Skip to main content

Posts

Showing posts from March, 2020

ಒಲವಗಾನ ಭಾವಗೀತೆ

ಒಲವ ಗಾನ (ಭಾವಗೀತೆ) ನನ್ನ ನಿನ್ನ ಒಲವಿನ ಬೆಸುಗೆಗೆ ಸಮಯವು ಇಂದು  ಕೂಡಿ ಬಂದಿದೆ ಬಾಂದಳದಿ ಚಂದಿರ ತಾರೆಗಳನೊಡನಾಡುತ ಬೆಳದಿಂಗಳ  ಹೂಮಳೆ ಕರೆಯುತಿರುವನು ತಂಗಾಳಿಯು ನಮ್ಮೊಡನಾಟಕೆ  ಸಾಕ್ಷಿಯಾಗಿದೆ ಬಾ ನಲ್ಲೆ  ಸವಿಯೋಣ ಸ್ವರ್ಗ ಸುಖವನಿಲ್ಲೆ    ಭಾವನೆಗಳ ಭಾರದಲಿ ಮನಸು  ತುಂಬಿದೆ ನಿನ್ನೊಡನೆ ಸಪ್ತಪದಿ ತುಳಿಯುವ ಕಾಲ ಬಂದಿದೆ ದೇವದೇವತೆಗಳು ಬಾಂದಳದಿ ನಿಂತು ಹರಸುತಿಹರು ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಈ ಕೆಂಗುಲಾಬಿ ಮನಸು ಇಂದು  ನವಿಲಂತೆ ಕುಣಿಯುತಿದೆ  ನಿನ್ನಒಡನಾಟಕ್ಕೆ  ಸಮಯ ಸನ್ನಿಹಿತವಾಗಿದೆ ನಕ್ಕು ಬಿಡು ಒಮ್ಮೆ ನನ್ನೊಲವೇ  ಮನಸು ನಿರಾಳವಾಗುವಂತೆ ಒಲವ ಸವಿಯನು ಸವಿಯೋಣ ಬಾ ನಲ್ಲೆ ಅಂಗಳದಿ ಹಬ್ಬಿರುವ ಮಲ್ಲಿಗೆಯ ಬಳ್ಳಿ  ಮೈತುಂಬ ಹೂಗಳರಳಿಸಿ ಕಂಪಬೀರಿಹುದು ಮಂಗಲಾಕ್ಷತೆಯಲಿ ಸಪ್ತಪದಿಯ ತುಳಿದು ಬಂದೆ ನೀ ಎನ್ನ ಮನ ಮನೆಯ ಬೆಳಗಲೆಂದು ಒಲವ ತೇರನು ಎಳೆಯಲು ಜತೆಯಾಗಿ ಸಾಗೋಣ ಅನುರತವು ಸವಿ ಜೇನ ಹೊನಲ ಹರಿಸುವೆ ನಿನಗಾಗಿ ಪಂಕಜಾ.ಕೆ

ಈಶನ ಸ್ಮರಣೆ

ಈಶನ ಸ್ಮರಣೆ (ಭಕ್ತಿಗೀತೆ) ಈಶ ನಿನ್ನ ನಾಮ ಸ್ಮರಣೆ ತೋಷದಿಂದ ಮಾಡುವೆನು ದೋಷರಾಶಿ ಕಳೆಯೋ ಸೋಮೇಶ್ವರ ಶರಣು ಬಂದೆ ನಂದಿಕೇಶ ಚರಣಕೆರಗಿ ಬೇಡಿಕೊಳ್ಳುವೆ ಮರಣ ಭಯವ ಕಳೆಯೋ ವಿಶ್ವನಾಥನೇ ಭಾದಿಸುವ ರೋಗಗಳ ಕಾಡಿಸುವ ವೈರಿಗಳ ಭಾದೆ ಬಿಡಿಸಿ ಕಾಯೋ ನಮ್ಮಶಶಿಶೇಖರ ಭ್ರಷ್ಟರೊಡನೆ ಸೇರುತಲಿ ಕಷ್ಟವನ್ನು ತಂದುಕೊಂಡೆ ಕಷ್ಟ ಕಳೆದು ಎನ್ನ ಕಾಯೋ ಮಂಜುನಾಥನೆ ನಾಮವನ್ನು ಜಪಿಸುತಲಿ ನೇಮದಿಂದ ನಿನ್ನ ಭಜಿಸೆ ಭವದ ಕಷ್ಟ ಕಳೆಯೋ ಗಂಗಾಧರ ಹಾರಿ ಬಂದು ಕಾಡುತಿರುವುದು  ಭಾರಿಯಾದ ರೋಗವಿಂದು ಭೀತಿ ಕಳೆದು ನಮ್ಮ ಕಾಯೋ ಮಹೇಶ್ವರ ಪಂಕಜಾ.ಕೆ

ಒಲವೇ ಜೀವನ ಭಾವಗೀತೆಕಾವ್ಯಾಂತರಂಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಗೀತೆ

ಒಲವೇ ಜೀವನ (ಭಾವಗೀತೆ) ಈ ಭೂಮಿ ಈ ಬಾನು ನಮಗಾಗಿದೆ ಒಂದಾಗಿ ನಲಿಯಲು ಸಮಯ ಬಂದಿದೆ/ ಬಾನಿನಲಿ ಚಂದಿರನು ನಗುತ್ತಿರುವನು ಬೆಳದಿಂಗಳ ಮಳೆಯನ್ನು ಸುರಿಸುತಿಹನು ಮಾರುತನು ಬೀಸುತಿಹನು ತಂಗಾಳಿಯ ಒಲವರಸ  ಸವಿಯುತ್ತಾ ಮೈ ಮರೆಯುವ ಹೂವೊಂದು ಅರಳಿ. ನಗುತಿರುವುದು ದುಂಬಿಗಳ  ಆಕರ್ಷಿಸುತ ತಲೆದೂಗುವುದು ಅರಳಿರುವ ಮಲ್ಲಿಗೆಯ  ಪರಿಮಳವು ಮೈಮನಕೆ ತುಂಬುತಿದೆ ಉಲ್ಲಾಸವು ಮಧುಮಾಸ ಬಂದಿಹುದು ಬಾ ನಲ್ಲನೆ ತನಿರಸವ ಉಣಿಸೊಮ್ಮೆ ನೀ ಸುಮ್ಮನೆ ಬಾಳೊಂದು ನಂದನವನವಾಗಿದೆ ನಾವಿಬ್ಬರೊಂದಾಗಿ ನಲಿಯೋಣವೇ ಪಂಕಜಾ.ಕೆ

ಯೋಧ ಶರ ಷಟ್ಪಧಿ

ಯೋಧ ಗಡಿಯನು ಕಾಯುತ ಎಡೆಯಲಿ ನುಸುಳುವ ಪಡೆಯನು ಹಿಂದಕೆ ನೂಕುವನು ಒಡನೆಯೆ ನೋಡುತ ಬಿಡದೆಯೆ ಹಾಯುವ ಕೇಡಿಯ ಜತೆಯಲಿ ಕಾದುವನು ದೇಶದ ಸೇವೆಯು ಈಶನದೆನುತಲಿ ವೇಶವ ಹಾಕುತ ದುಡಿಯುವನು ಮೋಸವ ಮಾಡದೆ ನಾಶವ ಗೈಯದೆ ದೇಶವ ಕಾಯಲು ನೋಡುವನು ಭ್ರಷ್ಟರ ನೂಕುತ ಇಷ್ಟರ ಜತೆಯಲಿ ಕಷ್ಟದಿ ಜೀವನ ಕಳೆಯುವನು ಇಷ್ಟವ ಬಿಡುತಲಿ ನಷ್ಟವ ಗಣಿಸದೆ ಕಷ್ಟದ ಕಾಯಕ ಮಾಡುವನು ಭಯವನು ಕಳೆಯುತ ಜಯವನು ಪಡೆಯಲು ಹಯವನು ಏರುತ ಕಾದುವನು *ನಯವಂಚಕರನು*  *ದಯೆಯನು ತೋರದೆ*  *ಲಯಗೊಳಿಸುತಲವ ಮೆರೆಯುವನು*||  ನಗುವನು ಬಿಡುತಲಿ ಜಗವನು ಗೆಲ್ಲಲು ಸೊಗದಲಿ ಕಾಯಕ ಮಾಡುವನು ಹಗೆಯನು ತರಿಯುತ ಲಗುಬಗೆಯಿಂದಲಿ ಜಗವನು ಗೆಲ್ಲಲು  ಕಾದುವನು *ಶಿರವನು ಎತ್ತುತ*  *ಭರದಲಿ ನಡೆಯುತ*  ಅರಿಯನು ತರಿಯಲು ಕಾಯುವನು |  ಹರಿಯನು ನಂಬುತ ಗುರಿಯನು  *ಸೇರಲು*  *ಧುರದಲಿ ಹೆಜ್ಜೆಯ ಹಾಕುವನು* ||  ಪಂಕಜಾ.ಕೆ

ಕಲ್ಪನೆ ಹನಿ ಕವನ

ವಾಸ್ತವ ಸತ್ಯ(ಹನಿಕವನ) ದತ್ತಪದ..ಕಲ್ಪನೆ ಕಲ್ಪನೆಯ ಬೆನ್ನೇರಿ ಮರುಳುಗಾಡಿನ ಪಯಣ ವಾಸ್ತವ ದ ನೆಲೆಗಟ್ಟಿನಲಿ ಕನಸಿನ ಅನಾವರಣ ಪಂಕಜಾ.ಕೆ

ಗುಬ್ಬಿ ಹಕ್ಕಿ

ಗುಬ್ಬಿ ಹಕ್ಕಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಅತ್ತ ಇತ್ತ ಕತ್ತು ಕೊಂಕಿಸಿ ಸುತ್ತ ಮುತ್ತ ನೋಡಿ ಪುಟ್ಟ ಹಕ್ಕಿ ಹಾರಿ ಹಾರಿ  ಬಂದಿತು ಕಸ ಕಡ್ಡಿ ಹೆಕ್ಕಿ ತಂದು ಮಾಡ ಎಡೆಯಲಿಟ್ಟಿತು ಚಂದದಿಂದ ಗೂಡು ಕಟ್ಟಿ ಇನಿಯನೊಡನೆ ನಲಿಯಿತು ಚಿವ್ ಚಿವ್ ಎಂದು ಹಾಡಿ ಮೊಟ್ಟೆ ಗಳನು ಇಟ್ಟಿತು ಕಾವು ಕೊಡಲು ಮೊಟ್ಟೆಯೊಡೆದು  ಮರಿಯು ಹೊರಗೆ ಬಂದಿತು ಕಾಳು  ಕಡ್ಡಿ ಹೆಕ್ಕಿ ತಂದು ಗುಟುಕು ಕೊಡುತ ಮರಿಗಳನ್ನು ಸಲಹಿತು ರೆಕ್ಕೆಬರಲು ಮರಿಗಳಿಗೆ ಹಾರಲದು ಕಲಿಸಿತು ಮೊಬೈಲ್ ಶಬ್ಧ ಕೇಳುತಲಿ ದೂರ ಸರಿದು ಹೋಯಿತು ಎಲ್ಲಿ ಹೋದೆ ಪುಟ್ಟ ಗುಬ್ಬಿ ನಿನ್ನ ಸುಳಿವು ಕಾಣದು ಮರ ಗಿಡಗಳ ಕಡಿದು ನಿನಗೆ ನೆಲೆಯು ಇಲ್ಲದಾಯಿತೆ ಮಾನವನ ದುರಾಶೆಗೆ ನಿನ್ನ ಸಂತತಿ ಅಳಿಯಿತೆ ಪಂಕಜಾ.ಕೆ

ಶರಣಾಗತಿ (ಶರ ಷಟ್ಪದಿ)

ಶರಣಾಗತಿ ಗೋವಿಂದ ಕಾಪಾಡು ನಾವಿಂದು ಬೇಡುವೆವು ಕಾವವನು ನೀನೆಂದು   ನಮಿಸುತಿಹೆವು ಸೇವೆಯನು *ಮಾಡುತಲಿ ನೋವಿನಲಿ ಬೇಡುವೆವು ಜೀವಿಗಳ ಕಾಯುತಲಿ ರಕ್ಷಿಸುವೆಯಾ| ಭರದಿಂದ ಹಬ್ಬುವುದು ಸರಸರನೆ  ಸುಳಿಯುವುದು ನೆರೆರಾಜ್ಯದಲ್ಲಿಂದ  ಬಂದಿರುವುದು ವೈರಿಯನು ಸದೆಬಡಿದು ಪರಿಹರಿಸು ಭೀತಿಯನು ನರಹರಿಯೆ  ನಿನ್ನಲ್ಲಿ ಬೇಡುತಿಹೆನು ಪಂಕಜಾ.ಕೆ

ಜೀವನದಿ ಸ್ನೇಹ ಸಂಗಮ ವಾಟ್ಸಪ್ ಬಳಗದಲ್ಲಿ ಮೆಚ್ಚುಗೆ

ಜೀವನದಿ ಮನದ ನೆಮ್ಮದಿ ಕಳೆದು ಹೋಗಿದೆ ಎಲ್ಲಿ ಹುಡುಕಲಿ ನಿನ್ನನು ಸುತ್ತು ಮುತ್ತಲು ಎತ್ತ ನೋಡಲು ತುಂಬಿಕೊಂಡಿದೆ ವಂಚನೆ ಕಪಟ ಮನುಜರ ಮೋಸ ದಾಟಕೆ ಜೀವ ಸಂಕುಲ ನರಳಿದೆ ಮನುಜ ಮನುಜರಲಿ ದ್ವೇಷ ತುಂಬಿದೆ ಯಾರ ನಂಬಲಿ ದೇವನೆ ನಂಬಿಕೆಯ ನೆಲೆಗಟ್ಟು ಮುರಿದಿದೆ ಈಶ ದಾರಿಯ ತೋರೆಯ ಜಗದ ಎಲ್ಲೆಡೆ ಶಾಂತಿ ನೆಲೆಸಲಿ ಕರುಣೆಯಿಂದಲಿ ನೋಡೆಯ ಪ್ರೀತಿ ಎನ್ನುವ ಜೀವಜಲವಿರೆ ಬಾಳಲಿರುವುದು ನೆಮ್ಮದಿ  ಆಶೆಗಳನು ಕಡಿಮೆ ಮಾಡುತ ಮನದಿ ತುಂಬಲಿ  ಸಂತಸ ಪಂಕಜಾ. ಕೆ.

ಮಕ್ಕಳಾಟ

ಚಿತ್ರ ಕವನ ಮಕ್ಕಳಾಟ ಬೇಸಿಗೆ ರಜೆಯಲಿ ಮಕ್ಕಳ ಆಟ ಮನಸಿಗೆ ಖುಷಿಯನು ತರುತಿಹುದು ನೀರಲಿ ಜಿಗಿದು ಮರದಲಿ ಕುಣಿದು ಆಟವ ಆಡುತ  ಕುಣಿಯುವರು ಮರಗಳ ಏರುತ ಕೊಳದಲಿ ಈಜುತ ಖುಷಿಯಲಿ ದಿನವನು ಕಳೆಯುವರು ಹೊಳೆದಂಡೆಯ ಮರವನು ಹತ್ತಿ ಮರಕೋತಿ ಆಟವ ಆಡುತ ನಲಿಯುವರು ಏನಿದು ಆಟ ಎಂತಹ ನೋಟ ದಣಿವೇ ಇಲ್ಲದೆ ಆಡುವರು ಇಂದಿನ ಮಕ್ಕಳಿಗೆ  ಟಿವಿಷನ್ ಕಾಟ ಆಟಕೆ ಬಿಡುವೇ ಇರದಲ್ಲ  ಆಟವ ಆಡುವ  ಮೋಜಿನ ದಿನಗಳು ಬಾಲ್ಯದ ಆ ದಿನಗಳು ಇನ್ನೆಲ್ಲಿ ಪಂಕಜಾ.ಕೆ.

ಅರಿವೆಂಬ ಜ್ಯೋತಿ

ಅರಿವೆಂಬ ಜ್ಯೋತಿ ಅಜ್ಞಾನವೆಂಬ ಅಂಧಾಕಾರವ ಕಳೆಯಲು ಜ್ಞಾನವೆಂಬ  ಅರಿವಿನ ಹರಿವು ಇರಲು  ಮನಕೆ ತುಂಬುತಿದೆ ಆನಂದದ ಅಮಲು ಅಂದಾಕಾರವು ತೊಲಗಿ  ಅರಿವೆಂಬ ಜ್ಯೋತಿ ಬೆಳಗಿ ಬಾಳು ಬಂಗಾರವಾಗದೆ ಇರದು ಸಾಹಿತ್ಯಲೋಕದಲಿ ಜ್ಞಾನದ ಹಸಿವು ಬಗೆ ಬಗೆ ಸಾಹಿತ್ಯದ ರಸದೌತಣದ  ಹರಿವು ಸಾಹಿತಿಯ ಮನದಾಳದ ಅರಿವಿನ ಹರಿವು ಪುಸ್ತಕದಲಿಹೊಳೆಯಾಗಿ ಹರಿದಿದೆ ಹರಿದಷ್ಟೂ ಚಿಮ್ಮುತ್ತಿದೆ ಜ್ಞಾನದ ಸಾಗರ ಬತ್ತದಾ ತೊರೆಯಂತೆ ಜ್ಞಾನದ  ಭಂಡಾರ ಮೊಗೆ ಮೊಗೆದು ಧನ್ಯಳಾಗುವ ಬಾವ ನೋವು ದುಃಖಗಳ ಮರೆಸುತಿದೆ ಜ್ಞಾನದ ಹಸಿವು ಮನಕೆ  ರಸದೌತಣವ ಉಣಬಡಿಸುತಿದೆ ಸಾಹಿತ್ಯದ ಘಮಲು ಪಂಕಜಾ.ಕೆ.

ಪ್ರೀತಿಯಹಣತೆ ಹಚ್ಚುವ ಗಜಲ್

ಗಜಲ್ ಪ್ರೇಮದ ಹಣತೆಯನು  ಹಚ್ಹೋಣ  ಗೆಳತಿ ಒಲವಿನ ಗುಡಿಯನು ಕಟ್ಟೋಣ ಗೆಳತಿ ಮಧುಮಾಸ ಬಂದಿಹುದು ನಮಗಾಗಿ ನೋಡು ತನಿರಸವ ಸವಿಯುತ್ತಾ ನಲಿಯೋಣ ಗೆಳತಿ  ಬೆಳದಿಂಗಳು ಹರಡಿಹುದು ನಮಗಾಗಿಯಲ್ಲವೇ ಒಲವ ಜೇನಿನ ಹೊಳೆಯಲ್ಲಿ ಮುಳುಗೋಣ ಗೆಳತಿ ಚಂದ್ರ ತಾರೆಯರು ಆಡುತ್ತಿವೆ ಬಾನಲ್ಲಿ ನಾವಿಬ್ಬರು ಒಂದಾಗಿ  ಕುಣಿಯೋಣ ಗೆಳತಿ ಪ್ರೀತಿಯಿದ್ದರೆ  ಬಾಳು ನಂದನವನವಲ್ಲವೇ  ಪಂಕಜಾ ಅನುದಿನವೂ  ಒಂದಾಗಿ ಬಾಳೋಣ ಗೆಳತಿ ಪಂಕಜಾ.ಕೆ

ಶಿಲ್ಪ ಕಲೆ

ಶಿಲ್ಪ ಕಲೆ ಬೇಲೂರು ಹಳೇಬೀಡು  ಶಿಲ್ಪ ಕಲೆಗಳ ಬೀಡು ಭವ್ಯ ಪರಂಪರೆಯ ಬಿಂಬಿಸುತಿದೆ  ನೋಡು  ಶಿಲ್ಪಕಲೆಯ ಜೀವಂತಿಕೆ ಸೆಳೆಯುತಿದೆ  ಕಣ್ಣುಗಳ ಮೈ ಮರೆಸುವ ಕಲೆ  ಜೀವಂತವಿರುವ ಭಾವ ಶಿಲ್ಪಿಯ  ಚಾತುರ್ಯವದು ಮೆಚ್ಚುಗೆಯ ಬಯಸದೆ ಶಿಲೆಯಲ್ಲಿ ಅರಳಿದೆ ಕಾವ್ಯ ಆತನ ಕೈಚಳಕ ಕ್ಕೆ ಸಾಟಿ ಎಲ್ಲಿ ಭಾವನೆಗಳು ನಲಿಯುತಿದೆ  ಅರಳುತಿದೆ ಮನಸು ಹೂವಾಗಿ ಕಲೆಯ ಬಲೆಯಲ್ಲಿಸಿಲುಕಿ ಮೈ  ಮನವು ಮರೆಯುತಿದೆ ಎನಿತು ಸೊಬಗಿನ ಬೀಡು ಈ ನಮ್ಮ ನಾಡು ಜೀವಂತಿಕೆ  ತುಂಬಿದೆ ಎಲ್ಲೆಲ್ಲೂ ನೋಡು ಕನ್ನಡ ನಾಡಿನ ಭವ್ಯತೆಯು ಅನಾವರಣವಾಗಿದೆ ದೇವಾಲಯದ ಗೋಡೆಯಲಿ ಶಿಲ್ಪಿಯ ಕೈಚಳಕದಲಿ ಪಂಕಜಾ.ಕೆ

ಪ್ರೀತಿಯ ಕಾವ್ಯ

ಪ್ರೀತಿ ಯ  ಕಾವ್ಯ(   ಚಿತ್ರ ಕವನ) ಕೊಳಲು ಹಿಡಿದ ನಿನ್ನ ಕೈಯು ನನ್ನ ಕೈಯ ಬೆಸೆದಿದೆ ಮನದ ತುಂಬಾ ಪ್ರೇಮದಲೆಯ ಬಾವವನ್ನು ತಂದಿದೆ ಕಣ್ಣು ತುಂಬಾ ನಿನ್ನ ರೂಪ  ತುಂಬಿ ನಿಂತು ಕಾಡಿದೆ ನಿನ್ನ ಕಣ್ಣ ಸೆಳೆತದಲ್ಲಿ ನನ್ನ  ಮನವು ಸಿಕ್ಕಿ ನರಳಿದೆ ಕಳ್ಳ ಕೃಷ್ಣ ಹೇಗೆ ಬಂದು  ಮನಕೆ ಲಗ್ಗೆ ಇಟ್ಟೆಯೊ ಪ್ರೀತಿ  ಎನ್ನುವ   ಕಾವ್ಯವನ್ನು ಎಂದು ನೀನು ಬರೆದೆಯೋ  ಒಲಿದ ಜೀವ ಜತೆಗೆ ಇರಲು  ಬಾಳು ಎಷ್ಟು ಸುಂದರ ಪ್ರೀತಿಯಿಂದ ಕೈ ಯ ಹಿಡಿದು  ನಡೆವುದೆಷ್ಟು ಬಂಧುರ ನಮ್ಮ ಪ್ರೀತಿ ಜಗವ ಗೆದ್ದು  ಮೋಡಿಯನ್ನು ಮಾಡಿದೆ ಪ್ರೀತಿಗಿಲ್ಲ ಎಂದೂ ಸಾವು  ಎನುತ ಸಾರಿ ಹೇಳಿದೆ ಪಂಕಜಾ. ಕೆ

ಗಜಲ್ ಅಚ್ಚರಿಯೇ

ಗಜಲ್ ರವಿಯು ಬೇಗನೆ ಮುಳುಗಿದನೆಂದು ಅಚ್ಚರಿಯೇ ಮಗು ಆಟ ಆಡಲು ಸಮಯ ಸಾಲಲಿಲ್ಲವೆಂದು ಬೇಸರವೇ ಮಗು ಹಗಲು ಕಳೆದು ರಾತ್ರಿಯು ಮತ್ತೆ ಬರಲೇಬೇಕಲ್ಲವೇ  ದಣಿದ ದೇಹಕ್ಕೆ ವಿಶ್ರಾಂತಿ ಕೊಂಚ ಬೇಡವೇ ಮಗು ಸೂರ್ಯ ಚಂದ್ರ ಬಾನಿನಲ್ಲಿ ನಿತ್ಯ ಓಡದಿದ್ದರೆ ಆದೀತೆ ಸಕಲ ಜೀವಿಗಳಿಗೆ ಬೆಳಕು ತುಂಬಬೇಕಲ್ಲವೇ ಮಗು ಮುಳುಗುವ ಭಾಸ್ಕರನ ನೋಡುವುದು ಅದೆಷ್ಟು ಖುಷಿ ಬಾಯಿ ತೆರೆದು ಹಾಗೇ ನಿಂತು ಬಿಟ್ಟೆಯಲ್ಲವೇ ಮಗು ಆಟದ ಜತೆ ಪಾಠವನ್ನು ಕಲಿತು ಜಾಣನಾಗಬೇಕು ಹೆತ್ತ ವರಿಗೆ ಹೆಸರು,ಕೀರ್ತಿ ತರಬೇಕಲ್ಲವೇ  ಮಗು ಗೆಳೆಯರು ಆಟಕ್ಕೆ ನಿನ್ನ ಸೇರಿಸಿಲ್ಲವೆಂದು  ಚಿಂತೆಯೇಕೆ ನಾಳೆ ನಿನ್ನೊಡನೆ ಆಡಲು  ಬಂದೇ ಬರುವರಲ್ಲವೇ ಮಗು ಕೋಪ ಬೇಸರ ಮನಸಿನ ಶಾಂತಿಯನ್ನು ಕೆಡಿಸುತ್ತದೆ ಪಂಕಜಾಳಂತೆ  ನಗು ನಗುತ್ತಾ ಇರಬೇಕಲ್ಲವೇ  ಮಗು ಪಂಕಜಾ.ಕೆ

ಚೆಲುವ ಕೃಷ್ಣ

ಚೆಲುವ ಕೃಷ್ಣ ಚೆಲುವ ಮುಖದ ಮುದ್ದು ಕೃಷ್ಣ ಮನವ ಕದ್ದ ಬಾಲನೆ ಕೈಯಲೊಂದು  ಕೊಳಲು ಹಿಡಿದು ನಗುತಲಿರುವ  ಚೆಲುವನೆ ಬಣ್ಣ ಬಣ್ಣದ  ಅಂಗಿ ತೊಟ್ಟು ಮುಗ್ಧ ನಗೆಯ ಬೀರಿದೆ ನವಿಲುಗರಿಯು ಶಿರದಲಿದ್ದರೆ ನೀನು ಬಾಲಕೃಷ್ಣೆನೆ ಬೆಣ್ಣೆ ಕದ್ದು  ಮಣ್ಣು ತಿಂದು ಜಗವ ಬಾಯಲಿ ತೋರಿದೆ ಕೊಳಲ ನುಡಿಸಿ  ರಾಧಯೊಲವ ಪಡೆದುಕೊಂಡ ಧೀರನೆ ದುಷ್ಟರನ್ನು ಶಿಕ್ಷಿಸುತ್ತ ಶಿಷ್ಟರನ್ನು ರಕ್ಷಿಸುತ್ತ ಜಗದ ತಂದೆ ಎನಿಸಿದೆ ಪಂಕಜಾ.ಕೆ

ಪ್ರೇಮದೋಲೆ

ಪ್ರೇಮದೋಲೆ ಕಿವಿಯ ಓಲೆ ಕಂಡು  ನನ್ನ ಮನವು  ಹಿಗ್ಗಿ ನಲಿಯಿತು ಇನಿಯಕೊಟ್ಟ ಪ್ರೀತಿಯಿಂದ ಮುತ್ತಿನೋಲೆಯಲ್ಲವೇ ಕೆನ್ನೆ ಮೇಲೆ ಅದರ ಸ್ಪರ್ಶ  ಕಚಗುಳಿಯ ಇಡುತಿದೆ ಅದರ ಸೊಬಗ ಕಂಡು ಮನವು ಖುಷಿಯ ಕಡಲು ಆಗಿದೆ ಇನಿಯ ಕೊಟ್ಟ ಒಲವಿನೋಲೆ ಪ್ರೀತಿ ಉಕ್ಕಿ ಹರಿದಿದೆ ಸವಿ ಸವಿ  ನೆನಪುಗಳು  ಮನಕೆ ಲಗ್ಗೆ ಇಟ್ಟಿದೆ ಬೇಗ ಬಾರೋ ಇನಿಯಾ ನೋಡು ಒಮ್ಮೆ ನನ್ನ ರೂಪವ ಕಿವಿಯೋಲೆ ಇಟ್ಟ  ನನ್ನ ಸೊಬಗು ಹೆಚ್ಚಿದೆಯಲ್ಲವೇ ಒಮ್ಮೆ ನೀನು   ತುಂಟತನದಿ  ಉಸುರಿ ಬಿಡುವೆಯಲ್ಲವೇ ಪಂಕಜಾ.ಕೆ

ನಿಲುಕದ ನಕ್ಷತ್ರ

ಕವನ ಸ್ಪರ್ಧೆ ವಿಷಯ ನನ್ನ ಮನದಲ್ಲಿ ಮಿಂಚುವ ನಿಲುಕದ ನಕ್ಷತ್ರ ನೀನು ನಿಲುಕದ ನಕ್ಷತ್ರ ಚೆಂದುಳ್ಳಿ  ಚೆಲುವೆ ಹಾಲ್ಬಣ್ಣ ಮೈಯವಳೇ ನನ್ನೆದೆಯ ಬಾಂದಳದಿ ಮಿಂಚಾಗಿ ಬಂದೊಳೆ ಮನಸಲ್ಲು ಕನಸಲ್ಲೂ ನೀನಿರುವೆ ಚೆಲುವೆ ನನ್ನೊಲವೇ ನಿನಗಾಗಿ ನಾ ಹಂಬಲಿಸುತಿರುವೆ ನನ್ನ ಮನದಲ್ಲಿ ಮಿಂಚುವ  ನಿಲುಕದ ನಕ್ಷತ್ರ ನೀನು ತಿಳಿದರೂ ಬಿಡಲಾರೆ ನಿನ್ನ ಮೇಲಿನಈ ಮೋಹವನು ಕನಸಲ್ಲಿ ಬಂದು ಕಾಡುವವಳೇ ಮನದಲ್ಲಿ ನೀನೇ ತುಂಬಿರುವೆ ನನ್ನೊಲವೆಲ್ಲಾ ನಿನಗಾಗಿದೆ ಓ ನನ್ನ ಮನಕದ್ದ ವೈಯಾರಿಯೇ ಮೈ ಮರೆಸಿತು ನಿನ್ನ ಪ್ರೀತಿಯ ಪಾಶ ಹೃದಯದ ತುಂಬೆಲ್ಲ ಹರಿಸಿತು ಒಲವರಸ ಕೈಚಾಚಿ  ಕೊಡಲೇನು ಬಾ ನನ್ನ ಹುಡುಗಿ ಬಂದೊಮ್ಮೆ ಮೈ ಮರೆಸು ಓ ನನ್ನ ಪ್ರಿಯೆ ಪಂಕಜಾ.ಕೆ

ಬೇಡರ ಕಣ್ಣಪ್ಪ

ಬೇಡರ ಕಣ್ಣಪ್ಪ ಬೇಟೆಯ ಆಡುತ  ದಿನವನು ಕಳೆಯುವ ಬೇಡರ ನಾಯಕ  ಮುಗ್ಧ ಭಕ್ತಿಯ ತರುಣ ಒಲಿಸಿದ ಭಕ್ತಿಯಲಿ ಶಿವನ ಕಣ್ಣನೇ ಅರ್ಪಿಸಿದ ಭಕ್ತ ನಿತ್ಯವೂ ಶಿವನನು ಪೂಜಿಸಲೆಂದು ತಾನೇ ಮುಡಿದ ಹೂಗಳ ಅರ್ಪಿಸಿ ಭಕ್ತಿಯಲಿ ಪೂಜೆಯ ಗೈಯುವನು ಮಾಂಸವ   ಬೇಯಿಸಿ  ರುಚಿಯನು  ನೋಡಿ ಶಿವನಿಗೆ ಅರ್ಪಿಸುತ ಮೈ ಮರೆತ ಬಾಯಲಿ ನೀರನು  ತುಂಬಿಸಿ ಹಾಕುತ  ಶಿವನಿಗೆ ಅಭಿಷೇಕವ ಮಾಡುತ್ತಿದ್ದ ಭಕ್ತನ ಭಕ್ತಿಯು ಜಗಕೆ ತಿಳಿಸಲು ಕಣ್ಣಲಿ ರಕ್ತವ ಹರಿಸಿದ ಶಿವ ರಕ್ತವು ಕಂಡು  ಚಿಂತೆಯೂ ಹೆಚ್ಚಿ ತನ್ನಯ ಕಣ್ಣನೇ ಕಿತ್ತು ಶಿವನಿಗರ್ಪಿಸಿದ ಭಕ್ತನ ಭಕ್ತಿಗೆ ಮೆಚ್ಚಿದ ಶಿವನು ಕಣ್ಣನು ಕೊಟ್ಟು ಹರಸಿದನು ಬೇಡರ ಕಣ್ಣಪ್ಪ  ಎನ್ನುವ ನಾಮವು ಸ್ಥಿರವಾಯಿತವಗೆ ಕೇಳೆಂದ ಪಂಕಜಾ. ಕೆ

ನಲ್ಲನಿಗೆ ಸಾಕು ಮಾಡು ಮೌನ ಬಲ್ಲೆ ನಾ ನಿನ್ನ ಮನ

ವಿಷಯ ..ಸಾಕು ಮಾಡು ಮೌನ ಬಲ್ಲೆ ನಾ ನಿನ್ನ ಮನ ನಲ್ಲನಿಗೆ   ಮುಂಗಾರು ಮಳೆಯಂತೆ ನೀ ಬಂದೆ ನನ್ನ ಬಾಳಲಿ ಒಲವ ರಸ ಸುರಿಸುತ ಮನಕೆ ಮುದ ತಂದೆ ಹೃದಯದ ತುಂಬೆಲ್ಲ ತುಂಬಿದೆ ನಿನ್ನ ಸವಿಮಾತುಗಳು ಇಂದೇಕೆ ನೀ ಮೌನವಾಗಿ ನನ್ನ ಕೆಣಕುವೆ ಹೇಳು ಮಕರಂದ ವ ಹೀರಿ ಹಾರುವ ದುಂಬಿ ನೀನಲ್ಲ ಮತ್ತೇಕೆ ಮೌನವಾಗಿದ್ದು ನನ್ನ ಕೊಲ್ಲುವೆ ನಲ್ಲ ನಗು ನಗುತ ಗೋಳು ಹೊಯ್ದು ಕೊಳ್ಳುತ್ತಿದ್ದೆಯಲ್ಲ ಇಂದೇಕೆ ಈ ಮೌನ ನಾ ಇದನು ತಾಳೆನಲ್ಲ ಕೋಪತಾಪದಲಿ ನಲುಗಬೇಕೇ ನಮ್ಮ ಜೀವನ ತಾಳಲಾರೆ ನಾನು ಅಕಾರಣವಾದ ನಿನ್ನ ಈ ಮೌನ  ಒಲವು ಸುರಿಸುವ ನಿನ್ನ ನುಡಿಗಾಗಿ ಕಾತರಿಸಿದೆ  ಹೃದಯದ ಬಾಗಿಲು ತೆರೆದು ಕಾದಿರುವೆ ಸಾಕು ಮಾಡು  ಮೌನ ನಾ ಬಲ್ಲೆ ನಿನ್ನ ಮನ ಬಂದೊಮ್ಮೆ ಬಿಗಿದಪ್ಪಿ ಸಂತೈಸು ನಲ್ಲ ಪಂಕಜಾ.ಕೆ

ಬರಹಗಾರರು ಹನಿಕವನ

ಬರಹಗಾರರು (ಹನಿಕವನ) ಬರಹಗಾರರು ಇವರು  ಸರಸ್ವತಿಯ ವರಪುತ್ರರು ಲೇಖನಿಯ ಹಿಡಿದು ಬರೆಯುವರು ಲೋಕದ ಅಂಕು ಡೊಂಕು ಬರಹವೇ ಇವರ ಉಸಿರು ಮನದಾಳದ ಮಾತುಗಳೆಲ್ಲಾ  ಹೊಮ್ಮುವುದು ಮುತ್ತಿನ ಅಕ್ಷರಗಳಾಗಿ ಸಿಡಿಯುವುದು  ಮದ್ದುಗುಂಡುಗಳಾಗಿ ಬರಹಗಾರರೆಂದರೆ ಬಿಕ್ಷುಕರಲ್ಲ ಲೇಖನಿಯ ಹಿಡಿದರೆ ಅವರ ಸಮಾನರಿಲ್ಲ ಖಡ್ಕ ಕ್ಕಿಂತ ಹರಿತವಾಗಿದೆ ಬರಹ ಬೆಚ್ಚುವನು ಅಪರಾಧಿ ಇದರಿಂದ  ಜ್ಞಾನದಾ ಗಣಿ ಇವರು  ಸಾಹಿತ್ಯದ ರಸಧಾರೆ ಹರಿಸಿ ಸಮಾಜದ ಕಣ್ಣು ತೆರೆಸುವರು ಯಾರಲ್ಲೂ ಕೈ ಚಾಚದ ಸ್ವಾಭೀಮಾನಿಗಳು ಪಂಕಜಾ.ಕೆ

ಮುದತಂದ ಮಳೆ ಹನಿಕವನ

 ಮುದ ತಂದ ಮಳೆ ಬೇಸಿಗೆಯ  ಬಿರು ಬಿಸಿಲಿಗೆ ತನು ಕಾದು ಬಸವಳಿದು ಮಳೆಯ  ಹನಿಗಾಗಿ ಕಾತರಿಸಿದೆ ತಂಪಾದ ಗಾಳಿಯು  ಸೊಂಪಾಗಿ ಬೀಸಲು ಮುಂಗಾರು ಮಳೆ ಸುರಿದು ಮನವರಳಿತು ಬೆಂಗಾಡಿನಂತಿದ್ದ  ಮನದಲ್ಲಿ ಹೊಸಕನಸ  ಚಿಗುರಿಸುತ  ಮಳೆ  ಸುರಿದು ಮನವಿಂದು ಕುಣಿದಾಡಿತು ಪಂಕಜಾ.ಕೆ

ಬೇಡಿಕೆ ಸಿಗ್ನೇಚರ್ ಲೈನ್ 42

ಸಿಗ್ನೇಚರ್ ಲೈನ್ ಸಂಚಿಕೆ 42 ಸ್ಪರ್ಧೆಗಾಗಿ ಬೇಡಿಕೆ ಜಗದೊಳೆಲ್ಲೆಡೆವಿಷವೇ ತುಂಬಿದೆ ನೀಲಕಂಠನೆ ನೋಡೆಯಾ ಕೊಲೆ ಸುಲಿಗೆ ಅತ್ಯಾಚಾರಗಳು ತುಂಬಿ ತುಳುಕಿದೆ ಬದುಕು ಬಾರವಾಗಿದೆ ಕಾಣೆಯ ಪ್ರೀತಿ ವಿಶ್ವಾಸ ನಂಬಿಕೆಯ  ಬೆಲೆಯು ಕಳೆದಿದೆ ದ್ವೇಷ ಅಸೂಯೆ ಯೇ ತುಂಬಿದೆ ಎಲ್ಕೆಡೆಯು  ಜಗದಲಿ ಹಸಿರು ಕಾಡು ಗುಡ್ಡಗಳ ಅಗೆದು ಬಗೆದನು ಮಾನವ ತನ್ನ ಗೋರಿಯ ತಾನೇ ತೋಡುತಿರುವನು ತಿಳಿಯೆಯ   ಕಾಂಕ್ರೀಟ್ ಕಾಡು ತುಂಬಿ ಎಲ್ಲೆಡೆ  ಗಾಳಿ  ಮಲಿನವಾಗಿದೆ ಪ್ಲಾಸ್ಟಿಕ್ ತ್ಯಾಜ್ಯವು ತುಂಬಿ  ತುಳುಕಿ  ನೀರ ಸೆಲೆಯು ಅಳಿದಿದೆ ಬದುಕಲೆಂತು ತಿಳಿಯದಾಗಿದೆ ವಿಶ್ವನಾಥ ನೇ ಕಾಯೆಯ  ಬೇಡಿಕೊಳ್ಳುವೆ ನಿನ್ನ ನಾನು ಕರುಣೆ ತೋರು ನಮ್ಮೆಡೆ ಜಗದ ಜನರಿಗೆ  ಒಳ್ಳೆ ಬುದ್ಧಿಯ ಕೊಟ್ಟು ಕಾಯು ನಮ್ಮನು ಶರಣು ಬಂದಿಹೆ ದೇವ ನಿನಗೆ  ನಿತ್ಯ ನಮ್ಮನು ಸಲಹೆಯ ಪಂಕಜಾ.ಕೆ

ಭಕ್ತಿಗೀತೆ ಗಣಪತಿ ಸ್ತುತಿ

ಭಕ್ತಿ ಗೀತೆ ಗಣಪತಿ ಸ್ತುತಿ ಮೂಷಿಕ ವಾಹನ ಮೂಜಗ ವಂದಿತ ಮೋದಕ ಪ್ರಿಯನೇ ಗಜಾನನ ಗಜಮುಖ ವದನ  ಗೌರೀ ತನಯ ಮೊರೆಯನು ಆಲಿಸು ಗಣೇಶ್ವರ ಗರಿಕೆಯ ಅರ್ಪಿಸಿ ಹರಕೆಯ ಕಟ್ಟುತ ಅನುದಿನ ನಿನ್ನನು ಬೇಡುವೆನು ನಿತ್ಯವೂ ನಿನ್ನನು ಸ್ತುತಿಸುತ ಹಾಡುವೆ ಕೊಡು ನೀ ನಮಗೆ ಸನ್ಮತಿಯ ಗಣಗಳ ಒಡೆಯನೆ ನಾಗಾ ಭರಣನೆ ಅನುದಿನ ನಿನಗೆ ಪೊಡಮಡುವೆ ವಿದ್ಯೆ ಬುದ್ದಿಗಳ ಕರುಣಿಸಿ ಕಾಯೋ ನಮ್ಮನು  ಗಣಪತಿಯೇ ಪಂಕಜಾ.ಕೆ.