Skip to main content

Posts

Showing posts from June, 2021

ರಾಯಚೂರು ಘಟಕ 7 ಕವನ

[14/03, 4:34 pm] Pankaja K: ಗುರುಕುಲಾ  ಜಿಲ್ಲಾಘಟಕ ರಾಯಚೂರು ವಾರಕ್ಕೊಂದು ಕವನ. ಸ್ಪರ್ಧೆಗಾಗಿ  ವಿಷಯ..ಅಂತರಂಗದ ಮೌನ ಮಾತು          ಒಲವಿನ ಸರದಾರ  ಭಾವನೆಗಳ ಭಾರದಲಿ ಹೃದಯ ಜಗ್ಗುತಿದೆ  ಅಂತರಂಗದ ಮೌನ ಮಾತಾಗಿ ಹರಿದಿದೆ  ಒಲವಿನ ಪಯಣಕ್ಕೆ ನೀ ಜತೆಯಾದಾಗ  ಮನದಲಿ ಚೆಲುವಾದ ಕನಸುಗಳರಲಿದೆ   ಎದೆಯಾಳದಲಿ ಅವಿತಿರುವ ಕನಸುಗಳು ಗರಿಬಿಚ್ಚಿ ನವಿಲಿನಂತೆ  ನರ್ತಿಸುತ್ತಿದೆ ಇನಿಯಾ ನಿನ್ನೊಡನಾಟದಲಿ ಮನವು ಸಂತಸದ ಕಡಲಾಗಿದೆ ಬಾಳಿನ ಪಯಣದಲಿ  ನೀ ಜತೆಯಿರಲು ದಾರಿಯ ಕಲ್ಲು ಮುಳ್ಳುಗಳೆಲ್ಲಾ ಹೂವಾಗಿದೆ ನನ್ನ ಮನದ ಒಲವಿನ  ಸರದಾರ ನೀನು ಹೃದಯವು ರಾಗವಾಗಿ ಮಧುರ ಗೀತೆ ಹಾಡಿದೆ ನಿನ್ನೆದೆಯ ಪಿಸುಮಾತುಗಳಿಗೆ ಕಿವಿಯಾಗುತ ನಾ ನಲಿಯುತಿರುವೆ ಬಾಂದಳದ ಬೆಳ್ಳಿ ಚುಕ್ಕೆಯಂತೆ ನೀನಿರಲು ಬಾಳೆಲ್ಲಾ ನವ ವಸಂತವೇ ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು.ದ.ಕ.574153 [21/03, 8:13 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ  ಜಿಲ್ಲಾ ಘಟಕ ರಾಯಚೂರು ವಾರಕ್ಕೊಂದು ಸ್ಪರ್ಧೆಗಾಗಿ ಹಾಯ್ಕುಗಳು  ಹಾಯ್ಕು. 1 ಜೀವನ ಗುರಿಯಿರಲಿ ಯಶಸ್ಸು ಪಡೆಯಲು ಜೀವನದಲ್ಲಿ  ಹಾಯ್ಕು 2   ಶಿಕ್ಷಣ ಸಿಗಬಹುದು ಜಗತ್ತಿನ ಅರಿವು ಶಿಕ್ಷಣದಿಂದ ಹಾಯ್ಕು 3 ರಾಜಕೀಯ ರಾಜಕೀಯವು ಕಾಲೆಳೆಯುವವರ ಡೊಂಬರಾಟವು ಹಾಯ್ಕು 4  ಉದ್ಯೋಗ ಉದ್ಯೋಗದಿಂದ ಭವಿಷ್ಯಕ್ಕೆ ಭದ್ರತೆ ನಿರಾಳಮನ ಹಾಯ್ಕು 5 ಪ್ರೀತಿ ಪ್ರೀತಿಯಿದ್ದರೆ ಜೀವನ ಸುಂದರವು ಜೀವದುಸಿರು ಶ್ರೀಮತಿ. ಪಂಕಜಾ.ಕೆ.. ಮುಡಿಪು

ಮೂಢನಂಬಿಕೆ

ವಿಷಯ..ಮೂಢನಂಬಿಕೆ ಶೀರ್ಷಿಕೆ....ಕಡಿದೊಗೆಯಿರಿ ಮೌಢ್ಯವ ಮೂಢನಂಬಿಕೆ ಹಾಸುಹೊಕ್ಕಿದೆ ಮನುಜ ಜೀವನದೆಲ್ಲೆಡೆ ಪ್ರಾಣಿ ಪಕ್ಷಿಗಳ ಕೂಗಿಗೊಂದು ಮೂಢನಂಬಿಕೆಯ ಅಂಟಿಸಿ ಮಾಟ ಮಂತ್ರ ಎನುತ ಹೆದರಿಸಿ ಮುಗ್ಧ ಮನಗಳ ವಂಚಿಸಿ ಮಂತ್ರ ತಂತ್ರಗಳ ಬಲೆಯಲಿ ಕೆಡವುತ ಕಾಸು ಕೀಳುವರು ಮೋದಕೆ  ಕೈಯಲಾಗದ ಸೋಮಾರಿಗಳಿಗೆ  ಕಾಸು ಮಾಡುವ ದಾರಿಯು  ಅರಿಯಬೇಕಿದೆ   ಮೊಸಗಾರರ  ಮೋಸವಂಚನೆ ಜಾಲವ   ಮನದಲಿರುವ ಅಂಜಿಕೆಗಳೇ ಕಷ್ಟ ನಷ್ಟ ಕೆ ಕಾರಣ ಧೈರ್ಯದಿಂದ ಎದುರಿಸುತಿರಲು ಬಾಳಲಿರುವುದು ಹೂರಣ ಸೋಲು ಗೆಲುವು ಜಗದ ನಿಯಮವು ಹಾಕಬೇಡಿರಿ ಮೂಢನಂಬಿಕೆ ತಳಕನು ವೈಜ್ಞಾನಿಕ ಮನೋಭಾವನೆ ಬೆಳೆಸುತ ಕಡಿದೊಗೆಯಿರಿ  ಮೌಢ್ಯವ ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್ ಕುರ್ನಾಡು.ದ.ಕ.

ಲೇಖನ

ಲೇಖನ  ವಿಷಯ .ಭ್ರಷ್ಟಾಚಾರ,ರಾಜಕಾರಣ ಮತ್ತು ಸಾಹಿತ್ಯ ನಿರ್ಮಾಣದ ಸವಾಲುಗಳು ಬ್ರಷ್ಟಾಚಾರವೆನ್ನುವುದು ಇಂದಿನ ದಿನಗಳಲ್ಲಿ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ.  ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸ ವಾಗಬೇಕಿದ್ದರೂ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗಲು ಸಾಧ್ಯ. ದುಡ್ಡು ಇಲ್ಲದವನನ್ನು ಕೇಳುವವರೇ ಇಲ್ಲವೆಂದಾಗಿದೆ.  ಬ್ರಷ್ಟಾಚಾರವು ಸ್ವಚ್ಛ ಸಮಾಜಕ್ಕೆ ಅಂಟಿದ ಕಳಂಕ.ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬ್ರಷ್ಟಾಚಾರವು ದಿನದಿಂದ ದಿನಕ್ಕೆ  ತನ್ನ ಕಬಂಧ ಬಾಹುವನ್ನು ಚಾಚಿ ಎಲ್ಲೆಡೆಯೂ ಹಬ್ಬಿದೆ .  ರಾಜಕಾರಣವು ಅವ್ಯವಸ್ಥೆಯ ಆಗರವಾಗಿದೆ. ಮೇಲಿನಿಂದ ಕೆಳಗಿನವರೆಗೂ,ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.ಜನಸಾಮಾನ್ಯ ಇದರ ಕಪಿ ಮುಷ್ಠಿಯಲ್ಲಿ ಸಿಲುಕಿ ನರಳುತ್ತಿದ್ದಾನೆ . ಪ್ರತಿಯೊಬ್ಬರು ತಮ್ಮ ಸುಖವನ್ನು ಮಾತ್ರ ಕಂಡು ಕೊಳ್ಳುವ ಮನೋಭಾವ ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಕ್ಕಾಗಿ ಮೀಸಲಿಟ್ಟ ಹಣವೆಲ್ಲವು ಭ್ರಷ್ಟ ರಾಜಕಾರಣಿಗಳಿಂದಾಗಿ ಸೇರಬೇಕಾದ ಕಡೆ ಸೇರದೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಬ್ರಷ್ಟಾಚಾರವೆನ್ನುವುದು ಎಂದು ನಿರ್ಮೂಲನವಾಗುವುದೋ ಅಂದೇ ಭವ್ಯ ಭಾರತದ ನಿರ್ಮಾಣ ಸಾಧ್ಯ.ಆದರೆ ಪಾರ್ಥೇನಿಯಂ ಕಳೆಯಂತೆ ಇದರ ನಿಯಂತ್ರಣ ಸುಲಭವಲ್ಲ.           ಬ್ರಷ್ಟಾಚಾರವು ಸಾಹಿತ್ಯಕ್ಷೇತ್ರಕ್ಕೂ ತನ್ನ ಕಬಂಧ ಬಾಹುವನ್ನು ಚಾಚಿದೆ .ಇದರಿಂದಾಗಿ ಅರ್ಹರಿಗೆ ಅವಕಾಶ ಸಿಗದೆ ಅನರ್ಹರೇ  ಗುರುತಿಸಿಕೊಳ್ಳುವಂತಾಗಿದೆ.ಹಣ ಕೊಟ್ಟು