Skip to main content

Posts

Showing posts from September, 2022

ಲೇಖನ ಹಸಿರೆ ಉಸಿರು

   43   ಹಸಿರೇ. ...ಉಸಿರು ಮುಂಗಾರು ಮಳೆ ಪ್ರಾರಂಭವಾಯಿತೆಂದರೆ ಮನೆಯ ಸುತ್ತು ಮುತ್ತು ಗಿಡಗಳನ್ನು ನೆಟ್ಟು ಬೆಳೆಸುವುದು  ಹವ್ಯಾಸವನ್ನು ಬೆಳೆಸಿಕೊಳ್ಳಬೇಕು   ಕೈತೋಟ ಮಾಡುವುದು ಸುಲಭವಲ್ಲ .ಅದಕ್ಕೆ ಶ್ರದ್ಧೆ ಶ್ರಮ ಅಸಕ್ತಿಹಾಗೂ ಸಮಯ ಬೇಕು   ಆಸಕ್ತಿ ಇದ್ದವರಿಗೆ ಕೈತೋಟದಲ್ಲಿ ಕೆಲಸಮಾಡುತ್ತಿದ್ದರೆ ಸಮಯ ಸರಿದುದೇ ತಿಳಿಯುವುದಿಲ್ಲ. ಹಿಂದಿನ ವರ್ಷ ಜತನದಿಂದ ಕಾದಿಟ್ಟ ತರಕಾರಿ ಬೀಜಗಳನ್ನು ಹಾಕಿ ಅದು ಇರುವೆಗಳ ಪಾಲಾಗದಂತೆ ಜಾಗ್ರತೆವಹಿಸಿ ಉತ್ತಮವಾಗಿ ಬೆಳೆದು ಫಲ ಸಿಗುವಂತೆ ಮಾಡುವುದು ಸುಲಭದ ಕೆಲಸವಲ್ಲ.                ಸ್ಥಳಾವಕಾಶವಿದ್ದರೆ  ನಮ್ಮ ಮನೆಯ ಹಿತ್ತಲಿನಲ್ಲಿ  ಹಲವಾರು ಹೂಗಿಡಗಳನ್ನು , ಔಷಧೀಯ ಗಿಡಗಳನ್ನು, ತರಕಾರಿ ಹಣ್ಣಿನ ಗಿಡಗಳನ್ನೂ ಬೆಳೆಸಬೇಕು  . ಇದರಿಂದ ಮನೆಗೆ ಬೇಕಾದ ತರಕಾರಿಯನ್ನು ಮಾರ್ಕೆಟ್ ನಿಂದ ತರುವ ಶ್ರಮಮತ್ತು ಹಣದ ಉಳಿತಾಯವಾಗುತ್ತದೆ,ಅಲ್ಲದೆ ಸಾವಯವ ತರಕಾರಿ  ಸಿಗುತ್ತದೆ .ಮನೆಯಲ್ಲೇ ಬೆಳೆಸಿದ ಹಸಿರು ಸೊಪ್ಪು ತರಕಾರಿಗಳು ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯವರ್ಧಕವೂ ಆಗಿರುತ್ತದೆ                      ಹೂವು   ತರಕಾರಿಗಳನ್ನು ಮನೆಯಂಗಳದಲ್ಲಿ ಬೆಳೆಸುವುದರಿಂದ  ಮನೆಗೆ ಬೇಕಾದ ಹೂವು ತರಕಾರಿಗಳನ್ನು ಕೊಂಡು ತರಬೇಕಾಗಿಲ್ಲ  .ಮಳೆಗಾಲದಲ್ಲಿ ಅವುಗಳ ಆರೈಕೆ,  ಬೇಸಿಗೆಯಲ್ಲಿ ನೀರುಣಿಸುವ ಕೆಲಸ, ಇತ್ಯಾದಿ ಮಾಡುವುದರಿಂದ ಶರೀರಕ್ಕೆ ಬೇಕಾದ  ವ್ಯಾಯಾಮವು ಸಿಕ್ಕಿ  ಶರೀರ ಆರೋಗ್ಯವಾಗಿರಲು ಸಹಕಾರಿಯಾಗುತ

ಡ್ಯುಯೆಟ್ ಸಾಂಗ್

ಡ್ಯುಯೆಟ್ ಸಾಂಗ್ ಪ್ರೇಮದ ಪಯಣ ಗಂಡು .. ನಿನ್ನಂದಕೆ ನಾ ಸೋತೆನು ನಿನ್ನ ಕಣ್ಣೋಟಕೆ ಮರುಳಾದೆನು ಹೆಣ್ಣು. ಓಹೋಹೋ  ನನ್ನ ಮನಸು ಹುಚ್ಚಾಗಿದೆ  ಮೈಮನಸು ಆಸೆಯ ಕಡಲಾಗಿದೆ ಗಂಡು..ನಾ ತಾಳಲಾರೆ ಈ ಬೇಗೆಯಾ ನನ್ನ ಮೈ ಮನಸು ಆಸೆಯಾ ಕಡಲಾಗಿದೆ ಹೆಣ್ಣು..ಓಹೋ ಹೋ ಆಹಾಹಾ ನನ್ನ ಮನಸು  ನಿನ್ನಲೆ ನೆಟ್ಟಿದೆ ನನಗೂ ನಿನ್ನ ಮೇಲೆ ಒಳವಾಗಿದೆ  ನಿನ್ನ ಕಂಡು ಒಲವಾಗಿದೆ ಗಂಡು.  ನಿನ್ನಂದಕೆ ನಾ ಸೋತೆನು ನಿನ್ನ ಕುಡಿನೋಟಕೆ ನಾ ಮರುಳಾದೆನು ಹೆಣ್ಣು. ಯಾವೂರ ಗಂಡು ನೀನು  ಕಣ್ಣೋಟದೆ ಕಾಡುವೆಯೇಕೆ  ಗಂಡು   ಮನಸಿಂದು ಹುಚ್ಚಾಗಿದೆ ನನ್ನ ಮೈಯೆಲ್ಲಾ ಬಿಸಿಯಾಗಿದೆ  ಹೆಣ್ಣು ಗಂಡು ಜತೆಯಾಗಿ  ನಾವಿಬ್ಬರು ಒಂದಾಗುವ   ಈ ರಾತ್ರಿ ಚಂದಿರನು ಮರೆಯಾದನು  ನಮ್ಮ ಪ್ರೇಮ ನೋಡಿ ನಾಚಿದನು  ಇಂದು ಒಲವೆಲ್ಲಾ ನಮದಾಗಿದೆ   ಪಂಕಜಾ.ಕೆ..ಮುಡಿಪು

ಲೇಖನ

 ಲೇಖನ   ವಿಷಯ..ಹಾಸ್ಯ ಪ್ರಜ್ಞೆಯಿಂದಾಗುವ ಆರೋಗ್ಯ ಮತ್ತು ಇತರ ಲಾಭಗಳು ಹಾಶ್ಯ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ ಹಾಸ್ಯವಿಲ್ಲದಿದ್ದರೆ ಜೀವನ ನೀರಸವಾಗಬಹುದು.    ಆದ್ದರಿಂದ ನಾವು  ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಪುರಾಣ ಕಾಲದಿಂದಲೂ ಹಾಸ್ಯಕ್ಕೆ ಮೊದಲ ಪ್ರಾಶಸ್ಯವಿದೆ.ರಾಜ ಮಹಾರಾಜಾರೂ ತಮ್ಮ ಒತ್ತಡ ನಿವಾರಣೆಗಾಗಿ ತಮ್ಮ ಆಸ್ಥಾನದಲ್ಲಿ ವಿದೂಷಕರನ್ನು ನೇಮಿಸಿ ಅವರ ಹಾಸ್ಯಕ್ಕೆ ನಕ್ಕು ಹಗುರವಾಗುತ್ತಿದ್ದರು.ಇಂದಿನ ಒತ್ತಡದ ಬದುಕಿಗೆ ಹಾಸ್ಯ ಅನಿವಾರ್ಯ ,ಆದ್ದರಿಂದ ಮಹಾನಗರಗಳಲ್ಲಿ ನಗಲು ಮತ್ತು ನಗಿಸಲಿಕ್ಕೆಂದೇ ಕ್ಲಬ್ ಗಳು ತಲೆಯೆತ್ತಿತುತ್ತದೆ .ಜನರು ಈ ಕ್ಲಬ್ ನ ಸದಸ್ಯರಾಗಿ ಅಲ್ಲಿ ನಕ್ಕು ತಮ್ಮ ಬೇಸರ ನೋವು ಒತ್ತಡವನ್ನು ಕಳೆದುಕೊಂಡು ಹಗುರವಾಗುತ್ತಿದ್ದಾರೆ.                      ನಗು ಎನ್ನುವುದು ದೇವರು ಮನುಷ್ಯನಿಗೆ ಕೊಟ್ಟ ವರಎಂದರೆ ಅತಿಶಯೋಕ್ತಿಯಲ್ಲ.  ಮನುಷ್ಯನನ್ನು ಬಿಟ್ಟು ಬೇರೆ ಯಾವ ಪ್ರಾಣಿಗಳಾಗಲೀ ಪಕ್ಷಿಗಳಾಗಲಿ  ನಗಲಾರವು. ನಗುವಿನಲ್ಲಿ ಒಂದು ಮಾಂತ್ರಿಕ ಶಕ್ತಿಯಿದೆ,ಇದರಿಂದ ಅನೇಕ ಮಾನಸಿಕ ಹಾಗೂ ಶಾರೀರಿಕ ರೋಗಗಳು ಗುಣವಾಗುವುದು. ನಗು ಸಾರ್ವತ್ರಿಕ ಒಬ್ಬರ ಮುಖದ ನಗು ಇನ್ನೊಬ್ಬರ ಮುಖದಲ್ಲೂ ನಗೆಯನ್ನು ತಾರದೆ ಇರದು.ಕೆಟ್ಟವರನ್ನೂ ಒಳ್ಳೆಯವರನ್ನಾಗಿಸುವ ವೈರಿಗಳನ್ನೂ ಮಿತ್ರರನ್ನಾಗಿಸುವ ಶಕ್ತಿ ನಗುವಿಗಿದೆ.ನಗುವಾಗ ಮುಖದ ಸ್ನಾಯುಗಳು ಸಡಿಲಗೊಳ್ಳುತ್ತದೆ ಇದರಿಂದ ಮುಖದ ಅಂದ ಹೆಚ್ಚುವುದು,ವಯಸ್ಸಿನ ಚಿ