Skip to main content

Posts

Showing posts from January, 2021

31..1..2021 ಗುರುಕುಲಾ ಕಲಪ್ರತಿಷ್ಠಾನಕ್ಕೆಕಳಿಸಿದ ಕವನಗಳು

[31/01, 12:07 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ  ಚಿಕ್ಕಮಗಳೂರು ವಾರಕ್ಕೊಂದು ಸ್ಪರ್ಧೆಗಾಗಿ  ವಚನ ದತ್ತಪದ..ರೈತ ಶೀರ್ಷಿಕೆ ..ಕಾಯಕಯೋಗಿ ರೈತ ನಮ್ಮ ಅನ್ನದಾತನಯ್ಯ ಕಾಯಕಯೋಗಿ ಇವನಯ್ಯ ದೇಶದ  ಬೆನ್ನೆಲುಬೇ ಇವನಯ್ಯ ರೈತನಿದ್ದರೆ ಬಾಳು ಹಸನಯ್ಯ ಜಗದ ಜನರಿಗೆ ಅನ್ನವನುಣಿ ಸುವ  ಮಾಹಾತ್ಮನಿವ ಪಂಕಜಾರಾಮ ಶ್ರೀಮತಿ ಪಂಕಜಾ .ಕೆ. ಮುಡಿಪು [31/01, 3:15 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಚಾಮರಾಜನಗರ ಘಟಕ  ವಾರಕ್ಕೊಂದು ಸ್ಪರ್ಧೆಗಾಗಿ  ಪದ್ಯಬರೆಯುವ ಸ್ಪರ್ಧೆ ವಿಷಯ.. ಹಳ್ಳಿಯ ಸೊಗಡು ಶೀರ್ಷಿಕೆ..ನಮ್ಮ ಹೆಮ್ಮೆ ನಮ್ಮ ಹಳ್ಳಿ ಹಳ್ಳಿಯ ಸೊಗಡಿನ ಸುಂದರ  ತಾಣದಿ ನಲಿಯುವ ಮನೆಯಲಿ ನಾನಿರುವೆ ಸುತ್ತಲೂ ಹರಿಯುವ ನೀರಿನ ತೊರೆಯಲಿ ಈಜುವ ಮಜವನು ನಾ ಪಡೆದೆ ಜುಳು ಜುಳು ಹರಿಯುವ ಮಂಜುಳ ನಾದಕೆ ಮೈಮನ ಮರೆಯುತ  ನಾ ನಲಿದೆ ಹಕ್ಕಿಗಳಿಂಚರ ತುಂಬಿದ ಪರಿಸರ ಮುದವನು ತಂದಿತು ಬಾಳಿನಲಿ ಹಸಿರಿನ ಕಾಡಲಿ ಅರಳಿದ ಹೂಗಳು ಪರಿಮಳ ಬೀರುತ ನಲಿಯುತಿದೆ ರಸಿಕರ ಮನವನು ಸೆಳೆಯುವ ನೋಟವು ಚೆಲುವಿನ  ತಾಣಕೆ ಮನಸೋತೆ ಗುಡ್ಡಬೆಟ್ಟಗಳ ಸುಂದರ ನೋಟ ಮೈಮನ ಮರೆಸುವ ಕುಳಿರ್ಗಾಳಿ ಹಸಿರಿನ ಸೆರಗನು ಹಾಸುತಲಿರುವ ಪ್ರಕೃತಿಯ ಚೆಲುವಿಗೆ ಬೆರಗಾದೆ ಗದ್ದೆಯ ಬಯಲಲಿ ಎತ್ತುಗಳ ಜತೆಯಲಿ ಓ ಬೇಲೆ ಹಾಡುತ ದುಡಿಯುವ ಆ ದೃಶ್ಯ ಎತ್ತಿನ ಕೊರಳಿನ ಗಂಟೆಯ ನಾದವು ಮನದಲಿ ತುಂಬಿತು ಉಲ್ಲಾಸ ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ

ಮಡಿವಾಳ ಮಾಚಿದೇವ ಲೇಖನ

ಖಿದ್ಮಾ ಪೌಂಡೇಶನ್ ಕರ್ನಾಟಕ  ಕಿರುಲೇಖನ ಸ್ಪರ್ಧೆಯಲ್ಲಿ ಮೆಚ್ಚುಗೆ ವಿಷಯ   ಮಡಿವಾಳ ಮಾಚಿದೇವರು ಬಿಜಾಪುರ ಜಿಲ್ಲೆಯ ಹಿಪ್ಪರಗಿಯಲ್ಲಿ ಪರುವತಯ್ಯ ಮತ್ತು ಸುಜ್ಞಾನವ್ವ ದಂಪತಿಗಳ ಪುತ್ರರಾಗಿ ಜನಿಸಿದ ,ಶರಣ ಮಡಿವಾಳ ಮಾಚಿದೇವರು ಒಬ್ಬರು ಅವತಾರ ಪುರುಷರು. ವೀರ ಭದ್ರ ದೇವರ ಅವತಾರವೆಂದು ಪರಿಗಣಿಸಲಾದ ಇವರು ಹುಟ್ಟಿನಿಂದ ಮಾಡಿವಾಳರಾಗಿದ್ದರೂ,ಜ್ಞಾನಿಯಾಗಿದ್ದರು. ಕಾಯಕವೇ ಕೈಲಾಸ ಎಂದು ದೃಢವಾಗಿ ನಂಬಿದ ಇವರು ತಮ್ಮ ಕಾಯಕ ನಿಷ್ಠೆಗೆ ಹೆಸರುವಾಸಿಯಾಗಿದ್ದರು. ಶಿವಶರಣರ ಮೈಲಿಗೆ ಬಟ್ಟೆಗಳನ್ನು ಮಡಿ ಮಾಡುವ ಕಾಯಕ ಇವರದಾಗಿತ್ತು.ಸೋಮಾರಿಗಳ,  ಬಡವರನ್ನು ಶೋಷಿಸುವವರ , ದುರ್ಗುಣಿಗಳ, ಬಟ್ಟೆಗಳನ್ನು ಇವರು ಮುಟ್ಟುತ್ತಿರಲಿಲ್ಲ.                ಧರ್ಮದ ರಕ್ಷಣೆ ,ವಚನ ಸಾಹಿತ್ಯದ ರಕ್ಷಣೆಯ ಹೊಣೆ ಹೊತ್ತು ಶಿವ ಶರಣರ ಭೀಮರಕ್ಷೆಯಾಗಿ ನಿಂತ ಇವರು ಹಲವಾರು ಪವಾಡಗಳನ್ನು ಮಾಡಿದ್ದು ದೈವಾಂಶ ಸಂಭೂತರಾಗಿ , ಜನಮಾನಸದಲ್ಲಿ ಅಪಾರ ಗೌರವವನ್ನು ಪಡೆದುಕೊಂಡಿದ್ದರು. 12 ನೆ ಶತಮಾನದಲ್ಲಿ ಶೋಷಣೆಗೆ ಒಳಗಾದ ದುರ್ಬಲರ ಮೇಲುಕೀಳು ತಾರತಮ್ಯ ಅಸ್ಪೃಶ್ಯತೆ ,ಮೂಢನಂಬಿಕೆಗಳ ನಿವಾರಣೆಗಾಗಿ ಇವರು ಸಾಮಾಜಿಕ ಕ್ರಾಂತಿ ಕೈ ಕೈಗೊಂಡರು. ಶಿವ ಭಕ್ತರಾಗಿದ್ದ ಇವರು ಬಸವಣ್ಣನವರ ತತ್ವಾದರ್ಶಗಳಿಗೆ ಬದ್ಧರಾಗಿದ್ದು, ಹಲವಾರು ವಚನಗಳನ್ನು ರಚಿಸಿ ಜನಪ್ರಿಯ ವಚನಕಾರರೆಂದು ವಿಶ್ವಮಾನ್ಯರಾದರು. ಶ್ರೀಮತಿ .ಪಂಕಜಾ.ಕೆ. ಮುಡಿಪು ಕುರ್ನಾಡು ದಕ.

ಹಾಸ್ಯ ಹನಿ ಸುಲೋಚನಾ

ಸ್ನೇಹ ಸಂಗಮ ಸ್ಪರ್ಧೆಯಲ್ಲಿ ಮೆಚ್ಚುಗೆ ಹಾಸ್ಯ ಹನಿ ಸುಲೋಚನ  ಕನ್ನಡಕ ಕಳೆದು  ಹೋಯಿತೆಂದು  ಮನೆಯೆಲ್ಲಾ  ಜಾಲಾಡಿದ ಗುಂಡ ಹತಾಶೆಯಿಂದ ಕಣ್ಣಿಗೆ ಕೈಯಿಡಲು  ಹೋದಾಗ ನಕ್ಕಳು ಸುಲೋಚನ ಶ್ರೀಮತಿ.ಪಂಕಜಾ.ಕೆ. ಮುಡಿಪು

ರಾಯಚೂರು ಘಟಕದ ಸ್ಪರ್ಧೆ

[30/8/2020, 7:57 PM] pankajarambhat: ಗುರುಕುಲ ರಾಯಚೂರು ಘಟಕ ಬಾನುವಾರ ದ ಚಿತ್ರಕವನ ಸ್ಪರ್ಧೆಗಾಗಿ ಜಾನಪದ ಗೀತೆ ಸ್ಪರ್ಧೆಗಾಗಿ  ಶೀರ್ಷಿಕೆ ..ನವಿಲು ಕುಣಿದೈತೆ    ಬಾನಲ್ಲಿ  ಕಪ್ಪನೆ ಮುಗಿಲು  ಕಟೈತೆ  /ನೋಡವ್ವ   ಮಳೆ ಬರೋ ಸೂಚನೆ  ಕಾಣುತೈತೆ ಊರಿನ ಬಯಲಾಗ ನವಿಲೊಂದು ಬಂದೈತೆ /ನೋಡವ್ವ ಬಿಂಕದಿ ಬಯಲಾಗ ತಿರುಗತೈತೆ ಬಣ್ಣದ ನವಿಲು ಗರಿಬಿಚ್ಚಿ ಕುಣಿದೈತೆ/ನೋಡವ್ವ ಮನಸಿಗೆ ಸಂತೋಷ ಕೊಡುತೈತೆ ಮೈತುಂಬಾ ಕಣ್ಣು ಇರುತೈತೆ ಮೈಯಾಗ /ನೋಡವ್ವ ನಾಟ್ಯ ಮಯೂರಿ ತರ ಕಾಂತೈತೆ ನಾಟ್ಯವಾಡುತ್ತ ಸೆಳೆದೈತೆ ತನ್ನಾಕೆಯ ಪ್ರೀತಿಯ/ನೋಡವ್ವ ಎಸೊಂದು ಚಂದಾಗೆ ಕುಣಿತೈತೆ ಗರಿಗಳ ಹರಡುತ್ತ ಕುಣಿಯೋದು /ನೋಡವ್ವ ಸೌಂದರ್ಯ ಮೈಯಾಗೆ ತುಂಬೈಯ್ತೆ ನಮ್ಮೂರ ಬಯಲಾಗೆ ಬಿಂಕದಿ ಕುಣಿದೈತೆ ತನ್ನಿನಿಯಳ ಒಲಿಸಲಿಕ್ಕೆ ಕಾದೈತೆ ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಶ್ರೀ ಗಣೇಶ ಕೃಪಾ.ಮುಡಿಪು.ಅಂಚೆ. ಕುರ್ನಾಡು.ದ.ಕ.574153 [4/9/2020, 7:34 PM] pankajarambhat: ನನ್ನ ಜಾನಪದ ಶೈಲಿ ಕವಿತೆಯನ್ನು ಉತ್ತಮವೆಂದು.ಪರಿಗಣಿಸಿದ  ಸ್ಪರ್ಧೆಯ ಅಯೋಜಕರಿಗೆ ನಿರ್ವಾಹಕರಿಗೆ ಹಾಗೂ ತೀರ್ಪುಗಾರರಿಗೆ ತುಂಬು ಹೃದಯದ ಧನ್ಯವಾದಗಳು🙏🙏 ಸಹವಿಜೇತರಿಗೆ ಅಭಿನಂದನೆಗಳು💐💐 [6/9/2020, 5:57 PM] pankajarambhat: ಗುರುಕುಲ ಕಲಾ ಪ್ರತಿಷ್ಠಾನ ರಾಯಚೂರು ಜಿಲ್ಲಾ ಘಟಕದ  ಕಿರು  ಲೇಖನ ಸ್ಪರ್ಧೆಗಾಗಿ ವಿಷಯ..ಶಿಕ್ಷಕ ವಿದ್ಯಾರ್ಥಿ ಬದುಕಿನ ನಂದಾದೀಪ  

ಭಾವಗೀತೆ ಮದುರ ಮಾತು. ಒಲವಿನ ಬಲೆ

ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಭಾವಗೀತೆ ದತ್ತಪದ..ಮದುರ ಮಾತು ಒಲವಿನ ಬಲೆ ಮದುರ ಮಾತಲಿ ಮನವ ಸೆಳೆಯುತ ಒಲಿಸಿಕೊಂಡನು ಮಾಧವ ಮೋಹನಾಂಗನ ಒಲವಗಾನಕೆ ಸೋತು ಹೋದಳು ರಾಧೆಯು ಒಲವ ಬಲೆಯಲಿ ಕೆಡವುತಲಿ ಕಣ್ಣ ನೋಟದಿ ಬಂಧಿಸಿ ತರಳೆ ಸೋತಳು ಒಲವಿನಾಟಕೆ ಬಯಕೆ ಮನದಲಿ ಕಾಡಿಸಿ ಚೆಲುವ ಕನಸನು ಮನದಿ ಮೂಡಿಸಿ ಮನವ ತಣಿಸಿದೆ ಮಾದವ ನಿನ್ನ ಕೊಳಲಿನ ಗಾನ ಕೇಳುತ ಮನವು ತೇಲಿತು ಬಾನಲಿ ರಾತ್ರಿ ಹಗಲು ಸರಿಯುತಿರುವುದು ತಿಳಿಯದಂತ ಬಂಧುರ ಕನಸು ಮನಸಲಿ ತುಂಬಿ ನಿಂತಿದೆ  ನಿನ್ನ ನೆನಪಿನ ಹೂರಣ ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು ದಕ

ಕನ್ನಡ ಕವಿಗುಚ್ಛ

[7/12/2020, 3:59 PM] pankajarambhat: ಕನ್ನಡಕವಿಗುಚ್ಛ    ಚುಟುಕು ಸ್ಪರ್ಧೆಗಾಗಿ ವಿಷಯ..ಜೀವನವೆಂಬ ಪುಸ್ತಕದಲ್ಲಿ       ಶೀರ್ಷಿಕೆ.. ಹೆಸರು ಉಳಿಸಿ        ಜೀವನವೆಂಬ ಪುಸ್ತಕದಲ್ಲಿ ನೋವು ನಲಿವುಗಳೆಂಬ ಹಾಳೆಗಳಲ್ಲಿ ಬರೆದಿಟ್ಟ ಸುವರ್ಣಾಕ್ಷರದ ಪುಟಗಳಲ್ಲಿ ಹೆಸರನ್ನು ಉಳಿಸುತ್ತಾ ಬಾಳಿ ಬದುಕಿರಿಲ್ಲಿ ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್. ಕುರ್ನಾಡು.ದ.ಕ. [7/12/2020, 11:31 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ* *ದಿನಾಂಕ* *೦೭.೧೨.೨೦೨೦* *ವಾರ* *ಸೊಮುವಾರ* *ಇಂದಿನ ವಿಷಯ* *ಜೀವನದ ಪುಸ್ತಕದಲ್ಲಿ* *ಕವನದ ಪ್ರಕಾರ* *ಚುಟುಕು* *ಇಂದಿನ ಸ್ಪರ್ಧಿಗಳ ಸಂಖ್ಯೆ* *೮೯* *ತಿರ್ಪುಗಾರರು* *ಸಾಗರ್ ಕುಲಕರ್ಣಿ* *ಪ್ರಧಾನ ನಿರ್ವಾಹಕರು* *ವಿಜೇತರು* *ಪ್ರಥಮ ಸ್ಥಾನ* 🏆🏆🏆🏆🏆🏆🏆🏆🏆 *ದಿನಕರ ನಂದಿ ಚಂದನ್* *ಮಾಲತೇಶ್.ಕೃ.ಕುಲಕರ್ಣಿ* *ಶ್ರೀಮತಿ ಜಯಶ್ರೀ ಜೋಷಿ* 🏆🏆🏆🏆🏆🏆🏆🏆🏆 *ಅತ್ಯುತ್ತಮ ಸ್ಥಾನ* *ಮೊಗೇರಿ ಶೇಖರ್ ದೇವಾಡಿಗ* *ಮುತ್ತಣ್ಣ.ಶ.ಭಾವಿ* *ಶ್ರೀಷಡ್ಯಜ.ಎಸ್* 👑👑👑👑👑👑👑👑👑 *ಉತ್ತಮ ಸ್ಥಾನ* 🎖️🎖️🎖️🎖️🎖️🎖️🎖️🎖️🎖️ *ವಿಂಧ್ಯಾ.ಎಸ್.ರೈ* *ಕೆ.ಗೋವಿಂದ ಭಟ್* *ಮನು.ಎಂ.ಎಚ್* 🎖️🎖️🎖️🎖️🎖️🎖️🎖️🎖️🎖️ *ಸಮಾಧಾನಕರ ಸ್ಥಾನ* ☘️☘️☘️☘️☘️☘️☘️☘️☘️ *ಪ್ರಶಾಂತಗೌಡ.ಗಾಳಿ* *ಶ್ರೀಮತಿ ಪಂಕಜಾ.ಕೆ.ಮುಡಿಪು* *ಕನಕ್ ತೆಂಗಿನಗುಂ

ಕನ್ನಡ ಕವಿಗುಚ್ಛ ಕವನಗಳು

[7/12/2020, 3:59 PM] pankajarambhat: ಕನ್ನಡಕವಿಗುಚ್ಛ    ಚುಟುಕು ಸ್ಪರ್ಧೆಗಾಗಿ ವಿಷಯ..ಜೀವನವೆಂಬ ಪುಸ್ತಕದಲ್ಲಿ       ಶೀರ್ಷಿಕೆ.. ಹೆಸರು ಉಳಿಸಿ        ಜೀವನವೆಂಬ ಪುಸ್ತಕದಲ್ಲಿ ನೋವು ನಲಿವುಗಳೆಂಬ ಹಾಳೆಗಳಲ್ಲಿ ಬರೆದಿಟ್ಟ ಸುವರ್ಣಾಕ್ಷರದ ಪುಟಗಳಲ್ಲಿ ಹೆಸರನ್ನು ಉಳಿಸುತ್ತಾ ಬಾಳಿ ಬದುಕಿರಿಲ್ಲಿ ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್. ಕುರ್ನಾಡು.ದ.ಕ. [7/12/2020, 11:31 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ* *ದಿನಾಂಕ* *೦೭.೧೨.೨೦೨೦* *ವಾರ* *ಸೊಮುವಾರ* *ಇಂದಿನ ವಿಷಯ* *ಜೀವನದ ಪುಸ್ತಕದಲ್ಲಿ* *ಕವನದ ಪ್ರಕಾರ* *ಚುಟುಕು* *ಇಂದಿನ ಸ್ಪರ್ಧಿಗಳ ಸಂಖ್ಯೆ* *೮೯* *ತಿರ್ಪುಗಾರರು* *ಸಾಗರ್ ಕುಲಕರ್ಣಿ* *ಪ್ರಧಾನ ನಿರ್ವಾಹಕರು* *ವಿಜೇತರು* *ಪ್ರಥಮ ಸ್ಥಾನ* 🏆🏆🏆🏆🏆🏆🏆🏆🏆 *ದಿನಕರ ನಂದಿ ಚಂದನ್* *ಮಾಲತೇಶ್.ಕೃ.ಕುಲಕರ್ಣಿ* *ಶ್ರೀಮತಿ ಜಯಶ್ರೀ ಜೋಷಿ* 🏆🏆🏆🏆🏆🏆🏆🏆🏆 *ಅತ್ಯುತ್ತಮ ಸ್ಥಾನ* *ಮೊಗೇರಿ ಶೇಖರ್ ದೇವಾಡಿಗ* *ಮುತ್ತಣ್ಣ.ಶ.ಭಾವಿ* *ಶ್ರೀಷಡ್ಯಜ.ಎಸ್* 👑👑👑👑👑👑👑👑👑 *ಉತ್ತಮ ಸ್ಥಾನ* 🎖️🎖️🎖️🎖️🎖️🎖️🎖️🎖️🎖️ *ವಿಂಧ್ಯಾ.ಎಸ್.ರೈ* *ಕೆ.ಗೋವಿಂದ ಭಟ್* *ಮನು.ಎಂ.ಎಚ್* 🎖️🎖️🎖️🎖️🎖️🎖️🎖️🎖️🎖️ *ಸಮಾಧಾನಕರ ಸ್ಥಾನ* ☘️☘️☘️☘️☘️☘️☘️☘️☘️ *ಪ್ರಶಾಂತಗೌಡ.ಗಾಳಿ* *ಶ್ರೀಮತಿ ಪಂಕಜಾ.ಕೆ.ಮುಡಿಪು* *ಕನಕ್ ತೆಂಗಿನಗುಂ

ಚುಟುಕು

ಚುಟುಕು ದತ್ತಪದ..ಸಮಾಜ ನಾವೆ ಸಮಾಜವೆಂದರೆ ಅದು ನಾವೆ ಅದನ್ನು ಮುನ್ನಡೆಸುವವರು ನಾವೆ ಸರಿ ದಾರಿಯಲಿ ಸಾಗಿದರೆ ನಾವು ಸಿಗಬಹುದು  ಬಾಳಿನಲಿ ಹೂವು ಶ್ರೀಮತಿ.ಪಂಕಜಾ.ಕೆ. ಮುಡಿಪು

ಕವಿಸಾಹಿತಿಗಳ ಜೀವಾಳ ಒಲವಿನ ಪಯಣ ಕಥೆ

ಕವಿ ಸಾಹಿತಿಗಳ ಜೀವಾಳ ಚಿತ್ರ ಕ್ಕೊಂದು ಕಥೆ ಸ್ಪರ್ಧೆಯಲ್ಲಿ.  ಮೆಚ್ಚುಗೆ ಒಲವಿನ ಪಯಣ ನಿರ್ಮಲಾಪುರದ ಜಮೀನುದಾರ ಶಿವಣ್ಣನ ಮಗ ರಂಜನ್ ವಿದ್ಯೆಬುದ್ಧಿಯಲ್ಲಿ ಜಾಣನಾಗಿದ್ದರೂ ಕೃಷಿಯ ಬಗ್ಗೆ ಒಲವು ಇದ್ದುದರಿಂದ ಕೃಷಿಯಲ್ಲಿ ಉನ್ನತ ವ್ಯಾಸಂಗ ಮಾಡಿ ಹಳ್ಳಿಯ ಮನೆಯಲ್ಲಿ ನೆಲೆಸಿ ತಂದೆಯ ಜತೆ ಕೃಷಿ ಕಾರ್ಯದಲ್ಲಿ ತೊಡಗಿದ್ದನು.  ಅವನ ಮಾವನ ಮಗಳಾದ ಮೀರಳಿಗೆ ರಂಜನ್ ನೆಂದರೆ ಅಚ್ಚುಮೆಚ್ಚು .ಆದರೆ ಅವಳ ತಂದೆ ಮಾತ್ರ ಅವಳನ್ನು ಆ ಹಳ್ಳಿಗೆ ಹೋಗಲು ಬಿಡುತ್ತಿರಲಿಲ್ಲ ಪ್ರಕೃತಿ ಪ್ರೇಮಿಯಾಗಿದ್ದ ಮೀರಳಿಗೆ ಅತ್ತೆಯ ಮನೆಗೆ ಹೋಗುವ ಆಸೆಯಿದ್ದರೂ ತಂದೆಯ ಮಾತನ್ನು ಮೀರಿ ಹೋಗುವುದು ಅಸಾಧ್ಯವಾಗಿತ್ತು. ತನಗೆ ಕೃಷಿಯಲ್ಲಿ ಆಸಕ್ತಿ ಇದ್ದರೂ ತಂದೆ ಯ ಒತ್ತಾಯಕ್ಕೆ ಇಂಜಿನೀಯರ್ ಕಲಿತ ಮೀರಾ ಕಲಿತ ತಕ್ಷಣ ಕೆಲಸಕ್ಕೂ ಸೇರಿದ್ದಳು.ಆದರೆ ಯಾವ ಹುಡುಗನನ್ನು ತೋರಿಸಿದರೂ ಮದುವೆಗೆ ಒಪ್ಪದ ಮೀರಾಳ ಮನಸು ರಂಜನನಲ್ಲಿಲೀನವಾಗಿತ್ತು.  ಅದೊಂದು ದಿನ  ಮೀರಾ ಅಮ್ಮ ಅಪ್ಪನನ್ನು  ಒಪ್ಪಿಸಿ ಅತ್ತೆಯ ಮನೆಗೆ ಬಂದಿಳಿದಳು .ಪೇಟೆಯಲ್ಲಿ ಕಲಿತ ಹೆಣ್ಣಾಗಿದ್ದರೂ, ಸೀರೆ ಉಡುವುದೆಂದರೆ ಮೀರಳಿಗೆ ತುಂಬಾ ಇಷ್ಟ   ಆಕೆ ಆ ದಿನ ಅಳ್ಳಕವಾಗಿ ಜಡೆ ಹೆಣೆದು  ಕಿವಿಯ ಬದಿಗೆ ಹೂ ಮುಡಿದು ಬಳುಕುತ್ತಾ ಬರುವುದನ್ನು ಕಂಡ ರಂಜನ್  ಅವಳ ಸೌಂದರ್ಯಕ್ಕೆ ಬೆರಗಾಗಿ  ತಮಾಷೆ ಮಾಡಿದಾಗ ನಸು ಲಜ್ಜೆಯಿಂದ ಮೀರಾ ನಗುಮುಖದಿಂದ ಅವನ ತಮಾಷೆ ಮಾತುಗಳನ್ನು ಕೇಳುತ್ತಿದ್ದಳು. ಆ ಹಳ್ಳಿಯ ಪ್ರಕೃತಿ ಸೌಂದರ್ಯ ವನ್ನು

ಖಿದ್ಮಾ ಪೌಂಡೇಶನ್ ಕರ್ನಾಟಕ ಗಾದೆ ವಿಸ್ತರಣೆ

ಖಿದ್ಮಾ ಪೌಂಡೇಶನ್ ಕರ್ನಾಟಕ ಸ್ಪರ್ಧೆಗಾಗಿ ಗಾದೆ ವಿಸ್ತರಣೆ ಮನಸ್ಸಿದ್ದರೆ ಮಾರ್ಗ ಗಾದೆಗಳು ಜನಪದರ ಜೀವನದ ಅನುಭವಗಳ ಸಾರವಾಗಿದೆ.ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವುದು ಒಂದು ಪ್ರಸಿದ್ಧ ನುಡಿಗಟ್ಟು. ಗಾದೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನದ ಮೌಲ್ಯಗಳು ಹೆಚ್ಚಾಗುತ್ತದೆ. ಆದ್ದರಿಂದ ಗಾದೆಗಳು ವೇದಗಳಿಗೆ ಸಮಾನವೆಂದಿದ್ದಾರೆ. ಅಂತಹ ಪ್ರಸಿದ್ಧ ಗಾದೆ ಗಳಲ್ಲಿ  ಮನಸ್ಸಿದ್ದರೆ ಮಾರ್ಗ ಎನ್ನುವುದು ಒಂದು ಜನಪ್ರಿಯ ಗಾದೆಮಾತು ಆಗಿದೆ. ನಾವು ಯಾವುದೇ ಕೆಲಸವನ್ನು ಆಸಕ್ತಿಯಿಂದ ಮನಸ್ಸುಕೊಟ್ಟು ಮಾಡಿದರೆ ಆ ಕೆಲಸ ಸಫಲವಾಗುವುದು ಮನಸ್ಸಿಲ್ಲದೆ ಮಾಡಿದ ಯಾವುದೇ ಕೆಲಸವು ಸಫಲವಾಗಲಾರದು.. ಕೆಲಸದ  ಮೇಲೆ ಪ್ರೀತಿಯಿದ್ದರೆ ,ಸಹಜವಾಗಿಯೇ  ಕೆಲಸದ  ಬಗ್ಗೆ ಆಸಕ್ತಿ ಹುಟ್ಟುತ್ತದೆ. ಮತ್ತು ಆಸಕ್ತಿಯಿಂದ ಮಾಡುವುದರಿಂದ ಕೆಲಸ ಯಶಸ್ವಿಯಾಗುತ್ತದೆ. ನಮ್ಮ ಕೈಯಲ್ಲಿ ಆಗುವುದಿಲ್ಲವೆಂದು ಯೋಚಿಸಿದರೆ ಯಾವ ಕೆಲಸ ಮಾಡುವುದು ಅಸಾಧ್ಯವಾಗುವುದು ಬದಲಾಗಿ ಮಾಡಿಯೇ ತೀರುತ್ತೇನೆ ಎನ್ನುವ ಮನಸ್ಸು ಇದ್ದರೆ  ಎಂತಹ ಕಷ್ಟಕರವಾದ ಕೆಲಸವೂ ಮನಸ್ಸಿದ್ದರೆ ಮಾರ್ಗವೆನ್ನುವಂತೆ ಅದಕ್ಕೊಂದು ಮಾರ್ಗಸಿಕ್ಕೇ ಸಿಗುತ್ತದೆ.  ಗಾದೆಗಳು ನಮ್ಮ ಹಿರಿಯರು ಬದುಕಲು ನಮಗೆ ಹೇಳಿಕೊಟ್ಟ ಪಾಠ. ಯಾವ ಕೆಲಸವನ್ನೇ ಆಗಲಿ ಮಾಡಬೇಕು ಎನ್ನುವ ಉತ್ಕಟ ಬಯಕೆ ಹುಟ್ಟಿಬಿಟ್ಟರೆ ಮಿಕ್ಕ ದಾರಿ ತಾನಾಗೇ ತೆರೆದುಕೊಳ್ಳುತ್ತದೆ. ಏನಾದರಾಗಲಿ ಅದನ್ನು ಸಾಧಿಸಿಯೇ ತೀರುತ್ತೇನೆ ಎನ್ನುವ

ಖಿದ್ಮಾ ಪೌಂಡೇಶನ್ ಲೇಖನ ಸಂವಿಧಾನದ ಮುಖ್ಯಾಂಶಗಳು ಅತ್ಯುತ್ತಮ ಸ್ಥಾನ ಪಡೆದಿದೆ

ಖಿದ್ಮಾ  ಪೌಂಡೇಶನ್ ಕರ್ನಾಟಕ  ಲೇಖನ ಸ್ಪರ್ಧೆಗಾಗಿ ವಿಷಯ..  ನಮ್ಮ ಸಂವಿಧಾನದ ಮುಖ್ಯಾಂಶಗಳು ಭಾರತದ ಸಂವಿಧಾನವು ಭಾರತ ಸರಕಾರದ ಮೂಲ ರಚನೆಯಾಗಿದ್ದು, ಜನವರಿ 26 .-1950 ರಂದು ಜಾರಿಗೆ ಬಂದಿತು.ಈ ದಿನವನ್ನು ಗಣರಾಜ್ಯೋತ್ಸವ ವೆಂದು ಆಚರಿಸಲಾಗುತ್ತದೆ. ನಮ್ಮ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಹಾಗೂ ಬೃಹತ್ ಸಂವಿಧಾನವಾಗಿದೆ. ಎಲ್ಲಾ ದೇಶದ ಉತ್ತಮ ಅಂಶಗಳನ್ನು ತೆಗೆದುಕೊಂಡು ,ನಮ್ಮ ಸಂವಿಧಾನವನ್ನು ಡಾ.ಬಿ. ಆರ್.ಅಂಬೇಡ್ಕರ್ ಅವರು ರಚಿಸಿದ್ದಾರೆ.ನಮ್ಮ ಸಂವಿದಾನದ ಮುಖ್ತಾಂಶಗಳು ಯಾವುದೆಂದರೆ ,   ವಯಸ್ಕ ಮತದಾನ ಪದ್ಧತಿ ಅಂದರೆ 18 ವರ್ಷ ಮೇಲ್ಪಟ್ಟ  ಸ್ತ್ರೀ ಪುರುಷರೆಲ್ಲರೂ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಗಣರಾಜ್ಯವ್ಯವಸ್ಥೆ ,ಸರ್ವಧರ್ಮ ಸಮನ್ವಯ ತತ್ವಗಳು, ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ,ಶೋಷಣೆ ವಿರುದ್ಧ ಹಕ್ಕುಗಳು, ಧಾರ್ಮಿಕ ,ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಕ್ಕು  ಮೂಲಭೂತ  ಕರ್ತವ್ಯಗಳು,ಆಸ್ತಿಯ ಹಕ್ಕು,ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಏಕ ಪೌರತ್ವ ವ್ಯವಸ್ಥೆ, ಅಖಿಲ ಭಾರತ ಸೇವೆ ,ಪಂಚಾಯತಿ ರಾಜ್ಯವ್ಯವಸ್ಥೆ, ಸಂಯುಕ್ತ ವ್ಯವಸ್ಥೆ, ದ್ವಿಸದನ ಶಾಸಕಾಂಗ ಇತ್ಯಾದಿ ಉತ್ತಮ ಅಂಶಗಳನ್ನು ಒಳಗೊಂಡ ನಮ್ಮ ಸಂವಿಧಾನವು ವಿಶ್ವದ ಎಲ್ಲೆಡೆಯೂ ಮಾನ್ಯತೆಯನ್ನು ಪಡೆದು  ಹೊಗಳಿಕೆಗೆ ಪಾತ್ರವಾಗಿದೆ. ಶ್ರೀಮತಿ.ಪಂಕಜಾ.ಕೆ. ಮುಡಿಪು.ಕುರ್ನಾಡು.ದ.ಕ.

ತುಳುಕನ್ನಡ ಸ್ಪರ್ಧೆ ಗಜಲ್ ಭಾರತ ಪ್ರಥಮ

ತುಳು ಕನ್ನಡ ಸಾಹಿತ್ಯ ಸ್ಪರ್ಧೆಗಾಗಿ ಗಜಲ್  ದತ್ತಪದ ..ಭಾರತ ಸರ್ವಜನಾಂಗದ ಶಾಂತಿಯನ್ನು ಬಯಸುತ್ತದೆ ಭಾರತ ಜಾತ್ಯತೀತ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆದಿದೆ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ  ದುಡಿದು ಮಡಿದರು ಹಲವರು ವಿಶ್ವದ ಅತ್ಯಂತ ಬೃಹತ್ ಸಂವಿಧಾನ ರಚಿಸಿದೆ ಭಾರತ ಹಸಿರು ಗುಡ್ಡ ಬೆಟ್ಟಗಳಿಂದ ತುಂಬಿ ನಯನ ಮನೋಹರವಾಗಿದೆ  ನಮ್ಮದೇಶ  ಹಲವಾರು ಪುಣ್ಯ ನದಿಗಳು  ಹರಿಯುವ ಬೀಡಾಗಿದೆ ಭಾರತ ನೂರಾರು ಕಲಿಗಳು ಬಾಳಿ ಬದುಕಿದ ನಾಡಲ್ಲವೇ ಇದು? ಸರ್ವ ಸ್ವತಂತ್ರ  ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಭಾರತ ಪಂಕಜಾಳ ಹೃದಯದಲ್ಲಿ ದೇಶಾಭಿಮಾನ ತುಂಬಿ ತುಳುಕಿದೆ ಸ್ವವಾಲಂಬಿ ಆತ್ಮನಿರ್ಭರದದ ಕನಸು ತುಂಬಿ ನಿಂತಿದೆ ಭಾರತ ಶ್ರೀಮತಿ.ಪಂಕಜಾ.ಕೆ. ಮುಡಿಪು

ಗ್ಉರುಕುಲಾ ಬೆಳಗಾವಿ ಸುಗ್ಗಿ ಹಬ್ಬ ಅತ್ಯುತ್ತಮ

ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ಬೆಳಗಾವಿ ವಾರಕ್ಕೊಂದು ಸ್ಪರ್ಧೆಗಾಗಿ ವಿಷಯ.. ಸಂಕ್ರಾಂತಿ  ಸಂಭ್ರಮ ಶೀರ್ಷಿಕೆ..ಸುಗ್ಗಿ ಹಬ್ಬ ಮಕರ ರಾಶಿಗೆ ನೇಸರನ ಪಯಣ ಶುರುವಾಯಿತು ಪುಣ್ಯಕಾಲ ಉತ್ತರಾಯಣ ಸಡಗರದ ಹಬ್ಬವಿದು ಸಂಕ್ರಾಂತಿ ಕಳೆಯಲಿ ಮನೆ ಮನದ ಭೀತಿ ಸುಗ್ಗಿಯ ಸಂಭ್ರಮ ಮೂಡಿದೆ ಮನದಲಿ ಹಸಿರು ಹಂದರ ಹಾಸಿದೆ ಧರೆಯಲಿ ಮನೆಯಲಿ ತುಂಬಿದೆ ದವಸ ಧಾನ್ಯ ರೈತನ ಶ್ರಮಕೆ ಸಂದ ಬೆಲೆ ಅನನ್ಯ ಮನೆ ಮನಗಳಲಿ ತುಂಬಿದೆ ಹರುಷ ನವವಸಂತನಾಗಮನದಿಂದ ಸಂತಸ ಎಳ್ಳು ಬೆಲ್ಲವ ಬೀರುತ ಸಂಭ್ರಮಿಸುವ ಹಬ್ಬ ರೈತನ ಮೊಗದಲಿ ತುಂಬಿದೆ ಹರುಷದ ಕಬ್ಬ  ನೇಸರನು  ಬದಲಿಸಿದ ತನ್ನ ಪಥ ತರುಲತೆಗಳಲಿ ಮೂಡಿತು ನವ ವಸಂತ ಹಸಿರು ವನದಲಿ ನಲಿಯುತಿದೆ ಸುಕಪಿಕ ಪ್ರಕೃತಿ ಸಿರಿ ಕಂಡ ಮನ ಭಾವುಕ ಮಾಗಿಯ ಚಳಿಯ ಓಡಿಸುತ ಬಂದ ಭಾಸ್ಕರ ಬೀಸುವ ತಂಗಾಳಿಯ ಆರ್ಭಟ ಭಯಂಕರ ಬೆಳೆದ ಬೆಳೆ ಮನೆತುಂಬುವ ಸಂತಸದ ಕಾಲ ಸಂಕ್ರಾಂತಿ ಸಂಭ್ರಮದಿ ನಲಿಯುವರು ಎಲ್ಲಾ ಶ್ರೀಮತಿ. ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಕುರ್ನಾಡು.ದ.ಕ.

ಗುರುಕುಲ ಧಾರವಾಡ ಸಣ್ಣ ಕಥೆ ಉತ್ತಮ

ಗುರುಕುಲಾ ಧಾರವಾಡ ಘಟಕದ ಸ್ಪರ್ಧೆಗಾಗಿ  ವಾರಕ್ಕೊಂದು ಕಥೆ ..ಸಣ್ಣ ಕಥೆ ವಿಷಯ  .ಮನ ಮುಟ್ಟಿದ ಮಾತು ಶೀರ್ಷಿಕೆ. .. ಬುದ್ಧಿಮಾತು ನಾನು ಚಿಕ್ಕವಳಿದ್ದಾಗ   ಶಾಲೆಗೆ ರಜೆ ಇದ್ದಾಗ  ಒಂದು ದಿನ ಕೆಲಸ ಮಾಡಿದ್ದು ಸರಿಯಾಗಲಿಲ್ಲವೆಂದು, ತಂದೆ ತಾಯಿ ಎಲ್ಲರ ಎದುರಿಗೆ ಬೈದು ಬಿಟ್ಟರು . ಇದರಿಂದ ಬೇಸರವಾಗಿ ನಾನು  ಊಟ, ತಿಂಡಿಗೆ ಬಾರದೆ ತೋಟದಲ್ಲಿ ಕುಳಿತು ಮನಸಾರೆ ಅತ್ತು ಬಿಟ್ಟೆ .ಆಗ  ತಂದೆಯವರು ಅಲ್ಲಿಗೆ ಬಂದು ಪಂಕಜಾ ಇಷ್ಟು ಚಿಕ್ಕ ವಿಷಯಕ್ಕೆ ಅಳುವುದೇ  ,ತಪ್ಪುಗಳಾದಾಗ ಬೈದರೆ ಬೇಸರ ಪಟ್ಟು ಊಟ ತಿಂಡಿ ಬಿಟ್ಟರೆ ಮುಂದಕ್ಕೆ ಜೀವನದಲ್ಲಿ   ನೀನು ಕೆಲಸಕ್ಕೆ ಹೋದಾಗ ನಿನ್ನ ಮೇಲಧಿಕಾರಿಗಳು ಬೈದರೆಂದು ಕೆಲಸ ಮಾಡುವುದನ್ನೇ ಬಿಟ್ಟು ಬಿಡುತ್ತಿಯಾ ಇಲ್ಲ ಅಲ್ಲವೇ  ಯಾರು ಬೈದರೂ ತಪ್ಪು ಏನು ಎಂದು ತಿಳಿದು  ಮುಂದಕ್ಕೆ ತಪ್ಪಾಗದಂತೆ ನೋಡಿಕೊಳ್ಳುತ್ತಾ ಜೀವನದಲ್ಲಿ ಯಶಸ್ಸು ಪಡೆಯಬೇಕು  ,ಯಾರೋ ಏನೋ ಅಂದರು,ಇನ್ನಾರೋ ಬೈದರೂ ಎನ್ನುವ ಕಾರಣಕ್ಕೆ ಅಳುತ್ತಾ ಊಟ ತಿಂಡಿ ಬಿಟ್ಟು ಕುಳಿತುಕೊಳ್ಳಬಾರದು .ಮುನ್ನುಗ್ಗಿ ಸಾಧಿಸಿ ತೋರಿಸಬೇಕು.  ಇದರಿಂದ ನಿನ್ನನ್ನು ಹೇಳುವವರು  ಮುಂದಕ್ಕೆ ನಿನ್ನನ್ನು ಗೌರವಿಸುತ್ತಾರೆ ಎಂದು ಬುದ್ದಿ ಮಾತು ಹೇಳಿ ನನ್ನನ್ನು  ಪ್ರೋತ್ಸಾಹಿಸಿ ಮನೆಗೆ ಕರೆದುಕೊಂಡು ಬಂದರು .ತಂದೆಯವರು  ಹೇಳಿದ  ಮನಮುಟ್ಟಿದ ಈ  ಮಾತು ಇಂದು ನಾನೊರ್ವ ಉತ್ತಮ ಕೆಲಸಗಾತಿ, ಲೇಖಕಿ ಕವಯಿತ್ರಿಯಾಗಿ   ಬಾಳಲು ಸಾಧ್ಯವಾಯಿತು. ಶ್ರೀಮತಿ.ಪಂಕಜಾ.ಕೆ. ಮುಡಿಪ

ಗುರುಕುಲ ಧಾರವಾಡ ಜಡೆಕವನ

ಗುರುಕುಲ ಧಾರವಾಡ ಘಟಕ ಸ್ಪರ್ಧೆಗಾಗಿ ಜಡೆಕವನ  ವಿಷಯ. ಸೋಮಾರಿ         ಕೆಲಸವಿಲ್ಲದವ  ಕೆಲಸ ಕಾರ್ಯವಿಲ್ಲದೆ ಅಲೆಯುತ ಅಲೆಯುತ ದಿನ ಕಳೆಯುವವನು ಸೋಮಾರಿ ಸೋಮಾರಿಯಾದವ ದುಡಿಯಲಾರ ದುಡಿಯಲಾರದೆ ಇತರರ ಹಂಗಿನಲಿ ಇರುವನು ಇರುವನು  ಕಾಡಿ ಬೇಡಿ  ತಿನ್ನುತ ತಿನ್ನುತ  ಇರುವುದೇ ಇವನ ಕಾಯಕ ಕಾಯಕ ಯೋಗಿಗೆ ಇರುವ ಬೆಲೆ ಇವನಿಗಿದೆಯೇ ಇವನಿಗಿದೆಯೇ ಮಾನ ಮರ್ಯಾದೆ ಮರ್ಯಾದೆಯಿಂದ  ದುಡಿಯಬೇಕು ದುಡಿದು ತಿನ್ನುವುದು ಉತ್ತಮ ಉತ್ತಮ ಗುಣ ನಡತೆಯಿದ್ದರೆ ಗೌರವ ಗೌರವಯುತ ಜೀವನ ನಡೆಸಬೇಕು  ನಡೆಸಬೇಕು   ಜೀವನವನ್ನು ಸರಾಗವಾಗಿ   ಸರಾಗವಾಗಿ ಮಾಡಬೇಕು ಯಾವುದೇ ಕೆಲಸ ಶ್ರೀಮತಿ ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ .ಮಾಸ್ಟರ್ ಕುರ್ನಾಡು.ದ.ಕ.

ಗುರುಕುಲ ಧಾರವಾಡ ಕುವೆಂಪು ಬಗ್ಗೆ ಕವನ

ಗುರುಕುಲಾ ಕಲಾ ಪ್ರತಿಷ್ಠಾನ ಧಾರವಾಡ ಘಟಕ ವಾರದ ಕವನ ಸ್ಪರ್ಧೆಗಾಗಿ ವಿಷಯ ..ರಾಷ್ಟ್ರಕವಿ ಕುವೆಂಪು         ವಿಶ್ವ ಮಾನವ ಕುವೆಂಪು  ಕನ್ನಡದ ಹೆಮ್ಮೆಯ ಮುಕುಟಮಣಿ  ಕನ್ನಡ ಸಾಹಿತ್ಯ ಉಳಿಸಿ ಬೆಳೆಸಿದ ಕಣ್ಮಣಿ  ಕುವೆಂಪು ಎಂಬ ವಿಶ್ವಮಾನವರು  ಹಲವು ಪ್ರಕಾರದ ಸಾಹಿತ್ಯ ರಚಿಸಿದವರು   ಕುಪ್ಪಳ್ಳಿಯ ವೆಂಕಟಪ್ಪ ಪುಟ್ಟಪ್ಪನವರು ಕುವೆಂಪು ಎಂಬ ಕಾವ್ಯನಾಮದಿಂದ ಪರಿಚಿತರು ರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿದವರು ಸಂದಿದೆ ಇವರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ ಅಗ್ರಮಾನ್ಯ ಕವಿ ಕಾದಂಬರಿ ನಾಟಕಕಾರ ಅತ್ಯುತ್ತಮ ವಿಮರ್ಶಕ ಚಿಂತಕ ಕಥೆಗಾರ ಕರ್ನಾಟಕ ರತ್ನ ಪಂಪ ಪ್ರಶಸ್ತಿ ಪುರಸ್ಕಾರ ಪದ್ಮವಿಭೂಷಣ ಜ್ಞಾನಪೀಠ  ಪ್ರಶಸ್ತಿಗಳ ಹಾರ ಇಪ್ಪತ್ತನೇ ಶತಮಾನ ಕಂಡ ದೈತ್ಯ ಪ್ರತಿಭೆ ಯುಗದ ಕವಿ ಜಗದ ಕವಿ ಎನಿಸಿದ ಪ್ರಭೆ  ಕಾನೂರು ಹೆಗ್ಗಡತಿ ಬೃಹತ್ ಕಾದಂಬರಿ  ಸಂದಿದೆ ಇವರಿಗೆ ಹಲವು ಪ್ರಶಸ್ತಿಯ ಗರಿ   ಆಧುನಿಕ ವಾಲ್ಮೀಕಿ  ಎಂದು ಬಿರುದಾಂಕಿತರು ನಾಡಗೀತೆಯ ರಚಿಸಿ ಜನಮಾನಸದಲಿ ನಿಂತರು ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರಕವಿ ಮೂವತ್ತಕ್ಕೂ ಮಿಕ್ಕಿ ಕಾವ್ಯಗಳ ರಚಿಸಿದವರು ಶ್ರೀಮತಿ.ಪಂಕಜಾ. ಕೆ. ಮುಡಿಪು. ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಕುರ್ನಾಡು.ದ.ಕ 

ಗುರುಕುಲ ಧಾರವಾಡ ಚಿತ್ರಕವನ

ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ಧಾರವಾಡ ವಾರಕ್ಕೊಂದು ಸ್ಪರ್ಧೆಗಾಗಿ ಚಿತ್ರಕ್ಕೊಂದು ಕವನ  ಬೀದಿಗೆ ಬಿದ್ದ ಬದುಕು ಕೊರೊನಾ ಮಾರಿಯ ಹಿಡಿತಕೆ ಸಿಕ್ಕಿ ಅನಾಥವಾಯಿತು ಜೀವ ಬಾಳಿನ ಭರವಸೆ ಕುಂದುತಲಿರಲು ಸೇವೆಗೆ ನಿಂತರು ಜನರು ಮಾರಿರೋಗದ ಹೊಡೆತಕೆ ಬೀದಿಗೆ ಬಿದ್ದಿತು ಬದುಕು ಬಡತನವೆನ್ನುವ ಕರಿನೆರಳಿನಲಿ ಸಾಗುತಿದೆ  ಬಡವರ ಬದುಕು ಮುಖಗವಸನು ಹಾಕಿದ ತರುಣನು ಹಂಚುತಲಿರುವನು ಅನ್ನವನು ಕವಚವ ತೊಟ್ಟ ಅವನನು ಕಾಣುತ ಮಗುವಿನ ಕಣ್ಣಲಿ ಭಯವು ತಟ್ಟೆಯ ಹಿಡಿಯುತ ಸಾಲಾಗಿ ಬರಲು ಹಾಕುವರು ತಟ್ಟೆಗೆ ಚಿತ್ರಾನ್ನ ಕೊರೊನಾ ಸಂತ್ರಸ್ತರ ಸೇವೆಯಲಿರುತಲಿ ಬಾಳನು ಸಾಗಿಸುವನೀತ ತುತ್ತಿನ ಕೂಳಿಗೆ ಬೇಡುವ ಜೀವನ ತಬ್ಬಲಿ ಮಗುವಿನದಾಯ್ತು ಮಾರಿ ರೋಗದ ಧಾಳಿಗೆ ಸಿಲುಕಿ  ಮಗುವಿನ ಬಾಳಿಡೀ ಗೋಳಾಯ್ತು ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್. ಮಾಸ್ಟರ್.ಕುರ್ನಾಡು ದ.ಕ.574153

ಗುರುಕುಲ ಧಾರವಾಡ ಲೇಖನ

ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ಧಾರವಾಡ  ಲೇಖನ ಸ್ಪರ್ಧೆಗಾಗಿ ವಿಷಯ.. ಸರ್ವಧರ್ಮ ದಮನ್ವಯದ ಪ್ರತೀಕ ವಿವೇಕ ಸ್ವಾಮಿ ವಿವೇಕಾನಂದರ ಜೀವನ ಯುವಜನರಿಗೆ ದಾರಿ ದೀಪ. ರೋಮಾಂಚಕರವೂ ಚೇತೋಹಾರಿಯೂ ಆಗಿರುವ  ಇವರ ಜೀವನವು ಜಗತ್ತಿನ ಜನರೆಲ್ಲರಿಗೂ   ಚೈತನ್ಯದ ಚಿಲುಮೆ. ವಿಶ್ವನಾಥದತ್ತ ಹಾಗೂ ಭುವನೇಶ್ವರಿ ದೇವಿಗೆ ಶಿವನ ದಯೆಯಿಂದ ಹುಟ್ಟಿದ ಶಿಶುವಾದ ಇವರು ದೈವಾಂಶ ಸಂಭೂತರಾಗಿದ್ದರು. ಶ್ರೀ ರಾಮಕೃಷ್ಣ ಪರಮಹಂಸರ ನೆಚ್ಚಿನ ಶಿಷ್ಯರಾಗಿದ್ದ ನರೇಂದ್ರನಾಥದತ್ತ ನು ಕಾಲಾಂತರದಲ್ಲಿ ವಿವೇಕಾನಂದ ಎಂದು ಪ್ರಸಿದ್ದರಾದರು.ಇವರು ಸರ್ವಧರ್ಮಗಳಲ್ಲೂ ಶಿವನನ್ನೇ ಕಂಡ ಶ್ರೇಷ್ಠರು. ಅಮೆರಿಕಾದ ಚಿಕಾಗೋದಲ್ಲಿ  ನಡೆಯುವ ಸರ್ವಧರ್ಮ ಸಮ್ಮೇಳನದ ರಾಯಭಾರಿಯಾಗಿ  ವಿವೇಕಾನಂದರು  ಭಾರತವನ್ನು ಪ್ರತಿನಿಧಿಸಿ ಅಲ್ಲಿಯ ಪ್ರಜೆಗಳನ್ನು ಉದ್ದೇಶಿಸಿ ಅಮೆರಿಕಾದ ಸಹೋದರ ಸಹೋದರಿ ಯರೆ ಎಂದು  ಭಾಷಣ ಪ್ರಾರಂಭಿಸಿದ್ದು ಅಮೆರಿಕಾದ ಜನತೆಯಲ್ಲಿ ಸಂಚಲನವನ್ನು ಉಂಟುಮಾಡಿತು. ಯಾರು ಈ ರೀತಿಯ ಸಂಬೋಧನೆಯನ್ನು ಮಾಡದೆ ಇದ್ದುದರಿಂದ ಅಲ್ಲಿ ನೆರೆದ ಜನತೆ ಸ್ತಬ್ಧರಾದರು  ವಿಶ್ವ ಧರ್ಮಗಳ ಐಕ್ಯತೆಯನ್ನು  ಸಾರುವ ರೀತಿಯಲ್ಲಿ ಇತ್ತು ಆ ಸಂಭೋದನೆ. ಕೇವಲ ಹದಿನೈದು ನಿಮುಷದ ಭಾಷಣವಾದರೂ  ವಿದ್ವತ್ಪೂರ್ಣವಾಗಿ  ನುಡಿದ ಅವರ ನುಡಿಗಳು ಅಮೆರಿಕಾದ ಜನತೆಯನ್ನು ಸೆಳೆದುಕೊಂಡಿತು. ಸರ್ವಧರ್ಮ ಸಮನ್ವತೆಯನ್ನೇ ಭಾಷಣದ ಮೂಲ ಉದ್ದೇಶವಾಗಿ ಇಟ್ಟುಕೊಂಡ  ಅವರು ಹಲವಾರು ಶ್ಲೋಕಗಳ ಮೂಲಕ ಸರ್ವಧರ್ಮಿಯರೂ