Skip to main content

Posts

Showing posts from April, 2019

ಬಿರುಗಾಳಿ

ಬಿರುಗಾಳಿ ಕಾದು ಕಾದು ಬಂತು ಮೊದಲ ಮಳೆ ಗುಡುಗು ಮಿಂಚು ಗಾಳಿಯ ಜತೆ ಅಬ್ಬರಿಸಿ ಮಳೆ ಬೀಸುಗಾಳಿಗೆ ನೆಟ್ಟಗಿಡ ಮರಗಳು ಉರುಳಿ ರೈತ ಕಂಗೆಟ್ಟು ಹೋದ ಬಳಲಿ ಏನಿದು  ಹುಚ್ಚು ಹುಚ್ಚು ಗಾಳಿ ಉರುಳುತ್ತಿದೆ ಬುಡ ಸಮೇತ ಬಾಳೆ ನೆಟ್ಟ ಗಿಡಮರಗಳುಉರುಳಿ ನೆಲಸಮ ರೈತನಬಾಳುಬಿರುಗಾಳಿಗಿಟ್ಟ  ಸೊಡರಸಮ ಸಾಲಸೋಲದಲಿ ಸಿಕ್ಕಿ ಜೀವನ ಕಂಡ ಕನಸುಗಳೆಲ್ಲಾ ನೆಲಸಮ ಗಾಳಿಯ ಆರ್ಭಟಕೆ ಕಟ್ಟಿದ ಮುಗಿಲು ಓಡಿ ಆಶೆ ನಿರಾಶೆಯಲಿ ಮನವು  ಕಾಡಿ ಗಿಡ ಮರಗಳು ನೀರಿಲ್ಲದೆ ಒಣಗಿ ಹೊರಟುಹೋಗುತ್ತಿದೆಬಾಳ ಸವಿ ಸುಂಟರಗಾಳಿಯು ಆರ್ಭಟಿಸಿ ಸಾವು ನೋವುಗಳು ಸಂಭವಿಸಿ ಎಲ್ಲೆಲ್ಲೂ ತುಂಬಿತುಕೊಳಕು ದೂಳು ಜೀವಿಗಳಜೀವನವಾಯಿತುಗೋಳು ಕರುಣೆ ಬಾರದೆ ನಿನಗೆ ಹೇಳುದೇವಾ ಯಾಕೆ ಹೀಗೆ ಕಾಡಿಸುವೆ  ನಮ್ಮ ಜೀವ ಪಂಕಜಾ. ಕೆ

ನೀರಾಟ

         ನೀರಾಟ   ನೀರಿಲಿ ಆಡುತ್ತೆ ಹೇಳಿ ಕೋಲು ತಂದೆಯ ಅಮ್ಮ ಸೆಖೆಯಲ್ಲದಾ ಹೇಳು ರಜ್ಜ ನೀರಾಟ ಬೇಡದಾ ಅಮ್ಮ ಅಷ್ಟಕ್ಕೆಲ್ಲಾ ಕೋಪ ಮಾಡಿ ಬಡಿವದೆಂತಕೆ ಅಮ್ಮ ಅಂಬಗ ಇಡೀ ದಿನ ಮೊಬೈಲ್ ಹಿಡುಕೊಂಡು ಆಡೆಕ್ಕ ಹೇಳು ಅಮ್ಮ ಈ ಪ್ರಾಯಲ್ಲಿ  ಆಡದ್ದರೆ ಮತ್ತೆ ಯಾವಾಗ  ಆಡುದು ಅಮ್ಮ ನಿನಗೀಗಆಡೆಕ್ಕೂ ಹೇಳಿ ಇದ್ದರೂ ಎನ್ನಹಾಂಗೆ ಅಡ್ಲೆಡಿಗ ಅಮ್ಮ ಆಟ ಅಡ್ಲೆ ಬಿಟ್ಟು ಆನು ಆಟಲ್ಲಿ ಖುಷಿ ಪಡುದರ ನೋಡಮ್ಮ ಪುಟ್ಟು ಮಕ್ಕಳ ಆಟ ನೋಡುಲೇ ಚಂದ ಅಲ್ಲದಾ ಅಮ್ಮ ಪಂಕಜಾ.ಕೆ.

ಹೊಸಚಿಗುರುಕವನ ಸಂಕಲನ ಟಿ. ಕೆ. ವಿ.ಭಟ್ ಬಸಮಾರಂಭ

ಗಜಲ್ ವೆಂಕಟರಮಣಣ್ಣನಕವನಸಂಕಲನ ಬಿಡುಗಡೆಯಾದ ಆಹೊತ್ತು ಎಲ್ಲೆಡೆ ಸಂಭ್ರಮ ಜನಸಾಗರವೇ ತುಂಬಿದ  ಆಹೊತ್ತು ಹೊಸಚಿಗುರಿನ ಹೊತ್ತಗೆ ಅರಳಿ ಸಾಹಿತ್ಯಾಭಿಮಾನಿಗಳ ಸೆಳೆದ ಆ ಹೊತ್ತು ಸಾಹಿತ್ಯಾಸಕ್ತರ ಮನವನು ತಣಿಸುವ ಬಗೆಬಗೆಸಾಹಿತ್ಯರಸಾಯನವ ಉಣಿಸಿದ ಆಹೊತ್ತು ಮನವನು ತಣಿಸುವ ಸುಂದರ ಕವನ ಗಜಲ್ ಮಹಾಪೂರದ ಹೊತ್ತಗೆ ಅರಳಿದ ಹೊತ್ತು ಹೊಸಚಿಗುರಲಿ ಹಣ್ಣು ಹೂವುಗಳು ಅರಳಿ ಪಂಕಜಾಳಮನವನ್ನುತಣಿಸಿದಆಹೊತ್ತು ಪಂಕಜಾ.ಕೆ.

ಕೈಯಲಿದೆ ಕೊಳಲು revised

ಕೈಯಲಿದೆ ಕೊಳಲು ಕೈಯಲಿದೆ   ನೀನು ಕೊಟ್ಟ  ಕೊಳಲು ಮನದಲಿದೆ  ನೀನು ಇಲ್ಲದ ಅಳಲು ಎಂದು ಬರುವೆ  ನೀನು ಬೇಗ ಹೇಳು ನನ್ನ ಒಲವಮಾತನೊಮ್ಮೆ ನೀನು ಕೇಳು ತಂಪುಗಾಳಿಎಲ್ಲೆಡೆಯೂಬೀಸುತಿರುವುದು ಕೊಳಲಗಾನಕೇಳಿದಂತೆಭಾಸವಾಗುವುದು ನಿನ್ನ ಮುದ್ದು ಮುಖಮಾತ್ರ ವೆಲ್ಲೂ ಕಾಣೆ ಎಲ್ಲಿಹೋದೆತಿಳಿಯೇನಾನಲ್ಲಅಷ್ಟುಜಾಣೆ ಎದೆಯ ತುಂಬಾ ತುಂಬಿರುವ ಒಲವು ನಿನಗೆಮಾತ್ರಅದುಮೀಸಲು ಕನಸುಗಳು ಮನದ ತುಂಬಾ ತುಂಬಿದೆ ನನಸು ಮಾಡಲದನು ನೀನು ಬರಬೇಕಿದೆ ಕಾಯುತಿರುವೆನಿತ್ಯವೂಎಂದುಬರುವೆಯೋ ಬೃಂದಾವನವುಸೊರಗುತಿದೆನೋಡಲಾರೆಯೋ ಕೊಳಲಹಿಡಿದುಕಾಯುತಿರುವೆನಿನಗಾಗಿ ಯಮುನಾತೀರದಲಿನಿತ್ಯನಿನ್ನಬರುವಿಗಾಗಿ ಪಂಕಜಾ.ಕೆ. ಮುಡಿಪು

ಗಜಲ್ 8 ವಾಹ ವಾರ್ಷಿಕೋತ್ಸವ

ಗಜಲ್   8 ಹೊಸಬಾಳಿಗೆಹೆಜ್ಜೆಯೂರಿದ ದಿನವಿದು ಬಾಳಸಂಗಾತಿಯನುಮನೆತುಂಬಿಸಿದದಿನವಿದು ಹೊಂದಾಣಿಕೆಯಲಿ ಜೀವನ ಸಾಗಿಸಬೇಕು ಬಾಳಪಯಣದಲಿಜತೆಯಾಗಿಸೇರಿದದಿನವಿದು ಸಪ್ತಪದಿ ತುಳಿದು ಒಪ್ಪಿಗೆಯಿತ್ತ ಕ್ಷಣ ಜನುಮ ಜನುಮದ ಜೋಡಿಯಾದ ದಿನವಿದು ನೋವು ನಲಿವುಗಳಲ್ಲಿ ಜತೆಯಾಗಿ ಸಾಗಬೇಕು ಬದುಕಿನ ಪುಟಗಳಲ್ಲಿ ಹೆಸರು ಬರೆದದಿನವಿದು ಪಂಕಜಾಳಹಾರೈಕೆಎಂದೆಂದೂಇರುವಹೊತ್ತು ಶುಭಹಾರೈಸಲುಬಂಧುಮಿತ್ರರುಸೇರಿದದಿನವಿದು ಪಂಕಜಾ ಕೆ

ಪುಸ್ತಕ ದಿನ 23..4..2019

ಪುಸ್ತಕದಿನ ಪುಸ್ತಕವೆನ್ನುವ ಜ್ಞಾನದ ಭಂಡಾರ ಅರಿತಷ್ಟು ಮುಗಿಯದ ಸಪ್ತಸಾಗರ ಜ್ಞಾನದ ಜ್ಯೋತಿಯ ಬೆಳಗಿಸುತ ಸುಜ್ಞಾನದ ಬೆಳಕನು ಚೆಲ್ಲುವುದು ಪುಸ್ತಕವೆಂಬ ಹೊತ್ತಗೆ ಹಲವು ಪುಸ್ತಕ ಪ್ರೀತಿಯ ಬೆಳೆಸುವ ನಾವು ಪುಸ್ತಕ ವೆನ್ನುವ ಹೊತ್ತಗೆ ಇರಲು ಒಂಟಿತನದ ಭಯವೆಲ್ಲಿ ಅಂತರ್ಜಾಲವ ತೆರೆದರೆ  ಸಾಕು ಸಿಗುವುದು ಪುಸ್ತಕ ಹಲವಾರು ನಿತ್ಯವೂ ಓದುತ ಬೆಳೆಸುವ ಜ್ಞಾನವ ಅರಿಯುತ ಹೊಸ ಹೊಸ ವಿಷಯಗಳ ಪುಸ್ತಕ ದಿನದಲಿ  ಪುಸ್ತಕ ಓದುತ ಮಸ್ತಕದಲಿ ಜ್ಞಾನವ ತುಂಬಬೇಕು ಪಂಕಜಾ .ಕೆ.

ಮುನ್ನುಡಿ

        ಮುನ್ನುಡಿ ಶ್ರೀಮತಿ ಪಂಕಜಾ .ಕೆ. ಮುಡಿಪು ಇವರ ಚೊಚ್ಚಲ ಕವನ ಸಂಕಲನಕ್ಕೆ ಮುನ್ನಡಿಯನ್ನು ಬರೆಯುವ ಸದಾವಕಾಶವು ನನಗೆ  ಒದಗಿ ಬಂದದ್ದು. ಒಂದು ಯೋಗಾಯೋಗ ಎನ್ನಬಹುದು. ಸ್ವಲ್ಪ ಸಮಯದ ಹಿಂದೆ ಮುಡಿಪು ಹವ್ಯಕ ವಲಯದ ಸಾಹಿತ್ಯಪ್ರೇಮಿಗಳನೇಕರ ಅಪೇಕ್ಷೆಯಂತೆ ಆರಂಭವಾದ ಗುಣಾಜೆ ಒಪ್ಪಂಗ ಎಂಬ ಸಾಹಿತ್ಯ. ಬಳಗವನ್ನು ಸೇರಿದ ಅನೇಕ

ಬಿಡುವಿಲ್ಲ

   ಬಿಡುವಿಲ್ಲ ಮಾವಿನ  ಮರದಲಿ ತುಂಬಿದೆ ಕಾಯಿ ಹೊಡೆಯುವ ಕೈಗಳಿಗೆ ಬಿಡುವಿಲ್ಲ ಆಟದ ಅಂಗಳ ಬೀಕೋ ಎನುತಿದೆ ಮೊಬೈಲ್ ಹಿಡಿದ ಕೈಗಳಿಗೆ ಆಡುವ ಮನಸಿಲ್ಲ ಚಿಣ್ಣರೆ ಬನ್ನಿರಿ ಜತೆಯಲಿ ಕುಣಿಯಿರಿ ಆಟವ ಆಡುತ  ದಣಿಯೋಣ ಮೈ ಮನಕೆಲ್ಲಾ ಉತ್ಸಾಹವ ತುಂಬುತ ಆಟದ ಸವಿಯನು ಸವಿಯೋಣ ಕೋಕೋ ಕ್ರಿಕೆಟ್  ಚಿನ್ನಿದಾಂಡು ಆಟದ ಸಾಲೆ ಇರುವುದು ನೋಡು ದಿನ ದಿನವೂ ಜತೆಯಲಿ ಆಡುತ ಪ್ರೀತಿಯ ಮನದಲಿ ತುಂಬೋಣ ಒಬ್ಬರ ಕಷ್ಟಕೆ ಇನ್ನೊಬ್ಬರು ಮರುಗುತ ಜತೆಯಲಿ ಜೀವನ ಸವಿಯನು ಸವಿಯೋಣ ಆಟವ ಆಡುತ ಕಲಿಯುವ ಚಂದ ಮೈ ಕೈಗೆಲ್ಲಾ ವ್ಯಾಯಾಮದ ಬಂಧ ಚಿಣ್ಣರೆ ತಿಳಿಯಿರಿ ಆಟದ ಖುಷಿಯನು ಜತೆಯಲಿ ಆಡುತ ಮೈ ಮರೆಯೋಣ ಪಂಕಜಾ. ಕೆ

ಹೂ ಕುಸುಮ

     ಹೂ ಕುಸುಮ ಕುಸುಮ ಕೋಮಲೆ ಅರಳಿನಿಂತಿದೆ ಗಂಧಚಂದವ  ಹರದಿತೆಲ್ಲೆಡೆ ಮನವ ಸೆಳೆಯುವ  ಚೆಲು ಬಣ್ಣ ನಿತ್ಯ ಮೋಹಕ ಸೆಳೆಯುತಿದೆ ಕಣ್ಣ ದೇವ ಪೂಜೆಯಲಿ ಬಾಳು ಸಾರ್ಥಕ ಪದೇವ ಬಯಕೆಯಲಿ  ನಿತ್ಯ ಪುಳಕ ನಿತ್ಯ ಅರಳಿ ನಗುವ ಹೂಗಳು ಬಾಳು  ಸಾರ್ಥಕ ವಾದ ಕ್ಷಣಗಳು ಚಂದ  ಚಂದದ  ಹೂಗಳರಳಿ ಮನ ಸೆಳೆಯುತಿದೆ ಬಿರಿದರಳಿ ಜೀನ ಸವಿಯುತ ಹಾರಾಡುವ ಚಿಟ್ಟೆ ಮನಕೆ ತುಂಬುತಿದೆ ಅನಂದದ ಕಟ್ಟೆ ಎಲ್ಲೆಡೆ  ತುಂಬಿದ  ಹೂಗಳ  ನರುಗಂಧ ಕವಿಮನದಲಿ ಮೂಡುತಿದೆ ಕವಿತೆಯ ಬಂದ ಪಂಕಜಾ.ಕೆ.

ಭಾಸ್ಕರ

      ಭಾಸ್ಕರ ಭಾಸ್ಕರನು ಬಾನಲಿ ಹೊಳೆಯುತ ಬಂದ ಜಗಕೆ  ಬೆಳಕನು ಹರಿಸುತ ಬಂದ ರಾತ್ರಿಯ ನಿದ್ದೆಯಲಿ ಮೈ ಹಗುರಾಗಿ ದಿನಕರನ ಸ್ವಾಗತಕೆ ಮೈಎಲ್ಲಾಸಜ್ಜಾಗಿ ಕಾಯಕವ ಗೈಯುತ ದಿನವು ಸಾಗಿ ನೇಸರನ ಪಯಣದಲಿ ಮನವು ಮಾಗಿ ಬಿರುಬಿಸಿಲಿಗೆ ದೇಹ ಬಳಲಿ ಬೆಂಡಾಗಿ ರಾತ್ರಿ ನಿದ್ದೆಯಲಿ  ಮೈ ಮನವು ತಂಪಾಗಿ ಕಾಯಕವೇ ಕೈಲಾಸವೆಂದು ಸಾರುತಿರುವನು ನಿತ್ಯ ಬಿಡದೆ ಜಗವ  ಬೆಳಗುತಿರುವನು ಭಾಸ್ಕರನ ಹಿತಸ್ಪರ್ಶ  ಇಳೆಗೆ  ಪುಳಕ ಮೈ ಮನಕೆ ಉಲ್ಲಾಸ ಹು ರು ಪಿನ ಜಳಕ ಅತಿ ಬಿಸಿಲು ಮೈ ಮನಕೆ ಎಂದೂ ಹಿತವಲ್ಲ ಅತಿಯಾದರೆ ಅಮೃತವೂ ವಿಷವೇಎಲ್ಲ ಮಿತಿಯಲಿರಬೇಕು  ಜೀವನದಲ್ಲಿ ಎಲ್ಲವು ಸಾಗಬೇಕು ಸಂತೃಪ್ತಿಯಲಿ ಬಾಳಪಯಣವು ಪಂಕಜಾ .ಕೆ.

ವಿದ್ಯಾನಿಧಿ

ವಿದ್ಯಾನಿಧಿ ವಿದ್ಯೆಎನ್ನುವ ಅಮೃತ ಭಂಡಾರದ ನಿಧಿ ಕದಿಯಲಾರದ ಒಂದು ಅಕ್ಷಯ ನಿಧಿ ವಿದ್ಯೆಯಿದ್ದರೆ  ಒಂದು ಯೋಗ್ಯತೆ ಸಿಗುತಿದೆ ಎಲ್ಲೆಲ್ಲೂ ನಮಗೆ ಮಾನ್ಯತೆ ವ್ಯವಹಾರಗಳಿಗೆ ಬೇಕು ನಮಗೆ ವಿದ್ಯೆ ಜೀವನದಲಿ ಮೇಲೆರಲು ಬೇಕು ವಿದ್ಯೆ ವಿದ್ಯೆಗೆ  ವಿನಯವೇ  ಭೂಷಣ ಮಾಡಬಹುದು ಒಳ್ಳೆಯ ಭಾಷಣ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಆರೋಗ್ಯವಾಗಿರಲು ಬೇಕು ದನದ ಹಾಲು ಕಸದಿಂದ. ರಸ ತೆಗೆಯುವ ವಿದ್ಯೆ ಸಾಧಿಸಿ ಜೀವನದಲ್ಲಿ ನಾ ಗೆದ್ದೆ ವಿದ್ಯಾರ್ಥಿಗೆ ವಿದ್ಯೆ ಕಲಿಯುವುದೇ ಗುರಿ ಅದಕಾಗಿ  ಬಿಡಬೇಕು ನಿದ್ದೆಯ  ಗರಿ ವಿದ್ಯೆಯಿದ್ದರೆ ಲೋಕಮಾನ್ಯ ಎಲ್ಲೆಲ್ಲೂ ಸಲ್ಲುವುದು ಸಮ್ಮಾನ ಉದ್ವೇಗ ಚಿಂತೆಯನು ದೂರ ಇಡಿ ಗುರಿಸೇರುವವರೆಗೆ  ವಿಶ್ರಾಂತಿ  ಬಿಡಿ ಪಡೆಯಬೇಕು ಜೀವನದಲ್ಲಿ ವಿದ್ಯಾನಿಧಿ ಸಿಗಬಹುದು   ಆಗ ಜೀವನದಲ್ಲಿ  ನೆಮ್ಮದಿ ಪಂಕಜಾ .ಕೆ.

ನಿರೀಕ್ಷೆ

ನೀರೀಕ್ಷೆ ಸೆಖೆಗಾಲದ  ಸೆಖೆಯ ಝಳ ಮೈಯಲ್ಲಿಇಳಿಯುತ್ತಿದೆ ಬೆವರ ಝಳ ಬಾಂದಲದಲ್ಲಿ ಕರಿಮೋಡಗಳ ದಂಡು ಮನದಲ್ಲಿ ಮೂಡಿಸುತ್ತಿದೆ ಆಶೆಯ ದಿಂಡು ಬೇಸಿಗೆಯ ಕಡು ಬಿಸಿಲ ತಾಪ ಸುಡುತ್ತಿದೆ ಮೈಯನು ಪಾಪ ಮಳೆಯ ನೀರಿಕ್ಷೆಯ ತಪ ನೀರಿನದೇ  ನಿತ್ಯ ಜಪ ಭೂತಾಯಿ ಬಿರಿದು ನಿಂತಿದೆ ಮಳೆಯ ನೀರೀಕ್ಷೆಯಲಿ ಸೋತಿದೆ ಮುನಿಸು ತೊರೆದು ಬೇಗ ಬಾ ವರುಣ ಇಲ್ಲವೇ ನಿನಗೆ ಇನಿತೂ ನಮ್ಮಲ್ಲಿ ಕರುಣ ಒಲವ  ರಸವ   ಬೇಗ ಹನಿಸು ಜೀವನೋತ್ಸಾಹ ವ ತುಂಬಿಸು ಪಂಕಜಾ.ಕೆ.

ಮುಂಜಾವು

ಮುಂಜಾವು ಬಾನಲ್ಲಿ ಹಾಸಿದ ಮಂಜಿನ ಸೆರಗನು ಸರಿಸುತ ಬಂದನು ರವಿತೇಜ ರವಿತೇಜದ ಬಿಸಿ ಸ್ಪರ್ಶಕೆ ನಾಚಿ ತಾವರೆ ಅರಳಿತು ಕೊಳದಲ್ಲಿ ರವಿತೇಜನು ಉದಯಿಸಿದ ಕಂಡು ಹಕ್ಕಿಗಳುಲಿದವು ಮುದದಿಂದ ಗಿಡದಲಿ  ಅರಳಿದ  ಹೂಗಳು ನರುಗಂಪನು ಎಲ್ಲೆಡೆ ಹರಡಿದವು ಗಿಡದಲಿಗೂಡನು ಕಟ್ಟಿದ ಹಕ್ಕಿಗಳಿಂಚರ ಮನಕೆ  ಮುದವನು ತುಂಬುತಿದೆ ಮನದಲಿ ತುಂಬಿದ ಉಲ್ಲಾಸ ಮುಖದಲಿ ಮೂಡಿತು ಮಂದಹಾಸ ಬಾನಲಿ ಕಲಸಿದ  ಚೆಲುವಿನ ನಣ್ಣ ಕಣ್ಮನ ವನ್ನು ತುಂಬುತಿದೆ ಹೂಗಳ ನರುಗಂಪನು ಸವಿಯುತ ನಾಸಿಕದ ಹೊಳ್ಳೆ ಗಳರಳಿದವು ಹುಲ್ಲಿನ ಹಾಸಲಿ ಹರಡಿದ ಮಂಜಿನ ಹನಿಗಳು ಮುತ್ತಿನ  ಮಣಿಗಳ ತೆರದಿ ತೋರುತ್ತಿದೆ ಮುಂಜಾವಿನ ಈ ಸುಂದರ ದೃಶ್ಯಸವಿಯುತ  ಕಣ್ಣುಗಳೆರಡು ಸಾರ್ಥಕ್ಯವ ಭಾವವತಾಳಿದವು ಎಲ್ಲೆಡೆ ತುಂಬಿದಪ್ರಕೃತಿಯಸೌಂದರ್ಯ ಕವಿ ಮನದಲಿಕವಿತೆಯ ಒರತೆಯ ಸ್ಪುರಿಸುತ್ತಿದೆ ಪಂಕಜಾ.ಕೆ ಮುಡಿಪು

ರವಿಗೊಂದು ಒಲೆ

ಹೊಸವರ್ಷಕೆ ಸ್ವಾಗತ ಹೊಸವರ್ಷದಾಗಮನಕೆ ವರುಣನ ಸ್ವಾಗತ ಬೀಸುಗಾಳಿಯ ಜತೆ ಮಳೆಯ ಸಿಂಚನ ಬಿರುಬಿಸಿಲಿಗೆ ಬಳಲಿ ಬೆಂಡಾದ ಇಳೆಗೆ ಹನಿ ಮಳೆಯ ತಂಪು ಕಂಪಿನ ನೀರ ಜಳಕ ಹೊಸಮಣ್ಣಿನ ಪರಿಮಳವು ಎಲ್ಲೆಡೆ ಹಬ್ಬಿ ಮಣ್ಣಿನಡಿಯಲ್ಲಿ ಅವಿತಿದ್ದ ಬೀಜಗಳುಉಬ್ಬಿ ಯುಗಾದಿಯಶುಭದಿನಕೆಸ್ವಾಗತವಕೋರಿ ಚಿಗುರು ಹೂವು ಹಣ್ಣು ಹೊತ್ತು ನಲಿಯುತ್ತಿದೆ ಪ್ರಕೃತಿ ಪಂಕಜಾ.ಕೆ.