Skip to main content

Posts

Showing posts from November, 2019

ಗಜಲ್ ನಿನ್ನ ಮಧುರ ನೆನಪು

ಗಜಲ್ *********** ನಿನ್ನ ಮಧುರ ನೆನಪಲಿ ಬಂದಿಯಾಗಿರುವೆ ನಲ್ಲ ನನ್ನ ಒಲವ ಓಲೆಯ ತುಂಬಾ ನೀನಿರುವೆ ನಲ್ಲ ಹೊಂಗೆ ನೆರಳ ತಂಪಿನಂತೆ  ನೆನಪುಗಳು ಕಾಡಿವೆ ಭಾವದಲೆಗಳು ಹರಿದು ನೀರಾಗಿರುವೆ ನಲ್ಲ ಬೆಳದಿಂಗಳ ಈ ಇರುಳು ನಮಗಾಗಿದೆಯಲ್ಲವೇ? ರಾತ್ರಿ ಕರಗಿ ಹಗಲಾದರೂ ನೀ ಬಾರದೇಕಿರುವೆ ನಲ್ಲ ಮುಂಜಾವಿನ ಮಂಜಿನಲಿ ನೆನೆಯಲು ಮನಕೆ ಆಹ್ಲಾದ ನೆನಪಿನ ದೋಣಿಯಲಿ ಒಂಟಿಯಾಗಿರುವೆ ನಲ್ಲ ಹೊಂಗನಸು  ಕಾಣುವುದು ತಪ್ಪೇ ಹೇಳು ಪಂಕಜಾ? ನನಸು ಮಾಡಲು ನಿನಗಾಗಿ ಕಾಯುತಿರುವೆ ನಲ್ಲ ಪಂಕಜಾ.ಕೆ.

ಹನಿಕವನ 2

ಹನಿಕವನ 1 ಸೂರ್ಯಸ್ನಾನ ಚಳಿಯ ದಿನಗಳಲಿ ಸೂರ್ಯಸ್ನಾನವು ಮೈಗೆ ಹಿತವನು ಕೊಡುವುದು ಜಡ್ಡು ಕಟ್ಟಿದ  ಮೈ  ಮನಕೆ ಉಲ್ಲಾಸ ಹುರುಪನು ತರುವುದು ಜೀವಸತ್ವವು  ಮೈಯ ತುಂಬಿ ಕಸುವು ಬರುವುದು ಸತ್ಯವು ಪಂಕಜಾ.ಕೆ ಹನಿಕವನ 2 ಪ್ರಕೃತಿಯೊಡನಾಟ ಹಸಿರು ತುಂಬಿದೆ ಇಳೆಯ ತುಂಬಾ ಕಣ್ಣು ಮನವನು ತಣಿಸಿದೆ ಹಚ್ಚ ಹಸಿರಿನ  ಬಯಲ ತುಂಬಾ ತಂಪು ಗಾಳಿಯು ಬೀಸಿದೆ ಪ್ರಕೃತಿಯಲ್ಲಿ   ವಿಹರಿಸುತಿರಲು ಮುದವು ತುಂಬಿತು ಮೈ ಮನದಲಿ ಪಂಕಜಾ.ಕೆ

ಮುನಿಸು

ಮುನಿಸು ಮಾತನಾಡದೆ  ಏಕೆ ನಿಂತೆ ನೀಳ ಜಡೆಯ ಸುಂದರಿ ಯಾವ ಯೋಚನೆ ನಿನ್ನ ಮನದಲಿ ತುಂಬಿ ನಿಂತಿದೆ ಹೇಳು ನೀ ಕಿಟಕಿಯೆಡೆಯಲಿ ಇಣುಕುತಿರುವ ಚೆಲುವ ಚಂದಿರ ಕಂಡನೆ ನಿನ್ನ ಮನದ ಭಾವವರಿತು ಬೆಳ್ಳಿ ಚಂದಿರ ನಕ್ಕನೆ ಮುದ್ದು ಮೊಗವು ಬಾಡಿತೇಕೆ ತವರ   ನೆನಪು ಕಾಡಿತೆ ಕೋಪತಾಪದಿ ನಲುಗಬೇಕೆ ನಮ್ಮ ಬಾಳದು ಹೇಳು ನೀ ಮುದ್ದು ಮುಖದ ಚೆಲುವು ಕುಗ್ಗಿದೆ ತಾಳಲಾರೆನು ಈ ಮೌನವ ಮುನಿಸು ತೊರೆದು ನಗುವ ತೋರೆ ನೀನೇ ನನ್ನ ಬಾಳಿನ ಅರಗಿಣಿ  ಪಂಕಜಾ.ಕೆ

ಗಜಲ್ ನಿನ್ನ ಅಗಲಿಕೆಯ ವಿರಹ ಕಾದಿದೆ

ಗಜಲ್ ನಿನ್ನ ಅಗಲಿಕೆಯ ವಿರಹ ಕಾಡಿದೆ ನಲ್ಲೆ ಮನೆಯಲ್ಲಿ ಶೂನ್ಯ ತುಂಬಿದೆ ನಲ್ಲೆ ಕೋಪ ತಾಪಗಳನ್ನು ಮುಂದುವರಿಸಬಾರದು ಅತಿಯಾದರೆ ಅಮೃತವೂ ವಿಷವಾಗುತ್ತದೆ ನಲ್ಲೆ ನೀನಿಲ್ಲದೆ ಮನೆ ಸ್ಮಶಾನ ವಾಗಿರುವುದು ಮನವು  ಬೇಸರದ ಕಡಲು ಆಗಿದೆ ನಲ್ಲೆ ಯಾರೂ ಈ ಜಗತ್ತಿನಲ್ಲಿ ಶಾಶ್ವತವಲ್ಲ ಹೊಂದಾಣಿಕೆಯಿಂದ ಇರಬೇಕಿದೆ ನಲ್ಲೆ ಹುಸಿಮುನಿಸು ಆಗಾಗ ಇರಬೇಕು ಪಂಕಜಾ ಬಾಳು ನಂದನವನ  ಆಗಬೇಕಿದೆ ನಲ್ಲೆ ಪಂಕಜಾ. ಕೆ

ಜೀವನ ಭಾವಗೀತೆ

ಜೀವನ.    (ಭಾವಗೀತೆ) ರಾಗವೊಂದು ಬಾವಹಲವು ಇರುವ ತರದಿ ಜೀವನ ಅರಳಬೇಕು ಚಂದದಿಂದ ಹೂವಿನಂತೆ ದಿನ ದಿನ ನನ್ನ  ನಿನ್ನ  ಒಲವಿನಲ್ಲಿ ಇರದು  ಎಂದು ಬಡತನ ನಲಿಯಬೇಕು ನಿತ್ಯ ನಾವು ಬಾರದಂತೆ    ಹಗೆತನ ಸೂರ್ಯ ಚಂದ್ರ ಇರುವ ತನಕ ಇರದು ನಮ್ಮ  ಜೀವನ ಬರಿದೆ ಕೋಪ ತಾಪದಲ್ಲಿ ನಲುಗದಿರಲಿ ಮನೆ ಮನ ಹಾಲು ಜೇನು ಬೆರೆತಂತೆ ಇರಲಿ ನಮ್ಮ ಜೀವನ ಜೀವವಿರುವ ತನಕ ನಾವು ಜತೆಯಲ್ಲಿದ್ದರೆ. ಪಾವನ ಪ್ರಕೃತಿಯಲ್ಲಿ ವಿಹರಿಸುತ್ತ ಪಡೆಯಬೇಕು  ಹೊಸತನ ಬಾಳು ಬೆಳಗುವಂತೆ ನಾವು ನಲಿಯಬೇಕು  ಅನುದಿನ ಪಂಕಜಾ.ಕೆ.

ಗಜಲ್ ಜುಳು ಜುಳು ಹರಿಯುವ ನದಿಯಂತೆ

ಗಜಲ್ ಜುಳು ಜುಳು ಹರಿಯುವ ನದಿಯಂತೆ ಮನಸು ಪ್ರಶಾಂತವಾಗಿದೆ ನಲ್ಲ ಮುಂಜಾವಿನ ತಂಗಾಳಿಯ ತಂಪಿನಲಿ ನಲಿಯಬೇಕೆನಿಸಿದೆ ನಲ್ಲ ನಿನ್ನ ಒಡನಾಟವಿದ್ದರೆ  ಬಾಳ ಬಳ್ಳಿಯಲ್ಲಿ ಹೂವು ಅರಳುವುದು ನಗು ನಗುತ ಜೀವನದ ಸವಿಜೇನು ಸವಿಯೋಣವೆನಿಸಿದೆ ನಲ್ಲ ನಾವಿಬ್ಬರು ಒಂದಾಗಿ ಕಡಲ ತಡಿಯಗುಂಟ ಸಾಗಬೇಕು ಸಾಗರದ ಆಳದಂತಿರುವ ನಿನ್ನ ಮನವನ್ನು ತಿಳಿಯಬೇಕಾಗಿದೆ ನಲ್ಲ ಬಾಳೊಂದು  ನಂದನವನ ಆಗಿದೆಯಲ್ಲವೇ ನೀಜತೆಯಲ್ಲಿದ್ದಾಗ  ಯುಗವೊಂದು ಕ್ಷಣದಂತಾಗಿದೆ ನಲ್ಲ ಕಷ್ಟ ಸುಖಗಳನ್ನು ಸಮಾನವಾಗಿ ಕಾಣಬೇಕಲ್ಲವೇ ಪಂಕಜಾ ತುಂಬು ಪ್ರೀತಿಯಿಂದ ಜೀವನದಲ್ಲಿ ಅರುಣೋದಯವಾಗಿದೆ ನಲ್ಲ ಪಂಕಜಾ.ಕೆ

ಸೂರ್ಯ ಸ್ನಾನ

ಸೂರ್ಯಸ್ನಾನ ನೋಡು ಬಾನಲಿ  ಮೂಡ ಹೊಡೆಯಲಿ ಹೊನ್ನ ಕಿರಣವು ಚೆಲ್ಲಿದೆ ಮಂಜು ತೆರೆಯನು  ಭರಧಿ ಸರಿಸುತ ಮೆಲ್ಲ ಮೆಲ್ಲನೆ ಬರುತಿದೆ ಹಸಿರು ಹುಲ್ಲಲಿ ನಿಂತ ಹನಿಗಳು ಕರಗಿ ಹರಿಯಿತು ಮೆಲ್ಲನೆ ಬಾನ ಬಯಲಲಿ ಚೆಲುವ ಬಣ್ಣವ ಕಲೆಸಿ ಬರೆಯಿತು ಚಿತ್ರವ ಎಲ್ಲಿ ನೋಡಲಿ  ಚೆಲುವು ತುಂಬಿದೆ ರವಿ ಉದಯಿಸುವ ಕ್ಷಣದಲಿ ಬಿಸಿಯ ಸ್ಪರ್ಶವು  ಹಿತವ ಕೊಡುತಲಿ ಮೈ ಮನಕೆ ತುಂಬಿತು ಹರ್ಷವ ಚಳಿಯ ಕರಗಿಸಿ ಬಿಸಿಯ ಹುಟ್ಟಿಸಿ ಜೀವಕೋಟಿಗೆ ತುಂಬಿತು ಉಸಿರನು ಸೂರ್ಯ ಸ್ನಾನವ ನಿತ್ಯ ಮಾಡಲು ಆರೋಗ್ಯ ಭಾಗ್ಯವು ಸಿಗುವುದು ಪಂಕಜಾ.ಕೆ.

ಮುರದ್ದಪ್ ಗಜಲ್ ನಲ್ಲ

ಮುರದ್ದಪ್ ಗಜಲ್ *********** ನಿನ್ನ ಮಧುರ ನೆನಪಲಿ ಬಂದಿಯಾಗಿರುವೆ ನಲ್ಲ ನನ್ನ ಒಲವ ಓಲೆಯ ತುಂಬಾ ನೀನಿರುವೆ ನಲ್ಲ ಹೊಂಗೆ ನೆರಳ ತಂಪಿನಂತೆ  ನೆನಪುಗಳು ಕಾಡಿವೆ ಭಾವದಲೆಗಳು ಹರಿದು ನೀರಾಗಿರುವೆ ನಲ್ಲ ಬೆಳದಿಂಗಳ ಈ ಇರುಳು ನಮಗಾಗಿದೆಯಲ್ಲವೇ? ರಾತ್ರಿ ಕರಗಿ ಹಗಲಾದರೂ ನೀ ಬಾರದೇಕಿರುವೆ ನಲ್ಲ ಮುಂಜಾವಿನ ಮಂಜಿನಲಿ ನೆನೆಯಲು ಮನಕೆ ಆಹ್ಲಾದ ನೆನಪಿನ ದೋಣಿಯಲಿ ಒಂಟಿಯಾಗಿರುವೆ ನಲ್ಲ ಹೊಂಗನಸು  ಕಾಣುವುದು ತಪ್ಪೇ ಹೇಳು ಪಂಕಜಾ? ನನಸು ಮಾಡಲು ನಿನಗಾಗಿ ಕಾಯುತಿರುವೆ ನಲ್ಲ ಪಂಕಜಾ.ಕೆ.

ಗೈರ್ ಮುರದ್ದಪ್ ಗಜಲ್

ಗೈರ್ ಮುರದ್ದಪ್ ಗಜಲ್ ********************* ನಿನ್ನ ಕಾಣದೆ ನನ್ನ ಕಣ್ಣುಗಳು ಸೋತಿದೆ ಮಧುರ ನೆನಪು ತುಂಬಿ ಮನವು ನಲಿದಿದೆ  ನೂರಾರು ಆಶೆಗಳು ಮನದಲಿ ಮೂಡಿದೆ ಹೇಳಲಾರದೆ ಹೃದಯ ಒಡೆದು ಚೂರಾಗಿದೆ ಬಾಳ ದೋಣಿಯಲಿ ನಾವು ಜತೆಯಾದೆವಲ್ಲ ಮನದುಮ್ಮಳವನ್ನು ಸಹಿಸಿ ಸಾಕಾಗಿದೆ ಎದೆಯಲಿ ಸುಡುತಿದೆ ಕೆಂಡದುಂಡೆಗಳು ತಣಿಸಲು ನೀನು ಜತೆಯಲಿ ಬರಬೇಕಿದೆ ಬಚ್ಚಿಟ್ಟ ನೋವು ಕರಗಲೇ ಬೇಕು ಪಂಕಜಾ ಬದುಕು ಹೂವಿನ ಹಾಸಿಗೆ ಆಗಬೇಕಿದೆ ಪಂಕಜಾ.ಕೆ

ಜುಲ್ ಕಾಪಿಯಾ ಗಜಲ್ ಭಾರತ

ಜುಲ್ ಕಾಪಿಯಾ ಗಜಲ್ ********************** ಬಹುಭಾಷಾ ಸಂಸ್ಕೃತಿಗಳ ನೆಲೆ ಸೆಲೆ ಇದು ನಮ್ಮ ಭಾರತ ವಿವಿದತೆಯಲ್ಲೂ ಸಾರುತಿದೆ ಏಕತೆ ಐಕ್ಯತೆ ಇದುನಮ್ಮ ಭಾರತ ರಾಷ್ಟ್ರೀಯ ಭಾವೈಕ್ಯತೆ ಪರಂಪರೆಯನ್ನು ಜತನದಿಂದ ಕಾಯಬೇಕು ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲ ಬಾಳುವರು ಒಂದಾಗಿ ಒಟ್ಟಾಗಿ ಇದುನಮ್ಮಭಾರತ ಭಾರತೀಯ ಹಬ್ಬಗಳು ಸರ್ವಧರ್ಮ ಸಮನ್ವತೆಯ ಪ್ರತೀಕ ಎಲ್ಲರೂ ಒಗ್ಗಟ್ಟಾಗಿ ಆಚರಿಸುವರು ಸಂಭ್ರಮಿಸುವರು ಇದು ನಮ್ಮ ಭಾರತ ಜಾತಿಮತಗಳನ್ನು ಸಮಾನವಾಗಿ ಕಾಣುವುದು ರಾಷ್ಟ್ರದ ಸಂಸ್ಕೃತಿ ಪ್ರತಿಯೊಬ್ಬನ ಸಂಪ್ರದಾಯ ಪದ್ಧತಿಗಳ ಗೌರವಿಸುವುದು ಮೆಚ್ಚುವುದು ಇದು ನಮ್ಮ ಭಾರತ ಸರ್ವಧರ್ಮ ಸಮ್ಮಿಲನದ ಶ್ರೇಷ್ಠ  ದೇಶವಿದು  ಪಂಕಜಾ ಬೇಧಭಾವವಿಲ್ಲದೆ ನಲಿಯಬಹುದು ಬೆಳೆಯಬಹುದು ಇದುನಮ್ಮಭಾರತ ಪಂಕಜಾ.ಕೆ.

ಬಿರುಕು

ಬಿರುಕು ಒಂದೇ ತಾಯಿಯ ಮಕ್ಕಳಂತೆ ಕೂಡಿ ಆಡುತ ನಲಿದೆವು ನೋವು ನಲಿವುಗಳನ್ನು  ಹಂಚುತ  ಜತೆಗೆ ಸೇರಿ ಕುಣಿದೆವು ಆಟ ಪಾಠ ಎಲ್ಲವನ್ನು  ಒಂದು ಗೂಡಿ ಕಲಿತೆವು ಎಂತ ಸ್ನೇಹವದು ನಮ್ಮ ನಡುವೆ ಇನಿತು ಇರದದರಲ್ಲಿ ಸ್ವಾರ್ಥವು ಕಾಲಕಳೆಯುತ ಬೆಳೆದು ನಿಂತೆವು ಜಗವು  ನೋಡಿತು ನಮ್ಮನು ಶುದ್ಧ ಸ್ನೇಹದ ಜಲಕೆ ಅವರು ಹುಳಿಯ ಹಿಂಡುತ ನಕ್ಕರು ಇನಿತು ಕಲ್ಮಶವಿಲ್ಲದ ನಮ್ಮ ಸ್ನೇಹವು  ಅಂದೆ  ಬಿರುಕು ಬಿಟ್ಟಿತು ಹಳದಿ ಕಣ್ಣಿನ ಜನರ ನಡುವೆ ಸಿಕ್ಕು ಉರುಳಿತು ಸ್ನೇಹ ಸೌಧವು  ಕೃಷ್ಣ ಸುಧಾಮರ ನೆನಪಿಸುವಂತ ನಮ್ಮ ಸ್ನೇಹವು  ಬಾಡಿತು ಮನಸಿನಾಳದಿ  ಬೇರು ಬಿಟ್ಟ ಸ್ನೇಹ ವೃಕ್ಷವು ಒಣಗಿತು ಪಂಕಜಾ ಕೆ.

ಭೂಮಿ.ಬಾನು

ಭೂಮಿ   ಬಾನು  ದೂರದ ಬೆಟ್ಟದ ತಡಿಯಲಿ ಜುಳು ಜುಳು ಎನ್ನುತ ನದಿಯೊಂದು ಕಣ್ಮನ ಸೆಳೆಯುತ ಹರಿಯುತ್ತಿದೆ ಸಾಗರ ಸೇರುವ ಆತುರ ಕಾತುರ  ತನ್ನೊಡಲಲ್ಲಿ ವಿಸ್ಮಯ ತುಂಬಿ ಎಲ್ಲಿಯೂ ನಿಲ್ಲದೆ ಓಡುತಿದೆ ಪಡುಗಡಲಲಿ ಮರೆಯಾಗುವ ರವಿ ಬಾನಲಿ ಬಣ್ಣದ ಓಕುಳಿ ಸವಿ ಸಂಗಮವಾಯಿತೆ ಭೂಮಿ .ಬಾನು? ಮುಳುಗುವ ರವಿ ಕಿರಣದ ಬಿಂಬ ರಂಗಿನ ಓಕುಳಿ ಬಾನಲಿ ಚೆಲ್ಲಿ ರಸಿಕರ ಎದೆಯಲಿ  ತಲ್ಲಣ ತುಂಬಿಸಿತು ಮೈ ಮರೆಯುವ ಮೋಹಕ ನೋಟ ಕಡಲ ತಡಿಯಲಿ ಮುಳುಗುವ ನೋಟ ಭೂಮಿ ಬಾನಿನ ಸಂಗಮ ದೃಶ್ಯ ಪಂಕಜಾ.ಕೆ

ತಲೆನೋವು ಹಾಸ್ಯಕವನ

ತಲೆನೋವು (ಹಾಸ್ಯಕವನ)  ಬಂದಿತು ಇಂದು ತಲೆನೋವು ಹಚ್ಚಿದೆ ಹಣೆಗೆ ಜಂಡು ಬಾಮ್ ಉರಿಯಲಿ ತುಂಬಿತು ಕಣ್ಣೀರು ಬಳ ಬಳ ಸುರಿಯಿತು ಕಣ್ಣಿಲಿ ನೀರು ಹೊರೆಟೆನು ಡಾಕ್ಟರ್ ಭೇಟಿಗೆನಾನು ಕಾಣದೆ ಕಲ್ಲೆಡವಿ ಜಾರಿ ಬಿದ್ದು ಬಿಟ್ಟೆ ಸದ್ದಿಗೆ ಓಡುತ  ಬಂದರು ನನ್ನವರು ಎತ್ತಲು ಕೈಯನ್ನು ಮುಂದೆ ಚಾಚಿದರು ಗಜಲಕ್ಷ್ಮಿಯ ಶರೀರದ ನನ್ನನ್ನು ಎತ್ತಲು ಆಗದೆ ಬಿದ್ದರು ಮೈಮೇಲೆ ಸಣ್ಣನೆ ನಗುವದು ಮಿಂಚಿತು ಮುಖದಲ್ಲಿ ಜೋರಿನ ನಗೆ ಹೊರಟಿತು ಇಬ್ವರ ಮುಖದಲ್ಲಿ ನಕ್ಕು ನಕ್ಕು ಸುಸ್ತಾಯಿತು ತಲೆನೋವು ಎಲ್ಲೋ ಓಡಿಹೋಯ್ತು ಪ್ರತಿಯೊಂದು ನೋವಿಗೆ ನಗುವೆ ಔಷದವು ತಿಳಿಯಿತು  ಇದು ನನಗಿಂದು ನಗಿಸಿರಿ ನಗಿರಿ  ನಿತ್ಯ ಮನಸ್ಪೂರ್ತಿ ರೋಗಗಳು  ಬಾರದಂತೆ ದೂರ ಅಟ್ಟಿ ನಗುವೆ ಜೀವನದ ಮಂತ್ರವಾಗಲಿ ನಗುತ ನಗಿಸುತ ನಾವು ಬಾಳೋಣ ಪಂಕಜಾ.ಕೆ

ಬೆಳಗು ಬಾ ಹಣತೆಯ

ಬೆಳಗು ಬಾ ಹಣತೆಯ ******************** ಬೆಳಗು ನೀ ಹಣತೆಯ ಮನೆ ಮನದ ಕಳೆಯ ತೊಳೆದು ಹಚ್ಚು ಬಾ ನೀ ಹಣತೆಯ ಪ್ರೀತಿ ವಿಶ್ವಾಸದ ತೈಲವ ಸುರಿದು ಮದಮೋಹ ಮತ್ಸರ ಗಳ ಸುಟ್ಟು ಹಚ್ಚು ಬಾ ನೀ ಹಣತೆಯ ನೊಂದ ಮನಗಳ ಸಂತೈಸಿ ಅಂಧಾಕಾರ ಅಜ್ಞಾನವ ಕಳೆದು ಬೆಳಕು ನೀಡಲು ಹಚ್ಚು ನೀ ಹಣತೆಯ ದೀಪದಿಂದ ದೀಪವ ಬೆಳಗಿ ಪ್ರೀತಿಯಿಂದ ಪ್ರೀತಿಯ ಪಡೆದು  ಹಚ್ಚು ಬಾ ನೀ ಹಣತೆಯ ಜ್ಞಾನದ ಜ್ಯೋತಿಯ ಬೆಳಗಿಸಿ ಸ್ನೇಹ ಸಹೋದರತ್ವವ ಹೆಚ್ಚಿಸಿ ಹಚ್ಚು ಬಾ ನೀ ಹಣತೆಯ ಮಾನವೀಯತೆ ಸಂಸ್ಕಾರಗಳ ಕಿಡಿ ಹಚ್ಚಿ ಸಿರಿಲಕ್ಷ್ಮಿಯ ಮನೆ ಮನಗಳಲಿ ತುಂಬಿಸಿ ಹಚ್ಚು ಬಾ ನೀ ಹಣತೆಯ ಸರ್ವರೋಗ ನಿವಾರಣಕ್ಕೆ  ತೈಲಾಭ್ಯಾಂಗನವ ಮಾಡಿ ಹಚ್ಚು ನೀ ಬಾ ಹಣತೆಯ ಪಂಕಜಾ ಕೆ

ವಿಮರ್ಶೆ ಮದುರಾಗನ ಬಗ್ಗೆ

[21/11, 5:45 PM] pankajarambhat: *ಪಂಕಜಾರವರ ಮಧುರ ಗಾನ* ಕವಿತೆಗೆ ಒಂದು ಸನ್ನಿವೇಶವನ್ನು ಕಟ್ಟಿ‌ಕೊಡುವುದು ಸುಲಭದ ಮಾತಲ್ಲ...ಆದರೆ ಕವಯಿತ್ರಿ ಪಂಕಜಾರವರು ಮಾಗಿ ಕಾಲ,ಚುಮುಚುಮು ಚಳಿ,ಹಿಮ....ಹೀಗೆ ಪಾತ್ರಗಳನ್ನು ‌ಕಣ್ಣ ಮುಂದೆ ತರುವಲ್ಲಿ ಯಶಸ್ವಿಯಾಗಿದ್ದಾರೆ.‌‌...ಇಲ್ಲಿ ಪ್ರಿಯತಮನು ಬಂದಿರುವುದು ಕವಿತೆಗೆ ರಂಜನೆ ಸಿಕ್ಕಿದೆ...ಓದುಗನಿಗೆ ಖುಷಿ ಕೊಡುವ ಬರಹ... 👏🙏💐 [21/11, 5:45 PM] pankajarambhat: *ಮಧುರ ಗಾನ* *ಪಂಕಜಾ .ಕೆ* *ಇತ್ತ ಮಳೆಗಾಲ ಸರಿದು ಚಳಿಗಾಲದ ಆರಂಭ.ಮಂಜು ಮುಸುಕಿದ ಬೆಟ್ಟ.ಸೂರ್ಯೋದಯವಾಗಲು  ಕರಗಿ ತೊಟ್ಟಿಕ್ಕುವ ಮಂಜಿನ ಹನಿಗಳು.ಕವಯಿತ್ರಿ ಪ್ರಕೃತಿಯಲ್ಲಿನ ಆಗುಹೋಗುಗಳನ್ನು ಪ್ರಣಯಕ್ಕೆ ಹೋಲಿಸುತ್ತಾ ಸಾಗಿದ್ದಾರೆ.ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ* *ಧನ್ಯವಾದಗಳು* *ಶ್ಯಾಮ್ ಪ್ರಸಾದ್ ಭಟ್* [21/11, 5:45 PM] pankajarambhat: ಪಂಕಜಾ.ಕೆ ರವರ ಕವನ ಮಧುರ ಗಾನದ ಕವಿತೆ ಭೂಮಿಯ (ಪ್ರಕೃತಿಗೂ) ಸೂರ್ಯನಿಗೂ ಪ್ರೀತಿಯ ಸಂಬಂಧ ಬೆಸೆದು ಮಾಗಿಯ ಚಳಿಯನು ವರ್ಣಿಸುತ್ತಾ ಭರದಿಂದ ಬಿಗಿದಪ್ಪಿ  ಮೈಮನವ ಮರೆಸಿ ಕರಗಿಸಿದ ಮಂಜಿನ ಹನಿಯ ತೆರೆಯನು ಬಿಸಿಯಪ್ಪುಗೆಯ ತವಕದಲಿ ಚಳಿಗಾಲದ ಮಂಜಿನ ಹನಿಯಲಿ ಸೂರ್ಯನು ಕದ್ದು ಬಂದು ಭೂಮಿಯ ಅಪ್ಪುವ  ಬೆಟ್ಟಗಳು ಕರಗಿ ನೀರಾಗಿ ತನು ಮನ ತಣಿಸಿಕೊಂಡು ಹಿತವಾಗಿ ನರಳಿ ನಗುತ ನಿಂತ ಪ್ರಕೃತಿ ನಕ್ಕಳು ಒಲವ ಬಲೆಯಲಿ. ಸುಂದರವಾದ ಕವಿತೆ ಮೇಡಂ. ಧನ್ಯವಾದಗಳು  ಪಿ ಗೋವಿಂದಪ್ಪ

ಮಧುರ ಗಾನ

ಮಧುರ ಗಾನ ಮೆಲ್ಲ ಮೆಲ್ಲನೆ ಲಗ್ಗೆಯಿಟ್ಟಿತು ಮಂಜಿನ ತೆರೆಯನು ಹನಿಸಿ ಚುಮು ಚುಮು ಚಳಿಯಲಿ ತಂಗಾಳಿಯ ತಂಪಿನಲಿ ಚಳಿಗಾಲ ಮಾಗಿಯ ಚಳಿಗಾಳಿಯು  ಮೈಯನು ಕೊರೆಯುತ ಹಿತವಾದ ಭಾವವು  ತುಂಬಿ ಕೆರಳಿಸುತ್ತಿದೆ ಮೈ ಮನ ಸರದಿಯಲಿ ರವಿ ಕಾಯುತಿಹನು ತೆರೆಯನು ಸರಿಸಿ ಇಣುಕುತ ನಲ್ಲೆಯ ಮೈಯ ಮೃದು  ಸ್ಪರ್ಶವನು ಬಯಸಿ  ಭಾಸ್ಕರನ ಬಿಸಿ ಸ್ಪರ್ಶಕೆ ನಾಚಿ ಮಂಜಿನ ಬೆಟ್ಟಗಳು ಕರಗಿ ನೀರಾಗಿ ಇಳೆಯು ತನು ಮನವನರಳಿಸಿ ತೊಯ್ದಳು ಭಾಸ್ಕರನ ಬಿಸಿಯಪ್ಪುಗೆಯಲಿ ಮನದುಮ್ಮಳವ  ಕಳೆದು  ಪ್ರಕೃತಿ ನಗುತ ನಿಂದಳು ಮುದದಲಿ ಮುತ್ತಿನ ಮಣಿಗಳಂತಿರುವ ಚೆಲು ಹನಿಗಳು ಸಪ್ತವರ್ಣದ ತೋರಣವ ಕಟ್ಟಿನಲಿಯಿತು  ಭರದಿಂದ ಬಿಗಿದಪ್ಪಿ  ಮೈಮನವ ಮರೆಸಿ ಕರಗಿಸಿದ ಮಂಜಿನ ಹನಿಯ ತೆರೆಯನು ಬಿಸಿ ಸ್ಪರ್ಶದಿ ಹಿತವಾಗಿ ನರಳಿ  ಕಂಗೊಳಿಸಿತು ಪ್ರಕೃತಿ ಒಲವ ಬಲೆಯಲಿ ಪಂಕಜಾ.ಕೆ

ನಾಲ್ಕು ಹಾಯ್ಕುಗಳು

ನಾಲ್ಕು ಹಾಯ್ಕುಗಳು  1..ಬರಡು ಬಾಳು ಚಿಗುರುವುದಿದ್ದರೆ ನಿನ್ನಿಂದಕಣೋ 2.ಭೂಮಿ ಒಡಲು ಹಸಿರಾಗಿರಬೇಕು ಉಸಿರಾಡಲು 3.ನಾನೆಂಬ ಅಹಂ ಬಿಡಲಾಗದಿದ್ದರೆ ಬಾಳು ನಿಸ್ಸಾರ 4..ಒಲವ ಹನಿ ಮುತ್ತಾಗುವುದುಹೇಗೆ  ನಗದಿದ್ದರೆ ಪಂಕಜಾ.ಕೆ.

ಗೈರ್ ಮುರದ್ದಪ್ ಗಜಲ್

ಗೈರ್ ಮುರದ್ದಪ್ ಗಜಲ್ ************ ನಿನ್ನ ಅಗಲಿಕೆಯ ಕ್ಷಣವನ್ನು ಸಹಿಸಲಾರೆ ಮನದಲ್ಲಿ ಬೇಸರವಿದ್ದರೂ  ತೋರಿಸಲಾರೆ ಮನಸಿನ  ವೇದನೆ ಕರಗಿ ನೀರಾಗಬೇಕು ಕಣ್ಣೀರಿನ ಕೋಡಿ ಹರಿದರೂ ನಿನಗೆ ತಿಳಿಸಲಾರೆ ಹೃದಯದ ಮೂಲೆಯಲಿ ನೆನಪು ಹಸಿರಾಗಿದೆ  ವಿರಹದ ದಿನಗಳನು ನಾ ತಾಳಲಾರೆ ನೀನೆಂದರೆ ನನಗೆ ಬಹಳ ಇಷ್ಟ ಇನಿಯಾ ನಿನ್ನೊಡನಾಟವಿಲ್ಲದೆ ಎಂದಿಗೂ ಬಾಳಲಾರೆ ಪಂಕಜಾ ನೋವುಗಳನು ಬಚ್ಚಿಡಬಾರದು ಮನದುಮ್ಮಳವನ್ನು ತಿಳಿಸಿ  ನೋಯಿಸಲಾರೆ ಪಂಕಜಾ.ಕೆ.

ಮುರದ್ದಪ್ ಗಜಲ್ ಇನಿಯಾ

ಮುರದ್ದಪ್ ಗಜಲ್ ಚುಮು ಚಳಿ ಮೈಯನು ಕೊರೆದಿದೆ ಓ ಇನಿಯಾ ಬೀಸುವ ತಂಗಾಳಿಯು ಎದೆ ನಡೆಗಿಸುತಿದೆ ಓ ಇನಿಯಾ ನಿನ್ನ ನೆನವು ತರುತಿದೆ ಮೈ ಮನಕೆ ಪುಳಕ ಭಾವನೆಗಳಿಂದ ಹೃದಯ ತುಂಬಿದೆ ಓ ಇನಿಯಾ ನಿನ್ನೊಲುಮೆಯಲಿ ಮೈ ಮರೆಯುವಾಸೆ ಬಿಸಿಯಪ್ಪುಗೆಯಲಿ   ನಾ ಕರಗಿದೆ  ಓ ಇನಿಯಾ ಪ್ರೀತಿಯಿದ್ದರೆ ಬಾಳು ಹಾಲು  ಜೇನು ಅಲ್ಲವೇ? ಒಂದಾಗಿರಲು ಮನಸು ಕುಣಿಯುತಿದೆ ಓ ಇನಿಯಾ ಮಂಜಿನ ಹನಿಗಳಲಿ ಮಿಯಬೇಕೆಂಬಾಸೆ ಪಂಕಜಾ ಬಾಳಿನ ತುಂಬಾ ಹೂವು ಹಣ್ಣು  ತುಂಬಿದೆ ಓ ಇನಿಯಾ ಪಂಕಜಾ.ಕೆ.

ಚಂದಿರ

ಚಂದಿರ (ಶಿಶು ಗೀತೆ) ಆಗಸದಲ್ಲಿ ನಿತ್ಯವೂ ಓಡುವೆ  ನೀನು ಎಲ್ಲಿಗೆ  ನಿನ್ನಯ ಪಯಣ? ಬೆಳ್ಳನೆ ಬೆಳಕನು ಧರೆಯಲಿ ಹರಡಿ ತಂಪನು ತುಂಬುವಿಯಲ್ಲ ತಿಂಗಳ ಬೆಳಕಲಿ ಆಡುತಲಿದ್ದರೆ ಮನದಲಿ ಏನೋ ಉಲ್ಲಾಸ ತಣ್ಣನೆ ಸ್ಪರ್ಶವು ಹಿತವನು ಕೊಡುವುದು ಮನದಲಿ ತಂಗಾಳಿಯ ಆಹ್ಲಾದ ದೋಸೆಯ ತೆರದಲಿ ಬಾನಲಿ ಮಿನುಗಿ ಕಣ್ಮನ ಸೆಳೆಯುವೆಯಲ್ಲ ಹುಣ್ಣಿಮೆ ದಿನದಲ್ಲಿ  ಅಂಬರದಲ್ಲಿ  ನಿನ್ನನು ನೋಡಲು ನನಗಾನಂದ ದಿನ ದಿನ ಕರಗುತ ಹೋಗುವೆಯೆಲ್ಲಿಗೆ ನೀನಿಲ್ಲದ ದಿನ ಧರೆಯಲಿ  ಕಾರಿರುಳು ಪಂಕಜಾ ಕೆ

ಮಳೆಗಾಲದ ಮೈ ಮರೆವು

ಮಳೆಗಾಲದ ಮೈಮರೆವು ಬಾನ ಬಯಲಲಿ ಮುಗಿಲು ಕಟ್ಟಿದೆ ಧರೆಯ ಅಪ್ಪಲು ತವಕಿಸಿದೆ ತಂಪು ಗಾಳಿಯು ಬೀಸಿ ಬರುತಲಿ ಎದೆಯ ಕದವನು ತೆರೆಸಿದೆ ಬೀಸಿ ಬರುವ ತಂಗಾಳಿಯು ಮಧುರ ನೆನಪನು ತರುತಿದೆ ಮಳೆಯ ಧಾರೆಯು ಸುರಿಯುತಿರಲು ಮೈ ಮನಸು ಉಲ್ಲಾಸದಿ ಕುಣಿದಿದೆ ಮಣ್ಣ ಮಧುರ ಪರಿಮಳದಲಿ ಮೈಯ ಕಣ ಕಣವೂ ನಲಿದಿದೆ ಒಲವ ಭಾವವು ಮೈಯ ತುಂಬಿ ಕನಸನೂರಿಗೆ ಕರೆದಿದೆ ವಸುಂದರೆಯ ಒಡಲು ಬಿರಿದು ಜೀವಕಳೆಯನು ತಂದಿದೆ ನಿನ್ನ ಸವಿ  ನೆನಪಲಿ  ನನ್ನ ಮನವು ತುಂಬಿದೆ ಚುಕ್ಕಿ ಚಂದ್ರಮನಿಲ್ಲದ ಬಾನು ಚಳಿಯು ಮೈಯನು ಕೊರೆದಿದೆ ನಿನ್ನ ಸ್ಪರ್ಶಡಿ ಬಿಸಿಯ ಪಡೆಯಲು ಮೈಯ ರೋಮವು ನಿಮಿರಿದೆ ಪಂಕಜಾ.ಕೆ

ಪ್ರಕೃತಿ ಸಿರಿ

ಪ್ರಕೃತಿ ಸಿರಿ ಮಾಮರದಲ್ಲಿ ಅರಳಿದ ಹೂಗಳು ಸುಮದುರ  ಗಂಧವ ಹರಡುತಿದೆ ದುಂಬಿಗಳ ಝೇಂಕಾರವು ತುಂಬಿ ಮನಕೆ ಮುದವನು ತುಂಬುತಿದೆ ಚುಮು ಚುಮು ಚಳಿಯಲಿ ಹಕ್ಕಿಗಳ ಚಿಲಿಪಿಲಿ ಗಾನದ ಸವಿ ಮನದಲಿ ಆನಂದದ ತೆರೆಗಳ ಉಕ್ಕಿಸಿದೆ ಕವಿದಿಹ ಮಂಜಿನ ತೆರೆಯನು ಸರಿಸಿ ಸುತ್ತಲೂ ಪ್ರಭೆಯನು ಹರಡಿ ಬಾನಲಿ ರವಿ ಮೂಡಿದನು ಬೆಳಗಿನ ಜಾವದಿ ಎಳೆಬಿಸಿಲಿನ ಸ್ಪರ್ಶ ತಂದಿತು ಮೈ ಮನಕೆ  ಉಲ್ಲಾಸ ಹಸಿರಿನ ಹುಲ್ಲಿನ ಮೇಲಿನ ಹನಿಯಲಿ ಹೊಳೆಯಿತು ಸೂರ್ಯನ ಕಿರಣ ಮೋಡದ ಮರೆಯಲಿ ಇಣುಕುವ ಚಂದಿರ ರವಿ ಉದಯಿಸಲು ಮರೆಯಾದ ಬಾನಲಿ ತೇಲುತ ಬಿಸಿಲನು ಹರಡಿ ಪಡುಗಡೆಯಲಿ ರವಿ ಮರೆಯಾದ ತಿಂಗಳ ಬೆಳಕನು ಧರೆಯಲಿ ಹರಡಿ ತಾರೆಗಳನೊಡನಾಡುತ ಚಂದಿರ ಬಂದ ಬೆಳದಿಂಗಳ ತಂಪಲಿ ಮೀಯುತ ತರುಲತೆಗಳು ಅನಂದದಿ ತಲೆದೂಗುತಿವೆ ತಲೆದೂಗುವ ಹಸಿರಿನ ಎಡೆಯಲಿ ಅರಳಿದ ಹೂಗಳ ಗಂಧವು ತುಂಬಿ ಹಳ್ಳಿಯ ಸೊಬಗಿನ ನೋಟವ ಕಂಡು ಮೈಜುಮ್ಮೆನ್ನುವ ಭಾವವು ತುಂಬುತಿದೆ ಪ್ರಕೃತಿಯ ಸಿರಿಯಲಿ ಮೈ ಮರೆಯುತಿರಲು ಸ್ವರ್ಗವೇ ಧರೆಗಿಳಿದಂತಹ ಭಾವ ಮರಗಿಡಗಳನು ಬೆಳೆಸುತ ಉಳಿಸೋಣ ಹಸಿರಿನ ಉಸಿರಲಿ ನಲಿಯೋಣ ಪಂಕಜಾ.ಕೆ

ಇರುವೆ. (ಮಕ್ಕಳ ಕವನ)

ಇರುವೆ. (ಮಕ್ಕಳ ಕವನ) ಇರುವೆ ಇರುವೆ ಎಲ್ಲಿಗೆ ಹೊರಟೆ ಸರತಿಯ ಸಾಲಲಿ ನೀನು? ಸಕ್ಕರೆ ಕಂಡರೆ ಓಡುತ  ಬರುವೆ ಸುಳಿವನು ನಿನಗೆ ಕೊಟ್ಟವರಾರು? ಒಗ್ಗಟ್ಟಿನಲಿ ದುಡಿಯುವೆ ನೀನು ಜಗಳವು ಕದನವು ನಿನಲಿಲ್ಲ ನಿತ್ಯವೂ ಜಗಳವನಾಡುವ ಮನುಜಗೆ ಬುದ್ಧಿಯನೊಮ್ಮೆ ಕಲಿಸು ಹಗಲಿರುಳೆನ್ನದೆ ದುಡಿಯುವೆ ನೀನು ಕಾಳನು ಸಂಗ್ರಹಿಸುತ ದಿನವೂ ಆಪತ್ತಿಗೆ ಕೂಡಿಡುವ ನಿನ್ನಯ ಬುದ್ದಿ ನಮಗೂ ಒಮ್ಮೆ ಕಲಿಸು ಕಾಳನು ಕಂಡರೆ ಸರತಿಯ ಸಾಲಲಿ  ಬಳಗವ ಕರೆಯುತ ನೀ ಬರುವೆ  ಶಿಸ್ತಿನ ಶಿಫಾಯಿಯ ತೆರದಲಿ ನಡೆಯುವ ನಿನ್ನಯ ಗುಣ ನಮಗೂ ಒಮ್ಮೆ ಕಲಿಸು ಪಂಕಜಾ. ಕೆ

ನಿಂದೆ. ಹನಿಕವನ

ನಿಂದೆ (ಹನಿಕವನ) ನಿಂದಕರಿರಬೇಕು ಎನ್ನುವುದು  ದಾಸರ ಉಕ್ತಿ ಅತಿಯಾಗಿ ನಿಂದಿಸುವವರಿದ್ದರೆ ಹೋದೀತು ನಮ್ಮ ಶಕ್ತಿ ಪಂಕಜಾ.ಕೆ.

ವೀರಯೋಧ 3

         ವೀರಯೋಧ  (ಮಕ್ಕಳ ಕವನ) ದೇಶಕಾಗಿ ದುಡಿಯುತ್ತಿರುವ ವೀರಯೋಧರು ತಮ್ಮ ಪ್ರಾಣ ಒತ್ತೆಯಿಟ್ಟು ನಮ್ಮ ಕಾಯುವರು ವೈರಿಗಳು ನುಸುಳದಂತೆ  ಕೋಟೆ ಕಟ್ಟುವರು ರಾತ್ರಿ ಹಗಲು ದೇಶ ಕಾಯುವ ದೇಶಭಕ್ತರು ಚಳಿ ಮಳೆ ಗಾಳಿಗೆಲ್ಲ ಬೆಚ್ಚಲಾರರು ಕ್ಷಾತ್ರತೇಜ ಮೆರೆಯುತ್ತಿರುವ ವೀರಸೂರರು ಶಿಸ್ತು ಸಂಯಮದಿಂದ ಬಾಳುವ ಇವರು ಧನ್ಯರು ವೀರತೇಜ ಹೊಮ್ಮುತ್ತಿರುವ ವೀರ ಪುತ್ರರು ತಾಯಿ ಭಾರತಿಯ ಸೇವೆಯಲ್ಲಿ ಎಂತ ಸುಖವಿದೆ ಮಡಿಲ ಅಪ್ಪುಗೆಯಲಿರಲು ಏನು ಸೊಗಸಿದೆ ದೇಶ ಸೇವೆ ಮಾಡುತ್ತಿರುವ ತೃಪ್ತಿ ಮನದಲಿ ಆತ್ಮವಿಶ್ವಾಸ ತುಂಬಿ ಬಾಳುತಿರುವ ನಮ್ಮ ಯೋಧರು ಇವರ ತ್ಯಾಗ ಬಲಿದಾನಗಳು ನಮ್ಮ ಕಾಯುವುದು ಇವರಂತೆ ಬೆಳೆದು ನಾವು ತಾಯ ಕಾಯುವೆವು ವೈರಿಗಳ ಸದೆಬಡಿದು  ಭಾರತಾಂಬೆಯ ಸೇವೆಗೈವೆವು ಭಾರತಿಯರೆಂಬ ಹೆಮ್ಮೆ ಪಡುವ ನಾವು  ಚಿಣ್ಣರು ಪಂಕಜಾ.ಕೆ.

ಗಜಲ್ ಮುಂಜಾನೆ ಬಗ್ಗೆ

ಗಜಲ್   (ಮುಂಜಾನೆ ಬಗ್ಗೆ) ಮುಂಜಾನೆಯ ಮಂಜಿನಲಿ  ನಡೆಯುತಿರಲು ಮುದ ರವಿ ಉದಯಿಸುವ ಹೊತ್ತಿನಲಿರಲು ಮುದ ಪ್ರಕೃತಿ ಮಾತೆಯ ಮಡಿಲಲ್ಲಿ ನಲಿದಾಡಿದರಾಗದೆ? ಮೈ ಮನವೆಲ್ಲಾ ಉಲ್ಲಾಸ ತುಂಬುತಿರಲು ಮುದ ಎಲ್ಲೆಲ್ಲೂ ಹಸಿರು ತುಂಬಿದ ಸಿರಿಯ ವೈಭವದ ದೃಶ್ಯ ಕಣ್ಣು ತುಂಬುವ ಚೆಲುವ ನೋಡುತ ಕುಳಿತಿರಲು ಮುದ ಮರಗಿಡಗಳು ಹೂ ಹಣ್ಣುಗಳಿಂದ ತುಂಬಿ ತೊನೆದಾಡುತ್ತಿದೆಯೇ? ಹಕ್ಕಿಗಳ ಕಲರವವ ಕೇಳುತಿರಲು ಮುದ ಮಲ್ಲಿಗೆಯ ಕಂಪನು ಬೀರುತಿದೆ ಬೀಸುವ ತಂಗಾಳಿ  ಚುಮುಚುಮು ಚಳಿಯಲಿ ಕಚಗುಳಿಯಿಡುತಿರಲು ಮುದ ತಾವರೆ ಕೊಳದಲಿ ಅರಳಿದೆ ಬಣ್ಣ ಬಣ್ಣದ ನೈದಿಲೆಗಳು ಬಾನಿನಲಿ ಕಲಸಿದ ಚಿತ್ತಾರಗಳ ಕಾಣುತಿರಲು ಮುದ ಪಂಕಜಾಳಿಗೆ ಸೂರ್ಯೋದಯದ ಬೆಡಗಿನಲಿ ನಲಿಯಲು ಆಶೆ ಬಗೆ ಬಗೆ ಹೂಗಳ ಗಂಧವನು ಸವಿಯುತಿರಲು ಮುದ ಪಂಕಜಾ.ಕೆ

ಗಜಲ್ 33 ಮೌನದ ಬಗ್ಗೆ

ಗಜಲ್  (ಮೌನ ದಬಗ್ಗೆ) ನಿನ್ನ ಮೌನವು ನನ್ನ ಕೆಣಕುತಿದೆ  ಗೆಳತಿ ಮಾತನಾಡಲು ವಿಷಯ ಸಿಗದಾಗಿದೆ ಗೆಳತಿ ಕೋಪ ತಾಪದಿ ಬಾಳು ನಲುಗಬೇಕೇ? ನಾನೊಮ್ಮೆ ನಿನ್ನನ್ನು ಕಾಣಬೇಕಿದೆ ಗೆಳತಿ ನಮ್ಮ ಜೀವನವು ಶಾಶ್ವತವೇ ಹೇಳು? ಇರುವಷ್ಟು ದಿನ ನಗು ನಗುತಿರಬೇಕಿದೆ ಗೆಳತಿ ಕಷ್ಟ  ಬಂತೆಂದು ಕೊರಗಿದರೆ ಆದೀತೆ? ಸುಖದ ದಿನಗಳು ಬರುತಿದೆ ಗೆಳತಿ ಬಾಳ ಪಯಣದಲಿ ನಾವು ಜತೆಯಾಗಿರಬೇಡವೇ? ಹೊಂದಿಕೊಂಡು ನಾವಿರಬೇಕಿದೆ ಗೆಳತಿ ನೀ ನಕ್ಕರೆ ಬಾಳು ಸಕ್ಕರೆ ಯಾಗದೇ? ಮುಖವಾಡವ ಕಳಚಬೇಕಿದೆ ಗೆಳತಿ ಮನವು ಹೂವಿನಂತೆ ಮೃದುವಾಗಿದೆಯಲ್ಲವೇ ಪಂಕಜಾ? ನೋಯಿಸಿದರೆ   ಬೇಸರವಾಗದೆ ಗೆಳತಿ ಪಂಕಜಾ.ಕೆ

ಕನ್ನಡ ಸವಿ

ಕನ್ನಡ ಸವಿ ಮೂಡಣದಲ್ಲಿ ಮೂಡಲು ರವಿ ಕನ್ನಡನಾಡಲಿ ತುಂಬಿತು ಹಬ್ಬದ ಸವಿ ಕನ್ನಡ ಭಾಷೆಯ ಹರಡಿಸುತ ಕನ್ನಡ ಡಿಂಡಿಮ ಭಾರಿಸುತ ಬಂದಿತು ಸಂಭ್ರಮದಲ್ಲಿ ಕನ್ನಡ ರಾಜ್ಯೋತ್ಸವ ಹಾಡುವ ಕೋಗಿಲೆಯ ಇಂಚರದಂತೆ ಎಲ್ಲೆಡೆ ತುಂಬಿತು ಕನ್ನಡ ಭಾಷೆಯ ಇಂಪು ಅರಳಿದ ಮಲ್ಲಿಗೆ ಹೂವಿನ ಪರಿಮಳದಂತೆ ಸುತ್ತಲೂ ಹಬ್ಬಿತು ಕನ್ನಡ ಕಂಪು ಕನ್ನಡ ತಾಯಿಯ ಮಕ್ಕಳೇ ಕೇಳಿರಿ ಕನ್ನಡ ಭಾಷೆಯ  ಮರೆಯದಿರಿ ಚಂದದ ನುಡಿಯದು  ಕನ್ನಡ ತಾಯಿಯ ಮಮತೆಯ ನೆನಪಿಸುವುದು  ಹಚ್ಚುವ ನಾವು ಕನ್ನಡ ದೀಪ   ಬೆಳಗುವ ಜಗತ್ತಿನೆಲ್ಲೆಡೆ ಕನ್ನಡ ನುಡಿದೀಪ ಹಾರಲಿ ಎತ್ತರಕ್ಕೇರಲಿ  ಕನ್ನಡ ಬಾವುಟ ಹರಡಲಿ ಎಲ್ಲೆಡೆ ಕನ್ನಡ ಕಂಪು ಪಟ ಪಟ ಪಂಕಜಾ.ಕೆ.

ಒಲವು

ಒಲವು ತಂಗಾಳಿಯಾಗಿ ನೀ ಬಂದೆ  ಬರಡು ಬಾಳಿಗೆ ನೀ ಬೆಳಕಾದೆ ನಿನ್ನ ಹುಸಿಮುನಿಸಿನಲೂ  ನನ್ನ ಕನಸಿದೆ ಇನಿಯಾ ನಿನ್ನೊಲವ ಜೇನ ಹನಿಯಲಿ ಮನಸಾರೆಮಿಂದೆದ್ದು ಅರಳುತ್ತಿದೆ ಹೊಸತನದಿ ನನ್ನೊಡಲು ಇನಿಯಾ ಬಾಂದಳದಿ ಮಿನುಗುವ  ಬೆಳ್ಳಿ ಚುಕ್ಕೆಯ ಕಂಡು  ನಿನ್ನೊಡನಾಟದಲಿ ಮೈಮರೆಯುತಿಹೆ ಇನಿಯಾ ಕೋಗಿಲೆಯ  ಕೂಗಿನಂತೆ ನಿನ್ನೊಲವ ಗಾನ ಮೈನವಿರೇಳಿಸುತ್ತಿದೆ ನಿನ್ನಆ ಕಣ್ಣೋಟ ಇನಿಯಾ ನಿನ್ನ ನಗುವಿನಲೂ ಅದೇನು ಸೊಬಗು ಮೈ ಮರೆಯುತ್ತಿರುವೆನು ನಾನು ನಿನ್ನೊಡಲ ಪ್ರೀತಿಯಲಿ ಇನಿಯಾ  ಪಂಕಜಾ.ಕೆ

ರೈತ. ಶಿಶುಗೀತೆ

ರೈತ    (ಶಿಶುಗೀತೆ) ಕೋಳಿ ಕೂಗುವ ಮುನ್ನ ನೇಗಿಲನು ಹೊತ್ತು ನಡೆಯುವನು ಗದ್ದೆಯೆಡೆ ನಮ್ಮ ರೈತ ಗದ್ದೆಯನ್ನು ಉಳುತ  ಓ ಬೇಲೆ  ಹಾಡುತ ದುಡಿಯುವನು ಮಣ್ಣಿನಲ್ಲಿ ನಮ್ಮ ರೈತ ಬೀಜವನ್ನು  ಹೊಲದಲ್ಲಿ ಬಿತ್ತಿ ಮೊಳಕೆಬರಲೆಂದು ಸುಡುಮಣ್ಣು ಎರಚಿ ಹಕ್ಕಿಗಳ ಪಾಲಗದಂತೆ ಕಾಯುವನು ರೈತ ಬೆಳೆ ಬೆಳೆದು ಹೊನ್ನ ತೆನೆಯಾಗಿ ಕಾಳು ತುಂಬಿದ ಗದ್ದೆಯನು ಕಂಡು ಮೈಮರೆತು ಭೂತಾಯಿ ಒಡಲಿಗೆ  ನಮಿಸುವೆನು ನಮ್ಮ  ರೈತ ಅನ್ನವನ್ನು ಬೆಳೆಯುತ್ತ ಉಣಿಸುವನು ನಮಗೆಲ್ಲ ದೇಶದಾ ಬೆನ್ನೆಲುಬು ನಮ್ಮ ರೈತ ಈತನೇ ನಮ್ಮ ಜೀವನದ ಆದರ್ಶ ದುಡಿಮೆಯೇ ದೇವರೆಂದು ತಿಳಿದಾತ ದುಡಿಮೆಯಲಿ ತೃಪ್ತಿ  ಪಡುವಾತ ವಂದಿಸುವೆ ನಿನಗೆ ಓ ಅನ್ನದಾತ ಪಂಕಜಾ.ಕೆ

ಬಾಗ್ಯಧಾತೆ

ಭಾಗ್ಯದಾತೆ ನೀ ನನ್ನ ಭಾಗ್ಯದಾತೆ ನಿನ್ನ ಸನ್ನಿಧಿಯಲಿರಲು ಮನದಲೇನೋ ಪುಳಕ ನೀ ತೋರುವ   ಆ ಪ್ರೀತಿ  ಹೆತ್ತಬ್ಬೆಯ ಪ್ರೀತಿಯ ನೆನಪಿಸಿ ಮನವಿಂದು ನಿನ್ನಲ್ಲೇ ಲೀನ ನನ್ನಮನದಿಚ್ಛೆಯನರಿತು ಹೊಂದಿಕೊಳ್ಳುವ ಭಾವ  ಎಲ್ಲಿಂದ ನೀ ಪಡೆದೆ ಹೇಳು ಪ್ರಿಯೇ ನೀನಿರುವ ಮನೆಯೊಂದು ಪ್ರೀತಿ ತುಂಬಿದ ನಂದನವನ ಇಲ್ಲ ನನಗಿಲ್ಲಿ  ಯಾವ ಚಿಂತೆ ಚಿಂತೆಗಳು ಸುಳಿಯದಂತೆ ನೀನಿರಲು ಮನೆ ಮನದಲ್ಲಿ ಇಂದಿಲ್ಲಿ  ನಾನಾದೆ ಒಬ್ಬ ಸಿಪಾಯಿ ಕೋಟಿ   ಕೋಟಿ ಕೊಟ್ಟರೂ ಸಿಗಲಾರಳಿನ್ನೊಬ್ಬ ನಿನ್ನಂತೆ ನನ್ನ  ಕಣ್ಣಲ್ಲಿ  ನೀನೊಬ್ಬಳು ಆದರ್ಶ ಸತಿ ಬಾಳತೇರನು ಎಳೆಯಲು ನನ್ನೊಡನೆ ದಿನನಿತ್ಯ ಸಹಕರಿಸಿ ನನ್ನೆದೆಯ ಭಾರಕ್ಕೆ ನೀ ಜತೆಯಾದೆ ನಲ್ಲೆ ಪಂಕಜಾ.ಕೆ