ಮಾದರಿ ಹೆಣ್ಣು
ಈ ಶತಮಾನದ ಹೆಣ್ಣು ಮಾದರಿಯಾಗಿರುವಳು
ಪ್ರತಿಮನೆಯ ಕಣ್ಣು ಇವಳಾಗಿರುವಳು
ಒಳಗೂ ಹೊರಗೂ ದುಡಿಯುವಳು
ಮನೆ ಬೆಳಗುವ ದೀಪವಾಗಿರುವಳು
ಒತ್ತಡಗಳೇನೇ ಇದ್ದರೂ ನಿಭಾಯಿಸುವಳು
ಒಲಿದರೆ ನಾರಿ ಮುನಿದರೆ ಮಾರಿ ಇವಳು
ಯಾವುದಕ್ಕೂ ಹೆದರದ ಗಂಡೆದೆಯವಳು
ಸ್ವಾಭಿಮಾನ ತುಂಬಿ ತುಳುಕುವ ಹೆಣ್ಣಿವಳು
ಅನ್ಯಾಯದ ವಿರುದ್ಧ ಸಿಡಿದೇಳುವಳು
ಗಂಡಿನ ದೌರ್ಜನ್ಯವ ಪ್ರತಿಭಟಿಸುವಳು
ದೇಶಸೇವೆ ಮಾಡಲು ಕಂಕಣಬದ್ಧಳಾಗಿರುವಳು
ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿರುವಳು
ಅಬಲೆ ಎನ್ನುವುದನ್ನು ಮರೆತು ದುಡಿಯುವಳು
ತಾಯಿಅಕ್ಕ ತಂಗಿಯರಾಗಿ ಮಮತೆ ತೋರುವಳು
ಆಗಸದಲ್ಲಿ ಹಾರುವ ಗಗನ ಸಖಿಯಾಗಿರುವಳು
ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವಳು
ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
ಶ್ರೀಮತಿ ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ . ಪೋಸ್ಟ್ಮಾಸ್ಟರ್
ಕುರ್ನಾಡು.ದ.ಕ.
Comments
Post a Comment