Skip to main content

Posts

Showing posts from December, 2022

ಶಾಲೆಗೆ ಹೋಗೋಣ

ಮಕ್ಕಳಗೀತೆ ಶಾಲೆಗೆ ಹೋಗೋಣ ಬನ್ನಿರಿ   ಗೆಳೆಯರೆ ಶಾಲೆಗೆ ಹೋಗೋಣ ವಿದ್ಯೆಬುದ್ಧಿ ಕಲಿತು ನಾವು ಜಾಣರಾಗೋಣ ಗುರುಗಳು ಹೇಳುವ  ಪಾಠವ ಶ್ರದ್ಧೆಯಲಿ ಕಲಿಯೋಣ ಹೊಸ ಹೊಸ ವಿಷಯವ ಕಲಿಯುತ ಜಾಣರಾಗೋಣ ಸರತಿಯ ಸಾಲಲಿ  ನಿಂತು ರಾಷ್ಟ್ರಗೀತೆಯ ಹಾಡೋಣಾ ವೀರರ ಧೀರರ ಕಥೆಗಳ  ಕೇಳುತ ನಾವೂ ಅವರಂತಾಗೋಣ ಎಲ್ಲರೂ ಒಂದಾಗಿ ಕೂಡಿ ಆಡುತ ಒಗ್ಗಟ್ಟಾಗಿ  ನಲಿಯೋಣ ಪ್ರೀತಿಯ ಹಂಚಿ ಪ್ರೀತಿಯ ಪಡೆಯುತ ಉತ್ತಮ  ನಡತೆಯ ಕಲಿಯೋಣ ಪಂಕಜಾ.ಕೆ. ಮುಡಿಪು

ಅಣ್ಣಯ್ಯಬರುತಾನ

ಜನಪದ ಗೀತೆ  ಅಣ್ಣಯ್ಯ ಬರುತಾನ ತಂಗಿಯ ಕರೆಯಾಕ ಅಣ್ಣಯ್ಯ ಬರುತಾನ ಹಬ್ಬಕ್ಕೆ ತವರಿಗೆ ಕರೆದೊಯ್ದು/ತಂಗಿಗೆ ತವರೂರ ಸಿಂಗಾರ ನೀನವ್ವ ಎನುತಾನ ತವರೂರ ಬಾಗಿಲಲಿ ಕಾಯುತ್ತ ಕುಳಿತಾಳ ಮಗಳನ್ನು ಸಂಭ್ರಮದಿ ಸ್ವಾಗತಿಸಲು   /ನನ್ನವ್ವ  ಯಾಕಿನ್ನೂ ಬರಲಿಲ್ಲ ಅನುತಾಳ ಅತ್ತಿಗೆ ಒಬ್ಬಟ್ಟು ಮಾಡ್ಯಾಳ ನಿನಗಾಗಿ ಬಾ ತಂಗಿ ಬೇಗನೆ ಹೋಗೋಣ /ತವರಲ್ಲಿ ಜತೆಯಾಗಿ ಹಬ್ಬ ಮಾಡೋಣ  ಹಂಡ್ಯಾಗ ಬಿಸಿನೀರು ಕಾಯಿಸಿ ಇಟ್ಟಾಳ  ಜಳಕ  ಮಾಡಿಸಲು ಕಾಯ್ತಾಳ /ನಿನ್ನವ್ವ  ಎಣ್ಣೆಸ್ನಾನಕ್ಕೆ  ತಯಾರಿ ಮಾಡ್ಯಾಳ ಅಂಗಳ ಗುಡಿಸಿ ರಂಗೋಲಿ ಹಾಕ್ಯಾಳ ಹಬ್ಬಕ್ಕೆ ನಿನಕರೆದು /ನನತಂಗಿ ಸಮ್ಮಾನ ಮಾಡಲು ಬಯಸ್ಯಾಳ ಪಂಕಜಾ.ಕೆ ಮುಡಿಪು