಶ್ರೀಮತಿ.ಪಂಕಜಾ.ಕೆ. ಮುಡಿಪು

10

[21/8/2019, 7:41 PM] pankajarambhat: ನಿನ್ನಾಟ ಮನದಲಿ ನೂರಾರು ಆಸೆಗಳ ತುಂಬಿ ನಿನ್ನಾಗಮನಕೆ ಎದೆತೆರೆದು ಕಾಯುತ್ತಿದ್ದೆ ಆಸೆಯ ಕರಿಮುಗಿಲು ಮನದಲಿ ಕಟ್ಟಿ ಹಸಿರು ಹೂಬಳ್ಳಿ ಚಿಗುರಿಸುವ  ನಿರೀಕ್ಷೆಯಲಿದ್ದೆ ಆಸೆ ನಿರಾಸೆಗಳ ತಾಕಲಾಟದಲಿರಲು ಮುದ್ದಾಡುತ ನೀಬಂದು ಮೈಮರೆಸಿ ಬಿಟ್ಟೆ ಒಡಲು ತುಂಬಿದ ಬೇಗೆಯನು ತಣಿಸಿ ಮನಕೆ ಚೆಲುಉಸಿರ ತುಂಬಿ ಬಿಟ್ಟೆ ಹುಚ್ಚುಪ್ರೀತಿಯ ಅಲೆಯಲಿ ನನ್ನತೇಲಿಬಿಟ್ಟೆ ಕೊಚ್ಚಿಹೋಯ್ತಲ್ಲಾ ನನ್ನ ಒಡಲು ಮೊಸದಾಟಕೆ ಬರಿದಾಯ್ತು ಬಾಳಬಯಲು ಎಲ್ಲೆಲ್ಲೂ ತುಂಬಿತು ಕಣ್ಣೀರ ಹೊನಲು   ಹರಿದೋಯ್ತು ಜೀವಿಗಳ  ಬಾಳ ಬಟ್ಟೆ ಹಸಿರು ಉಣಿಸುವ ಆಶೆ ಸತ್ತೋಯ್ತು ಜೀವ ಸೊತ್ತುಗಳೆಲ್ಲಾ ಕೊಚ್ಚಿ ಹೋಯ್ತು ಮನುಜನಾಡಿದ ಮೋಸದಾಟದಲಿ ಮರೆಯಲಾರದಂತ ನೋವು ನಿನ್ನಿಂದಾಯ್ತು ಪಂಕಜಾ ಕೆ. [26/11/2019, 6:30 AM] pankajarambhat: ಸೂರ್ಯಸ್ನಾನ ನೋಡು ಬಾನಲಿ  ಮೂಡ ಹೊಡೆಯಲಿ ಹೊನ್ನ ಕಿರಣವು ಚೆಲ್ಲಿದೆ ಮಂಜು ತೆರೆಯನು  ಭರಧಿ ಸರಿಸುತ ಮೆಲ್ಲ ಮೆಲ್ಲನೆ ಬರುತಿದೆ ಹಸಿರು ಹುಲ್ಲಲಿ ನಿಂತ ಹನಿಗಳು ಕರಗಿ ಹರಿಯಿತು ಮೆಲ್ಲನೆ ಬಾನ ಬಯಲಲಿ ಚೆಲುವ ಬಣ್ಣವ ಕಲೆಸಿ ಬರೆಯಿತು ಚಿತ್ರವ ಎಲ್ಲಿ ನೋಡಲಿ  ಚೆಲುವು ತುಂಬಿದೆ ರವಿ ಉದಯಿಸುವ ಕ್ಷಣದಲಿ ಬಿಸಿಯ ಸ್ಪರ್ಶವು  ಹಿತವ ಕೊಡುತಲಿ ಮೈ ಮನಕೆ ತುಂಬಿತು ಹರ್ಷವ ಚಳಿಯ ಕರಗಿಸಿ ಬಿಸಿಯ ಹುಟ್ಟಿಸಿ ಜೀವಕೋಟಿಗೆ ತುಂಬಿತು ಉಸಿರನು ಸೂರ್ಯ ಸ್ನಾನವ ನಿತ್ಯ ಮಾಡಲು ಆರೋಗ್ಯ ಭಾಗ್ಯವು ಸಿಗುವುದು ಪಂಕಜಾ.ಕೆ. [26/

ಹನಿಕವನ ನೋವು ಸ್ನೇಹ ಸಂಗಮ 20 .1.2021

ಸ್ನೇಹ ಸಂಗಮ ಸ್ಪರ್ಧೆಗಾಗಿ ಹನಿಕವನ        ನೋವು          ಯಾರಿಗೂ ಕಾಣದಂತೆ  ಮರೆಯಲ್ಲಿ  ನಾನು  ಕುಳಿತು ಅತ್ತರೂ  ಕಡಿಮೆ ಆಗದು  ನೀ ಕೊಟ್ಟ ನೋವು  ನಾ ಸತ್ತರೂ   ಶ್ರೀಮತಿ.ಪಂಕಜಾ.ಕೆ. ಮುಡಿಪು

ಜನಪದ ಗೀತೆ ತವರುರ ದಾರಿ 20..2.2021

ಕಾವ್ಯಕೂಟ ಸ್ಪರ್ಧೆಗಾಗಿ ಜನಪದಗೀತೆ ದತ್ತಪದ..ತವರೂರ ದಾರಿಯಲಿ     ಅಣ್ಣಯ್ಯನ ಪ್ರೀತಿ ತವರೂರ ದಾರಿಯಲಿ ನಡಕೊಂಡು ಹೋಗ್ವಾಗ /ತಂಗಿ ಅಮ್ಮ ಅಪ್ಪನ ನೆನಪು ಕಾಡುತೈತೆ ತಾಯಿಯಿಲ್ಲದ ತವರೆಂದು ಬೇಸರ ಮನದಾಗ/ತಂಗಿ  ಮನಸಿಗೆ ಬಾಳ ನೋವು ಕೊಡುತೈತೆ ಅಣ್ಣ ಅಕ್ಕಂದಿರ ಜತೆಯಾಗ ಕೂಡಿ ಆಡಿದ ನೆನಪು/ತಂಗಿ ಮರೆಯದೆ  ಕಣ್ಣು ತುಂಬುತೈತೆ  ಅತ್ತಿಗೆಮ್ಮ ಅಣ್ಣಯ್ಯ ಕುಂತಾರ  ತವರೂರ  ಬಾಗಿಲ್ಯಾಗ/ತಂಗಿ  ಪ್ರೀತಿಲಿ ನನ ದಾರಿ ಕಾಯ್ಕೊಂಡು  ಇರುತಾರ   ಶ್ರೀಮತಿ.ಪಂಕಜಾ.ಕೆ. ಮುಡಿಪು

ಬದುಕಿನಲಿ ನಾ ಕಲಿತ ಪಾಠ

[1/12/2020, 10:03 PM] pankajarambhat: ಗುರುಕುಲಾ ಚಿಕ್ಕಮಗಳೂರು ಘಟಕದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನನ್ನ ಕವನ ವಿಷಯ ...ನಾ ಕಂಡ ಇಳೆಯ ಸಂಜೆ      ಮುಸ್ಸಂಜೆ ನಾ ಕಂಡ ಇಳೆಯ ಸಂಜೆಯ ಸೊಬಗು ತಂದಿತು ಮನಸಿಗೆ ಬೆರಗು ಬಾನಲಿ ಕಲಸಿದ ಚೆಲುವಿನ ಬಣ್ಣ ಸೆಳೆಯಿತು ರಸಿಕರ ಕಣ್ಣ ಪಡುಗಡಲಲಿ ಮುಳುಗಿದ ರವಿ ಇಳೆಯಲಿ ತುಂಬಿದ  ಬಣ್ಣದ ಸವಿ ತಂಪಿನ ಗಾಳಿಯು ಸೊಂಪಲಿ ಬೀಸಿ ಹರಡಿತು ಸುಮಧುರ ಗಂಧವ ಸೂಸಿ ಹಸಿರಿನ ಸಿರಿಯೆಡೆ   ಬಣ್ಣದ  ಕಾಂತಿ ಧರೆಯಲಿ  ತುಂಬಿತು ಮೌನದ ಶಾಂತಿ ನೇಸರ ಹೊರಳಿದ  ನಿಶೆಯನು ಅಪ್ಪಿ ಮನದಲಿ ಚೆಲುವಿನ ಕನಸನು ಬಿತ್ತಿ ಹಕ್ಕಿಗಳ ಚಿಲಿಪಿಲಿ ಗಾನದ ರಾಗ ಗುನುಗಿತು ಮನದಲಿ ಹೊಸರಾಗ ಸೊಬಗಿನ ಸಿರಿಯಲಿ ಮೈಮನ ಮರೆತು  ತನುವಲಿ ತುಂಬಿತು ಹೊಸ ಕನಸು ದಿನಕರ ತೆರಳಲು ಮೂಡಿದ ಶಶಿ ಬಾನಿನ  ತುಂಬಾ ಬೆಳ್ಳಿಯ ಚುಕ್ಕಿ ಕೊಳದಲಿ ಅರಳಿತು ನೈದಿಲೆ ಹೂವು ಶಶಿಯನು ಕಾಣುತ ಬಿರಿಯಿತು ಚೆಲುವು ಶ್ರೀಮತಿ.ಪಂಕಜಾ.ಕೆ. ಮುಡಿಪು [2/12/2020, 10:24 PM] pankajarambhat: ಧಾರವಾಡ ಯುವ ಬರಹಗಾರರ ಒಕ್ಕೂಟದ ಲೇಖನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನನ್ನ ಲೇಖನ ವಿಷಯ.. ಬದುಕಿನಲ್ಲಿ ನಾ ಕಲಿತ ಪಾಠವಿ ಬದುಕಿನಲ್ಲಿ ತುಂಬಾ ಕಷ್ಟ ಪಟ್ಟು.ಮೇಲೇರಿದವಳು ನಾನು.ನನ್ನ ಸ್ವಪ್ರಯತ್ನದಿಂದ ವಿದ್ಯೆ ಕಲಿತು  , ಕೆಲಸಕ್ಕೆ ಸೇರಿ, ನಿವೃತ್ತಿಯ ನಂತರ ಪ್ರವೃತ್ತಿಯಾಗಿ  ಬಿಡುವಿನ ವೇಳೆಯಲ್ಲಿ  ಬರವಣಿಗೆ ಹವ್ಯಾಸ ದಲ್ಲಿ ತೊಡಗಿದ್ದ, ನನ್ನ ಬಾಳಿನಲ್ಲ

10

[27/11/2020, 1:31 PM] pankajarambhat: ಕವಿ ಸಾಹಿತಿಗಳ ಜೀವಾಳ ಚಿತ್ರಕ್ಕೊಂದು ಕಥೆ ಯಲ್ಲಿ ತೃತೀಯ  ಸ್ಥಾನ ಪಡೆದ ನನ್ನ ಸ್ವರಚಿತ ಕಥೆ               ಶ್ರಾವಣಿ   ನವಿಲೂರಿನ ಶಂಕರ ರಾಯರ ಮನೆಗೆ  ಹಿರಿಯ ಸೊಸೆಯಾಗಿ ಬಂದ ಧನ್ಯ ಕೆಲವೇ ದಿನಗಳಲ್ಲಿ  ಮನೆಯವರೆಲ್ಲರ ಮೆಚ್ಚುಗೆಗೆ ಪಾತ್ರಳಾದಳು.ಮದುವೆಯಾಗಿ ವರ್ಷ ಎರಡು ಕಳೆದರೂ ಮಡಿಲು ತುಂಬದಿದ್ದಾಗ ದೇವರಿಗೆ ಹರಕೆ ಹೊತ್ತು ಹುಟ್ಟಿದ ಮಗು ಶರಣ್ಯ,  ಆ ಮನೆಯ ಸರ್ವರ ಪ್ರೀತಿಗೆ ಪಾತ್ರಳಾದಳು.ಪೂರ್ಣ ಚಂದ್ರನಂತೆ ದಿನದಿಂದ ದಿನಕ್ಕೆ ಚೂಟಿಯಾಗಿ ಬೆಳೆಯುತ್ತಿದ್ದ ಶರಣ್ಯಳ ಮೊದಲ ವರ್ಷದ ಹುಟ್ಟುಹಬ್ಬದ ದಿನ   ಶಂಕರ ರಾಯರು ತಮ್ಮ ಊರಿನ ವಿರೂಪಾಕ್ಷ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೇರವೇರಿಸಲು  ನಿಶ್ಹೈಸಿದ್ದರು. ಅದರಂತೆ ಮನೆಯವರೆಲ್ಲ  ಸಡಗರದಿಂದ ಕಾರ್ಯಕ್ರಮದಲ್ಲಿ ಓಡಿಯಾಡುತ್ತಿದ್ದಾಗ. ಶರಣ್ಯ ಮೆಲ್ಲನೆ ಅಲ್ಲಿಂದ ಹೊರಟು ದೇವಸ್ಥಾನದ ಹೊರ ಅಂಗಳದಲ್ಲಿ ಆಟವಾಡುತ್ತಾ ನಗುತ್ತಿದ್ದಳು.                      ದೇವಸ್ಥಾನದ ಇನ್ನೊಂದು ಬದಿಯಲ್ಲಿ ನಡೆಯುತ್ತಿದ್ದ ತನ್ನ ಗೆಳತಿಯ ಮದುವೆಗಾಗಿ ಹೊರಟು ಬಂದಿದ್ದ ಶ್ರಾವಣಿ  ಸುಂದರವಾಗಿ ಅಲಂಕರಿಸಿದ್ದು ,ಮದುವೆ ಹೆಣ್ಣಿನಂತೆ ತಲೆಗೆ ಬೈತಲೆ ಬೊಟ್ಟು, ಸೊಂಟಕ್ಕೆ ಡಾಬು, ಕುತ್ತಿಗೆಗೆ ಅಗಲ ನೆಕ್ಲೆಸ್ ,ಧರಿಸಿ  ಹಳದಿ ಬಣ್ಣದ ಲಂಗ ದಾವಣಿಗೆ  ಕೆಂಪು ಶಾಲು  ಕುಸುರಿ ಕೆಲಸ ಮಾಡಿದ್ದ ಹಳದಿ ಕುಪ್ಪುಸ ತೊಟ್ಟು ತಲೆಯಲ್ಲಿ ಮಲ್ಲಿಗೆಯನ್ನು ಮುಡಿದು  ಅದೀಗ

ಅಕ್ಷರ ದೀಪ ತುಳು ಕನ್ನಡ10

[17/12/2020, 7:54 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ ಭಾವಗೀತೆ ದತ್ತಪದ..ಭೂಷಣ            ಬಾಳ ಜ್ಯೋತಿ ಬಾಳೆಂಬ ಪುಟದಲಿ ಜತೆಯಾಗಿ ನೀನಿರಲು ಬಾಳೆಲ್ಲಾ ಮಧುರಸದ ಹೊನಲಾಗಿದೆ ಒಲವಿಂದ ಕೂಡಿರುವ ಸಮರಸದ ಜೀವನವು ಮನಕಿಂದು ಉಲ್ಲಾಸ  ಹುರುಪು ತಂದಿದೆ ಮುದ್ದಾದ ಮೊಗದಲಿ ಅರಳಿರುವ ಕಿರು ನಗೆಯು ಭೂಷಣವು ಹೆಣ್ಣಿನಾ ಸೌಂದರ್ಯಕೆ ನಡೆಯಲಿ ನಲಿವಿರಲು ಉತ್ತಮ ಗುಣವಿರಲು ಬೇರೇನೂ ಬೇಕಿಲ್ಲ   ಈ ಜೀವಕೆ ಮೃದು ಮಧುರ ಮಾತುಗಳು ತುಂಬಿರಲು ಮನೆಯಲಿ ಮನೆಯೊಂದು ಸಂತಸದ ಗೂಡಾಗಿದೆ ಸುಖದುಃಖ ವೆರಡರಲಿ ಹೆಗಲಾಗಿ ನೀನಿರಲು ಜೀವನವು ಸವಿಜೇನ ಹೊನಲಾಗಿದೆ ಬರಡಾದ ನನ್ನೆದೆಗೆ  ತನಿರಸವ ಉಣಿಸುತ ಬಾಳಿನಾ ಜ್ಯೋತಿ ನೀನಾದೆಯೇ ಶ್ರೀಮತಿ .ಪಂಕಜಾ.ಕೆ. ಮುಡಿಪು ಕುರ್ನಾಡು.ದ.ಕ. [21/12/2020, 7:56 PM] pankajarambhat: ಅಕ್ಷರ ದೀಪ ಸಾಹಿತ್ಯ ವೇದಿಕೆ ಧಾರವಾಡ ಲೇಖನ ಸ್ಪರ್ಧೆಗಾಗಿ ವಿಷಯ.. ಹೊಸವರುಷದ ಆಚರಣೆಯ ಗುಣಾವಾಗುಣಗಳು ಹೊಸವರ್ಷದಾಚಾರಣೆಯು  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವಪೂರ್ಣವಾಗಿದೆ.  ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಗಳಾದ ಹಿರಿಯರನ್ನು ಗೌರವಿಸಿ ಅವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡುವುದು, ಹೊಸ ಬಟ್ಟೆಯನ್ನು ಧರಿಸಿ,  ದೇವರ ಪೂಜೆ  ಧ್ಯಾನ  ಮಾಡಿ ಹೊಸವರ್ಷವು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುವುದು ನಮ್ಮ ಸಂಪ್ರದಾಯ. ಅನಾದಿ ಕಾಲದಿಂದಲೂ ಯುಗಾದಿಯನ್ನು ನಮ್ಮ ಹಿಂದಿನವರು ಹೊ

ತುಳು.ಕನ್ನಡ 10

[09/01, 8:03 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ ಗಜಲ್ ದತ್ತಪದ.ಚದುರಂಗ ಬಾಳೊಂದು ಚದುರಂಗದಾಟವಾಗಿದೆ ಗೆಳತಿ ದೇವನಾಡಿಸಿದಂತಾಡುವ ಕಾಯಿಯಾಗಿದೆ ಗೆಳತಿ ಕಪಟ ಸ್ನೇಹ ತೋರಿಸಿ  ವಂಚಿಸುವರಿರುವರು ಎಷ್ಟು ಜಾಗ್ರತೆಯಿಂದಿದ್ದರೂ ಸಾಲದಾಗಿದೆ ಗೆಳತಿ ಯಾರನ್ನು ನಂಬಬೇಕು ಎಂದು ತಿಳಿಯ ದಾಗಿದೆಯಲ್ಲ ನಂಬಿಕೆ ವಿಶ್ವಾಸಕ್ಕೆ  ಬೆಲೆ ಇಲ್ಲವಾಗಿದೆ ಗೆಳತಿ ನನ್ನವರು ತನ್ನವರು ಎನ್ನುವುದು ಎಲ್ಲಾ ಮಿಥ್ಯೆ ನಂಬಿದವರ ಮೋಸದಾಟನೋಡಿ ಬೇಸರವಾಗಿದೆ ಗೆಳತಿ ಕಲ್ಮಶವಿಲ್ಲದ ಮುಗ್ಧಮನಸು  ನಿನ್ನದು ಪಂಕಜಾ ರಾಡಿಮಾಡಿ ಗುಲ್ಲೆಬ್ಬಿಸುವವರ ಕಂಡು ಮನಸು ರೋಸಿಹೋಗಿದೆ ಗೆಳತಿ  ಶ್ರೀಮತಿ.ಪಂಕಜಾ.ಕೆ. ಮುಡಿಪು [12/01, 7:11 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ ದ್ವಿರುಕ್ತಿ ಕವನ         ಬಾನಿನ ಸೊಬಗು ನೋಡು ನೋಡು ಬಾನಿನಲಿ ಹಬ್ಬಿದ ಬಣ್ಣಗಳು ಹಾಡು ಹಾಡಿ ನಲಿಯುತಿದೆ ಕೋಗಿಲೆಯೊಂದು ಕಾಡು ಕಾಡು ಸುತ್ತಿ ತಿರುಗಿ ತಿರುಗಿ ಬಂದಿದೆ ಮರ ಮರಗಳೆಡೆಯಲಿ ಹಾಡಿ  ಕುಣಿಯುತ್ತಿದೆ ಬಾರಿ ಬಾರಿಗೂ ಮೈಮರೆಸುತಿದೆ ಅದರ ಹಾಡು ತೇಲಿ ತೇಲಿ ಅಂಬರದಲಿ ಸಾಗುತಿದೆ  ಮನಸು ಹಾರಿ ಹಾರಿ ಮೇಲೇರಿ ಗಗನದಂಚು ಮುಟ್ಟಿದೆ ನೋಡಿ ನೋಡಿ ಕಣ್ಣು ತುಂಬಿ ಬಂದಿತು ಧಗ ಧಗ ಉರಿಯುತಿರುವನು ಭಾಸ್ಕರ ನಿಗಿ ನಿಗಿ ಕೆಂಡದಂತೆ ಸುಡುತಿರುವನು ಧರೆಯ ಸೆಖೆ ಸೆಖೆ ಎಂದು ಬೊಬ್ಬಿಡುತಿಹರು ಜನರು ತಂಪು ತಂಪು ಆಗಲು ಕುಡಿಯುವರು ನೀರು ಉಳಿಸಿ ಉಳಿಸಿ ಸು

ಕಾವ್ಯಾಕುಸುಮ

[02/02, 9:12 PM] pankajarambhat: ತುಳು ಕನ್ನಡ ಕಾವ್ಯ ಸಂಗಮ  ಸ್ಪರ್ಧೆಗಾಗಿ ಪ್ರೇಮಕವನ ದತ್ತಪದ  ..ಉತ್ಕಟ ಒಲವು  ..ಗೆಲುವು ಉತ್ಕಟ ಪ್ರೀತಿಯ ಬಾವವು ತುಂಬಿ ತಟ್ಟನೆ ಮನದಲಿ ಒಲವದು ಮೂಡಿ ಒಟ್ಟಿಗೆ ಇರಲು ಬಯಸಲು ಮನವು ನೆಟ್ಟಗೆ ನಿನ್ನೆಡೆ ಬಂದಿಹೆನು ನಿನ್ನಯ ಸುಂದರ ವದನದ ಕಾಂತಿಗೆ ನನ್ನಯ ಮನದಲಿ ಮೂಡಿತು ಒಲವು ಚೆನ್ನಿಗ ಚೆಲುವನ ಮೋಡಿಗೆ ಸೋತು ಮನ್ನಣೆ ಪಡೆಯಲು ಬಯಸಿದೆನು ಕಣ್ಣಿನ ನೋಟದ ಬಲೆಯಲಿ ಸಿಲುಕಿ  ತಣ್ಣನೆ ಕೊರೆಯುತ ನನ್ನನು ಮಣಿಸಿ ಬಣ್ಣನೆ ಮಾಡುತ ಒಲಿಸುತ ಬಂದು ಕಣ್ಣಿಗೆ ಕಣ್ಣು ಬೆರೆಯಲು ಮೂಡಿತು ಪ್ರೀತಿ ಚೆಲುವೆಯ ವದನದ ಮೋಹಕ ಮಾಟ ಒಲುಮೆಯ ಸೂಸುವ ಕಣ್ಣಿನ ನೋಟ ಬಳುಕುವ ಬಳ್ಳಿಯ ತನುವಿನ ಮಾಟ ಸೆಳೆಯಿತು ನನ್ನಯ ಕಣ್ಣು ಒಲವಿಗೆ ಸಿಕ್ಕಿತು ಇಂದಿಗೆ ಗೆಲುವು ಹಲವರ ಹಾರೈಕೆಯಲಿ ಜತೆಯಾಗಿ ಬಾಳಿನ ಪಯಣವ ಸಾಗಿಸುತ ಒಲವೇ ಗೆಲುವು ಎನ್ನುತ ಬಾಳುವ ಜತೆಯಾಗಿ ಶ್ರೀಮತಿ.ಪಂಕಜಾ.ಕೆ. ಮುಡಿಪು [04/02, 2:16 PM] pankajarambhat: ತುಳುಕನ್ನಡ ಕಾವ್ಯ ಸಂಗಮ ಅಬಾಬಿ ಗಳು  ಅಬಾಬಿ 1. ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ಸಾಗಿದೆ ಹೆಣ್ಣಿಲ್ಲದೆ ಪ್ರಪಂಚವಿದೆಯೇ ಪಂಕಜಾರಾಮಾ ಇನ್ನು ಮನೆಗಳಿಲ್ಲ  ಅಬಾಬಿ .2 . ಕಾಮಾಂಧರ ಕಾಟ ಅತಿಯಾಗಿದೆ ಸಣ್ಣ ಮಕ್ಕಳನ್ನು ಬಿಡಲಾರರು  ಅಕ್ಕತಂಗಿಯರಿಲ್ಲವೇ ಇವರಿಗೆ ಪಂಕಜಾ ರಾಮಾ  ಈ ಕೀಚಕರಿಂದ ಅಬಲೆಯರ ರಕ್ಷಿಸು ಶ್ರೀಮತಿ.ಪಂಕಜಾ.ಕೆ. ಮುಡಿಪು [07/02, 5:48 PM] pankajarambhat: ಗುರುಕುಲಾ  ಕಲಾ
[27/8/2018, 7:43 PM] pankajarambhat: ಕಾದಿಹಳು ರಾಧೆ ಕಾದಿಹಳು. ರಾಧೆ  ಮಾಧವನ ಬರುವಿಕೆಯ ನಿರೀಕ್ಷೆಯ ತಪದಲಿ ಯಮುನಾತೀರದ ದಂಡೆಯಲಿ ನವಿಲಗರಿಯೊಡನಾಡುತ್ತ  ಮುರಳಿಗಾನದ ಸವಿ ಯ  ಕೇಳುವಾತುರದಲಿ  ಎದೆತೆರೆದು ನಿಂತಿಹಳು  ಬರುವೆನೆಂದವ ಮರೆತನೆ ರಾಧೆಯೊಲವಿನ ನೆನಪ ನವಿಲುಗರಿಯೊಡೆಯ  ಮನಕೆ ಮುದಕೊಟ್ಟು ನಲಿದವ ಕೊಳಲನೂದುತ ಮನಸೆಳೆದವ ಕಾಯುತಿಹಳು ರಾಧೆ ಒಲವಗಾನದಕರೆಗೆ ಮನತೆರೆದು ಎಂದು ಬಂದಾನೋ ಮಾಧವ ತಾಳಲಾರದೆ ವಿರಹ ಸುಡುತಿರುವ ತನುವ ಬಳಸುತಿಹ  ಬಾಹುಗಳ ನಿರೀಕ್ಷೆಯಲಿ ಕಾದಿಹಳು ಎಂದು ಬಂದಾನೋ ಮೋಹನಾಂಗ ಬಳಸುತ ಬಳ್ಳಿ ನಡುವ ಕೊಳಲನೂದುತ ಮನವ ತಣಿಸುವ  ನಲ್ಲ ಕಾಯುತಿರುಳು ರಾಧೆ ಪಂಕಜಾ. ಕೆ. ಮುಡಿಪು ಕುರ್ನಾಡು [16/9/2018, 9:44 AM] pankajarambhat: ಒಲುಮೆಯಲಿ ನಿನ್ನ ಒಲುಮೆಯಲಿ ಮಿಂದು ಅರಳಿ ನಗುತ್ತಿರುವ ಹೂವು ನಾನು ನಿನ್ನ  ಸಾಂಗತ್ಯದಲಿ ನಲಿದು ಹಾರುತಿರುವ ಹಕ್ಕಿ ನಾನು ನೀ ಬಂದ ಕ್ಷಣದಿಂದ ಕನಸು ಮನಸಲಿ ನೀನೇ ನಲ್ಲ ಮಳೆಯ   ಸವಿ ಮುದ್ದಿಗೆ ಬಿರಿದರಳಿದ ಹೂವಿನಂತೆ ನಿನ್ನ ಒಡನಾಟದಲಿ ಬಾಳಾಯಿತು ಹಾಲುಜೇನು ಹೂವಾಗಿ  ಕಾಯಾಗಿಹಣ್ಣಾಗುತ ನಗುತಲಿರುವೆ ನಿತ್ಯ ನಿನಗಾಗಿ ನೀ ನನ್ನ ಬಾಳ ತೇರು ನೋವಿರಲಿ ನಲಿವಿರಲಿ ಜತೆಯಾಗಿ ನೀನಿರಲು ಬಾಳಲ್ಲಿ ಅರಳುತಿದೆ ಹೂವು ಬಣ್ಣಬಣ್ಣದ ಹೂವು  ಅರಳಿರುವ ಗಿಡದಂತೆ ನಿತ್ಯ ನಗುತ್ತಿರುವ ನಾವು ಕಷ್ಟ ಸುಖಗಳಲಿ ಜತೆಯಾಗಿ ಪಂಕಜಾ.ಕೆ [6/10/2018, 8:45 PM] pankajarambhat: ಹಕ್ಕಿ ಗೂಡು ಹಕ
[9/5/2018, 9:48 AM] pankajarambhat: ಪ್ರಕೃತಿ ಚೆಲುವು ರಾತ್ರಿಯು ಸುರಿದ ಮಳೆಯಲಿ ಮಿಂದು ಪ್ರಕೃತಿಯುನಲಿದಳು ಮುದದಲಿ ನಿಂದು ಹಸುರಿನ ಸೀರೆಯ ಸೆರಗನು ಹೊದ್ದು  ಹರಿಸುತ ನಿಂದಳು ಚೆಲುವಿನ ಮುದ್ದು ನವಿಲಿನ ನಾಟ್ಯದ ತೆರದಿ  ಕುಣಿದಳು  ಪ್ರಕೃತಿ ಮುದದಿ ಹರಡಿತು ಎಲ್ಲೆಡೆ ಮಣ್ಣಿನ ಗಂಧ ಹಬ್ಬಿತು ಬಗೆಬಗೆ ಹೂಗಳಗಂಧ ಹಸಿರಿನ ಸೆರಗಲಿ ಹೂವನು ತುಂಬಿ ಕರೆದಳು ಒಲವಲಿ ಮೈದುಂಬಿ ಮಧುವನುಹೀರುವದುಂಬಿಗಳಾಟ ತರುತಿದೆ  ಮನಕೆ ಚೆಲ್ಲಾಟ ಎಲ್ಲೆಡೆ ತುಂಬಿತು ತಂಪು ಮನವನು  ತುಂಬಿತು ಕಂಪು ಕೆರೆಕೊಳಗಳಲಿ ಉಕ್ಕಿತು ನೀರು ಮನಸಿಗೆ ತಂದಿತು ಹರ್ಷದ ತೇರು ಹಾರುವ ಬಾನಾಡಿಗಳಂದ ಹಾಡುವಹಕ್ಕಿಗಳಿಂದ ಕೊಳದಲಿ  ಅರಳಿದ ತಾವರೆಯಿಂದ ಇಳೆಯಲಿ ತುಂಬಿತು ಆನಂದ ಪಂಕಜಾ ಕೆ ಮುಡಿಪು ಕುರ್ನಾಡು [31/5/2018, 9:33 AM] pankajarambhat: ಮಳೆಗಾಲ ಮಳೆಯು ಸುರಿದು ಇಳೆಯ ತಬ್ಬಿ ಹರುಷ ತಂದಿತು ಮನಸಿಗೆ ನೀರ ಹರಿವು ತುಂಬಿ  ತುಳುಕಿ   ಆಯಿತಲ್ಲಿ ಹೊಳೆ ಕೊಚ್ಚಿಹೋಯಿತು ಕೊಳೆ ಬಿಸಿಲ ಬೇಗೆಗೆ ಹೊತ್ತಿ ಉರಿದ ಧರೆಗೆ ತಂದಿತು ತಂಪು ಕಂಪಿನ ಉಸಿರನು ಕೆರೆಕೊಳ ಕಟ್ಟೆಗಳು  ಉಕ್ಕಿ ಹರಿದವು ಭರದಲ್ಲಿ ತುಂಬಿ ನಿಂತಿತು ನೀರು ಎಲ್ಲೆಡೆ  ಚಂಡಮಾರುತ  ಬಂದು  ಆಯಿತು ಜನಜೀವನ ತತ್ತರ ಮನೆ ಮಠ ಮುಳುಗಿ ಹೋಗಿ ಬಾಳು ಆಯಿತು ದುರ್ಭರ ಜೀವ ಕೋಟಿಗಳೆಲ್ಲ ನರಳಿ ನಾಶವಾಯಿತು ಜೀವನ ಹಸಿರು ಕಾಡಿನ ಕಡಿದು ಮನುಜ   ಕಾಂಕ್ರೀಟ್ ಕಾಡಿನ  ಕಟ್ಟಿದ ನೀರ ಹರಿವಿಗೆ ಜಾಗವಿಲ್ಲದೆ  ಕುಸಿದು ಹೋಯಿ

ಅಕ್ಷರ ದೀಪ 12

[9/11/2020, 12:47 PM] pankajarambhat: ಕವಿಗಳ ಜತೆಗೊಂದು ಸವಿ ಮಾತು ಬಳಗದ  ಸ್ಪರ್ಧೆಯಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ನನ್ನ ಸ್ವರಚಿತ ಚಿತ್ರಕ್ಕೊಂದು ಕವನ ಪ್ರಕೃತಿ ಸಿರಿ   ಹಸಿರುಡುಗೆಯ ಉಟ್ಟು  ನಲಿದಿದೆ ಜೋಳ ತುಂಬಿದ ಗದ್ದೆಯು ಅನ್ನದಾತನು ಪಟ್ಟ ಶ್ರಮಕೆ ಫಲವ ಕೊಡುತಲಿರುವಳು ಭೂತಾಯಿಯು ಒಣಗಿ ನಿಂತ ಜೋಳದ ತೆನೆಯಲಿ ಕೆಂಪು ಕೂದಲಂದದಿ ಹರಡಿದೆ ಹಸಿರುಡುಗೆಯ  ಧರಿಸಿ ನಿಂತಿಹ ಬಿಚ್ಚು ಕೆಂಪು ಕೂದಲ  ಸುಂದರಿ ಮೈಯ ಮರೆಸುವ ಪ್ರಕೃತಿ ಸೊಬಗದು ಕಣ್ಣು ಮನವನು ಸೆಳೆದಿದೆ  ಸೃಷ್ಟಿ  ಸಿರಿಯ ಅಂದ ಕಾಣುತ  ಮೈ ಮನವು ಮರೆದಿದೆ    ಮುಖವ ತಿರುಗಿಸಿ ನಿಂತ ಚೆಲುವೆಯ  ತೆರದಿ ಕಾಣುವ ಸೊಬಗದು  ರಸಿಕ ಮನವನು ಸೆಳೆದು ಕೊಳ್ಳುತ  ಬಾಗಿ ನಿಂತಿದೆ ಇಳೆಯಲಿ   ಬೀಸುತಿರುವ ತಂಪುಗಾಳಿಗೆ ತೂಗುತ್ತಿರುವುದು ತೆನೆಗಳು ಕಣ್ಣು ಸೆಳೆಯುವ ಸೊಬಗು ತುಂಬಿದ ನೋಟ ಕಣ್ಣನು ಸೆಳೆದಿದೆ ಪಂಕಜಾ.ಕೆ.. ಮುಡಿಪು [10/11/2020, 1:35 PM] pankajarambhat: ಅಂತರ್ಜಾಲ ಆಧಾರಿತ   ಕವನ ರಚನೆ ಮತ್ತು ವಾಚನ ಸ್ಪರ್ಧೆಯಲ್ಲಿ ಟಾಪ್.3 .ಪುಸ್ತಕ ಬಹುಮಾನಿತ ನನ್ನ ಕವನ   ನಾಡ ಭಕ್ತಿ ಕವಿತೆ   ಶೀರ್ಷಿಕೆ..ನಮ್ಮ  ಹೆಮ್ಮೆಯ ಕರುನಾಡು ಕನ್ನಡ ನಾಡಿದು ಗಂಧದ ಬೀಡು ಋಷಿ ಮುನಿಗಳು ಜನಿಸಿದ ನಾಡು  ಕವಿಕೋಗಿಲೆಗಳು ಹಾಡಿದ ನಾಡು ಇತಿಹಾಸದ ಪುಟಗಳಲಿ ಮಿಂಚಿದ ಬೀಡು ಪಂಪ ರನ್ನರು ಹಾಡಿ ಹೊಗಳಿದ ನಾಡು ಕವಿ ಕಬ್ಬಿಗರು ಜನಿಸಿದ ನಾಡು ಸಂಗೀತ ಸಾಹಿತ್ಯ ಕಲೆಗಳ ಬೀಡು ಶಿಲ್ಪ ಕಲೆಗಳ

ತುಳು ಕನ್ನಡ 9

[1/10/2020, 9:06 PM] pankajarambhat: ತುಳು ಕನ್ನಡ ಕಾವ್ಯ ವೇದಿಕೆ ಜಾನಪದ ಗೀತೆ ಸ್ಪರ್ಧೆಗಾಗಿ ದತ್ತ ಪದ ನನ್ನಾಕಿ ನನ್ನವಳು ಆಷಾಢ ಮಾಸ ಬಂದೈತೆ ನೋಡವ್ವ ಮಡದಿ ತವರಿಗೆ ಹೊರಟಾಳ ಮನೆಯೆಲ್ಲಾ ಬಿಕೋ ಅಂತೈತವ್ವ ನನ್ನಾಕಿ ಇದ್ದಾಗ ಮನೆಯೆಲ್ಲಾ ತುಂಬೈಯ್ತೆ ಗಲ ಗಲ ಮಾತು ಕೇಳ್ತಾಯ್ತೆ ಮನೆಯೆಲ್ಲಾ ನಗು ತುಂಬುತೈತೆ ತುಂಬಿದ ಸಂಸಾರ ಇದ್ದರೂ ಕೂಡಾ ಬೇಸರ ಪದಲಿಲ್ಲ ನೋಡವ್ವ ಅಕಿ ಮನಸು ಬೆಣ್ಣೆವ್ವ ಅತ್ತೆ ಮಾವರ  ಪ್ರೀತಿಯಿಂದ ನೋಡ್ಯಾಳ ತನ್ನ ಅಪ್ಪ ಅಮ್ಮನ ತರ ಕಾಂತಳ ಮನೆಮಂದಿ ಎಲ್ಲರ ಯೋಗಕ್ಷೇಮ ನೋಡ್ತಾಳವ್ವ ಗೆಜ್ಜೆ ಕಾಲ್ಗಳ ನಾದವ ಬೀರುತ ಮನೆತುಂಬ ನಗು ನಗುತ್ತಾ ಓಡ್ಯಾಡುತ್ತಾಳವ್ವ ಆಕಿ ಇಲ್ಲದೆ ಜೀವ ನೊಂಡೈತೆವ್ವ ಹೆಣ್ಣಿಲ್ಲದ ಮನೆ ಮನೆಯಲ್ಲ ನನ್ನವ್ವ ಹೆಣ್ಣನ್ನು ಪ್ರೀತಿಯಿಂದ ಕಾಣಬೇಕವ್ವ  ಆಕಿ ಮನೆಬೆಳಗೊ ನಂದಾ ದೀಪಕಾಣವ್ವ    ಪಂಕಜಾ. ಕೆ. ಮುಡಿಪು [15/10/2020, 6:33 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ ಗಜಲ್ ಉತ್ತಮ ಅವಕಾಶವೊಂದು ನಿನಗಾಗಿ ಕಾದಿದೆ ಗೆಳತಿ ಭವಿಷ್ಯವನು ಉಜ್ವಲಗೊಳಿಸಲು ಅದು ಬಂದಿದೆ ಗೆಳತಿ ನಾಳೆ ಎಂದವನ ಮನೆ ಹಾಳು ಎಂದು ತಿಳಿದಿಲ್ಲವೇ ಇಂದಿನ ಕೆಲಸ ಇಂದೇ ಮಾಡಬೇಕಾಗಿದೆ ಗೆಳತಿ ಹುಟ್ಟುತ್ತಲೇ ಯಾರೂ ಮೇಧಾವಿಗಳಾಗುವುದಿಲ್ಲ ಅಲ್ಲವೇ ನಿರಂತರ ಕಲಿಕೆಯಿಂದ ಅದು ಸಾಧ್ಯವಾಗಿದೆ ಗೆಳತಿ ಬಾಳು ಹಾವು ಏಣಿಯಾಟ ದಂತೆ ಇರುವುದಲ್ಲವೇ ಸೋತಾಗ ಕುಗ್ಗದೆ ಗೆಲುವಿಗಾಗಿ ಶ್ರಮಿಸಬೇಕಿದೆ ಗೆಳತಿ ಎಲ್ಲರೊ