Skip to main content

Posts

Showing posts from December, 2023

ದುಂಡನೆ ಚಂದಿರ

ದುಂಡನೆ ಚಂದಿರ  ಪರಿವರ್ಧನಿ ಷಟ್ಪದಿ ರಾತ್ರಿಯ ಕತ್ತಲ ತೆರೆಯನು  ಸರಿಸುತ ಧಾತ್ರಿಯ ಮಡಿಲಲಿ  ಬೆಳಕನು  ಹರಡುತ ಮೈತ್ರಿಯ  ಬೆಳೆಸಲು ಬಂದನು ಚಂದಿರ  ತಿಂಗಳ  ದಿನಗಳಲಿ ಜಾತ್ರೆಯ ತೆರದಲಿ  ಲೋಗರು ನೆರೆದರು ಪಾತ್ರೆಯಲಿಣುಕುವ ಬಿಂಬವ ಕಾಣಲು ಪಾತ್ರಿಯು ಬಂದನು ಪೂಜೆಯ ಮಾಡಲು  ಬೊಗಸೆಯನೊಡ್ಡುತಲಿ ಅಂಗಳದೆಲ್ಲೆಡೆ ಹಾಲನು ಚೆಲ್ಲುತ ತಿಂಗಳ ಬೆಳಕನು ಮೆಲ್ಲನೆ  ಹರಡುತ  ಕಂಗಳ ತುಂಬುವ ದುಂಡನೆ ಚಂದಿರ ಮಕ್ಕಳ ಸೆಳೆಯುವನು ಸಂಗಡವಿರುತಿಹ ತಾರೆಗಳೊಡನೆಯೆ ಭಂಗವ ತಾರದ ತೆರದಲಿ ನಲಿಯುತ ರಂಗನು ತುಂಬುತ ಹರೆಯದ ಮನದಲಿ  ಕನಸನು ಮೂಡಿಸಿದ  ಹರಿಯುವ ನೀರಲಿ ಬಿಂಬವ ಕಲಸುತ ಬರೆದನು ಸುಂದರ  ಚಿತ್ರವ  ಮನದಲಿ ಕರೆದನು ಸೊಗದಲಿ  ತರುಣಿಯ  ಕೆಣಕುತ ಹಾಸವ ಬೀರುತಲಿ ಮರೆಸಿದ  ತರುಣರ ತನುವನು ಬೇಗನೆ ಹರಿಸಿದ ಹಾಲಿನ ಹೊಳೆಯನು ಧರೆಯಲಿ ಕರೆದನು  ರಸಿಕರ   ತನ್ನೊಡನಾಡಲು  ಕಣ್ಣನು ಮಿಟುಕಿಸುತ  ಪಂಕಜಾ .ಕೆ. ರಾಮಭಟ್

ಮೌನ ಬಂಗಾರ ಕಥೆ

ಮೌನ ಬಂಗಾರ ತನ್ನ  ಬಾಲ್ಯ ಸ್ನೇಹಿತ ರಮೇಶನ ಮದುವೆಗೆ  ಬರಲಾಗದಿದ್ದದ್ದು  ಸಂದೇಶನಿಗೆ ತುಂಬಾ ಬೇಸರವಾಗಿತ್ತು.     ದೇಹ ಎರಡು ಒಂದೇ ಜೀವ ಎನ್ನುವ ತರ ಬೆಳೆದ ಅವರು  ಸ್ನಾತಕೋತ್ತರ ಪದವಿಯವರೆಗೂ ಒಟ್ಟಿಗೆ  ಶಾಲೆ ಕಾಲೇಜುಗಳಿಗೆ ಹೋಗಿ ಬರುತ್ತಿದ್ದರು .ಉದ್ಯೋಗದ ನಿಮಿತ್ತ ದೂರವಿದ್ದರೂ  ತಿಂಗಳಿಗೆ  ಒಮ್ಮೆ ತಪ್ಪಿದರೆ ಎರಡು ತಿಂಗಳಿಗೆ ಒಮ್ಮೆಯಾದರೂ ಭೇಟಿಯಾಗಿ ಸುಖ ದುಃಖ ಹಂಚಿ ಕೊಳ್ಳುತ್ತಿದ್ದರು . ಅಂತ ಸ್ನೇಹಿತ ತನ್ನ ಮದುವೆಗೆ ಖುದ್ದಾಗಿ  ಬಂದು  ತನ್ನ  ಮನದನ್ನೆಯನ್ನು ಪರಿಚಯಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಆಕೆಯ ಫೋಟೋವನ್ನು  ಕೂಡಾ ಗೆಳೆಯನಿಗೆ ಕಳಿಸಿಲ್ಲ .           ಗೆಳೆಯನ  ಮದುವೆಗೆ ಹೋಗಬೇಕೆಂದಿದ್ದಾಗ ಅತ್ಯವಸರದ ಕೆಲಸದ ಮೇಲೆ  ಡೆಲ್ಲಿಗೆ ಹೋಗಬೇಕಾಗಿದ್ದುದರಿಂದ ಗೆಳೆಯನ ಮದುವೆಗೆ ಬರಲು ಸಂದೇಶನಿಗೆ  ಆಗಲಿಲ್ಲ  . ಒಮ್ಮೆ ಹೋಗಿ ಬರಬೇಕು ಎಂದು ಇದ್ದರೂ ಆ ಕೆಲಸ ಈ ಕೆಲಸ ಎಂದು  ಬಿಡುವು  ಸಿಗದೆ ಇದ್ದ ಕಾರಣ ಸಂದೇಶನಿಗೆ ಗೆಳೆಯನನ್ನು ಭೆಟ್ಟಿಯಾಗುವುದು  ಸಾಧ್ಯವಾಗಲಿಲ್ಲ                 ಹಾಗೆಯೇ ತಿಂಗಳುಗಳುರುಳಿ  ತಿಂಗಳು ಕಳೆಯಿತು  ದಿನಾ  ಫೋನ್ ಮಾಡಿ ಜಗಳ ಮಾಡುವ ಸ್ನೇಹಿತ  ರಮೇಶನ ಕಾಟ ತಾಳಲಾರದೆ  ವಾರದ ರಜೆ  ಮೇಲೆ  ಸಂದೇಶ ಗೆಳೆಯನನ್ನು ಕಾಣಲು ಹೊರಟಿದ್ದ               . ಮದುವೆಯಾದ ಲಾಗಾಯ್ತು ಗೆಳೆಯನ ಪತ್ರದ ಮುಖಾಂತರ ಅವರಿಬ್ಬರೂ ಎಷ್ಟೊಂದು  ಪ್ರೀತಿಸುತ್ತಾರೆ ಎನ್ನುವುದನ್ನು ತಿಳಿದಿದ್ದ ಸಂದೇಶ ಇಷ್ಟು ಅತ