Skip to main content

Posts

Showing posts from January, 2019

ರೈತ ಅನ್ನದಾತ

ರೈತ ...ಅನ್ನದಾತ ಮುಂಗಾರು ಮಳೆಯಾಗಿ ಕೆರೆಕಟ್ಟೆಗಳು ತುಂಬಿ ತುಳುಕಾಡಿದೆ ಹೊಲದಲ್ಲಿ ದುಡಿಯುತಿರುವನು ರೈತ  ಮಣ್ಣಿನ   ಮಗನೀತ ನೇಗಿಲಲಿ  ಉಳುತ ಬೆಳೆಯನ್ನು ಬೆಳೆದಾತ ಉಣಿಸುವನು ನಮಗೆನಿತ್ಯ ಈತ ನಮ್ಮ ರೈತ  ಅನ್ನದಾತ ಎಂದೆಂದೂ ನಿನಗೆ ಋಣಿಯಾದೆ ನೀ ಭೂಮಿತಾಯಿಯ ಮಗುವಾದೆ ನಿನ್ನಿಂದಲೇ ನಮಗೆ ಸಿಗುತ್ತಿದೆ ಅನ್ನ ನೀ ಬಾಳಬೇಕು ಖುಷಿಯಾಗಿ ಚಿನ್ನ ಸಾಲದ ಹೊರೆಗೆ ಕೊರಳು ಕೊಡಬೇಡ ಅನ್ನಬೆಳೆಯುವ ಭೂತಾಯಿಕೈಬಿಡಬೇಡ ಬರುತಿದೆ  ನಿನಗೀಗ  ಒಳ್ಳೆಯ ದಿನಗಳು ತಿಳಿಯುತ್ತಿದೆ ನಿನ್ನ ಶ್ರಮದ ಬೆಲೆಗಳು ರೈತ   ನೀ  ನಮ್ಮ  ಅನ್ನದಾತ ದುಡಿಮೆಯಲಿ ತೃಪ್ತಿಪಡುವಾತ ದುಡಿಮೆಯೇ ದೇವರೆಂದು ತಿಳಿದಾತ ನಮಿಸುವೆನು ನಿನಗೆ ಓ ಅನ್ನದಾತ ಪಂಕಜಾ.ಕೆ. ಮುಡಿಪು

ಕೈತೋಟ

ಕೈತೋಟ ನನ್ನ ಮನೆಯಲೊಂದು ಪುಟ್ಟ ತೋಟವಿರುವುದು ಬಣ್ಣಬಣ್ಣದಹೂಗಳಿಂದ ತುಂಬಿ ಕಣ್ಣ ಸೆಳೆಯುವುದು ಹೂವ ಜೇನ ಸವಿಯಲೆಂದು ನಿತ್ಯ ಪುಟ್ಟ ಪುಟ್ಟ ಹಕ್ಕಿಗಳು ಹಾರಿಬರುವುವು ಬಣ್ಣ ಬಣ್ಣದದುಂಬಿಗಳುಜತೆಗೆ ಇರುವವು ಹೂವಿಂದ ಹೂವಿಗೆ ಹಾರುತಿರುವುದು ಬೆಂಡೆ ತೊಂಡೆ ಬಸಳೆಎಂದುತರ ತರದ ತರಕಾರಿಗಳ ಬೆಳೆಯುತಿರುವೆನು ಹಸಿರು ಸೊಪ್ಪುಗಳುಕೂಡ ಜತೆಯಲಿರುವುದು ನೋಡಲೆರಡು ಕಣ್ಣುಗಳು ಸಾಲದಾಗಿದೆ ನಿತ್ಯ ಅಡಿಗೆ ಗಾಗಿ ಇದನು  ಕೊಯ್ಯುತಿರುವೆನು ಬಗೆ ಬಗೆಯ ಅಡಿಗೆ ಗಳ ಮಾಡಿ ತಿನುವೆ ವು ನಾನು ಬೆಳೆದುದೆಂದುಇದರ ರುಚಿಯುಹೆಚ್ಚುದು ಎರಡುಹೊತ್ತು ಕೆಲಸ ಮಾಡಿ ದಣಿಯುತಿರುವೆನು ಇದುವೆಒಂದುಮೈಮನಕೆ ಯೋಗ ವಾಗುವುದು ತೋಟದಲ್ಲಿದುಡಿಯುತಿರಲುಖುಷಿಯುಸಿಗುವುದು ನನ್ನ ತೋಟದಲ್ಲಿ ತಿರುಗಿ ಹೊತ್ತು  ಕಳೆವೆನು ಮೈ ಮನಕೆ ಉಲ್ಲಾಸ ತುಂಬಿ ಬರುವುದು ಸ್ವಚ್ಛ ಶುದ್ಧ ಗಾಳಿ ಸುತ್ತ ಮುತ್ತ ತುಂಬುವುದು ಕೈತೋಟ ಒಂದು ಕ್ರಾಂತಿಯಾಗಲಿ ಪ್ರತಿಯೊಬ್ಬರಿದನು ತಿಳಿದು ತೋಟ ಬೆಳೆಸಿರಿ ಸಾವಯವ ತರಕಾರಿ ಬೆಳೆ ದು ತಿನ್ನಿರಿ ಆರೋಗ್ಯಯುಕ್ತಜೀವನವಪಡೆದುಬಾಳಿರಿ ಪ್ರತಿಮನೆಯಲೊಂದು ಪುಟ್ಟ ತೋಟವಿದ್ದರೆ  ಮನೆಯ ಅಂದಚಂದಇದರಿಂದ ಹೆಚ್ಚುದು ಆರೋಗ್ಯಯುಕ್ತ ತರಕಾರಿ ನಿತ್ಯ ಸಿಗುವುದು ಪಂಕಜಾ.ಕೆ.

ನೋವು ..ನಲಿವು

ನೋವು ನಲಿವುಗಳಿರಳು ಬಾಳಲಿ ಎದುರಿಸುವ ಛಲ ಮನದಲಿರಲಿ ನೆನಪುಗಳ ಸರಮಾಲೆ ಹರಿದಾಡಿ ಮನದಲಿ ಚಿಂತೆಗಳು ಮನೆಮಾಡಿ ಜೀವನ ಬರಡಾಗಲು ಬಿಡಬೇಡಿ ಚಿಂತೆಗಳ ಮೆಟ್ಟಿ ಕುಣಿದಾಡಿ ಜೀವನ ನೋವು ನಲಿವುಗಳ ಸಂತೆ ಎದುರಿಸಿ ಬಾಳಿದರೆ ಸುಖವಂತೆ ಕಳೆಯಬೇಕು ಚಿಂತೆಗಳ ಸರಮಾಲೆ ಕಟ್ಟಬೇಕು ಆನಂದದ ಹೂಮಾಲೆ ಪಂಕಜಾ.ಕೆ

ಸ್ವಚ್ಛಂದ ಬದುಕು

ಸ್ವಚ್ಛಂದ ಬದುಕು ಪೇಟೆ ಮನೆಗಳಲ್ಲಿ ತುಂಬಿದೆ ಸಿಡುಕು ಸಿಗಬಹುದೇ ಹಳ್ಳಿಯ ಸ್ವಚ್ಛಂದ ಬದುಕು ಸೂರ್ಯನುದಯಿಸುವಆಗಸದ ಚಂದ ಜನರಿಗಿದೆಯೇ ಬಿಡುವು ಸವಿಯುವ ಅಂದ ಗುಡ್ಡಬೆಟ್ಟಗಳಿಂದ ಬರುವ ತಂಪು ಗಾಳಿ ಸಮನಾದೀತೆಪೇಟೆಯ ಪಂಖದ ಗಾಳಿ ಗುಬ್ಬಿಗೂಡಿನಂತ ಗಗನಚುಂಬಿ  ಮನೆ ಹಾಕಬೇಕು ಅದರಲ್ಲಿ ಸವರಣೆಯ ಮಣೆ ಎಲ್ಲೆಂದರಲ್ಲಿ ತುಂಬಿರುವ ಕಸದ ತ್ಯಾಜ್ಯ ಮನೆ ಮನೆಗಳಲ್ಲಿ ನಿತ್ಯವೂ ವ್ಯಾಜ್ಯ ಮಾರ್ಗವಿಡೀ ವಾಹನಗಳ ದಟ್ಟಣೆ ಎಲ್ಲೆಲ್ಲೂ  ಕಾಣುವ ಜನದಟ್ಟಣೆ ಸ್ವಚ್ಛಂದ ಗಾಳಿಯಲಿ ವಿಹರಿಸುವ ಆನಂದ ತಿಳಿಯುವುದೇ  ಅವರಿಗೆ ಅದರ ಬಂದ ಸ್ವಚ್ಛಂದ ಬದುಕಿನಲ್ಲಿ ಇರುವ ಆನಂದ ಸವಿದವನಿಗೆ ಗೊತ್ತು ಅದರ  ಚಂದ ಮರಗಿಡಗಳ ಬೆಳೆಸಿ ಉಳಿಸಬೇಕು ಸ್ವಚ್ಛಂದ ಗಾಳಿ ಸವಿಯು ಸವಿಯಬೇಕು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.

ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ ನೇಸರನು ಬದಲಿಸಿದ ತನ್ನ ಪಥ ತುಂಬಿತು ಮನೆ ಮನದಲ್ಲಿ ಸಂತಸ ಉತ್ತರಾಯಣದ ಪುಣ್ಯಕಾಲ ಧ್ಯಾನ ಜಪ ತಪಕ್ಕಿದು ಸಕಾಲ ಮಾಗಿಯ ಚಳಿಗಾಳಿಯು ಕಳೆದು ಮೂಡುತಿದೆ ತನುಮನದಲ್ಲಿ ಚುರುಕು ಸುಗ್ಗಿಯ  ಸಂಭ್ರಮದ ಹಬ್ಬ ಮನೆಯಲ್ಲಿ ಫಸಲು ತುಂಬಿದ ಹರ್ಷ ಎಳ್ಳು  ಬೆಲ್ಲದ  ಹೂರಣ ತರಲಿ ಸುಖಶಾಂತಿಯ ಜೀವನ ಎಳ್ಳು ಬೆಲ್ಲವ ಮನೆಮನೆಗೆ ಬೀರಿ ಸಂತಸವ ಮನೆ ಮನದಲ್ಲಿ ತೂರಿ ಮಾಗಿಯ ಚಳಿಯ ಜಡತೆ ಕಳೆದು ಹೊಸ ಹುರುಪನು ಜೀವನಕೆ ತುಂಬಲಿ ಮಕರಸಂಕ್ರಾಂತಿಯ ಜ್ಯೋತಿ ಕಳೆಯಲಿ  ನಮ್ಮೆಲ್ಲರ  ಭೀತಿ ಅರಳಲಿ ಹೊಸತನದ ಹೂವು ತುಂಬಲಿ ಪ್ರೀತಿವಿಶ್ವಾಸದ  ಕಾವು ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಪಂಕಜಾ.ಕೆ

ಗಜಲ್ 19 ಖರ್ಚಿದೆಯೇನು

ಗಜಲ್. 19   ಖರ್ಚಿದೆಯೇನು ನಗು ನಗುತ್ತಾ ಬಾಳಲು ಖರ್ಚಿದೆಯೇನು ಪ್ರೀತಿ ವಿಶ್ವಾಸದಿಂದ ಇರಲು ಖರ್ಚಿದೆಯೇನು ಮನುಜ ಮನುಜರಲ್ಲಿ ದ್ವೇಷವೇಕೆ ಸೌಹಾರ್ದದಿಂದ ಜೀವಿಸಲು ಖರ್ಚಿದೆಯೇನು ಜಗಳ ಕದನಗಳಿಂದ ಸುಖವಿರದು ಕೇಳು ಹೊಂದಾಣಿಕೆ ನಮ್ಮಲ್ಲಿ ತರಲು ಖರ್ಚಿದೆಯೇನು ಜೀವನದಲ್ಲಿ  ಬರಬಹುದು ನೂರಾರು ಕಷ್ಟನಷ್ಟ ಎದುರಿಸಿ ಧೈರ್ಯದಿ ನಿಲ್ಲಲು ಖರ್ಚಿದೆಯೇನು ಎಲ್ಲೆಲ್ಲೂ  ಮೋಸ ವಂಚನೆಗಳೇ ತುಂಬಿಹುದು ಪಂಕಜಾ ಜಾಗ್ರತೆ ಕಲಿಯಲು ಖರ್ಚಿದೆಯೇನು ಪಂಕಜಾ.ಕೆ.

96 ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ ನೇಸರನು  ಮಕರ ರಾಶಿಗೆ  ಬಂದ ಮನೆ  ಮನದಲಿ  ಹರ್ಷವ  ತಂದ ಉತ್ತರಾಯಣದ  ಪುಣ್ಯ ಕಾಲವಿದು ಸ್ವರ್ಗದ ಬಾಗಿಲುತೆಗೆಯುವ ದಿನವಿದು ಬೀಸುವ  ಚಳಿ  ಗಾಳಿಯು  ಕರಗಿ ಬಂದಿತು ಮಂದಮಾರುತ  ಭರದಿ ತುಂಬಿತು  ದವಸಧಾನ್ಯದ  ಕಣಜ ಎಲ್ಲೆಲ್ಲೂ ತುಂಬಿತುಹರ್ಷದ ಕಣಜ ಧಾನ  ಧರ್ಮಕ್ಕಿದು  ಪುಣ್ಯಕಾಲ ಅದಕ್ಕಾಗಿ  ಹಂಚುವರು ಎಳ್ಳು ಬೆಲ್ಲ ಎಳ್ಳುಬೆಲ್ಲಗಳಸವಿತುಂಬಲಿಬಾಳಲಿಸಿಹಿ ಮಕರ  ಸಂಕ್ರಾಂತಿಯ  ಶುಭ ದಿನವು ಮೈಮನಕೆ  ಉಲ್ಲಾಸದ ಸಂಭ್ರಮವು ಎಳ್ಳು ಬೆಲ್ಲವ ಹಂಚಿ ಬಾಳಲಿ ಸಿಹಿತುಂಬಿ ಸಹೋದರ  ಪ್ರೇಮವ ಎಲ್ಲೆಡೆ ಹರಡಿ ಮನಸಿನ  ಕಹಿ ಭಾವನೆಗಳ ಕಳೆದು ತೊಳೆದು ಸಿಹಿಭಾವವತುಂಬಿನಲಿಯೋಣ ಅನುದಿನವು ಪಂಕಜಾ.ಕೆ.

ರಾಧೆಯ ಅಳಲು

ರಾಧೆಯ ಅಳಲು ನಿನ್ನಯ ಕೊಳಲಿನ ನಾದಕೆ ಒಲಿದೆ ನಿನ್ನೊಡನಾಟದಿ  ನಿತ್ಯವೂ ನಲಿದೆ ಅಂದಿನ ಒಡನಾಟದ ಸುಂದರ ನೆನಪು ಇಂದಿಗೂ ಇರುವುದು ಮನದಲ್ಲಿ ಹಸಿರು ಯಮುನಾ  ನದಿಯ  ಆ  ತೀರ ಇಂದೀಗ ನೀನಿಲ್ಲದೆಅದು ಬಲು ದೂರ ಕಾಯುತಿರುವೆನು ಕೃಷ್ಣಾ ನಿನಗಾಗಿ ಎಂದು ಬರುವೆಯೋ ನೀನು ನನಗಾಗಿ ನೀನಿದ್ದಾಗ ಜೀವನ ಹಸಿರು ಭೂಮಿ ಇಂದೀಗ ಆಗಿದೆ  ಅದು ಮರುಭೂಮಿ ನೀನಿಲ್ಲದ ದಿನಗಳು ಬಲು ಘೋರ ತಿಳಿಯದೆ  ಹೇಳು ನಿನಗೆ ಅದು ಪೋರ ಮಾತುಕೊಟ್ಟಿರುವಿಯಲ್ಲಾ ಅಂದು ಕೃಷ್ಣ ಮಾತಿಗೆ ತಪ್ಪದೆ ಬೇಗ ಬಾ ಇಂದು ಕೃಷ್ಣ ನಿನಗೊಲಿದ   ಜೀವವಿದು ನೋಡು ಇನ್ನಾರಿಗೂ   ಒಲಿಯದದು  ಬಿಡು ನೀ ಬಲ್ಲೆ ನನ್ನ ಜೀವನದ ಕನಸು ಮಾಡಲಾರೆಯ ಅದರ ನನಸು ಪಂಕಜಾ.ಕೆ.

ಗಜಲ್7 ಬಾಳು ಬರಡು

ಗಜಲ್   7 ನಿನ್ನೊಡನಾಟದ ದಿನಗಳಿಲ್ಲದೆ ಬಾಳು ಬರಡು ಹೂಮನದಲ್ಲಿ ಒಲವಿಲ್ಲದೆ ಬಾಳು ಬರಡು ಜೀವನದಲ್ಲಿ  ಇರಬೇಕು ಒಲವು ನೀ ಜತೆಯಲಿಲ್ಲದೆ  ಬಾಳು ಬರಡು ಹೂತೋಟದಲಿ ಅರಳಿದೆ ಹೂಗಳು ಒಡತಿಯ  ಆರೈಕೆಯಿಲ್ಲದೆ ಬಾಳುಬರಡು ಕಮಲದಳಗಳು ಅರಳಿನಿಂತಿದೆ ಸೊಗದಲಿ ಸೊಗಸ ಸವಿಯಲು ನೀನಿಲ್ಲದೆ ಬಾಳುಬರಡು ಪಂಕಜಾಳಮನದಲ್ಲಿತುಂಬಿರುವಒಲವು ಸವಿಯಲು ನೀ ಬರದೆ ಬಾಳು ಬರಡು ಪಂಕಜಾ.ಕೆ.

ಶರದಾಸ್ತುತಿ

ಶಾರದಾಸ್ತುತಿ ವಿದ್ಯಾಧಿದೇವತೆ  ಶಾರದೇ ವಂದಿಸುವೆ  ನಿನಗೆ  ಇಂದೇ ಕರಮುಗಿದು   ಬೇಡುವೆ ಭಕುತಿಯಲಿ  ಶಿರಬಾಗುವೆ ವಿದ್ಯೆಬುದ್ಧಿಗಳ ರಾಣಿ  ನೀನು ಶರಣು ಬಂದಿಹ ದೀನ ನಾನು ವಿದ್ಯೆಬುದ್ದಿಗಳ ಕೊಡು ತಾಯೇ ನಿತ್ಯವೂ ಬೇಡುವೆನು ತಾಯೇ ಅನುದಿನವು ಕೈ ಹಿಡಿದು ನಡೆಸು ಲೇಖನಿಯ  ಸರಾಗ  ಹರಿಸು ಮನದ ಭಾವನೆಗಳ ಅಕ್ಷರವಾಗಿಸಿ ಸ್ತುತಿಸುವೆನು ದೇವಿ ನಿನಗೆ ನಮಿಸಿ ಶೃಂಗೇರಿ   ಪುರವಾಸಿನಿ ಅಭಯ  ಹಸ್ತವ ತೋರುನಿ ನಿನ್ನ ಅಡಿದಾವರೆಗಳಿಗೆ ಎರಗಿ ಶರಣು ಬಂದಿಹೆ  ಕೊರಗಿ ಕರಗಿ ದೇವಿ ಶಾರದೆ ಕೈ ಹಿಡಿದು ನಡೆಸು ಒಲುಮೆಯಲಿ  ನನ್ನನ್ನು ಹರಸು ಪಂಕಜಾ.ಕೆ.

ಗಜಲ್6 ಯಾರೇನು ಮಾಡುವರು

ಗಜಲ್ ಕಷ್ಟಗಳು ಬಂದಾಗ ನಗುತಿರಲು ಯಾರೇನು ಮಾಡುವರು ಎದುರಿಸುವಛಲಮನದಲ್ಲಿರಲು ಯಾರೇನು ಮಾಡುವರು ಜೀವನವೊಂದು ಸುಖ  ದುಃಖ ಗಳ ಸಂತೆ ಮನಸುಖುಷಿಯಿಂದತುಂಬಿರಲುಯಾರೇನುಮಾಡುವರು    ಎಲ್ಲೆಮೀರಿದ ನಡತೆ ದುಃಖಕ್ಕೆ ಕಾರಣವೆಂದು ತಿಳಿದೂ ಮೈ ಮರೆಯುತಿರಲು ಯಾರೇನುಮಾಡುವರು ಮಕ್ಕಳಿದ್ದರೂ ವೃದ್ಧಾಶ್ರಮದಲ್ಲಿ ದಿನಕಳೆಯುತಿರುವಾಗ ಮನಸು ಬೇಸರದ ಕಡಲಾಗಿರಲುಯಾರೇನು ಮಾಡುವರು ಪಂಕಜಾಳ ನಡೆ ನುಡಿಗಳಲಿ ಕಳಂಕವಿಲ್ಲದಿದ್ದರೂ ಚುಚ್ಚು ನುಡಿಗಳಿಂದ ಕುಟುಕುತಿರಲು ಯಾರೇನು ಮಾಡುವರು .ಪಂಕಜಾ.ಕೆ

2019

ಇಸವಿ 2019 ಕಳೆಯಿತು ಮತ್ತೊಂದು ಇಸವಿ ಬಂದಿತು ಹೊಸ ಕ್ಯಾಲೆಂಡರ್ ಪ್ರಕೃತಿಯಲ್ಲಿ ಆಗಿದೆಯೇ ಬದಲಾವಣೆ ಆಗಿದ್ದು ಒಂದೇ ಕ್ಯಾಲೆಂಡರ್ ಬದಲಾವಣೆ ಎಲ್ಲಿದೆ ಹೊಸತನ ಏಕಿಷ್ಟು  ಸಂಭ್ರಮ ಯುಗಾದಿಯ ದಿನ ಎಷ್ಟೊಂದು ಸಂಭ್ರಮ ಹೂವು ಹಣ್ಣುಗಳ  ತೇರು  ಕಟ್ಟಿ ಪ್ರಕೃತಿ ನಲಿಯುತ್ತಿದೆ ಮುದದಿ ನೋಡಿ ಆಚರಿಸೋಣ ನಾವೆಲ್ಲಾ ಹೊಸವರ್ಷವನು ಚಾಂದ್ರಮಾನಯುಗಾದಿಯಶುಭದಿನದಂದು ಪ್ರಕೃತಿಯ ಸಂಭ್ರಮದಲ್ಲಿ ಬಾಗಿಯಾಗುತ ಉಳಿಸೋಣನಮ್ಮ ಭವ್ಯ ಸಂಸ್ಕೃತಿಯ ಹಾರೈಸೋಣ ಶುಭವನು ಯುಗಾದಿಯ ಶುಭದಿನ ಮಾಡೋಣ ಹಬ್ಬ  ಬೇವು ಬೆಲ್ಲವ ಹಂಚಿ ಹೊಸಬಟ್ಟೆಗಳನುಟ್ಟುಸಂಭ್ರಮಿಸೋಣ ಅಂದು ಬೇಕಿದೆಯೇಮಧ್ಯರಾತ್ರಿಯಈ ಸಂಭ್ರಮಾಚರಣೆ ನಮ್ಮ ಸಂಸ್ಕೃತಿಯ ನಾವು ಉಳಿಸಬೇಕು ಪ್ರಕೃತಿಯಬದಲಾವಣೆಯಜತೆ ಸಂಭ್ರಮಿಸಬೇಕು ಯುಗಾದಿಯ ಶುಭದಿನದಂದು ಒಟ್ಟಾಗಿ ಆಚರಿಸುತ್ತಾ ಹೊಸವರ್ಸವನು ಜತೆಯಾಗಿ   ಪಂಕಜಾ.ಕೆ.

ಗಜಲ್..5ಖುಷಿಪಡಬಾರದೇನು

ಗಜಲ್ ಅರಳಿರುವ ಹೂವುಗಳ ಕಂಡಾಗ ಖುಷಿ ಪಡಬಾರದೇನು ಬಾನಿನಲಿ ಹಾರಾಡುವ ಹಕ್ಕಿಗಳ ಕಂಡಾಗ ಖುಷಿಪಡಬಾರದೇನು ಕಷ್ಟಗಳ ಸರಮಾಲೆ ಯಲಿ ಮುಳುಗಿ ಬಸವಳಿಯುತಿರಲು ನರ್ತಿಸುವ ನವಿಲುಗಳ ಕಂಡಾಗ ಖುಷಿಪಡಬಾರದೇನು ಜೀವನದಲ್ಲಿ ಬರುವ ಕಷ್ಟ ನಷ್ಟಗಳಿಗೆ ಎದೆಗುಂದದೆ ಮೂಡುತಿರುವ ಸೂರ್ಯನ ಕಿರಣಗಳ ಕಂಡಾಗ ಖುಷಿಪಡಬಾರದೇನು ಎಲ್ಲೆಲ್ಲೂ  ಕಸದ ತ್ಯಾಜ್ಯಗಳೇ ತುಂಬಿರುವಾಗ ಹಸಿರು ತುಂಬಿದ  ಕಾಡುಗಳ ಕಂಡಾಗ ಖುಷಿಪಡಬಾರದೇನು ಪಂಕಜಾಳ ಮನದಲ್ಲಿರಲು ನೂರಾರು ನೋವುಗಳು ಪ್ರಕೃತಿಯಲ್ಲಿ ನಲಿವ ಜೀವಿಗಳ ಕಂಡಾಗ ಖುಷಿಪಡಬಾರದೇನು ಪಂಕಜಾ.ಕೆ

ಗಜಲ್...4 ಹೊಸತನ..2

ಗಜಲ್ ..4 ಮೂಡಣದಿ ಉದಯಿಸಿದ ರವಿಕಿರಣಗಳಲಿ ಹೊಸತನ ಮನದಲಿ ಮೂಡಿರುವ ಭಾವನೆಗಳಲಿ ಹೊಸತನ ಹಾರಾಡುವ ಹಕ್ಕಿಗಳ ದಂಡು ತುಂಬಿರಲು ನಭದಲಿ ಅರಳಿದ ಚಿತ್ರಗಳಲಿ ಹೊಸತನ ಒಲವ ಸವಿಯನು ಅನುಭವಿಸುತಿದ್ದರೂ ದಿನ ದಿನವೂ ನಯನಗಳಲಿ ಹೊಸತನ ಬಾಳಿನಾಗಸದಲ್ಲಿ ಮೂಡಲು ಪ್ರೇಮದಾಜ್ಯೋತಿ ತರೆಯಲು ಕಂಡೆ ಮನದ ಕದಗಳಲಿ ಹೊಸತನ ಇನಿಯನ ಎದೆಗೊರಗಲು ತುಂಬಿತು ಪ್ರೀತಿ ಪಂಕಜಾಕ್ಷಿಯ ಬಯಕೆ ಕಂಗಳಲಿ ಹೊಸತನ ಪಂಕಜಾ.ಕೆ.

ಗಜಲ್...3ಹೊಸತನ(1)

ಗಜಲ್ ಬಾಳಿನ  ನಡೆಗೆ ನುಡಿಗಳಲಿರಲು ಹೊಸತನ ದಿನದ ಚಲನೆಗೆ  ಸುಗಮ ಸಂಭ್ರಮಿಸಲು ಹೊಸತನ ಅನುಭವದ ಹೆಜ್ಜೆಗೆ ಸರಿದಾರಿಯಿರಬೇಕು ಹೂವು ಹಣ್ಣುಗಳು ಹಿಂದು  ಮುಂದಿರಲು ಹೊಸತನ ಇನಿಯನೊಡನಾಟದಲಿ ಸುಖಿಸುವ ಮನಸು ತೆರೆದ  ಕಿಟಕಿಯಲಿ ಚಂದಿರ ಇಣುಕಲು ಹೊಸತನ ಅಚ್ಚರಿಯ ಬೆಳವಣಿಗೆಗಳು  ನಿರಂತರವಿಲ್ಲಿ ನೋಡುವ ದೃಷ್ಟಿ ಹಾಡುವ ಹಾಡಿನಲ್ಲಿರಲು ಹೊಸತನ ಪ್ರಕೃತಿಯೊಡನಾಟದಿ ನೆಮ್ಮದಿಯ ಘಳಿಗೆಗಳು ಪಂಕಜಾಳ ಮನದಲ್ಲಿ ತುಂಬಿರಲು ಹೊಸತನ ಪಂಕಜಾ .ಕೆ.

ಗಜಲ್...1 ಬೆಳಕು

ಗಜಲ್ ಬಾನಿನಲಿ ಮೂಡುವ ಚುಕ್ಕಿಗಳಲ್ಲಿ ಬೆಳಕು ಮನದಲಿ ಬರುವ ಭಾವನೆಗಳಲ್ಲಿ ಬೆಳಕು ಹೂವೊಂದು ಬಿರಿದರಳಿ ನಗುತಿಹುದು ಚೆಲುವನು ಕಾಣುವ ಕಣ್ಣುಗಳಲ್ಲಿ ಬೆಳಕು ದುಂಬಿಗಳ ಹಾರಾಟದ ಸೆಳೆವ ಸೊಬಗು ಹರುಷ ತುಂಬಿರುವ ಮನದಲ್ಲಿ ಬೆಳಕು ಆಗಸದಿ ಹಾರಾಡುವ ಹಕ್ಕಿಗಳ ದಂಡು ಕಂಡೆ ಕಲವರದ ಸಂಭ್ರಮದಲ್ಲಿ ಬೆಳಕು ಮಳೆ ಬಂದು ತುಂಬಿಹುದು ಕೆರೆಕಟ್ಟೆಗಳು ಮೂಡಿದೆ ಪಂಕಜಾಳ  ಬಾಳಿನಲ್ಲಿ ಬೆಳಕು ಪಂಕಜಾ. ಕೆ.