Skip to main content

Posts

Showing posts from February, 2020

ನೆನಪಿನ ದೋಣಿ ಚಿತ್ರ ಕವನ

ಚಿತ್ರ ಕವನ ಸ್ಪರ್ಧೆಗಾಗಿ ನೆನಪಿನ ದೋಣಿ ಊರ ಮುಂದಿನ   ಬಾವಿಕಟ್ಟೆ ಹೆಂಗಳೆಯರ ಹರಟೆಯ ಕಟ್ಟೆ ನೀರೆಯ  ನಡುವಿನಲ್ಲಿ ಒಂದು ಕೊಡ ನೀರ ಸೆಳೆಯುವ ರಾಟೆಯ ಗಡ ಗಡ ನಿತ್ಯವೂ ಹೆಂಗಳೆಯರ ಕಲರವ ಕೈ ಬಳೆಗಳ ಕಿಂಕಿಣಿ ನಾದದ ತರಂಗ ಮನೆ ಮನೆಯ ಸುಖದುಃಖದ ಕಥೆ ಹಂಚಿ ಸಾಂತ್ವನಿಸುವ ತಾಣವಂತೆ ಸುತ್ತಲೂ ತುಂಬಿದೆ ಕಸಕಡ್ಡಿಗಳ ಲೋಕ ಗತಕಾಲದ ವೈಭವದ ಪ್ರತೀಕ ಇಣಿಕಿ ನೋಡುವವರಿಲ್ಲದೆ ಪಾಳುಬಿದ್ದಿದೆ ಬಾವಿ ಹಿಂದಿನ ವೈಭವವ ಪಳೆಯುಳಿಕೆಯಾಗುತ್ತಿದೆ ಬಾವಿ ಮನೆ ಮನೆಯಲೂ ಕೊಳವೆ ಬಾವಿಯದೇ ಲೋಕ ಗುಂಡಿ ಒತ್ತಿದರೆ ಸುರಿಯುವ ಜಲಧಾರೆಯದೆ ಜಳಕ ನೀರ ಸೆಳೆಯುವ ರಾಟೆಯ ಗಡ ಗಡ ಸದ್ದಿಲ್ಲ ಬಾವಿಕಟ್ಟೆಯಲಿ ಹೆಂಗಳೆಯರ ಕಲರವವಿಲ್ಲ ಬಾವಿಯೊಳಗಿನ  ಕಪ್ಪೆಯಂತೆ ಜೀವನ ಪ್ರತಿಯೊಂದು ಮನೆಗೂ ಭದ್ರಗೇಟಿನ ಆವರಣ ನೆನಪಿನ ದೋಣಿಯಲಿ ತೇಲುತ್ತಿದೆ ಮನ ಬಂದೀತೇ ಇನ್ನೊಮ್ಮೆ ಅಂತಹ ದಿನ ಪಂಕಜಾ.ಕೆ

ಅನ್ನದಾತನ ಭವಣೆ ಕಾವ್ಯಾಂತರಂಗ

ಕಾವ್ಯಾಂತರಂಗ  ಸ್ಪರ್ಧೆಗಾಗಿ ವಿಷಯ ....ಬರಗಾಲದ ಲ್ಲಿ ರೈತನ ಗೋಳು  ಅನ್ನದಾತನ ಬವಣೆ ಭೂಮಿ ಬಿರಿದಿದೆ  ಒಡಲು  ನೊಂದಿದೆ ಜೀವನ ಬಾರವೆನಿಸಿದೆ ಕಣ್ಣು ತುಂಬಿದೆ ಮನಸು ಅಳುತಿದೆ ದೇವ ಕರುಣೆಯು ಬಾರದೆ ಬಾನ ಬಯಲಲಿ ಮುಗಿಲು ತುಂಬಿದೆ ಮಳೆಯ ಸುರಿಸದೆ ಸರಿದಿದೆ  ಬೆಳೆದ ಬೆಳೆಗಳು ನೀರ ಕೊರತೆಗೆ ಬಾಡಿ ಉದುರಿ ಹೋಗಿದೆ ಪಟ್ಟ ಕಷ್ಟಕೆ  ಫಲವು ಇಲ್ಲದೆ  ಬಾಳ ದೋಣಿಯು ಮುಳುಗಿದೆ ಹರಿದ ಬಟ್ಟೆಯು ಹಸಿದ ಹೊಟ್ಟೆಯು ಬರಗಾಲದ ಬವಣೆಯ ತಿಳಿಸಿದೆ ಕಾಲ ಕಾಲಕೆ  ಮಳೆಯು  ಸುರಿಯುತ ಬದುಕ ಬವಣೆಯು ನೀಗಲಿ ಅನ್ನ ಬೆಳೆಯುವ ರೈತನರಮನೆಯಲಿ ಹೊನ್ನ ಕಣಜವು ತುಂಬಲಿ ಪಂಕಜಾ.ಕೆ ಮುಡಿಪು

ಶಿವನೊಲುಮೆ ಇರಲಿ

ಶಿವನೊಲುಮೆಇರಲಿ ಈಶ ನಿನ್ನ ಸ್ಮರಣೆ ಮಾಡಿ ನಿತ್ಯಭಜಿಸುವೆ ಪಾಶ ಹಸ್ತದಿಂದ ಕಾಯೋ ಶಂಭುಶಂಕರ ಬಂಧಿಸುವ ನೂರು ನೋವು ನಿತ್ಯ ಕಾಡಿದೆ ನೋವು ಕಳೆದು ಮನಕೆ ಶಾಂತಿಯನ್ನು ಕರುಣಿಸೋ ನನ್ನ ಹೃದಯದಲ್ಲಿ ನಿನ್ನ ಮೂರ್ತಿ ತುಂಬಿದೆ ನೇಮ ನಿಷ್ಠೆಯಿಂದ ನಿನ್ನ ಭಜನೆ ಮಾಡುವೆ ಕಾಮ ಕ್ರೋದ ಬಿಡಿಸಿ ನನ್ನ ಕಾಯೋ ಶಂಕರ ಅನುದಿನವೂ ಅನುಗ್ರಹಿಸು  ಸೋಮೇಶ್ವರ ಜನನಿ ಜನಕ  ಎಲ್ಲಾ ನೀನೇ ಎನಗೆ ಜಗದೀಶ್ವರ ಬಂಧು ಬಳಗವೆಲ್ಲ ನೀನೇ ಕಾಯೋ ಈಶ್ವರ ಹರುಷದಿಂದ ನಿನ್ನ ನಾಮ ಸ್ಮರಣೆ ಮಾಡುವೆ ಅನುದಿನವೂ ಅನುಗ್ರಹಿಸು ಮಂಜುನಾಥನೇ ಗಂಗೆಯನು ಶಿರದಲ್ಲಿ ಧರಿಸಿರುವ  ಗಂಗಾಧರ ಭಂಗವನು ತಾರದೆಯೇ ಸಲಹೆಮ್ಮನು ನಿನ್ನ ಒಲುಮೆಯಿರಲು ನಮಗೆ ಭಯವುಎಲ್ಲಿದೆ ನಿತ್ಯ  ಕರುಣೆಯಿಂದ ನಮ್ಮ ಕಾಯೋ  ಕರುಣಾಕರ ದುಷ್ಟರನ್ನು ಶಿಕ್ಷಿಸುತ ಶಿಷ್ಟರನ್ನು ಕಾಯುತಿರುವೆ ಜಗದ ತಂದೆ ಪಾರ್ವತಿ ವಲ್ಲಭ ಪರಮೇಶ್ವರ ಗಜಚರ್ಮ ಧರಿಸಿರುವ ಗೌರೀವರ ಕಾಶಿಯಲ್ಲಿ  ನೆಲೆಶಿರುವ ವಿಶ್ವೇಶ್ವರ ನಾಮ ಸ್ಮರಣೆ ಮಾತ್ರದಿಂದ ಕಳೆವೆ ಪಾಪವ ನೇಮದಿಂದ  ಭಜಿಸುತ್ತಿರಲು ಒಲಿವೆ ನೀನು ಸುರೇಶ್ವರ ಅನುದಿನವೂ ಬೇಡುವೆನು ತಂದೆ   ವಿಶ್ವನಾಥ ಕರುಣೆಯಿಂದ ಕಾಯು ಎನ್ನ   ಶಶಿಶೇಖರ ಪಂಕಜಾ .ಕೆ

ಹೃದಯ ರಾಗ ಸಿಗ್ನೇಚರ್ ಲೈನ್

ಸಿಗ್ನೇಚರ್ ಲೈನ್ 41   ಸ್ಪರ್ಧೆಗಾಗಿ ದತ್ತ ಪದ....ಮನದ ವೀಣೆಯು ಬರಿದೆ ಕುಳಿತಿದೆ ಹೃದಯ ರಾಗ ಹೃದಯ ರಾಗವು ತಾಳತಪ್ಪಿದೆ ಮೌನ ಗೀತೆಯು ಮೊಳಗಿದೆ ಮನದ ವೀಣೆಯು ಬರಿದೆ ಕುಳಿತಿದೆ ಶ್ರುತಿಯ ಮೀಟುವವರಿಲ್ಲದೆ ನೋವಿನಲೆಗಳು ತೇಲುತಿರುವುದು ಮನದ  ಮೂಲೆಯಲೆಲ್ಲಿಯೋ ರಾಗವಿಲ್ಲದ ಭಾವವೆಂದೂ  ತಂಪತಾರದು ಮನಸಿಗೆ ಮನದ ಬಾನಲಿ ಬಾವದಲೆಗಳು ತೇಲಿ ಬರುತಿದೆ ನಿತ್ಯವೂ ಒಲವ ಸುರಿಸುವ ಮೃದುಲ ಮಾತಿಗೆ ಮನವು ಕಾದು ಕುಳಿತಿದೆ ರಾಗವಿಲ್ಲದ ಗಾನವೆಂದೂ  ಖುಷಿಯ ಕೊಡದು ಮನಸಿಗೆ ಮುರಿದ ವೀಣೆಯ ಶ್ರುತಿಯ ಮೀಟಿ ಒಲವ ಗಾನವ  ನುಡಿಸೆಯಾ ಪಂಕಜಾ.ಕೆ

ಪ್ರೇಮರಾಗ

ಪ್ರೇಮ ರಾಗ.  (ಭಾವಗೀತೆ) ( ಕಾವ್ಯಕೂಟ ವಾಟ್ಸಪ್ ಬಳಗದಲ್ಲಿ ತೃತೀಯ  ಬಹುಮಾನ ಪಡೆದ ನನ್ನ ಭಾವಗೀತೆ) ಒಲವ ಸೂಸುವ ನಿನ್ನ ಕಣ್ಣ ನೋಟಕೆ ಹೃದಯ ರಾಗವ ಹಾಡಿತು ಮುದದಿ  ಅರಳಿತು ಮನವು ಇಂದು ನಿನ್ನ ಪ್ರೀತಿಯ ಮಾತಿಗೆ ಕಲ್ಲು ಮುಳ್ಳಿನ ದಾರಿ ಕೂಡಾ ಹೂವ ಹಾಸಿಗೆಯಾಯಿತು ಪ್ರೀತಿ ತುಂಬಿದ ನಿನ್ನ ನುಡಿಗಳು ನನ್ನ ಮನವನು ಮೀಟಿತು ನನ್ನ ಹೆಜ್ಜೆಗೆ ತಾಳ ಹಾಕುತ ನವಿಲ ನಾಟ್ಯವ ಮರೆಸಿತು ಬಾಳ ಪಯಣವು ಜತೆಗೆ ಸಾಗಲು ಮನದಿ  ಸಂತಸ ತುಂಬಿತು ನಿನ್ನ ಭರವಸೆಯ  ನೋಟವೊಂದೇ ತನುವು ಅರಳಲು ಸಾಲದೆ ನಿನ್ನ ಎದೆಯಲಿ ಉಸಿರ ಸೇರಿಸಿ ಪ್ರೇಮರಾಗವ ಹಾಡಿದೆ ಮನದ ಗುಡಿಯಲಿ ಬಂದು ನಿಂತು ನನ್ನ ಮನವನು  ಬೆಳಗಿದೆ ಪಂಕಜಾ ಕೆ.

ಭಾವಯನ (ಭಾವಗೀತೆ)

ಭಾವಯಾನ  (ಭಾವಗೀತೆ) ಚುಮು ಚುಮು ಚಳಿಯು ಲಗ್ಗೆಯಿಟ್ಟಿದೆ ಮೈಮನಕೆ ಜಡತೆಯನು ತಂದೊಡ್ಡಿದೆ ಮಾಮರದ ತುಂಬೆಲ್ಲ ಹೂಗಳರಳಿದೆ ಕೋಗಿಲೆಯು ಮಧುರವಾಗಿ ಕುಕಿಲಿಡುತ್ತಿದೆ ಭೂರಮೆಯು ಹಸಿರುಟ್ಟು ತೊನೆದಾಡಿದೆ ದುಂಬಿಗಳು ಮಧುಹೀರುತ ನಲಿದಾಡಿವೆ ನಿನ್ನೊಡನೆ  ಪ್ರಕೃತಿಯಲಿ ನಲಿದಾಡೋ ಆಸೆ ಅನುರಾಗದ ಅಲೆಗಳಲಿ ತೇಲಾಡೋ ಬಯಕೆ ಕಣ್ಣಿನಲ್ಲಿ ನಿನ್ನ ರೂಪ ತುಂಬಿ ನಿಂತಿದೆ ಮನದಲ್ಲಿ ಪ್ರೇಮಗಾನ ಗುಣುಗುಣಿಸಿದೆ ನನ್ನೆದೆಯ ವೀಣೆಯನು ನೀ ಮೀಟಿದೆ ಹೊಸರಾಗ ಹೊಸ  ಬಯಕೆ ಹುಚ್ಚೆದ್ದಿದೆ ಆಸೆಗಳ ದುಂಬಿಗಳು ಮನ ಕೊರೆದಿದೆ ನೂರಾರು ಹೊಸ ಕನಸ ನೀ ಬಿತ್ತಿದೆ ಪಂಕಜಾ.ಕೆ.

ನ್ಯಾನೊ ಕಥೆ ನನಸಾದ ಕನಸು ಕಾವ್ಯಕೂಟ ದಲ್ಲಿ ತೃತೀಯ ಬಹುಮಾನ

ನ್ಯಾನೊ ಕತೆ. ದತ್ತ ಪದ  ಇದೇ ಸರಿಯಾದ ಉಪಾಯ ನನಸಾದ ಕನಸು ಎಂ.ಡಿ. ಯಲ್ಲಿ ಚಿನ್ನದ ಪದಕ ಪಡೆದುಕೊಂಡ ರಮೇಶನಿಗೆ  ಒಂದೇ ಕನಸು, ತಾನು ತನ್ನ ಹಳ್ಳಿಯ ಜನರ ಸೇವೆ ಮಾಡಿ ತನ್ನ ವಿದ್ಯೆ ಸಾರ್ಥಕ ಪಡಿಸಬೇಕು ಎನ್ನುವುದು . ಆದರೆ ಆತನ ತಂದೆ ತಾಯಿಯರಿಗೆ ಮಗ  ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಸಾಧ್ಯವಾದರೆ ಹೊರದೇಶಕ್ಕೂ ಹೋಗಲಿ ಎನ್ನುವ ಆಸೆ  .ಏನು ಮಾಡುವುದೆಂದು ತಿಳಿಯದೆ ಚಿಂತೆಯಲ್ಲಿದ್ದ ರಮೇಶ  ಸ್ನೇಹಿತನ ಸಲಹೆಯಂತೆ   ಇದೆ ಸರಿಯಾದ ಉಪಾಯ ಎಂದು  ತನಗೆ ವಿಪರೀತ ಹೊಟ್ಟೆನೋವು ಎಂದು ನಟನೆ ಮಾಡಿದ ತಂದೆ ತಾಯಿ  ಗಾಬರಿಯಾದರು ಮಧ್ಯರಾತ್ರಿಯ ಆ ಹೊತ್ತಿನಲ್ಲಿ ಆ ಹಳ್ಳಿ ಕೊಂಪೆಯಲ್ಲಿ ಯಾವದೇ ಡಾಕ್ಟರ್ ಆಗಲಿ, ವಾಹನವಾಗಲಿ , ಇಲ್ಲದೆ ಇದ್ದುದರಿಂದ ತಂದೆ ತಾಯಿ ಮಗನ ಸಂಕಟ ನೋಡಲಾರದೆ ಕಣ್ಣೀರು ಹಾಕುತ್ತಿದ್ದರು.  ರಮೇಶ ತನ್ನ ಕನಸು ನನಸಾಗುವುದು ತಿಳಿದು ಖುಷಿಯಿಂದ ನಿದ್ದೆ ಹೋದ ಪಂಕಜಾ.ಕೆ

ನೆನಪಿನಂಗಳದಲಿ

ದತ್ತಪದ ಭಾವನೆ ನೆನಪಿನಂಗಳದಿ ನೀ ಕೊಟ್ಟ ಸವಿಮುತ್ತುಗಳ ನೆನಪು ನನ್ನ ಕದಪುಗಳಿಗೆ  ತರುತಿದೆ ಕೆಂಪು ಬಾವದಲೆಯಲಿ ತೇಲುತಿದೆ ಮನಸು ಬಾಳಿನಲಿ ತುಂಬುತಿದೆ ಹೊಸ ಕನಸು ಭಾವನೆಗಳ ಭಾರದಲಿ ಜಗ್ಗುತಿದೆ ಹೃದಯ ನಿನ್ನ ಎದೆ ಬಡಿತದಲಿ ನನ್ನ ಕನಸಿದೆ ಗೆಳೆಯ ಮನದಲ್ಲಿ ತುಂಬಿದೆ ಸವಿ ಕನಸುಗಳ ತೇರು ಎದೆಬಿರಿದು ಹೊರ ಬರಲಾರದೆ ಆಗಿದೆ ಗೀರು ಅಂತರಂಗದ ಕದವನು ನಿನಗಾಗಿ ತೆರೆದೆ ಬಂದು ನೋಡೊಮ್ಮೆ ನನ್ನ ಮನದಾಳವನು ಬರಿದೆ ಚೆಲ್ಲು ಚೆಲ್ಲಾಗಿ ನಿನ್ನೊಡನೆ ಕುಣಿಯುವ ಬಯಕೆ ಉಲ್ಲಾಸ ಹುರುಪು ಇಲ್ಲದಿರೆ ಅದೊಂದು ಬದುಕೆ ಅಂಗಳದ ತುಂಬಾ ಬೆಳದಿಂಗಳು ಚೆಲ್ಲಿದೆ ನಮ್ಮೊಡನಾಟಕೆ ದಾರಿ ಸುಗಮವಾಗಿದೆ ಒಂದಾಗಿ ಅನುದಿನವೂ ನಲಿಯೋಣ ಬಾ ನಲ್ಲ ಈ ದಿನಗಳು  ನಮಗಾಗಿ ಆ ದೇವನಿತ್ತಿಹನಲ್ಲ ಪಂಕಜಾ.ಕೆ.

ಸುಗ್ಗಿಯ ಸಂಭ್ರಮ

ಸಿಗ್ನೇಚರ್ ಲೈನ್ 40 ಸ್ಪರ್ಧೆಗಾಗಿ ದತ್ತ ಪದ. .ಧನಧಾನ್ಯ ತುಂಬಿ ತುಳುಕಿ  ಬಾಳಿನಲ್ಲಿ  ನಂದನ ಸ್ನೇಹ ಪ್ರೀತಿ ಜತೆಗೆ ಇರಲು  ಸಂಕ್ರಮಣದ ಸಂಭ್ರಮ ಸುಗ್ಗಿಯ ಸಂಭ್ರಮ ಭಾಸ್ಕರನು ಬದಲಿಸಿದ ತನ್ನ ಪಥ ಉತ್ತರಾಯಣಕೆ ಚಲಿಸಿತು ಅವನ ರಥ ಮಾಗಿಯ ಚಳಿಗಾಳಿ ಮೈ ಕೊರೆದಿದೆ ವಸಂತಾನಾಗಮನವು ಮುದ ತಂದಿದೆ ಮಾಮರದ ಮೈತುಂಬ ಹೂವು ಅರಳಿದೆ ಕೋಗಿಲೆಯು ಸಂತಸದಿ ಕುಕಿಲಿಡುತಿದೆ ಚುಮು ಚುಮು ಚಳಿಯು ಕೊರೆದಿದೆ ತನುವ ಮಂಜಿನ ಬೆಟ್ಟವು ತಬ್ಬಿಹುದು ಇಳೆಯ ಅರಳಿರುವ  ಹೂವುಗಳು ಸೂಸುತಿವೆ ಕಂಪು ಬೀಸುವ ಚಳಿಗಾಳಿ ತರುತಿದೆ ತಂಪು ಮಂಜು ಮುಸುಕಿದ ಹಾದಿಯ ನೋಟ ಮಧುಹೀರ ಬರುತಿರುವ ದುಂಬಿಗಳ ಕಾಟ ಸುಗ್ಗಿಯ ಖುಷಿ ತಂದ ಸಂಕ್ರಾಂತಿ ಹಬ್ಬ ಎಳ್ಳು ಬೆಲ್ಲವ ಹಂಚಿ ಖುಷಿ ಪಡುವ ಹಬ್ಬ ಸುಗ್ಗಿಯ  ಸಡಗರ ಮನೆ ತುಂಬಿದೆ ಫಸಲಿನ ಸಂಭ್ರಮ ಮನ ತುಂಬಿದೆ ಧನಧಾನ್ಯ ತುಂಬಿ ತುಳುಕಿ ಬಾಳಿನಲಿ ನಂದನ ಸ್ನೇಹ ಪ್ರೀತಿ ಜೊತೆಗೆ ಇರಲು ಸಂಕ್ರಮಣದ ಸಂಭ್ರಮ ಪಂಕಜಾ.ಕೆ.

ಸಮಯದ ಗೆಳೆಯ

ನವಪರ್ವ  ಫೌಂಡೇಶನ್ (ರಿ) ಬಳಗದಲ್ಲಿ ಅತ್ಯುತ್ತಮ ಬರಹವೆಂದು ಪರಿಗಣಿಸಿದ  ನನ್ನ ಕವನ ಸಮಯದ ಗೆಳೆಯ  ಗೋಡೆಯ ಮೇಲಿನ ಗಡಿಯಾರ ಸಮಯವ ತಿಳಿಯಲು ಆಧಾರ ಟಿಕ್ ಟಿಕ್ ಎನ್ನುತ ತಿರುಗುವ ಮುಳ್ಳು ನಿಮಿಷವು ಗಂಟೆಗಳಾಗುತ ಬಡಿವುದು ಬೆಲ್ಲು ಸೆಕೆಂಡ್ ನಿಮಿಷವು ತಾಸುಗಳಾಗಿ ಉರುಳುವ ದಿನಗಳು ವರ್ಷಗಳಾಗಿ ವರ್ತಮಾನವು ಭೂತಕೆ ತಿರುಗಿ ಓಡುವ ಸಮಯವ ಹಿಡಿಯಲುಬಹುದೇ? ಬಡವ ಬಲ್ಲಿದ ಬೇಧವ ತೋರದೆ ಹಗಲಿರುಳೆನ್ನದೆ  ನೀ ನಡೆವೆ ಟಿಕ್ ಟಿಕ್ ಎನ್ನುತ ಓಡುತಲಿರುವೆ ರವಿಯ ನೆರಳಲೇ ನಿ ಚಲಿಸುತಲಿರುವೆ ಅನುದಿನ ಕಾಯಕ  ಮಾಡುತಲಿರುವೆ ಸಮಯದ ಗೆಳೆಯನೇ  ನೀನಾದೆ ಪಂಕಜಾ.ಕೆ

ಹಾಯ್ಕುಗಳು

ಹಾಯ್ಕುಗಳು 1 ಇಟ್ಟಿಗೆಕಲ್ಲು ಸುಂದರ ಮನೆಗಳ  ಅಡಿಪಾಯಕ್ಕೆ 2.ವಿಷದ ಮುಳ್ಳು ಚುಚ್ಚಿದ ಸ್ಥಳದಲ್ಲಿ ಎದ್ದಿದೆಬೊಬ್ಬೆ 3 ಪ್ರಾಸದಲಿದ್ದ ಕವನಗಳೆಲ್ಲವೂ ಉತ್ತಮವಲ್ಲ 4.ಸತ್ತ  ಮಾತಿಗೆ ಜೀವಕಳೆ ಬರಲು ಚಿತ್ರ ಬೇಕಿದೆ ಪಂಕಜಾ.ಕೆ.

ಚುಟುಕುಹೆಜ್ಜೆ

ಚುಟುಕು ದತ್ತ ಪದ ಹೆಜ್ಜೆ ಪ್ರತಿಯೊಂದು ಹೆಜ್ಜೆಯ ನಡೆ ಜೀವನದ ಯಶಸ್ಸಿನ ಎಡೆ ಗುರಿಸೇರುವೆಡೆಯ ಕಂಟಕಗಳು ಪರಿಹರಿಸಿದರೆ ಹೂಬನಗಳು ಪಂಕಜಾ.ಕೆ

ಬೆಲೂನ್

ಹನಿಕವನ ಆಸೆಯ ಬೆಲೂನ್ ಜಾತ್ರೆಯ ಸಾಲಲಿ ಬಣ್ಣದ ಬೆಲೂನು  ಬಗೆ ಬಗೆ ಆಟದ ಸಾಮಾನು  ಚಿಣ್ಣರ ಮನವನು ತಣ್ಣಗೆ ಸೆಳೆದು ಆಸೆಯ ಬಾಣವ ಬಿಟ್ಟಿಹುದು ಕೊಳ್ಳುವ ಆಶೆಯು ಮನದಲಿ ಇರಲು ಅಣ್ಣನ ಕೈಯನು ಜಗ್ಗಿದಳು ತಂಗಿಗೆ ಬೆಲೂನು ಕೊಡಿಸಲು ತನಗೆ ಅಸಾಧ್ಯವೆನುತ ಚಿಮ್ಮಿತು ಅಣ್ಣನ ಕಣ್ಣೀರು ಪಂಕಜಾ.ಕೆ.

ಜ್ಯೋತಿ ಹನಿಕವನ

ಜ್ಯೋತಿ (ಹನಿಕವನ) ಉರಿದುರಿದು  ಹಬ್ಬಿತು ಎಲ್ಲೆಡೆ ಕರ್ಪುರದ ಕಂಪು ತುಂಬಿತು ತನುಮನಕೆ ತಂಪು ಭಕ್ತಿ ಭಾವವು ಮೈ ಮನಕೆ ತುಂಬುತಿದೆ ಆರೋಗ್ಯದಮಲು ಎಲ್ಲೆಡೆ ಹರಡುತ್ತಿದೆ ಉರಿಯುವ ಕರ್ಪುರದಲಿ ಭಕ್ತಿಭಾವ ತನುಮನಗಳು ದೇವನಿಗೆ ಶರಣಾದ ಭಾವ ಪಂಕಜಾ.ಕೆ

ಗಜಾಕ್ ನೀಲ ಬಾನಲಿ

ಕಾವ್ಯಕೂಟ ವಾಟ್ಸಪ್ ಬಳಗದಲ್ಲಿ ಪ್ರಥಮ ಸ್ಥಾನ ಪಡೆದ ನನ್ನ ಗಜಲ್ ದತ್ತ ಪದ..... ನೀಲ ಬಾನಲಿ ಹೊಸ ತಾರೆಯ ಕಂಡೆಯಾ ಸಖ ಗಜಲ್ ನೀಲಬಾನಲಿ ಹೊಸ ತಾರೆಯ ಕಂಡೆಯಾ ಸಖ ಒಡಲ ತುಂಬಾ ಸವಿಕನಸ ತುಂಬಿದೆಯಾ ಸಖ ನನ್ನ ಹೃದಯದ ಮಿಡಿತವು ನಿನ್ನನೇ ನೆನೆದಿದೆ ಹೊಸ ಬಯಕೆಗಳ ಎದೆಯಲ್ಲಿ ಬಿತ್ತಿದೆಯಾ ಸಖ ಬಾನ ಬಯಲಲಿ ತಾರೆಗಳು  ಮಿನುಗುತಿವೆ ಬಾಳ ಬಯಲಿಗೆ ನೀ ಜತೆಯಾಗುವೆಯಾ ಸಖ ಕನಸುಗಳ ತೇರುಗಳು  ಮನದಲಿ ತುಂಬಿದೆ ನನಸು ಮಾಡಲು  ನೀನು ಬರುವೆಯಾ ಸಖ ಆಸೆಗಳೆಲ್ಲಾ ಈಡೇರುವುದೇ ಹೇಳು ಪಂಕಜಾ ನಿನ್ನ ಒಲವಿನಾಸರೆ ನೀಡಿ  ತಣಿಸುವೆಯಾ ಸಖ ಪಂಕಜಾ.ಕೆ.

ಪ್ರೀತಿಯಿಲ್ಲದ ಮೇಲೆ

ಕಾವ್ಯಾಂತರಂಗ ಸ್ಪರ್ಧೆಗೆ ದತ್ತಪದ..... ಪ್ರೀತಿಯಿಲ್ಲದ ಮೇಲೆ ನಲ್ಲನಿಗೆ ನನ್ನೆದೆಯ ಗುಡಿಯಲ್ಲಿ ಅನುರಾಗದಲೆಗಳಲಿ ನೀನಿರುವ ಆ ಭಾವ  ನನಗೇತಕೋ ಬಂದೆನ್ನ ಬಾಳಲ್ಲಿ ಒಲವರಸ ಉಕ್ಕಿಸುತ ಕಟುಕನಂದದಿ ಇಂದು  ಇರುವೆಯೇತಕೋ ಪ್ರೀತಿ ಇಲ್ಲದ ಮೇಲೆ ಬಾಳಿಗೆಲ್ಲಿದೆ ಮೆರುಗು ಜೀವನವೇ ಶೂನ್ಯವೆಂದು   ನೀ ತಿಳಿಯೆಯಾ ತಂಪಾದ ಗಾಳಿಯಲಿ ಇಂಪಾದ ಗಾನದಲಿ ಮನವಿಂದು ಹುಡುಕುತಿದೆ  ನಿನ್ನ ಪ್ರೀತಿಗಾಗಿಯೋ ಸ್ವಾರ್ಥವಿಲ್ಲದ ಪ್ರೀತಿ ನಿನ್ನನೆನೆಯುತ ಮನವು ನನ್ನೆದೆಯ ತುಂಬೆಲ್ಲ ಏಕೆ  ಹರಿದಾಡಿತೋ ಅಂಗಳದ ತುಂಬೆಲ್ಲ ಬೆಳದಿಂಗಳು ಹರಡಿರಲು ನನ್ನೊಡನೆ ನಲಿದಿದ್ದು  ಮರೆತೋಯಿತೆ ಬಾಳ ಬಾಂದಳದಲ್ಲಿ ಪ್ರೀತಿಯಿಲ್ಲದ ಮೇಲೆ ಚೆಲುವಾದ ಹೂವೊಂದು  ಹೇಗರಳುವುದು ಅರಿತೊಮ್ಮೆನೀ ಇದನು ಬಳಿ ಬಂದು  ಬಿಗಿದಪ್ಪಿ ನಿನ್ನೊಡಲ ಪ್ರೀತಿ ಸವಿ   ಉಣಬಡಿಸೆಯಾ ಪಂಕಜಾ.ಕೆ.

ನವೋಲ್ಲಾಸ

ಕವನ ಸ್ಪರ್ಧೆ ದತ್ತಪದ...ಚಂದ್ರಮನ ಇರುಳ ಬೆಳದಿಂಗಳು ನವೋಲ್ಲಾಸ ಚಂದ್ರಮನ ಇರುಳ ಬೆಳದಿಂಗಳು ಮನದಲಿ ತುಂಬಿದೆ ಭಾವನೆಗಳ ಅಮಲು  ವಸುಂದರೆಯ ಒಡಲ.ತುಂಬಾ ನೊರೆ ಹಾಲು ರಾತ್ರಿಯ ನೀರವ  ಮೌನದಲಿ ತರುಲತೆಗಳ ಒಲವ ಗಾನದ ಅಮಲು ಇಮ್ಮಡಿಸಿದೆ ಭೂರಮೆಯ ಚೆಲುವು ಚಂದಿರನ ಕಿರಣಗಳು ಇಳೆಯ ತಬ್ಬಿದೆ ತಂಗಾಳಿಯು ಮೇಘ ಸಂದೇಶವಹೊತ್ತು ತಂದಿದೆ ವಸುಂದರೆಯ ಒಡಲು ಬಿರಿದರಳಿದೆ ತಂಪು ಗಾಳಿಯಲಿ ತೇಲಿ ಬರುತಿದೆ  ನವಿರು ಗಂಧ ನೈದಿಲೆಗಳು ಬಿರಿದರಳಿ ಸ್ವಾಗತವ ಕೋರುತಿದೆ ನಿನ್ನೊಡನಾಟಕಾಗಿ ಕಾದಿದೆ ತನುವು ನವಜೋಡಿಗಳಿಗೆ ನವೋಲ್ಲಾಸವ ತುಂಬಿ ಮದುರಸವ  ಹನಿಸುತ್ತಿದೆ ಬೆಳದಿಂಗಳು ಪಂಕಜಾ.ಕೆ.

ಹೊಸ ಕನಸು

ದತ್ತಪದ ಗುನುಗು ಹೊಸ ಕನಸು ನನ್ನೆದೆಯ ಬಾನಿನಲಿ  ಚೆಲು ಕನಸು ತುಂಬಿದೆ ನಿನ್ನೆದೆಯ ಮೇಲೆ ಅದನು  ಬರೆಯಬೇಕು ಎನಿಸಿದೆ ಚೆಲುವ ನೀನು ಹೇಗೋ ಬಂದು ಮನಕೆ ಲಗ್ಗೆ ಇಟ್ಟೆಯಾ ಬದುಕು ಇಂದು ಮದುರವಾಗಿ ಹಾಡುತಿರುವುದು ಬಲ್ಲೆಯ ಮನಸಿನಲಿ ಗುನುಗುತಿರುವೆ ನನ್ನ ಮನದ ರಾಗವ ತಿಳಿಸಲೇಗೆ ನಿನಗೆ ಅದನು ಹೇಳು ನನ್ನ ರಾಘವ ನಿನ್ನೊಲವ  ತಿಳಿಸಲೆಂದು ನೀ ಕೊಟ್ಟ ಕಾಣಿಕೆ ಕದಪುಗಳ. ರಂಗೇರಿಸಿ ಹೊಸಭಾವ ತಂದಿದೆ ಸಾಗರದ ಅಲೆಗಳಂತೆ ಭಾವನೆಗಳು ಹುಚ್ಚೆದ್ದಿದೆ ಬಾಳ ತೋಟದ ತುಂಬಾ  ಹೊಸಕನಸ ಬಿತ್ತಿದೆ ಪಂಕಜಾ.ಕೆ.