Skip to main content

Posts

Showing posts from September, 2023

ಚೆಲುವಿನ ಪ್ರಕೃತಿ

ಚೆಲುವಿನ ಪ್ರಕೃತಿ ಪೂರ್ವ ದಿಗಂತದಿ ಬಣ್ಣವ ಚೆಲ್ಲುತ ಸೂರ್ಯನು ಮೂಡಿದ ನಭದಲ್ಲಿ ಗಿಡಮರಗಳಲಿ ಗೂಡನು ಕಟ್ಟಿದ  ಹಕ್ಕಿಗಳುಲಿದವು ಮುದದಲ್ಲಿ ಬಾನಿನ ಬಯಲಲಿ ಹಾರುತ ಕುಣಿಯುತ ತಿನಿಸನು ಹುಡುಕಲು ತೆರಳಿದವು ಕೋಗಿಲೆಗಳು ಮಾಮರದೆಡೆಯಲಿ ಸಣ್ಣನೆ ರಾಗದಿ ಹಾಡಿದವು ಗಾಳಿಯು ಮೆಲ್ಲನೆ ಬೀಸುತಲಿರಲು ತಂಪನು ತಂದಿತು ಮೈಮನಕೆ ಗಿಡಮರಗಳೆಲ್ಲವು ತಲೆಯನು ತೂಗಲು ಸ್ವಾಗತವದು ರವಿಯುದಯಕ್ಕೆ ಹೂಗಳು ಅರಳುತ ಗಂಧವ ಸೂಸುತ ದುಂಬಿಗಳನು ತಾ ಕರೆಯುತಿವೆ  ತರ ತರ ಬಣ್ಣದ ಚಿಟ್ಟೆಗಳೆಲ್ಲವು ಮಧುವನು ಹೀರುತ ನಲಿಯುತಿವೆ ಮೋಡಿಯ ಮಾಡುವ ಪ್ರಕೃತಿಯ ಸಿರಿಯಲಿ ಮೈಮನ ಮರೆಯುವ ಭಾವವಿದೆ ಪ್ರಕೃತಿಯ ಶಿಶು ನಾನೆಂದೆನುತಲಿ ಸುಂದರ ಪರಿಸರದಲಿ ತನುವರಳುತಿದೆ ಪಂಕಜಾ.ಕೆ.. ಮುಡಿಪು

ಸುಂದರ ಸಮಾಜದ ಶಿಲ್ಪಿ

 *ಸುಂದರ ಸಮಾಜದ ಶಿಲ್ಪಿ* ಕಗ್ಗಲ್ಲನ್ನು ಸುಂದರ ಶಿಲ್ಪವಾಗಿಸುವ ಕಲೆಯನು  ಕಲಿತಿಹ ಶಿಕ್ಷಕನು ಮಕ್ಕಳ ಮನದಲಿ ಸ್ಪೂರ್ತಿಯ  ತುಂಬುತ ಬಾಳಿಗೆ ಗುರಿಯನು ತೋರುವನು ಸನ್ಮಾರ್ಗದ ದಾರಿಯಲಿ ನಡೆಸುತಲಿರುತ ಸರಿ ತಪ್ಪುಗಳ ತಿಳಿಸುವನು ಪಾಠದ ಜತೆಯಲಿ ಜೀವನದ ದಾರಿಗೆ ಕಾಯಕಲ್ಪವ ಹಾಕುವನು ಕರುಣೆ   ಸಹನೆಯ  ಮೂರ್ತಿಯಾಗುತ ಮಕ್ಕಳ ಮನವನು ಸೆಳೆಯುವನು ಗುರುತರ ಹೊಣೆಯನು ಹೊರುತಲಿರುತಲಿ ಬಾಳಿಗೆ ದಾರಿಯ ತೋರುವನು ಸುಂದರ  ಸಮಾಜದ ನಿರ್ಮಾಣವ ಮಾಡಲು  ಮಾಲಿಯ ತೆರದಲಿ ದುಡಿಯುವನು ಬೌದ್ಧಿಕ ಜ್ಞಾನವ  ತುಂಬುತಲಿರುತಲಿ ಸಾಧಕನಾಗಲು  ಪ್ರೇರೇಪಿಸುವನು  *ಪಂಕಜಾ.ಕೆ ಮುಡಿಪು*

ವಾರಾಂತ್ಯ

. ವಾರಾಂತ್ಯ ಕೆಲಸ ಕೆಲಸವೆಂದು ಒದ್ದಾಡುತ ವಾರವಿಡೀ ದುಡಿಯುವ ಜನರು ವಾರಾಂತ್ಯದ ರಜೆಯನ್ನು  ಸುಖವಾಗಿ ಮೋಜು ಮಸ್ತಿಯಲ್ಲಿ ಕಳೆಯುವರು ಪ್ರಕೃತಿಯ ಸುಂದರ ತಾಣದಲ್ಲಿ ವಿಹಾರ ಮೈಮನಕೆ ಉಲ್ಲಾಸದ ಹಾಸ ಕೆಲಸದ ಆಯಾಸದ  ಪರಿಹಾರಕ್ಕೆ ಗೆಳೆಯ ಗೆಳತಿಯರ ಜತೆ ಸರಸ ಮೈಮನದ ಜಡತೆಯನು ಕಳೆಯಲು ಸಾಗರದ ತಡಿಯಲ್ಲಿ ವಿಹಾರ ಹುಚ್ಚೆದ್ದು ಕುಣಿಯುವ ಅಲೆಗಳ ನೋಟ ಕಳೆಯುವುದು ಮನದ ಬೇಸರ ಸಾಗರದ ಅಲೆಗಳ ಎಡೆಬಿಡದ ನರ್ತನ ನೋಡುತಿರಲು  ಮನದಲಿ ತನನ ಮುಳುಗುವ ಸೂರ್ಯನ ಕಿರಣದ ದೃಶ್ಯ   ಮನದ ಜಡತೆ ಕಳೆಯುವ ಸಾಧನ ಮಡದಿ ಮಕ್ಕಳ ಜತೆಗಿನ ಒಡನಾಟ ಕಳೆಯುವುದು ಮನಸಿನ ಬೇಸರ ವಾರವಿಡೀ ದುಡಿದ ಆಯಾಸವನು ಕ್ಷಣಮಾತ್ರದಲಿ ಕಳೆಯುವನು ನೇಸರ ಪಂಕಜಾ.ಕೆ. ಮುಡಿಪು

ಸಾಧನೆಗೆ. ಅಂತ್ಯವಿಲ್ಲ

ಸಾಧನೆಗೆ ಅಂತ್ಯವಿಲ್ಲ ಬಾಧಿಸುವ ಕಷ್ಟಗಳ ಕಡೆಗಣಿಸಿ ಮುನ್ನಡೆದು ಸಾಧಿಸುವ ಛಲವಿರಲಿ ಮನದಾಳದಿ ಸೋತರೂ ಛಲಬಿಡದೆ  ಮುನ್ನುಗ್ಗಿ ನಡೆಯುತಿರು ಒಂದಲ್ಲ ಒಂದು ದಿನ  ಗೆಲುವು ನಿನ್ನದು ಕಾಲೆಳೆಯುವ ಮಂದಿಯರ  ಎಡೆಯಲ್ಲಿ ಮುನ್ನುಗ್ಗು ದೈರ್ಯದಲಿ   ಸಾಧನೆಯ ಶಿಖರವೇರು ನಗುಮುಖದಿ ಮುನ್ನಡೆದು ಜಯಿಸುತಿರೇ ಬಾಳಿನಲಿ  ಖಂಡಿತವು ಸೋಲನ್ನು  ಗೆಲ್ಲಬಹುದು ಎಡವಿ  ಮುಗ್ಗರಿಸಿದರೂ ಬಿಡಬೇಡ ಛಲವನ್ನು ಪ್ರಯತಕ್ಕೆ ತಕ್ಕ ಫಲ ಸಿಗಬಹುದು ನೋಡು ಮರೆಯದಿರು ಕಾಯುವ ದೇವನನು ಎಂದೆಂದೂ ಎತ್ತರಕ್ಕೆ ಏರುತಲಿ  ಪಡೆ  ನೀನು ಯಶಸ್ಸು ಸಾಧನೆಗೆ ಅಂತ್ಯವಿಲ್ಲವೆನ್ನುವುದ ತಿಳಿಯುತಲಿ ಗುರಿಮುಟ್ಟುವವರೆಗೆ ವಿಶ್ರಮಿಸದಿರು ನೀನು ಅಡೆತಡೆಯ ಸರಿಸುತ್ತ  ಮುನ್ನುಗ್ಗು ವೇಗದಲಿ ಜಯಲಕ್ಷ್ಮಿ ಒಲಿದಾಳು ಮಾಲೆಯನು ಹಿಡಿದು ಪಂಕಜಾ.ಕೆ. ಮುಡಿಪು

ನೊಂದ ಮನ

ನೊಂದ ಮನ ಪ್ರೀತಿಯ ಅಲೆಯಲಿ ತೇಲುತಲಿರಲು ಹೊಸ ಹೊಸ ಕನಸು ಮನದಲ್ಲಿ ಕಸಿವಿಸಿಗೊಳ್ಳುವ ಭಾವನೆಯೆಲ್ಲವೂ ಮರೆಯಿತು ನಿನ್ನಯ ಒಲವಿನಲಿ ಕಣ್ಣಲಿ ಕಾಡುತ ಮೈಮನ ಮರೆಯಿಸಿ ಬಂದೆ ನೀ ಚೆಲುವೆ ನನ್ನೆಡೆಗೆ ಕುಂದನು ತಾರದ ತೆರದಲಿ ಒಲಿಸುತ ಹೊಂದಿದೆ   ನನ್ನಯ  ಬಾಳಿನೆಡೆ ಕ್ಷಣಿಕ ಆಸೆಯ ಬಲೆಯಲಿ ಬಿದ್ದು ಮರೆತೆಯಾ ನನ್ನಯ ಪ್ರೀತಿಯನು ನೆನಪಿನ ಪಯಣಿಗನಾಗಿಹೆ ನಾನು ಮರೆಯನು ನಿನ್ನಯ  ಒಲವನ್ನು ಕಾಡುವೆ ಏಕೆ  ನನ್ನಯ ಮನವನು ಮತ್ತೆ ಬಾರದಿರು ಮನಕೆ ನೆನಪುಗಳೇ  ಬತ್ತಿಸಿ ಬಿಟ್ಟಿದೆ ಬಯಕೆಯ ಬಳ್ಳಿಯ ನಿನ್ನಯ  ವಿರಹದ ನೋವುಗಳೇ  ಪಂಕಜಾ.ಕೆ. ಮುಡಿಪು

ಕ್ಷಿಪಣಿ ಮಾನವ

ಕ್ಷಿಪಣಿ ಮಾನವ ತಮಿಳುನಾಡಿನ ರಾಮೇಶ್ವರದಲ್ಲಿ ಇವರ  ಜನನ ಅಂತರಿಕ್ಷಯಾನ ಇಂಜಿನೀರ್ ಆಗಿ ಅಧ್ಯಯನ ರಕ್ಷಣಾ ಸಂಸ್ಥೆಯಲ್ಲಿ ನಾಲ್ಕು ದಶಕ ಕಾರ್ಯ ನಿರ್ವಹಣ ದೇಶದ ಹನ್ನೊಂದನೇ ರಾಷ್ಟ್ರಪತಿಯಾಗಿ ಸಾಧನೆ ಕ್ಷಿಪಣಿ ಮಾನವನೆಂದು ಬಿರುದು ಪಡೆದರು ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪಡೆದರು  ಪದ್ಮಭೂಷಣ ಪದ್ಮವಿಭೂಷಣ ಪ್ರಶಸ್ತಿ ವಿಜೇತರು ಇಸ್ರೋದಂತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರು ವಿಜ್ಞಾನಿ ಕವಿ ಲೇಖಕ  ಸರಳ  ಪ್ರಾಮಾಣಿಕ ವ್ಯಕ್ತಿಯಿವರು ಮೇಧಾವಿತನದ ಸಾಕಾರಮೂರ್ತಿಯಾಗಿ  ಬಾಳಿ ಬದುಕಿದರು ಆಧುನಿಕ ಭಾರತ ನಿರ್ಮಾಣಕ್ಕಾಗಿ  ಜೀವನ ಮುಡುಪಾಗಿಟ್ಟರು ಅಪ್ರತಿಮ ದೇಶಭಕ್ತ ಉತ್ತಮ ವಾಗ್ಮಿ ಆಗಿದ್ದರು ಪಂಕಜಾ.ಕೆ. ಮುಡಿಪು

ಬೆಳಗುವ ದೀಪ

      *ಬೆಳಗುವ ದೀಪ*     ಅಂಧಕಾರವ ತೊಲಗಿಸುತಲಿರುತಲಿ ಬೆಳಗಿದೆ ದೀಪದ ಪ್ರಭಾವಳಿ ಮನೆ ಮನೆಯಲ್ಲೂ ಸಂಭ್ರಮ ತಂದಿದೆ ಬೆಳಕಿನ ಹಬ್ಬ ದೀಪಾವಳಿ ಕತ್ತಲೆ ಕಳೆದು ಬೆಳಕನು ತುಂಬುತ ಬಾಳಿನ ತಮವನು ಕಳೆಯುತಿದೆ ಮನೆ ಮನಗಳ ಕೊಳೆಯನು ಕಳೆಯುತ ಜ್ಞಾನದ ಜ್ಯೋತಿಯ ಉರಿಸುತಿದೆ ಎಣ್ಣೆಯ ಸ್ನಾನವು ಕೊಡುತಿದೆ ತನುವಿಗೆ  ಮರೆಸುತ ಮೈ ಕೈ ನೋವುಗಳ ದೀಪದ ಬೆಳಕಲಿ ಹೊಳೆದಿದೆ ಮನೆಯು ನೀಗಿಸಿ ಮನುಜನ  ಕಷ್ಟಗಳ ಪರಿಸರ ಸ್ನೇಹಿ ಮಣ್ಣಿನ ಹಣತೆಯು ಬೆಳಗಲಿ  ಪ್ರತಿ  ಮನೆಗಳನು ಪರಿಸರ ಕೆಡಿಸುವ ಪಟಾಕಿ ಹಚ್ಚದೆ ಸವಿಯಿರಿ  ದೀಪಾವಳಿಯ ಸವಿಯನ್ನು *ಶ್ರೀಮತಿ.ಪಂಕಜಾ.ಕೆ. ಮುಡಿಪು*

ಐಕ್ಯ ಮಂತ್ರ

       ಐಕ್ಯ ಮಂತ್ರ         ಕನ್ನಡ ನುಡಿಯನು ನುಡಿಯುತ ನಾವು ಕನ್ನಡ ಭಾಷೆಯ ಬೆಳೆಸೋಣ ಕನ್ನಡಿಗರೆಂಬ ಹೆಮ್ಮೆಯಲಿರುತ ತಾಯಿಯ ಸೇವೆಯ ಮಾಡೋಣ ಕನ್ನಡ ಭಾಷೆಯ ಉಳಿಸುತ ನಾವು ಕನ್ನಡ ತನವನು ಮೆರೆಯೋಣ ಕನ್ನಡ  ನುಡಿಯನು ಉಸಿರಲಿ ತುಂಬುತ ಹೆಮ್ಮೆಯಲಿ ತಲೆಯನು ಎತ್ತೋಣ ಪಂಪರು ರನ್ನರು  ಜನ್ನರೆಲ್ಲರು ಸೊಂಪಲಿ ಹಾಡಿದ ಕವಿತೆಯದು ಬೇಂದ್ರೆ ಕುವೆಂಪು ಬೆಳೆಸಿದ ಭಾಷೆ ಕಂಪನು  ಬೀರುವ ಕಾವ್ಯವಿದು ಸುಂದರ ಸುಲಲಿತ ಭಾಷೆಯು ಕನ್ನಡ ಕಂದನ ತೊದಲಿನ ಮೊದಲನುಡಿಯು ಕವಿಕೋಗಿಲೆಗಳು ಹಾಡಿದ ಭಾಷೆಯು ಭಿನ್ನತೆಯಲ್ಲೂ ಏಕತೆ  ಸಾರಿದ ಹೊನ್ನುಡಿಯು *ಪಂಕಜಾ.ಕೆ. ಮುಡಿಪು*

ಸ್ವಾತಂತ್ರ್ಯದ ಸವಿ

ಸ್ವಾತಂತ್ರ್ಯದ ಸವಿ ಮೂಡಣದ ಬಾನಿನಲಿ ರವಿ ಮೂಡಿ ಬಂದಿಹನು ಆಗಸದಿ ಬಣ್ಣವನು ಕಲಸುತ್ತಲಿ ಬಂಧನವ  ಕಡಿದೊಗೆದು ಹಾರುತಿವೆ ಹಕ್ಕಿಗಳು ಸ್ವಚ್ಛಂದದಾನಂದ ಸವಿಯುತ್ತಲಿ ಸ್ವಾತಂತ್ರ್ಯದಾ ಸವಿಯನ್ನು ಸವಿಯುತಿವೆ ಮುದದಿಂದ ಹಾಡುತಲಿ ರಾಗದಲಿ ಮೈ ಮರೆಯುತಾ ಕಾಡುತಿವೆ ಪ್ರಕೃತಿಯಾ ಸೌಂದರ್ಯ ರಸಿಕರನು ಮೈಮನದ ಆಯಾಸ ಪರಿಹರಿಸುತಾ ಕಾಡಿನಾ ಮರದೆಡೆಯಲಿ ಕಟ್ಟುತಲಿ ಗೂಡನ್ನು ಜೋಡಿಯಾ ಜತೆಯಲ್ಲಿ ನಲಿಯುತಿಹುದು ಬೀರುತಿಹ ಹೊಂಗಿರಣದ ಸೊಬಗಿನಲಿ ಹಾರುತ್ರ ಒಗ್ಗಟ್ಟಿನಲಿ ಕೂಡಿ ಬಾಳುತಿಹುದು ಕಲಸಿರುವ ಬಣ್ಣಗಳು ಮೈಮನವ ಮರೆಸುತಿದೆ ರವಿ ಮೂಡುವಾ ಸೊಬಗು  ಕಣ್ಸೆಳೆದಿದೆ ಬಾನಿನಲಿ ಗರಿಬಿಚ್ಚಿ ಹಾರುತಿಹ ಹಕ್ಕಿಗಳು ರಸಿಕರಾ ಮನವನ್ನು ತಾ ಸೆಳೆದಿದೆ ಪಂಕಜಾ.ಕೆ. ಮುಡಿಪು

ಅತಿ ಮಾತು ತರವಲ್ಲ

   ಅತಿ ಮಾತು ತರವಲ್ಲ ದೂರದ ಕೆರೆಯಲಿ ಕೊಕ್ಕರೆಗಳೆರಡು  ಅಮೆಯ ಗೆಳೆತನ ಮಾಡಿದವು ಮಾತಿನ ಮಲ್ಲ ಅಮೆಯ ಜತೆಯಲಿ ಸರಸದಿ ದಿನಗಳ ಕಳೆಯುತಲಿ    ಬೇಸಿಗೆ ಬರುತಲಿ ಕೆರೆಯದು ಬತ್ತಲು ನೀರನು ಹುಡುಕಲು ತೆರಳಿದವು ತಮ್ಮಯ ಜತೆಯಲಿ ಗೆಳೆಯನ ಸಾಗಿಸಲು ಕೋಲನು ಕಚ್ಚಲು ಹೇಳಿದವು ಅಮೆಯು ಕಚ್ಚಿದ ಕೋಲಿನ  ತುದಿಯನು ಹಿಡಿಯುತ ಮೇಲ್ಗಡೆ ಹಾರಿದವು ಬಯಲಲಿ ಆಡುವ ಪುಟಾಣಿ ಮಕ್ಕಳು ಸೋಜಿಗ ಕಾಣಲು ಕೇಕೆಯ ಹಾಕಿದವು ಮಾತಿನ ಮಲ್ಲ ಅಮೆಗೆ ಬಂದಿತು ಕೋಪವು ಮೂಗಿನ ತುದಿಯಲ್ಲೇ  ಮೂರ್ಖನ  ತೆರದಲಿ  ಅವರನು ಬೈಯಲು ಬಾಯನು  ತೆರೆದೇ ಬಿಟ್ಟಿತ್ತು ಬಾಯಲಿ ಹಿಡಿದ ಕೋಲಿನ ಹಿಡಿತವು  ಸಡಿಲವಾದ  ಕ್ಷಣದಲ್ಲೇ  ಪಟ್ಟನೆ  ಕೆಳಗಡೆ ಬಿದ್ದೆ  ಬಿಟ್ಟಿತು ಅತಿ ಮಾತಿಗೆ ಕೊಟ್ಟಿತು ತನ್ನ ಪ್ರಾಣವನು ಪಂಕಜಾ.ಕೆ. ಮುಡಿಪು ಕುರ್ನಾಡು

ಮೈ ಮರೆಸುತ್ತಿದೆ ಹಸಿರ ಸಿರಿ

ಮೈಮರೆಸುತಿದೆ ಹಸಿರ ಸಿರಿ ದೂರದ ಬೆಟ್ಟದ ಎಡೆಯಲಿ ರವಿ ಮೂಡಿಬಂದ ಭರದಲಿ ಹೂಗಳು ಅರಳಿದವು ಖುಶಿಯಲಿ ಹಕ್ಕಿಗಳು ಹಾರಿದವು ನಭದಲಿ ಅರುಣೋದಯದ ಸುಂದರ ದೃಶ್ಯ ಸುರಿವ ಮಂಜಿನ  ತೆರೆಯ ಲಾಸ್ಯ ಕುಣಿಯುವ ನವಿಲಿನ ನೃತ್ಯ  ಕವಿಮನದಿ ಬರೆದಿದೆ ಸುಂದರ ಭಾಷ್ಯ ಬಣ್ಣ ಬಣ್ಣದ ಹೂಗಳು ಅರಳಿ ನಗುತಿವೆ ಸೌಗಂಧವ ಸೂಸುತ ದುಂಬಿಗಳ ಕರೆಯುತಿವೆ ಹಕ್ಕಿಗಳು ಚಿಲಿಪಿಲಿ ಗಾನ ಮಾಡುತಿವೆ ಮಾಮರದಲ್ಲಿ ಕೋಗಿಲೆಗಳು ಹಾಡುತಿವೆ ಚಿಗುರಿದ ಮರಗಿಡಗಳೆಡೆಯಲಿ ಚಂದಿರನ ಶೀತಲ ಕಿರಣದಲಿ ಮಿನುಗುವ   ನಕ್ಷತ್ರಗಳ ಕಾಂತಿಯಲಿ ಮೈ ಮರೆಯುವ ಭಾವನೆ ಎದೆಯಲಿ ಪಂಕಜಾ.ಕೆ. ಮುಡಿಪು

ಹೊಸ ವರ್ಷಕ್ಕೆ ಸ್ವಾಗತ

ಹೊಸ ವರ್ಷಕ್ಕೆ  ಸ್ವಾಗತ ಹೊಸವರ್ಷದಾಗಮನವು ಸಂತಸವ ತಂದಿಹುದು ಹೊಸಕನಸ  ಬಿತ್ತುತಲಿ ಬೆಸೆಯುತಲಿ ಬಂಧವನು ಕುಸಿಯುತಿಹ ಜೀವಕ್ಕೆ ಮರುಕಲ್ಪ ನೀಡಿ ಮಂಜಿನಾ ಹನಿಯಲ್ಲಿ  ಮಿಂದೆದ್ದ ಸುಂದರಿಯು ಬಂಜೆಯೆನ್ನುವ  ಸೊಲ್ಲ ಬಿಡಿಸುತಲಿ ಅರಳುತ್ತ ಸಂಜೆಯಾ ಸಮಯಕ್ಕೆ ಕಾತರಿಸಿ ಕಾದು ಮಾಗಿಯಾ  ಚಳಿಯಲ್ಲಿ ಚಿಗುರುತಿದೆ ತರುಲತೆಯು ನೀಗಿಸುತ ರಸಿಕರಾ ಮನಸಿನಾ  ಬಯಕೆಗಳ ಬೀಗುತಲಿ  ತೂಗುತಿದೆ ತಲೆಯನ್ನು ಬಾಗಿ ಪಂಕಜಾ.ಕೆ. ರಾಮಭಟ್.ಮುಡಿಪು

ವಿರಹವು ಕಾಡಿದೆ

        ವಿರಹವು ಕಾಡಿದೆ          ಬಾಗಿಲಿಗೊರಗುತ ತರುಣಿಯು ನಿಂತಳು ನಲ್ಲನ  ದಾರಿಯ ಕಾಯುತಲಿ ಕತ್ತಲು  ಕವಿದರೂ  ಬರಲೇ ಇಲ್ಲ  ಎನ್ನುವ ಕಾತರ  ಕಂಗಳಲಿ ಕೆಂಪಂಚಿನ ಸೀರೆಯ ಉಟ್ಟಿಹ ತರುಣಿಯ ಮೊಗದಲಿ ಬೇಸರ ವಿರಹದಿ ಬೇಯುತ ನಿಂತಿಹಳಾಕೆಯು ಮುಳುಗಿಯೇ ಬಿಟ್ಟನು ನೇಸರ ಅಂದದ ಮೊಗದಲಿ ಚಿಂತೆಯು ತುಂಬಿದೆ ನೋವಲಿ ಮಿಂದಿದೆ ಕಣ್ಣುಗಳು ಬಯಕೆಯ ಬಲೆಯಲಿ  ಸಿಲುಕುತಲಿರುತಲಿ ಕಾಡಿದೆ ಹಲವಿದ ಕನಸುಗಳು ಮೊದಲ ರಾತ್ರಿಯೇ ನಲ್ಲನು ತೊರೆದನು ಬಾಡಿಯೇ ಹೋಯಿತು ಜೀವ ಕಂಡ ಕನಸುಗಳೆಲ್ಲವು ಕರಗಿತು ದಾರಿಯ ತೋರು ನೀ ದೇವ ಪಂಕಜಾ.ಕೆ. ರಾಮಭಟ್.ಮುಡಿಪು

ದಿನ ದರ್ಶಿಕೆ

ದಿನದರ್ಶಿಕೆ ವರುಷವೊಂದು ಉರುಳಿದಾಗ ಬದಲಾಯಿತು  ದಿನದರ್ಶಿಕೆ ಮರಳಿ ಮರಳಿ ಬರುತಲಿರುವ ಹಬ್ಬಗಳ  ಮಾಹಿತಿಯ ತಿಳುವಳಿಕೆ ತಿಂಗಳಿನ  ಅಂಗಳದ ವಿವರವೆಲ್ಲ  ಸಿಗುವುದಿದರಲಿ ಮಂಗಳದ ಸುದಿನಕ್ಕೆ ದಿನವ ಗಣಿಸುವುದಿದರಲಿ ಹಬ್ಬ ಹರಿದಿನಗಳ ಮಾಹಿತಿಯು  ತೋರುತಿರುವುದು  ಪ್ರತಿಮನೆಯ  ಗೋಡೆಯಲ್ಲಿ  ಒಂದು  ದಿನದರ್ಶಿಕೆ ಇರುವುದು ಪ್ರತಿಯೊಂದು ವಿಷಯವನು  ಗುರುತಿಸುವರು ಇದರಲ್ಲಿ ಸಡಗರದಿ ಸ್ವಾಗತಿಸುವರು ಹೊಸವರ್ಷಕೆ  ನಾಂದಿಹಾಡುತಿಲ್ಲಿ ಪಂಕಜಾ.ಕೆ ರಾಮಭಟ್. ಮುಡಿಪು

ಒಳಿತು ಮಾಡು

ಒಳಿತು ಮಾಡು ಮನುಷ್ಯತ್ವವಿಲ್ಲದ ಮನುಜ ದಾನವ ಪ್ರೀತಿ ಪ್ರೇಮದ ಬೆಲೆ ತಿಳಿ ನೀನು ಮಾನವ ಕಳೆದೊಗೆ ಮನಸಿನಲಿ ತುಂಬಿದ  ಕಲ್ಮಶವ ಎಲ್ಲರಿಗೂ  ಒಳಿತನ್ನೇ ನಾವು  ಬಯಸುವ ಜೀವನವೊಂದು ಅಮೂಲ್ಯ ಆಸ್ತಿ ಸಿಗಬಹುದು ಕಾರ್ಯಕ್ಕೆ  ತಕ್ಕ ಸಾಸ್ತಿ ಎಂದಿಗೂ  ಮಾಡಬೇಡ  ಪರರಿಗೆ ದ್ರೋಹ ಕಳೆದು ಬಿಡು ಮೈಮನದ ಮೋಹ ದೇವ ಕೊಟ್ಟಿರುವ ಸುಂದರ ಜೀವನ ಪರೋಪಕಾರದಲಿ  ಜನ್ಮ ಪಾವನ ಅನುದಿನವೂ ನೆನೆಯುತಿರು ದೇವನ ನುಡಿದಂತೆ ನಡೆದರೆ ಬಾಳು ಹೂಬನ ತನ್ನಂತೆ ಪರರ  ಬಗೆಯಬೇಕು ಇತರರ ಕಷ್ಟಕ್ಕೆ ಸ್ಪಂದಿಸಬೇಕು  ಹೆತ್ತವರಿಗೆ ಊರುಗೋಲಾಗಬೇಕು ಸನ್ನಡತೆಯಿಂದ ಬಾಳು ಸಾಗಿಸಬೇಕು ಪಂಕಜಾ.ಕೆ. ರಾಮಭಟ್ ಮುಡಿಪು

ತಾಯಿ ದೇವರು

ತಾಯಿ ದೇವರು ಅಮ್ಮಾ ಎಂದರೆ ಮಮತೆಯ ಕಡಲು ಸುಖ ದುಃಖಕೆ ಸಾಂತ್ವನದ ಹೆಗಲು ಪ್ರೀತಿ ವಿಶ್ವಾಸ ಸ್ನೇಹದ ಮಡಿಲು ತ್ಯಾಗ  ಕರುಣೆಯ ಒಲವಿನ  ಒಡಲು ಮಗುವನ್ನು ಬೆನ್ನಲಿ ಹೊತ್ತು ತಿರುಗುವಳು ಎಷ್ಟೇ ಕಷ್ಟ ಬಂದರೂ ಸಹಿಸಿ ನಗುವಳು ಕಂದನ ನಗುವಲ್ಲೇ ತನ್ನ ಸುಖವನ್ನು ಕಾಣುವಳು ಮಮತಾಮಯಿ ತಾಯಿ ಧರೆಗಿಳಿದ ದೇವತೆಯವಳು ತನ್ನ ಕಷ್ಟವನ್ನು ಕಡೆಗಣಿಸಿ ಬಿಡುವಳು ಹೆತ್ತು ಹೊತ್ತು ಮಮತೆಯಲಿ ಸಾಕಿ ಸಲಹುವಳು  ಕಂದನ ಏಳಿಗೆಗಾಗಿ ಹಗಳಿರುಳೂ ದುಡಿಯುವಳು ಮಗುವನ್ನು  ಕಣ್ಣಲ್ಲಿ ಕಣ್ಣಿಟ್ಟು ಕಾಯುವಳು ಪಂಕಜಾ.ಕೆ. ರಾಮಭಟ್  ಮುಡಿಪು

ಎಶನ ಪುತ್ರ ಮದನವತಿ ಭಕ್ತಿಗೀತೆ

ಪ್ರಕಾರ..ಮದನವತಿ ಈಶನ ಪುತ್ರ ಕರಗಳ ಮುಗಿಯುತ ಬೇಡುವೆ ನಿನ್ನನು ಗಣಪತಿಯೇ  ವರಗಳ ಕೊಡುತಲಿ ಹರಸುತಲೆಮ್ಮನು ನೀ ಪೊರೆಯೋ ಚರಣಕ್ಕೆರಗುತಲಿ ನೆನೆವನು ನಿನ್ನನು ಭಕುತಿಯಲೀ ಕರೆದರೆ ಬರುವೆಯ ಗೌರಿಯ ಪುತ್ರನೆ ಬೇಗದಲೀ ಈಶನ ಕುವರನೆ ಮೂಷಿಕ ವಾಹನ ಗಜವದನಾ ದೋಷವ ಕಳೆಯುತ ಬಕುತರ ಸಲಹುವ   ಗಜಮುಖನೇ ಮೋಸವ ಮಾಡುವ ಜನರಿಗೆ ಬುದ್ಧಿಯ ಕೊಡುತಿರುನೀ ತೋಷದಿ  ಜಗದಲಿ ಬಾಳಲು ನಮ್ಮನು ಹರಸುತಲೀ ಪಂಕಜಾ.ಕೆ. ರಾಮಭಟ್.ಮುಡಿಪು

ನನ್ನ ರಾಣಿ

ನನ್ನ ರಾಣಿ ದ್ವಿರುಕ್ತಿ ಕವನ ನಿಲ್ಲು ನಿಲ್ಲು ಹೋಗಬೇಡ ಬಲ್ಲೆ ಬಲ್ಲೆ ನಿನ್ನ ಆಟ ಕಣ್ಣು ಕಣ್ಣು ಕೂಡಿದಾಗ ಕದ್ದು ಕದ್ದು ನೋಡಿ ನೀನು ನಗುವೆಯೇತಕೆ ಚಂದ  ಚಂದದ ಹೂಗಳಿವೆ ಬಣ್ಣ ಬಣ್ಣದ ಚಿಟ್ಟೆಗಳಿವೆ ಹಾಡು ಹಾಡುವ ಹಕ್ಕಿಗಳಿವೆ ಬಾರೇಬಾರೆ ನನ್ನ ಜತೆಗೆ ಕಾಡಿಗೆ ಹೋಗುವ ಮೆಲ್ಲ ಮೆಲ್ಲ ನಡೆದು ಬರುತ ಝಲ್ ಝಲ್ ಗೆಜ್ಜೆ ಕುಣಿಸಿ ಬಾರೇ ಬಾರೇ ನನ್ನ ರಾಣಿ ಕೈ ಕೈ ಹಿಡಿದು ನಾವು  ಆಡಿ ಕುಣಿಯುವ ಮುದ್ದು ಮುದ್ದು ಕಂದನಂತೆ ಅತ್ತು ಅತ್ತು ಕರಗಬೇಡ ಸಾಕು ಸಾಕು ನಿನ್ನ ಅಳು   ಮತ್ತೆ ಮತ್ತೆ ನಿನ್ನ ನಾನು  ಮುದ್ದುಮಾಡುವೆ ಶ್ರೀಮತಿ.ಪಂಕಜಾ.ಕೆ. ರಾಮಭಟ್  ಮುಡಿಪು

ಅದ್ಭುತದೃಶ್ಯ

ಅದ್ಬುತ ದೃಶ್ಯ ಹಚ್ಚ ಹಸಿರಿನ ಸೀರೆ  ಉಟ್ಟಿದೆ ಪ್ರಕೃತಿ ಮಾಡಬೇಡ ಮಾನವ ಅದನೆಂದಿಗೂ ವಿಕೃತಿ ಕೊಳದ ನೀರಲಿ ಹಸಿರು ಸಿರಿಯ ಪ್ರತಿಫಲನ ರಸಿಕ ಕಂಗಳಿಗೆ ಹಬ್ಬದ ರಸದೌತಣ ನೀಲ ಬಾನಿಗೆ ಕಟ್ಟಿದಂತಿದೆ ತೋರಣ ಭೂದೇವಿ ಮಡಿಲಿಗೆ  ತೊಡಿಸಿದ ಆಭರಣ  ಸ್ವಚ್ಛ ಸುಂದರ ಸರೋವರದ ಮಾಟ ಮೈಮರೆಸುತಿದೆ  ಪ್ರಕೃತಿಯ ರಮ್ಯ ನೋಟ  ಬಾನು ಬುವಿ ಒಂದಾದಂತೆ ತೋರುತಿದೆ ಕಣ್ಣು ಕಟ್ಟುವ ಸ್ತಬ್ಧ ಚಿತ್ರದಂತಿದೆ ಹಸಿರು, ಜಲ ದೇವರು ಕೊಟ್ಟ ವರ ಉಳಿಸಿ ಬೆಳೆಸಬೇಕು ನಾವು ಗಿಡಮರ ಪಂಕಜಾ.ಕೆ. ಮುಡಿಪು

ಸಾರ್ಥಕ ಬದುಕು

           ಸಾರ್ಥಕ ಬದುಕು            ನಿಶೆಯೊಡನಾಡುತಲಿ ತೆರಳುತಿಹ ರವಿಕಿರಣ ಕಲಸುತಿದೆ ಬಣ್ಣಗಳ  ಬಾನಿನಲ್ಲಿ ತಾರೆಗಳನೊಡನಾಡುತಲಿ  ಬರುತಿರುವ ಚಂದಿರನು ಹರಿಸಿದನು ಕಿರಣವನು ಧರೆಯಲ್ಲಿ ಮೊಗ್ಗುಗಳ  ಮುದ್ದಿಸುವ ತಣ್ಣನೆಯ ಸ್ಪರ್ಶಕ್ಕೆ ನಾಚುತಲಿ    ಅರಳುತಿದೆ  ಬಿಳಿ ಮಲ್ಲಿಗೆ ಘಮ್ಮನೆಯ ಪರಿಮಳವ ಎಲ್ಲೆಡೆಗೆ ಹರಡುತಲಿ ಬಿರಿದರಳಿ ನಗು ಬೀರುತಿವೆ  ಬಹು ಮೆಲ್ಲಗೆ ತರುಣಿಯರ ಗಮನವನು ತನ್ನೆಡೆಗೆ ಸೆಳೆಯುತ್ತಲಿರುತಿಹುದು ಹೊಸ ಹೊಸ ಕನಸುಗಳ ಬಿತ್ತುತಲಿ  ಮುಡಿತುಂಬಾ ಹೂ ಮುಡಿದ   ಹೆಣ್ಣಿನಾ ಸೌಂದರ್ಯ ಸೆಳೆಯುತಿದೆ ರಸಿಕರಾ ಭಾವನೆಯ ಕೆರಳಿಸುತಲಿ ಮಲ್ಲಿಗೆಯ ಪರಿಮಳಕೆ ಸೋಲದವರಾರಿಹರು ಹೆಣ್ಣಿನಾ ಮುಡಿಯಲ್ಲಿ ನಗುತಿರುವುದು ದೇವ ಪೂಜೆಯಲ್ಲಿ   ಸಾರ್ಥಕವ ಪಡೆಯುತ್ತ ಬಿರಿದರಳಿದಂದೇ ಧರೆಗೆರಗುವುದು ಬೆಳ್ಳನೆಯ ಹಿಮದಂತೆ ಮಲ್ಲಿಗೆಯು ಅರಳಿಹುದು ಹಸಿರಿನಾ ಎಡೆಯಲ್ಲಿ ತಾ ಮಿನುಗುತಾ ಬಹುದೂರ ಹರಡಿರುವ ಗಂಧವನು ಸ್ವಾದಿಸುತ ದುಂಬಿಗಳು ಬರುತಿಹುದು  ಕಣ್ಣುಸೆಳೆಯುತಾ ಸಂಜೆಯಾ ಸಮಯದಲ್ಲಿ ತಂಗಾಳಿ ಬೀಸುತಿರೆ ಮೈಮನವನಾವರುಸುವುದು ಸೌಗಂಧವು ಇನಿಯನೊಡನಾಡುತಿಹ ಇನಿಯಳ ಮುಡಿಯನ್ನು ರಸಿಕ ತನದಿ ಅಲಂಕರಿಸಿ ಮೈಮರೆಸುವುದು ಪಂಕಜಾ.ಕೆ. ಮುಡಿಪು ಕುರ್ನಾಡು

ಜೈ ಶ್ರೀ ರಾಮ್

ಜೈ ಶ್ರೀ ರಾಮ್   ರಾಮತಾರಕ ಮಂತ್ರ ಜಪಿಸುತ ರಾಮಕರುಣೆಯ ಪಡೆಯಿರಿ ಕಾಮಿತಾರ್ಥವ ಕೊಡುವ ಶ್ರೀಹರಿ ನಾಮದಿಂದಲಿ ಒಲಿಸಿರಿ ಸಾಮಗಾನದಿ ಭಜಿಸುತಿರುತಿರೆ ಭಾಮೆಯರಸನು ಬರುವನು ನೇಮದಿಂದಲಿ ಮಾಡಿ ಪೂಜೆಯ ರಾಮನೊಲಿದು ಬಿಡುವನು ದುಷ್ಟ ರಾವಣನನ್ನು ವಧಿಸುತ ಶಿಷ್ಟ ರಕ್ಷಣೆ ಗೈದನು ಇಷ್ಟವೆಲ್ಲವ ಕರುಣಿಸುತಲವ ಭ್ರಷ್ಟ  ಜನರನು ತರಿದನು ತಂದೆ ಮಾತನು ಉಳಿಸಲಿಕೆ ಕಾಡಿನೆಲ್ಲೆಡೆ ಅಲೆದನು ಮಾತೆ ಅಹಲ್ಯೆಗೆ ಶಾಪ ಮುಕ್ತಿಯ ಮಾಡಿ ಲೋಕದಿ ಮೆರೆದನು ಶಬರಿ ಭಕುತಿಗೆ ಒಲಿದು ಬಿಡುತಲಿ ಮುಕುತಿಯನ್ನು ಕರುಣಿಸಿ ಶರಣು ಬಂದ ವಿಭೀಷಣನಿಗೆ ಲಂಕೆ ಪಟ್ಟವ ಕೊಡಿಸಿದ ರಾಮನಾಮವ ಜಪಿಸುತಿರುತಿರೆ ಸಕಲ ಕಷ್ಟವು ಕಳೆವುದು ನೋವನೆಲ್ಲವ ಮರೆಸಿ ಮನದಲಿ ಹರುಷ ಮೂಡಿಸಿ ಬಿಡುವುದು ಪಂಕಜಾ.ಕೆ. ರಾಮಭಟ್.ಮುಡಿಪು

ಅಂದು ಇಂದು ಮಧುರಬಾಲ್ಯ

     ಮಧುರ ಬಾಲ್ಯ         ಅಂದು ಇಂದು    ಬೇಸಿಗೆ ರಜೆಯು ಯಾವಾಗ ಸಿಗುವುದೋ ಎನ್ನುವ ತವಕವು ತುಂಬಿತ್ತು  ರಜೆಯಲಿ  ಗೆಳೆಯರ ಜತೆಯಲಿ ಆಡುವ ಮಜವನು ಮನಸು ಬಯಸಿತ್ತು ಗುಡ್ಡೆಯ  ಸುತ್ತುತ ಹೊಳೆಯಲಿ ಈಜುತ  ನಲಿಯುತ ದಿನಗಳು  ಕಳೆದಿತ್ತು  ಬಯಲಲಿ ಆಡುತ   ಚಕ್ರವ ಹೊಡೆಯುತ  ರಜೆವನು ಕಳೆಯಲು ಮಜವಿತ್ತು   ಇಂದಿನ ದಿನಗಳು ರಜೆ ಬಂತೆಂದರೆ  ಮಕ್ಕಳಿಗೆ ಸಜೆಯೇ ಆಗುತಿದೆ ಗೆಳೆಯರು ಇಲ್ಲದೆ  ಚರವಾಣಿ ನೋಡುತ ದಿನಗಳ ಕಳೆಯುವುದೇ ಕಷ್ಟವಿದೆ ಗೆಳೆಯರ ಬಳಗವು ಇದ್ದರೂ ಎಲ್ಲರೂ  ಚರವಾಣಿಯಲೇ  ಮುಖ ಮರೆಸಿಹರು ಕಣ್ಣನು ಕೀಳಿಸಿ ಮೊಬೈಲ್ ನೋಡುತ ದಿನಗಳ ಸುಮ್ಮನೆ ಕಳೆಯುವರು   ಗೆಳೆಯರ ಜತೆಯಲಿ ಬಯಲಲಿ ಆಡುವ ಖುಷಿಯ  ನೀವು ಬಲ್ಲಿರೇನು ಪ್ರಕೃತಿಯ ಜತೆಯಲಿ ಸಿಗುವ ಆನಂದ ಮಕ್ಕಳೇ ನೀವು ತಿಳಿಯುವಿರೇನು  ಶ್ರೀಮತಿ ಪಂಕಜಾ. ಕೆ. ರಾಮಭಟ್.ಮುಡಿಪು ಕುರ್ನಾಡು .ದ. ಕ.

ಹೊಸವರ್ಷದಸಂಭ್ರಮ

*ಹೊಸವರುಷದ ಸಂಭ್ರಮ*  ಕಾವ್ಯಧಾರೆ ಮಾಗಿದ ಹಣ್ಣನು  ನೋಡುತ ಮರದಲಿ ಕೋಗಿಲೆ ರಾಗದಿ ಕೂಜನ ಗೈದಿದೆ ಬೀಗುತ ಮಾಮರ ಚಿಗುರನು   ಮೂಡಿಸಿ  ತಲೆಯನು  ತೂಗುತಿದೆ ಮಾಗಿಯ  ಚಳಿಯದು ಸರಸರ ಸರಿಯಿತು ಜೋಗುಳ ಹಾಡಿತು ಬೀಸುವ ಗಾಳಿಯು ಬಾಗುತ ತರುಲತೆ ಹೂಗಳನರಳಿಸಿ ಸ್ವಾಗತ ಕೋರುತಿದೆ ಬೇವಿನ  ಜತೆಯಲಿ  ಬೆಲ್ಲವ ಸೇರಿಸಿ ಮಾವಿನ ಸೊಪ್ಪಿನ  ತೋರಣ ಕಟ್ಟುತ ದೇವರ ಸೇವೆಗೆ   ತರತರ ಹೂಗಳ ಸೇರಿಸಿ ಹೆಣೆಯುವರು ಬಾವಿಯ ನೀರನು ಹಂಡೆಗೆ ತುಂಬಿಸಿ ಬೇವಿನ ಸೊಪ್ಪನು ಕೂಡಿಸಿ ಕುದಿಸುತ ದೇವನ ಪೂಜೆಗೆ ಮಡಿಯಲಿ ವಿಧವಿಧ ಭಕ್ಷ್ಯವ ಮಾಡುವರು      ಕುಸುಮವ ಬಿಡಿಸುತ  ಮಾಲೆಯ ಮಾಡುತ ಹೊಸತನ ತುಂಬುತಲೆಲ್ಲರು ಕೂಡುತ ವಿಷುವಿನ ದಿನದಲಿ  ಕಣಿಯನು  ದೇವರ ಮನೆಯಲಿ  ನೋಡುವರು ಹೊಸಹೊಸ ಬಟ್ಟೆಯ ಧರಿಸುತಲಿರುತಲಿ ಕುಸಿಯುವ ಮನಸಿಗೆ   ಭರವಸೆ ತುಂಬುತ ಬಿಸಿಬಿಸಿ ತಿಂಡಿಯ ಮಾಡುತ ಖುಷಿಯಲಿ ಮಂದಿಗೆ ಹಂಚುವರು ಬಂದಿದೆ  ವರುಷದ ಮೊದಲಿನ ಹಬ್ಬವು ತಂದಿದೆ  ಬುವಿಯಲಿ ಹಸಿರಿನ ಕ್ರಾಂತಿಯ ಮಂದಿಯರೆಲ್ಲರು ಜತೆಯಲಿ ಸೇರುತ ಹಾಡುತ ಕುಣಿಯುತಲಿ  ಕುಂದಿದ ಜೀವಕೆ ಹುರುಪನು ಮೂಡಿಸಿ ಚಂದದಿ ತರುಣಿಯರೆಲ್ಲರು ಸೇರುತ ಹೊಂದಿಸಿ ಬಿಡುವರು  ಮನೆಜನರೆಲ್ಲರ ತಮ್ಮಯ ನಗುವಿನಲಿ ಪಂಕಜ ಕೆ.ರಾಮ ಭಟ್ ಮುಡಿಪು

ಆರೋಗ್ಯಕ್ಕೆ ಮಾರಕ

ಆರೋಗ್ಯಕ್ಕೆ ಮಾರಕ ಉರಿಯುವ ಕೊಳ್ಳಿಯ ಬಾಯಲ್ಲಿ ಇಟ್ಟಂತೆ ಸಿಗರೇಟು ಸೇವನೆ ತಿಳಿ ನೀನು ಚಟ್ಟಕ್ಕೆ ಹತ್ತಿರವಾಗುತಿದೆ ಕೆಟ್ಟಚಟ ಬಿಡದಿದ್ದರೆ ಜೀವಕ್ಕೆ ಬಲುಹಾನಿ ಶ್ವಾಸಕೋಶಕ್ಕೆ ನುಗ್ಗಿದ ಹೊಗೆಯೆಲ್ಲ ಮೈಯೆಲ್ಲಾ ವ್ಯಾಪಿಸಿ ಬಿಡಬಹುದು ಕ್ಷಣಿಕ ಸುಖಕೆ ತೆರಬೇಕು ನಾವು ನಮ್ಮ ಅಮೂಲ್ಯ ಜೀವನವ ಹೊಗೆಯನ್ನು ಸೇದುವ ಅಭ್ಯಾಸ ತರವಲ್ಲ  ಕ್ಯಾನ್ಸರ್ ರೋಗಕ್ಕೆ ಕಾರಣ ಮನುಜನ ಸರ್ವನಾಶ ಇದರಿಂದ ಆದೀತು ನಿರ್ಲಕ್ಷ್ಯ ಬೇಡ ತಿಳಿಯೋಣ ಪಂಕಜಾ.ಕೆ. ರಾಮಭಟ್ ಮುಡಿಪು

ಗಿಡಮರ ಬೆಳೆಸಿ

ಗಿಡ ಮರ ಬೆಳೆಸಿ    ವಿಶ್ವ ಪರಿಸರ ದಿನಕೆ ಕಾಯದೆ  ಗಿಡಮರಗಳ ಬೆಳೆಸಿರಿ ಹಸಿರು ತುಂಬಿದ ಧರೆಯ ಒಡಲನು ಕಡಿದು ಬಿಸುಡದೆ ಉಳಿಸಿರಿ ಉಸಿರು ಕೊಡುವ ಹಸಿರು ಗಿಡಗಳು ಧರೆಯ ಚೆಲುವನು ಹೆಚ್ಚಿಸಿದೆ ತಂಪು ಗಾಳಿಯ ಬೀಸಿ ತನುವಿಗೆ ಹುರುಪು ಉಲ್ಲಾಸ  ತುಂಬಿದೆ ಕಾಡಿನೆಡೆಯಲಿ ನಲಿಯುತಿರುವ ಹಕ್ಕಿ ಸಂಕುಲ ಉಳಿಸಿರಿ ಜೀವ ಜಗತ್ತಿನ ವೈಚಿತ್ರ್ಯಗಳ ತೆರೆದು ತೋರುತ  ಬೆರೆಯಿರಿ ಬಿಸಿಲ ಬೇಗೆಯ ತಣಿಸಿ ಬಿಡುವುದು ಶುದ್ಧ ಗಾಳಿಯ ಬೀಸುತ ಮೈಮನಕೆ ಹುರುಪು ತುಂಬಿಸಿ ತನುವ ಬೇಸರ ಮರೆಸುತ ಬಣ್ಣ ಬಣ್ಣದ ಹೂಗಳರಲುತ ಕಣ್ಣು ಮನವನು ತುಂಬಿದೆ ಮರದ ಮೇಲ್ಗಡೆ ಕುಳಿತು ಹಾಡುವ ಕೋಗಿಲೆಯು  ಮೈಯ ಮರೆಸಿದೆ ಪಂಕಜಾ.ಕೆ. ರಾಮಭಟ್. ಮುಡಿಪು

ಮುಂಗಾರು ಮಳೆಯಾಗ

ಮುಂಗಾರು ಮಳೆಯಾಗ ಜಾನಪದ ಶೈಲಿ ಗೀತೆ ದೂರದ ಬಾನಾಗ ಕರಿಮುಗಿಲು ಕಟ್ಟೈತೆ  ಮಳೆ ಬರುವ ಸೂಚನೆ ಕಾಣುತೈತೆ ಮಳೆಬರುವ ಸೂಚನೆ ಕಾಣುತೈತೆ /ಮರಗಿಡ ಗಾಳಿಗೆ  ತಲೆದೂಗಿ ನಲಿದೈತೆ ಗುಡುಗು ಮಿಂಚಿನ ಆರ್ಭಟ ಜೋರೈತೆ ಗಾಳಿಯ ಮೊರೆತ ಕೇಳುತೈತೆ ಗಾಳಿಯ ಮೊರೆತ ಕೇಳುತೈತೆ/ಧರೆಯೊಡಲು ಸಂತಸದಿ ನಲಿದು ಬಿಟ್ಟೈತೆ ಬೇಸಿಗೆಯ ಬಿಸಿಲಿಗೆ ಬಳಲಿದ ತರುಲತೆ ಮಳೆನೀರ ಸಿಂಚನಕೆ ಕಾದೈತೆ ಮಳೆನೀರ ಸಿಂಚನಕೆ ಕಾದೈತೆ / ತಲೆಯೆತ್ತಿ ಬಾನಿನ ನೋಡುತ್ತಾ ನಿಂತೈತೆ ಮುಂಗಾರು ಮಳೆ  ಹರುಷವ ತಂದೈತೆ ರೈತನ ಮೊಗ ಅರಳೈತೆ  ರೈತನ ಮೊಗ ಅರಳೈತೆ / ಮಳೆಕಂಡು  ಹೊಸಹುರುಪು ಮೂಡಿ ಬಂದೈತೆ  ಬೆಳಗಾತ ಎದ್ದು ನೇಗಿಲ ಹಿಡಕೊಂಡು ಗದ್ದೆಯ ಬಯಲಿಗೆ ಹೊಂಟಾನ ಗದ್ದೆಯ ಬಯಲಿಗೆ ಹೊಂಟಾನ  /ನಮರೈತ  ಭರಪೂರ ಬೆಳೆಯ ಬೆಳೆತಾನ ಪಂಕಜಾ.ಕೆ. ರಾಮಭಟ್

ಕಾಯಕಯೋಗಿ

ಕಾಯಕಯೋಗಿ   ಮುಸುಕಿದ ಮೋಡವು ಮಳೆಯನು ಸುರಿಸಲು ಹಾಸಿತು ಹಸಿರಿನ ತೇರು ಬೀಸುತ ಗಾಳಿಯು ಇಳೆಯನು  ತಬ್ಬಲು ಹಾರಿತು ತುಂತುರು ನೀರು ಗುಡುಗುಡು ಗುಡುಗುತ ವರುಣನು ಬರಲು ಧರೆಯಲಿ ತುಂಬಿತು ಹರ್ಷ ಚಿಗುರನು  ಮೂಡಿಸಿ ತರುಲತೆ ನಲಿಯಲು ಬಿರಿಯಿತು ಸಗ್ಗದ ವರ್ಷ  ಗಡಗಡ ನಡುಗುವ ಚಳಿಯಲಿ ರೈತನು ಹೊರಟನು ಗೇಯಲು ಹೊಲದೆಡೆಗೆ ಹೆಂಟೆಯ ಒಡೆಯುತ ಗದ್ದೆಯ ಬಯಲಲಿ ಬೆಳೆವನು ಬೆಳೆಯ ಹಲವುಬಗೆ ಕನಸನು ಕಣ್ಣಲಿ ಮೂಡಿಸುತಿರುತಲಿ ದುಡಿವನು ಶ್ರಮದಲಿ ಮಣ್ಣಿನಲಿ ಹಗಲಿರುಳೆನ್ನದೆ  ಹೊಲವನು ಕಾಯುತ ಪಡೆಯುವ  ಹೊನ್ನನು ಕಸುವಿನಲಿ ಪಂಕಜಾ..ಕೆ.  ರಾಮಭಟ್ ಮುಡಿಪು

ನಮೋ ಗಣಪ

ನಮೋ  ಗಣಪ ಆದಿ ಪೂಜಿತ ಗಣಪತಿ ದೇವಗೆ ಮೊದಲ ವಂದನೆ ಸಲ್ಲಿಸುವೆ ಮಾಡಿ  ಹಲವಿಧ ಭಕ್ಷ್ಯ ಭೋಜ್ಯವ ನೀಡಿ ಅವನನು  ಬೇಡುವೆ ಸೊಂಡಿಲಾಡಿಸಿ ಬರುವ ಗಣಪಗೆ ಗರಿಕೆಯರ್ಪಿಸಿ ಪೂಜಿಸುವೆ ಕರವ ಮುಗಿಯುತ ಬೇಡಿಕೊಳ್ಳುವೆ ಹರಸು ನಮ್ಮನು ಎನ್ನುವೆ ಮಾಡಿ ಭಜನೆಯ ಹಾಡಿ ಹೊಗಳುತ ಬೇಡಿ ಕೊಳ್ಳುವೆ ಅವನನು ಭಕ್ತವತ್ಸಲ  ವಿಘ್ನರಾಜನು    ನಗುತ ಕೊಡುವನು ವರವನು ಚೌತಿ ದಿನದಲಿ ಬರುವ ಗಣಪನ ಭಕ್ತಿಯಿಂದಲಿ ನಮಿಸುವೆ ಕಾಮಿತಾರ್ಥವ ಕೊಡುವ ದೇವನ ಮೋದದಿಂದಲಿ ಸ್ತುತಿಸುವೆ ಶ್ರೀಮತಿ.ಪಂಕಜಾ.ಕೆ. ರಾಮಭಟ್