Skip to main content

Posts

Showing posts from May, 2020

ಗೋಮಾತೆ

 ಗೋಮಾತೆ ಹುಲ್ಲು ತಿಂದು  ಹಾಲು ಕೊಟ್ಟು ನಮ್ಮ ಬೆಳೆಸಿದ ತಾಯಿಯು ಪ್ರೀತಿಯಿಂದ ಸಾಕಿ ಅದನು ಕೊಟ್ಟನಲ್ಲ ಕಟುಕಗೆ ಅಂಬಾ ಅಂಬಾ  ಎನುತ ಅಳುವ ಅದರ ಪುಟ್ಟ ಕಂದನು ತಾಯ ಬಿಟ್ಟು ಇರಲು ಆಗದೆ ಕಣ್ಣ ನೀರ ಸುರಿಸುವನು ಹಾಲು ಕುಡಿದು ಬೆಳೆದ ಋಣವ ಮರೆತ ಕಟುಕನೀತನು ದುಡ್ಡು ಎಣಿಸುತ ಕಾಮಧೇನುವ ಕಟುಕನಿಗೆ ಮಾರಿದ  ಕೃತಘ್ನನು ಪಂಕಜಾ.ಕೆ

ಶಾಯಿರಿ

ಅವಳು ನಕ್ಕಾಗ ಹುಣ್ಣಿಮೆಯ ಬೆಳದಿಂಗಳು ಅವಳು  ಆತ್ತಾಗ ಅಮವಾಸ್ಯೆಯ ಕಗ್ಗತ್ತಲು ಪಂಕಜಾ.ಕೆ

ಕವನ ಕವಿತೆಗೆ ಇರುವ ವ್ಯತ್ಯಾಸ

ಕವನ 1). ಇದರಲ್ಲಿ ನಾಲ್ಕು ಅಥವಾ ಆರು ಸಾಲಿನ ಚೌಕಟ್ಟಿರುತ್ತದೆ. 2). ಕವನದಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳು ಹೆಚ್ಚಾಗಿರುತ್ತವೆ. 3). ಪ್ರತಿ ಪದಗಳ ಬಳಕೆ ಓದುಗನಿಗೆ ಮುದ ನೀಡುವಂತೆ ರಚಿತವಾಗಿರುತ್ತದೆ. 4). ನವ, ನವೀನವಾದ ಪದಗಳ ಬಳಕೆಗೆ ಹೆಚ್ಚಿನ ಆಧ್ಯತೆ ಇರುತ್ತದೆ. 5). ಇದರಲ್ಲಿನ ವಿಷಯವಸ್ತು ಶೃಂಗಾರ ಹಾಸ್ಯದಿಂದ ಹಿಡಿದು ಎಲ್ಲವನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿರುತ್ತದೆ. 6). ಆಧುನಿಕತೆಗೆ ಒತ್ತು ನೀಡಿ ರಚಿಸಲಾಗುತ್ತದೆ. 7). ಸರಳ ಹಾಗೂ ಸುಂದರವಾದ ಪದಬಳಕೆಯಿಂದ ಕೂಡಿರುತ್ತದೆ. 8). ಕೆಲವುಕಡೆ ವಿವಿಧ ರೀತಿಯ ಪ್ರಾಸಕ್ಕೆ ತುಂಬಾ ಪ್ರಾಮುಖ್ಯತೆ ನೀಡಿ ರಚಿಸಲಾಗುತ್ತದೆ. 9). ಎರಡು ಅಥವಾ ಮೂರು ಸಾಲಿನಿಂದ ರಚಿತವಾದ ಕವನಗಳಿಗೆ ಹೈಕು/ಹನಿಗವನ/ಚುಟುಕು ಎಂದು ಕರೆಯಲಾಗಿದ್ದು, ಇದನ್ನು ಮನೋಹರವಾಗಿ, ಲಘುವಾಗಿ ರಚಿಸಬಹುದಾಗಿದೆ. 10). ವರ್ಣರಂಜಿತ ಪದಗಳಿಂದ ತುಂಬಿದ್ದು ಸಕಾರ ಮತ್ತು ವಿರಾಳ ಭಾವವನ್ನು ಮೂಡಿಸುವುದರಲ್ಲಿ ಸಫಲತೆಯನ್ನು ಕಂಡುಕೊಂಡಿರುತ್ತದೆ. _________________________ ಕವಿತೆ 1). ಇದರಲ್ಲಿ ಯಾವ ಚೌಕಟ್ಟುಗಳು ಇರುವುದಿಲ್ಲ. 2). ಇದರಲ್ಲಿ ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲ ವಿಷಯಗಳನ್ನಿಟ್ಟುಕೊಂಡು ಬರೆಯಬಹುದಾಗಿದೆ. 3). ಎಲ್ಲ ರೀತಿಯ ಪದಗಳ ಬಳಕೆ ಮಾಡಿ ಬರೆಯಲಾಗುತ್ತದೆ. 4). ಕವಿತೆ ಪ್ರಾಸ, ಸರಳತೆ ಹಾಗೂ ಲಯಬದ್ಧತೆಯಿಂದ ಕೂಡಿರುತ್ತದೆ. 5). ಬಹುತೇಕ ರಚನೆಗಳು ಹೆಚ್ಚೆಚ್ಚು ಸಾಲುಗಳಿಂದ ಕೂಡಿ

ಬಡತನ ಕಥನ ಕವನ ಕೊಡಗಿನ ಗೆಳತಿ

 ಬಡತನ  ಕಥನ ಕವನ   ಬಡತನದ  ಬವಣೆಯದು ಬಳಲುತಿವೆ  ಕಂದಮ್ಮಗಳು ಇರಲೊಂದು ಸೂರಿಲ್ಲ  ಉಡಲು  ಒಳ್ಳೆಯ ಬಟ್ಟೆಬರೆಯಿಲ್ಲ ಅಲೆಮಾರಿ ಜೀವನವು ಬೇಡಿತಿನ್ನುವುದೇ ಕಾಯಕ ಪೈಪಿನ ಒಳಾಂಗಣವ ನ್ನೇ ಹಾಸಿಗೆಯಾಗಿಸಿ ದಿನವ ತಳ್ಳುವರು ಉಡಲು ಉಣ್ಣಲು ಕೊರತೆ ಮಾಸಿಲ್ಲ ಮುಖದ ನಗು ಬೇಡಿ ತಂದ ತಿಂಡಿ ತೀರ್ಥಗಳ ಹಂಚಿ ತಿನ್ನುತ  ಜೀವ ಸವೆಸುವರು ತಂದೆ ತಾಯಿಗಳಿಲ್ಲ   ಇರಲೊಂದು ಸೂರಿಲ್ಲ ಅಕ್ಕ ಕೊಟ್ಟುದ ತಿಂದು  ಖುಷಿಯಪಡುತಿಹರು ಜ್ಞಾನ ದೀವಿಗೆ ಬೆಳಗಿದೆ ವಿದ್ಯೆ ಕಲಿಯಲು ಮನವಿದೆ ಚಿಂದಿ ಆಯುವ ಇವರಿಗೆಲ್ಲಿದೆ ಬೇಕೆನಿಸಿದುದನು ಪಡೆವ ಹಕ್ಕು ಪಂಕಜಾ.ಕೆ.ಮುಡಿಪು

ಮಾವು ನವಪರ್ವ

ಸ್ಪರ್ಧೆಗಾಗಿ ಮಾವು  ವಸಂತ ಕಾಲದಿ  ಮಾಮರವೆಲ್ಲಾ ಹೂಕಾಯಿಗಳಿಂದ ತುಂಬುವುದು ಮಾವಿನಕಾಯಿಯ ಕಾಣುತ ಮನದಲಿ ತಿನ್ನಲು ಆಸೆಯು ಮೂಡುವುದು ಮಾವಿನಕಾಯಿಯ ಮಿಡಿಯನು ಕೊಯ್ದು ಉಪ್ಪಿನಕಾಯಿಯ ಮಾಡುವರು ವರ್ಷದವರೆಗೆ ಭರಣಿಯಲಿಟ್ಟು ಊಟದ ಜತೆಗೆ ಸವಿಯುವರು ಮಾಗಿದ ಹಣ್ಣದು ಬಲು ರುಚಿ ಇರುತಲಿ ತನುವಿಗೆ ತಂಪನು ಕೊಡುತಿಹುದು ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್

ಹೃದಯ ಅಳುತಿದೆ ಚಿತ್ರ ಕವನ

ಹೃದಯ ಅಳುತಿದೆ ಮೃದುವಾದ ಹೃದಯದಲಿ ಮೃದು ಮಧುರ ಭಾವನೆಗಳು ಅರಳುತ್ತ ಮನವನ್ನು ತಣಿಸಿತಂದು ನಿನ್ನೊಲುಮೆ ಉಸಿರಾಗಿ ಬಾಳೆಲ್ಲಾ ಹಸಿರಾಗಿ ಚೆಲು ಹೂಗಳರಳುತ್ತ ಮುದ ತಂದಿತು ನೀ ನನ್ನ ಜತೆಯಲ್ಲಿ ಒಲವಿಂದ  ಕೂಡಿರಲು ಮನದಲ್ಲಿ ನವಿಲೊಂದು ನಲಿದಾಡಿತು ಅಬ್ಬರಿಸಿ ಬಂತೊಂದು ಸಂಶಯದ ಅಲೆಯಾಗಿ ಕಟ್ಟಿದ್ದ ಸೌಧಗಳು ಕುಸಿದುಬಿತ್ತು ಹೃದಯವದು ಅಳುತಿರಲು ನಿನ್ನೊಲವ ನೆನೆಸುತ್ತಾ ಬಾಳೇಕೆ ಈ ರೀತಿ ಸ್ಥಬ್ಧವಾಯಿತು ಚುಚ್ಚುವವರ ನುಡಿಗಳಿಗೆ ಕಿವುಡಾಗಿ  ಮನವಿರಲು ನರಳುತ್ತಿದೆ ಹೃದಯವದು ಚೂರು ಚೂರಾಗಿ ಅಳುತಿರುವ ಹೃದಯಕ್ಕೆ ಸಾಂತ್ವಾನವ ನೀಡಲಿಕೆ ನೀ ಮರಳಿ ಬರುವೆಯೆಂದು ಕಾಯುತಿರುವೆ ಪಂಕಜಾ ಕೆ ಮುಡಿಪು

ಕೃತಘ್ನ ನ್ಯಾನೊ ಕಥೆ ಕಾವ್ಯಕೂಟ ಪ್ರಥಮ

ಕೃತಘ್ನ   (ನ್ಯಾನೊ ಕಥೆ) ಪ್ರೀತಿ ವಿಶ್ವಾಸ ಕರುಣೆಯ ಕಡಲಾಗಿದ್ದ ,ಗೌರಿಯನ್ನು ಕಟುಕನು ಎಳೆದೊಯ್ಯುವಾಗ , ಅಂಬಾ ಎಂದು ಕರುಣಾಜನಕವಾಗಿ ಕೊಸರಾಡುತ್ತಾ ಮೂಕ ವಾಗಿ ರೋಧಿಸುವ,   ಆಕೆಯನ್ನು ಕಂಡಾಗ. ಎಂತವರಿಗಾದರೂ ಕರುಣೆ ಬಾರದಿರದು. ಆದರೆ ಅದನ್ನು ಸಾಕಿದ ಭೀಮಣ್ಣ ತನಗೆ ಸಿಕ್ಕಿದ ಹಣವನ್ನು ಲೆಕ್ಕಹಾಕುತ್ತ ಖುಷಿಯಲ್ಲಿದ್ದ.   ಪಂಕಜಾ.ಕೆ. ಮುಡಿಪು

ಫಲಿತಾಂಶ ನ್ಯಾನೊ ಕಥೆಕಾವ್ಯಾಕುಟ 30 5 2020

*ಕಾವ್ಯ ಕೂಟ ಬಳಗ* ❤️❤️❤️❤️❤️❤️❤️❤️ *ಎಲ್ಲರಿಗೂ ನಮಸ್ಕಾರಗಳು* 💜💙💜💙💜💙💜💙💜 *ದಿನಾಂಕ: ೩೦/೦೫/೨೦೨೦* *ವಾರ ;ಶನಿವಾರ* *ಪ್ರಕಾರ; ನ್ಯಾನೋ ಕಥೆ* *ದತ್ತ ಪದ; ಕರುಣೆ* *ನಿರ್ವಹಣೆ; ಶಶಿಧರ್ ಅಮೃತಸಿಂಚನ* 💞💓💞💓💞💓💞💓💞 *ಇಂದು ಸಾಹಿತ್ಯದಲ್ಲಿ ಹಲವು ಪ್ರಕಾರಗಳನ್ನು ಕಾಣಬಹುದು* *ಅದರಲ್ಲಿ "ನ್ಯಾನೋ ಕಥೆ" ಕೂಡಾ ಒಂದು* *ಅತ್ಯಂತ  ಕಡಿಮೆ ಸಾಲಿನಲ್ಲಿ ಅತ್ಯುತ್ತಮ ನೀತಿ ಮತ್ತು ಆದರ್ಶಗಳನ್ನು ಕಟ್ಟಿಕೊಡುವ ಸಾಹಿತ್ಯ ಪ್ರಕಾರ* 🔵🟢🔵🟢🔵🟢🔵🟢🔵🟢 *ಇಂದು ಬಳಗದಲ್ಲಿ "ಕರುಣೆ ಪದಕ್ಕೆ ಅತ್ಯುತ್ತಮ ನ್ಯಾನೋ ಕಥೆಗಳು ಹರಿದು ಬಂದವು* *ಫಲಿತಾಂಶ ಎನ್ನುವುದು ಆಯ್ಕೆಯ ದೃಷ್ಟಿಯೇ ಹೊರತು  ಬೇರೇನೂ ಅಲ್ಲ* *ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ* 🟪🟦🟩🟪🟦🟩🟪🟪🟦 *ಅತ್ಯುತ್ತಮ* ❤️ *ಭಾಗ್ಯ ನಂಜುಂಡಸ್ವಾಮಿ* ❤️ *ಶಿರ* ❤️ *ಸಿದ್ದು ಸ್ವಾಮಿ* 🌹🌹🌹🌹🌹🌹🌹🌹 *ಉತ್ತಮ* 💚 *ಡಾ ಸುರೇಶ್ ನೆಗಳಗುಳಿ* 💚 *ಶಮಾ ಜಮಾದಾರ* 💚 *ಶಶಿರೇಖಾ ವಿಜಯಪುರ* 💚 *ಶಕುಂತಲಾಶ.ಎಫ್ .ಕೆ* 🔵🟢🔵🟢🔵🟢🔵🟢🔵 *ಪ್ರಥಮ* 💛 *ಅಶೋಕ್.ಬೆಳೆಂಜೆ* 💛 *ಪಂಕಜಾ .ಮುಡಿಪು* 💛 *ಕವಿತಾ ಅಜಯ್* 💛 *ಶ್ಯಾಮ್ ಪ್ರಸಾದ್ ಭಟ್* 💛 *ವೆನ್ನಲಕೃಷ್ಣ* 💜🟩💜🟩🟪💜🟩💜🟩 *ದ್ವಿತೀಯ* 💙 *ಜಯಶ್ರೀ ರಾ ಮ* 💙 *ದೀಪಿಕಾ ಚಾಟೆ* 💙 *ಕುಮಾರ್ ಚಲವಾದಿ* 🟩❤️🟩❤️🟩❤️🟩❤️🟩 *ತೃತೀಯ* 🖤 *ಚಿದಾನಂದ .ಬಡಿಗೇರ* 🖤 *ಅನಸೂ

ಫಲಿತಾಂಶ ಹಾಯ್ಕು

*ಕಲ್ಲ ಕಠಿಣತೆ ತುಂಬಿದ ಕಲಿಗಾಲದಲ್ಲಿ ಬೆಣ್ಣೆಯಂತಹ ಮೃದು ಮನಸ ಕವಿ ಕುಲಕ್ಕೆ ನಮಸ್ಕಾರ*  🍁🍁🍁🍁🍁🍁🍁 *ಹಾಯ್ಕುಗಳ ನಿಯಮಗಳೆಲ್ಲ ಹಾಯಾಗಿ ಕವಿ ಚಿತ್ತದಿ ನೆಲೆನಿಂತಿದೆ. ಅದರ ಪರಿಣಾಮವೇ ಇಂದು ಬಳಗದಲಿಷ್ಟು ಹಾಯ್ಕು ಓಡಾಡಿದೆ. ಬರೆದ ಎಲ್ಲಾ ಚೈತನ್ಯರಿಗೂ ಜ್ಞಾನ ಅಕ್ಷಯವಾಗಲೆಂಬ ಹಾರೈಕೆ.....*   🌷🌷🌷🌷🌷🌷🌷🌷 *ಚಂದಿರನಂಗಳದಲ್ಲಿ ಮಿನುಗುತ್ತಲೇ ಮೋದ ಗೊಳಿಸುವ ತಾರೆಗಳ ಇಂದಿನ ರಚನೆಯ ಫಲಿತಾಂಶ ಈ ಕೆಳಗಿನಂತಿದೆ.* 🍀🍀🍀🍀🍀🍀 *ಅತ್ಯುತ್ತಮ* ----------------------------------- 🏆 .   *ಮಧು ಮೇಡಂ* *ಶಶಿ ವಸಂತ ಮೇಡಂ* 🌾🌾🌾🌾🌾🌾 *ಉತ್ತಮ* ------------------------------- *ಶೇಖಪ್ಪ ಸತ್ಯಪ್ಪನವರ* *ಜೀವಪರಿ ಮೇಡಂ* *ಪಂಕಜಾ ಮೇಡಂ* 🌿🌿🌿🌿🌿🌿🌿 *ತೀರ್ಪಿನ ಬಳಗದ ಆಯ್ಕೆ* –-------------------------- *ವಿಜಯ ಮೇಡಂ* *ಸುರೇಶ್ ನೆಗಳಗುಳಿ ಸರ್* *ಶಿರ ಸರ್*   🌺🌺🌺🌺🌺🌺 *ಇಂದಿನ ಉತ್ತಮ ವಿಮರ್ಶಕರು* """""""""""""""""""""""""""""""" *ಗೋವಿಂದಪ್ಪ ಸರ್* 💮💮💮💮💮💮 *ಇಂದಿನ ಅಡ್ಮಿನ್* ------------------------- *ಮಲ್ಲೇಶ್ ಜಿ* 🐇🐇🐇🐇🐇🐇 *ನಾಳಿನ ನಿರ್ವಾಹಕರು* ******

ಹಾಯ್ಕುಗಳು ಸ್ನೇಹ ಸಂಗಮದಲ್ಲಿ ಉತ್ತಮ

ಹಾಯ್ಕುಗಳು 1   ನಾನೆಂಬ ಹಮ್ಮು ಏಳಿಗೆಗೆ ಮಾರಕ ಬಿಡದಿದ್ದರೆ 2.ಪ್ರಕೃತಿಯಲಿ ಹೂವುಅರಳಿದಾಗ ನವೋಲ್ಲಾಸವೇ 3..ಬಾಳೆಂಬ ಬಂಡಿ ಸರಾಗಸಾಗುವಾಗ ಬೆಳದಿಂಗಳು 4. ಸಿಂಧೂರದಲಿ ಅವನನಲಿವೆಂಬ ಮುತ್ತೈದೆತನ ಪಂಕಜಾ.ಕೆ. ಮುಡಿಪು

ಗಜಲ್ ಅವನ ನೆನಪು ಕಾವ್ಯಕೂಟ

ಗಜಲ್. ಅಬ್ಬರಿಸುವ ಕಡಲಲೆಗಳನು ಕಂಡಾಗ ಅವನ  ನೆನಪು ಬೀಸುವ ತಂಗಾಳಿಯಲ್ಲಿ  ವಿಹರಿಸುವಾಗ ಅವನ ನೆನಪು  ನವೋಲ್ಲಾಸದಿಂದ ಕೂಡಿತ್ತು ನಮ್ಮ ಜೀವನ ಯಮುನಾತೀರದಲ್ಲಿ ಕಾಯುತ್ತಿರುವಾಗ  ಅವನ ನೆನಪು ಕಳೆದ ಸುಂದರ ಕ್ಷಣಗಳು ಮೈ ನವಿರೇಳಿಸುತ್ತಿದೆ ಬರುವೆಯೆಂದು ಹೇಳಿ ಬಾರದಿರುವಾಗ  ಅವನ ನೆನಪು ಎಷ್ಟೋ ವರುಷಗಳು ಅವನಿಗಾಗಿ ತಪವ ಗೈದಿರುವೆ  ಬೃಂದಾವನದಲ್ಲಿ  ಸುತ್ತಾಡುವಾಗ  ಅವನ ನೆನಪು ಮಾಧವನ ನಿರೀಕ್ಷೆಯಲಿ ಇರುವುದು ತಪ್ಪೇ ಹೇಳು ಪಂಕಜಾ ನನ್ನ ಒಲವಿನ ಸಂದೇಶ ತಿಳಿದೂ ದೂರವಾದಾಗ ಅವನ ನೆನಪು ಪಂಕಜಾ.ಕೆ. ಮುಡಿಪು

ಹನಿ ಹನಿ ಇಬ್ಬನಿ ಚೆಲುವೆ

ಚೆಲುವೆ ಕಣ್ವ ಋಷಿಗಳ  ಆಶ್ರಮದಲಿ ಖಗ ಮಿಗ ಗಳ  ಜತೆ ನಲಿಯುತ  ಬಾಲೆ ಶಕುಂತಲೆಯು ವಿಹರಿಸುತ್ತಿರಲಂದು ರಾಜ ದುಷ್ಯಂತನು  ಬಂದು ನಿಂತನು ಭೇಟೆಯಾಡುತ ಕಾಡ ಸೌಂದರ್ಯವ  ಕಣ್ಣು ತುಂಬುತಲಿ ಹಸಿರುವನದಲಿ ಚೆಲುವೆ ಸುಳಿಯಲು ಮೊದಲ ನೋಟಕೆ ಪ್ರೇಮ ಜ್ವಾಲೆಯು  ಮನವ ಸುಡುತಿರಲು ನೀರ ಕೇಳುವ  ನೆಪದಿ  ತರುಣಿಯ ಚೆಲುವ ವದನವ ಕಣ್ಣು ತುಂಬುತ  ಮೈಯ ಮರೆತಿರಲು ಮೋಹ ಬಲೆಯಲಿ ಸಿಲುಕಿ ರಾಜನು ಮುದ್ರೆ ಉಂಗುರ  ತೊಡಿಸಿ ತರುಣಿಯು  ಮನವ  ಸೆಳೆದಿಹನು ತನ್ನದೆಲ್ಲವ ಮರೆತು ರಾಜನು ಮೋಹ ಪಾಶದಿ ಸಿಲುಕಿ ನರಳುತ ಚೆಲುವೆ ಶಕುಂತಲೆಯ  ವರಿಸುತ ಮೈಯ ಮರೆಸಿದನು ಪಂಕಜಾ.ಕೆ. ಮುಡಿಪು

ಭಯಾನಕ ರಾತ್ರಿ ನೀತಿ ಕಥೆ ನವಪರ್ವದಲ್ಲಿ ಉತ್ತಮ

ಭಯಾನಕ  ರಾತ್ರಿ  ನೀತಿ ಕತೆ ಅದು ಅಮವಾಸ್ಯೆಯ ಕಾರಿರುಳಿನ ರಾತ್ರಿ  ವಸಂತ ತನ್ನ ಹಳ್ಳಿಯ ಮನೆಗೆ ಹೋಗಲು  ನಗರದಿಂದ ಬರುವ  ಬಸ್ ನಲ್ಲಿ ಕುಳಿತಿದ್ದ .ಬಸ್ ತುಂಬಾ ತಡವಾದುದರಿಂದ   ಊರಿನ ಬಸ್ಸ್ಟ್ಯಾಂಡ್ ಗೆ ಬರುವಾಗ ಸಂಪೂರ್ಣ ಕತ್ತಲು ಆಗಿತ್ತು .ಬಸ್ಟ್ಯಾಂಡ್ ನಿಂದ ವಸಂತನ ಮನೆಗೆ ಆ ರಾತ್ರಿಯಲ್ಲಿ ವಾಹನ ಸಿಗದೆ ಇದ್ದುದರಿಂದ ವಸಂತ  ನಡೆದೇ ಮನೆ ತಲುಪಬೇಕಾಯಿತು. ಭಯಾನಕ ಕಗ್ಗತ್ತಲಿನಿಂದ ತುಂಬಿದ ದಾರಿಯಲ್ಲಿ ಒಬ್ಬನೇ ಹೋಗುವಾಗ ಆತನಿಗೆ ತುಂಬಾ ಭಯವಾಗುತ್ತಿತ್ತು. ಏಕೆಂದರೆ ಆ ದಾರಿಯಲ್ಲಿ ರಾತ್ರಿ ಹೊತ್ತು ದೈವ್ವ ಗಳು ನಡೆದಾಡುತ್ತವೆ ಎಂದು ಊರಿನವರು ಹೇಳುತ್ತಿದ್ದರು.  ದೇವರ ಮೇಲೆ ಭಾರಹಾಕಿ ವಸಂತ ನಡೆಯುತ್ತ ಇರಬೇಕಾದರೆ, ಹಿಂದಿನಿಂದ ಕಾಲಸಪ್ಪಳ ಕೇಳಿದಂತಾಗಿ ವಸಂತ ಭಯದಿಂದ ಬೇಗ ಬೇಗ ಹೆಜ್ಜೆ ಹಾಕಿ ನಡೆಯಲು ಪ್ರಾರಂಭಿಸಿದ. ಹಿಂದೆ ತಿರುಗಲು ಆತನಿಗೆ ತುಂಬಾ ಭಯವಾಗಿತ್ತು ,ಸುಮಾರು ದೂರ ಬಂದ ಮೇಲೆ ಧೈರ್ಯ ಮಾಡಿ ಹಿಂತಿರುಗಿ ನೋಡಿದಾಗ ಬಿಳಿಯ ಬಟ್ಟೆ ತೊಟ್ಟ ವ್ಯಕ್ತಿ ಗಾಳಿಯಲ್ಲಿ ಚಲಿಸುವಂತೆ ಕಂಡು ಆತ ಒಂದೇ ಉಸಿರಿಗೆ ಓಡಿ ಮನೆ ತಲಪಿ ಬಿಟ್ಟ . ತನ್ನ ಭಯವನ್ನು ಮನೆಯವರಲ್ಲಿ ಹೇಳಲು ನಾಚಿಕೆಯಾಗಿ ಆತ ಯಾರಲ್ಲೂ ಹೇಳಲಿಲ್ಲ ಮರುದಿನ ಬೆಳಗಾದಮೇಲೆ ವಸಂತ ತಾನು ನಿನ್ನೆ ಕಂಡುದು ದೈವ್ವ ವೇ ಅಲ್ಲವೇ ಎಂದು ತಿಳಿಯಲು ತಾನು ನಿನ್ನೆ ಬಂದ ದಾರಿಯಲ್ಲಿ ಸ್ವಲ್ಪ ದೂರ ಹೋದಾಗ  ಅಲ್ಲಿ ಗದ್ದೆಗೆ ಹಕ್ಕಿಗಳು ಬಾರದಂತೆ ಕಟ್ಟಿದ್ದ ಬೆರ್ಚಪ್ಪನ  ಬೊಂಬೆ ಆತನನ್ನು 

ಚಿತ್ರದುರ್ಗದ ಕೋಟೆ

ಚಿತ್ರ ಕವನ ಸ್ಪರ್ಧೆಗಾಗಿ ಚಿತ್ರದುರ್ಗದ ಕೋಟೆ ಚಿತ್ರ ದುರ್ಗದ ಕಲ್ಲಿನ ಕೋಟೆ ಗಂಡುಗಲಿ ಗಳು ಆಳಿದ ಕೋಟೆ ವೀರವನಿತೆಯರು ಬಾಳಿದ ನಾಡು ಸಂಸ್ಕೃತಿ ಕಲೆಗಳ ಚಿನ್ನದ ಬೀಡು ಒನಕೆ ಓಬವ್ವ ರಕ್ಷಿಸಿದ ಕೋಟೆ ಏಳು ಸುತ್ತಿನ ಕಲ್ಲಿನ ಕೋಟೆ ಮದಕರಿ ನಾಯಕ ಆಳಿದ ಕೋಟೆ ಸಿಡಿಲುಗು ಜಗ್ಗದ ಉಕ್ಕಿನ ಕೋಟೆ ಪ್ರವಾಸಿಗಳ ಮನಸೆಳೆಯುವ ತಾಣ ಚಾರಣ ಪ್ರೀಯರ ಮೆಚ್ಚಿನ ತಾಣ  ಬಯಲು ಸೀಮೆಯ ಈ ನಾಡು ಚಿತ್ರದುರ್ಗದ ಸಿರಿನಾಡು ಹತ್ತು ಹಲವು ದೇವಸ್ಥಾನಗಳಿಂದ ತುಂಬಿದ ನಾಡು ಭವ್ಯ ಭಾರತದ ಹೆಮ್ಮೆಯ ನಾಡು ಪ್ರಕೃತಿ ಸಿರಿಯು ತುಂಬಿದ ಬೀಡು ಚಿತ್ರದುರ್ಗದ ಈ ನಾಡು ಪಂಕಜಾ.ಕೆ .ಮುಡಿಪು ಹೆಸರು .ಪಂಕಜಾ.ಕೆ. ವಿಳಾಸ ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಶ್ರೀ ಗಣೇಶ ಕೃಪಾ.ಮುಡಿಪು. ಅಂಚೆ..ಕುರ್ನಾಡು  574153 ದ.ಕ. ಮೊಬೈಲ್ ನಂಬರ್ 9964659620

ಒಲವಿನ ಗಣಿ ಸ್ನೇಹಸಂಗಮದಲ್ಲಿ ಉತ್ತಮ

.ಒಲವಿನ ಗಣಿ ಮುದ್ದಾದ ಮಗಳಾಗಿ ನಾ ಬಂದೆ ಇಳೆಗಂದು ಬೆಚ್ಚನೆಯ ಅಮ್ಮನ ಮಡಿಲಿಂದ ಜಾರಿ ಹೆಣ್ಣೆಂದು ಜರಿಯದೆಯೇ ಕೊರತೆಯನು ಮಾಡದೆಯೇ  ವಿದ್ಯೆ ಬುದ್ದಿಗಳ ಕಲಿಸಿ ಬಾಳು ಕೊಟ್ಟ ಅಪ್ಪ ಸಿರಿದೇವಿ ನೀ ಮಗಳೇ ಮನೆ ಬೆಳಕು ನೀನಾದೆ ನೀ ನನ್ನ ಭಾಗ್ಯನಿಧಿ ಈ ಮನೆಯ ಮುತ್ತು ದುಃಖಗಳ  ಸಹಿಸುತ ಎದುರಿಸುತ ಕಷ್ಟಗಳ ದೈರ್ಯವನು  ಮನಕೆ ತಾ ತುಂಬಿ  ನಾ ಕಂಡ ಕನಸುಗಳು ಸಾಕಾರವಾಗಲೆಂದು ನೆರವಿನಾ ಹಸ್ತವನು  ಚಾಚಿ ನಡೆಸಿ ಗೆದ್ದಾಗ ಹುರಿದುಂಬಿಸಿ ಸೋತಾಗ  ಸಾಂತ್ವನಿಸಿ ಮನಕಂದು ದೈರ್ಯವನು ತಾನು  ತುಂಬಿ ಬೆಳೆಸಿದನು ನನ್ನಪ್ಪಕಷ್ಟಗಳ ಸೋಕಿಸದೆಯೇ ನಗು ನಗುತ  ಸಂಸಾರ ರಥವ ಎಳೆದು ಮತ್ತೊಮ್ಮೆ ಹುಟ್ಟಿ ಬಂದರೂ ತೀರಿಸಲಾರೆ ಅಪ್ಪ ನಿನ್ನ ಋಣ ನೀನೇ ನನ್ನ ಬಾಳಿನ ಮೊದಲ ನಾಯಕ ಪಂಕಜಾ.ಕೆ ಮುಡಿಪು

ಕಾವ್ಯಾಕೂಟ ದಲ್ಲಿ ಪ್ರಥಮಜಡೆ ಕವನ

ಜಡೆ ಕವನ ಆಗಸದಷ್ಟು ಕನಸು ಆಗಸದಲಿ ತುಂಬಿದೆ  ಬೆಳ್ಳಿ ಮೋಡ ಮೋಡದ ಎಡೆಯಲ್ಲಿ ಮಿನುಗುವನು ರವಿ ರವಿ ಮೂಡಿದಾಗ ಬಾನಲ್ಲಿ ಬಣ್ಣಗಳ ತೋರಣ ತೋರಣವ ಕಟ್ಟಿ ನಲಿಯುತ್ತಿದೆ ಮನ ಮನದಲಿ ತುಂಬಿದೆ ಭರವಸೆಯ ಹೊಂಗಿರಣ ಹೊಂಗಿರಣದಲಿ ಬೆಳ್ಳಿ ಮೋಡದ ಅಲೆ ಅಲೆಗಳು ಅಪ್ಪಳಿಸಿ ಕನಸುಗಳು ನುಚ್ಚುನೂರು ನುಚ್ಚುನೂರಾದ ಕನಸುಗಳ ಕಂಡು ಕಣ್ಣೀರು ಕಣ್ಣೀರ ಧಾರೆ ಹರಿದು ಮನಸು ಗಟ್ಟಿ ಗಟ್ಟಿಯಾದ ಮನದಲ್ಲಿ ಆಸೆಯ  ಕಿಡಿ ಕಿಡಿಗೆ ತಗಲಿದ ಬೆಂಕಿಯಲಿ ಅರಳಿತು ಹೂವು ಹೂವಿನ ಮಧು ಹೀರಲು ಬಂದಿವೆ ದುಂಬಿಗಳು ದುಂಬಿಗಳ ದಂಡು ಕಂಡು  ಮನಕೆ ಆಹ್ಲಾದ ಆಹ್ಲಾದ ತುಂಬಿ ಕುಣಿಯುತ್ತಿದೆ ಮನಸು ಮನಸಿನಾಗಸದಲಿ ತುಂಬಿತು ಕನಸು ಕನಸು ನನಸಾಗಲು ಪಡಬೇಕು ಕಷ್ಟ ಕಷ್ಟದ ದುಡಿಮೆಯಿಂದ ಬಾಳು ಹಸನು ಹಸನಾದ ಮನಸಿನಲಿ ತುಂಬಿತು ಒಲವು ಒಲವು ಮೂಡಿದಾಗ ಕಂಡಿತು ಗೆಲುವು  ಗೆಲುವು ತಂದಿತು ಹುರುಪು ಬಾಳಿನ ಅಗಸದಲಿ ಪಂಕಜಾ.ಕೆ ಮುಡಿಪು

ಬದುಕಿನ ಬಂಡಿ ಹನಿ ಹನಿ ಇಬ್ವಣಿ ಸಮಾಧಾನಕರ ಬಹುಮಾನ

ಬದುಕಿನ ಬಂಡಿ ಬದುಕಿನಾ ಬಂಡಿಯಲಿ ಮೆರೆಸಿದ್ದೆ ನನ್ನ ನೀ ಎನ್ನ ಬಾಳಸಖಿ ಸುಖವಾಗಿರು ಚಿನ್ನ ನಗು ನಗುತ್ತಾ ಎಳೆದಿದ್ದೆ  ಬಾಳ ತೇರನು ಅಂದು ಬಾಳ ಸಂಜೆಯಲಿ ನಾವಿಬ್ಬರೀಗ ಒಂದು ಚದುರಿದವು ಪ್ರೀತಿಯಿಂದ ಸಾಕಿದ  ಕರುಳ ಕುಡಿಗಳು ಭಾರವಾಯಿತವರಿಗೆ ಹೆತ್ತವರ ನೆರಳು ಬೀದಿಗಟ್ಟಿದರವರ  ಕರುಣೆಯನು ಮರೆತು ಎಳೆಯುವೆನು ಜೀವನದ ಬಂಡಿಯನು ಸೋತು ಹೆತ್ತಬ್ಬೆ ಅಪ್ಪನನು ಮರೆಯುವನು ನೀಚ ತಕ್ಕಡಿಯು ತಿರುಗುವುದ ತಿಳಿಯಲಾರನೀತ ಬದುಕ ಬಂಡಿಯ ಎಳೆಯಲು ಸೋತಿರುವೆ ನಾನು ಎಳೆಯಲೇ ಬೇಕಾಗಿದೆ ಮೈ ಬಗ್ಗಿಸಿ  ನಿನಗಾಗಿ ನಾನು ಪಂಕಜಾ.ಕೆ ಮುಡಿಪು

ಗಜಲ್ ಅಪ್ಪ

ಗಜಲ್ ಕಂಡ ಕನಸುಗಳು ಸಾಕಾರ ವಾಗಲು ನೆರವಾದೆ ಅಪ್ಪ ಕಳೆದ ಬದುಕನು ಮರೆತು ಬಾಳಲು ಕಲಿಸಿದೆ ಅಪ್ಪ ಕಲ್ಪನೆಯೇ ಜೀವತಳೆದು ವಾಸ್ತವಕೆ ಕಳೆ ಬಂತು ನೋಡು ಬಂದುದನ್ನು ಎದುರಿಸಲು ಧೈರ್ಯ ತುಂಬಿದೆ ಅಪ್ಪ ಕಷ್ಟ ನಷ್ಟ ಗಳೆಷ್ಟೋ ಇದ್ದರೂ ಅಂಜಲಿಲ್ಲ ನೀನು ನಗು ನಗುತ ಸಂಸಾರ ನೌಕೆಯನು ದಡ ಸೇರಿಸಿದೆ ಅಪ್ಪ ನಿನ್ನ ನೆನಪು ಮನಕೆ ಸಾಂತ್ವನವ ತುಂಬುತಿದೆ ನಿತ್ಯ  ನೀ ತುಂಬಿದ ಆತ್ಮವಿಶ್ವಾಸ ದಾರಿ ತೋರಿಸುತಿದೆ ಅಪ್ಪ  ನಿನ್ನಂತಹ ಅಪ್ಪನನ್ನು ಪಡೆದ ಪಂಕಜಾಳ ಹುಟ್ಟು ಧನ್ಯ ನಿನ್ನ ಧೀಮಂತ ವ್ಯಕ್ತಿತ್ವ ಬಾಳಿಗೆ ಬೆಳಕಾಗಿದೆ ಅಪ್ಪ ಪಂಕಜಾ.ಕೆ. ಮುಡಿಪು

ಹನಿ ಹನಿ ಇಬ್ಬನಿ ಬಳಗದ ಸ್ಪರ್ಧೆಗಾಗಿ. ಕಳಿಸಿದ ಬರಹಗಳು

[20/04, 12:24 PM] pankajarambhat: ಕುವೆಂಪು ತಂಡ ಹನಿ ಹನಿ ಇಬ್ಬನಿ  ವಿಸ್ಮಯ ಸ್ಪರ್ಧೆಗಾಗಿ  ಸ್ಪರ್ಧೆ..1 ಹನಿಕವನಗಳು ಹನಿಕವನ..1 ಬೇಡಿಕೆ ಕಾಲವನು ಜಯಿಸಿದೆ ಎಂಬ ಹಮ್ಮಿನಲಿ ಬೀಗುತಿದ್ದರು ಲೋಕದ ಜನ ಬಂದ ಕಂಟಕವ ಪರಿಹಾರಕೆ ತತ್ತರಿಸುತ ಬೇಡುತಿರುವರು ಅಭಯಕಾಗಿ  ಕಾಣದ  ಶಿವನ  ಹನಿ ಕವನ 2 ಶಿಕ್ಷೆ ಪ್ರಕೃತಿಯ ಮಡಿಲಲ್ಲಿತ್ತು ಆರೋಗ್ಯ ಸಂಪತ್ತು ಹರಣ ಮಾಡಿದ ಮಾನವ ಆಗುತ ತಾನು ದಾನವ ಮಾಡಿದ ಪಾಪದ ಫಲಕೆ ಕೊಟ್ಟಿರುವಳೇ ಶಿಕ್ಷೆ ಜನಕೆ ಕಾಲನ ಚಕ್ರವು ತಿರುಗಿದಾಗ ಲೋಕವೇ ಆಗಿದೆ ಅಡಿಮೇಲು [21/04, 2:11 PM] pankajarambhat: ಕುವೆಂಪು ತಂಡ  ಹನಿ ಹನಿ ಇಬ್ಬನಿ  ವಿಸ್ಮಯ ಸ್ಪರ್ಧೆಗಾಗಿ ಸ್ಪರ್ಧೆ  ..2 ಭಾವಗೀತೆ ನಿರೀಕ್ಷೆ ಕಾಡಿನ ದಾರಿಯ ಮದ್ಯದಲಿ ತನ್ನಯ ಮುರುಕಲು ಗುಡಿಸಿಲಲಿ ಶ್ರೀ ರಾಮನ ದಾರಿಯ ಕಾಯುತಲಿ ಕುಳಿತಿಹಳು ಶಬರಿಯು ಕಾತರದಿ ನಿತ್ಯವೂ ಕಾಡನು ಸುತ್ತುವಳು ಬಗೆ ಬಗೆ ಹೂಗಳ ಕೊಯ್ಯುವಳು ತರ ತರ ಹಣ್ಣನು ಆರಿಸಿ ಹೆಕ್ಕುತ ಶ್ರೀ ರಾಮನ ದಾರಿಯ ಕಾಯುವಳು ಬಂದೇ ಬರುವನು ಎನ್ನುತಲಿ ಕಣ್ಣನು ಹಿಗ್ಗಿಸಿ  ಇಣುಕುವಳು ಸಹನೆಯಲಿ ದಾರಿಯ ಕಾಯುತಲಿ ನಿರೀಕ್ಷೆಯ ತಪದಲಿ ಬಳಲಿದಳು   ಹೆಕ್ಕಿದ ಹಣ್ಣಿನ ರುಚಿಯನು ನೋಡಿ ಸಿಹಿಯಾದ ಹಣ್ಣನು ತೆಗೆದಿಡುತ ತನ್ನನ್ನು ತಾನೇ ಮರೆಯುವಳು  ಭಕ್ತಿಯ  ಮನದಲಿ ತುಂಬುತ ಕಾಯುವಳು [23/04, 2:27 PM] pankajarambhat: ಹನಿ ಹನಿ ಇಬ್ಬನಿ ವಿಸ್ಮಯ ಸ್ಪರ್ಧೆಗಾಗಿ. ಸ್ಪರ್ಧೆ ...3 (ಮಕ್ಕಳ ಕವನ) ಹುಣ್ಣಿಮೆ

ಉಪ್ಪಿಟ್ಟು ಪರೋಟ

ಉಪ್ಪಿಟ್ಟು ಪರೋಟ ಬೆಳಿಗ್ಗೆ ತಿಂಡಿಗೆ ಮಾಡಿದ ಉಪ್ಪಿಟ್ಟು ಜಾಸ್ತಿಯಾಯಿತೆ  ?ಸಾಯಂಕಾಲ ಅದನ್ನೇ ತಿನ್ನಲು  ಇಷ್ಟವಿಲ್ಲವೇ?ಹಾಗೆಂದು ಈ ತುಟ್ಟಿ ಯುಗದಲ್ಲಿ ಅದನ್ನು ಚೆಲ್ಲಲು ಮನಸು ಬರುವುದಿಲ್ಲವೇ ಹಾಗಿದ್ದರೆ ಇಲ್ಲಿದೆ ನೋಡಿ ರುಚಿಯಾದ ಪರೋಟ ಮಾಡುವ ವಿಧಾನ....ಬೆಳಿಗ್ಗಿನ ತಿಂಡಿಗೆ ಆಗಿ ಮಿಕ್ಕಿದ ರವೆ ಉಪ್ಪಿಟ್ಟಿಗೆ ಹಸಿಮೆಣಸು ಬೇವಿನಸೊಪ್ಪು ನೀರುಳ್ಳಿ  ಕತ್ತರಿಸಿ ಸೇರಿಸಿ ಸ್ವಲ್ಪ ನೀರು ಸೇರಿಸಿ ಗೋಧಿ ಹುಡಿ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಚಪಾತಿಯಂತೆ ಲಟ್ಟಿಸಿ  ತವಾದಲ್ಲಿ  ತುಪ್ಪ ಹಾಕಿ ಎರಡೂ  ಬದಿ ಬೇಯಿಸಿ ತೆಗೆಯಿರಿ ಸಾಯಂಕಾಲದ ತಿಂಡಿಗೆ ರುಚಿಯಾದ ಉಪ್ಪಿಟ್ಟು ಪರೋಟ ರೆಡಿ  ಚಟ್ನಿ  ಜಾಮ್ ಸಾಸ್ ಇತ್ಯಾದಿ ಯ ಜತೆ ನಂಜಿಕೊಂಡು ಇಲ್ಲವೇ ಹಾಗೆಯೇ ಬೇಕಿದ್ದರೂ ತಿನ್ನಬಹುದು   ಮಾಡಿ ನೋಡಿ ಹೇಗಿದೆ ಎಂದು ಹೇಳಲು ಮರೆಯಬೇಡಿ ಮತ್ತೆ 

ವಿಶ್ವಾಮಿತ್ರನ ತಪಸ್ಸು.ಸ್ನೇಹ ಸಂಗಮ

ವಿಶ್ವಾಮಿತ್ರ ನ ತಪಸ್ಸು ಬ್ರಹ್ಮರ್ಷಿ ಪಟ್ಟದ ಆಸೆಗೆಬಿದ್ದು ಘೋರ ತಪಸ್ಸಿಗೆ ಕುಳಿತನಾರಾಜ ಹಿಡಿದಿಹ ತಪವನು ನೋಡುತ ಬೆಚ್ಚಿದ  ದೇವತೆಗಳ ಒಡೆಯ ದೇವೇಂದ್ರ  ತಪವದು ಫಲಿತರೆ ಕಂಟಕ ತನಗಿದೆ ಎನ್ನುತ ಚಿಂತಿಸಿದನಾ ದೇವೇಂದ್ರ ವಿಶ್ವಾಮಿತ್ರರ ತಪವನು ಕೆಡಿಸಲು ಕಳುಹಿಸಿದ ಸುರಸುಂದರಿ  ಮೇನಕೆಯ ಕುಳಿತಿಹ ಋಷಿಯನು ನೋಡುತ ಮನದಲಿ ಭಯವದು ಸುಳಿಯಿತು ತರುಣಿಯಲಿ ಹಕ್ಕಿಗಳಿಂಚರದ ಜತೆ  ಇನಿದನಿ ಸೇರಿಸುತ ತಪವನು  ಕೆಡಿಸಲು ಹಾಡನು ಹಾಡಿದಳು  ಬಗೆ ಬಗೆ ನೃತ್ಯವ ಲಗುಬಗೆಯಿಂದಲಿ ಮಾಡುತ ಋಷಿಯನು ಕೆಣಕಿದಳು ಸುಳಿ ಸುಳಿಯುತ ಎಡೆಯಲಿ ಹಾಡುತ ಕೆಡವಿದಳಾಕೆ ತನ್ನ ಮೋಹದ ಬಲೆಯಲ್ಲಿ ಕಣ್ಣನು ಬಿಟ್ಟಿಹ ವಿಶ್ವಾಮಿತ್ರನು  ನೋಡಿದ ತರುಣಿಯ ಲಾಷ್ಯವನು ತಪವನು ಬಿಟ್ಟು ತರುಣಿಯ ತಬ್ಬುತ ದಿನಗಳ ಕಳೆದನು ಮೋದದಲಿ ಪಂಕಜಾ.ಕೆ.

ಚದುರಂಗದಾಟ ನವಪರ್ವ

ಚದುರಂಗದಾಟ(ಹನಿಕವನ) ಸ್ಪರ್ಧೆಗಾಗಿ  ಬಾಳೆಂಬ ಚಂದುರಂಗದಾಟದಲಿ ದೇವನಾಡಿಸಿದಂತಾಡುವ ಕಾಯಿಗಳು  ಸೋಲು ಗೆಲುವೆಲ್ಲಾ ಅವನ ದಯೆ ಇರಬೇಕು ನಂಬಿಕೆಯು ಬಾಳಲೆಂದೂ ಕಷ್ಟ ಸುಖವೆನಿದ್ದರೂ ಅವನ ಕೊಡುಗೆ ಗೆಲ್ಲಬೇಕು ದೇವನಾಡುವ  ಈ ಆಟದಲಿ ದ್ವೇಷ ಅಸೂಯೆಯ ಬಿಟ್ಟು ಬಿಡು ಸ್ನೇಹ ಪ್ರೀತಿ ವಿಶ್ವಾಸ ಹರಡಿ ಬಿಡು ಪಂಕಜಾ.ಕೆ.ಮುಡಿಪು. ನಿವೃತ್ತ. ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್  

ಛಲ ಕಾವ್ಯಕೂಟ

 ಛಲ   ಕಲ್ಲಿನ ಎಡೆಯಲ್ಲಿ ತಲೆಯೆತ್ತಿ ನಿಂತಿದೆ ಬದುಕ ಬೇಕೆನ್ನುವ  ಛಲವನ್ನು ತುಂಬಿದೆ ಹುಟ್ಟಿಸಿದ ದೇವನವ ಕೊಡದಿರುವನೆ ಬದುಕ ಸೋಲಿನಲು ಗೆಲುವನ್ನೇ  ಕಾಣಬೇಕು ನಿತ್ಯ ವಿಸ್ಮಯವು ಈ ಜಗವು ದೇವನ ಕೊಡುಗೆ ಬಾಳಬೇಕು  ಅನುದಿನವೂ  ಸಹಿಸುತ್ತ ನೋವು ಅವಕಾಶಗಳು ಬಂದಾಗ ಕೈ ಚಾಚಿ  ಬೆಳೆಯುತ ತಲೆಯೆತ್ತಿ ನಿಲ್ಲಬೇಕು   ಬಾಳಲ್ಲಿ ಗೆಲ್ಲುತ ಕಷ್ಟ ಸುಖ ಎರಡನ್ನು ಸಮವಾಗಿ ಕಾಣುತ ದೇವನ ಸ್ಮರಣೆಯನು ಅನುದಿನವು ಮಾಡುತ ಪಂಕಜಾ.ಕೆ.ಮುಡಿಪು  

ರೈತ ಮತ್ತು ಭಾರತ. ವಾಟ್ಸಪ್ ಕವಿಗೋಷ್ಟಿಗಾಗಿ

ರೈತ ಮತ್ತು ಭಾರತ  ಹಗಲು ರಾತ್ರಿ ಕಷ್ಟಪಟ್ಟು ದುಡಿವ ನಮ್ಮ ರೈತನು ಬೇಳೆಕಾಳು ಬೆಳೆದು ಜನರ ಹಸಿವ ಕಳೆಯುತಿರುವನು ಬಿಸಿಲು ಮಳೆ  ಗಾಳಿಗೆಲ್ಲಾ ಬೆಚ್ಚಿ ಬೆದರಲಾರನು ಕಾಯಕವೇ ಕೈಲಾಸ ಎನುತ ದುಡಿಯುತಿರುವನು ಕೃಷಿಯಲ್ಲೇ ಖುಷಿಯ ಕಾಣುವ ಮನವು  ಇರುವ ರೈತನು ಭೂಮಿ ತಾಯಿಯ ಸೇವೆ ಮಾಡುತ ತಾನು ತೃಪ್ತಿ ಪಡೆವನು ಲಕ್ಷ ಲಕ್ಷ ಸಾಲ ಮಾಡಿ ಹೊಲವ ಉತ್ತು ಬಿಡುವನು ಅತಿವೃಷ್ಟಿ ಅನಾವೃಷ್ಟಿ ಕಾಟದಲ್ಲಿ  ನಿತ್ಯ ನರಳುತಿರುವನು ಕೃಷಿ ಪ್ರಧಾನ ವಾಗಿರುವ ದೇಶ ನಮ್ಮ ಭಾರತ ರೈತನ ಶ್ರಮವ ತಿಳಿಯಲಾರದ ಮೂಢರಿಂದ ತುಂಬಿದೆ ಬೆಳೆದ ಬೆಳೆಗೆ ಫಲವು ಸಿಗದೆ ರೈತ  ನೋಯುತಿರುವನು ಸಾಲದ ಉರುಳಿನಲ್ಲಿ ತಾನು ಜೀವ ಸವೆಸುತ್ತಿರುವನು   ಕಾಲ ಕಾಲಕೆ ಮಳೆಯು ಇಲ್ಲದೆ ಬಳಲುತ್ತಿರುವ ನೀತನು ಹಸಿದ ಹೊಟ್ಟೆಯು ಹರಿದ ಬಟ್ಟೆಯು ಬದುಕ ಬವಣೆಯ ತಿಳಿಸಿದೆ ಕಾಲ ಕಾಲಕೆ  ಮಳೆಯು ಸುರಿಯುತ ಬದುಕ ಬವಣೆಯು ನೀಗಲಿ ಅನ್ನ ಬೆಳೆಯುವ ರೈತನರಮನೆಯಲಿ ಹೊನ್ನ ಕಣಜವು ತುಂಬಲಿ ಪಂಕಜಾ ಕೆ ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್

ಶಿಶುಗೀತೆ ಬಣ್ಣದ ಕುದುರೆ ನವಪರ್ವ ದಲ್ಲಿ ಉತ್ತಮ

ಬಣ್ಣದ ಕುದುರೆ  (ಶಿಶು ಗೀತೆ) ಅಣ್ಣನು ತಂದ ಬಣ್ಣದ ಕುದುರೆ  ಟಕ ಟಕ ಸದ್ದನು ಮಾಡುವ ಕುದುರೆ ಮಿರಿ ಮಿರಿ ಮಿನುಗುವ ಚಂದದ ಕುದುರೆ ಲಾಲನೆ ಪಾಲನೆ ಬೇಡದ ಕುದುರೆ ನನ್ನನು ಕೂರಿಸಿ  ಕುಣಿಸುವ ಕುದರೆ ಕಾಲಿಲ್ಲದೆಯೇ  ಕುಣಿಯುವ ಕುದುರೆ ತೂಗುತ ಬಾಗುತ ಆಡುವ ಕುದುರೆ ನನ್ನಯ ಮೆಚ್ಚಿನ ಮರದ ಕುದುರೆ ಪಂಕಜಾ.ಕೆ.ಮುಡಿಪು

ಶಿಶುಗೀತೆ ಬಣ್ಣದ ಕುದುರೆ ನವಪರ್ವ ದಲ್ಲಿ ಉತ್ತಮ

ಬಣ್ಣದ ಕುದುರೆ  (ಶಿಶು ಗೀತೆ) ಅಣ್ಣನು ತಂದ ಬಣ್ಣದ ಕುದುರೆ  ಟಕ ಟಕ ಸದ್ದನು ಮಾಡುವ ಕುದುರೆ ಮಿರಿ ಮಿರಿ ಮಿನುಗುವ ಚಂದದ ಕುದುರೆ ಲಾಲನೆ ಪಾಲನೆ ಬೇಡದ ಕುದುರೆ ನನ್ನನು ಕೂರಿಸಿ  ಕುಣಿಸುವ ಕುದರೆ ಕಾಲಿಲ್ಲದೆಯೇ  ಕುಣಿಯುವ ಕುದುರೆ ತೂಗುತ ಬಾಗುತ ಆಡುವ ಕುದುರೆ ನನ್ನಯ ಮೆಚ್ಚಿನ ಮರದ ಕುದುರೆ ಪಂಕಜಾ.ಕೆ.ಮುಡಿಪು

ರುಬಾಯಿ ಬಗ್ಗೆ

*ರುಬಾಯಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ದಯವಿಟ್ಟು ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ* ರುಬಾಯತ್ ಎನ್ನುವುದು ನಾಲ್ಕು ಪಾದಗಳುಳ್ಳ ಸಣ್ಣ ಪದ್ಯ. ಮೂರನೆ ಪಾದವನ್ನು ಬಿಟ್ಟರೆ ಉಳಿದ ಪಾದಗಳ ಅಂತ್ಯಾಕ್ಷರಗಳು ಪ್ರಾಸಬದ್ಧವಾಗಿರುವ ಕವಿತಾರಚನೆ. ಈಜ ರೀತಿಯ ಪದ್ಯಗಳನ್ನು ಪರ್ಷಿಯದಲ್ಲಿ ಜಾರಿಗೆ ತಂದವ ಷೇಕ್ ಅಬುಲ್ ಸೈಯದ್ ಬಿನ್ ಅಬುಲ್ ಖಯಿರ್ ಎನ್ನುವ ಸೂಫಿ. ಈ ರಚನೆ ಸೂಕ್ಷ್ಮರೀತಿಯ ಭಾವಪ್ರಕಾಶಕ್ಕೆ ಅನುಕೂಲ ವೆಂಬುದನ್ನು ಅರಿತ ಉಮರ್ ಅದನ್ನೇ ತನ್ನ ಮಾಧ್ಯಮವನ್ನಾಗಿ ಬಳಸಿಕೊಂಡ, ರಚನೆ ಹೇಗಿದ್ದರೇನು. ಅಂತರಂಗವನ್ನು ಕಲಕುವ, ಬುದ್ಧಿಯನ್ನು ಕೆರಳಿಸುವ ಭಾವಶಕ್ತಿ ಕವಿಗಿದ್ದರಲ್ಲವೇ ತಂತ್ರವೂ ಅಮರವಾಗುವುದು? ರುಬಾಯುತ್ ಎನ್ನುವುದು ಖ್ಯಾತಿ ಪಡೆಯಲು ಭಾವಸಂಪನ್ನನಾದ ಉಮರನೇ ಕಾರಣ. ರುಬಾಯಿ‌ ಸಾಹಿತ್ಯ ಬೆಳೆದು ಬಂದ ಹಾದಿ ಅಧ್ಯಯನ ಮಾಡಿರುವಿರೆಂದು ಭಾವಿಸಿರುವೆ. ಕೇವಲ ನಾಲ್ಕು ಸಾಲುಗಳಿರುವ ಎಲ್ಲ ಬರಹವು ರೂಬಾಯಿ ಆಗಲಾರದು. ಮೂರನೆಯ ಸಾಲಿಗೆ ಬರುವಷ್ಟರಲ್ಲಿ ಒಳಾರ್ಥದ ಲೇಪನವಾಗಬೇಕು. ನಾಲ್ಕನೆಯ ಸಾಲು ಓದಿದಾಗ ದಿವ್ಯತೆ ಹೊಳೆದು ಬಿಡಬೇಕು.ಓದುಗ ತನಗರಿವಿಲ್ಲದೆ ಓಹ್! ಎಂದು ಬಿಡಬೇಕು.ಅಥವಾ ಸಣ್ಣದಾದರೂ ಒಂದು ಕದಲಿಕೆಯ ಭಾವದಲೆ ಆ ಎದೆಯಲ್ಲಿ ಹರಿದುಬಿಡಬೇಕು/ಅಪ್ಪಳಿಸಬೇಕು/ ಎದೆಯಂಚನು ತಾಕಬೇಕು. ಕೇವಲ ಬರೆವ ಹುಕಿಗೆ ,ಲೈಕ್ ಗಳಿಗಾಗಿ ಆಸೆ ಪಟ್ಟಿರೋ ಅಕ್ಷರಗಳು ಅಸಹ್ಯ ಹುಟ್ಟಿಸುತ್ತವೆ. ನನ್ನ ಪ್ರತಿಕ್ರಿಯೆ ತುಸು ಕಟುವಾಗಿದೆ ,ನಿಜ ಆದರೆ ಅಂಗವಿಕ

ಗಜಲ್ ಕಾವ್ಯಕೂಟ

ಗಜಲ್. ಅಬ್ಬರಿಸುವ ಕಡಲಲೆಗಳನು ಕಂಡಾಗ ಅವನ  ನೆನಪು ಬೀಸುವ ತಂಗಾಳಿಯಲ್ಲಿ  ವಿಹರಿಸುವಾಗ ಅವನ ನೆನಪು  ನವೋಲ್ಲಾಸದಿಂದ ಕೂಡಿತ್ತು ನಮ್ಮ ಜೀವನ ಯಮುನಾತೀರದಲ್ಲಿ ಕಾಯುತ್ತಿರುವಾಗ  ಅವನ ನೆನಪು ಕಳೆದ ಸುಂದರ ಕ್ಷಣಗಳು ಮೈ ನವಿರೇಳಿಸುತ್ತಿದೆ ಬರುವೆಯೆಂದು ಹೇಳಿ ಬಾರದಿರುವಾಗ  ಅವನ ನೆನಪು ಎಷ್ಟೋ ವರುಷಗಳು ಅವನಿಗಾಗಿ ತಪವ ಗೈದಿರುವೆ  ಬೃಂದಾವನದಲ್ಲಿ  ಸುತ್ತಾಡುವಾಗ  ಅವನ ನೆನಪು ಮಾಧವನ ನಿರೀಕ್ಷೆಯಲಿ ಇರುವುದು ತಪ್ಪೇ ಹೇಳು ಪಂಕಜಾ ನನ್ನ ಒಲವಿನ ಸಂದೇಶ ತಿಳಿದೂ ದೂರವಾದಾಗ ಅವನ ನೆನಪು ಪಂಕಜಾ.ಕೆ. ಮುಡಿಪು

ರುಬಾಯಿ ಬಗ್ಗೆ

*ರುಬಾಯಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ದಯವಿಟ್ಟು ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ* ರುಬಾಯತ್ ಎನ್ನುವುದು ನಾಲ್ಕು ಪಾದಗಳುಳ್ಳ ಸಣ್ಣ ಪದ್ಯ. ಮೂರನೆ ಪಾದವನ್ನು ಬಿಟ್ಟರೆ ಉಳಿದ ಪಾದಗಳ ಅಂತ್ಯಾಕ್ಷರಗಳು ಪ್ರಾಸಬದ್ಧವಾಗಿರುವ ಕವಿತಾರಚನೆ. ಈಜ ರೀತಿಯ ಪದ್ಯಗಳನ್ನು ಪರ್ಷಿಯದಲ್ಲಿ ಜಾರಿಗೆ ತಂದವ ಷೇಕ್ ಅಬುಲ್ ಸೈಯದ್ ಬಿನ್ ಅಬುಲ್ ಖಯಿರ್ ಎನ್ನುವ ಸೂಫಿ. ಈ ರಚನೆ ಸೂಕ್ಷ್ಮರೀತಿಯ ಭಾವಪ್ರಕಾಶಕ್ಕೆ ಅನುಕೂಲ ವೆಂಬುದನ್ನು ಅರಿತ ಉಮರ್ ಅದನ್ನೇ ತನ್ನ ಮಾಧ್ಯಮವನ್ನಾಗಿ ಬಳಸಿಕೊಂಡ, ರಚನೆ ಹೇಗಿದ್ದರೇನು. ಅಂತರಂಗವನ್ನು ಕಲಕುವ, ಬುದ್ಧಿಯನ್ನು ಕೆರಳಿಸುವ ಭಾವಶಕ್ತಿ ಕವಿಗಿದ್ದರಲ್ಲವೇ ತಂತ್ರವೂ ಅಮರವಾಗುವುದು? ರುಬಾಯುತ್ ಎನ್ನುವುದು ಖ್ಯಾತಿ ಪಡೆಯಲು ಭಾವಸಂಪನ್ನನಾದ ಉಮರನೇ ಕಾರಣ. ರುಬಾಯಿ‌ ಸಾಹಿತ್ಯ ಬೆಳೆದು ಬಂದ ಹಾದಿ ಅಧ್ಯಯನ ಮಾಡಿರುವಿರೆಂದು ಭಾವಿಸಿರುವೆ. ಕೇವಲ ನಾಲ್ಕು ಸಾಲುಗಳಿರುವ ಎಲ್ಲ ಬರಹವು ರೂಬಾಯಿ ಆಗಲಾರದು. ಮೂರನೆಯ ಸಾಲಿಗೆ ಬರುವಷ್ಟರಲ್ಲಿ ಒಳಾರ್ಥದ ಲೇಪನವಾಗಬೇಕು. ನಾಲ್ಕನೆಯ ಸಾಲು ಓದಿದಾಗ ದಿವ್ಯತೆ ಹೊಳೆದು ಬಿಡಬೇಕು.ಓದುಗ ತನಗರಿವಿಲ್ಲದೆ ಓಹ್! ಎಂದು ಬಿಡಬೇಕು.ಅಥವಾ ಸಣ್ಣದಾದರೂ ಒಂದು ಕದಲಿಕೆಯ ಭಾವದಲೆ ಆ ಎದೆಯಲ್ಲಿ ಹರಿದುಬಿಡಬೇಕು/ಅಪ್ಪಳಿಸಬೇಕು/ ಎದೆಯಂಚನು ತಾಕಬೇಕು. ಕೇವಲ ಬರೆವ ಹುಕಿಗೆ ,ಲೈಕ್ ಗಳಿಗಾಗಿ ಆಸೆ ಪಟ್ಟಿರೋ ಅಕ್ಷರಗಳು ಅಸಹ್ಯ ಹುಟ್ಟಿಸುತ್ತವೆ. ನನ್ನ ಪ್ರತಿಕ್ರಿಯೆ ತುಸು ಕಟುವಾಗಿದೆ ,ನಿಜ ಆದರೆ ಅಂಗವಿಕ

ಪ್ರಕೃತಿ ಗಾನ ಸ್ನೇಹಸಂಗಮದಲ್ಲಿ ಉತ್ತಮ

[27/05, 3:13 PM] pankajarambhat: ಪ್ರಕೃತಿ ಗಾನ. (ಭಾವಗೀತೆ) ತಂಪಾದ  ಗಾಳಿಯು  ಸೊಂಪಾಗಿ  ಬೀಸಿದೆ ಹೊಸರಾಗದಲೆಗಳಲಿ ಮೈ ಮನವು ತೇಲಿದೆ ಕಾನನದ ಸುಮವೊಂದು ಸೌರಭವ ಸೂಸಿದೆ ದುಂಬಿಗಳನು ಕೈ ಬೀಸಿ ಮಧುಹೀರಲು ಕರೆದಿದೆ ಗಗನದಲಿ  ತುಂಬಿರುವ ಕರಿಮುಗಿಲ ದಂಡು ಮಳೆಯ ಸುರಿಸಿ ಭೂತಾಯಿ ಒಡಲಲ್ಲಿ ರಂಗು ಬುವಿಯೊಡಲಲಿ ಹುದುಗಿದ್ದ ಬೀಜಗಳೆಲ್ಲಾ ತಲೆಯೆತ್ತಿ ನಿಂತು  ಹಸಿರ ಸೆರಗು ಹಾಸಿತಲ್ಲ ಹೂಬನದ ಹೂಗಳೆಲ್ಲ ಅರಳಿ ನಗುತಿದೆ ಹೂವಿನೊಡನೆ ಮಾತಿಗಿಳಿದಿದೆ ಗಾಳಿ ಅಲೆ ಅಲೆಯಾಗಿ ತೇಲಿ ಬರುತಿದೆ ಮೋಹನರಾಗ ಮೈನವಿರೇಳುತಿದೆ ಭೂರಮೆಯ ಚೆಲುವ ಕಂಡಾಗ ಸೃಷ್ಟಿ ಸೌಂದರ್ಯದ ಅಮಲಿನಲಿ ಮೈಮನಕೆ ಉಲ್ಲಾಸ ಅದ್ಬುತ ಕಲಾಕಾರನ ಕಾಣುತ ಮೂಡಿತು ಮಂದಹಾಸ ಜೀವನೋತ್ಸಾಹವ ಹೆಚ್ಚಿಸುತ್ತಿದೆ ಭೂರಮೆಯ ಚೆಲುವು ತಂಪಾದ ಗಾಳಿಯಲಿ ಮೈಮರೆಯುತ್ತಿದೆ ಮನವು ಪಂಕಜಾ.ಕೆ ಮುಡಿಪು [27/05, 8:16 PM] ಶಶಿವಸಂತ: *ಮುತ್ತು ರತ್ನಗಳ ಸಿರಿಗಿಂತಲೂ ಹೆಚ್ಚಾಗಿ ಜ್ಞಾನ ಸಂಪತ್ತು ತುಂಬಿಕೊಂಡಿರುವ ಸ್ನೇಹ ಜೀವಿಗಳಿಗೆ.....ನಮಸ್ಕಾರ*  🔜🔜🔜🔜🔜🔜🔜🔜  *ಭಾವಗಳನು ಪದವಾಗಿಸಿ ಪದಗಳಿಗೆ ಜೀವಮೂಡಿಸಿ, ನಮ್ಮೆಲ್ಲರೊಳಗೂ ನವ ಚೇತನ ಮೂಡಿಸೋ ಭಾವಗೀತೆ ಬರೆದ ಎಲ್ಲಾಕವಿಗಳಿಗೂ ಅಭಿನಂದನೆಗಳು*  💐💐💐💐💐💐💐💐 🔛🔛🔛🔛🔛🔛🔛🔛🔛 *ಚಂದಿರನಂಗಳದ ಹೊಳಪಿನೊಳಗೆ ಬೆಳಗಿದ ಫಲಿತಾಂಶ ಪ್ರಕಟಗೊಂಡಿದೆ ನೋಡಿ.* ⏬⏬⏬⏬⏬⏬⏬⏬ *ಅತ್ಯುತ್ತಮ* ----------------------------------- 🏆 .  *ಕೆ

ದಿಟ್ಟ ಹೆಜ್ಜೆ ನವಪರ್ವ

ದಿಟ್ಟ ಹೆಜ್ಜೆ  (ಸ್ಪರ್ಧೆಗಾಗಿ) ಅಂಜದಿರು ಅಳುಕದಿರು ಸೋತೆನೆಂದು ಛಲವಿರಲಿ ಮನದಲ್ಲಿ ಗೆಲುವೆನೆಂದು ಸಾಧಿಸಲು ಬಹಳವಿದೆ ಎದ್ದೇಳು ಮಿತ್ರನೇ ಸೋತು ಗೆಲ್ಲುವ ಗುಟ್ಟು ತಿಳಿ ನೀನು ವೀರನೇ ಆಗದು ಎಂದು ಕೈ ಕಟ್ಟಿ ಕುಳಿತಿರಬೇಡ ಇಟ್ಟಿರುವ ಹೆಜ್ಜೆಯನು ಹಿಂದಿಡಬೇಡ ಬಿದ್ದರೂ ಎದ್ದು ನಡೆ ಮುಂದೆ ನೀನು ನಗುವವರ ಎದುರಿನಲಿ ತಲೆಯೆತ್ತಿ ನಿಲ್ಲು ನಿಂದಕರು ಇರಬಹುದು ಎದೆಗುಂದಬೇಡ ಇಂದು ನಿಂದಿಸುವವರು ನಾಳೆ ಹೊಗಳುವರು ನೋಡ ಹೊಗಳಿಕೆ ಗೆ ಉಬ್ಬದಿರು ತೆಗಳಿಕೆಗೆ ಕುಗ್ಗದಿರು ನಿನ್ನ ತನವನು ಮೆರೆದು  ತೋರು ನೀನು ಸೋಲು ಗೆಲುವಿನ ಮೆಟ್ಟಿಲೆಂದು ತಿಳಿ ಕತ್ತಲಾಯಿತೆಂದು  ಅಳುತಾ ಕೂತರೆ ಉದಯಿಸುವ ಸೂರ್ಯನನು ನೋಡಲಾರೆ ಕತ್ತಲು ಬೆಳಕು ಒಂದರ ಹಿಂದೊಂದು ತಿಳಿ ಗಟ್ಟಿ ಮನಸಿನ ದಿಟ್ಟ ನಿಲುವಿರಲು ಮೆಟ್ಟಿ ನಿಲ್ಲಬೇಕು ಸೋಲೆಂಬ  ಮುಳ್ಳನು ನವೋಲ್ಲಾಸವ ಬದುಕಲ್ಲಿ ತುಂಬುತಾ ಗೆಲುವಿನಾ ಶಿಖರವನು  ಏರಬೇಕು ಪಂಕಜಾ.ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಸುನೀತಾ ಕವನ

ಸುನೀತಾ ಕವನ ಸ್ಪರ್ಧೆಗಾಗಿ ಭರವಸೆಯ ಬೆಳಕು ಏಳು ಬೀಳಿನ ದಾರಿಯಲಿ ಕಲ್ಲುಮುಳ್ಳುಗಳ ಸರಿಸುತ್ತ ಬಿದ್ದಾಗ ಎದ್ದು ನಡೆಯಬೇಕು ಬಾ ನಾನಿರುವೆ ಎತ್ತಲು ನಿನ್ನನು ಎಡವಿ ಬಿದ್ದರೆ  ಎದ್ದು ನಡೆ ಗುರಿ ಮುಟ್ಟುವವರೆಗೆ ನಡೆ ಸಾಧಿಸಿ ತೋರಿಸು ಜಗಕೆ ನೀನಾಗುವೆ ಮಾದರಿ ನಾಯಕ ಕಷ್ಟ ಬಂತೆಂದು ಕುಗ್ಗಬೇಡ ಗುರಿಸೇರಲು  ಶ್ರಮಿಸಬೇಕು ಅಗದೆಂದು ಕೈ ಕಟ್ಟಿ  ಕುಳಿತರೆ ಸಾಧಿಸಲಾಗದು ಏನನ್ನು ಜಗದಲಿ ಎಲ್ಲೆಡೆಯೂ ತುಂಬಿದೆ ಹಸಿರು ಸಿರಿ ರವಿಯು ಹರಡಿರುವನು ಹೊಂಬೆಳಕು ಭರವಸೆಯ ಬೆಳಕು ಹಬ್ಬಿದೆ ನೋಡು ಏಳು ಎದ್ದೇಳು  ನಡೆ ಮುಂದೆ ನುಗ್ಗಿ ನಡೆ ಪಂಕಜಾ.ಕೆ.ಮುಡಿಪು

ಟಂಕಾ ಕಾವ್ಯಕೂಟ ಸ್ಪರ್ಧೆಗೆ

ಟಂಕಾ.1 ಬೆಳದಿಂಗಳು ಬುವಿಯಲಿ ಹರಡಿ ಮನಕೆ ಮುದ ತಂಪಾದಗಾಳಿ ಬೀಸಿ ನಲಿದಾಡಿತು ಮನ ಟಂಕಾ .2 ಉಷೆ ಸರಿದು ಬಾನಲಿ ಮೂಡಿತದೋ ಬೆಳದಿಂಗಳು ನವೋಲ್ಲಾಸವತುಂಬಿ ತಂಪಾಯಿತು ಮೈ ಮನ ಪಂಕಜಾ.ಕೆ. 

ಸುನಿಧಿ. (ಕಥೆ)

ಸುನಿಧಿ. (ಕಥೆ) ರಾತ್ರಿ ತಾನು ಕಂಡ ಆ ಸುಂದರ ತರುಣಿಯು ಬಗ್ಗೆಯೇ ಯೋಚಿಸುತ್ತಿದ್ದ  ವಿವೇಕನಿಗೆ ಆಫೀಸಿಗೆ ಹೋಗಬೇಕು ಎನ್ನುವುದೇ ಮರೆತು ಹೋಗಿತ್ತು.ವಿವೇಕನ ಅಮ್ಮ ದೀಪಾ ಬಂದು ಆತನನ್ನು ಎಚ್ಚರಿಸಿದಾಗ ಗಡಿಬಿಡಿಯಿಂದ ವಿವೇಕ್ ಬೇಗ ಬೇಗ ಸ್ನಾನ ತಿಂಡಿ ಮುಗಿಸಿ ಆಫೀಸಿಗೆ ಹೊರಡುತ್ತಾನೆ. ನಿನ್ನೆ ರಾತ್ರಿ ನೀನು ಬರುವಾಗ ತುಂಬಾ ತಡವಾಗಿತ್ತು ಇನ್ನೂ ನಿದ್ದೆಕಣ್ಣಿನಲ್ಲಿಯೇ ಇದ್ದಿಯಾ ಸ್ವಲ್ಪ ನಿಧಾನವಾಗಿ ಹೋಗು  ಮಗ  ಎಂದು ದೀಪಾ ಎಚ್ಚರಿಸುತ್ತಾಳೆ ವಿವೇಕ್ ಆಗಲಮ್ಮ ನಾನು ಬರುವೆ ಎಂದು ಅಮ್ಮನಿಗೆ ಟಾಟಾ ಮಾಡಿ ಕಾರು ಸ್ಟಾರ್ಟ್ ಮಾಡಿ ಹೊರಡುತ್ತಾನೆ. ದಾರಿಯಲ್ಲಿಯೂ ಆತನಿಗೆ ನಿನ್ನೆ ರಾತ್ರಿಯದೆ ಯೋಚನೆ ವಿವೇಕ್  ಬಹುರಾಷ್ಟ್ರೀಯ  ಕಂಪನಿಯಲ್ಲಿ ಕೆಲಸದಲ್ಲಿರುವ  ಸುಂದರ  ತರುಣ .ಇತ್ತೀಚೆಗೆ ತಾನೇ  ಬೆಂಗಳೂರಿನ ಕಂಪನಿ  ಬ್ರಾಂಚ್ ಗೆ ಎಂ.ಡಿ. ಯಾಗಿ ನೇಮಕ ಗೊಂಡಿದ್ದ , ಆತನಿಗೆ ಬೆಂಗಳೂರಿನಲ್ಲಿಯೇ  ಸ್ವಂತ ಮನೆಯಿದ್ದು ,ತಂದೆ ತಾಯಿಯರ  ಜತೆ  ವಾಸಿಸುತ್ತಿದ್ದ  ನಿತ್ಯ ಆಫೀಸಿಗೆ  ಕಾರಿನಲ್ಲಿ ಹೋಗುವ ಆತ ಆದಿನ ತನ್ನ ತಂದೆಯ ಸ್ಕೂಟರ್ ನಲ್ಲಿ ಆಫೀಸ್ ಗೆ ಬಂದಿದ್ದ.   ವಿಪರೀತ ಕೆಲಸವಿದ್ದ ಪ್ರಯುಕ್ತ ಆತ ಆಫೀಸಿನಿಂದ ಹೊರಗೆ ಬರುವಾಗ ಗಡಿಯಾರ ರಾತ್ರಿ  12 ಗಂಟೆಗೆ ಕೇವಲ 10 ನಿಮಿಷ ಇರುವುದನ್ನು ತೋರಿಸುತ್ತಿತ್ತು. ಇನ್ನೇನು ಆತ ಮನೆಗೆ ಹೋಗಬೇಕು ಎಂದು ತನ್ನ ಸ್ಕೂಟರ್ ನ್ನು ಹೊರಗೆ ತೆಗೆದು ಸ್ಟಾರ್ಟ್ ಮಾಡಿ ಮೈನ್  ರೋಡ್ ಗೆ ಬಂದಾಗ ,ಒಬ್ಬಳು ತರುಣಿ  ಸ್

ಮಾವಿನಹಣ್ಣು ಬಾಳೆಹಣ್ಣು ಮಿಶ್ರ ಹಲ್ವಾ

ಮಾವಿನಹಣ್ಣು  ಮತ್ತು ಬಾಳೆಹಣ್ಣು ಮಿಶ್ರ ಹಲ್ವಾ  ಬೇಕಾದ ಸಾಮಾನು.....10 ಮಧ್ಯಮ ಗಾತ್ರದ ಬಾಳೆಹಣ್ಣು 5 ಮಾವಿನಹಣ್ಣು 1 ಲೋಟ ಸಕ್ಕರೆ ಮಾಡುವ ವಿಧಾನ..ಮಾವಿನಹಣ್ಣು ಮತ್ತು ಬಾಳೆಹಣ್ಣನ್ನು ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿ ,ದಪ್ಪ ತಳದ ಬಾಣಲೆಯಲ್ಲಿ ಹಾಕಿ ಸ್ವಲ್ಪ ಹೊತ್ತು ಬೇಯಿಸಿ ನಂತರ 1 ಲೋಟ ಸಕ್ಕರೆ  (ಹಣ್ಣುಗಳು ತುಂಬಾ ಸಿಹಿ ಇದ್ದರೆ   ಸಕ್ಕರೆ ಸ್ವಲ್ಪ  ಕಡಿಮೆ  ಹಾಕಬಹುದು.) ಹಾಕಿ ಚೆನ್ನಾಗಿ  ಗೊಟಾಯಿಸಿ 10 ಮಿನುಟ್ ನಂತರ  ತುಪ್ಪ ಹಾಕಿ ಗೊಟಾಯಿಸಿ  ಉರಿ ಸಣ್ಣ ಮಾಡಿ ಆಗಾಗ  ಗೋತಾಯಿಸುತ್ತಾ ಇದ್ದು ಗಟ್ಟಿಯಾಗಿ ಹಲ್ವದ ಹದಕ್ಕೆ ಬಂದಾಗ ಹ ತುಪ್ಪ ಸವರಿದ ತಟ್ಟೆಗೆ ಹರಡಿ  ಗೋಡಂಬಿ ಚೂರಿನಿಂದ ಅಲಂಕರಿಸಿ ತಣಿದ ಮೇಲೆ  ಬೇಕಾದ ಆಕಾರಕ್ಕೆ ಕತ್ತರಿಸಿ ರುಚಿಯಾದ ಹಲ್ವಾ ಮಾಡಿ ತಿಂದು ನೋಡಿ ಪಂಕಜಾ.ಕೆ ಮುಡಿಪು

ಮಳೆಬಿಲ್ಲು ಮಕ್ಕಳ.ಕವನ

ಮಳೆಬಿಲ್ಲು (ಮಕ್ಕಳ  ಕವನ) ಬಾನಲಿ ತುಂಬಿದ ಕರಿಮೋಡಗಳು ಕರಗುತ ಸುರಿಸಿತು ಮಳೆಯನ್ನು ಕರಗಿದ ಮೋಡದ ಎಡೆಯಲಿ ಮಿನುಗುತ ಭರದಲಿ ಬಂದನು ರವಿತೇಜ ಪಕ್ಕನೆ ಮೂಡಿದ ಎಳೆ ಬಿಸಿಲಿನ ಕಿರಣಕೆ ಮೂಡಿತು ಬಾನಲಿ ಕಾಮನಬಿಲ್ಲು ಮೂಡಣದಿಂದ ಪಡುವಣ ವರೆಗೆ ಹರಡಿದೆ ಚೆಲುವಿನ ಬಣ್ಣ ಮಳೆ ಮೋಡಗಳ ಘರ್ಷಣೆ ಎಡೆಯಲಿ ಮೂಡಿದ ರವಿಕಿರಣದ ಸೊಬಗು ಮಳೆನೀರಿನ ತುಂತುರ ಎಡೆಯಲಿ ಹೊರಡಲು ಸೂರ್ಯನ ಕಿರಣ ಕಟ್ಟಿತು ಬಾನಲಿ ಚೆಲುವಿನ ಬಿಲ್ಲು  ತಂದಿತು ಮನಸಿಗೆ ಮುದವು ಏಳು ಬಣ್ಣಗಳಲಿ ಕಣ್ಣನು  ಸೆಳೆದು ಗಗನದಿ ಹರಡಿದೆ ಕಾಮನಬಿಲ್ಲು ನೀಲಾಗಸದಲಿ ಬೆಡಗನು ಹರಡಿ ತುಂಬಿತು ಮಕ್ಕಳ ಮೊಗದಲಿ ಬೆರಗು ಬಾನಿಗೆ ತೋರಣ ಕಟ್ಟಿದ ತೆರದಲಿ ಏಳು ಬಣ್ಣದ  ಕಮಾನು ನೋಡಲ್ಲಿ  ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಜಡೇಕವನ ಸ್ನೇಹಸಂಗಮ

ಜಡೆ ಕವನ ಬಾನಲಿ ಹೊಳೆಯುವ ಬೆಳ್ಳಿಯ ಚಂದಿರ ಚಂದಿರ ಬರಲು ಧರೆಯಲಿ ನಲಿವು ನಲಿಯುವ ಮನದಲಿ ಅರಳಿದೆ ನಗೆಯು ನಗೆಯು ಬಾಳಿಗೆ ತುಂಬುವುದು ಹುರುಪು ಹುರುಪಲಿ ಕೆಲಸವ ಮಾಡಲು ಗೆಲುವು ಗೆಲುವು ಕೊಡುವುದು ಮನಸಿಗೆ ಸ್ಫೂರ್ತಿ ಸ್ಪೂರ್ತಿಯು ಇದ್ದರೆ ಬರುವುದು ಶಕ್ತಿ ಶಕ್ತಿಯು ತುಂಬಲು ಬೇಕು ಬೇಳೆ ಕಾಳು ಬೇಳೆಕಾಳು ಬೆಳೆಯಲು  ಪಡಬೇಕು ಕಷ್ಟ ಕಷ್ಟ ಪಟ್ಟರೆ ಸಿಗಬಹುದು  ನೆಮ್ಮದಿ ಶಾಂತಿ ಶಾಂತಿಯ ಹುಡುಕಲು ಕಾಯಕ ಮಾಡಿ ಕಾಯಕ ಮಾಡುತ ತೃಪ್ತಿಯ ಪಡುವನು ರೈತ ರೈತನು  ಬೆಳೆ ಬೆಳೆದರೆ ದೇಶ ಸಮೃದ್ದಿ ಸಮೃದ್ದಿ ಬೆಳೆ ರೈತನ ಬಾಳಿಗೆ ನಲಿವು ನಲಿಯಲು ಕಾಣುವುದು ಬೆಳ್ಳಿಮೋಡ ಬಾನಲಿ ಪಂಕಜಾ.ಕೆ.

ನಮ್ಮ ಶಾಲೆ ಶಿಶು ಗೀತೆ

ನಮ್ಮ ಶಾಲೆ (ಶಿಶು ಗೀತೆ) ನನ್ನ ಶಾಲೆ ಚೆನ್ನ ಶಾಲೆ ಸುತ್ತ ಹಸಿರ ತೋಟವು ಆಟ ಪಾಠ ಎಲ್ಲ ಕಲಿಸುವ ಗುರುಗಳವರು ದೇವರು ಶಿಸ್ತಿನಿಂದ  ನಿಂತು ನಾವು ಧ್ವಜವಂದನೆ ಮಾಡುವೆವು ರಾಷ್ಟ್ರಗೀತೆಯನ್ನು ಹಾಡಿ ಕ್ಲಾಸಿನೊಳಗೆ ನಡೆವೆವು ಕರಿಯ ಹಲಗೆ ತುಂಬಾ  ಚಿತ್ರಗಳನು ಬಿಡಿಸುತ ಪುಟ್ಟ ಪುಟ್ಟ ಅಕ್ಷರಗಳ ಬೇಗ ನಾವು ಕಲಿವೆವು ಆಡಲೆಂದು ಮೈದಾನದಲ್ಲಿ ನಾವು ಕೂಡಿ ಆಡಿ ನಲಿವೆವು ಒಂದೇ ತಾಯ ಮಕ್ಕಳಂತೆ  ಪ್ರೀತಿಯಿಂದ ಇರುವೆವು ಜಾತಿ ಬೇಧ ತಿಳಿಯದಲ್ಲ ನಾವು  ಎಳೆಯ ಚಿಣ್ಣರು ಶಾಲೆಎಂಬ ದೇಗುಲದಲ್ಲಿ ಪಾಠ ಕಲಿವ ಜಾಣರು ಪಂಕಜಾ.ಕೆ.

ನಾನು ನೀನು ಕಲಾದೇಗುಲ ಮೆಚ್ಚುಗೆ

ನಾನು ನೀನು ಬಾನಲ್ಲಿ   ಹರಿಡಾಡೋ ಮುಗಿಲಂತೆ ನೀನು ಮಳೆಗಾಗಿ ಹಂಬಲಿಸುವ ಭುವಿಯಂತೆ ನಾನು  ನನ್ನೊಡಲ ತುಂಬೆಲ್ಲಾ ನಿನ್ನದೇ ಬಿಂಬ   ಕನಸಲ್ಲೂ ಮನಸಲ್ಲು ನೀನಿರುವೆ ಯಲ್ಲ    ಹೊಸಬಾಳ ಹಾದಿಯಲಿ ಜತೆಯಾಗಿ ಸಾಗಿ ಒಲವರಸ ಹೀರೋಣ ಅನುದಿನವೂ ಬಾಗಿ  ಜೋಡಿ ಹಕ್ಕಿಗಳ ತೆರದಿ ನಲಿಯೋಣ ನಾವು  ಒಲವಿಂದ ಒಂದಾಗಿ  ಬಾಳೋಣ  ದಿನವೂ ಮುಗಿಲನ್ನು ಕಂಡಾಗ  ಕುಣಿವಂತೆ ನವಿಲು ನಿನ್ನನ್ನು ಕಂಡಾಗ ನಲಿಯುತಿದೆ ಮನವು  ಹೂವಿನಲಿ ಗಂಧವು ಸೇರಿರುವಂತೆ ನಾವಿಬ್ಬರೊಂದಾಗಿ ನಲಿಯೋಣವಂತೆ  ಮನಸ್ಸಿನ ಮುಗಿಲಲ್ಲಿ ನಾನು ನೀನು  ಹಾಯಾಗಿ ಕಳೆಯೋಣ ದಿನವೆಲ್ಲಾನಾವು  ಅನುರಾಗದ ಅಲೆಗಳಲಿ ತೇಲುತಿದೆ ಮನಸು  ಪ್ರೀತಿಯ  ಸೋನೆಯಲಿ ನಲಿಯುತ್ತಿದೆತನುವು    ಪಂಕಜಾ.ಕೆ     

ಸಾಯಿಬಾಬಾ ಭಕ್ತಿಗೀತೆ ನವಪರ್ವ

ಕಲಿಯುಗದ ಕಾಮಧೇನು (ಭಕ್ತಿಗೀತೆ) ಶಿರಡಿಯಲ್ಲಿ ನೆಲೆಸಿರುವ ಸಾಯಿಬಾಬನೆ ಭಕ್ತ ಜನರ ಭಕ್ತಿಗೊಲಿವ ಸಾಯಿನಾಥನೇ  ನಂಬಿದವರ ಕರುಣೆಯಿಂದ ನೀನು ನೋಡುವೆ  ಕಲಿಯುಗದ ಕಾಮಧೇನು  ಸಾಯಿಬಾಬನೆ ಬೇಡಿದ ವರಗಳ ನೀಡುವ ಕಾಮಧೇನುವೆ ಕರುಣೆಯಲಿ ನೋಡೋಮ್ಮೆ ಸಾಯಿನಾಥನೇ ನಿತ್ಯ ನಿನ್ನ ಸ್ಮರಣೆ ಮಾಡಲು ಭಯವೂ ಎಲ್ಲಿದೆ ಮನದ ಕಲ್ಮಶವ ಕಳೆದು ನಿನ್ನ ನಿತ್ಯ ಸ್ತುತಿಸುವೆ ಭಕ್ತ ಜನರ ಪೊರೆವ ನೀನು ಧೀನ ಬಂಧುವೆ ಸತ್ಯ ಧರ್ಮ ಶಾಂತಿ ಸಾರುವ ದೇವದೂತನೆ ಎಲ್ಲೇ ಇರಲಿ ಹೇಗೆ ಇರಲಿ ನಿನ್ನ ಸ್ಮರಣೆ ಮಾಡುವೆ ಬೇಗ ಬಂದು ಕಾಯು ನಮ್ಮ ಓಂ ಸಾಯಿರಾಮನೆ ಕಷ್ಟ ದುಃಖಗಳನು  ನೀನು ಕ್ಷಣದಲ್ಲಿ ಕಳೆಯುವೆ ಮನಕೆ ಶಾಂತಿ ನೆಮ್ಮದಿಯ ಕೊಡುಎನಗೆ ದೇವನೆ ಭಕ್ತಿಯಿಂದ ಬೇಡಿಕೊಳ್ಳುವೆ ನಿತ್ಯ ಸಾಯಿರಾಮನೆ ಇಷ್ಟಾರ್ಥಗಳನೀಡು ನಮಗೆ ಓಂಸಾಯಿರಾಮನೇ ಪಂಕಜಾ.ಕೆ ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಗೆಳೆತನ

ಗೆಳೆತನ   ಎಲ್ಲಿಯೋ  ಹುಟ್ಟಿ ಎಲ್ಲಿಯೋ ಬೆಳೆದು ಜತೆಯಾದೆ ನೀ ನನ್ನ ಕನಸುಗಳ ಸೆಳೆದು ನೋಯುವ ಮನಸಿಗೆ  ತಂಗಾಳಿಯಾದೆ ನೀನು ನಿನ್ನೊಲವ ಸಾಂತ್ವನಕೆ ಮೈಮರೆತೆ ನಾನು ಏಕಾಂತದ ಒಂಟಿತನಕೆ ಜತೆಯಾದೆಯಲ್ಲ ಕನಸಿನ ಗೋಪುರವ ನೀ ಕಟ್ಟಿದೆಯಲ್ಲ ಹೊಸತನವ  ತುಂಬುತಾ ಮನಸೂರೆಗೊಂಡೆ ನಿನ್ನ ಸ್ನೇಹವೆಂಬ ಅಮೃತದ ಜಲದಲ್ಲಿ ನಾ ಮುದಗೊಂಡೆ ಗೆಳೆತನವೆಂಬ ದೋಣಿಯಲಿರುವ ತಂಪು ಬಾಳದೋಣಿಯಲೂ ಅದರದೇ ಇಂಪು ಕಷ್ಟ ಸುಖ ಎಲ್ಲಕ್ಕೂ ಜತೆಯಾಗುವ ನಂಟು ಬಿಡಿಸಲಾರದ ಬಂಧ ಸ್ನೇಹದಾ ಗಂಟು ಕಂಡ ಕನಸಿಗೆ ನೀಹಿಡಿದೆ ಕನ್ನಡಿ ನೊಂದ ಮನಸಿಗೆ ನೀ ಬರೆದೆ ಮುನ್ನುಡಿ ನಗುವ ಹಿಂದಿನ ನೋವ ಮರೆಸುತಿದೆ ಸ್ನೇಹ ಕತ್ತಲೆಯ ಹಾದಿಗೆ  ಮುಂಬೆಳಕು ಸ್ನೇಹ  ಪಂಕಜಾ.ಕೆ.ಮುಡಿಪು

ಗಜಲ್ ವೃದ್ಧಾಪ್ಯ ಸ್ನೇಹ ಸಂಗಮ

ಗಜಲ್ ವೃದ್ಧಾಪ್ಯವನ್ನು ಆದಷ್ಟು   ಸಂತಸದಿಂದ  ಕಳೆಯಬೇಕು ನಿತ್ಯವೂ  ಒಂದಲ್ಲ ಒಂದು ಕೆಲಸಕಾರ್ಯಗಳಲ್ಲಿ ತೊಡಗಬೇಕು  ಬಾಲ್ಯ ಯವ್ವನ ಮುಪ್ಪು ಜೀವನದ ವಿವಿಧ ಘಟ್ಟಗಳು ಚಿಂತೆ ಬೇಸರ ಮನದಲ್ಲಿ ಸುಳಿಯದಂತೆ ನೋಡಬೇಕು ವಿವಿಧ ಚಟುವಟಿಕೆಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕು ಉತ್ಸ್ಸಾಹ ಹುರುಪನ್ನು ಜೀವನದಲ್ಲಿ ತುಂಬಬೇಕು ಕಳೆದು ಹೋದ ದಿನಗಳನ್ನು ನೆನೆಯುತ್ತಾ  ದುಃಖಿಸುವುದು ವ್ಯರ್ಥ ಬಂದದ್ದನ್ನು ಎದುರಿಸುವ ಛಲ ನಮ್ಮಲ್ಲಿ ಇರಬೇಕು ಕೈ ನಡೆಯುವಾಗ ಉಳಿತಾಯ ಮಾಡಬೇಕಲ್ಲವೇ ಪಂಕಜಾ ಕಾಲನ ಕರೆ ಬರುವ ತನಕ  ನಗು ನಗುತ ಬಾಳಬೇಕು ಪಂಕಜಾ.ಕೆ.ಮುಡಿಪು

ಮಕ್ಕಳ ನೀತಿ ಕಥೆ ಸೋಮಾರಿ ಶಿವ

ಮಕ್ಕಳ ನೀತಿ ಕಥೆ ಸೋಮಾರಿ ಶಿವ ಒಂದು ಊರಿನಲ್ಲಿ  ಶಿವ ಎಂಬ ತರುಣನಿದ್ದ ಸ್ಪುರದ್ರೂಪಿಯೂ, ಗಟ್ಟಿಮುಟ್ಟಾಗಿಯೂ ,ಇದ್ದ ಆತನು ತುಂಬಾ ಸೋಮಾರಿಯಾಗಿದ್ದನು. ಮತ್ತು ಯಾವಾಗಲೂ ತಾನು ಬಡವ ತನ್ನದು ಕೆಟ್ಟ ಅದೃಷ್ಟವೆಂದು ಬೇಸರಿಸುತ್ತಿದ್ದನು.  ಊರಿನ ಎಲ್ಲರೂ ಆತನನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದರು.         ಒಂದು ದಿನ ಆತ ಬೇಸರದಿಂದ ಊರಿನ ಹೊರಗೆ ತಿರುಗಾಡುತ್ತಿರುವಾಗ  ಅವನಿಗೆ ಒಬ್ಬ ಶ್ರೀಮಂತ ವರ್ತಕ ಭೇಟಿಯಾಗುತ್ತಾನೆ. ಆತ ಶಿವನನ್ನು ನೋಡಿ ನೀನು ಬಹಳ ದುಃಖಿತನಂತೆ ಕಾಣುತ್ತಿದ್ದಿಯೇ ಯಾಕೆ ಎಂದು ವಿಚಾರಿಸುತ್ತಾನೆ. ಶಿವನು ತನ್ನ ಬಡತನದ ಬಗ್ಗೆ ಹೇಳಿ ಬೇಸರಿಸುತ್ತಾನೆ. ಅವನ ಮಾತುಗಳನ್ನು ಕೇಳಿದ ವರ್ತಕ ಇಷ್ಟು ಗಟ್ಟಿಮುಟ್ಟು ದೇಹ ಇದ್ದರೂ ಸೋಮಾರಿಯಾಗಿ ಇರುವ ಇವನಿಗೆ ಬುದ್ದಿ ಕಲಿಸಬೇಕೆಂದು  ನಿರ್ಧರಿಸಿ ಅವನನ್ನು ತನ್ನ ಜತೆ ಕರೆದೊಯ್ಯುತ್ತಾನೆ .ಮನೆಗೆ ಹೋದ ಮೇಲೆ ವರ್ತಕ ನಿನಗೆ ಬೇಕೆನಿಸಿದಷ್ಟು  ದುಡ್ಡು ತೆಗೆದುಕೊ , ಆದರೆ ಅದಕ್ಕೆ ಪ್ರತಿಯಾಗಿ ನಿನ್ನ ಒಂದು ಕೈಯನ್ನು ನನಗೆ ಕತ್ತರಿಸಿ ಕೊಡಬೇಕು, ಎಂದು ಹೇಳಿದನು .ವರ್ತಕ ಹೇಳಿದ ಮಾತು ಕೇಳಿ ಶಿವನಿಗೆ ಗಾಬರಿಯಾಯಿತು.  ಶಿವನು ಎಷ್ಟು ದುಡ್ಡು  ಕೊಟ್ಟರೂ ನನ್ನ ಕೈಯನ್ನು ಕೊಡಲಾರೆ ಎಂದನು. ಆಗ ವರ್ತಕನು ನಿನ್ನ ಒಂದು  ಕಾಲನ್ನಾದರೂ ಕೊಡು ನಿನಗೆ ಬೇಕಾದಷ್ಟು ಹಣ ಕೊಡುವೆ ಎಂದನು.ಆಗ ಶಿವನು ಕೋಪದಿಂದ ನೀನು ಎಷ್ಟೇ ದುಡ್ಡು ಕೊಟ್ಟರೂ ನನ್ನ ಕೈ ಕಾಲುಗಳನ್ನು ಕೊಡಲಾರೆ ಎಂದನು. ವರ್ತಕ ನಗ

ಸುನೀತಾ ಕವನ ಕೊಡಗಿನ ಬೆಳದಿಂಗಳು fb ಗ್ರೂಪ್ ಭರವಸೆಯ ಬೆಳಕು

ಸುನೀತಾ ಕವನ ಸ್ಪರ್ಧೆಗಾಗಿ ಭರವಸೆಯ ಬೆಳಕು ಏಳು ಬೀಳಿನ ದಾರಿಯಲಿ ಕಲ್ಲುಮುಳ್ಳುಗಳ ಸರಿಸುತ್ತ ಬಿದ್ದಾಗ ಎದ್ದು ನಡೆಯಬೇಕು ಬಾ ನಾನಿರುವೆ ಎತ್ತಲು ನಿನ್ನನು ಎಡವಿ ಬಿದ್ದರೆ  ಎದ್ದು ನಡೆ ಗುರಿ ಮುಟ್ಟುವವರೆಗೆ ನಡೆ ಸಾಧಿಸಿ ತೋರಿಸು ಜಗಕೆ ನೀನಾಗುವೆ ಮಾದರಿ ನಾಯಕ ಕಷ್ಟ ಬಂತೆಂದು ಕುಗ್ಗಬೇಡ ಗುರಿಸೇರಲು  ಶ್ರಮಿಸಬೇಕು ಅಗದೆಂದು ಕೈ ಕಟ್ಟಿ  ಕುಳಿತರೆ ಸಾಧಿಸಲಾಗದು ಏನನ್ನು ಜಗದಲಿ ಎಲ್ಲೆಡೆಯೂ ತುಂಬಿದೆ ಹಸಿರು ಸಿರಿ ರವಿಯು ಹರಡಿರುವನು ಹೊಂಬೆಳಕು ಭರವಸೆಯ ಬೆಳಕು ಹಬ್ಬಿದೆ ನೋಡು ಏಳು ಎದ್ದೇಳು  ನಡೆ ಮುಂದೆ ನುಗ್ಗಿ ನಡೆ ಪಂಕಜಾ.ಕೆ.ಮುಡಿಪು

ಜಡೇಕವನ ಕಲಾದೇಗುಲ fb ಗ್ರೂಪ್

ಜಡೆ ಕವನ ಮಡುಕಟ್ಟಿದೆ ಹೊಂಗನಸು ಮನಸಿನಲಿ ಮನಸಿನಲಿ ತುಂಬಿದೆ ಚೆಲುವಾದ ಕನಸು ಕನಸು ಮನಸಲೂ ನೀನಿರುವೆ ನಲ್ಲ ನಲ್ಲ ನೀ ಬಂದು ನನ್ನ ಮನದಲಿ ಮುದ ಮುದದಿ ನಲಿವ ಮನಸೊಂದು ನವಿಲು ಬಾವಿಲ ನರ್ತನವು ಮೈ ಮನಕೆ ಉಲ್ಲಾಸ ಉಲ್ಲಾಸ ಹುರುಪು ಬಾಳಿಗೆ ಮೆರುಗು ಮೆರುಗು ತಂದಿತು ನಿನ್ನ ಪ್ರೀತಿಯ ನೋಟ ನೋಟದಲೇ ಸೆಳೆದಿಟ್ಟೆ ನನ್ನ ಮನವ ನೀನು ನೀನಿರಲು ಬಾಳಲ್ಲಿ ಅರಳುವುದು ಚೆಲು ಹೂವು ಹೂವು ಅರಳಿದಾಗ ದುಂಬಿಗಳ ಕಾಟ ಕಾಟಕೊಡುತ್ತಿದೆ ನಿನ್ನ  ಒಲವಿನ ಕಣ್ಣೋಟ  ಕಣ್ಣೋಟದಲಿ ಕಾಡುತ ಮನಸಿನಲಿ ನಿಂದೆ ನಿಂದು  ನನ್ನ ಮನಕೆ ತುಂಬಿದೆ ಹರುಷ ಹರುಷದಲಿ  ನಿನ್ನ ರೂಪವು ಮನದಿ ಮಡುಕಟ್ಟಿದೆ ಪಂಕಜಾ.ಕೆ.ಮುಡಿಪು

ತೇರು ಕವನ ಮೆಹಂದಿ ಚಿತ್ತಾರ ಕೊಡಗಿನ ಗೆಳತಿ

ತೇರು ಕವನ  ಶೀರ್ಷಿಕೆ..ಮೆಹಂದಿ ಚಿತ್ತಾರ                             ಓ                            ನನ್ನ                           ನಲ್ಲನೆ                        ನನ್ನಮೃದು                        ಕರಗಳೆರಡಕೆ                   ಮೆಹಂದಿಯಚಿತ್ತಾರ                   ರಂಗೇರಿದ ಕರಗಳಲಿ                   ನಿನ್ನ ವದನಾರವಿಂದ                ಲಜ್ಜೆಯಾವರಿಸಿದೆ ಮೊಗವು                ನಾಳಿನ ದಿನದ ಕಲ್ಪನೆಯಲಿ                 ನೀಬಾಳ.              ಚಂದಿರ                 ಒಲವಿನ.              ಗೆಳೆಯ                 ಪ್ರೀತಿಯ              ಸರದಾರ               ಮನಸೆಳೆದ             ಮೋಹನ          ನಿನ್ನ ನೆನಪಿನ ದೋಣಿಯ ಪಯಣಿಗಳು          ಪ್ರೀತಿಯಾಲಿಂಗನಕೆ ಕಾದಿದೆ ತನುಮನ          ಸವಿಗಳಿಗೆಯ  ನೆನಪಲಿ ಕಚಗುಳಿ               ಸುಂದರ.                       ಸ್ವಪ್ನವು              ಸಾಕಾರದ                       ಕ್ಷಣಗಳಿಗೆ             ಕಾಯುತಿದೆ.            .       ಮನವು             ಜತೆಯಾಗು.                    ಬಾ. ಬೇಗ ಪಂಕಜಾ ಕೆ ಮುಡಿಪು

ಮೋಸದಾಟ ಸ್ನೇಹ ಸಂಗಮ 18 .2.2020

ಮೋಸದಾಟ ಮನದ ಬಯಲಲಿ  ಕನಸ ಬಿತ್ತುತ ಹರಿಸಿ ಒಲವಿನ  ಧಾರೆಯ ಕಣ್ಣ ನೋಟದಿ ಸೆಳೆದು ನನ್ನನು ಹೃದಯವೀಣೆಯ ಮೀಟಿದೆ ಬದುಕ ಕಲಿಸಿದ ಅಪ್ಪ ಅಮ್ಮನ ಮರೆತು ನಿನ್ನನು ಸೇರಿದೆ ಎನಿತು ಸುಂದರ ಬಾಳು ಬಂಧುರ ಎನುತ ಸಾಗಿದೆ ಜತೆಯಲಿ ನಂಬಿಕೆಯ ನೆಲೆ ಛಿದ್ರವಾಗಿಸಿ ಮೋಸದಾಟವ ಆಡಿದೆ ಬಾಳ ದೋಣಿಯು ಮುಳುಗಿ ಹೋಯಿತು ಬಾಳಲೇನಿದೆ ಹರುಷವು ಮನದಿ ತುಂಬಿದ ಶೂನ್ಯ ಭಾವವ ಹೇಗೆ ಅಳಿಸಲಿ ತಿಳಿಯದು ನಂಬಿಕೆಯ ನೆಲೆ ಕುಸಿದು ಬೀಳುವ ಪರಿಯ ಕಾಣುತ ಮರುಗಿದೆ ಕ್ಷಮೆಯು ಎಲ್ಲಿದೆ ನಿನ್ನ ಮೋಸಕೆ ಮನಸು ನೋವಲಿ ನರಳಿದೆ ಪಂಕಜಾ.ಕೆ.18.5.2020

ಚಿತ್ರ ಕವನ ಬಾನ ತಾರೆಯಹಿಡಿವಾಸೆ ನವಪರ್ವ

ಚಿತ್ರ ಕವನಸ್ಪರ್ಧೆಗಾಗಿ  ಬಾನ ತಾರೆಯ ಹಿಡಿವಾಸೆ ನಭದಲಿ ಹೊಳೆಯುತ ನಗುವನು ಬೀರುತ ಚುಕ್ಕಿಗಳೆಡೆಯಲಿ ಮಿನುಗುವನು ಹುಣ್ಣಿಮೆ ದಿನದಲಿ  ನುಣ್ಣಗೆ ಹೊಳೆಯುತ ಎಲ್ಲರ ಮನವನು ಸೆಳೆಯುವನು ದಿನ ದಿನ ಕರಗುತ ಬಾನಲಿ ಚಲಿಸುತ ರಸಿಕರ ಕನಸನು ತುಂಬುವನು ಗಗನದ ಕುಸುಮವ ಹಿಡಿಯುವ ಆಸೆಯು ಮುಗುದೆಯ ಮನದಲಿ ತುಂಬಿಹುದು ನಿಲುಕದ ನಕ್ಷತ್ರವ ಹಿಡಿಯುವ ಬಯಕೆಗೆ ಏರುತ ಕುರ್ಚಿಯ ಮೇಲಿನಲಿ ಕೈಗಳ ಚಾಚುತ ಹಿಡಿದೆನು ಎನ್ನುತ ಭಾವವ ತೋರುತ ನಗುತಿಹಳು ಚಂದಿರ ಸಿಕ್ಕನು ಎನ್ನುವ ತೆರದಲಿ ತೋರಿತು ಕೈಗಳ ಎಡೆಯಲ್ಲಿ ಅರ್ಧ ಚಂದಿರ ನಗುವನು ಬಾಲೆಯ  ಕನಸನು ನೋಡುತ ನಭದಲ್ಲಿ ಪಂಕಜಾ.ಕೆ .ಮುಡಿಪು  ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ 18.02.2020

ಗಜಲ್ ಕಾವ್ಯಕೂಟ ದಲ್ಲಿ ದ್ವೀತಿಯ ಸ್ಥಾನ ಪಡೆದ ಚಿತ್ರಕ್ಕೊಂದು ಗಜಲ್

ಕಾವ್ಯಕೂಟ ಸ್ಪರ್ಧೆಗಾಗಿ  ಚಿತ್ರಕ್ಕೊಂದು ಗಜಲ್ ಅಬ್ಬರಿಸುವ ಕಡಲಲೆಗಳು ಕಣ್ಣ ಸೆಳೆದಿದೆ ಗೆಳತಿ ಪ್ರಕ್ಷುಬ್ಧ ಮನದಲ್ಲಿಅಶಾಂತಿ ತುಂಬಿದೆ ಗೆಳತಿ ಕರಿಮುಗಿಲು  ಬಾಂದಳವೆಲ್ಲಾ ತುಂಬಿದೆ ಮನಸು ನೂರಾರು ಹೋಳಾಗಿದೆ ಗೆಳತಿ ನುಚ್ಚುನೂರಾದ  ಕನಸುಗಳು ತೇಲುತಿವೆ ಅಲ್ಲಿ ಜೀವನೋತ್ಸಾಹವೇ ಹೊರಟು ಹೋಗಿದೆ ಗೆಳತಿ ಸಾಗರದಲೆಗಳಲಿ ಮೇಲೇರುತಿದೆ  ಚಂದ್ರ ಬಿಂಬ ಮನಕೆ ಮುದವನು ಕೊಡಲಾರದಾಗಿದೆ ಗೆಳತಿ ಪಂಕಜಾಳ ಮನವೀಗ ಸಂಪೂರ್ಣ ಬರಿದಾಗಿದೆ ಎತ್ತ ನೋಡಿದರತ್ತ ಕಾರ್ಮುಗಿಲು ಕಟ್ಟಿದೆ ಗೆಳತಿ ಪಂಕಜಾ.ಕೆ.18..5.2020

ಬಾ ಬಾರೇ ನನ್ನೊಲವೆ (ಭಾವಗೀತೆ)

ಬಾ ಬಾರೇ ನನ್ನೊಲೆವೆ ಎದೆಯಾಳದಲ್ಲಿರುವ  ಚೆಲುವಾದ ಬಾವಗಳು ಹೊರಬರಲು ತವಕಿಸುತಿದೆ ಕೇಳು ಗೆಳತಿ ಚೆಲುವಾದ ಹೂವೊಂದು ಅರಳಿರುವ ಲತೆಯಂತೆ ನೀನಿರಲು ಬಾಳೆಲ್ಲಾ ಹೂವಿನ ಹಾಸಿಗೆಯಂತೆ ಪಡಿಯಕ್ಕಿ ಎಡವಿ ನೀನಂದು ಬಂದೆ ಒಲವ ರಸ ಹರಿಸುತ್ತ ಮನದಲ್ಲಿ ನಿಂದೆ ಈ ಜೀವ ನಿನಗಾಗಿ ತುಡಿಯುತಿದೆ ನಲ್ಲೆ ನನ್ನುಸಿರು ನೀ ನಾದೆ  ನೀ ಅದನು ಬಲ್ಲೆ ಪ್ರಳಯವೇ ಆದರೂ  ಜತೆಯಾಗಿ ನಾನಿರುವೆ ಸ್ವರ್ಗದಾ ಸುಖವನ್ನು ಸವಿಯೋಣ ಇಲ್ಲೇ ಏಕಿಂತ ಮುನಿಸು ನಿನಗಿದು ತರವೇ ನಿನ್ನ ಅಗಲಿಕೆಯ ಕ್ಷಣಗಳನು ನಾ ಸಹಿಸಲಾರೆ ಕಾದಿರುವೆ ನಿನಗಾಗಿ ಒಲವ ಹೂಗಳ ಹಿಡಿದು ಮನ ಮನವು ಬರಿದಾಗಿದೆ  ನೀನಿಲ್ಲದೆ ಇಂದು ಪಂಕಜಾ.ಕೆ.

ವಯೋ ವೃದ್ಧೆ

ವಯೋ ವೃದ್ಧೆ ಬೊಚ್ಚು ಬಾಯಿ ಬಿಟ್ಟು ನಗುವ  ಮುಗ್ಧ ಮುಖದ  ಅಜ್ಜಿಯೇ ವಯಸು ತುಂಬಿ ನೆರಿಗೆ ಮೂಡಿದರು ಮುಖದಲೆಷ್ಟು  ಕಳೆಯಿದೆ ಕಷ್ಟ ನಷ್ಟ ಸಹಿಸಿ ನೀನು  ಕಳೆದ ಕ್ಷಣಗಳೆಲ್ಲವು ನೆನಪು ಮೂಡಿ  ನಗೆಯ ತಂತೆ ಹೇಳೆನ್ನ ಅಜ್ಜಿಯೇ ಬಿಸಿಲ ಝಳಕೆ ಟೋಪಿ ಇಟ್ಟು ದುಡಿವೆ ನೀನು ಮೆಲ್ಲಗೆ ರಟ್ಟೆ ಗಟ್ಟಿ ಇರುವತನಕ ದುಡಿದು ತಿನ್ನುವ ಛಲವಿದೆ ಪಂಕಜಾ.ಕೆ. ಮುಡಿಪು

ಭೂತ ಹಾಸ್ಯಕಥೆ ನವಪರ್ವದಲ್ಲಿ ಉತ್ತಮ

ಭೂತ   (ಹಾಸ್ಯ ಕಥೆ) ಅದೊಂದು ಅಮಾವಾಸ್ಯೆ ಯ ರಾತ್ರಿ ಪಕ್ಕದ ಊರಿನಿಂದ ಕೆಲಸ ಮುಗಿಸಿ ಒಳಗಿನ ದಾರಿಯಲ್ಲಿ ಮನೆಕಡೆ ಬರುತ್ತಿದ್ದ ಸಂಜೀವನಿಗೆ ರಾತ್ರಿಯ ಆ ನೀರವತೆಯಲ್ಲಿ  ಒಬ್ಬನೇ ನಡೆದು ಬರುವಾಗ ಅವರಿವರು ಹೇಳಿದ ಭೂತದ ಕತೆ ನೆನಪಾಗಿ ತುಂಬಾ ಭಯಪಡುತ್ತ ನಡೆಯುತ್ತಿದ್ದ .ಇದ್ದಕ್ಕಿದ್ದಂತೆ ಆತನ ಶಾಲನ್ನು ಯಾರೋ ಎಳೆದಂತಾಯಿತು ಆತ ಭೂತವೇ ಇರಬಹುದು ಅಂತ ಹೆದರಿ ಒಂದೇ ಉಸುರಿಗೆ ಮನೆ ಕಡೆ ದೌಡಾಯಿಸಿದ . ಬರುತ್ತಾ ಒಮ್ಮೆ ಹಿಂತಿರುಗಿ ನೋಡಿದಾಗ ಬಿಳಿಯ ಬಟ್ಟೆ ನಡೆದಾಡುವಂತೆ ಕಂಡಿತು ಆತನಿಗೆ ಭಯದಿಂದ ಉಸಿರು ಕಟ್ಟಿದಂತಾಯಿತು. ಸಾವರಿಸಿಕೊಂಡು ಹಿಂತಿರುಗಿ  ನೋಡದೆ ಸರ ಸರವೆಂದು ಮನೆ ತಲುಪಿಸದನೆ ಉಸ್ಸಪ್ಪ ಎಂದು ಕುಳಿತೇ ಬಿಟ್ಟ ಮನೆಯವರೆಲ್ಲ ಗಾಬರಿಯಿಂದ ಬಂದು ವಿಚಾರಿಸಲು ಆತ ನಡೆದ ವಿಚಾರ ತಿಳಿಸಿದ .ಭೂತ ಪಿಶಾಚಿಗಳ ಬಗ್ಗೆ ನಂಬಿಕೆ ಇಲ್ಲದ ಆತನ ಗೆಳೆಯ ಶ್ಯಾಮ್ ,ಇದನ್ನು ಕೇಳಿ ನಕ್ಕು ಭೂತನು ಇಲ್ಲ ಪಿಶಾಚಿನೂ ಇಲ್ಲ  ನಾಳೆ ಬೆಳಿಗ್ಗೆ ನೋಡೋಣ ಎಂದು ಸಮಾಧಾನ ಪಡಿಸಿದ. ಮರುದಿವಸ ಬೆಳಿಗ್ಗೆಯೇನಿನ್ನೆ ಸಂಜೀವ ಬಂದ ದಾರಿಯಲ್ಲಿ ಹೋಗಿ ನೋಡಿದರೆ ಸಂಜೀವನ ಶಾಲು  ಒಂದು ಮುಳ್ಳುಕಂಟಿಗೆ ಸಿಕ್ಕಿ ಹಾರಾಡುತ್ತಿತ್ತು .ಅದನ್ನು ಕಂಡು ಎಲ್ಲರೂ ನಕ್ಕಿದ್ದೆ ನಕ್ಕಿದ್ದು. ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಪ್ರೇಮರಾಗ (ಭಾವಗೀತೆ )ನವಪರ್ವದಲ್ಲಿ ಉತ್ತಮ

ಪ್ರೇಮ ರಾಗ.  (ಭಾವಗೀತೆ) ಒಲವ ಸೂಸುವ  ಕಣ್ಣ ನೋಟಕೆ ಹೃದಯ ರಾಗವ ಹಾಡಿತು ಮುದದಿ  ಅರಳಿತು ಮನವು ಇಂದು ನಿನ್ನ ಪ್ರೀತಿಯ ಮಾತಿಗೆ ಕಲ್ಲು ಮುಳ್ಳಿನ ದಾರಿ ಕೂಡಾ ಹೂವ ಹಾಸಿಗೆಯಾಯಿತು ಪ್ರೀತಿ ತುಂಬಿದ ನಿನ್ನ ನುಡಿಗಳು ನನ್ನ ಮನವನು ಮೀಟಿತು ನಿನ್ನ ಹೆಜ್ಜೆಗೆ ತಾಳ ಹಾಕುತ ನವಿಲ ನಾಟ್ಯವ ಮರೆಸಿತು ಬಾಳ ಪಯಣವು ಜತೆಗೆ ಸಾಗಲು ಮನದಿ  ಸಂತಸ ತುಂಬಿತು ನಿನ್ನ ಭರವಸೆಯ  ನೋಟವೊಂದೇ ತನುವು ಅರಳಲು ಸಾಲದೆ ನಿನ್ನ ಎದೆಯಲಿ ಉಸಿರ ಸೇರಿಸಿ ಪ್ರೇಮರಾಗವ ಹಾಡಿದೆ ಮನದ ಗುಡಿಯಲಿ ಬಂದು ನಿಂತು ನನ್ನ ಮನವನು  ಬೆಳಗಿದೆ ಒಲವ ತೇರನು ಜತೆಗೆ ಎಳೆಯುತ ಮನಕೆ ಹರ್ಷವ ತುಂಬಿದೆ ಪಂಕಜಾ ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಶಿಶು ಗೀತೆ ಬಣ್ಣದ ಬುಗುರಿ ನವಪರ್ವ

ಬಣ್ಣದ ಬುಗುರಿ ಅಪ್ಪನು ತಂದ ಬಣ್ಣದ ಬುಗುರಿ ಗಿರಿ ಗಿರಿ ತಿರುಗುವ ಚಂದದ ಬುಗುರಿ ಕಣ್ಣನು ಸೆಳೆಯುವ ಅಂದದ ಬುಗುರಿ ಮೋಡಿಯ  ಮಾಡುವ ಚೆಲುವಿನ ಬುಗುರಿ ರಜೆಯಲಿ ಮಜವನು ಕೊಡುತಿದೆ ಬುಗುರಿ ಹಗ್ಗವ ಎಳೆದು ಜಗ್ಗನೆ ಬಿಡಲು ಗಿರ ಗಿರ ತಿರುಗುವ  ಹೊಳೆಯುವ  ಬುಗುರಿ ಆಡೋಣ ಬಾರೇ ನನ್ನಯ ಮುದ್ದಿನ ತಂಗಿ ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್.ಮಾಸ್ಟರ್

ಬಾಳಗೆಳತಿ ಕಾವ್ಯಕೂಟ ದಲ್ಲಿ ದ್ವಿತೀಯ 14.4.2020

ಚಿತ್ರ ಕವನ ಸ್ಪರ್ಧೆಗಾಗಿ    ಬಾಳ ಗೆಳತಿ ವಯಸಾದರೇನಂತೆ  ನಮ್ಮಿಬ್ಬರಿಗೆ ಪ್ರೀತಿಗಿದೆಯೇ ಹೇಳು ವಯಸಿನ ಪರಿವೆ  ನಿನಗಾಗಿ ತಂದಿರುವೆ ಈ ಪುಟ್ಟ ಸೈಕಲ್ ಬೇಕಿಲ್ಲ ನಮಗೆ ಹೊಗೆಯು ಗುಳುವ ಬೈಸಿಕಲ್ ಹೋಗೋಣ ಬಾರೇ ಜತೆಯಾಗಿ ಕುಳಿತು ಸಾಗೋಣ ಬಾರೇ ಜಗವನ್ನು ಮರೆತು ಬಾಳಲ್ಲಿ ಈಗ ಬಂದೈತೆ ಕನಸು ನಾವಿಬ್ಬರೊಂದಾಗಿ ನಲಿಯೋಣ ಸರಸು ಮಳೆಯಿರಲಿ ಚಳಿಯಿರಲಿ ನಮಗೇಕೆ ಚಿಂತೆ ನಿನಗಾಗಿ ನಾನಿರುವೆ ಕೇಳಿಲ್ಲಿ ಕಾಂತೆ ಜತೆಯಾಗಿ ಸಾಗೋಣ ಜಗವನ್ನು ಮರೆತು ದುಡಿಯೋಣ ಇಬ್ಬರೂ ಒಂದಾಗಿ ಬೆರೆತು ಕಲ್ಲು  ಮುಳ್ಳಿನ ದಾರಿಗೆ ಇರುವೆ ನೀ ಸಂಗಾತಿ  ಜತೆಯಾಗಿ ನೀನಿರಲು ಬೇಕಿಲ್ಲ ಅತಿ ಪಂಕಜಾ.ಕೆ

ನ್ಯಾನೊ ಕಥೆ ಅಮ್ಮ. ನವಪರ್ವದಲ್ಲಿ ಅತ್ಯುತ್ತಮ 12...5 2020

ನವಪರ್ವ ಗ್ರೂಪಿಲಿ ಅತ್ಯುತ್ತಮ ಹೇಳಿ ಆಯ್ಕೆಯಾದ ನನ್ನ ನ್ಯಾನೊ.ಕಥೆ  12.5.2020            .ಅಮ್ಮ    ...ಬಡತನದಲ್ಲೂ. ತನ್ನ ಮಗನನ್ನು  ಚೆನ್ನಾಗಿ ಸಾಕಿದ ಆಕೆಯ ತ್ಯಾಗವನ್ನು ತಿಳಿಯದೆ   , ಆತ ಆಕೆಯನ್ನು ವೃದ್ಧಾಶ್ರಮದಲ್ಲಿ ಬಿಟ್ಟಿದ್ದ .  ಆವತ್ತು ಒಂದು ದಿನ   ಆತ ವೃದ್ದಾಶ್ರಮಕ್ಕೆ ಭೇಟಿ.ಕೊಟ್ಟಾಗ ,ಅಲ್ಲಿಯ  ನರ್ಸುಗಳು ಮಾತನಾಡುವುದು ಕೇಳಿ  ದುಃಖಿತನಾಗಿ ತಾಯಿಯನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ನೋಡಿಕೊಂಡ . .ಆಕೆ  ಕಸದ ತೊಟ್ಟಿಯಿಂದ  ಮಗುವನ್ನು ತಂದು  ಸಾಕಿದ್ದು ಸಾರ್ಥಕವಾಯಿತೆಂದು ಕಣ್ಣೀರು ಮಿಡಿದಳು ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಮನೆಮದ್ದು

HOME   |   SEARCH   |   REGISTER RSS   |   MY ACCOUNT   |   EMBED RSS   |   SUPER RSS   |   Contact Us   | World News in Kannada: Latest International World News in Kannada | Vijaya Karnataka http://vijaykarnataka.indiatimes.com/rssfeeds/11181729.cms Copyright:(C) 2020 Bennett Coleman & Co. Ltd, http://in.indiatimes.com/policyterms/1554651.cms Are you the publisher?  Claim  or  contact us  about this channel Embed  this content in your HTML   Search               This Channel               RSSing.com             Report adult content: click to rate         Account: ( login ) Ad by   Valueimpression  More Channels  Showcase  Channel Catalog Subsection Catalog  Articles on this Page (showing articles 6501 to 6520 of 8734) 01/02/18--15:30: _ಮನೆ ಮದ್ದು 01/03/18--02:00: _ಮನೆ ಮದ್ದು:ರಕ್ತಹೀನತೆ... 01/04/18--15:30: _ಮನೆ ಮದ್ದು: ಮುಖದ ಕಾಂ... 01/05/18--15:30: _ಮನೆ ಮದ್ದು: ಕಣ್ಣಿನ ಸ... 01/06/18--16:00: _ಮನೆ ಮೆಡಿಸಿನ್‌: ಕಿತ್... 06/17/17--17:00: _ಶಿಶುಗೀತೆ: ಮರಳಿ ಶಾಲೆಗೆ 07/08/17--17:00: _ಶಿಶುಗೀತೆ: ಗಾಳಿಪಟ