Skip to main content

Posts

Showing posts from April, 2021

ಚಾಮರಾಜನಗರ ಭಕ್ತಿಗೀತೆ

ಭಕ್ತಿಗೀತೆ  ವಿಷಯ..ತಂದೆ. ತಾಯಿ ಪ್ರತ್ಯಕ್ಷ ದೇವರು ಬುವಿಗೆ ಬಂದ ಜೀವಿಗಳಿಗೆ  ತಂದೆ ತಾಯಿಯೇ ದೇವರು ಹೆತ್ತು ಹೊತ್ತು ಸಾಕಿ ಸಲಹಿದ ಮಾತೇ ನಿನಗೆ ವಂದನೆ ವಿದ್ಯೆ ಬುದ್ಧಿಯ ಕಲಿಸಿ ನಮ್ಮನು  ನೆಲೆಗೆ ಹಚ್ಚಿದ ದಾತರೆ ತಾಯಿ ತಂದೆ ನಿಮ್ಮ ಋಣ ತೀರಿಸಲು ಕೋಟಿ ಜನ್ಮವು ಸಾಲದು ತಮ್ಮ ಸುಖವನು ಬದಿಗೆ ಒತ್ತಿ ಬೆಳೆಸಿದಂತ ತಂದೆ ತಾಯಿಯೇ ಪ್ರತ್ಯಕ್ಷ ದೇವರೇ ನೀವು ಎನುತ ಭಕ್ತಿಯಿಂದಲಿ ನಿಮಗೆ ನಮಿಸುವ ಧರೆಗೆ ಬಂದ ದೇವರೆನುತ ನಿಮ್ಮ ಚರಣಕೆ ಎರಗುವೆ ಹರಸಿ ನಮ್ಮನು ನೆಲೆಗೆ ಹಚ್ಚುತ ಬಾಳ ಜ್ಯೋತಿಯ ಬೆಳಗಿಸಿ ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್ ಕುರ್ನಾಡು.ದ.ಕ

ರಾಯಚೂರು ಘಟಕ ಚುಟುಕು ರಚನೆ

ಚುಟುಕುಗಳು  1    ಹಣ    ಎಲ್ಲರಿಗೂ ಬೇಕು  ಕೈ ತುಂಬಾ ಹಣ  ಅದಕಾಗಿ ಉರುಳಿಸುವರು ಹೆಣ  ಸವಕಲು ನಾಣ್ಯದಂತಾಗಿದೆ ಗುಣ  ಹಣದ ಬೆನ್ನತ್ತಿ ಕಳೆಯುವರು ಪ್ರಾಣ 2  ಜಾತಿ ಜಾತಿ ಭೇದಗಳನ್ನು  ಅಳಿಸಬೇಕು ನಾವೆಲ್ಲಾ ಒಂದೇ ಎಂದು ತಿಳಿಯಬೇಕು ನುಡಿದಂತೆ  ನಡೆಯಲು  ಕಲಿಯಬೇಕು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು  3  ರಾಜಕೀಯ ರಾಜಕೀಯವೊಂದು  ಡೊಂಬರಾಟ ಕುರ್ಚಿಗಾಗಿ ಮಾಡುವರು ಕಾದಾಟ ಅಶ್ವಾಸನೆಗಳನು ಕೊಡುವುದೇ ಆಟ ಬಡ ಜನರ  ಜೀವನಕೆ ತಪಿಲ್ಲ ಪರದಾಟ 4  ಸಿ.ಡಿ. ಸಿ.ಡಿ.ಹಗರಣಗಳು ಮನೆ ಮಾತಾಗಿದೆ ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿದೆ ಮೋಸ ವಂಚನೆಗಳೇ ಜೀವನವಾಗಿದೆ ಜಗತ್ತನ್ನು ದೇವರೇ  ಕಾಯಬೇಕಾಗಿದೆ ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್ ಕುರ್ನಾಡು.ದ.ಕ

ಅಮೃತ ಸಿಂಚನ ಸಾಹಿತ್ಯ ಬಳಗ

ಅಮೃತ ಸಿಂಚನ ಸಾಹಿತ್ಯ ಬಳಗ ಸ್ಪರ್ಧೆಗಾಗಿ ಕವನ ದತ್ತಪದ..ಅಲೆಮಾರಿ         ಈ ಜೀವನ ಮನದಲಿ ತುಂಬಿದೆ ನೂರಾರು ಆಸೆಗಳು ನನಸಾಗಲು ಬಿಡದ ಅಲೆಮಾರಿ ಬದುಕು ಕೆಲಸ ಮಾಡಿದರಷ್ಟೇ ತುಂಬುವುದು ಹೊಟ್ಟೆ ಈ ಜೀವನವ ನಂಬಿ ನಾ ಕೆಟ್ಟೆ ಇರಲೊಂದು ಮನೆಯಿಲ್ಲ  ಜೀವನಕೆ ನೆಲೆಯಿಲ್ಲ ತಿರು ತಿರುಗಿ ಬಳಲುತಿದೆ ಗೊತ್ತು  ಗುರಿಯಿಲ್ಲದೆ ಹಸಿರ  ಬಯಲೇ ಹಾಸಿಗೆ ನೀಲಾಗಾಸವೆ ಹೊದಿಕೆ ನಾನೆಲ್ಲಿರುವೇನೋ ಅದೇ ಆಗಿದೆ  ನನ್ನೂರು  ನಶ್ವರದ ಜೀವನದಲಿ ನೆಲೆಯಿಲ್ಲದ ಬದುಕು ಇಂದು ಇಲ್ಲಿ ನಾಳೆ ಇನ್ನೆಲ್ಲೋ ಇರಬೇಕು ಊರಿಂದ ಊರಿಗೆ ತಿರುಗುತಲಿರುವ  ಅಲೆಮಾರಿ ಜೀವನವೇ ಆಗೋಯ್ತು ಬದುಕು ಶ್ರೀಮತಿ.ಪಂಕಜಾ.ಕೆ. ಮುಡಿಪು