Skip to main content

Posts

Showing posts from December, 2019

ಋಣ ವಿಕ್ರಮ ಪತ್ರಿಕೆಗೆ 31..12.2019

.    ಋಣ ಮರಗಿಡಗಳ ಕಡಿದು ನಾಡಾಗಿಸಿಹರು ಮಳೆಯುಮುನಿದು ಬರಡಾಯಿತು ಭೂಮಿ ನೀರ ಸೆಳೆಯು ಅಳಿಯುತಲಿಹುದು ನೀರೆ ನೀರಿಗಾಗಿ ಅಲೆಯುತಲಿರುವಳು ಕೊಡವ ಹಿಡಿದು ನೀರಿಗಾಗಿ ಅಲೆದಾಟ ಎಲ್ಲಿಹುದು ನೀರಸೆಳೆ ತಿಳಿಯದೆ ಸುತ್ತಾಟ ಚಳಿಗಾಲದ ಈ ದಿನಗಳಲಿ ಸೆಖೆಯ ಝಳ  ಭಾಸ್ಕರನು ಸುರಿಸುತಿಹನು ಕೆಂಡದ ಮಳೆ ಹನಿ ನೀರಿಗಾಗಿ ಬಾಯಿ ಬಿಡುವ ಪರಿಸ್ಥಿತಿ ಪ್ರಕೃತಿ ನಾಶದಿಂದಾಗಿದೆ ಈ ಸ್ಥಿತಿ ಪ್ರಕೃತಿ ನಾಶವಾದರೆ ಉಳಿಯಬಹುದೇ ನಮ್ಮ ಜೀವ ಉಳಿಸಿ ಬೆಳೆಸಬೇಕು ಪ್ರಕೃತಿ ಸಿರಿಯ  ಬೇಗ ಸ್ವಚ್ಛ ಗಾಳಿ ಪರಿಸರದಲಿ ವಿಹರಿಸಲು ಆನಂದ ಶುದ್ಧಜಲಮೂಲವ ಉಳಿಸಿದರೆ ಚಂದ ಪ್ರಕೃತಿ ಕೊಟ್ಟ ಕೊಡುಗೆಯಿದು ನಮಗಾಗಿ ಇಡಬಾರದು  ಪ್ರಕೃತಿ ಮಾತೆಯ ಋಣವ ಬಾಕಿಯಾಗಿ ಪಂಕಜಾ.ಕೆ.

ಕರಾಳದಿನ8

ಕರಾಳ ದಿನ ಮನುಜನ ಆಶೆ ಅಕಾಕ್ಷೆಗಳು  ವಿಪರೀತವಾಗಿದೆ ಎಲ್ಲೇ ಮೀರಿದ ನಡತೆ ಎಲ್ಲೆಲ್ಲೂ  ತುಂಬಿದೆ  ಆರಾಜಕತೆಯ ನಡುವೆ ಆತಂತ್ರವಾಗಿದೆ ಜೀವನ ಬಾಳು ದುರ್ಭರವಾಗಿ ಮನಸು ಆತಂಕದ ಗೂಡಾಗಿದೆ ಪ್ರೀತಿ ವಿಶ್ವಾಸ ಮಮತೆ ಕರುಣೆಯ ಸೆಳೆ ಬತ್ತಿದೆ ಮನುಜ ಮನುಜನಲಿ ದ್ವೇಷ ಹೊಗೆಯಾಡಿ ಬಾಳು ಗೋಳಾಗಿದೆ ಮಾನವನ ದುರಾಶೆಗೆ ಪ್ರಕೃತಿ ಮುನಿದಿಹಳೆ? ಎಲ್ಲೆಡೆಯೂ ಅತಿವೃಷ್ಠಿ ಅನಾವೃಷ್ಟಿಗಳ ತಾಂಡವ ನೃತ್ಯ  ಜೀವನದಿ ಸರಾಗವಾಗಲು ಮನುಜ ಬುದ್ಧಿಯ ನೀನೆಂದು ಕಲಿವೆ? ಮೋಹ ಮದ ಮತ್ಸ್ತರ ಗಳ ಪಾಪ  ಕೂಪದಲಿ ಬಿದ್ದುನರಳುತ್ತಿರುವ ಓ ಮನುಜ ನಿನ್ನ ನಿಜ ನೆಲೆಯನು ನೀನೊಮ್ಮೆ ತಿಳಿಯಲಾರೆಯ? ದೇವವನೊಲುಮೆಯ ಪಡೆದುಎಲ್ಲರೊಳಗೊಂದಾಗಿ ಬಾಳಲಾರೆಯ? ಪಂಕಜಾ.ಕೆ

ಗಜಲ್ ಸಂಗಡ

ಗಜಲ್  ನಿನ್ನ  ಸಂಗಡವಿರಲು ಮನಸು ನವಿಲಿನಂತೆ ಕುಣಿಯುತಿದೆ ಸಖಿ ಹೂವ ಕಂಡ ದುಂಬಿಯಂತೆ ಚೆಲ್ಲಾಟವಾಡಬಯಸಿದೆ ಸಖಿ ನೀನೊಂದು ಉತ್ಸ್ಸಾಹದ ಚಿಲುಮೆಯಂತಿರುವೆಯಲ್ಲ ಮನವು  ನಿನ್ನೊಡನಾಟದ ಗುಂಗಿನಲ್ಲಿದೆ ಸಖಿ ನಗುಮುಖದ ಸೌಂದರ್ಯಕ್ಕೆ ಸೋತು ಹೋಗಿರುವೆ ನಾನು ನನ್ನೊಡಲಿಗೆ  ಒಲವ ಸಿಂಚನವ ಉಣಬಡಿಸಿದೆ ಸಖಿ ನಿನ್ನೊಡನಾಟವಿರಲು ಬಾಳು ಸವಿ ಜೇನ ಹೊನಲು ನಿತ್ಯವೂ ನಿನ್ನಧರಗಳ ಸವಿ ಸವಿಯಬೇಕೆನಿಸಿದೆ ಸಖಿ ಪ್ರಕೃತಿಯಲ್ಲಿ ನಲಿಯುವುದು ಮನಕೆ ಮುದ ಕೊಡುತಿದೆ ಸಮಯದ ಪರಿವೆಯಿಲ್ಲದೆ ವಿಹರಿಸಬೇಕೆನಿಸಿದೆ ಸಖಿ ಬಾಳೊಂದು ನಂದನವನವಾಗಿದೆಯಲ್ಲವೇ  ಪಂಕಜಾ? ನಿನ್ನಿಂದ ನನ್ನ  ಜೀವನವು ಸುಖದ ಸುಪ್ಪತ್ತಿಗೆಯಾಗಿದೆ ಸಖಿ ಪಂಕಜಾ.ಕೆ

ಕತ್ತಲೆ ಬೆಳಕಿನಾಟ

ಕತ್ತಲೆ ಬೆಳಕಿನಾಟ  (ಚಿತ್ರ ಕವನ) ರಾತ್ರಿಯ ಕತ್ತಲ ಸೆರಗನು ಸರಿಸಿ ಬೆಳಕಿನ ಕಿರಣವ ಬುವಿಯಲಿ ಹರಡಿ ಬಂದನು ಭರದಲಿ ರವಿತೇಜ ಭೂರಮೆಯೊಡಲಿಗೆ ಚೈತನ್ಯವ ತುಂಬಿ ಮುಚ್ಚಿದ ಅಂಧಾಕಾರವ ಸರಿಸುತ ಬಾಂದಳಕೆಲ್ಲಾ ಬಣ್ಣವ ತುಂಬುತ  ಬಂದ  ನಿತ್ಯವೂ ಜಗವನು ಬೆಳಗುವನಾತ ಕತ್ತಲು ಬೆಳಕಿನ ಆಡುತ ಲಿರುವ ದಣಿವೆ ಇಲ್ಲದೆ ದುಡಿಯುವನೀತ  ಭೂರಮೆಯೊಡಲನು ಪೊರೆಯುವ ದೇವ ಮುಚ್ಚಿದ ಅಂಧಕಾರವ ಸರಿಸುವ ಧೀರ ಚೈತನ್ಯದ ಚಿಲುಮೆಯು ಈ  ಬಾವ ಬಡವ ಧನಿಕನೆಂಬ ಭೇದವು ಇಲ್ಲದೆ ಎಲ್ಲರ ಮನೆ ಮನಗಳ ಒಳಗಡೆ ತೂರಿ ತನ್ನಯ ಕಿರಣಗಳಿಂದ ನೇವರಿಸುವ ಸ್ನೇಹಿ ರಾತ್ರಿಯ ಕತ್ತಲ ಸೆರಗನು ಸರಿಸಿ ಬೆಳಕಿನ ಕಿರಣವ ಎಲ್ಲೆಡೆ ಚೆಲ್ಲುತ ಬರುತಿರಲು ಮುತ್ತಿತು ರವಿಯನು ಕೇತು ಹಿಡಿಯಿತು ಸೂರ್ಯನಿಗೆ ಗ್ರಹಣ ಗಿಡಮರಗಳು  ಸ್ತಬ್ಧ ವಾಗುತಲಿರಲು ಗಾಳಿಯು ತನ್ನಯ ಚಲನೆಯ ನಿಲ್ಲಿಸಿತು ಎಲ್ಲೆಡೆ ಮುಸುಕಿತು ಮುಸ್ಸಂಜೆಯ ಕತ್ತಲು ಕ್ಷಣದಲಿ ಆಯಿತು ಮೋಕ್ಷ   ಸೃಷ್ಟಿಯ ಸೊಬಗಿದು ಚೆಲುವಿನ ನೋಟ ಬಾನಿಗೆ ಕಂಕಣ ತೊಡಿಸುವ ಆಟ ಮೈಯನು ಮರೆಸುವ  ಅಕಾಶಕಾಯಗಳಾಟ   ಪಂಕಜಾ. ಕೆ

ಚುಟುಕು. ಅನ್ನದಾತ

ಅನ್ನದಾತ (ಚುಟುಕು) ಭೂತಾಯಿ ಒಡಲಲ್ಲಿ ಹಸಿರು ಬೆಳೆಸುವಾತ ಕಾಯಕವೇ ಕೈಲಾಸ ಎನುತ ದುಡಿಯುವಾತ ಕಷ್ಟ ನಷ್ಟಗಳಿಗೆ  ಎದೆಗುಂದದ ಧೀರನಾತ ಉಣಿಸುವನು ನಮಗೆ ಈತ ಅನ್ನದಾತ ಪಂಕಜಾ.ಕೆ

ಬೆಳಗಿನ ಬೆರಗು

ಬೆಳಗಿನ ಬೆರಗು ಮೂಡಣ ದಿ ರವಿ ಮೂಡಿದಾಗ ಪ್ರಕೃತಿ ಮಾತೆಯ ನಲಿವಿನ ಬೆರಗು ಮನದಿ ಮೂಡುವ ಭಾವನೆಗಳ  ಸಂತೆಯಲಿ  ಹೊಸದೊಂದು ಕಾವ್ಯದ  ಗುನುಗು ಜೀವನದಿ ಉಕ್ಕೇರಿ  ಕುಣಿದಾಗ ಸಂತಸದ ಹೊನಲು ನೆಳಲು ಬೆಳಕಿನಾಟದಲಿ ಜಗಕೊಂದು ಸೆರಗು ಹೂವ ತೇರನು ಕಂಡು ಮನದಲ್ಲಿ ನಲಿವು ರಾಗ ಅನುರಾಗದಲಿ ತೇಲಿ ಮುಳುಗುತಿರಲು ಮನವೊಂದು ಕಡಲು ಬಾಳೊಂದು  ಚೆಲುತೋಟವಾಗಿದೆ ತುಂಬಿದೆ ಅದರಲ್ಲಿ ಸವಿಜೇನ ಹೊನಲು ಪಂಕಜಾ.ಕೆ.

ಕಾವ್ಯಗಂಗೆ

ಕಾವ್ಯಗಂಗೆ ಅಗಣಿತ  ಮಹಿಮನೆ ಅನುದಿನ ನೆನೆಯಲು ಅನುರತ ಕಾಯುವೆ ನೀ ದೇವ ಅಕ್ಷರ ದೀಪವ ಬೆಳಗುತ ಮನದಲಿ ಕಾವ್ಯದ ರಚನೆಗೆ ಕೊಡು ಶಕ್ತಿ ಪದಪುಂಜಗಳ ಸೇರಿಸಿ  ರಚಿಸುವೆ ಚಂದದ ಕಾವ್ಯವ ಮನದುಂಬಿ ಹಾಡುತ ಪಾಡುತ  ಪೊಗಳುವೆ ನಿನ್ನನು ಕೊಡು ನೀ ನನಗೆ ಸದ್ಬುದ್ಧಿ ಅಕ್ಷರ ದೇವಿಯ ಕರಣೆಯ ಹೊನಲು ಹರಿಯಲು ಹೊಮ್ಮಿತು ಕಾವ್ಯಸುಧೆ ಅಗಣಿತ ತಾರೆಗಳು ಮಿನುಗುತ ಸೆಳೆದವು ಕಾವ್ಯದ ಲೋಕಕೆ ದಿನ ದಿನವು ಚಂದದ ಪ್ರಕೃತಿಯ  ಅಂದದ ನೋಟವು ಮನವನು ಸೆಳೆಯುತ ಮುದತಂತು  ಮೂಡಿತು ಅಂದದ ಕವಿತೆಯು ಮನದಲಿ ಸುರಿಯಿತು ಕಾವ್ಯದ ರಸಗಂಗೆ ಪಂಕಜಾ.ಕೆ

ವಚನ..2

ವಚನ ಹೆಣ್ಣು ಭ್ರೂಣಹತ್ಯೆಯ ಮಾಡಿ ಗಂಡುಮಗುವನ್ನು ಪಡೆದು ಮಗನ ಮದುವೆಗೆ ಈಗ ಹೆಣ್ಣು ಹುಡುಕುವರಯ್ಯ ಜಗದ ಜನರ ನೀತಿಗೆ ಎಷ್ಟು ಬುದ್ದಿಯ ಹೇಳಿದರೇನೂ ಪಂಕಜಾರಾಮ ಪಂಕಜಾ.ಕೆ

ವಚನ..3

ವಚನ ಹಸಿರು ಕಾಡನು ಕಡಿದೆಸೆದು ಕಾಂಕ್ರೀಟ್ ಕಾಡು ಕಟ್ಟುವರಲ್ಲ ಭೂಮಿತಾಯಿಯ ಒಡಲು ಬಗೆದು ಸಿಹಿನೀರ ಒರತೆಯನು ಬತ್ತಿಸುವರಲ್ಲ ಭೂತಾಯಿಯ ನಿಟ್ಟುಸಿರು  ಬಡಬಾಗ್ನಿಯಾಗಿ ಕಾಡಿರಲು ನೀರು  ನೀರು ಎನುತ ಬಾಯ್ಬಿಡುತಿರುವರಲ್ಲ ಪಂಕಜಾರಾಮ ಪಂಕಜಾ .ಕೆ

ಗಜಲ್ ಅಂಬಾರಿ ಬಗ್ಗೆ

ಗಜಲ್  ಅಂಬಾರಿಯನು ಹೊತ್ತ ಜಂಬೂ ಸವಾರಿ ನೋಡೋಣವೇನೇ ಸಖಿ ತಿರುಗುವ ರಾಟೆಯಲಿ ಜತೆಯಾಗಿ ಕುಳಿತುಕೊಳ್ಳೋಣವೇನೇ ಸಖಿ ವರ್ಷ ವರ್ಷವೂ ಜಾತ್ರೆ ಮೇಳಗಳು  ಅಲ್ಲಲ್ಲಿ ಬರುತಿದೆ ಸಂತೆಯಲಿ ಸುತ್ತಾಡುತ  ನಲಿಯೋಣವೇನೇ ಸಖಿ ವರುಷಪೂರ್ತಿ ಸಂಭ್ರಮದ ಹಬ್ಬಗಳು  ಎಲ್ಲೆಡೆಯೂ ಇರುವವು ನಿನ್ನೊಡನೆ ನಲಿದಾಡಲು   ನೆಪಬೇಕಲ್ಲವೇನೇ ಸಖಿ ಅಷ್ಟು ದೂರನಿಂತೇಕೆ  ನಿತ್ಯ ಕಾಡುವೆ ನೀನು  ಹೇಳು ಇನ್ನಷ್ಟು ಹತ್ತಿರಬರಲು  ಭಯಪಡಬಹುದೇನೇ ಸಖಿ ನೋಡು ಬಾನಲ್ಲಿ ಚಂದಿರ ಎಷ್ಟೊಂದು  ನಗುತಿರುವನು ನಮ್ಮ ಸರಸ ಅವನಿಗೂ ಖುಷಿ ಕೊಟ್ಟಿತೇನೇ ಸಖಿ ಹೊಸ ಬಟ್ಟೆಯನ್ನು ಉಟ್ಟು ಸಂಭ್ರಮದಿಂದ ನಲಿದಾಡುವೆಯಲ್ಲ  ನನ್ನ ನೋಡಿದಾಗಲೆಲ್ಲಾ ಒರೆನೋಟವ ಬೀರುವೆಯೇನೇ ಸಖಿ ನಿನ್ನ ನೆನಪಲ್ಲಿ ನಿತ್ಯ ಮುಳುಗಿರುವೆ ನಾನು ಪಂಕಜಾ ಬಾಳ ಪಯಣದಲಿ ಜತೆಯಾಗಿ ಸಾಗೋಣವೇನೇ ಸಖಿ ಪಂಕಜಾ.ಕೆ.

ವಚನ...1

ವಚನ ನೂರಾರು ದೇವತೆಗಳ ವಾಸಸ್ಥಾನ ಗೋವು ಒಣಹುಲ್ಲು ತಿಂದರೂ ಕೊಡುವುದು ಅಮೃತ ಸಮಾನ ಹಾಲು ತಾಯ ಹಾಲಿಗೆ ಸಮಾನ ಗೋವಿನ ಹಾಲು ಬರಡಾಯಿತೆಂದುಆದನು ಕಸಾಯಿಖಾನೆಗೆ ಅಟ್ಟುವರಯ್ಯ ಕೃತಜ್ಞತೆಯಿಲ್ಲದ  ನರ ರಾಕ್ಷಸ ಮನುಜರಿಗೆ ಏನೆನ್ನಲಿ ಪಂಕಜಾರಾಮ ಪಂಕಜಾ.ಕೆ

ಛಲ

ಛಲ  ಹಕ್ಕಿಗಳೆರಡು  ಚಿಲಿಪಿಲಿ ಗುಟ್ಟುತ ಚಂದದ ಗೂಡನು ಕಟ್ಟಿದವು ಹಾರುತ ನಲಿಯುತ ಹಾಡನು ಹಾಡುತ  ಅಗಸದೆತ್ತರ ಹಾರಿದವು ಚಂದದ ಗೂಡನು ಅಂದದಿ ಕಟ್ಟುತ  ಜತೆಯಲಿ ನಲಿದವು ಮೋದದಲಿ  ಗೂಡಿನ ಒಳಗಡೆ  ಬೆಚ್ಚಗೆ ಕುಳಿತು ಕಳೆದವು ದಿನಗಳು ಕ್ಷಣದಲ್ಲಿ ಮೊಟ್ಟೆಯ ಇಟ್ಟು ಕಾವನು ಕೊಟ್ಟು ಮರಿಗಳ ಜತೆಯಲಿ ಇರುತಿರಲು ತಂಪಿನ ಗಾಳಿಯು ಥಟ್ಟನೆ ಬರಲು ಪಟ್ಟನೆ ಬಿದ್ದಿತು ಚೆಲುಗೂಡು ಮರಿಗಳ ತಬ್ಬುತ ನೋವಲಿ ನರಳುತ ಹಕ್ಕಿಗಳುರುಳಿದವು ಧರೆಯೆಡೆಗೆ ಬಿದ್ದರೂ ಎದ್ದು ಬೇಗದಲಿ ನಿಂತು ಎದುರಿಸಿ ಬಾಳಿತು ಛಲದಿಂದ ಪಂಕಜಾ.ಕೆ.

ಗಜಲ್ ಮುನಿಸೇತಕೆ. 2

ಕಾವ್ಯಾಂತರಂಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನನ್ನ ಗಜಲ್     ಗಜಲ್ ಮುನಿಸೇತಕೆ ಮುದದಿ  ಮಲ್ಲಿಗೆ ಮುಡಿಸಿರಲು ಸಖಿ ಕನಸೇತಕೆ  ಮನದಿ  ನೆಮ್ಮದಿ ಇರದಿರಲು ಸಖಿ ಬಾನಂಚಿನಲಿ ರವಿ ಹೊಳೆಯುತಿರುವನಲ್ಲವೇ? ಕಾತರಿಸಿದೆ ಕಣ್ಣುಗಳು ನಿನ್ನ ನಗುಮುಖವ ನೋಡಲು ಸಖಿ ಒಲಿಸಿಕೊಳ್ಳಲು ಬರಲೆಂದು ಕಾದಿರುವೆಯಾ  ಹೇಳು? ಕಾಲುಗಳು ಮುಷ್ಕರ ಹೂಡಿವೆ ನೀನು ನಗದಿರಲು ಸಖಿ ನೀಲಾಗಾಸದಲಿ ಚಂದಿರ ತಾರೆಗಳನೊಡನಾಡುತಿರುವನಲ್ಲವೇ? ಮನಸು ಬಯಸಿದೆ ನಿನ್ನೊಡನೆ ವಿಹರಿಸಲು ಸಖಿ ಬಾನಲಿ ಕರಿ ಮೋಡಗಳು ಕಣ್ಣು ಮುಚ್ಚಾಲೆ ಯಾಡುತಿವೆಯೇಕೆ? ನಮ್ಮಿಬ್ಬರ  ಒಡನಾಟ ಸರಾಗವಾಗಿರಲು  ಸಖಿ ತಂಗಾಳಿಯು ಹಿತವಾಗಿ. ಬೀಸುತಿದೆಯಲ್ಲವೇ? ಮನವು ಆಶಿಸುತ್ತಿದೆ ಬೆಳದಿಂಗಳೂಟದ ಸವಿ ಸವಿಯಲು ಸಖಿ ನೈದಿಲೆಗಳು ಕೊಳದಲ್ಲಿ ಅರಳಿದೆಯಲ್ಲವೇ ಪಂಕಜಾ? ನಮ್ಮೊಡನಾಟವ ಕಂಡು ನಲಿಯಲು ಸಖಿ ಪಂಕಜಾ.ಕೆ.

ಗಜಲ್ ಮುನಿಸೇ ತಕೆ

ಗಜಲ್ ಮುನಿಸೇತಕೆ ಮುದದಿ  ಮಲ್ಲಿಗೆ ಮುಡಿಸಿರಲು ಸಖಿ ಕನಸೇತಕೆ  ಮನದಿ  ನೆಮ್ಮದಿ ಇರದಿರಲು ಸಖಿ ಬಾನಂಚಿನಲಿ ರವಿ ಹೊಳೆಯುತಿರುವನು ನೋಡು ಕಾತರಿಸಿದೆ ಕಣ್ಣುಗಳು ನಿನ್ನ ನಗುಮುಖವ ನೋಡಲು ಸಖಿ ಒಲಿಸಿಕೊಳ್ಳಲು ಬರಲೆಂದು ಕಾದಿರುವೆಯಾ  ಹೇಳು ಕಾಲುಗಳು ಮುಷ್ಕರ ಹೂಡಿವೆ ನೀನು ನಗದಿರಲು ಸಖಿ ನೀಲಾಗಾಸದಲಿ ಚಂದಿರ ತಾರೆಗಳನೊಡನಾಡುತಿರುವನು ಮನಸು ಬಯಸಿದೆ ನಿನ್ನೊಡನೆ ವಿಹರಿಸಲು ಸಖಿ ಬಾನಲಿ ಕರಿ ಮೋಡಗಳು ಕಣ್ಣು ಮುಚ್ಚಾಲೆ ಯಾಡುತಿವೆ ನಮ್ಮಿಬ್ಬರ  ಒಡನಾಟ ಸರಾಗವಾಗಿರಲು  ಸಖಿ ತಂಗಾಳಿಯು ಹಿತವಾಗಿ. ಬೀಸುತಿದೆಯಲ್ಲವೇ ಮನವು ಆಶಿಸುತ್ತಿದೆ ಬೆಳದಿಂಗಳೂಟದ ಸವಿ ಸವಿಯಲು ಸಖಿ ನೈದಿಲೆಗಳು ಕೊಳದಲ್ಲಿ ಅರಳಿದೆಯಲ್ಲವೇ ಪಂಕಜಾ ನಮ್ಮೊಡನಾಟವ ಕಂಡು ನಲಿಯಲು ಸಖಿ ಪಂಕಜಾ.ಕೆ.

ಹಸಿರು ಜೀವದುಸಿರು

ಹಸಿರು ಜೀವದುಸಿರು  ಹಸಿರಿನ ಕಾಡಲಿ ವನಸಿರಿ ಮದ್ಯದಿ ತಣ್ಣನೆ ಗಾಳಿಯು ಬೀಸುತಿದೆ ಮೈಮನಕೆಲ್ಲಾ ಮುದವನು ತುಂಬುತ ಮನಸಿನ ತಾಪವ ಕಳೆಯುತಿದೆ ಹಸಿರಿನ ಬನದಲಿ ಉಸಿರಿನ ತಂಪಲಿ ಮೈಮನವೆಲ್ಲ ನಲಿಯುತಿದೆ ಕಣ್ಮನ ತುಂಬುವ ಕಾನನ ಸೊಬಗಲಿ ಮನಸಲಿ ಕನಸದು ಅರಳುತಿದೆ ಅಂದದ ಪ್ರಕೃತಿ ಚಂದದಿ ಅರಳಿ ಚೆಲುವಿನ ಕನಸನು ಬಿತ್ತುತಿದೆ ಹಸಿರಿನ ಸೆರಗನು ಹಾಸುತ ಪ್ರಕೃತಿಯು ಹೂಮನಕೆಲ್ಲ ಮುದವನು ತುಂಬುತಿದೆ ಪಂಕಜಾ.ಕೆ

ತಿಂಗಳ ಬೆಳಕು

ತಿಂಗಳ ಬೆಳಕು ತಿಂಗಳ ಬೆಳಕಲಿ ಅಂಗಳ ಬದಿಯಲಿ  ಹಾಲಿನ ಹೊಳೆಯೇ ಹರಿಯುತಿದೆ ತಂಪಿನ  ಕಿರಣವು ಇಂಪಿನ ಗಾನವು ಮೈಮನವನ್ನು ಮರೆಸುತಿದೆ ಚಂದದ ಹೂಗಳು ಅಂದದಿ ಅರಳುತ ಕಂಪನು ಎಲ್ಲೆಡೆ ಹರಡುತಿದೆ ಕೊಳದಲಿ ಅರಳಿದ ತಳದಲಿ ನಲಿದಿಹ ನೈದಿಲೆ ನಗುವನು ಬೀರುತಿದೆ ಚಂದಿರ ಬರಲು ಕಂದರ ವಿರಲು ಮನದಲಿ ಸಂತಶ ತುಂಬುತಿದೆ ಬಾನಲಿ ಓಡುತ ಎಡೆಯಲಿ ಮಿನುಗುತ ರಸಿಕರ ಮನವನು ಸೆಳೆಯುತಿದೆ ಪಂಕಜಾ.ಕೆ

ಕರ್ನಾಟಕದ ವೀರ ವೀರ ಮಣಿಯರು

ಕನ್ನಡ ರಾಜ್ಯೋತ್ಸವ ಕವನ ಸ್ಪರ್ಧೆ ಗಾಗಿ ********************* ಕರ್ನಾಟಕದ ವೀರರಮಣಿಯರು ******************* ಕೇಳಿರಿ ಗೆಳೆಯರೆಲ್ಲರೆ  ಹೇಳುವೆ ನಾನು ಕನ್ನಡನಾಡನಾಳಿದ ವೀರ ವನಿತೆಯರ ಚರಿತೆಯನು ವೀರ ವನಿತೆಯರು ಆಳಿದ ಬೀಡಿದು  ಕನ್ನಡ ಭಾಷೆಯ ಆಡುವ ನಾಡಿದು ಗಂಡು ಮೆಟ್ಟಿದ ನಾಡಿನ ವೀರನಾರಿಯರು ನಾಡ ರಕ್ಷಣೆಗೆ ಹೋರಾಡಿದವರು ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರ ಮೂರ್ತಿ ವೀರ ಧೀರ  ಮಹಿಳೆಯರಿವರು ಮೈನವಿರೇಳಿಸುವ ಅವರ ಕ್ಷಾತ್ರತೇಜದಿ ಧನ್ಯವಾಯಿತು ನಮ್ಮ ಈ ಕನ್ನಡನಾಡು ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯದ ಕಿಡಿಯನು ಹಚ್ಚಿದ ಮಾತೆ ಧೈರ್ಯಸಾಹಸಗಳ ತೋರಿದ ಕಿಚ್ಚಿನಕಿಡಿ ಬ್ರಿಟಿಷರ ವಿರುದ್ಧ ಹೋರಾಡಿದ ಗಂಡುಗಲಿ ಧೈರ್ಯಸ್ಥೈರ್ಯ ದ ವೀರ ಮಹಿಳೆ ಮರಾಠರನ್ನು  ಸದೆಬಡಿದ ಕೆಚ್ಚೆದೆಯ ಕಲಿ ಶಿವಾಜಿಯ  ಸೊಕ್ಕನು ಮುರಿದಳು ಇವಳು ರಣಚಂಡಿಯ ಅವತಾರವೇ ಈಕೆ ಬೆಳವಾಡಿಯ ಮಲ್ಲಮ್ಮ ಮೊಘಲರಾಜ ಔರಂಗಜೇಬನು  ದಂಡೆತ್ತಿ ಬಂದನು ಕೆಳದಿಯ ಕಡೆಗೆ ಕೆಚ್ಚೆದೆಯಿಂದ  ದುರ್ಗಿಯ ತೆರದಲಿ ವೈರಿಗಳ ಸದೆಬಡಿದ ಧೀರೆ ಕೆಳದಿಯ ರಾಣಿ ಚೆನ್ನಮ್ಮ ಪೋರ್ಚುಗೀಸರಿಗೆ ಸಡ್ಡು ಹೊಡೆದು ಉಳ್ಳಾಲದಿ ಕ್ರಾಂತಿ ಕಿಡಿಯನು ಹಚ್ಚಿದಳು ಕನ್ನಡ ಮಣ್ಣಿನ ಹೆಮ್ಮೆಯ ಮಗಳಿವಳು ಅವಳೇ  ಉಳ್ಳಾಲದ ರಾಣಿ ಅಬ್ಬಕ್ಕ ಚಿತ್ರದುರ್ಗದ ಕಲ್ಲಿನ ಕೋಟೆ ಭೇದಿಸಲಸಾಧ್ಯದ ಉಕ್ಕಿನ ಕೋಟೆ ರಹಸ್ಯ ದಾರಿಯಲಿ ನುಸುಳುವ ವೈರಿಯ ಕಂಡು ಒನಕೆಯ ಬೀಸಿ ಕೊಂದಳು ನಾರಿ ಕೋಟೆಯ ಉಳಿಸಿದ ಓಬವ್ವ ನೊಂದವರ

ನನ್ನ ಪರಿಚಯ ಗಜಲ್

ನನ್ನ ಪರಿಚಯ ಗಜಲ್ ನಾನಾಗಿದ್ದೆ ಅಂಚೆ ಇಲಾಖೆಯ  ದಕ್ಷ ಕೆಲಸಗಾತಿ  ಸ್ವಯಂ  ನಿವೃತ್ತಿಯ  ನಂತರ ಸಂಪೂರ್ಣ  ಮನೆಯೊಡತಿ  ನನ್ನ ಮೊದಲ ಕವನ ಸಂಕಲನ ಸಾವಿತ್ರಿ ಬಿಡುಗಡೆಯ ಮಾಡಿ ನಾನಾದೆ ಕವನಗಳೊಡತಿ  ಹೊಲಿಗೆ  ಕಸೂತಿ ಕೈತೋಟ ಮನೆವಾರ್ತೆ ನನ್ನ ಹಾಬಿ ಮನದಲ್ಲಿ ಬರೆವ ತುಡಿತವಿರಲು ನಾ ಇಂದು ಬರಹಗಾತಿ ದಕ್ಷಿಣ ಕನ್ನಡದ  ಮುಡಿಪು ಮೆಚ್ಚಿನ  ನನ್ನೂರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಸಾವಿತ್ರಿ ದಂಪತಿಗಳ  ಪ್ರೇಮ ಜ್ಯೋತಿ ಶ್ರೀ ರಾಮನಂತಿರುವ ಪ್ರೀತಿಸುವ ಪತಿ ಕಬ್ಬಿನಹಿತ್ತಿಲ ರಾಮ ಗುರು ಹಿರಿಯರ ಶುಭಾಶೀರ್ವಾದದಲಿ ನಾನವರ ಸತಿ ಅರತಿಗೊಬ್ಬಳು  ಕೀರ್ತಿಗೊಬ್ಬ ಇಬ್ಬರು ಮಕ್ಕಳ ತಾಯಿ ತಿಳಿದುಕೊಳ್ಳಬೇಕೆನ್ನುವ ತುಡಿತವಿರುವ ಕನಸುಗಾತಿ ಮನೆ ಮಂದಿಯ ನಿರಂತರ ಪ್ರೋತ್ಸಾಹವಿಹುದು ಪಂಕಜಗೆ ಇಂದೀಗ ಕಲಿತು ಸಾಧಿಸುವ ಆಸಕ್ತಿ ಇರುವ ಛಲಗಾತಿ ಪಂಕಜಾ.ಕೆ.

ರೈತ ಶಿಶು ಗೀತೆ

ರೈತ    (ಶಿಶುಗೀತೆ) ಕೋಳಿ ಕೂಗುವ ಮುನ್ನ ನೇಗಿಲನು ಹೊತ್ತು ನಡೆಯುವನು ಗದ್ದೆಯೆಡೆ ನಮ್ಮ ರೈತ ಗದ್ದೆಯನ್ನು ಉಳುತ  ಓ ಬೇಲೆ  ಹಾಡುತ ದುಡಿಯುವನು ಮಣ್ಣಿನಲ್ಲಿ ನಮ್ಮ ರೈತ ಬೀಜವನ್ನು  ಹೊಲದಲ್ಲಿ ಬಿತ್ತಿ ಮೊಳಕೆಬರಲೆಂದು ಸುಡುಮಣ್ಣು ಎರಚಿ ಹಕ್ಕಿಗಳ ಪಾಲಗದಂತೆ ಕಾಯುವನು ರೈತ ಬೆಳೆ ಬೆಳೆದು ಹೊನ್ನ ತೆನೆಯಾಗಿ ಕಾಳು ತುಂಬಿದ ಗದ್ದೆಯನು ಕಂಡು ಮೈಮರೆತು ಭೂತಾಯಿ ಒಡಲಿಗೆ  ನಮಿಸುವೆನು ನಮ್ಮ  ರೈತ ಅನ್ನವನ್ನು ಬೆಳೆಯುತ್ತ ಉಣಿಸುವನು ನಮಗೆಲ್ಲ ದೇಶದಾ ಬೆನ್ನೆಲುಬು ನಮ್ಮ ರೈತ ಈತನೇ ನಮ್ಮ ಜೀವನದ ಆದರ್ಶ ದುಡಿಮೆಯೇ ದೇವರೆಂದು ತಿಳಿದಾತ ದುಡಿಮೆಯಲಿ ತೃಪ್ತಿ  ಪಡುವಾತ ವಂದಿಸುವೆ ನಿನಗೆ ಓ ಅನ್ನದಾತ ಪಂಕಜಾ.ಕೆ

ನ್ಯಾನೊ ಕಥೆ ಭಾಷಣ

(ನ್ಯಾನೊ ಕಥೆ  )ಭಾಷಣ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ ಅವರ ರಕ್ಷಣೆ ನಮ್ಮ ಹೊಣೆ ಎಂದು ಭರ್ಜರಿ ಭಾಷಣ ಬಿಗಿದು ಚಪ್ಪಾಳೆ ಗಿಟ್ಟಿಸುತ್ತಿದ್ದ ಆತ ಚಿಕನ್ ಫ್ರೈ ಮಾಡಲಿಲ್ಲವೆಂದು ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪಂಕಜಾ.ಕೆ.

ಗಜಲ್ ಕಡಲು

ಗಜಲ್   ( ಕಡಲು ವಿಷಯದ ಬಗ್ಗೆ) ಅಂತರಾಳದಲಿ ಭಾವನೆಗಳು ಬೋರ್ಗರೆಯುತಿದೆ ಗೆಳತಿ ಮುಖವು ಕಡಲಾಳದ ನೀರಿನ ತೆರದಿ ಶಾಂತವಾಗಿದೆ ಗೆಳತಿ. ನೆನಪುಗಳ ಭಾರದಿಂದ ಜರ್ಝರಿತವಾಗಿದೆ ಮನ ಚಿಂತೆಗಳು ಮನಸಿನಾಳವ ಕೆದಕಿ ರಾಡಿಗೊಳಿಸಿದೆ ಗೆಳತಿ ಸಾಗರದ  ಅಲೆಯಂತೆ ಜೀವನದ ತೊರೆಗಳು ಏರಿಳಿಯುತಿದೆ ಒಡಲಲ್ಲಿ ತುಂಬಿರುವ ನೋವನು ಹಂಚಬೇಕೆನಿಸಿದೆ ಗೆಳತಿ ಕ್ರೂರ  ಮೃಗಗಳಂತಿರುವ ಮನುಜರ  ಕಂಡು ನೆತ್ತರು ಕುದಿಯುತಿದೆ ಹೆಣ್ಣಿನ  ಮೇಲೆ  ಏಕಿಷ್ಟು  ದೌರ್ಜನ್ಯ ವಾಗುತಿದೆ  ಗೆಳತಿ ಹೆಣ್ಣಿಲ್ಲದ  ಜೀವನ ಪರಿಪೂರ್ಣವಾಗಲಾರದು ಅಲ್ಲವೇ  ಕಣ್ಣಿದ್ದೂ ಕುರುಡರಾಗಿರುವ  ಕಾಮಾಂಧರಿಗೆ ಶಿಕ್ಷೆಯಾಗಬೇಕಾಗಿದೆ ಗೆಳತಿ ನಿತ್ಯವೂ ಕಾಮಾಂಧರ ಆರ್ಭಟವ ನೋಡಿ ಕಲ್ಲಾಗಿದೆ ಮನಸು ಸಮಜಘಾತುಕರ ಸಂತತಿಯನ್ನೇ ಹೊಸಕಿ ಹಾಕಬೇಕಿದೆ ಗೆಳತಿ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಸಬೇಕು ಪಂಕಜಾ ಒಡಹುಟ್ಟಿದವರಂತೆ ಅವರನ್ನು ರಕ್ಷಿಸಬೇಕಾಗಿದೆ ಗೆಳತಿ ಪಂಕಜಾ.ಕೆ

ಬದುಕು ಬವಣೆ

ಬದುಕು ....ಬವಣೆ ಹಚ್ಚಿದ  ಒಲೆಯಲ್ಲಿ ಉರಿಯುತ್ತಿರುವ ಬೆಂಕಿಯಂತೆ ಉರಿಯುತಿದೆ ಮುದಿ ಜೀವಗಳ ಮನಸು ಪೇರಿಸಿಟ್ಟ ಪಾತ್ರೆಗಳು ಖಾಲಿಯಾಗಿರುವಂತೆ ಖಾಲಿಯಾಗಿದೆ ಮನೆಯೂ ಸ್ವಾತಂತ್ರ್ಯಹೋರಾಟಗಾರನೆಂಬ ಹೆಗ್ಗಳಿಕೆ ಬಡತನದ ಬವಣೆಯಲಿ ನಲುಗಿ  ಜೀವನ ಸಾಗಿಸುವ ಸೂತ್ರಗಾರ ರೊಟ್ಟಿ ಬೇಯಿಸುತ ಕುಳಿತಿಹಳು ಮಡದಿ ಮನದಲ್ಲಿ ನೂರಾರು ಚಿಂತೆಗಳ ತುಂಬಿ ಮನೆ ನಡೆಸುವ ಹೊಣೆ ಹೆಗಲೇರಿ ಹರಡಿರುವ  ಖಾಲಿ ತಟ್ಟೆಗಳು ತಿಳಿಸುತ್ತಿದೆ ಬದುಕ   ಬವಣೆಗಳ ಬದುಕು ತಿಳಿಯಾಗುವುದೆಂದಿಗೋ  ಕಷ್ಟದಲ್ಲೂ ಜತೆಗಿರುವ ಸಂಗಾತಿ ಹೊಂದಾಣಿಕೆಯಲಿ ಕಳೆಯುತಿದೆ ಜೀವನ ಪ್ರೀತಿಗಿಲ್ಲಿ  ಇಲ್ಲ ಕೊರತೆ ಎಂದಿಗೂ ಪಂಕಜಾ.ಕೆ.

ಗಜಲ್ ನಿನಗಾಗಿ 2

ದತ್ತ ಪದದ ಗಜಲ್  ನನ್ನ ಮುಖದಲಿ ನಗುವ ಚಿಲುಮೆ ನಿನಗಾಗಿ ಕಣ್ಣಿನಲ್ಲಿ ಸೂಸುವ ಒಲುಮೆ ನಿನಗಾಗಿ ನನ್ನ ಪ್ರೀತಿಯ ಆಳ ಹೇಗೆ ತಿಳಿಸಲಿ ಹೇಳು? ನಾಡಿ ಮಿಡಿತವೂ ಒಲವ  ಸೂಸುತಿದೆ ಮತ್ತೊಮ್ಮೆ ನಿನಗಾಗಿ ನಗು ನಗುತ್ತಾ ಇದ್ದರೆ ಬಾಳು ಸುಂದರ ,ಅಲ್ಲವೇ? ಹಿತವಾಗಿ  ನಗಬಾರದೆ ನೀನೊಮ್ಮೆ  ನಿನಗಾಗಿ ನೀನಿಲ್ಲದೆ  ಮನೆ ಮನಸು ಶೂನ್ಯವಾಗಿದೆ ಬಾಡಿದ ನನ್ನ ಮುಖವನ್ನು ನೋಡಬಾರದೆ ಈಗೊಮ್ಮೆ ನನಗಾಗಿ ಬಾಳ ತೇರನು ಏರಿ ಜತೆಯಾಗಿ  ಸಾಗೋಣ ವೆಂದಿದ್ದೆಯಲ್ಲಪಂಕಜಾ ನನ್ನೊಡನಾಟವೂ ಬೇಡವೇ ಇನ್ನೊಮ್ಮೆ ನಿನಗಾಗಿ ಪಂಕಜಾ ಕೆ

ಗಜಲ್ ನಿನಗಾಗಿ

ದತ್ತ ಪದದ ಗಜಲ್ ಕಂಗಳ ಕಾಂತಿಯಲಿ ತುಂಬಿದೆ ಒಲುಮೆ ನಿನಗಾಗಿ ಪ್ರೀತಿಯಲಿ ಎಂದೆಂದೂ ಇರದು ಕಡಿಮೆ ನಿನಗಾಗಿ ಜತೆಯಿರಲು ನವೋಲ್ಲಾಸದಿ ನಲಿಯಬೇಕು ಮನಸು ಸಂತಸದಲ್ಲಿದ್ದರೆ  ಗರಿಮೆ  ನಿನಗಾಗಿ ನಿನ್ನೊಡನಾಟವು ಮನಕೆ ತುಂಬುತಿದೆ ಉಲ್ಲಾಸ ನಾನಿಂದು ಉತ್ಸ್ಸಾಹದ ಚಿಲುಮೆ ನಿನಗಾಗಿ ಬಾಳ ದೋಣಿಯಲಿ ಕಷ್ಟಗಳು ತುಂಬಿದೆ ನೋಡು ನಗು ನಗುತ್ತಾ ಇದ್ದರೆ ಅದೇ ಹಿರಿಮೆ ನಿನಗಾಗಿ ನೀ ಜತೆಯಲ್ಲಿದ್ದರೆ ಬಾಳು ಸೊಗಸು ಪಂಕಜಾ ಮನಸು  ಆಗಿದೆ ಕುದಿಯುವ ಕುಲುಮೆ ನಿನಗಾಗಿ ಪಂಕಜಾ.ಕೆ.

ಸುಪ್ರಭಾತ ಹವ್ಯಕ ಕವನ

ಸುಪ್ರಭಾತ  (ಹವಿ ಕನ್ನಡದ ಕವನ) ಆಕಾಶದ ಮೂಡು ಹೊಡೆಲಿ ಮಂಜಿನ ಹನಿಯ ನೂಕಿ ಸೂರ್ಯ ಚಾಮಿ  ಬಂದ ಕೆಂಪು ಬಣ್ಣದ ಚೆಂಡಿನ ಹಾಂಗೆ ಉದಿಯಾತು ಹೇಳಿ ಅವ ಸುಪ್ರಭಾತವ ಹಾಡಿದ ಆಕಾಶದ ತುಂಬಾ ಬಣ್ಣ ನೋಡುಲೆ  ಸಾಲ ಎರಡು ಕಣ್ಣ ಹಕ್ಕಿಗ ಎಲ್ಲಾ ಜಂಬಾರಕ್ಕೆ ಹೆರಟ ವು ಮದುವೆದಿಬ್ಬಣ ಹೋಪ ಹಾಂಗೆ ತಂಪುಗಾಳಿ ಲಾಯಿಕಕ್ಕೆ ಬೀಸುತ್ತು ಕೋಗಿಲೆಚಂದಕ್ಕೆಪದ್ಯಹೇಳುತ್ತಾ ಇದ್ದು ಉದಿಯಪ್ಪಗ ಗಾಳಿಗೆರಜಾ ನಡೆಯಕ್ಕೂ ಸೂರ್ಯ ಚಾಮಿಯ ಎಳೆ ಬೆಸಿಲು ಮೈ ಕೈಗೆ ನಿತ್ಯ ಬೀಳೆಕ್ಕೂ ಆರೋಗ್ಯಕ್ಕೆ ಇದು ತುಂಬಾ ಒಳ್ಳೇದು ಉದಿಯಪ್ಪಗಣ  ಸಮಯಲ್ಲಿ ಸಣ್ಣ ನಡಿಗೆ ದಿನಾ ಮಾಡೆಕ್ಕು ಆರೋಗ್ಯ ಜೀವನ ಇದರಂದ ಸಿಕ್ಕುಗು ಹಾಂಗಾಗಿ ನಾವೆಲ್ಲನಿತ್ಯರಜಾ  ನಡೆಯಕ್ಕು ಪಂಕಜಾ.ಕೆ

ಹಾಯ್ಕುಗಳು

ಹಾಯ್ಕುಗಳು ಒಲವ ಗಾನ ಹೃದಯ ತಟ್ಟಲೆಂದು ನನ್ನ ಈ ಹಾಡು 2.ಅರಳಿದ ಹೂ ಪ್ರೀತಿಗೆ ಹಂಬಲಿಸಿ ಬಾಡಿ  ಹೋಯಿತು ಪಂಕಜಾ.ಕೆ

ಅನ್ನದಾತನ ಬವಣೆ

ಕಾವ್ಯಾಂತರಂಗ  ಸ್ಪರ್ಧೆಗಾಗಿ ವಿಷಯ ....ಬರಗಾಲದ ಲ್ಲಿ ರೈತನ ಗೋಳು  ಅನ್ನದಾತನ ಬವಣೆ ಭೂಮಿ ಬಿರಿದಿದೆ  ಒಡಲು  ನೊಂದಿದೆ ಜೀವನ ಬಾರವೆನಿಸಿದೆ ಕಣ್ಣು ತುಂಬಿದೆ ಮನಸು ಅಳುತಿದೆ ದೇವ ಕರುಣೆಯು ಬಾರದೆ ಬಾನ ಬಯಲಲಿ ಮುಗಿಲು ತುಂಬಿದೆ ಮಳೆಯ ಸುರಿಸದೆ ಸರಿದಿದೆ  ಬೆಳೆದ ಬೆಳೆಗಳು ನೀರ ಕೊರತೆಗೆ ಬಾಡಿ ಉದುರಿ ಹೋಗಿದೆ ಪಟ್ಟ ಕಷ್ಟಕೆ  ಫಲವು ಇಲ್ಲದೆ  ಬಾಳ ದೋಣಿಯು ಮುಳುಗಿದೆ ಹರಿದ ಬಟ್ಟೆಯು ಹಸಿದ ಹೊಟ್ಟೆಯು ಬರಗಾಲದ ಬವಣೆಯ ತಿಳಿಸಿದೆ ಕಾಲ ಕಾಲಕೆ  ಮಳೆಯು  ಸುರಿಯುತ ಬದುಕ ಬವಣೆಯು ನೀಗಲಿ ಅನ್ನ ಬೆಳೆಯುವ ರೈತನರಮನೆಯಲಿ ಹೊನ್ನ ಕಣಜವು ತುಂಬಲಿ ಪಂಕಜಾ.ಕೆ ಮುಡಿಪು

ಗಜಲ್. ನವಿರು ಬಗ್ಗೆ

ಗಕಲ್  (ನವಿರು ಬಗ್ಗೆ ) ಹೂಗಳ ನವಿರು ಗಂಧದಂತೆ ನಿನ್ನ ಒಡನಾಟ ಹಸಿರು ಹುಲ್ಲುಗಾವಲಿನಂತೆ ನಿನ್ನ ಒಡನಾಟ ಬಾಳೊಂದು ಸದಾ ಮಧುತುಂಬಿದ ಅಕ್ಷಯ ಪಾತ್ರೆ ಸವಿಯಲು ಬೇಕು ದುಂಬಿಯಂತೆ ನಿನ್ನ ಒಡನಾಟ ಪ್ರಕೃತಿಯಲ್ಲಿ ತುಂಬಿದೆ ಹಲವಾರು ವೈಚಿತ್ರಗಳು ಕಂಡು ಆನಂದಿಸುವ ಕಣ್ಣುಗಳಂತೆ ನಿನ್ನ ಒಡನಾಟ ಜೀವನದ ಹಾದಿ ಸುಗಮ ಅಲ್ಲವೇ ಅಲ್ಲ ಅದನು ನಿವಾರಿಸಲು ಶ್ರೀ ಕೃಷ್ಣನಂತೆ ನಿನ್ನ ಒಡನಾಟ ಜೀವನಕ್ಕೆ ಒಂದು ಒಳ್ಳೆಯ ಗುರಿ ಇದ್ದರೆ ಚೆನ್ನ ಸಾಧನೆಯ ದಾರಿ ತೋರುವ ಗುರುವಿನಂತೆ ನಿನ್ನ ಒಡನಾಟ ಸುಂದರ ಕಾಡು ಮನಕೆ ಕೊಡುವುದು ಉಲ್ಲಾಸ ಹುರುಪಿನ ನೆಲೆ ಜೀವನದಿಯಂತೆ ನಿನ್ನ ಒಡನಾಟ ನೈದಿಲೆಯ ಸೌಂದರ್ಯಕೆ ಸಾಟಿಯೇ ಪಂಕಜಾ ಅರಳಲು ಕಾರಣ ಶಶಿಯಂತೆ ನಿನ್ನ ಒಡನಾಟ ಪಂಕಜಾ.ಕೆ.

ಸ್ವರ್ಗ ಸದೃಶ ಜೀವನ

ಸ್ವರ್ಗ ಸದೃಶ ಜೀವನ ಎಲ್ಲೆಲ್ಲೂ ತುಂಬಿದೆ ಹಸಿರು ವನರಾಶಿ ಹೂ ಹಣ್ಣುಗಳಿಂದ ತುಂಬಿದ ಪ್ರಕೃತಿಯ ಒಡಲು ಬೀಸಿ ಬರುತಿರುವ ಮಂದಮಾರುತ  ಹೂಗಳ ನವಿರು ಕಂಪಿನ ಲಾಸ್ಯ ಜುಳು ಜುಳು ಹರಿಯುವ ನದಿ ತುಂಬಿ ತುಳುಕುವ ಕೆರೆ ಕಟ್ಟೆಗಳು ಪ್ರೀತಿವಿಶ್ವಾಸದಿ ನಲಿಯುವ ಬದುಕು ನಂಬಿಕೆಯ ನೆಲೆಯಾದ ತಾಣ ಬವಣೆಯಿಲ್ಲದ  ಚೆಲು ಬದುಕು ಅಂತಲ್ಲಿ ಬದುಕಿ ಬಾಳುವುದೇ ಪಾವನ ಬೆಳದಿಂಗಳ ತಂಪು ತುಂಬಿದ ತಂಗಾಳಿ  ಮನಕೆ ಮುದ ಕೊಡುವ ಹಕ್ಕಿಗಳುಲಿ ಅರಳಿರುವ ಹೂವುಗಳ  ನವಿರುಗಂಧ ಕೋಗಿಲೆಯ ಉಲಿತದ  ಮಂಜುಳ ನಾದ ಮಕರಂಧವನು ಹೀರುವ ದುಂಬಿಗಳ ದಂಡು ಮನಕೆ ಮುದತರುವ ನೋಟ ಬದುಕುಪಾವನವಾಗಲು ಇನ್ನೇನು ಬೇಕು ಉಳಿಸಬೇಕು  ನಾವು ಈ ಪ್ರಕೃತಿ ಸಂಪತ್ತು ಪಂಕಜಾ ಕೆ.

ಸಂಪತ್ತು ವಿದ್ಯೆ ಬಗ್ಗೆ

ಸಂಪತ್ತು ವಿದ್ಯೆಯ ಕಲಿತರೆ ಬುದ್ಧಿಯು ಬಲಿತು ಎಲ್ಲೆಡೆ ಮಾನ್ಯತೆ ದೊರೆಯುವುದು ಕದಿಯಲು ಆಗದ ಆಲಸಿಗೆ ಸಿಗದ ಜ್ಞಾನದ ಭಂಡಾರವಿಹುದಿಲ್ಲಿ ಕಲಿತರೆ ಸ್ವರ್ಗ  ಅರಿತರೆ  ಇದನು ಜೀವನ ಸಾರ್ಥಕ ವಾಗುವುದು ಸಿರಿತನವಿದ್ದರೂ ವಿದ್ಯೆಯು ಇಲ್ಲದಿರೆ ಮಾನ್ಯತೆ ಎಲ್ಲಿಯೂ ಸಿಗಲಾರದು ಕಲಿಸುತ ಕಲಿಯುತ ತಿಳಿಯಲು ಬೇಕು ಜ್ಞಾನದಭಂಡಾರವನನುರವು ವಿದ್ಯೆಯು ಇರಲು ಅದುವೇ ಒಂದು ಸಂಪತ್ತು ಎಲ್ಲಿಗೆ ಹೋದರು ಇರದು ಎಂದು ಆಪತ್ತು ಕೊಟ್ಟರೆ ಕಡಿಮೆಯಾಗದ ಹಂಚಿದರೆ ಹೆಚ್ಚುವ ಜ್ಞಾನದ  ಆಗರವಾಗಿಹುದು ಅಕ್ಷರ ಲೋಕದಿ ವಿಹರಿಸುತಿರಲು ಸಂತಸ ಭಾವವು ತುಂಬುವುದು ಪಂಕಜಾ.ಕೆ.

ರಣರಂಗ

ಗಜಲ್   ( ಕಡಲು ವಿಷಯದ ಬಗ್ಗೆ) ಅಂತರಾಳದಲಿ ಭಾವನೆಗಳು ಬೋರ್ಗರೆಯುತಿದೆ ಗೆಳತಿ ಮುಖವು ಕಡಲಾಳದ ನೀರಿನ ತೆರದಿ ಶಾಂತವಾಗಿದೆ ಗೆಳತಿ. ನೆನಪುಗಳ ಭಾರದಿಂದ ಜರ್ಝರಿತವಾಗಿದೆ ಮನ ಚಿಂತೆಗಳು ಮನಸಿನಾಳವ ಕೆದಕಿ ರಾಡಿಗೊಳಿಸಿದೆ ಗೆಳತಿ ಸಾಗರದ  ಅಲೆಯಂತೆ ಸಾಗುತಿದ್ದರೂ ಜೀವನ ಒಡಲಲ್ಲಿ ತುಂಬಿರುವ ನೋವನು ಹಂಚಬೇಕೆನಿಸಿದೆ ಗೆಳತಿ ಕ್ರೂರ  ಮೃಗಗಳಂತಿರುವ ಮನುಜರ  ಕಂಡು ಕುದಿಯುತಿದೆ ರಕ್ತ ಹೆಣ್ಣಿನ  ಮೇಲೆ  ಏಕಿಷ್ಟು  ದೌರ್ಜನ್ಯ ವಾಗುತಿದೆ  ಗೆಳತಿ ಹೆಣ್ಣಿಲ್ಲದ  ಜೀವನ ಪರಿಪೂರ್ಣವಾಗಲಾರದು ಅಲ್ಲವೇ  ಕಣ್ಣಿದ್ದೂ ಕುರುಡರಾಗಿರುವ  ಕಾಮಾಂಧರಿಗೆ ಶಿಕ್ಷೆಯಾಗಬೇಕಾಗಿದೆ ಗೆಳತಿ ನಿತ್ಯವೂ ಕಾಮಾಂಧರ ಆರ್ಭಟವ ನೋಡಿ ಕಲ್ಲಾಗಿದೆ ಮನಸು ಇಂಥವರ ಸಂತತಿಯನ್ನೇ ಅಳಿಸಬೇಕಿದೆ ಗೆಳತಿ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಸಬೇಕು ಪಂಕಜಾ ಒಡಹುಟ್ಟಿದವರಂತೆ ಅವರನ್ನು ರಕ್ಷಿಸಬೇಕಾಗಿದೆ ಗೆಳತಿ ಪಂಕಜಾ.ಕೆ.

ದಾರಿ

ದಾರಿ ಹಸಿರು ವನರಾಶಿಯ ಮದ್ಯೆ ಮಲಗಿರುವ ರಸ್ತೆ ಅಂಕುಡೊಂಕಾಗಿ ಇದ್ದರೂ ಸೇರಬಹುದು ಗುರಿ ಎರಡು ಬದಿಯಲ್ಲೂ ತುಂಬಿರುವ ವನರಾಶಿ ಗುರಿಯ ಸೇರುವ ಪಯಣಕ್ಕೆ ಅದೊಂದು ದಾರಿ ಹಸಿರು ತುಂಬಿದ ಮಲೆನಾಡ ಸೊಬಗು ಭೂರಮೆಯು ಹೊದ್ದಿರುವಳು ಹಸಿರ ಸೆರಗು ಉಳಿಸಬೇಕು ಮಲೆನಾಡ ಹಸಿರ ಸೆರಗು  ಗಿಡ ಮರಗಳ ನೆಟ್ಟು ಬೆಳೆಸಿದರೆ ತುಂಬುವುದು ಉಸಿರು ಹಸಿರ ಮಧ್ಯದಲ್ಲಿ ಸಂಚರಿಸುವ ಆನುಭವ ತಾಯಿಯಪ್ಪುಗೆಯಂತೆ ಮುದಕೊಡುವ ಬಾವ  ಬೀಸುವ ಗಾಳಿಯಲ್ಲಿ ನವಿರು ಗಂಧ ಉಸಿರಿಗೆ ಬೇಕು ನಮಗೆ ಹಸಿರಿನ ಬಂಧ  ತಂಬೆಲರಲ  ತಂಪಿನಲಿ ಏನು ಆಹ್ಲಾದ ಪ್ರಕೃತಿಯಿತ್ತ ಕೊಡುಗೆ ಇದು ಈ ಸ್ವಾದ    ಪಂಕಜಾ.ಕೆ