Skip to main content

Posts

Showing posts from July, 2019

ಮೂರು ನಗೆ ಹನಿಗಳು

ಮೂರು ಹನಿಗಳು ನಾನೇ ರೀ ನಗುಮೊಗದಿ ನಿಂತಿದ್ದ ಚೆಲುವೆಯನು ಕಂಡು ನೀನಾರೆ ಎಂದು ಹತ್ತಿರ ಹೋದರೆ ನಾನೇ ರೀ ಎನ್ನುವುದೇ ರಾಣಿ ರಜತ ಪರದೆಯ ಎದುರು ಆಕೆ ರಾಣಿ ಪರದೆ ಬಿದ್ದೊಡನೆ ಆಕೆ ಒಂದು ಪ್ರಾಣಿ ನಾರಿ ದೂರದಲ್ಲಿ ಕಂಡನವ ಹಾರಾಡುವ ಸಾರಿ ಆಶೆಯಿಂದ ಬಂದ ಬಳಿಸಾರಿ ಸೆರಗ ಸರಿಸಲಲ್ಲಿ ಕಂಡ ಸ್ತ್ರೀ ವೇಷಧಾರಿ😀 ಪಂಕಜಾ ಕೆ. ಮುಡಿಪು

ಮೊರೆ ಉತ್ತಮ ಕವಿತೆ ಪುರಸ್ಕಾರ

*ಎಲ್ಲರಿಗೂ ನಮಸ್ಕಾರ* 🙏🙏🙏🙏🙏🙏🙏🙏 *ಇಂದು ಚಂದಿರನಂಗಳದಲ್ಲಿ ತಿರುಪತಿ ತಿಮ್ಮಪ್ಪನನ್ನುಹಾಡಿ ಹೊಗಳಿ ಬಂದ ಭಕ್ತಿಗೀತೆಗಳೆಲ್ಲವೂ ಭಕ್ತಿ ಭಾವ ಹೊಮ್ಮಿಸಿ ಎಲ್ಲರ ಮನವನ್ನು ಪರವಶಗೊಳಿಸಿದವು* 💐💐💐💐💐💐💐💐 *ಇಂದು ಅತೀ ಸುಂದರವಾಗಿ ಭಕ್ತಿಪ್ರದಾನ ಗೀತೆಗಳನ್ನು ಬರೆದ ಕವಿಮನಗಳಿಗೆ ನಮನಗಳು* *ಸ್ನೇಹ ಸಂಗಮವು ಇಂದು ಇಂದು ಥೇಟು ತಿರುಮಲಗಿರಿಯಂತೆಯೇ ಸಂಭ್ರಮಿಸಿತು* 🙏🙏🙏🙏🙏🙏🙏🙏 🏆 *ಇಂದಿನ ಅತ್ಯುತ್ತಮ ಗೀತೆ* *ಭೂಮಿ.. ಭಾಮಾ ರವರ ದಶಾವತಾರಿ* 🌲🌲🌲🌲🌲🌲🌲🌲 *ಉತ್ತಮವಾಗಿ ಬರೆದವರು* 🥇 *ಪಂಕಜಾ ಮುಡಿಪು ರವರ ಮೊರೆ* 👏🏻👏🏻👏🏻💐💐💐

ವಿಮರ್ಶೆ ಲಕ್ಷ್ಮಿಸ್ತುತಿ ಕವನದ ಬಗ್ಗೆ

ಪಂಕಜಾ,ಕೆ.ಮುಡಿಪು ಅವರ ಲಕ್ಷ್ಮಿಸ್ತುತಿ ಭಕ್ತಿಗೀತೆ ಕುರಿತು ಸುಂದರ ಪದಗಳ ಗುಚ್ಛ.ಸುಲಲಿತವಾಗಿ ಓದಿಸಿಕೊಂಡು ಹೋಗುವ ರಚನೆ.ಲಯವಿದೆ.ಗೇಯತೆಯೂ.ಪ್ರಾಸವಿಲ್ಲದಿದ್ದರೂ ಕೊರತೆಯೆನಿಸದು.

ವಿಮರ್ಶೆ ಮೊರೆ ಕವನದ ಬಗ್ಗೆ

[27/07, 5:35 PM] pankajarambhat: *ಪಂಕಜ* ರವರ ಭಕ್ತಿಗೀತೆ ತುಂಬಾ ಲಯಬದ್ದವಾಗಿ, ಭಕ್ತಿ ಭಾವ ತುಂಬಿದ ಅದ್ಭುತವಾದ ಗೀತೆ. ಮತ್ತೆ ಮತ್ತೆ ಓದುವಂಥ , ಮಕ್ಕಳಿಗೆ  ಕಂಠಪಾಠ ಮಾಡಿಸಿ ಪ್ರತಿನಿತ್ಯ ಹೇಳುವಂತಿರುವ ಗೀತೆ. ಧನ್ಯವಾದಗಳು ಮೇಡಂ ಶ್ಯಾಮ [27/07, 5:39 PM] pankajarambhat: *ಪಂಕಜಾ ರವರ ಮೊರೆ ಎಂಬ ಭಕ್ತಿಗೀತೆಯು ವೆಂಕಟರಮಣನನ್ನು ಸಂಕಟ ನಿವಾರಿಸುವವನೆಂದು  ಹೇಳುತ್ತಾ ನಿತ್ಯವೂ ಭಜಿಸುವೆನೆನ್ನುತ್ತಾರೆ. ಲಕ್ಷ್ಮೀರಮಣನನ್ನು ವಿಧವಿಧನಾಮಗಳಿಂದ ಹೊಗಳುತ್ತಾ...ಭವಬಂಧನದಲ್ಲಿ ಸಿಲುಕಿದ್ದೇನೆ ತರುಳೆಯಾದ ನನ್ನ ಮಾತನ್ನು ಆಲಿಸು ಕರಮುಗಿವೆ ನಿನಗೆ ಸೇವೆಯನು ಕರುಣಿಸಿ ಮುಕ್ತಿಯನುಕರುಣಿಸು ಎಂದಿದ್ದಾರೆ. ಅಭಿನಂದನೆಗಳು ಕವಯಿತ್ರಿಯವರಿಗೆ* [27/07, 6:31 PM] pankajarambhat: ಪಂಕಜ ಮುಡಿಪು ರವರ ಮೊರೆ ಸಂಕಟ ಬಂದಾಗ ವೆಂಕಟ ರಮಣ ಭಕ್ತರ ಸಂಕಟಹರಣನೇ ಭಕತಿಯಲಿ ನಿನ್ನ ನಾಮಸ್ಮರಣೆಯ ಮಾಡುವೆ ಅಂಗಾಲದಲ್ಲಿ ಕಣ್ಣು ಹೊಂದಿದವನೇ ಲಕುಮಿ ಪ್ರಿಯನೇ ಪ್ರತಿ ದಿನವೂ ನಿನ್ನಯ ಧ್ಯಾನ ಮಾಡುವೆ (ಭೃಂಗ ಮಹರ್ಷಿ ಆ ಕಣ್ಣುನ್ನು ಕಿತ್ತು ಹಾಕಿದ ಅಂತಾ ಕಥೆ ಇದೆ. ಇದುವೇ ಹರಿ ಭೂಲೋಕಕೆ ಬರಲು ಕಾರಣವಾಗುವ ಕಥೆ ಇದೆ.) ಆದಿಶೇಷನ ಶಯನದಿ  ಪವಡಿಸುತ್ತಿರುವ ತಿರುಪತಿ ವಾಸನೇ ಕೈಮುಗಿದು ಭಕ್ತಿಯಲಿ ಬೇಡುವೆ ಕರುಣಿಸು ದೇವ ಎನಗೆ ನಿನ್ನಯ ಒಲವ ಹೇ ಪದ್ಮನಾಭನೇ ಈ ದೀನಳ ಮೊರೆಯ ಆಲಿಸುವೆಯಾ ಎಂದು ಭೇಡುವ ಪರಿ ಚೆನ್ನಾಗಿದೆ ಮೇಡಂ 💐👌🏼

ಮೊರೆ

ಮೊರೆ ವೆಂಕಟರಮಣನೆ ಸಂಕಟಹರಣನೆ ಮೋದದಿ ನಿನ್ನನು ಭಜಿಸುವೆನು ಸರಸಿಜನೇತ್ರನೇ ಲಕ್ಷ್ಮೀರಮಣನೆ ಅನುದಿನ ನಿನ್ನನು ನೆನೆಯುವೆನು ಸಪ್ತಗಿರಿವಾಸನೆ ಶ್ರೀ ವೆಂಕಟೇಶನೆ ಭವಬಂ ಧ ನದೊಳು ಸಿಲುಕಿರುವೆನು ಶೇಷಶಯನನೆ ತಿರುಪತಿ ಗಿರಿವಾಸನೆ ಕರಮುಗಿದು ನಿನ್ನನು ಬೇಡುವೆನು ಜಲಜನಾಭನೆ  ಪದ್ಮ ಪಾಣಿಯೇ ತರಳೆಯ  ಮೊರೆಯನು ಆಲಿಸೆಯ ಅನುದಿನ ನಿನ್ನಯ ಸೇವೆಯ ಕರುಣಿಸಿ ಮುಕ್ತಿಯ ನೀಡೋ ಲಕ್ಷ್ಮೀಶ ಕರಗಳ ಮುಗಿಯುತ ಶಿರವನು ಬಾಗುತ ಅನುದಿನ ನಿನಗೆ ಪೊಡಮಡುವೆ ಮೊರೆಯನು ಆಲಿಸಿ ಪ್ರೇಮದಿ ಬಂದು ನನ್ನನು ಕಾಯೋ   ಗೋವಿಂದ ಪಂಕಜಾ.ಕೆ. ಮುಡಿಪು

ಕಾಯುತಿರುವೆ ನಿನಗಾಗಿ

ಕಾಯುತಿರುವೆ ನಿನಗಾಗಿ ಮಂಜು ಮುಸುಕಿದ ದಾರಿಯಲಿ ಬಿಸುತಿಹ ಕುಳಿರ್ಗಾಳಿಯಲಿ ಕಾಯುತಿರುವೆನು ನಿನಗಾಗಿ ಸುರಿಯುತಿಹ ಇಬ್ಬನಿಯಲಿ ಮೀಯುತಿಹ  ಬರಿ ಮೈಯಲಿ ಕಾಯುತಿರುವೆನು ನಿನಗಾಗಿ ಎಂದು ಬರುವೆಯೋ ನಲ್ಲೆ ಮನವ ಕದ್ದಿಹ ಚೋರೆ ಕಾಯುತಿರುವೆನು ನಿನಗಾಗಿ ಬಳಸುತಿಹ  ನಳಿತೋಲ್ಗಳು ಬಳುಕುತಿಹ ಚೆಲು ನಡುವು ಕಾಯುತಿರುವೆನು ನಿನಗಾಗಿ ತುಂಬಿ ನಿಂತಿಹ ಚೆಲುವು ಅರಳಿ ನಗುತಿದೆ ಮನವು ಕಾಯುತಿರುವೆನು ನಿನಗಾಗಿ ಮನಸು ತುಂಬಿದೆ ಒಲವು ಕೊಡುವೆ  ನಿನಗೆ ಎಲ್ಲವು ಕಾಯುತಿರುವೆನು ನಿನಗಾಗಿ ಎಂದು ಬರುವೆಯೋ ಚೆಲುವೆ ಬಳಸಿ ನನ್ನನು ಮರೆಸುವೆ ಕಾಯುತಿರುವೆನು ನಿನಗಾಗಿ ಪಂಕಜಾ.ಕೆ. ಮುಡಿಪು

ಕೃತಘ್ನ ಸಣ್ಣ ಕಥೆ

.    ಕೃತಘ್ನ ವೃದ್ಧಾಶ್ರಮದಲ್ಲಿ ಕುಳಿತು ಆಕೆ ಚಿಂತಿಸುತ್ತಿದ್ದಳು  ಇಷ್ಟಕ್ಕಾಗಿ ತಾನು ತನ್ನ ರಕ್ತ ಬಸಿದು ಮಕ್ಕಳನ್ನು ಸಾಕಬೇಕಿತ್ತೆ ಅಂದು ಮಕ್ಕಳ ಅಪ್ಪ ತನ್ನನ್ನು ನಡು  ಬೀದಿಯಲ್ಲಿ ಕೈ ಬಿಟ್ಟು ಹೋದಾಗ ತನಗೆ ಕೇವಲ 24 ವರ್ಷ ಆದಾಗಲೇ ಇಬ್ಬರು ಮಕ್ಕಳ ತಾಯಿ ಜೀವನ ಕಷ್ಟ ವೆಂದಾಗ ತಾನು ಮ ಕ್ಕಳಿಗಾಗಿ ಅರೆಹೊಟ್ಟೆ ಉಂಡು ಅವರಿವರ ಮನೆ ಕೆಲಸ ಮಾಡಿ ಮಕ್ಕಳನ್ನು ಸಾಕಿ ವಿದ್ಯೆ ಕಲಿಸಿ  ಅವರನ್ನು ಕೆಲಸಕ್ಕೆ ಸೇರಿಸುವ ವರೆಗೆ ತಾನು ಪಟ್ಟ ಪಾಡೆಷ್ಟು ಇಂದು ಈಗ ಬೆಳೆದು ದೊಡ್ಡ ಹುದ್ದೆಯಲ್ಲಿರುವ ತನ್ನ ಮಕ್ಕಳಿಗೆ ತಾನು ಪಟ್ಟ ಕಷ್ಟ ನನ್ನ ತ್ಯಾಗ ಯಾವದೂ ಅರ್ಥವೇ ಅಗೋಲ್ಲವೇ ಎಂದು ಕಣ್ಣೀರು ಮಿಡಿಯುತ್ತಾಳೆ ಆ ದಿನ ಆ ವೃದ್ಧಾಶ್ರಮಕ್ಕೆ ಬಂದ ಆ ತರುಣ ಅವನನ್ನು ಎಲ್ಲೋ ನೋಡಿದಂತಿದೆಯಲ್ಲ ಎಂದು ಯೋಚನೆ ಮಾಡುತ್ತಾ ನಿಂತಿದ್ದಾಗ ಆತನೇ ಮುಂದೆ ಬಂದು ನಾನು ನಿಮ್ಮ ಶೇಖರ ನಿಮ್ಮನ್ನು ನನ್ನ ಮನೆಗೆ ಕರೆದೊಯ್ಯಲು ಬಂದಿದ್ದೇನೆ ನನ್ನ ಹೆಂಡತಿ ರಮಾ ನಿಮ್ಮ ನಿರೀಕ್ಷೆಯಲ್ಲೇ ಇದ್ದಾಳೆ ಬನ್ನಿ ಹೋಗೋಣ ಎಂದು ಕರೆದೊಯ್ದಾಗ ಆಕೆಗೆ ಉತ್ತರಿಸಲಾಗದೆ ನೀಡುಸುಯ್ಯುತ್ತಾಳೆ ತಾನು ಎಂದೋ ಒಂದೆರಡು ದಿವಸ ಊಟ ಹಾಕಿದ ಹುಡುಗ ಇಂದು ತನ್ನನ್ನು ತನ್ನ ಹೆತ್ತಮ್ಮನಂತೆ ಕಾಣುವಾಗ ತನ್ನ ರಕ್ತಮಾಂಸವನ್ನು  ಹಂಚಿ ಬೆಳೆಸಿದ ಮಕ್ಕಳು ಯಾಕೆ ಇಷ್ಟೊಂದು ಕೃತಘ್ನ ರಾದರು ಎಂದು ಆಕೆ ಬೇಸರಿಸುತ್ತಾಳೆ ಪಂಕಜಾ.ಕೆ. ಮುಡಿಪು.

ಸ್ನೇಹದ ಕಡಲಲ್ಲಿ

ಸ್ಪರ್ಧೆಗಾಗಿ    ಸ್ನೇಹದ ಕಡಲಲ್ಲಿ ತಾಯ ತ್ಯಾಗ ಮಮತೆಯ ನೆನಪ ಮೂಡಿಸಿತು ಮನದಲ್ಲಿ ನಿನ್ನ ಸ್ನೇಹ ಹಂಚಿಕೊಂಡೆವು  ನಾವು ನೋವು ನಲಿವುಗಳನ್ನು ಬಂಧನದ ಭಯವಿಲ್ಲ ಕಲ್ಮಷದ ಸೋಂಕಿಲ್ಲ ಮೇಲು ಕೀಳುಗಳ ಭೇದವಿಲ್ಲ ಸ್ವಾರ್ಥ ವಿಲ್ಲದ ಶುದ್ಧ ಸ್ನೇಹ ಸ್ನೇಹದ ಕಡಲಲ್ಲಿ ಮುಳುಗಿ ಮರೆತೆವಲ್ಲಾ ಜಗವ ನಂದು ಜಗದ ಜಂಜಾಟಗಳಮೋಹ ನೋವ ಮರೆಸುವ ಸ್ನೇಹ ಬಾಳ ಪಯಣದಲಿ ಇರಬೇಕು ಶುದ್ಧ  ಸ್ನೇಹದ ಜಲವನೆರೆವ ಸ್ನೇಹಿತ ಮನಸೆಲ್ಲ ಹೂವಾಗಿಕನಸೆಲ್ಲ ನನಸಾಗಿ ಸಾಗುತಿದೆ ಈ ಜೀವಸ್ನೇಹದ ಕಡಲಲ್ಲಿ ಹಂಚಿಕೊಂಡೆವು ದಿನ ದಿನವೂ ನೋವು ನಲಿವುಗಳನ್ನು ಜತೆಯಾಗಿ ಕೂಡಿ ಆಡಿದೆವು ಹೆಣ್ಣುಗಂಡುಎಂಬಭೇದವಿಲ್ಲದೆ ಜಗವು ನೋಡಿತು ಅರಸಿನದ ಕಣ್ಣಿಂದ ಶುದ್ಧ ಸ್ನೇಹದ ಜಲಕೆ ಹುಳಿಯ ನಿಂಡಿದರು ಬಾಲ್ಯದಲ್ಲಿ ಇಲ್ಲದ ಹೆಣ್ಣುಗಂಡು ಎಂಬ ಭೇಧ ಈಗೇಕೆ ಬಂತೋ ಇಂದೀಗ ಇರುವೆ ನಿನ್ನ ಸ್ನೇಹದ ನೆನಪಿನ  ದೋಣಿಯಲಿ ನೆನಪೊಂದು  ಮಧುರ ಸ್ನೇಹದ ನೆನಪು ಅತಿ ಮಧುರ ಬಂದೀತೆ  ಬಾಲ್ಯದ ಆ ಸುಂದರಸ್ನೇಹದ ದಿನಗಳು ಕಾಯುತ್ತಿದೆ ಈ ಜೀವ ಶುದ್ಧ ಸ್ನೇಹದ ಜಲಕೆ ಪಂಕಜಾ.ಕೆ. ಮುಡಿಪು

ರವಿತೇಜ

ರವಿತೇಜ ಮೂಡಣದಿ ಮೂಡಿತೊಂದು ಚಿನ್ನದ   ತೇರು ಬಾನಲಿ ಬಣ್ಣಗಳ ಕಲಸಿ ಮುಡಿತದೋ ಬೆಳ್ಳಿಯ ತೇರು ಭರದಿಂದ ಮೇಲೇರುತ ಬಂದ ಜಗಕೆ  ಬೆಳಕ  ತಂದ ಪ್ರಕೃತಿ ಮಾತೆಗೆ ಮುದ ತಂದ ಮನೆ ಮನದಲಿ ಉಲ್ಲಾಸ ತಂದ ಹಕ್ಕಿಗಳು ನಭದಲಿ ಹಾರಾಡುವ ಪರಿದಿ ಆಗಸಕೆ ತೋರಣವ ಕಟ್ಟಿದ ತೆರದಿ ಮುಂಜಾವದ.  ಹನಿಗಳಲ್ಲಿ ಹರಡಿದ ಮುತ್ತಿನ ಮಣಿಗಳಲ್ಲಿ ಬಣ್ಣಗಳ   ತೂರಿಸುತ್ತ ನಿಂದ ನಸುನಗುತ ಮೇಲೇರುತ್ತ ಬಂದ ಜಗಕೆ   ಕಾಂತಿ   ತುಂಬಿಸುತ ಸಂತಸದ ಕಾರಂಜಿಯ ಉಕ್ಕಿಸುತ ರವಿತೇಜನುದಯಿಸಿದ ಬಾನಲ್ಲಿ ಬಣ್ಣಗಳ ಸವಿ  ಮೂಡಿತಲ್ಲಿ ರವಿತೇಜನಾಗಮನವು ಪ್ರಕೃತಿ ಮಾತೆಗೆ ಗೆಲುವು ಮೂಡಿಸಿದ  ಬಣ್ಣಗಳ ಒಲವು ತುಂಬಿಸಿದ  ಬಾಳಿಗೆ  ಬಲವು ಕಣ್ಣು   ಮನಕೆ  ತಂಪು ಹಕ್ಕಿಗಳ ಗಾನದ ಇಂಪು ಮುಂಜಾವದ ಸೊಬಗು ಏನಿದು ಪ್ರಕೃತಿಯ ಬೆಡಗು ಪಂಕಜಾ.ಕೆ. ಮುಡಿಪು

ಹಳ್ಳಿಯ ಜೀವನ ಜನಪದ ಹಾಡು

ಹಳ್ಳಿಯ ಜೀವನ (ಜಾನಪದ ಕವನ) ಹಳ್ಳಿಲಿ  ಏನುಂಟು ಡೆಲ್ಲಿಲಿ ಎಲ್ಲಉಂಟು ಹೊರಟವಿನಿ ಡೆಲ್ಲಿಗೆ  ನೋಡವ್ವ ಹೊರಟಿವಿನಿ ಡೆಲ್ಲಿಗೆ ನೋಡವ್ವ ಡೆಲ್ಲಿಗೆ ಹೋದಮೇಲೆ ಗೊತ್ತಾಯ್ತು  ನೋಡವ್ವ ಹಳ್ಳಿಯ ಜೀವನದ ಆನಂದ ಹಳ್ಳಿಯ ಜೀವನದ ಆನಂದ ನೋಡವ್ವ ಹಳ್ಳಿಲಿ ಇರುವಂತ ತಿಳಿನೀರಕೊಳವೆಲ್ಲಿ ಡೆಲ್ಲಿಯ ಕೊಳಕು ನೀರೆಲ್ಲಿ ನಮ್ಮವ್ವ ಕೊಳಕು ನೀರೆಲ್ಲಿ ಹಕ್ಕಿಗಳ ಹಾಡು ಕಿವಿಗಿಂಪು ನನ್ನವ್ವ ಡೆಲ್ಲಿಲಿ ಮೈಕಾಸುರನ ಅಬ್ಬರ ನೋಡವ್ವ ಹಳ್ಳಿಯ ಸಂತೋಷ ಇಲ್ಲೆಲ್ಲವ್ವ ಹಳ್ಳಿಯ ಸಂತೋಷ ಇಲ್ಲೆಲ್ಲವ್ವ ಹುಡುಕಿದರೂ ಸಿಗದವ್ವ ಪ್ರೀತಿ ವಿಶ್ವಾಸ ನೋಡವ್ವ ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ ಹಳ್ಳಿಲಿ ಇರುವೆವು ಎಲ್ಲರೂ ಒಂದಾಗಿ ಪ್ರೀತಿ ವಿಶ್ವಾಸದ ತವರೂರು ಪ್ರೀತಿವಿಶ್ವಾಸದ ತವರೂರು ನಮ್ಮವ್ವ ಹಳ್ಳಿಯ ಜೀವನ ಸೊಗಸವ್ವ ಕಷ್ಟ ಸುಖದಲ್ಲೂಜತೆಯುಂಟು ನೋಡವ್ವ ಡೆಲ್ಲಿ ಲಿ ಇವೆಲ್ಲಾ ಎಲ್ಲವ್ವ ಇರುವುದು ದುಡ್ಡು ಒಂದೇ ನೋಡವ್ವ ದುಡ್ಡು ಒಂದೇ ನೋಡವ್ವ ಬೆಳಗಾತ ಮೂಡಣದಿಮೂಡೈತೆ ಬಂಗಾರ ಬಟ್ಟಲು  ನೋಡವ್ವ ಓಬೇಲೆ ಹಾಡುತ್ತ ಹೊಂಟ್ಯಾನು ರೈತ ಓಬೇಲೆ ಹಾಡುತ್ತ ಹೊಂಟ್ಯ ನು ಎತ್ತುಗಳ ಕೊರಳ ಗಂಟ್ಯಾ ಕೇಳ್ಳ್ಯಾವ ಸುತ್ತೆಲ್ಲ ಹಸಿರೇ ತುಂಬ್ಯಾವ ಸುತ್ತೆಲ್ಲ ಹಸಿರೇ ತುಂಬ್ಯಾವ ನಮ್ಮವ್ವ ಹಳ್ಳಿಯ ಸೊಗಡ ನೋಡವ್ವ ಜೀವನ ಸಂತೋಷ ಹಳ್ಳಿಲಿ ತುಂಬೈತೆ ಡೆಲ್ಲಿ ಲಿ ಎನೈತೆ ಹೇಳವ್ವ ಡೆಲ್ಲಿ ಲಿ ಎನೈ

ನೆನಪಿನ ದೋಣಿ

ನೆನಪಿನ ದೋಣಿ ಭಾವನೆಗಳ ಬಾರದಲಿ ಹೃದಯ ಜಗ್ಗಿದೆ ನಿನ್ನ ನೆನಪಿನ ದೋಣಿಯಲಿ ಮನವು ತೇಲಿದೆ ನನ್ನೆದೆಯ ಒಲವ ಪಲ್ಲವಿಗೆ ನೀ ಜತೆಯಾದೆ ಬಾಳಪಯಣದಲಿ ನೀ ಬಂದೆ ಜತೆಯಾಗಿ ನನ್ನೊಲವ ಸವಿ ಸವಿದು ನೀ ಉಸುರಿದೆ ಗೀತೆಯಾಗಿ ನನ್ನಂತರಂಗದಲಿ ನಿ ಹಾಡಿದೆ ರಾಗದಲಿ ಎದೆಯ ಗೂಡಲಿ ರೆಕ್ಕೆ ಬಿಚ್ಚಿ ಹಾರುವ ಹಕ್ಕಿ ತವಕದಲಿ ಇನಿಯನಾಗಮನದದಾರಿ ಕಾಯ್ದಿದೆ ತನುಮನದಲಿ ಉಲ್ಲಾಸ ಹುರುಪು ತುಂಬಿದೆ ಕನಸುಗಳ ಕಟ್ಟುತ್ತ ಹಾರಡುತಿದೆ ಮನ ಒಲಿದ ಜೀವಕ್ಕೆ ಕಾಯುವಿಕೆಯ ತಪ ಮಳೆಹನಿಗೆ ಮುಖವೊಡ್ಡಿದಂತ ಸುಖ ಪಂಕಜಾ.ಕೆ.

ಅಟ್ಟಹಾಸ ಕವನದ ವಿಮರ್ಶೆ

ಅಟ್ಟಹಾಸ. ಕವಯಿತ್ರಿ:-ಪಂಕಜಕ್ಕ. ಪ್ರಕೃತಿ ಮುನಿದಿದೆ ವರುಣನ ಅಟ್ಟಹಾಸ ಮೆರೆದಿದೆ. ಬದುಕೇ ನಿಸ್ತೇಜವೆನಿಸ ತೊಡಗಿದೆ..👌👌.ಈ ರೀತಿ ಭೂಮಿ ಬಾನು ಒಂದಾಗಿ ಸುರಿದು ಕನಸಿನ ಸೌಧಗಳನೂ ಛಿದ್ರ ಗೊಳಿಸಿದರೆ ಕಣ್ಣೀರ ಹನಿಯೂ ಎಡೆಬಿಡದೆ ಸುರಿಯುತ್ತಿದೆ.. ಪ್ರಕೃತಿ ವಿಕೋಪವ ತಮ್ಮ ಕವಿತೆಯಲ್ಲಿ ಮಾರ್ಮಿಕವಾಗಿ ಸೆರೆ ಹಿಡಿದಿದ್ದೀರ... ಪ್ರಾಸಬದ್ಧ ತೆಯಿಂದ ಅರ್ಥಪೂರ್ಣ ವಾಗಿ ಮೂಡಿಬಂದಿದೆ ಕವಿತೆ👏👏 ಧನ್ಯವಾದಗಳು🙏🙏

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ ಬಂದಿತು ಸ್ವಾತಂತ್ರ್ಯ ದಿನಾಚರಣೆ ಹಾರಿತು ಎಲ್ಲೆಡೆ ತ್ರಿವರ್ಣಧ್ವಜ ಬ್ರಿಟಿಷರು ಆಳಿದ ನೆಲದಲಿ ಹಚ್ಚಿದರು ಸ್ವಾತಂತ್ರ್ಯದ ಹಣತೆ ಉರಿಸಿದರು ಸ್ವಾಭಿಮಾನದ ಸೊಡರು ಬೂದಿಯಾಯಿತೆ ಅದರ ಕಾವು ಯಾರಿಗೆ ಬಂತು ಸ್ವಾತಂತ್ರ್ಯ ಎಲ್ಲಿದೆ ನಮಗೆ ಸ್ವಾತಂತ್ರ್ಯ ಎಲ್ಲೆಲ್ಲೂ ತುಂಬಿದೆ ಕೊಲೆ ಸುಲಿಗೆ ಎಂದಿಗೆ ನಮಗೆ ಇದರಿಂದ ಬಿಡುಗಡೆ ವರ್ಷ ವರ್ಷವೂ  ಹಾರಿಸುವರು  ಬಾವುಟ ಕೇವಲ ಆಚರಣೆಗೆ ಮಾತ್ರ ಅದು ಸೀಮಿತ ಗಡಿಯನ್ನು ಕಾಯುವ ವೀರಯೋಧ ವೈರಿಗಳ ಸದೆಬಡಿಯಲಿದೆಯೇ  ಸ್ವಾತಂತ್ರ್ಯ ಮಕ್ಕಳು ಮುದುಕಿಯರನ್ನೂ ಬಿಡದ ಕಾಮ ಪಿಶಾಚಿಗಳ ನಾಡಾಗಿದೆ ಸ್ವತಂತ್ರ ಭಾರತ ತುಂಬಿದೆ ಎಲ್ಲೆಡೆ ಭ್ರಷ್ಟಾಚಾರ ನಡೆಯುತ್ತಿದೆತೆರೆಮರೆಯಲಿ ಸ್ವೇಚ್ಚಾಚಾರ ಸಿಗಬೇಕು ಕೃಷಿಕರಿಗೆ ಸೈನಿಕರಿಗೆ ಘನತೆ ಗೌರವ ನಿಲ್ಲಬೇಕು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಅದಿಲ್ಲದೆ ಬರಿಯ ಆಚರಣೆಯಲೇನಿದೆ ಸಂಭ್ರಮ ಅರಿಯಬೇಕು ಸ್ವಾತಂತ್ರ್ಯದ ಮೌಲ್ಯ ಉಳಿಸಬೇಕು ತಾಯಿ ಭಾರತಿಯ ಮಾನ ಪ್ರಾಣ ಪಂಕಜಾ.ಕೆ.

ಬಾರೋ ಗೋಪಾಲ

ಬಾರೋ ಗೋಪಾಲ ಕೊಳಲನೂದುತ ಬಂದ ರಾಧೆಯ ಮನವ ಗೆದ್ದ ರಾಧಾರಮಣ ಶ್ರೀಕೃಷ್ಣ ಬಾ ಬಾರೋ ಗೋಪಾಲ ಯಶೋದೆ ನಂದನ ನಂದ ಕಿಶೋರ ದೇವಕಿ ತನಯ  ಶ್ರೀ ಕೃಷ್ಣ ಗೋಪಿಲೋಲ  ಹೇ ಗೋಪಾಲ ಬಾ ಬಾರೋ  ನಂದ ಕಿಶೋರ ಕೊಡುವೆ ನಿನಗೆ ಹಾಲು ಬೆಣ್ಣೆ ಗೆಜ್ಜೆಯಕಾಲ್ಗಳನಾದವ ಬೀರುತ ಅಂಬೆಗಾಲಿಡುವ ಮುದ್ದು ಚೋರ ಬಾ ಬಾರೋ ಯಶೋದೆ ಕಂದ ನೀಲ ಮೇಘನೆ ಸುಂದರ ನಯನನೆ ಗೋಪಿಯರೆಲ್ಲರ ಮನವ ಸೆಳೆದ ಕಾಳಿಂಗ ಮರ್ಧನ  ಗೋಪಿಲೋಲ ಬಾ ಬಾರೋ ಮುಕುಂದ ಅಷ್ಟಮಿ ದಿನದಲಿ ಭಜಿಸುವೆ ನಿನ್ನಾ ಬೇಗನೆ ಬಂದು ಹರಸು ನೀಎನ್ನ ರಾಧಾಮಾಧವ ವೇಣು ವಿಹಾರ ಬಾ ಬಾರೋ  ಗೋಪಾಲ ಪಂಕಜಾ. ಕೆ  ಮುಡಿಪು ಕುರ್ನಾಡು

ಅಮ್ಮನ ನೆನಪು

ಅಮ್ಮನ ನೆನಪು ಸಿಹಿ ಸಿಹಿ ನೆನಪು ಅಮ್ಮನ ನೆನಪು ಮನದಲಿ ತುಂಬಿಹುದು ವರ್ಣಿಸಲಸದಳ ಅಮ್ಮನ ಮಮತೆ ತನ್ನಯ ಸಂತಸ ಬದಿಗಿಟ್ಟು ಸಾಕಿದ ರೀತಿಯ ಮರೆವುದು ಉಂಟೆ ಅಮ್ಮನ ಮಮತೆಗೆ ಮಿತಿಯುಂಟೆ ಪ್ರೀತಿಯ ಅಪ್ಪ ಅಮ್ಮನನು ವೃದ್ಯಾಪ್ಯದಲಿ ಚಂದದಿ ನೋಡಿದರದುವೆ ದೇವರ ಪೂಜೆಗೆ ಸಮಾನವಹುದು ಅಪ್ಪ ಅಮ್ಮ ದೇವರು ಕೊಟ್ಟ ವರವೇ ಒಂದು ನಮಗೆ ಅವರಿಲ್ಲದಿರೆ ನಾವಿಲ್ಲ ಬಾಲ್ಯದಲ್ಲಿ ಪ್ರೀತಿಲಿ ಸಾಕಿ ನಮ್ಮಯ ಏಳ್ಗೆಗೆ ಕಾರಣರವರು ಅಪ್ಪ ಅಮ್ಮನ ವೃದ್ಯಾಪ್ಯದಲಿ ಪ್ರೀತಿಲಿ ನೋಡಲೇ ಬೇಕು ಹೆತ್ತವರ ಋಣವ ತೀರಿಸಬೇಕು ಅಮ್ಮಾ ಎನಲು ಬಾಯಿಗೆ ಸಕ್ಕರೆ ಸುರಿದಂತೆ ಸಿಹಿ ಸಿಹಿ ನೆನಪು ಅಮ್ಮನ ನೆನಪು ಮನದಲಿ ತುಂಬಿಹುದು ಪಂಕಜಾ.ಕೆ.

ಹಕ್ಕಿಗೂಡು

ಹಕ್ಕಿ ಗೂಡು ಎಂದಿನಂತೆ ಅಂದು ನಾನು ಬೆಳಗಿನ ನಡಿಗೆ ಯನ್ನು ಮುಗಿಸಿ ಹೊರಗಿನ ವರಂಡಾದಲ್ಲಿ  ಆರಾಮಾಸನದ ಮೇಲೆ ಪವಡಿಸಿದ್ದೆ.ಇದ್ದಕ್ಕಿದ್ದಂತೆ ಎರಡು ಚಂದದ ಹಕ್ಕಿಗಳು ಹಾರಿ ಬಂದು ನಾನು ಬೆಳೆಸಿದ ಹೂಬಳ್ಳಿಯ ಮೇಲೆ ಕುಳಿತು ಉಯ್ಯಾಲೆ ಆಡುತ್ತಾ  ಕಿಚಿ ಕಿಚಿ ಎಂದು ಹರಟುವ ಸುಂದರ ದೃಶ್ಯ ನೋಡಿ ಮೈ ಮರೆತೆ              ಮರುದಿನ  ಆ ಎರಡು ಹಕ್ಕಿಗಳು ಹೂ ಬಳ್ಳಿಯ ಮೇಲೆ ಪುಟ್ಟದಾದ ಗುಡೊಂದನ್ನು ಕಟ್ಟುತ್ತಾ ಇದ್ದವು  .ಒಂದು ಹಕ್ಕಿ ಆಗಾಗ ಹಾರಿ ಹೋಗಿಕೊಕ್ಕಿನಲ್ಲಿ ಕಚ್ಚಿ ಹುಲ್ಲು ಕಡ್ಡಿಗಳನ್ನು ತಂದು ಚೆನ್ನಾಗಿ ಗೂಡು ಹೆಣೆಯುತ್ತಾ ಇತ್ತು .ಒಂದೆರಡು ಬಾರಿ ತನ್ನ ಸಂಗಾತಿಯನ್ನು ಕರೆತಂದು ಗೂಡನ್ನು ಅದಕ್ಕೆ ತೋರಿಸಿ ಸಂಭ್ರಮ ಪಡುತ್ತಿತ್ತು.            ನಾನು ಹತ್ತಿರ ಬಂದ ತಕ್ಷಣ ಹಾರಿ ಹೋಗಿ ದೂರದ ಮರದ ಮೇಲೆ ಕೂತು ನನ್ನ ಚಲನವಲನಗಳನ್ನು ಗಮನಿಸುತ್ತಾ ತನ್ನ ಸಂಗಾತಿಯಲ್ಲಿ ತನ್ನದೇ ಭಾಷೆಯಲ್ಲಿ ಹರಟುತ್ತಿತ್ತು.            ನಾನು ಫೋಟೋ ತೆಗೆಯಲು ಹೋದರೆ ಗೂಡೊಳಗೆ ಮುಖ ಮರೆಸಿ ಫೋಟೋಕ್ಕೆ ಸಿಗದೆ ಹಾರಿ ಹೋಗುತ್ತಿತ್ತು  ಮೇಲೆ ಮರದಮೇಲೆ ಕುಳಿತು ಸಂಶಯದಿಂದ ನನ್ನನ್ನು ದಿಟ್ಟಿಸಿ ನೋಡುವುದು ನೋಡಿ ನನಗಂತೂ ನಗು ತಡೆಯಲೇ ಆಗುತ್ತಿರಲಿಲ್ಲ

ಸ್ವಾಮಿ ಶ್ರೀ ಮಂಜುನಾಥ

ಸ್ವಾಮಿ ಶ್ರೀ ಮಂಜುನಾಥ ನಿಮ್ಮ  ದಯೆಯಿಂದ ಬೆಳಗಲಿ ನಮ್ಮೆಲ್ಲರ ಮನೆ ಮನ ಬದುಕು ಪಾವನವಾಗಲಿ ದಯೆತೋರು ಸ್ವಾಮಿ ಶ್ರೀ ಮಂಜುನಾಥ ಕಷ್ಟಗಳ ಪರಿಹರಿಸಿ ಆತ್ಮಸ್ಥೈರ್ಯತುಂಬಿ ಕೈಹಿಡಿದು ನಡೆಸು ತಂದೆ ಸ್ವಾಮಿ ಶ್ರೀ ಮಂಜುನಾಥ ಜೀವನದ ಜಂಜಾಟಗಳಲಿ ತೇಲಿ ಮುಳುಗುತಿರುವ ನಮ್ಮನುದಡಸೇರಿಸಿ ಸತ್ಪಥವ ತೋರುಸ್ವಾಮಿಶ್ರೀ ಮಂಜುನಾಥ ನಿಮ್ಮ ಕರುಣೆಯ ಜಲದ ಅಮೃತ ಪಾನದಲಿ ಧನ್ಯಳಾಗುತ ಸಾಗಿ ನಿಂತಿರುವೆ ದಯೆತೋರು ಸ್ವಾಮಿ ಶ್ರೀ ಮಂಜುನಾಥ ನಿಮ್ಮ ಅಭಯ ಹಸ್ತವು ಕಾಯಲಿ ನಮ್ಮೆಲ್ಲರ ನಿತ್ಯ ಮನಕೆ ಸುಖಶಾಂತಿಸಮೃದ್ಧಿಯ ಕೊಟ್ಟು ಕಾಪಾಡು ಸ್ವಾಮಿಶ್ರೀ ಮಂಜುನಾಥ ಪಂಕಜಾ. ಕೆ. ಮುಡಿಪು ಕುರ್ನಾಡು

3 ಹನಿ ಕವನ

ಶುಭ್ರ ಬಿಳುಪು ಸೌಮ್ಯತೆಯ  ಸಂಕೇತ ಇರಲಿಲ್ಲ ಅದರಲ್ಲಿ ಕಪ್ಪು ಚುಕ್ಕಿ ಹಾರುತಿದೆ ಬಾನಲ್ಲಿ ರೆಕ್ಕೆ ಬಿಚ್ಚಿ ಪಂಕಜಾ.ಕೆ [27/11/2017, 9:30 AM] pankajarambhat: ಆಶೆ ನಿನ್ನ ಪದತಲದಲ್ಲಿ ದುಂಬಿಯಾಗುವಾಶೆ ಜಗದ ಜಂಜಾಟಗಳ ಮರೆತು ನಿನ್ನ ನಾಮಮೃತವ ಸವಿಯುತ್ತಲಿರುವಾಶೆ ಮುಖವಾಡ  ಧರಿಸಿರುವ ಮನುಜರ ಜತೆ ಒಡನಾಟ ಕ್ಕಿಂತ ನಿನ್ನ ಸೇವೆಯಲ್ಲೇ ದಿನ ಕಳೆಯುವಾಶೆ ದೇವ ದೇವನ ನೆನೆಯುತ್ತ ಹಕ್ಕಿಯಂತೆ ಹಾರುವಾಶೆ ಪಂಕಜರಾಮ್ [30/11/2017, 10:25 PM] pankajarambhat: ಆಸ್ತಿಕ .... ನಾಸ್ತಿಕ ದೈವ ಭಕ್ತಿಯು ಇರಲು ತುಂಬಿತು ಸಾತ್ವಿಕ ಕಳೆ ಉಕ್ಕಿತು ಮನದಲಿ ಜೀವನೋತ್ಸಾಹ ಸೆಲೆ ನಾಸ್ತಿಕ ಜನರ ಮುಖದಲ್ಲಿ ತುಂಬಿದ ಪ್ರೇತ ಕಳೆ ಕಳೆವುದುಇದು ನಮ್ಮಜೀವ ಸೆಲೆ ಸಾತ್ವಿಕ ಜನರ ಒಡನಾಟ ಮುಕ್ತಿ  ಮಾರ್ಗದ ಪಯಣ ನಾಸ್ತಿಕ ಜನರ ಒಡನಾಟ ಮಸಣ ದ ದಾರಿಯ ಪಯಣ ಪಂಕಜರಾಮ್

ಲಕ್ಷ್ಮಿ ಸ್ತುತಿ

ಲಕ್ಷ್ಮಿ ಸ್ತುತಿ ಪಂಕಜವಾಸಿನಿ ಹರಿ ವಕ್ಷಸ್ಥಳ ನಿವಾಸಿನಿ ಮಂಗಳ ರೂಪಿಣಿ ಜಗದಂಬೆ ll ಸುರಗಣ ಪೂಜಿತೆ ಹರಿಯರಮಣಿ  ನಿತ್ಯವೂ ಕಾಯೇ ಜಗದಂಬೆ ll ಅನುದಿನ ನಿನ್ನಯ ನಾಮವ ಜಪಿಸುತ ಸ್ತುತಿಸುವೆ ನಿನ್ನನು ಭಕುತಿಯಲಿ ll ಕರುಣಿಸಿ ವರಗಳ ಪೊರೆ ನೀಎಮ್ಮನು ಬೇಗನೇ ಬಾರೇ ಮಹಾಲಕ್ಷ್ಮಿ ನಿತ್ಯವೂ ಪೂಜಿಸಿ ಹೂಗಳ ಅರ್ಪಿಸಿ ಭಕುತಿಯಲಿ ನಿನ್ನನು ಭಜಿಸುವೆನುll ಅಂಬುಜಮುಖಿ ಪಂಕಜಲೋಚನೆ ಕಾಯೇ ನಮ್ಮನು ಸಿರಿಲಕ್ಷ್ಮಿ ll ನಿನ್ನಯ ನಾಮವ ಜಪಿಸುತ ಅನುದಿನ ನನ್ನನುನಾನೇ ಮರೆಯುವೆನುll ಪ್ರೇಮ ಸ್ವರೂಪಿಣಿ ವರಗಳ ಕೊಡುತ ಪೊರೆ ನೀ  ನಮ್ಮನು ವರಲಕ್ಷ್ಮಿ ll ಪಂಕಜಾ.ಕೆ ಮುಡಿಪು

ಕುಟುಂಬ ಜೀವನ ಸಣ್ಣ ಕಥೆ

ಕುಟುಂಬ ಜೀವನ ರಮಾ  ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳು. ಮನೆಯಲ್ಲಿ ಅಮ್ಮ ಅಪ್ಪ  ಅತ್ತೆ ಅಜ್ಜಿ ಅಜ್ಜ  ಅಣ್ಣ ತಮ್ಮಂದಿರು ಜತೆ ಬೆಳೆದ ಆಕೆಗೆ ಮೊದಲಿನಿಂದಲೂ ಹೆಣ್ಣು ಮಕ್ಕಳ ಮೇಲೆ  ಮಾತ್ರ ಕುಟುಂಬ ನಿಯಮಗಳನ್ನು  ಹೇರುವ ಅಜ್ಜ ಅಜ್ಜಿಯರ  ಬಗ್ಗೆ  ಬೇಸರ.           ಚಿಕ್ಕಂದಿನಿಂದಲೂ ಆಕೆಯನ್ನು ಅದು ಮಾಡಬೇಡ, ಇದು ಮಾಡಬೇಡ , ಗಂಡಸರ ಊಟ ಆಗದೆ ಉಣ್ಣಬಾರದು ಎನ್ನುವ ಹಲವಾರು  ಕಟ್ಟು ಪಾಡು ಇದರಿಂದ ಎಷ್ಟೋ ಬಾರಿ ಆಕೆಗೆ ಊಟ ಮಾಡದೆ ಹಸಿವಿನಿಂದ ಬಳಲುವ ಪ್ರಸಂಗ ಬರುತಿತ್ತು ಆಗೆಲ್ಲಾ ಅಜ್ಜಿಯ ಮೇಲೆ ಆಕೆಗೆ ವಿಪರೀತ ಕೋಪ ಬರುತಿತ್ತು ಆದರೇನು ಮನೆ ಮರ್ಯಾದಿ ಬೀದಿ ಪಾಲಾಗುವ ಭೀತಿಯಲ್ಲಿ ಆಕೆ ಎಲ್ಲವನ್ನು ಮೌನವಾಗಿ ಸಹಿಸುತ್ತ ಇದ್ದಳು        ಅವಳ  ಅಮ್ಮನದು ಮೂಗೆತ್ತಿನ ಜೀವನ  ತಾನಾಯಿತು ತನ್ನ ಕೆಲಸವಾಯಿತು ಎಂದು ಇರುವ ಜಾಯಮಾನ ಅಜ್ಜಿಯ ಮಾತುಗಳಿಗೆ ಕಿವುಡಾಗಿ ದುಡಿಯುವುದೇ ಅವಳ ಜೀವನ ಅಜ್ಜಿಯ ದುಸುಮುಸು   ನಿತ್ಯವೂ ಸುರಿಸುವ ಬೈಗಳು ಇವುಗಳನ್ನು ಕೇಳಿ ಕೇಳಿ ಅಮ್ಮ ಈ ರೀತಿ ಮೂಕಿ ಯಾಗಿರಬಹುದುಎನ್ನುವ  ಭಾವನೆ ರಮಾಳದು        ತಂದೆಯದು ತುಂಬಾ ಶಾಂತ ಸ್ವಭಾವ ಅಮ್ಮನ ಕಡೆ ಮಾತಾಡಲು ಹೆದರುವ ಆತ ಹೆಂಡತಿಗಾಗಿ  ನಿತ್ಯ ಮರುಗುತ್ತಿದ್ದ ಆದರೆ ತನ್ನಿಂದ ಏನೂ ಮಾಡಲಾಗದ ಅಸಹಾಯಕತೆ ಆತನನ್ನು ಕಟ್ಟಿ ಹಾಕಿತ್ತು             ಅದೊಂದು ದಿನ ರಮಾ ಳ ಚಿಕ್ಕಪ್ಪ  ಚಿಕ್ಕಮ್ಮ  ಬೆಂಗಳೂರಿನಿಂದ ಬಂದಿದ್ದರು ರಮಾಳಿಗಂತು ತುಂಬಾ ಖುಷಿ

ಹೆಣ್ಣು ಮನೆಯ ಕಣ್ಣು ಲೇಖನ

   ಹೆಣ್ಣು ಮನೆಯ ಕಣ್ಣು ಹೆಣ್ಣೆಂದರೆ ಸಹನಶೀಲೆ  ತ್ಯಾಗ, ಸ್ನೇಹದ ಪ್ರತೀಕ..ಹೆಣ್ಣಿನ ಬಗ್ಗೆ ಬರೆಯಲು ಹೊರಟರೆ ಶಬ್ದಗಳಿಗೆತಡಕಾಡುವಂತಾಗುತ್ತದೆ .ಆಕೆ ಸೌಂದರ್ಯದ ಗಣಿ, ಮಮತಾಮಯಿ, ಮುದ್ದಿಸುವ ಮಾತೆಯಾಗಿ ,ಒಲವಸುರಿಸುವ ಸಹೋದರಿಯಾಗಿ,ಪ್ರೇಮಮಯಿ,ಬಾಳಸಂಗಾತಿಯಾಗಿ ,ಮನೆಬೆಳಗುವಸೊಸೆಯಾಗಿ ,ಮನಸು ತುಂಬುವ ಮಗಳಾಗಿ ,ಹತ್ತು ಹಲವು ರೂಪದಲ್ಲಿ ತನ್ನ ತನವನ್ನು ಮೆರೆಯುತ್ತಿದ್ದಾಳೆ .            ಹೆಣ್ಣು ಇಲ್ಲದ್ದೆ ಇದ್ದರೆ ಆ ಮನೆ ದೀಪವಿಲ್ಲದ ಮನೆಯಂತೆ, ಸುವಾಸನೆಯಿಲ್ಲದಹೂವಿನಂತೆಮಂಕಾಗುವುದು .ಹೆಣ್ಣು ಮನೆಯ ಕಣ್ಣು  ,ಮನೆ ಮನಗಳನ್ನು ಬೆಳಗುವ ಜ್ಯೋತಿ. ಮನೆಯ ಮಹಾಲಕ್ಷ್ಮಿ ಎಂದರೂ ತಪ್ಪಾಗಲಾರದು.  ಒಡಲಲ್ಲಿ ಹೊತ್ತು ,ಮಡಿಲಲ್ಲಿ ಮಲಗಿಸಿ, ಕೈತುತ್ತು ಉಣ್ಣಿಸಿ, ಕೈ ಹಿಡಿದು ಬಾಳು ಬೆಳಗುವ ಹೆಣ್ಣು ಮನೆಯ ಕಣ್ಣು          ಹೆಣ್ಣು ಎಷ್ಟು ಸಹನಮೂರ್ತಿಯೊ ಅಷ್ಟೇ ಕೆಣಕಿದರೆ ಚಂಡಿ ಆಗಬಲ್ಲಳು ಎನ್ನುವುದಕ್ಕೆ ದುರ್ಗಾದೇವಿಯು ಒಂದು ಉದಾಹರಣೆ . ಮುನಿದರೆ ಮಾರಿಯು ಹೌದು . ಮನೆಯಲ್ಲಿ ಆಕೆಯ ಪಾತ್ರ ಹಿರಿದು ಆಕೆ ಮನೆ ಮಂದಿಯರ ಆರೋಗ್ಯ ಕಾಯುವ ಅನ್ನಪೂರ್ಣೆ ,ಮಕ್ಕಳಿಗೆ ವಿದ್ಯೆ ಬುದ್ದಿ ಕಲಿಸುವ ಶಾರದಾ ಮಾತೆ , ಮನೆ ಬೆಳಗುವ ಗೃಹ ಲಕ್ಷ್ಮಿ ,ಆಕೆಯಿಲ್ಲದ ಮನೆ  ಸ್ಮಶಾನಕ್ಕೆ ಸಮಾನ  .         ಮಕ್ಕಳನ್ನು  ಹೆತ್ತು ಹೊತ್ತು  ಸಾಕಿ ಸಲಹಿ ವಿದ್ಯೆ ಬುದ್ದಿಗಳ ಕಲಿಸಿ  ತಿದ್ದಿ ತೀಡಿ ಅವರನ್ನು ಉತ್ತಮ ಪ್ರಜೆಗಳಾಗಿಸುವಲ್ಲಿ ತಾಯಿಯ ಪಾತ್ರ ಹಿರಿದು. ತ

ಹೆಣ್ಣು ಮನೆಯ ಕಣ್ಣುಸ್ಪರ್ಧೆಯ ವಿಜೇತರು

ಲೇಖನ ಸ್ಪರ್ಧೆಯ ವಿಜೇತರು ಮೊದಲ ಬಹುಮಾನ ಪಂಕಜಾ ಕೆ ಮುಡಿಪು. ಎರಡನೆಯ ಬಹುಮಾನ ಶಶಿವಸಂತ ಮೂರನೆ ಬಹುಮಾನ ಪ್ರಮೀಳಾ ರಾಜ್ ಮೆಚ್ಚುಗೆ ಪಡೆದ ಲೇಖಕರು ಗೌರಿಪ್ರಿಯ ಜ್ಯೋತಿ ಲಕ್ಷ್ಮಿ. ವಿಜೇತರಿಗೆ ಅಭಿನಂದನೆಗಳು💐☺

ಅಮ್ಮ

ಸ್ಪರ್ಧೆಗಾಗಿ      ಅಮ್ಮ  ಅಮ್ಮನ ಗರ್ಭದಲಿಬೆಚ್ಚಗೆ ಮಲಗಿ ರಕ್ತಮಾಂಸಗಳ ಪಡೆಯುತ ಬೆಳೆದು ಭೂಮಿಗೆ ಬಂದಾಗಲೊಮ್ಮೆ ತಬ್ಬಿಬ್ಬಾಗಿ ಅಳುವ ಕಂದನ ತುಟಿಗೆಎದೆಯ ಅಮೃತವ ಕುಡಿಸಿ ಜೋಗುಳವ ಹಾಡುತ್ತಾ ಲಾಲಿಗರೆದು ಅಮ್ಮ ನೀನಿತ್ತ ಕೈತುತ್ತನುಂಡು ನಿನ್ನ ಮಡಿಲಿನಲ್ಲಿ ಹಾಯಾಗಿ ಬೆಳೆದು ವಿದ್ಯಾ ಬುದ್ದಿಗಳ ಕಲಿತು ನಲಿದು ಬೆಳೆದೆ ನಾ ನಿನ್ನ ಋಣ ದಲಂದು ನೀ ಕೊಟ್ಟಈ ದೇಹ ಬಾಗುತಿದೆ ಋಣಭಾರ ದಲ್ಲಿಂದು ನನ್ನಮ್ಮ ನಿನ್ನ ಋಣ ತೀರಿಸಲಿ ಹೇಗೆ ನಾಬೆಳೆದುನಿನಗಿಂದುಕೀರ್ತಿಯನುತರುವೆ ಹರಸುಬಾನೀಎನ್ನಎಲ್ಲಿದ್ದರಿಂದೇ ಪಂಕಜಾ.ಕೆ. ಮುಡಿಪು

ಐಕ್ಯಗಾನವ ಹಾಡೋಣ

ಐಕ್ಯ ಗಾನವ ಹಾಡೋಣ ಶ್ರಾವಣ ಮಾಸದ ಹಬ್ಬದ ಸಡಗರದಲಿl ಬಂದಿತುಸ್ವಾತಂತ್ರ್ಯದಿನಾಚರಣೆ ಸಂಭ್ರಮದಲಿll ಬ್ರಿಟಿಷರ ದಾಸ್ಯದಿಂದ ಪಡೆಯಿತು ದೇಶ ಮುಕ್ತಿl ಆದಕಾಗಿ  ಶ್ರಮಿಸಿ ಮಾಡಿದರಂದು ಯುಕ್ತಿll ಜೀತದಾಳಿನಂತಿದ್ದ ದೇಶದಾಳು ಅಂದುl ಪಡೆದನು ಸ್ವಾತಂತ್ರ್ಯದ ಕಾಳು ಇಂದುll ಹಚ್ಚಿದರು ಕಲಿಗಳು ಸ್ವಾತಂತ್ರ್ಯದ ಹಣತೆl ಸವಿದರೇಸ್ವಾತಂತ್ರ್ಯದ ಸವಿಯ ಜನತೆ?ll ತುಂಬಿದೆ ಈಗ ದುಷ್ಟರ ಕೂಟ ಭ್ರಷ್ಟರ ಕಾಟl ಅಧಿಕಾರಿಗಳ ಅಟ್ಟಹಾಸ ಧನದಾಹದ ನೋಟll ದ್ವೇಷ ಸೇಡು ವಿಷಬೀಜಗಳ ಬಿತ್ತಿl ಪಡೆಯಬಹುದೇ ಸಂತಸದ ಬುತ್ತಿ?ll ಜಾತಿಮತ ಪಂಥಗಳ ಹೆಸರಿನಲಿ  ಕಿಚ್ಚಿಟ್ಟುl ತಮ್ಮ ಬೇಳೆಬೇಯಿಸುವರು ಕಿಡಿಯ ತಂದಿಟ್ಟುll ಪುಂಡ ಭಂಡರ  ರಾಜಕೀಯ ದೊಂಬರಾಟl ನಿಲ್ಲಿಸಬೇಕು ಇವರ ಅಟ್ಟಹಾಸದ ಆಟll ಮಹಿಳೆ ಮಕ್ಕಳಿಗೆ ಕೊಡಬೇಕು ನಾವು ರಕ್ಷಣೆl ಸ್ವಾತಂತ್ರ್ಯದ ಹೆಸರಲಿ ನಡೆಯಬಾರದು ಭಕ್ಷಣೆll ಎದ್ದೇಳಿ ಸ್ವತಂತ್ರ ಭಾರತದ ವೀರ ಕಲಿಗಳೇl ದೇಶಭಕ್ತಿಯ ತುಂಬಿ ಐಕ್ಯಗಾನವ ಹಾಡೋಣl ಸ್ವತಂತ್ರ ಭಾರತದ ಏಳಿಗೆಗೆ ಕೈ ಜೋಡಿಸೋಣll ಪಂಕಜಾ.ಕೆ. ಮುಡಿಪು ಫೋನ್ ನಂಬರ್ 9964659620

ಹರೆಯ

ಹರೆಯ ಹರೆಯದಲ್ಲಿ ಹಕ್ಕಿಯಂತೆ ಆಗಸದಲಿ ರೆಕ್ಕೆ ಬಿಚ್ಚಿ ಹಾರುವ ಮನಸು ಗರಿಗೆದರಿದ ಆಶೆಗಳು ಬಾನೆತ್ತರ ಏರಿ ಕುಳಿತು ನಲಿದ ಕನಸು ಬೇಡ ನ ಬಲೆಯೊಳಗೆ ಸಿಕ್ಕಿ ರೆಕ್ಕೆಮುರಿದಹಕ್ಕಿಯಂತಾಗದಿರಲಿಬಾಳು ಕನಸುಗಳಬೆನ್ನೇರಿಹಾರುವಮನಸಿಗೆಕಡಿವಾಣಹಾಕದಿದ್ದರೆಬಾಳುಗೋಳು ಕಾಯುತಿರುವರು ದುಷ್ಟ ರು ರೆಕ್ಕೆಗಳ ಕೆಡವಲು ಅರಿಯಬೇಕು ಮನುಜರ.ಭಾವನೆಗಳ ತೆವಲು ಆಗಸದಲ್ಲಿ ಹಾರುವ ಕನಸುಗಳ ಭರದಲ್ಲಿ ಮನವು ರೆಕ್ಕೆ ಮುರಿದ ಹಕ್ಕಿ ಯಂತಾಗದಿರಲಿ ಪಂಕಜಾ.ಕೆ. ಮುಡಿಪು

ಬಾನಾಡಿ

ಬಾನಾಡಿ ರೆಕ್ಕೆ ಬಂದ ಹಕ್ಕಿಗಳು ಹಾರಡುತ್ತಿವೆ ಬಾನಿನಲಿ ತಾಯ ಬಿಸಿಯಪ್ಪುಗೆಯ ತೆಕ್ಕೆಯನುಸರಿಸಿಖುಷಿಯಲಿ ದೂರದೂರಿಗೆ ಹಾರಿ ಗೂಡುಕಟ್ಟಿ ನಲಿಯುತಿಹರಲ್ಲಿ  ಹೆತ್ತೊಡಲಿಗೆ ಬಟ್ಟೆ ಕಟ್ಟಿ ಮರೆತಿರುವರೇ ಹೆತ್ತ ತಾಯ ಮಮತೆ ಕಾದಿರುವಳು ಹೆತ್ತಬ್ಬೆ    ಕಳೆದು ಜಡತೆ ನೆನೆಯಬೇಕು ಆಕೆಯ ಪ್ರೀತಿಯ ಒರತೆ ಸಾಕಬೇಕುವೃದ್ಧಾಪ್ಯದಲಿಬಾರದಂತೆ ಕೊರತೆ ಪಂಕಜಾ.ಕೆ.