Skip to main content

Posts

Showing posts from July, 2018

ಜಲಪ್ರಳಯ

ಜಲಪ್ರಳಯ ಬಾನು ತುಂಬಿದ ಕರಿಯ ಮುಗಿಲು ಬಿರಿದು ಸುರಿಸಿತು ಮಳೆಯನು ಬೀಸುಗಾಳಿಯು ಜತೆಗೆ ಬಂದು  ಹರುಷ ತಂದಿತು ಇಳೆಯಲಿ ಹನಿಯು ಕಡಿಯದೆ ಸುರಿದ ಮಳೆಗೆ ಕಡಲು ಉಕ್ಕಿ ಹರಿಯಿತು ನೀರು ಎಲ್ಲೆಡೆ ತುಂಬಿ ತುಳುಕಿ ಜಲಪ್ರಳಯವು ಬಂದಿತು ಕಷ್ಟ ನಷ್ಟವ  ಜತೆಗೆ  ತಂದಿತು ಹಸಿರು ಕಾಡನು ಕಡಿದು ಕಾಂಕ್ರೀಟ್ ಕಾಡನು ಕಟ್ಟಿ ಕೃತಕ ನೆರೆಯು ಬಂದಿತು ಮನೆ ಮಠಗಳು ಮುಳುಗಿತು ಗಗನಚುಂಬಿ ಕಟ್ಟಡಗಳ ಕಟ್ಟುತಿರುವ ಭರದಲ್ಲಿ ನೀರು ಇಂಗಲು ಜಾಗವಿಲ್ಲದೆ ಜಲಪ್ರಳಯವೇ ಆಯಿತು ಉಳಿಸಿ ಬೆಳೆಸಿದರೆ ಹಸಿರು ಕೊಡುವುದದು ಉಸಿರು ನೀರು ಇಂಗಿಸಿ ಜಲವ ಉಳಿಸಿ ಕೃತಕ   ನೆರೆಯನು ತಪ್ಪಿಸಿ ಪಂಕಜಾ.ಕೆ. ಮುಡಿಪು ಕುರ್ನಾಡು

ವರ್ಷ ಧಾರೆ

29 07 2018 ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ ಸುರಿಯುತ್ತಿದೆ ವರ್ಷಧಾರೆ ಮನದಿ  ತುಂಬಿದೆ ಹರ್ಷದಾರೆ ತರುಲತೆಗಳು ಬೀಸುಗಾಳಿಗೆ ತೊನೆದು ನಲಿಯುತ್ತಿದೆ ಹರ್ಷದಿಂದ  ಕಳೆಯ ತೊಳೆದು ಎಲ್ಲೆಲ್ಲೂ ತೋರುತ್ತಿದೆ ಹಸಿರ ಸಿರಿ ಭೂತಾಯಿ ಒಡಲಲ್ಲಿ ಸಂತಸದ ಗರಿ ಗಿಡದಲ್ಲಿ ತುಂಬಿರುವ ಹೂವುಗಳು ಹಾರಾಡುತಿರುವ  ದುಂಬಿಗಳು ಕುಣಿಯುತ್ತಿದೆ ವರ್ಷಧಾರೆಯಲಿ ನವಿಲು ಎಲ್ಲೆಲ್ಲೂ  ತುಂಬುತ್ತಿದೆಸಂತಸದ ಅಮಲು ಬಾನು ಬುವಿ ಒಂದಾಗುವ ಮಳೆ ಜೀವ ಸಂಕುಲಕೆ ತುಂಬಿಸುತಿದೆ ಕಳೆ ತುಂಬಿ ಹರಿಯುತಿದೆ ತೊರೆ ಎಲ್ಲೆಲ್ಲೂ ಹರಿಯುತಿದೆ ನೀರ ಧಾರೆ ಸುರಿಯಲಿ  ವರ್ಷಧಾರೆ ತುಂಬಿ ತುಳುಕಲಿ  ಹರ್ಷದಾರೆ ಪಂಕಜಾ. ಕೆ. ಮುಡಿಪು .ಕುರ್ನಾಡು

ದೇವಿ ಸ್ತುತಿ

ಶರಣು ಬಂದಿಹೆ ದೇವಿ ಕೊಡು ನಮಗೆ ವರವ ಮನದ ಕಲ್ಮಶ ಕಳೆದು ಸದ್ಭಕ್ತಿ  ಸನ್ಮತಿಯ ಕೊಟ್ಟುಕಾಯು ನೀ ತಾಯೇ ಶುಕ್ರವಾರದ ಶುಭದಿನದಂದು ಪೂಜೆಗೊಳ್ಳುವೆ ದೇವಿ ವರ್ಣಿಸಲು ಹೇಗೆ ನಿನ್ನರೂಪವ ಜಗದಂಬೆ ಭಕ್ತಿಭಾವದಿಂದ ಪೂಜಿಸಲು ಒಲಿವೆ ನೀ ಜಗದೀಶ್ವರಿ ಬಂಗಾರ ಮೈಯವಳೇ ಮೈತುಂಬ ಆಭರಣ ಧರಿಸಿ ರುವವಳೇ ತಾವರೆ ಹೂವಿನ ಮೇಲೆ ಪವಡಿಸಿರುವ ಪದ್ಮನಾಭನ ರಾಣಿ ಪದ್ಮಪಾಣಿಯಾಗಿ ಕಾಯುವಳೇ ನಗುಮುಖದರಸಿ ನಗುವಿನಭಾರಣದಿಂದ ಮೈತುಂಬ ನಗಧರಿಸಿ ಕೆಂಪುಸೀರೆಯ ನುಟ್ಟ ಕನಕಾಂಬರಿ ಕರಮುಗಿದು ಬೇಡುವೆ ತಾಯೇ ಪಾಲಿಸೆಮ್ಮ ಮಂದರ ಧರನರಸಿ ಸುರಹರಪೂಜಿತೆ ದುರಿತ ನಿವಾರಿಣಿ ಅಂಬುಜಮುಖಿಪಾಪವಿನಾಶಿನಿ ತಾಪನಿವಾರಿಣಿ  ಜಗನ್ಮಾತೆ ಕರುಣಿಸೆಮ್ಮ ಹರಿಯರಮಣಿ ಪಂಕಜಾ. ಕೆ. ಮುಡಿಪು ಕುರ್ನಾಡು

ಬಾನಾಡಿ

ಬಾನಾಡಿ ರೆಕ್ಕೆ ಬಂದ ಹಕ್ಕಿಗಳು ಹಾರಡುತ್ತಿವೆ ಬಾನಿನಲಿ ತಾಯ ಬಿಸಿಯಪ್ಪುಗೆಯ ತೆಕ್ಕೆಯನು ಸರಿಸಿ ಖುಷಿಯಲಿ ದೂರದೂರಿಗೆ  ಹಾರಿ ತನ್ನ  ಗೂಡುಕಟ್ಟಿ ನಲಿಯುತಿಹರಲ್ಲಿ  ಹೆತ್ತೊಡಲಿಗೆ ಬಟ್ಟೆ ಕಟ್ಟಿ ಮರೆತಿರುವರೇ ಹೆತ್ತ ತಾಯ ಮಮತೆ ಕಾದಿರುವಳು ಹೆತ್ತಬ್ಬೆ    ಕಳೆದು ಜಡತೆ ನೆನೆಯಬೇಕು ಆಕೆಯ ಪ್ರೀತಿಯ ಒರತೆ ಸಾಕಬೇಕು ವೃದ್ಧಾಪ್ಯದಲಿ ಬಾರದಂತೆ ಕೊರತೆ ಪಂಕಜಾ.ಕೆ.

ಹಗಲು. ರಾತ್ರಿ

ನೀಲ ಬಾನಲಿ ಹೊಳೆಯುತ ಬಂದ ಮೇಲೇರುತ ಭುವಿಗೆ ಬೆಳಕನು ತಂದ ಜೀವರಾಶಿಗಳಿಗೆಲ್ಲ ಖುಷಿಯನು ತಂದ ಮೈಯ ಕಣ ಕಣಗಳಲಿ  ಬಿಸುಪನು ತಂದ ಬೆವರಿನ ಧಾರೆಯ ಹರಿಸುತ ನಿಂದ ಹಗಲಿನ  ಕೆಲಸಕೆ ಕಾಂತಿಯ ತಂದ ಕರಿಮೋಡಗಳ ಎಡೆಯಲಿ ಇಣುಕಿ ಪಡುಗಡಲಲಿ ಮುಖವನುಮರೆಸಿ ರಾತ್ರಿಯ ನಿದ್ರೆಗೆ ಜಾರಲು ಬಯಸಿ ರವಿ  ಮುಗಿಸಿದನು ಹಗಲಿನ ಪಯಣವನು ಎಲ್ಲಡೆ ತುಂಬಿತು ರಾತ್ರಿಯ ಮೌನ ಮೌನದಶಾಂತಿಗೆ ಕಾಂತಿಯ ತುಂಬುತ ಶಶಿ ಉದಿಸಿದನು ನಭದಲಿ ನೈದಿಲೆ ತನ್ನಯ ದಳಗಳ ಬಿಡಿಸಿ ಸ್ವಾಗತ ಕೋರಿತು ಚಂದ್ರನಿಗೆ ತಾರೆಗಳನೊಡನಾಡುತ  ಬಂದನು ಭುವಿಗೆ ಕಂಪಿನ ತಂಪನು ಸುರುಸಿದ ಇಳೆಗೆ ಹಾಲಿನ ಬೆಳಕು ತುಂಬಿದ ಭುವಿಗೆ ರಾತ್ರಿಯ ರಾಣಿ ಬಿರಿದರಳಿ ಮೊಲ್ಲೆ ಮಲ್ಲಿಗೆ ಕಂಪನು ಸೂಸಿ ಪರಿಮಳ ಗಂಧವ ಎಲ್ಲೆಡೆ ಹರಡಿ ರಾತ್ರಿಯ ಸೊಬಗನು ಹೆಚ್ಚಿಸಿತು ಚಂದ್ರನ ತಂಪು ಇಳೆಯನು ತುಂಬಿ ಜೀರುಂಡೆಗಳ ಗಾನವು ತುಂಬಿ ಸ್ವರ್ಗವೇಧರೆಗಿಳಿದಂತಮೋಹಕ ಕಾಂತಿ ಇಳೆಯಲಿ ತುಂಬಿತು ಶಾಂತಿ ಪಂಕಜಾ ಕೆ ಮುಡಿಪು ಕುರ್ನಾಡು

ಪರಿಸರ ಕಾಳಜಿ

17 06 2018  ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರಕಟಿತ ಪರಿಸರ ದಿನಾಚರಣೆ ಬಂತೆಂದರೆ ಸಾಕು ಎಲ್ಲರ ಬಾಯಲಿ ಬರುವುದು ಪರಿಸರ ಕಾಳಜಿ ಮಂತ್ರ ಎಲ್ಲೆಡೆ ಗಿಡಗಳ  ನೆಡುವ ಕಾರ್ಯಕ್ರಮವನು ನಡೆಸುವರು ನೆಡುವರುಕೆಲವರು ಪ್ರಸಿದ್ದಿಗಾಗಿ ತೋರಿಕೆಗಾಗಿ ಕೆಲವರ ಕಾಳಜಿ ದಿನಕಳೆದಂತೆ ಮರೆಯುವರಲ್ಲ ಪರಿಸರ ಕಾಳಜಿಯ ಹಸಿರಿನ ಕಾಡನು ಕಡಿದು ಕಾಂಕ್ರೀಟ್ ಕಾಡನುಕಟ್ಟುವರಲ್ಲ ಕಾಂಕ್ರೀಟ್ ಕಾಡು ಎಲ್ಲೆಡೆ ತುಂಬಿ ಉಸಿರಿಗೆ ಗಾಳಿಯು ಎಲ್ಲಿಯೂ ಇಲ್ಲದೆ ಮನುಕುಲ ನಾಶವೇಆದೀತು  ಪರಿಸರ ಕಾಳಜಿ ಬೆಳೆಸದೆ ಕೇವಲದಿನವನುಆಚರಿಸಿದರೇನು ಫಲ ಪರಿಸರ ಕಾಳಜಿ ಬೆಳೆಸಿದಿರಾದರೆ ಹಸಿರಿನಕಾಡದುಬೆಳೆಯುವುದು ಹಸಿರಿನಕಾನನದಿಂದಉಳಿಯುವುದು ನಮ್ಮಯ ಉಸಿರು ಪರಿಸರ ಸ್ನೇಹಿ ಜೀವನ ಕ್ರಮವನು ಅಳವಡಿಸಿ ಸುಂದರ ಪರಿಸರ  ಕಟ್ಟೋಣ ಪ್ಲಾಸ್ಟಿಕ್ ಮುಕ್ತ  ಪರಿಸರವನ್ನು ಕಟ್ಟುತ ಹಸಿರು ಕ್ರಾಂತಿಯ ಮಾಡುತ ಎಲ್ಲೆಡೆ ಹಸಿರನು ಬೆಳೆಸುತ ಸುಂದರ  ಜೀವನ ನಡೆಸೋಣ ನೆಲ ಜಲ ಉಳಿಸಿ  ನೀರಿಂಗಿಸಿ ಹಸಿರೇ ಉಸಿರು ಎನ್ನುವುದ ತಿಳಿದು ಗಿಡ ಮರಗಳನು ಬೆಳೆಸುತ ಪ್ರಕೃತಿ ಜತೆ ನಲಿಯೋಣ ಪಂಕಜಾ.ಕೆ. ಮುಡಿಪು ಕುರ್ನಾಡು

ಕಟೀಲೇಶ್ವರಿ

ಅಮ್ಮ ನಿನ್ನ ಕಂಡ ಕಣ್ಣು ಇಂದು ಧನ್ಯವಾಯಿತು ಶಿರವು ನಿನ್ನ ಚರಣ ಕಮಲಕೆ ಎರಗಿ ಪಾವನವಾಯಿತು ನಿನ್ನ ದರುಶನ ದಿಂದ ಇಂದು ಮನವು ತುಂಬಿ ಬಂದಿತು ನಿನ್ನ ಧ್ಯಾನದಲ್ಲಿ ಮನವು ಕರಗಿ ಹೋಯಿತು ತಾಯೆ ನಿನ್ನ ಕರುಣೆಯಿಂದ ಬಾಳು ಬೆಳಗಿತು ನಿತ್ಯ ಇರಲು ನಿನ್ನ ಕರುಣೆ ಭಯವು ಎಲ್ಲಿದೆ ತುಂಬಿ ಹರಿವ ತೊರೆಯ ತೆರದಿ ಮನಸು ಕುಣಿದಿದೆ ನಿನ್ನ ನೆನೆವ ಮನವು ಇಂದು ಶಾಂತಿ ಗೊಂಡಿದೆ ನಿತ್ಯ ನಿನ್ನ ಹಾಡ ಹಾಡಿ ದಣಿಯದಾಗಿದೆ ಮನವು ಕುಣಿದು ಹರುಷ ತುಂಬಿದ ಕಡಲು ಆಗಿದೆ ತಾಯ ಕಂಡ ಕರುವಿನಂತೆ ತನುವು ಕುಣಿದಿದೆ ನಿನ್ನ ರೂಪ ವರ್ಣಿಸಲು ಪದಗಳೊಂದೂ ಇಲ್ಲದಾಗಿದೆ ತಾಯೆ ನಿನ್ನ ಕರುಣೆ ಜಲವು ಇರಲಿ ಎಂದಿಗೂ ಆಯುರಾರೋಗ್ಯ ಭಾಗ್ಯಗಳ ಕರುಣಿಸೆಂದಿಗೂ ನಿತ್ಯ ಇರಲಿ  ನಮಗೆ ಯವ್ವನ ಆಯುರಾರೋಗ್ಯ ಜೀವನ ಬಾಳು ಆಗಲಿ ಹೂಬನ ಕೊಡು ತಾಯೆ ವರವ ಈ ದಿನ ಪಂಕಜಾ. ಕೆ. ಮುಡಿಪು.ಕುರ್ನಾಡು

ವರಮಹಾಲಕ್ಷ್ಮಿ ಹಾಡು

ವರವ ಕೊಡುವ ತಾಯಿಯೇ ವರಮಹಾಲಕ್ಷ್ಮಿ ದೇವಿಯೇ ಬೇಡಿಕೊಳ್ಳುವೆ  ನಾನು ನಿನ್ನ ಚರಣ ಕಮಲಕೆ ಎರಗುತ ಬಂದು ಹರಸು ಇಂದು ನೀನು ನಮ್ಮನ್ನೆಲ್ಲ ಚಂದದಿ ನಿತ್ಯ  ನಮ್ಮ ಮನೆಯಲಿದ್ದು ಸೇವೆ ಗೈಯುವ ಭಾಗ್ಯವ ನಮಗೆ ಕರುಣಿಸಿ  ಕಾಯು ಎಂದು ಕೈಯ ಮುಗಿದು ಬೇಡುವೆನು ತುಂಬಿ ಹರಿಯಲಿ ನಮ್ಮ ಮನೆಯಲಿ ಸುಖ ಶಾಂತಿ ಸಮೃದ್ಧಿ ಕರುಣಿಸೆಮಗೆ ನಿತ್ಯ ನೀನು ಆಯುರಾರೋಗ್ಯ ನೆಮ್ಮದಿ ಭಕ್ತಿಯಿಂದಲಿ ಕೈಯ ಮುಗಿಯುತ್ತಾ ಶಿರವ ಬಾಗಿ ನಮಿಸುವೆ ಅಮ್ಮ ನಮ್ಮನು ನಿತ್ಯ ನೀನು ಕರುಣೆಯಿಂದಲಿ ಕಾಯುತ ಚಿಂತೆ ಇಲ್ಲದೆ ನಗುತ ಬಾಳುವ ಭಾಗ್ಯವನ್ನು ಕರುಣಿಸು ಪಂಕಜರಾಮ್

ಗಣೇಶ ಸ್ತುತಿ

ಗಣೇಶ ಸ್ತುತಿ ಮೊದಲ ವಂದನೆಯ ಪಡೆಯುತ ವಿಘ್ನಗಳ ನಿವಾರಿಸುವ ವಿಘ್ನೇಶ್ವರ ವರಗಳ ಕೊಡುತ ಶರಣು ಬಂದವರ ಪೊರೆವ ವರಸಿದ್ದೀವಿನಾಯಕ ಮೋದಕಪ್ರೀಯನೇ ಗಜಮುಖವದನನೆ ಚ ಕ್ಕುಲಿಉಂಡೆಕ ಡುಬುಗಳೆಂದು ಬಗೆಬಗೆ ತಿಂಡಿಯ ಮಾಡಿ ಬೇಡಿಕೊಳ್ಳುವೆ ನಾನಿಂದು ಬಾದ್ರಪದ ಶುಕ್ಲದ ಚೌತಿಯ ಈ ಶುಭದಿನದಂದು ಬಂದು ನೀ ಹರಸು ನಮ್ಮನ್ನೆಲ್ಲರನು ವಿಘ್ನಗಳೆಲ್ಲವ ನಿವಾರಿಸುತಲಿ ವಿದ್ಯೆ ಬುದ್ಧಿ ಆಯುರಾರೋಗ್ಯ ಗಳ ಕೊಟ್ಟು ಪೊರೆಯೆಮ್ಮನು ಶಿರಬಾಗಿ ನಮಿಸುವೆ ಕಾಪಾಡುತಂದೆ. ಪಂಕಜಾ ಕೆ .