Skip to main content

Posts

Showing posts from March, 2023

ನಮ್ಮೂರ ಜಾತ್ರೆ

ನಮ್ಮೂರ ಜಾತ್ರೆ ಪರಿವರ್ಧಿನಿ ಷಟ್ಪದಿ  ಸಡಗರ ತುಂಬಿದೆ  ಹಳ್ಳಿಯ ಜನರಲಿ ಗಡಿಬಿಡಿಯಿಂದಲಿ ಸರ ಸರ ಸರಿಯುತ  ಕಡಿದರು ಬಾಳೆಯ ಕಂಬವ  ಬೇಗನೆ ತೋರಣ ಕಟ್ಟಲಿಕೆ  ಜಡೆಯನು ಹೆಣೆಯುತ  ದಿರಿಸನು ಧರಿಸುತ ಹುಡುಗರು ಹುಡುಗಿಗಯರೆಲ್ಲರು ಸೇರುತ ಬಡಿದರು  ಬ್ಯಾಂಡನು ಗಟ್ಟಿಗೆ  ಕೋಲಲಿ ಹಾಡುತ ಕುಣಿಯುತಲಿ ಬಯಲಲಿ ಬಂದಿದೆ ವಿಧವಿಧ ಸಂತೆಯು ಪಯಣಕೆ ಕಾದಿದೆ ಹಲವಿಧ ವಾಹನ ಮಯಣದ ಬತ್ತಿಯ ತೆರದಲಿ ಮಿನುಗುವ  ಬಣ್ಣದ ದೀಪಗಳು ಹಯವನ್ನೇರಿದ  ಮಗುವಿನ ತೆರದಲಿ ಜಯ ಜಯವೆನ್ನುತ ಹಾಡುತ ಕುಣಿಯುತ ಬಯಲಲಿ  ತೇರನ್ನೆಳೆಯುತ ತರುಣರು  ಬಕುತಿಯ ತೋರುವರು ತಿಂಗಳ ಮೊದಲೇ ಸಾರಿಸಿ ಗುಡಿಸುತ ಚಂಗನೆ ನೆಗೆಯುವ ಪುಟಾಣಿ ಮಕ್ಕಳು ಕಂಗಳ ಸೆಳೆದಿದೆ  ದೇವರ ಮಂಟಪ  ಬಣ್ಣದ ಚಿತ್ರದಲಿ ತಂಗಿಯ ಜತೆಯಲಿ ಸಂತೆಯ ತಿರುಗುತ ಮಂಗನ ಕುಣಿತವ ಸೊಗದಲಿ ನೋಡುತ ರಂಗನು ಕಳೆದನು ಬಯಲಲಿ ದೇವರ ಬಲಿಯನು ನೋಡುತಲಿ ಪಂಕಜಾ.ಕೆ ರಾಮಭಟ್ .ಮುಡಿಪು

ಜನಪದಗೀತೆ ನವಪರ್ವ

  ನವ ಪರ್ವ ಸಂಕ್ರಾಂತಿ ಹಬ್ಬವು ಬಂದೈತೆ ನಾಡಿಗೆ ಹಬ್ಬದ ಸಾಲನ್ನು ತಂದೈತೆ/ಮನೆಯಲ್ಲಿ ಸುಗ್ಗಿಯ ಬೆಳೆ  ತುಂಬೆಯ್ತೆ ಮಾವಿನ ತೋರಣ ಕಟ್ಟುವ ನಾವೆಲ್ಲ ಚಂದಾಗಿ ಅಂಗಳ ಸಾರಿಸೋಣ / ಬಾಗಿಲಿಗೆ ರಂಗೋಲಿ ಇಟ್ಟು ನಲಿಯೋಣ ಉತ್ತರದ ದಿಕ್ಕಿಗೆ ಹೊರಟಾನ ಸೂರ್ಯಣ್ಣ ಬಿಸಿಲು ಗಾಲ ಬಂದೈತೆ / ಮೈಯಲ್ಲಿ ಹೊಸ ಹುರುಪು ಮೂಡಿ ಬಂದೈತೆ ಎಳ್ಳು ಬೆಲ್ಲವ ಬೀರಿ ಒಳ್ಳೆ ಮಾತಾಡುವ  ನೆರೆಹೊರೆ ಜನರಲ್ಲಿ ಸೌಹಾರ್ದ / ವಾಗಿರುತ ಒಂದಾಗಿ ಹಬ್ಬವ ಮಾಡೋಣ ಎಣ್ಣೆಯ ಮಜ್ಜನ ಮಾಡಬೇಕು ನಮ್ಮವ್ವ ಗಂಗೆಯ ಸ್ನಾನ ಮಾಡಬೇಕು/ಮಡಿಯಲ್ಲಿ ಹುಗ್ಗಿಯ  ಪಾಯಸದಡುಗೆ ಮಾಡಬೇಕು ಪಂಕಜಾ.ಕೆ.ರಾಮಭಟ್ .ಮುಡಿಪು

ಪೂರ್ಣ ಚಂದ್ರ ಭೋಗ ಷಟ್ಪದಿ

ಪೂರ್ಣ ಚಂದ್ರ ಭೋಗ ಷಟ್ಪದಿ ಬಾನಿ ನಂಚಿನಲ್ಲಿ  ಮಿನುಗಿ ಬಾನ ತಾರೆಯಂತೆ ಹೊಳೆದು ಮಾನಿನಿಯರ ಮನವ ಸೆಳೆದ ಮೋಡಿಗಾರನು ತಾನು ಹಿಡಿದ ದಾರಿಯಲ್ಲಿ ಮೇನೆ ಯಲ್ಲಿ ಕುಳಿತುಕೊಂಡು ಸಾನುರಾಗದಿಂದ ನಲಿವ ಪೂರ್ಣ ಚಂದ್ರನು ಅರಳಿ ನಗುವ ನೈದಿಲೆಯನು ಕರದಿ ಹಿಡಿದು ಮುದ್ದಿಸುತ್ತ ಭರದಿ ಹರಿಸುತಿರುವ ಧರೆಗೆ ತಂಪು ಕಿರಣವ ಮರೆಯಲಿರುವ ತಾರೆಯೊಡನೆ ತೆರೆಯ ಮರೆಯಲಾಡುತಿದ್ದು ಸರಿಸಿಬಿಡುವ  ಜಗದ ಜನರ   ಕೋಪ ತಾಪವ ಜಸವ ಪಡೆಯಲೆಂದು ತಾನು ಹೊಸೆದು ಕೈಯ ಇನಿಯನೊಡನೆ ರಸಿಕ ತನದಿ ಸುಖಿಸುತಿಹುದು ಹರಿಣ ಜೋಡಿಯು ರಸಿಕ ಮನದಿ ಕನಸು ತುಂಬಿ ಕಸಿಯುತಿರುತಲವರ ಮನವ ಹೊಸತು ಹುರುಪು ತುಂಬಿ ಕೊಡುವ  ತನ್ನ ಬೆಳಕಲಿ ಪಂಕಜಾ.ಕೆ.  ರಾಮಭಟ್ ಮುಡಿಪು