Skip to main content

Posts

Showing posts from January, 2024

ಮಾಡಿದ್ದುಣ್ಣೋ ಮಹರಾಯ

  ಮಾಡಿದ್ದುಣ್ಣೋ ಮಹರಾಯ  ವೃದ್ದಾಶ್ರಮದ ಬಾಗಿಲಲ್ಲಿ ಕುಳಿತ ಸಾಗರನಿಗೆ ಅಂದೇಕೋ ಬೇಡ ಬೇಡವೆಂದರೂ ಹಳೆಯ ನೆನಪುಗಳು  ಮನದಲ್ಲಿ ಸಾಗರದ ಅಲೆಗಳಂತೆ ಉಕ್ಕಿ ಉಕ್ಕಿ  ಬರುತ್ತಿತ್ತು.  ಚಿಕ್ಕಂದಿನಿಂದ ತನ್ನನ್ನು ಮುದ್ದಿಸಿ ತನ್ನ ಬೇಕು ಬೇಡಗಳನ್ನು ಪೂರೈಸುತ್ತಾ ತಮ್ಮ ಆಸೆ ಅಕಾಕ್ಷೆಗಳನ್ನೆಲ್ಲ  ಬದಿಗೊತ್ತಿ ತನಗಾಗಿ ಕಷ್ಟಪಟ್ಟು ಹಗಲಿರುಳೂ  ಬೆವರು ಹರಿಸಿ ದುಡಿದ ತಂದೆಯನ್ನು  ವೃದ್ದಾಪ್ಯದಲ್ಲಿ ತಾನು ಅನಾಥಾಶ್ರಮಕ್ಕೆ  ಸೇರಿಸಿದಾಗ ಅವರು  ಎಷ್ಟು ಬೇಸರ ದುಃಖ ಪಟ್ಟಿರಬಹುದು ಎನ್ನುವ   ಒಂದು ಚಿಕ್ಕ ಯೋಚನೆ ತನಗೆ ಅಂದು  ಬರುತ್ತಿದ್ದರೆ ತಾನು ಇಂದು ಈ ವೃದ್ಧಾಶ್ರಮದಲ್ಲಿ  ಮಕ್ಕಳಿದ್ದು  ಈ ರೀತಿ ಅನಾಥನಂತೆ ದಿನ ಕಳೆಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿದಾಗ ಪಶ್ಹಾತ್ತಾಪ ದಿಂದ ಸಾಗರನ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯಿತು.ತಂದೆಯನ್ನು ತಾನು  ಅಂದು ನಡೆಸಿಕೊಂಡ ರೀತಿ ನೆನೆದು ಆತ ನಾಚಿಕೆಯಿಂದ ಮುಖ ಕೆಳಗೆ ಹಾಕಿ ಕುಳಿತುಕೊಂಡ    ಪಂಕಜಾ.ಕೆ ಮುಡಿಪು  ಕುರ್ನಾಡು.ದ.ಕ

ಮತ್ತೆ ಕೂಗಿತು ಕೋಗಿಲೆ

ಮತ್ತೆ ಕೂಗಿತು  ಕೋಗಿಲೆ               ಪಾರ್ಕಿನ ಕಲ್ಲಿನ ಬೆಂಚಿನಲ್ಲಿ ಕುಳಿತ ಶ್ರೀಪತಿರಾಯರ ಮನಸು ಇಂದೇಕೋ ಅಸ್ತವ್ಯಸ್ತವಾಗಿತ್ತು.ತಾನು ಹೊರಡುವಾಗ  ತನ್ನನ್ನೇ ದಿಟ್ಟಿಸಿದ ಆಕೆಯ ಕಣ್ಣುಗಳಲ್ಲಿ ತುಂಬಿದ  ನೀರು ಯಾಕಾಗಿ ಇರಬಹುದು?ಏಕೋ ಇತ್ತೀಚೆಗೆ ರತ್ನ  ಮೌನಿಯಾಗುತ್ತಿದ್ದಾಳೆ ಅರಳು ಹುರಿದಂತೆ ಮಾತನಾಡುತ್ತಿದ್ದ ಆಕೆ ಯಾಕೆ ಮೌನವಾದಳು? ಅದನ್ನು ತಿಳಿಯಬೇಕೆನ್ನುವ ಕುತೂಹಲವೂ ತನಗಿಲ್ಲ  ಯಾಕೆ ಅದನ್ನು ತಿಳಿಯಲು ತನಗಿರುವ ಅಹಂ ಅಡ್ಡಬಂತೆ?ತಾನು ತಪ್ಪಿದೆಲ್ಲಿ ಎಂದು ಯೋಚಿಸಬೇಕಿತ್ತು              ಅವಳಿಗೇನು ಕಡಿಮೆ ಮಾಡಿದ್ದೇನೆ ಉಡಲು ಉಣ್ಣಲು ಕೊರತೆಯಿಲ್ಲ ಅರಮನೆಯಂತ  ಮನೆಯಿದೆ ಕೆಲಸಕ್ಕೆ ಆಳು ಕಾಳುಗಳಿದ್ದಾರೆ ಇನ್ನೇನು ಬೇಕು ಎನ್ನುವ ದೊರಣೆ ನನ್ನದು .  ಆದರೆ ಇಂದೇಕೋ ರತ್ನ ವಿಶೇಷವಾಗಿ ಕಾಡುತ್ತಿದ್ದಾಳೆ ಎಂದು ಯೋಚಿಸುತ್ತಾ ಇದ್ದಾಗ.ಪಕ್ಕದಲ್ಲಿಯೇ ಕುಳಿತ ವೃದ್ಧ ದಂಪತಿಗಳ ಸರಸ ಸಲ್ಲಾಪದತ್ತ ಮನ  ಹೊರಳಿತು.        ವಿದ್ಯಾ ನೀನು ನನ್ನ ಬಾಳಿಗೆ ಬಂದ ದಿನದಿಂದವೇ ನನ್ನ ಬಾಳಲ್ಲಿ ಬೆಳದಿಂಗಳು ಮೂಡಿತು ಎಂದು ಹೇಳಿ ಮಡದಿಯನ್ನು ಬಿಗಿದಪ್ಪುವ ವೃದ್ಧನನ್ನು ಕಂಡಾಗ ಶ್ರೀಪತಿರಾಯರ ಮನಸ್ಸು ಕೂಡಾ ಹೌದಲ್ಲವೇ ರತ್ನ ತನ್ನ ಬಾಳಿಗೆ  ಬಂದ  ದಿನವೇ  ತನ್ನ ಬಾಳು  ಕೂಡಾ ಬೆಳಕಾಗಿತ್ತಲ್ಲ ಆದರೆ ತಾನು ಅದನ್ನು ಒಮ್ಮೆಯೂ ಆ ವೃದ್ದರಂತೆ ಅವಳೊಡನೆ ಹೇಳಿಲ್ಲ ಯಾಕೆ ತಾನು ಅವಳೊಡನೆ ಒಮ್ಮೆಯೂ ಪ್ರೀತಿಯ ಮಾತನಾಡಲಿಲ್ಲ ತಾನು ತಪ್ಪಿದ್ದೆಲ್ಲಿ ಎನ್ನು

ಕೊನೆಯಿಲ್ಲದ ದಾರಿ ಕಥೆ

21  ಕೊನೆಯಿಲ್ಲದ ದಾರಿ    ರಾಕೇಶನ ಕಾಲುಗಳು  ಕೊನೆಯಿಲ್ಲದ ಆ ದಾರಿಯಲ್ಲಿ ನಡೆಯುತ್ತಾ ಇದ್ದರೂ  ಮನಸು ಮಾತ್ರ ಕಳೆದು ಹೋದ  ದಿನಗಳನ್ನು   ಮೆಲುಕು ಹಾಕುತ್ತಿತ್ತು                      ಚಿಕ್ಕಂದಿನಿಂದಲೂ ಬಡತನದಲ್ಲಿ ಬೆಳೆದ ರಾಕೇಶ ನಿಗೆ ಹಣದ ಬೆಲೆ ತಿಳಿದಿತ್ತು .ಆದ್ದರಿಂದ  ಶಾಲೆಗೆ ಹೋಗುತ್ತಿದ್ದಾಗಲೇ ಬೆಳಗ್ಗಿನ ಜಾವ  ಬೇಗನೆ ಎದ್ದು ಮನೆ ಮನೆಗೆ ಪೇಪರ್ ಹಾಕಿ ಸಂಪಾದನೆ ಮಾಡಿ ತನ್ನ ಶಾಲಾ ಪುಸ್ತಕ ಇತ್ಯಾದಿ ಸಣ್ಣಪುಟ್ಟ ಖರ್ಚುಗಳನ್ನು ಭರಿಸುತ್ತಿದ್ದ..                  ಓದಿನಲ್ಲಿ ಜಾಣನಾಗಿದ್ದ ರಾಕೇಶ್ ಪ್ರತಿ ತರಗತಿಯಲ್ಲು  ಪ್ರಥಮ ಸ್ಥಾನ ಬಂದು  ಎಸ್.ಎಸ್.ಎಲ್.ಸಿ ಯಲ್ಲಿ  ರಾಜ್ಯಕ್ಕೆ ಪ್ರಥಮ ಸ್ಥಾನ ಬಂದು ಆ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದ. ಆತನ ಮುಂದಿನ ಓದಿನ ಖರ್ಚನ್ನು ಸರಕಾರವೇ ಭರಿಸಿದ್ದರಿಂದ ರಾಕೇಶ್ ತನ್ನ ವಿದ್ಯಾಭ್ಯಾಸವನ್ನು ಪೂರೈಸಿ  ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ಹಾಗೂ ತನ್ನ. ಮನೆಯವರ ಬಡತನವನ್ನು ನೀಗಿಸಿದ್ದಲ್ಲದೆ  ತನ್ನಂತೆ ಬಡ  ಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಲಾಗದ   ಎಷ್ಟೋ ಜನರನ್ನು ತನ್ನ ಖರ್ಚಿನಲ್ಲಿ ಓದಿಸಿದ್ದು . ಅವರೆಲ್ಲಾ ಇಂದು ಉತ್ತಮ ಕೆಲಸದಲ್ಲಿದ್ದು .ರಾಕೇಶನ ಬಗ್ಗೆ ಅಭಿಮಾನವಿಟ್ಟು ಕೊಂಡಿದ್ದರು.                     ಎಷ್ಟೊಂದು  ಸುಂದರವಾಗಿತ್ತು  ನನ್ನ ಸಂಸಾರ  ಪತ್ನಿ ರಮಾ ನನ್ನ ಬೇಕು ಬೇಡಗಳನ್ನು ತಾನು ಹೇಳುವ ಮುಂಚೆಯೇ ತಿಳಿದುಕೊಂಡು  ಮಾಡುತ್ತಿದುದರಿಂದ ತನಗೆ ಮನೆಯ

ಮೋಸ ಗಾರ ಕಥೆ

ಮೋಸಗಾರ ಹವಾನಿಯಂತ್ರಿತ  ಕೊಠಡಿಯಲ್ಲಿ ಕುಳಿತ ರಮ್ಯಳನ್ನು ಕಾಣಲು ಯಾರೋ ಮೋಹನ ಅನ್ನುವವರು  ಬಂದಿದ್ದಾರೆ ಎಂದು ಜವಾನ  ಬಂದು ತಿಳುಸಿದಾಗ ,ಒಂದು ಕ್ಷಣ ರಮ್ಯಳ ಮನಸು ಗಲಿಬಿಲಿಗೊಂಡಿತು .ತನ್ನ ಭಾವನೆಗಳನ್ನು ನಿಯಂತ್ರಿಸಿ ಆಕೆ ಜವಾನನಿಗೆ ಅವರನ್ನು ಒಳಗೆ ಕಳಿಸಲು  ಹೇಳಿ ತನ್ನ ಮೊಬೈಲ್ ಹಿಡಿದು ತಿರುಗು ಖುರ್ಚಿಯನ್ನು  ಬಾಗಿಲಿಗೆ ಬೆನ್ನು ಹಾಕುವಂತೆ ತಿರುಗಿಕೊಂಡು ಕುಳಿತು ಸಂಭಾಷಣೆಯಲ್ಲಿ ನಿರತಳಾದಳು.                ಇದ್ದಕ್ಕಿದ್ದಂತೆ ಮೇ ಐ ಕಂ ಇನ್ ಮೇಡಂ ಅನ್ನುವ ಗಂಭೀರ ಸ್ವರ ಕೇಳಿದಾಗ ರಮ್ಯಾ ಫೋನ್ ಗೆ ಕೈ ಅಡ್ಡ ಇಟ್ಟು  ಎಸ್ ಕಮಿನ್ ಟೇಕ್ ಯುವರ್ ಸೀಟ್ ಎಂದು ಹೇಳಿ ಪುನಃ ಸಂಭಾಷಣೆಯಲ್ಲಿ ನಿರತಳಾದಳು .ಕಾಲುಗಂಟೆಯಾದರೂ ಆಕೆ ಮಾತು ಮುಗಿಸದಾಗ ಆತ  ಮೆಲ್ಲಗೆ ಕೆಮ್ಮಿ ಮೇಡಂ ಎಂದು ಹೇಳಿದಾಗ ಆಕೆ ಫೋನ್ ನಲ್ಲಿ ಸೀ.ಯೂ ಲಾಟರ್ ಎಂದು ಹೇಳಿ  ಸರಕ್ಕನೆ ಈ ಕಡೆ ತಿರುಗಿದಾಗ ಎದುರು  ಕುಳಿತ  ಮೋಹನನ ಮುಖ ಒಂದು ಕ್ಷಣ ಗಲಿಬಿಲಿಯಿಂದ ವಿವರ್ಣವಾಯಿತು            .ಸಾವರಿಸಿಕೊಂಡು ಕುಳಿತಾಗ ರಮ್ಯಾ ಎಸ್   ಹೇಳಿ ಎಂದು ಗಂಭೀರವಾಗಿ ಹೇಳಿ ಟೇಬಲ್ ಮೇಲಿದ್ದ ಫೈಲ್ ನತ್ತ ದೃಷ್ಟಿ  ನೆಟ್ಟಳು.ಮೇಡಂ ದಯವಿಟ್ಟು ಕ್ಷಮಿಸಿ .ತಮ್ಮ  ಕಂಪನಿಯಲ್ಲಿ ನನಗೆ  ಒಂದು ಕೆಲಸ ಕೊಡಲು  ಸಾಧ್ಯವೇ .ದೈನ್ಯವೇ ಮೂರ್ತಿವೆತ್ತಂತೆ ಕುಳಿತ ಅವನನ್ನು ಕಂಡಾಗ ಒಂದು ಕ್ಷಣ ರೋಷ ಉಕ್ಕಿ ಬಂದರೂ ಮರುಕ್ಷಣವೇ ಕೋಪವನ್ನು ನಿಯಂತ್ರಿಸುತ್ತಾ ಇಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲವಲ್ಲ

ಮಂಥರೆಯ ಕುತಂತ್ರ ಪರಿವರ್ಧಿನಿ ಷಟ್ಪದಿ

ಮಂಥರೆಯ ಕುತಂತ್ರ  ಪರಿವರ್ಧಿನಿ ಷಟ್ಪದಿ ಕೋಸಲ ದೇಶದ ರಾಜನು  ದಶರಥ ಹಾಸವ ಬೀರುತ ಮಡದಿಯರೊಡನೆಯೆ ತೋಷದಿ ರಾಜ್ಯವ ಪಾಲಿಸುತಿದ್ದನಯೋಧ್ಯಾ ನಗರದಲಿ ಕೂಸೊಂದಿಲ್ಲದ ಚಿಂತೆಯು ಕಾಡಲು ಬೇಸರ ಮೂಡಿತರಸನಾ ಮನದಲಿ ಸಾಸಿರ ಮುನಿಗಳ ಕರೆಸುತಲವರಲಿ ಸಲಹೆಯ ಕೇಳಿದನು ಮಾಡಿದ  ಯಾಗವ ಪುತ್ರನ ಪಡೆಯಲು ಬೇಡಿದ  ದೇವನ ಚರಣಕೆ ನಮಿಸುತ ಹಾಡುತ  ನಾಮವ ಬಕುತಿಯಲವನನು ಮನದಲಿ ಧೇನಿಸುತ ಮಾಡಿದ ಯಜ್ಞದ ಪುಣ್ಯದ ಫಲದಲಿ ಮೂಡಿತು  ಗರ್ಭದಿ  ಮಕ್ಕಳ ಕಲರವ ದೂಡಿತು ರಾಜನ ಚಿಂತೆಯು ರಾಣಿಯರೆಲ್ಲರು ಹಡೆಯುತಲಿ ಮುದ್ದಿನ ಮಕ್ಕಳು ಬೇಗನೆ ಬೆಳೆಯಲು ಮುದ್ದಿಸಿ ಕಲಿಸಿದನವರಿಗೆ ವಿದ್ಯೆಯ ಗದ್ದುಗೆಯೇರುವ ಸಮಯವು ಬರುತಿರೆ ತೋಷವು ಮನದಲ್ಲಿ ಗದ್ದಲ  ಮಾಡುತ ಪುರಜನರೆಲ್ಲರು ಸಿದ್ಧತೆ  ಮಾಡಲು  ಸರಸರ ಸರಿಯುತ   ಸದ್ದಿಲ್ಲದೆಯೇ ನೆರೆದರು  ಹರುಷದಿ  ಹಾರಿಸಿ  ಬಾವುಟವ ಮಂಥರೆ ಮಾತನು ಕೇಳಿದ ಕೈಕೆಯಿ ಮಂಥನ ಮಾಡುತ ಮನದಲಿ ಯೋಚಿಸಿ ಪಂಥದಿ ಪಡೆದಿಹ ವರಗಳ ಕೇಳಲು ನಡೆದಳು ರಾಜನೆಡೆ ಅಂತಃಪುರದೆಡೆ ಬರುತಿಹ  ಸಖನೆಡೆ- -ಯಂತರ ಕಾಯುತ  ಕೇಳಿದಲೊಲವಲಿ ಚಿಂತೆಗೆ ಹಚ್ಚುವ ಮಾತೊಂದರುಹಲು ದಶರಥ  ನೊಂದಿಹನು ಪಂಕಜಾ.ಕೆ. ರಾಮಭಟ್

ತಾಳ್ಮೆಯಿರಲಿ

ತಾಳ್ಮೆಯಿರಲಿ ಎಷ್ಟು ಹೊತ್ತಿನಿಂದ ಅಲ್ಲಿ ಕುಳಿತಿದ್ದನೋ ಅವನಿಗೆ ನೆನಪಿಲ್ಲ ಇಹದ ಪರಿವೆಯೇ ಇಲ್ಲದೆ ಯಾವೊದೋ ಯೋಚನೆಯಲ್ಲಿ ಮುಳುಗಿದ್ದ  ಅವನನ್ನು ಹುಡುಕಿಕೊಂಡು ಬಂದ  ಗೆಳೆಯ ವೈಭವ ,ಇಲ್ಲಿ ಇದ್ದಿಯೇನೋ  ಬಡವ ನಿನ್ನನ್ನು ಎಲ್ಲೆಂದು ಹುಡುಕುವುದು. ಏನೋ ಮದುವೆಯಾಗಿ  ಇನ್ನೂ ಆರು  ತಿಂಗಳೂ ಆಗಿಲ್ಲ  ಈಗಲೇ ಹೀಗೆ ಇಹದ ಪರಿವೆಯಿಲ್ಲದೆ  ಕುಳಿತುಕೊಂಡರೆ ಮುಂದೇನು ಎನ್ನುತ್ತಾ ಕೀಟಲೆ ಮಾಡುತ್ತಾನೆ.              ಗೆಳೆಯನ ಕೀಟಲೆಗೆ ಮೌನವಾಗಿಯೇ ಇರುವ ಶರತ್ ನನ್ನು ಕಂಡು ಅಚ್ಚರಿಪಟ್ಟ ವೈಭವ ನಿಗೆ ಎಲ್ಲೋ ಏನೋ ತಪ್ಪಿದೆ ಇಲ್ಲದಿದ್ದರೆ ಶರತ್ ಈ ರೀತಿ ಮೌನವಾಗಿರುವುದೆಂದರೇನು? ಅರಳು ಹುರಿದಂತೆ ಮಾತಾನಾಡುವ ಶರತ್ ಎಲ್ಲಿ ಇಂದೀಗ ಮೌನದ  ಮೊರೆ ಹೋದ ಶರತ್ ಎಲ್ಲಿ ಎಂದು ಯೋಚಿಸಿ  ಹೇಗಾದರೂ ಗೆಳೆಯನ ಮನದ ಚಿಂತೆ ತಿಳಿಯ ಬೇಕೆಂದು ಅವನನ್ನು ಎಬ್ಬಿಸಿ ತನ್ನೊಂದಿಗೆ ಅವನನ್ನು ಒಂದು ಕಾಪಿ ಹೌಸ್ಗೆ  ಕರೆದೊಯ್ದು ಕಾಪಿ ತಿಂಡಿಗೆ ಹೇಳಿ ಅದು ಬರುವ ತನಕ ಮಾತನಾಡಿಸೋಣವೆಂದು  ಏನೋ ಶರತ್ ಇಷ್ಟೊಂದು ಮೌನವಾಗಿದ್ದಿಯಾ .ಏನು ನಿನ್ನ ಚಿಂತೆ ನನ್ನೊಡನೆ ಹೇಳಬಾರದೆ ಎಂದು ಕೇಳುತ್ತಾನೆ.           ಅಷ್ಟರಲ್ಲಿ ಕಾಪಿ ತಿಂಡಿ ಬಂದಿದ್ದರಿಂದ  ಗೆಳೆಯನಲ್ಲಿ ತಿಂಡಿ ತಿನ್ನಲು ಒತ್ತಾಯಿಸಿ ತಿನ್ನುತ್ತ ಇರುವಾಗ ಇನ್ನೊಮ್ಮೆ ಅವನನ್ನು ಮಾತಿಗೆಳೆಯುತ್ತಾನೆ. ಶರತ್  ತನ್ನ ಮನದ ಚಿಂತೆಯನ್ನು ಹೇಳಿ ನಮ್ಮಿಬ್ಬರ ಮಧ್ಯೆ ಇರುವ ಈ  ಬಿರುಕು ಕಂದಕವಾಗಬಹುದೇ ಅದನ್ನು ಹೇಗೇ ಮುಚ್ಚು

ರಾಮ ಪ್ರತಿಷ್ಠಾಪನೆ ಭೋಗಷಟ್ಪದಿ

  ರಾಮ ಪ್ರತಿಷ್ಠಾಪನೆ ಭೋಗ ಷಟ್ಪದಿ ತಾಮವನ್ನು ಕಳೆಯಲಿಕ್ಕೆ ರಾಮನಾಮ ಭಜಿಸುತಿದ್ದು ನೇಮದಿಂದ ಪೂಜೆ ಮಾಡೆ ನಮ್ಮ ಹರಸುವ ಕಾಮಿತಾರ್ಥವನ್ನುಕೊಡುವ ಭಾಮೆಯರಸ ರಾಮಚಂದ್ರ ನಾಮಜಪವ ಮಾಡುತಿರಲು ಮುಕುತಿ ಕೊಡುವನು ಮಂದಿಯೆಲ್ಲ ಸೇರಿಕೊಂಡು ಕುಂದುಬಾರದಂತೆ  ಭಜಿಸಿ ಕಂದ ಬಾಲರಾಮನನ್ನು ನುತಿಸಿ ಪಾಡುವ ಮುಂದೆ ನಿಂತು ಕಾಯುತಿದ್ದು ತಂದೆಯಂತೆ ಪಾಲಿಸುತ್ತ ಚಂದದಿಂದ  ಬಾಳಿಗೆಲ್ಲ ಬಣ್ಣ ಬಳಿವನು ದಶಕದಿಂದ ಕಾಯುತಿದ್ದ ಶಕುನವಿಂದು ಕೂಡಿ  ಬರಲು ಬಕುತಗೊಲಿದ ರಾಮಚಂದ್ರ ಮೊಗವ ತೋರಿದ  ಮುಕುಟ ಮಣಿಯ ತೊಡಿಸಲಿಕ್ಕೆ ರಕುತ ಕೋಡಿ ಹರಿಯ ಬಿಟ್ಟು ಶಕುತಿಯಿಂದ ಕಾದ ಪುಣ್ಯ ಫಲವ ಕೊಟ್ಟಿತು ಐದು ದೀಪಗಳನು ಹಚ್ಚಿ ಗೈದು ಪೂಜೆಯನ್ನು ನಾವು ಮೇದಿನಿಯಲಿ ರಾಮ ನಾಮವನ್ನು ಹರಡುವ ಮೋದಿಯೊಬ್ಬ  ಮಾಡಿ ಜಾದು ಕಾದಿ ವ್ಯಾಜ್ಯವನ್ನು ಬೇಗ ಕಾದು  ಕುಳಿತ ದಿನಕೆ ಕಣ್ಣು ಸಾಕ್ಷಿಯಾಗಿದೆ ಪಂಕಜಾ..ಕೆ. ರಾಮಭಟ್

ಸಾಧನೆಯ ತಪ

ಸಾಧನೆಯ ತಪ ತನ್ನ ಹೊಸ  ಮನೆಯ ಬಾಲ್ಕನಿಯ ಉಯ್ಯಾಲೆಯಲ್ಲಿ ಕುಳಿತ ಶರಣ್ಯಳ ಮನದಲ್ಲಿ ಇಂದಿನ ಈ ಸುಖೀ ಜೀವನದಲ್ಲೂ ಹಳೆಯದನ್ನು ನೆನೆಸಿ ಅಳು ನಗು  ಎರಡೂ ಒಟ್ಟೊಟ್ಟಿಗೆ  ಬರುತಿತ್ತು               ಕಡು ಕಷ್ಟದಿಂದ ಬೆಳೆದ ಶರಣ್ಯ  ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಾಗ , ತನ್ನ 5 ವರ್ಷದ ಮಗನನ್ನು ಕಟ್ಟಿಕೊಂಡು ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡುತ್ತಾ ಮಗನನ್ನು  ಸಾಕುತ್ತಿದ್ದಳು.       ಚಿಕ್ಕವನಾದರೂ ,ತಾಯಿಯ ಕಷ್ಟವನ್ನು ತಿಳಿದಿದ್ದ  ಮಗು  ಚೈತನ್ಯ ಅಮ್ಮನಿಗೆ ಯಾವುದೇ ತೊಂದರೆ ಕೊಡದೆ ಅಮ್ಮ ಕೆಲಸಮಾಡುವ ಸ್ಥಳದಲ್ಲಿ ಆಟವಾಡುತ್ತಾ ಅಮ್ಮ ಬರುವ ತನಕ ಕಾದು ಕುಳಿತು ಕೊಳ್ಳುತ್ತಿದ್ದ.          ಒಂದು ದಿನ ವಿಪರೀತ ಕೆಲಸ ಮಾಡಿದ್ದರಿಂದ  ದಣಿದು ಶರಣ್ಯ ಅಲ್ಲೇ ಗೋಡೆಗೆ ಒರಗಿ ಕುಳಿತುಕೊಂಡಳು ಅದನ್ನು ಕಂಡ   ಚೈತನ್ಯ ಓಡೋಡಿ ಬಂದು ಅಮ್ಮನ  ಧೋತರದಿಂದವೇ ಆಕೆಯ ಬೆವರಿದ  ಹಣೆಯನ್ನು ಒರೆಸಿ, ಅಮ್ಮ ಅಮ್ಮ ನಾನು ದೊಡ್ಡವನಾಗಿ ಚೆನ್ನಾಗಿ ಕಲಿತು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವೆ ಅಳಬೇಡಮ್ಮ .ಎಂದು  ಮುದ್ದು ಮುದ್ದಾಗಿ ಹೇಳಿದ್ದು ಕಂಡು ಆಯಾಸದಲ್ಲೂ ಶರಣ್ಯಳ ಮೊಗದಲ್ಲಿ ಮಂದಹಾಸ ಮಿನುಗಿತು            ಆಕೆ ಮಗನನ್ನು ತಬ್ಬಿ  ಕಣ್ಣೀರಿಟ್ಟಳು.  ತಾಯಿಯ ಕಣ್ಣೀರನ್ನು ತನ್ನ ಚಿಕ್ಕ ಕೈಗಳಿಂದ ಒರೆಸುತ್ತ ಅಳಬೇಡ ಅಮ್ಮ   ಎಂದು ಸಮಾಧಾನಿಸುತ್ತಿದ್ದ  ಅವನನ್ನು ಕಂಡು ಅಲ್ಲಿಯ ಕೆಲಸಗಾರರ ಕಣ್ಣುಗಳು ತುಂಬಿ ಬಂದಿತ್ತು.                 

ಪಾವನಿ ಕಥೆ

ಪಾವನಿ              ಕಡಲ ತಡಿಯಲ್ಲಿ  ಕಲ್ಲು ಬೆಂಚಿನಲ್ಲಿ ಕುಳಿತು ಹಾರಿ ಬರುತ್ತಿರುವ ಅಲೆಗಳನ್ನೇ ನೋಡುತ್ತಾ ಇದ್ದ  ಪಾವನಿಯ ಮನಸ್ಸು ಹುಚ್ಚೆದ್ದ ಕುದುರೆಯಂತೆ ಅಶಾಂತಿಯಿಂದ ಕೂಡಿತ್ತು.             ಬೇಡ ಬೇಡವೆಂದರೂ ಕಳೆದುಹೋದ ಜೀವನದ ಪುಟನೆಗಳ ನೆನಪುಗಳು ಒಂದರ ಹಿಂದೊಂದು ಬಂದು ಘಾಸಿ ಗೊಳಿಸಿದಾಗ ,ಪಾವನಿ ಕಣ್ಣು ಮುಚ್ಚಿ ನೆನಪಿನಾಳದಲ್ಲಿ ಮುಳುಗಿ  ಹೋದಳು .           ಹಿ ಪಾವ್ ಪ್ಲೀಸ್ ಕಣೆ ನನಗೆ ಸ್ನೇಹಿತರ ಜತೆ ಪಿಕ್ನಿಕ್ ಹೋಗಲೇ ಬೇಕು ಅಪ್ಪ ಅಮ್ಮನನ್ನು  ಒಪ್ಪಿಸು ಎಂದು ಪ್ರತಿಯೊಂದಕ್ಕೂ ತನಗೆ ದುಂಬಾಲು ಬೀಳುವ ತಮ್ಮ ಪ್ರವೀಣನೆಂದರೆ ಪಾವನಿಗೂ ಅಚ್ಚುಮೆಚ್ಚು .ತನ್ನ ನಂತರ 5 ವರ್ಷಗಳ ನಂತರ ಹುಟ್ಟಿದ ತವರಿನ ಏಕೈಕ ಕುಡಿ ಎಲ್ಲರ ಕಣ್ಮಣಿಯಾಗಿದ್ದರೂ ಅವನು ಹೆಚ್ಚು ಅಂಟಿಕೊಂಡಿದ್ದು ತನ್ನನ್ನೇ. ಪ್ರತಿಯೊಂದಕ್ಕೂ ಅಕ್ಕ ಅಕ್ಕಾ ಎಂದು ತನ್ನ ಹಿಂದೆ ಮುಂದೆ ತಿರುಗುವ ತಮ್ಮನೆಂದರೆ ತನಗೂ ಇಷ್ಟ ಅವನ  ಬೇಕು ಬೇಡಗಳನ್ನೆಲ್ಲಾ ನೋಡಿಕೊಳ್ಳುವುದೆಂದರೆ ತನಗೆ ಇಷ್ಟ . ತನ್ನ ಶಾಲೆಯ ಕೆಲಸಗಳ ಜತೆ ತಮ್ಮನನ್ನು ನೋಡಿಕೊಳ್ಳುತ್ತಾ ಅವನ ವಿದ್ಯಾಭ್ಯಾಸದಲ್ಲೂ ಸಹಾಯ ಮಾಡುತ್ತಿದ್ದ ಪಾವನಿಯನ್ನು ಕಂಡು  ತಂದೆ ತಾಯಿ   ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು .                ಒಮ್ಮೆ ಯಾವುದೋ ನೆಂಟರ ಮನೆಯ ಕಾರ್ಯಕ್ರಮಕ್ಕೆಂದು ತಂದೆ ತಾಯಿಯ ಜತೆ ಹೋದ ಪ್ರವೀಣ ಬರುವಾಗ ಬಸ್ ಅಪಘಾತವಾಗಿ ತಂದೆ ತಾಯಿಯರನ್ನು ಕಳೆದುಕೊಂಡು ಪವಾಡ ಸದೃಶವಾಗಿ ಉಳಿದು ಕೊಂಡಾ

ಸೀತಾಪಹರಣ ಭಾಮಿನಿ ಷಟ್ಪದಿ

ಸೀತಾಪಹರಣ ಭಾಮಿನಿ ಷಟ್ಪದಿ ಕಾಡಿನಲ್ಲಿಹ  ಜಿಂಕೆ ಮರಿಯನು ನೋಡಿ ಸೀತೆಯು ಹಠವ ಮಾಡುತ ಬೇಡಿಕೊಂಡಳು  ಪತಿಯ  ಕರವನು ಹಿಡಿದು ಕೊಳ್ಳುತಲಿ ಓಡಿ ಹೋಗುವ ಮೃಗವ ಪಡೆಯಲು ಕಾಡಿನೆಡೆಯಲಿ ನಡೆದು ಬರುತಲಿ ಹೂಡಿ ಬಾಣವ  ಕೊಂದು ಬಿಟ್ಟನು  ರಾಮ  ಬೆನ್ನಟ್ಟಿ  ತಕ್ಕ ಸಮಯವ ಕಾದು ರಾವಣ ಪಕ್ಕ ಬಂದನು ವೇಷ ಬದಲಿಸಿ  ರೊಕ್ಕಬೇಡವದೆಂದು ಹೇಳುತ. ಸೆಳೆದ ಸೀತೆಯನು ಠಕ್ಕ ಸನ್ಯಾಸಿಯನು ಕಾಣುತ ರೆಕ್ಕೆ ಮುರಿದಿಹ ಹಕ್ಕಿಯಂತೇ ಬಿಕ್ಕಿ ಕೂಗುತ  ರಾಮ ಲಕ್ಷ್ಮಣರನ್ನು ಕರೆಯುವಳು ಹರಿಯ ನೆನೆದು ಜಟಾಯು ಹೊರಟನು  ಮರೆತು ತನ್ನಯ ಜೀವದಾಸೆಯ ಭರದಿ ಕಾದಿದ ದುರುಳ ರಾವಣನನ್ನು ತಡೆಯುತಲಿ ತರಿದು  ಬಿಟ್ಟನು ಬೀಸಿ ಕತ್ತಿಯ  ಮುರಿದು ರೆಕ್ಕೆಯ ತೂರಿ ಭರದಲಿ ಧರೆಗೆ ಬಿದ್ದಿತು ಹಕ್ಕಿಯಾಗಲೆ ಸೋತು ಸೊರಗುತಲಿ ಮರಳಿ ಬಂದಿಹ ರಾಮ ಲಕ್ಷ್ಮಣ ತೆರೆದ ಬಾಗಿಲಲಿಣುಕಿ ನೋಡಲು ಬರಿಯ ಗುಡಿಸಲ ಕಂಡು  ಬೇಸರ ಪಟ್ಟು ನಿಂತಿಹರು  ಮರೆಯಲಿರುತಿಹ  ಬಿಲ್ಲು ಬಾಣವ  ಕರದಿ ಹಿಡಿಯುತ  ಕಾಡಿನೆಲ್ಲೆಡೆ  ತಿರುಗಿ ರಾಮನು ಹುಡುಕಿ ಸೀತೆಯ ನಡೆದು ಬಳಲಿದನು ಹರಿವ ನೀರನು  ಕರದಲೊರೆಸುತ ಕರವ ಮುಗಿಯುತ ಗರುಡನಳಿಯನು   ಕರೆದು ತಿಳಿಸಿದ  ದುರುಳ ಮಾಡಿದ ಮೋಸ ಬೇಗದಲಿ ನೆರೆದ ವಾನರ ವೀರರೆಲ್ಲರ ಕರೆಸಿ ಕೊಂಡನು ತನ್ನ ಕಾರ್ಯಕೆ  ಸರಿಸಿ ಬರುತಿಹ ತಡೆಯನೆಲ್ಲವ ಗೆದ್ದು ವೇಗದಲಿ ಭಾಮಿನಿಯು ತಾ ಕಷ್ಟ  ಪಡುತಲಿ ರಾಮ ನಾಮವ  ಭಜಿಸುತಿರುತಲಿ ಸಾಮಗಾನವ ಹಾಡಿ  ತನ್ನಯ ಬವಣೆ ಮರೆಯುವಳು ಕಾಮಿತಾರ್ಥವ ಕೊಡುವ ದೇವನು

ಮತ್ತೆ ಮೂಡಿತು ಒಲವು

ಮತ್ತೆ ಮೂಡಿತು ಒಲವು ಗೆಳೆಯರ ಒತ್ತಾಯಕ್ಕೆ  ಪುತ್ತೂರು ಮಹಾಲಿಂಗೇಶ್ವರ ದೇವರ  ಜಾತ್ರೆಗೆ ಹೋಗಿದ್ದ ಶಶಾಂಕನ ಮನಸ್ಸು ಏಕೋ ಅಸ್ತವ್ಯಸ್ತವಾಗಿತ್ತು.ತಾನು ಏನನ್ನೋ ಕಳೆದು ಕೊಂಡ ಭಾವನೆ . ಮನಸ್ಸಿನ ಮೂಲೆಯಲ್ಲಿ ಎಂತದೋ ಒಂದು ಹೇಳಲಾರದ ಭಾವನೆಯು ಒತ್ತರಿಸಿ ಬಂದು ಮೌನವಾಗಿ ಗೆಳೆಯರ ಜತೆ ಹೆಜ್ಜೆ ಹಾಕುತ್ತಿದ್ದ, ಶಶಾಂಕನನ್ನು ಆ ಧ್ವನಿ ಹಿಡಿದು ನಿಲ್ಲಿಸಿತು. ಆ ಧ್ವನಿ ತೀರಾ ಪರಿಚಿತವೆನಿಸಿತು ಆತನಿಗೆ ಜನಜಂಗುಳಿಯನ್ನು ಸರಿಸಿ ಧ್ವನಿಯ ಒಡತಿಯನ್ನು ಪತ್ತೆ ಹಚ್ಚಲೆಂದು ಧಾವಿಸಿ ಬಂದ ಶಶಾಂಕನಿಗೆ ನಿರಾಸೆಯಾಯಿತು.                   ಆಕೆಯಾಗಲೇ  ಅಲ್ಲಿಂದ ಸರಿದು ಹೋಗಿದ್ದಳು. ಇದೇನು ತನ್ನ ಭ್ರಮೆಯೊ ಅಲ್ಲ ಆಕೆ ನಿಜವಾಗಿಯೂ ಜಾತ್ರೆಗೆ ಬಂದಿದ್ದಾಳಾ ಎನ್ನುವುದು ತಿಳಿಯದೆ  ಗೊಂದಲಕ್ಕೆ ಒಳಗಾದ ಶಶಾಂಕ ದೇವರೇ ಇಂದಾದರು ನನ್ನ ಮನ.ಮೆಚ್ಚಿದ ಹುಡುಗಿ ನನಗೆ ಸಿಗುವಂತೆ ಮಾಡು ಎಂದು ಮನಸಾರೆ ಬೇಡಿಕೊಂಡ  ಅಲ್ಲಿಂದ ಮುಂದೆ ಜಾತ್ರೆಯಲ್ಲಿ ತಿರುಗುತ್ತಿದ್ದರೂ ಅವನ ಕಣ್ಣುಗಳು ಆ ಧ್ವನಿಯ ಒಡತಿಯನ್ನು ಅರಸುತ್ತಿತ್ತು .ಕಿವಿ ಆ ಧ್ವನಿಗಾಗಿ ಕಾತರಿಸುತ್ತಿತ್ತು .                     ಜಾತ್ರೆಯ ಬಯಲಿನಲ್ಲಿದ್ದರೂ ಶಶಾಂಕನ ಮನ ಹಿಂದಕ್ಕೆ ಓಡಿತು .ಮನಸ್ವಿನಿ ಮತ್ತು ತಾನು ಪ್ರೀತಿಯಿಂದ ಇದ್ದ ಕ್ಷಣಗಳು, ಚಿಕ್ಕ ಪುಟ್ಟ ಕೆಲಸಕ್ಕೂ ತನ್ನನ್ನೇ ಅವಲಂಬಿಸುವ ಆ ಮುಗ್ಧ ಮನದ ಹುಡುಗಿ ,ಆತನ ಕನಸಿನ ಕನ್ಯೆಯಾಗಿದ್ದಳು ಚಿಕ್ಕಂದಿನಿಂದಲೇ ಹೆತ್ತವರು  ಮನಸ್ವಿನಿಯನ್ನು 

ಬಾಳ ದೋಣಿಗೆ ನೀ ಜತೆಯಾದೆ

ಬಾಳ ದೋಣಿಗೆ ನೀ ಜತೆಯಾದೆ ವರಾಂಡದ ಆರಾಮ ಕುರ್ಚಿಯಲ್ಲಿ ಕುಳಿತು ಪೇಪರ್ ಓದುತ್ತಿದ್ದ ಚರಣ್ ನ ಮನ ಹಕ್ಕಿಯಂತೆ   ಹಾರಾಡುತ್ತಿತ್ತು  ಬಾಯಿ ಕವಿತೆಯೊಂದನ್ನು ಗುಣುಗುಣಿಸುತ್ತಿದ್ದರೂ, ಮನಸ್ಸು ಮುದ್ದಿನ  ಮಡದಿಯ ಸಾಮಿಪ್ಯ ಬಯಸುತ್ತಿತ್ತು.  ನನ್ನಾಸೆಯ ಹೂವೆ ಒಲವಿನ ಚಕೋರಿಯೇ ಬಾಳ  ದೋಣಿಗೆ ನೀ ಜತೆಯಾದೆ  ನನ್ನಾಸೆ ಎಲ್ಲಾ ನೀನಾದೆ ಚೆಲುವೆ  ಮೆಲ್ಲಗೆ ರಾಗವಾಗಿ ಹಾಡುತ್ತಾ  ಇದ್ದವನನ್ನು ಎಚ್ಚರಿಸಿದ್ದು ಬಿಸಿ ಬಿಸಿ ಕಾಫಿ ಹಿಡಿದು ಬಂದ ಮಡದಿಯ ನಗು ಮುಖ . ಆ ಸ್ನಿಗ್ಧ ಸುಂದರ ಮುಖ ಕಂಡಾಗಳೆಲ್ಲಾ ಅವನ ಕಣ್ಣು ಹೊಳೆಯುತ್ತಿತ್ತು.ಇಂದು ಆದೇ ರೀತಿ ಆಗಿ ಖುಷಿಯಿಂದ  ಕಾಪಿ ಪಡೆದು ಹೆಂಡತಿಯ ಕೈಯನ್ನು ಮೃದುವಾಗಿ ಎಳೆದ . ಗಂಡನ ಅನಿರೀಕ್ಷಿತ ವರ್ತನೆಯಿಂದ ಆಯತಪ್ಪಿ ಆಕೆ ದೊಪ್ಪೆಂದು ಅವನ ತೊಡೆಯ ಮೇಲೆ ಬಿದ್ದಳು. ಕೂಡಲೇ  ಕಾಪಿಯನ್ನು  ಟೀಪಾಯಿ  ಮೇಲೆ ಇಟ್ಟ ಚರಣ್, ಮಡದಿಯನ್ನು ಬಳಸಿ ಕೆನ್ನೆಗೆ ಮೃದುವಾಗಿ ಮುತ್ತಿಟ್ಟ.ಹುಸಿಮುನಿಸಿನಿಂದ  ಸೌಮ್ಯ ತಟ್ಟನೆ ಗಂಡನ ಕೈ ಬಿಡಿಸಿಕೊಂಡು ಏಳಲು ಹೋದಾಗ ಆತ ಅವಳನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಂಡು ಎಲ್ಲಿಗೆ ಹೋಗುವೆ ನನ್ನ ಮುದ್ದಿನ ರಾಣಿ ಎಂದು ಕೆನ್ನೆ ಹಿಂಡಿದ ಗಂಡನ ಹಾಡು ಕೇಳಿ ನಾಚಿಕೆಯಿಂದ ಸೌಮ್ಯಳ ಮುಖ ಟೊಮ್ಯಾಟೋ ಹಣ್ಣಿನಂತೆ ಕೆಂಪಾಯಿತು .ಅಯ್ಯೋ ಬಿಡಿ ಬೆಳ್ಳಂಬೆಳಗ್ಗೆ ನಿಮಗೆ ಇಂದು ಏನಾಗಿದೆ ಅಲ್ಲಿ ಅಡಿಗೆ ಮನೆಯಲ್ಲಿ ಪಾಪ ಸ್ನೇಹ ಒಬ್ಬಳೇ ಕೆಲಸ ಮಾಡುತ್ತಿದ್ದಾಳೆ  ,ಮೊಮ್ಮಗು  ಬರುವ ಸಮಯವಾದರೂ ನ

ಛಲದ ಬದುಕು

ಹಣದ ಬೆಲೆ   ಶರತನದು ದುಂದು  ವೆಚ್ಚದ ಸ್ವಭಾವ. ತನಗೆ ಬಂದ ಸಂಬಳವನ್ನೆಲ್ಲಾ  ಗೆಳೆಯರ ಜತೆ ಪಾರ್ಟಿ ಅದು ಇದು ಎಂದು ಖರ್ಚುಮಾಡುತ್ತಿದ್ದ .ತಂದೆ ತಾಯಿ ಎಷ್ಟೋ ಹೇಳಿ   ನೋಡಿದರು. ಸ್ವಲ್ಪವಾದರೂ ಉಳಿತಾಯ ಮಾಡಬೇಕು . ನಾಳೆ  ನಿನ್ನ ಮದುವೆ ಆದ ಮೇಲೆ ಸಂಸಾರದ ಖರ್ಚಿಗೆ ಬೇಡವೇನೋ  ಎಂದು,.ಆಗ ಆತ ಉಡಾಫೆಯಿಂದ ಆಗ ನೋಡೋಣಮ್ಮ ಅದಕ್ಕಾಗಿ ಈಗಲೇ ಯಾಕೆ ಉಳಿತಾಯ  ಮಾಡಬೇಕು ಎಂದು ಮಾತು ಹಾರಿಸಿ ಬಿಡುತಿದ್ದ.  ತಂದೆ ತಾಯಿಗೆ ಮಗನದೆ ಚಿಂತೆ .ಮದುವೆ ಆದರೆ ಸರಿಯಾದಾನೆಂದು ತಾವೇ ಹುಡುಕಿ ಒಳ್ಳೆ ಹೆಣ್ಣಿನ ಜತೆ ಮದುವೆ ಮಾಡಿಸುತ್ತಾರೆ.            ಮದುವೆ ಆದಮೇಲೆಯೂ ತನ್ನ ಹಳೆ  ಚಾಳಿಯನ್ನು ಬಿಡದೆ ಇದ್ದ ಅವನನ್ನು ಕಂಡು  ಬೇಸರಿಸುವರು .ಮಗನಿಗೆ ಉಳಿತಾಯದ ಮಹತ್ವವನ್ನು ತಿಳಿಸಲೆಂದು ತಂದೆ ತಾಯಿ ಇಬ್ಬರೂ ತಾವು ಒಂದು ತಿಂಗಳ ಮಟ್ಟಿಗೆ ಪ್ರವಾಸ ಹೋಗಲು ನಿಶ್ಚಯಿಸುತ್ತಾರೆ.              ತಂದೆ ತಾಯಿ ಪ್ರವಾಸ ಹೋದ ಸಮಯದಲ್ಲಿ  ಮನೆ ಖರ್ಚುಗಳನ್ನು ನಿಭಾಯಿಸಲಾಗದೆ ಸೋತ ಆತನು ತನ್ನ ಸ್ನೇಹಿತರಲ್ಲಿ ಸಾಲ ಕೇಳಬೇಕಾಯಿತು .ಆಗ ಅವರಲ್ಲಿ ಒಬ್ಬ ಗೆಳೆಯ ಏನೋ ನೀನು ನಮಗಿಂತ ಹೆಚ್ಚು ಸಂಪಾದಿಸುತ್ತಿದ್ದಿಯಾ  ಉಳಿತಾಯ ಮಾಡಲಿಲ್ಲ ಎಂದರೆ ಹೇಗೋ ನಂಬುವುದು?.ನಮಗೆ ಬಂದ ಹಣದಲ್ಲಿ ಪ್ರತೀ ತಿಂಗಳು ನಿರ್ಧಿಷ್ಟ ಹಣವನ್ನು ನಾನು ಪೋಸ್ಟ್ ಆಫೀಸಿನ ಆರ್.ಡಿ ಖಾತೆಯಲ್ಲಿ  ಹಾಕುತ್ತಿರುವುದರಿಂದ   .ನಾಳೆ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ  ಯಾರ ಕೈಯನ್ನು ಕಾಯಬೇಕಾಗಿಲ್ಲ  ಎಂದು

ಹಣದ ಬೆಲೆ. ಕಥೆ

ಹಣದ ಬೆಲೆ   ಶರತನದು ದುಂದು  ವೆಚ್ಚದ ಸ್ವಭಾವ. ತನಗೆ ಬಂದ ಸಂಬಳವನ್ನೆಲ್ಲಾ  ಗೆಳೆಯರ ಜತೆ ಪಾರ್ಟಿ ಅದು ಇದು ಎಂದು ಖರ್ಚುಮಾಡುತ್ತಿದ್ದ .ತಂದೆ ತಾಯಿ ಎಷ್ಟೋ ಹೇಳಿ   ನೋಡಿದರು. ಸ್ವಲ್ಪವಾದರೂ ಉಳಿತಾಯ ಮಾಡಬೇಕು . ನಾಳೆ  ನಿನ್ನ ಮದುವೆ ಆದ ಮೇಲೆ ಸಂಸಾರದ ಖರ್ಚಿಗೆ ಬೇಡವೇನೋ  ಎಂದು,.ಆಗ ಆತ ಉಡಾಫೆಯಿಂದ ಆಗ ನೋಡೋಣಮ್ಮ ಅದಕ್ಕಾಗಿ ಈಗಲೇ ಯಾಕೆ ಉಳಿತಾಯ  ಮಾಡಬೇಕು ಎಂದು ಮಾತು ಹಾರಿಸಿ ಬಿಡುತಿದ್ದ.  ತಂದೆ ತಾಯಿಗೆ ಮಗನದೆ ಚಿಂತೆ .ಮದುವೆ ಆದರೆ ಸರಿಯಾದಾನೆಂದು ತಾವೇ ಹುಡುಕಿ ಒಳ್ಳೆ ಹೆಣ್ಣಿನ ಜತೆ ಮದುವೆ ಮಾಡಿಸುತ್ತಾರೆ.            ಮದುವೆ ಆದಮೇಲೆಯೂ ತನ್ನ ಹಳೆ  ಚಾಳಿಯನ್ನು ಬಿಡದೆ ಇದ್ದ ಅವನನ್ನು ಕಂಡು  ಬೇಸರಿಸುವರು .ಮಗನಿಗೆ ಉಳಿತಾಯದ ಮಹತ್ವವನ್ನು ತಿಳಿಸಲೆಂದು ತಂದೆ ತಾಯಿ ಇಬ್ಬರೂ ತಾವು ಒಂದು ತಿಂಗಳ ಮಟ್ಟಿಗೆ ಪ್ರವಾಸ ಹೋಗಲು ನಿಶ್ಚಯಿಸುತ್ತಾರೆ.              ತಂದೆ ತಾಯಿ ಪ್ರವಾಸ ಹೋದ ಸಮಯದಲ್ಲಿ  ಮನೆ ಖರ್ಚುಗಳನ್ನು ನಿಭಾಯಿಸಲಾಗದೆ ಸೋತ ಆತನು ತನ್ನ ಸ್ನೇಹಿತರಲ್ಲಿ ಸಾಲ ಕೇಳಬೇಕಾಯಿತು .ಆಗ ಅವರಲ್ಲಿ ಒಬ್ಬ ಗೆಳೆಯ ಏನೋ ನೀನು ನಮಗಿಂತ ಹೆಚ್ಚು ಸಂಪಾದಿಸುತ್ತಿದ್ದಿಯಾ  ಉಳಿತಾಯ ಮಾಡಲಿಲ್ಲ ಎಂದರೆ ಹೇಗೋ ನಂಬುವುದು?.ನಮಗೆ ಬಂದ ಹಣದಲ್ಲಿ ಪ್ರತೀ ತಿಂಗಳು ನಿರ್ಧಿಷ್ಟ ಹಣವನ್ನು ನಾನು ಪೋಸ್ಟ್ ಆಫೀಸಿನ ಆರ್.ಡಿ ಖಾತೆಯಲ್ಲಿ  ಹಾಕುತ್ತಿರುವುದರಿಂದ   .ನಾಳೆ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ  ಯಾರ ಕೈಯನ್ನು ಕಾಯಬೇಕಾಗಿಲ್ಲ  ಎಂದು

ಗೋಪ ಬಾಲ

ಗೋಪಬಾಲ  ಭಾಮಿನಿ ಷಟ್ಪದಿ ಕೈಯಲಿರಿಸಿದ  ಮಣ್ಣು ತಿನ್ನಲು ತಾಯಿ  ಕಳವಳದಿಂದ ನೋಡುತ ಬಾಯಿ ತೆರೆಸಲು ಜಗವ ತೋರಿದ ಬಾಲ ಗೋಪಾಲ ಮಾಯಕದ ಜಗವನ್ನು  ಕಂಡಿರೆ ಮಾಯವಾಯಿತು ಸಕಲ ಚಿಂತೆಯು ಮಾಯೆಯಿಂದಲಿ ಜಗವ ಪೊರೆಯುವ     ಮಗುವ ಕಾಣುತಲಿ ಬಾಲಗೋಪಾಲನಿಗೆ  ಮುದದಿಂ ಹಾಲು ಕುಡಿಸುತ ಮಾತೆ  ಮರೆತಳು ಕಾಲನಾಡಿಸಿ  ನಗುವ  ಕಂದನನೆತ್ತಿ  ಮುದ್ದಿಸುತ  ಲೋಲ  ಮುರಳಿಯು  ತುಂಟತನದಲಿ  ಶಾಲ ಸೆಳೆದನು ಕಾಡಿ ಗೋಪಿಯ ಮೇಲೆ ಮರದಲಿ ಕುಳಿತು ರಾಧೆಯ ಕೆಣಕಿ ನಗುತಿಹನು ಕಾಟ  ಕೊಡುತಿಹ  ಕಂಸನನುಚರ ಮಾಟ ಮಾಡುತ ಬಂದ ಬೇಗನೆ  ನೋಟದಿಂದಲೆ ತಿಳಿದನವರನು ದೇವ ಗೋಪಾಲ ತಾಟಕಿಯನೂ ಕೊಂದ ಬಾಲನು ಬೇಟೆಯಾಡುತ ದುರುಳರೆಲ್ಲರ ಸಾಟಿಯಿಲ್ಲದ   ಶೂರತನದಲ್ಲವರ  ಕಡಿದೊಗೆದ ಗೋವುಗಳಿಗೂ ಮೇವನುಣ್ಣಿಸಿ  ಹಾವ  ಹೆಡೆಯಲಿ ನಲಿದು ಬಿಡುತಲಿ ಜೀವವುಳಿಸಲು ಗಿರಿಯನೆತ್ತಿದ  ನಂದನಾ ಕಂದ ಜಾವದಲ್ಲಿಯೆ ಹೊರಟು ಬಿಡುತಲಿ ರಾವಣನ ತೆರದಲ್ಲಿ ಕಾಣುವ ಮಾವ ಕಂಸನ ದುರುಳತನವನುಮಟ್ಟ ಹಾಕಿದನು  ತಂದೆ ತಾಯಿಯ ಸೆರೆಯ ಬಿಡಿಸಿದ ನಂದ ಗೋಪನ  ನಡೆಯ ಕಾಣುತ ಮುಂದೆ  ಬರುತಲಿ  ತಬ್ಬಿ ಬಿಟ್ಟಳು ಮಾತೆ ದೇವಕಿಯು ಬಂದ ಜನರನು  ಪ್ರೀತಿಯಿಂದಲಿ ಕುಂದು ಬಾರದ ತೆರದಲೊಲಿಸುತ ಕಂದ ನೀನೇ  ಜಗದ ರಕ್ಷಕನೆಂದು  ನುತಿಸುವಳು ಶ್ರೀಮತಿ.ಪಂಕಜಾ.ಕೆ. ರಾಮಭಟ್

ಪಶ್ಚಾತ್ತಾಪ

ಪಶ್ಚಾತ್ತಾಪ                ಸಣ್ಣಗೆ  ಸುರಿಯುತ್ತಿದ್ದ  ಮಳೆ ಜೋರಾಗಿ ರಪ ರಪನೆಂದು ಹನಿಗಳು ಉದುರಲು ಪ್ರಾರಂಭಿಸಿತು.               ಪಾರ್ಕಿನ ಕೆಂಪು ಬಣ್ಣದ ಕಲ್ಲು ಬೆಂಚಿನ ಮೇಲೆ  ಅಮ್ಮನ  ಕೊಡೆಯನ್ನು  ಬಿಡಿಸಿ ಕುಳಿತಿದ್ದ ಚರಣ್ ನ ಮನಸು ಮಾತ್ರ ಸುರಿಯುತ್ತಿರುವ  ಮಳೆಯನ್ನೂ ಲೆಕ್ಕಿಸದೆ ವಿಹ್ವಲಗೊಂಡಿತ್ತು .               ಅವನ ಮನಸ್ಸಾಗಲೇ ತನ್ನ ಬಾಲ್ಯದ ದಿನಗಳತ್ತ ಸರಿದಿತ್ತು.ಬಾಲ್ಯದಲ್ಲಿ ಇದೇ ರೀತಿ ಮಳೆ ಬಂದಾಗಲೆಲ್ಲಾ ತಾನು ಅಂಗಳಕ್ಕೆ ಓಡಿ ಮಳೆಯಲ್ಲಿ ಕುಣಿಯುತ್ತಿದ್ದುದು, ಅಮ್ಮ ಬೈದು ತನ್ನನ್ನು ಎಳೆದುಕೊಂಡು ಬಂದು ತನ್ನ  ಸೆರಗಿನಿಂದಲೇ ತಲೆ ಒರೆಸುತ್ತಿದ್ದುದು,  ಶೀತ ಜ್ವರಬಂದಾಗ ರಾತ್ರಿ ಹಗಲು ನಿದ್ದೆಗೆಟ್ಟು ತನ್ನನ್ನು ಉಪಚರಿಸುತ್ತಿದ್ದುದು.ಎಲ್ಲವೂ ಸಿನೆಮಾದ ರೀಲಿನಂತೆ ಒಂದರ ಹಿಂದೊಂದು ಬಂದು ಮುತ್ತಿ ಅವನನ್ನು ಅಧೀರನನ್ನಾಗಿಸಿತು.                  ಛೇ ಅಂತ ಅಮ್ಮನಿಗೆ ತಾನೇನು ಕೊಟ್ಟೆನಿನ್ನೆ ಮೊನ್ನೆ ಬಂದ  ಹೆಂಡತಿಯ ಮಾತು ಕೇಳಿ ಅವಳನ್ನು ವೃದ್ಧಾಶ್ರಮಕ್ಕೆ ತಳ್ಳಿ ಬಿಟ್ಟೆನಲ್ಲಾ.             ತಂದೆ ಇಲ್ಲದ ತನ್ನನ್ನು ಎಷ್ಟೊಂದು ಪ್ರೀತಿಯಿಂದ ಸಾಕಿದ್ದಳು  ಎಳೆ ಹರೆಯದಲ್ಲೇ ಪತಿಯನ್ನು ಕಳೆದುಕೊಂಡಿದ್ದರೂ ಧೃತಿಗೆಡದೆ, ಕಷ್ಟಪಟ್ಟು ಕೆಲಸಮಾಡಿ ಓದಿಸಿ ತನ್ನನ್ನು ಒಂದು ನೆಲೆಗೆ ತಂದವಳಿಗೆ ತಾನು ಕೊಟ್ಟ ಉಡುಗೊರೆ ಇದುವೇ                ಛೀ ಥು ತನ್ನಂತ ಮಗ ಇದ್ದರೆಷ್ಟು  ಬಿಟ್ಟರೆಷ್ಟು  ಎಂದು ಪಶ್ಚಾತ್ತ

ಉಡುಗೊರೆ ಕಥೆ

ಉಡುಗೊರೆ         ಒಂದು ವಾರದಿಂದ ಸಾವಿತ್ರಮ್ಮ ಸಡಗರದಿಂದ ಓಡಿಯಾಡುತ್ತಿದ್ದರು.  ಶ್ರೀಪಾದ ರಾಯರನ್ನು ದಿನಕ್ಕೆರಡು ಬಾರಿ ಅಂಗಡಿಗೆ ಕಳಿಸಿ ಅದು ಇದು ಎಂದು ಸಾಮಾನು ತರಿಸಿ ಲಾಡು ಚಕ್ಕುಲಿ ಇತ್ಯಾದಿ ತಿಂಡಿಗಳನ್ನು ತಯಾರಿಸಿ ಡಬ್ಬಿಯಲ್ಲಿ ತುಂಬಿಸಿ ಇಟ್ಟಿದ್ದರು.ರಾಯರಿಗೆ ಅದನ್ನು  ರುಚಿ ನೋಡಲಿಕ್ಕೆ ಮಾತ್ರ ಕೊಟ್ಟಿದ್ದು,ಮಗ ಸೊಸೆ ಮೊಮ್ಮಕ್ಕಳು ಬರುವ ತನಕ ಅದನ್ನು ತಿನ್ನಬಾರದೆಂದು ತಾಕೀತು ಮಾಡಿದ್ದರು.ಮನೆಯ ಮೂಲೆ ಮೂಲೆಯಲ್ಲಿದ್ದ  ಜೇಡರ ಬಲೆಯನ್ನೆಲ್ಲಾ  ತೆಗೆದು ಗುಡಿಸಿ ಒರೆಸಿ  ಸಾರಿಸಿ ಶುಭ್ರವಾಗಿ   ಇಟ್ಟು ಕೊಂಡಿದ್ದರು.. ಇಷ್ಟೆಲ್ಲಾ ಸಂಭ್ರಮಕ್ಕೆ ಕಾರಣವೆಂದರೆ  ಮಗ ಸೊಸೆ ಮೊಮ್ಮಕ್ಕಳು ಈ ಸಲದ ಯುಗಾದಿ ಹಬ್ಬಕ್ಕೆ ಬರುತ್ತೇವೆ ಎಂದು ತಿಳಿಸಿದ್ದು.              ಕೊರೊನಾದ ಕಾರಣದಿಂದ ಕಳೆದವರ್ಷ ಮಕ್ಕಳಾರೂ ಇಲ್ಲದೆ ಇದ್ದುದರಿಂದ  ನಿರುತ್ಸ್ಸಾಹದಿಂದಿದ್ದ ಅವರಿಗೆ ಈ ವರ್ಷ ಎಲ್ಲರೂ ಬರುವುದರಿಂದ ಹತ್ತು ವರ್ಷ ಚಿಕ್ಕವರಾದಂತೆ  ಸಂಭ್ರಮಿಸುತ್ತಿದ್ದರು.              ತಿಳಿಸಿದಂತೆ ಯುಗಾದಿಯ ದಿನ ಬೆಳಿಗ್ಗೆಯೇ ಮಗ  ಸೊಸೆ  ಮೊಮ್ಮಕ್ಕಳು  ಬಂದು ಇಳಿದರು ಮನೆಯೆಲ್ಲಾ ಮೊಮ್ಮಕ್ಕಳ ಗಲಾಟೆಯಿಂದ ತುಂಬಿ ಮದುವೆ ಮನೆಯ ಕಳೆ ಬಂದಿತು.  ರಾಯರು  ಅದಾಗಲೇ  ಪೂಜೆ ಸುರುಮಾಡಿದ್ದರು . ಅಡಿಗೆಯವರು  ಹೋಳಿಗೆ ಮಾಡುವ ತಯಾರಿಯಲ್ಲಿದ್ದರು .ಮಕ್ಕಳು ಬಂದ ಸಂಭ್ರಮದಲ್ಲಿ ನಿಂತಲ್ಲಿ ನಿಲ್ಲಲಾರದೆ ಹರೆಯದ ತರುಣಿಯಂತೆ ಓಡಿಯಾಡುತ್ತಿದ್ದ  ಪತ್ನಿಯನ್ನು ರಾಯ

ಮೋಸದ ಜಾಲ

ಮೋಸದ ಜಾಲ   ಕಣ್ಣು ಬಿಟ್ಟಾಗ ಆ ಕತ್ತಲೆಯ  ಕೋಣೆಯಲ್ಲಿ ತಾನು ಬಂಧಿಯಾಗಿದ್ದು ತಿಳಿದ ಆಶಿಕಾ ತಾನು ಹೇಗೆ ಇಲ್ಲಿಗೆ ಬಂದೆ ಯಾವ ರೀತಿ ತಾನು ಮೂರ್ಖಳಾದೆ ಎಂದು ಯೋಚಿಸುತ್ತಾ , ತಾನು ಅಷ್ಟು ವಿದ್ಯೆ ಕಲಿತಿದ್ದರೂ, ದಿನ ನಿತ್ಯ ಪೇಪರಿನಲ್ಲಿ  ಇಂತಹ ವಿಷಯ  ಬರುತ್ತಾ ಇದ್ದರೂ ತಾನು ಹೇಗೆ ಈ ಬಲೆಯಲ್ಲಿ  ಬಿದ್ದೆ  ಎಂದು ಅವಳಿಗೆ  ಅರ್ಥವೇ ಆಗಲಿಲ್ಲ                ತನ್ನಂತಹ ಡಬಲ್ ಡಿಗ್ರಿ ಪಡೆದ ವಿದ್ಯಾವಂತಳೆ  ಹೀಗಾದರೆ ಇನ್ನು ಅವಿದ್ಯಾವಂತ ಹೆಣ್ಣುಗಳ ಗತಿಯೇನು ಎಂದು ಯೋಚಿಸಿದಾಗ ಆಕೆಗೆ ದಿಕ್ಕೆ ತೋಚದಂತಾಗಿತ್ತು .ಈಗ ತಾನು ಧೈರ್ಯ  ಗೆಡಬಾರದು  ತನ್ನ ಮನಸ್ಸಿನ ಭಯವನ್ನು ಓಡಿಸಲೇ ಬೇಕು ಎಂದು ನಿಶ್ಚಯಿಸಿದ ಆಕೆ ಅದಕ್ಕಾಗಿ ತಾನೇನು ಮಾಡಬೇಕು ಎಂದು ತೀವ್ರವಾಗಿ ಚಿಂತಿಸಿದಳು                      ತಾನು ಬಂಧಿಯಾದ ಈ ಕೋಣೆಯತ್ತ ಅವಳ ಗಮನ ಹೋಯಿತು .ಸುತ್ತ ಮುತ್ತ ನೋಡಿದಾಗ  ಒಂದು ಮೂಲೆಯಲ್ಲಿ ಒಂದು ಸಣ್ಣ ಸ್ಟೂಲಿನಂತಹದು ಕಣ್ಣಿಗೆ ಬಿತ್ತು ಧೈರ್ಯ ಮಾಡಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡ ಆಕೆ ಬಾಗಿಲು ತೆಗೆಯುವುದನ್ನೇ ಕಾಯುತ್ತಾ  ಬಾಗಿಲ ಬದಿಯಲ್ಲಿ ಅಡಗಿ ಕುಳಿತಳು.                       ಯಾರೋ ಬರುವ ಸಪ್ಪಳವಾದಂತೆ ಆಕೆ ಧೈರ್ಯವನ್ನು ಒಗ್ಗೂಡಿಸಿಕೊಂಡು ನಿಂತಳು ಬಾಗಿಲು ತೆಗೆದ  ತಕ್ಷಣ ಬಂದ ವ್ಯಕ್ತಿಯ ಮೇಲೆ ತನ್ನ ಬಲವನ್ನೆಲ್ಲಾ   ಒಟ್ಟುಗೂಡಿಸಿ , ಕೈಯಲ್ಲಿದ್ದ ಸಾಧನದಿಂದ  ಒಂದು ಏಟು ಕೊಟ್ಟೇ ಬಿಟ್ಟಳು .ಒಂದೇ ಏಟಿಗೆ ಕಮಕ್ ಕಿಮಕ್