Skip to main content

Posts

Showing posts from April, 2020

ಮನದನ್ನ

ಮನದನ್ನ ಮನದ ಬಯಲಲಿ ಹಸಿರ ಚಿಗುರಿಸಿ ಒಲವ ರಸವನು ಚಿಮ್ಮಿದೆ ಬಾಳ ದಾರಿಯಲಿ ಜತೆಗೆ ಸೇರುತ ಮನಕೆ ಮುದವನು ತುಂಬಿದೆ ಪ್ರೀತಿ ತುಂಬಿದ  ನಿನ್ನ ನೋಟವು ಮನಕೆ ಹರುಷವ ತಂದಿದೆ ಎಲ್ಲೇ ಇರಲಿ ಹೇಗೆ ಇರಲಿ ಚೆನ್ನಾಗಿರು   ನೀನು ಎಂದು ಮನವು ಹರಸಿದೆ ಬಾಳ ತೇರಲಿ  ಹೂವು ಅರಳಲಿ ಕನಸು ಎಲ್ಲವೂ ಚಿಗುರಲಿ ಬಾಳ ದೋಣಿಯು ಸರಿದು ಹೋಗಲಿ ಕಷ್ಟ ನಷ್ಟಗಳು ಬಾರದೆ ಪಂಕಜಾ.ಕೆ. ಮುಡಿಪು

ತಾಯ ಒಡಲು ಕಾವ್ಯಕೂಟ ದಲ್ಲಿ ಪ್ರಥಮ

ತಾಯ ಒಡಲು ಕನಸ ಚಿಗುರಿಸಿ  ಮನವ ಅರಳಿಸಿ ಬಂದೆ ನೀ ನನ್ನ ಮಡಿಲಿಗೆ ಅಂಬೆಗಾಲಲಿ ಓಡಿಯಾಡುತ  ಮನಕೆ ಮುದವನು ತುಂಬಿದೆ ಪುಟ್ಟ ಪುಟ್ಟ ಹೆಜ್ಜೆಯಿಕ್ಕುತ ಗೆಜ್ಜೆ ಕಾಲನು ಕುಣಿಸುತ ಮನೆ ಮನವನು ಬೆಳಗಿದೆ ಎಲ್ಲೇ ಇರಲಿ ಹೇಗೆ ಇರಲಿ ಚೆನ್ನಾಗಿರು ನೀನು ಎಂದು ನನ್ನ ಮನವು ಬಯಸಿದೆ ಬಾಳ ಬಳ್ಳಿಯು  ಚಿಗುರಿ ಹಬ್ಬಲಿ ಚೆಲುಹೂವುಗಳರಲಿ ಕಷ್ಟ ನಷ್ಟವೂ ಇನಿತು ಇಲ್ಲದೆ ಬಾಳದೋಣಿಯು ಸಾಗಲಿ ಪಂಕಜಾ.ಕೆ .ಮುಡಿಪು

ಗಜಲ್ ಅಪ್ಪ ಸ್ನೇಹ ಸಂಗಮ

ಗಜಲ್ ಕಂಡ ಕನಸುಗಳು ಸಾಕಾರವಾಗಲು ನೆರವಾದೆ ಅಪ್ಪ ಕಳೆದ ಬದುಕನು ಮರೆತು ಬಾಳಲು ಕಲಿಸಿದೆ ಅಪ್ಪ ಕಲ್ಪನೆಯೇ ಜೀವತಳೆದು ವಾಸ್ತವಕೆ ಕಳೆ ಬಂತು ನೋಡು ಬಂದುದನ್ನು ಎದುರಿಸಲು ಧೈರ್ಯ ತುಂಬಿದೆ ಅಪ್ಪ ಕಷ್ಟ ನಷ್ಟಗಳೆಷ್ಟೋ ಇದ್ದರೂ ಅಂಜಲಿಲ್ಲ ನೀನು ನಗು ನಗುತ ಸಂಸಾರ ನೌಕೆಯನು ದಡ ಸೇರಿಸಿದೆ ಅಪ್ಪ ನಿನ್ನ ನೆನಪು ಮನಕೆ ಸಾಂತ್ವನವ ತುಂಬುತಿದೆ ನಿತ್ಯ  ನೀ ತುಂಬಿದ ಆತ್ಮವಿಶ್ವಾಸ ದಾರಿ ತೋರಿಸುತಿದೆ ಅಪ್ಪ  ನಿನ್ನಂತಹ ಅಪ್ಪನನ್ನು ಪಡೆದ ಪಂಕಜಾಳ ಹುಟ್ಟು ಧನ್ಯ ನಿನ್ನ ಧೀಮಂತ ವ್ಯಕ್ತಿತ್ವ ಬಾಳಿಗೆ ಬೆಳಕಾಗಿದೆ ಅಪ್ಪ ಪಂಕಜಾ.ಕೆ. ಮುಡಿಪು

ಚಿತ್ರ ಕವನ ಕಾವ್ಯಕೂಟ ದಲ್ಲಿ ತೃತೀಯ ಸಂಜೆಯ ಸೊಬಗು

ಸಂಜೆಯ ಸೊಬಗು (ಚಿತ್ರ ಕವನ ಸ್ಪರ್ಧೆಗಾಗಿ) ಸಂಜೆಯ ಸೊಬಗದು ಕಂಗಳ ಸೆಳೆಯುವುದು ಚಿನ್ನದ ಬಣ್ಣವು ಹರಡಿಹುದು ಬಾನಲಿ ಕಲಸಿದೆ  ಚೆಲುವಿನ ಬಣ್ಣ ರಸಿಕರ ಮನವನು ತುಂಬುವುದು ಪಡುಗಡಲಲಿ  ಮುಳುಗುವ ರವಿಯನು ಶರಧಿಯು ತಾನೇ ಸೆಳೆದಿಹಳೇ ಕಣ್ಮನ ತುಂಬುವ  ಸುಂದರ ನೋಟ ಕವಿಮನದಲಿ  ಭಾವನೆ ಸ್ಪುರಿಸುವುದು ನೀಲಾಗಾಸದಿ ತುಂಬಿದೆ ಬಣ್ಣ ಭಾಸ್ಕರ ಬಣ್ಣವ ಬಳಿದಿಹನೆ? ಏನಿದು  ಬೆರಗಿನ ಪ್ರಕೃತಿಯ ವೈಭವ ಮೈಮನಕೆಲ್ಲಾ ಪುಳಕವ ತುಂಬುತಿದೆ ಪಂಕಜಾ.ಕೆ. ಮುಡಿಪು

ಚುಟುಕು. ದತ್ತಪದ ನಂಬಿಕೆ ಕಾವ್ಯಕೂಟ ಹೊಂದಾಣಿಕೆ.

ಸ್ಪರ್ಧೆಗಾಗಿ ಚುಟುಕು ದತ್ತಪದ ....ನಂಬಿಕೆ  ಹೊಂದಾಣಿಕೆ ಸಂಸಾರದ ನೆಲಗಟ್ಟೆ  ನಂಬಿಕೆ ಅನುಮಾನವು ಚುಚ್ಚೀತು ಜೀವಕೆ ಬಿಟ್ಟು ಬಿಡಬೇಕು ಅಪನಂಬಿಕೆ ಸುಖ ಸಂಸಾರಕ್ಕೆ ಬೇಕು ಹೊಂದಾಣಿಕೆ ಪಂಕಜಾ.ಕೆ. ಮುಡಿಪು

ಹುಣ್ಣಿಮೆ ಚಂದಿರ ( ಮಕ್ಕಳ ಕವನ ಹನಿ ಹನಿ ಬಳಗ)

ಹನಿ ಹನಿ ಇಬ್ಬನಿ ವಿಸ್ಮಯ ಸ್ಪರ್ಧೆಗಾಗಿ. ಸ್ಪರ್ಧೆ ...3 (ಮಕ್ಕಳ ಕವನ) ಹುಣ್ಣಿಮೆ ಚಂದಿರ ಮೋಡದ ಮರೆಯಲಿ ಮುಖವನು  ಮರೆಸಿ  ಚಂದಿರ ಇಣುಕುವನು ಬೆಳ್ಳಿಯ ತಟ್ಟೆಯ ತೆರದಲಿ ಹೊಳೆಯುತ  ಬಾನಲಿ ಚಲಿಸುವನು ನಾನು ಓಡಲು ತಾನೂ ಓಡುತ ನನ್ನಯ ಜತೆಯಲಿ ಬರುತಿಹನು ಹಾಲಿನ ಬೆಳಕನು ಭೂಮಿಗೆ ಹರಡುತ ಮನಕೆ ಮುದವನು ತುಂಬುವನು ಗುಂಡಗೆ ಹೊಳೆಯುತ ಬಾನಲಿ ತೇಲುತ ಚಿಣ್ಣರ ಮನವನು ಸೆಳೆಯುವನು ತಾರೆಗಳ ತೋಟದ ಮಧ್ಯದಲಿರುತ ರಾಜನ ತೆರದಲಿ ಕಾಣುವನು ನನ್ನಯ ಗೆಳತನ ಬಯಸುತ ಚಂದಿರ ನನ್ನೆಡೆ  ನೋಡಿ ನಗುತಿಹನು   ರೆಕ್ಕೆಯು ಇದ್ದರೆ  ಚಂದಿರ ಲೋಕಕೆ ನಾನೂ ಹೋಗುವೆ ಬಿಡು ಅಮ್ಮ ಪಂಕಜಾ.ಕೆ.

ಗಜಲ್ ಮನಸಿಂದು ಸ್ನೇಹ ಸಂಗಮ ಬಳಗ ದಲ್ಲಿ ಮೆಚ್ಚುಗೆ

ಗಜಲ್ ಮನಸಿಂದು ಚಿಂತೆಯ ಕಡಲಾಗಿದೆ ಸಖ ಹಿಂದಿನದೆಲ್ಲವನು ನೆನೆಸಿ ದುಃಖಿಸುತ್ತಿದೆ ಸಖ ಮನದ ಬೇಸರ  ಖುಷಿಯಲ್ಲಿರಲು ಬಿಡುವುದೇ? ಜೀವನ ಭಾರವಾಗುವ ಮೊದಲು ನಿನ್ನ ಒಡನಾಟ ಬೇಕಿದೆ ಸಖ ಆಗಸದ ತಾರೆಗಳನ್ನು ನಾನು ಬಯಸಲಿಲ್ಲ ನಿನ್ನ ಪ್ರೀತಿಯೊಂದು ಮಾತ್ರ  ಆಶಿಸಿದೆ ಸಖ ನನ್ನ ಭಾವನೆಗಳನ್ನು ನೀನು ತಿಳಿಯಲಾರೆಯಾ? ಮೌನವಾಗಿ ಏಕಿರುವೆ  ತಿಳಿಯದಾಗಿದೆ ಸಖ ಪಂಕಜಾ ನಿನ್ನ ಮೇಲೆ  ಜೀವವನ್ನೆ ಇಟ್ಟಿರುವಳು ನಗು ನಗುತ್ತಾ ಜೀವನವನ್ನು ಕಳೆಯಬಾರದೆ ಸಖ ಪಂಕಜಾ.ಕೆ

ತಂಪಾದ ಇಳೆ ಕಾವ್ಯ ಕೂಟ ದಲ್ಲಿ ತೃತೀಯ

ತಂಪಾದ ಇಳೆ ಮೊದಲ ಮಳೆಯು ತಂದಿತು ತಂಪು ಹಬ್ಬಿತು ಎಲ್ಲೆಡೆ ಮಣ್ಣಿನ ಕಂಪು ನರ್ತಿಸುತ್ತಿದೆ  ನವಿಲುಗಳ ಗುಂಪು ಕವಿಮನದಲಿ ತುಂಬುತಿದೆ ಭಾವನೆಗಳ ಇಂಪು ಬಾಂದಳದಿ ಕಪ್ಪನೆಯ  ಮುಗಿಲು ಕಟ್ಟಿದೆ ತಂಪಾದ  ಗಾಳಿಯು ಜೋರಾಗಿ  ಬೀಸುತಿದೆ ಮಳೆಯ ಒಂದೊಂದು ಹನಿಯೂ ಮುತ್ತಾಗಿದೆ ವರುಣ ಸುರಿಸಿದ ನೀರು ಇಳೆಯ ಸೊತ್ತಾಗಿದೆ ಬಿರು ಬಿಸಿಲ ಬೇಗೆಗೆ ಬೆಂದು ಬಸವಳಿದ  ಧರೆಗೆ ವರುಣನೊಲವಿನ ಸ್ಪರ್ಶದಲಿ  ನವಿರು ಕಂಪನ ವಸುಂಧರೆಯ ಒಡಲೆಲ್ಲಾ  ತಂಪಾಯಿತು ನೆಲದೊಡಲ ಬೀಜಗಳು ಟಿಸಿಲೊಡೆಯಿತು ಸಿಡಿಲು ಮಿಂಚಿನ ಅಬ್ಬರಕೆ ಭೂತಾಯಿ  ತತ್ತರ ಬಿರುಗಾಳಿಯು ಹೊಡತಕೆ ತರುಲತೆಗಳ ನರ್ತನ ಪಟಪಟನೆ ಬೀಳುವ ಮಳೆಯ  ನೀರಧಾರೆ ವರುಣ  ಸುರಿಸುವ ಅಮೃತಧಾರೆ ರೈತನರಮನೆಗೆ ತಂದಿತು ಹರ್ಷ ಬೆಳೆಬೆಳೆಯುವ ಕಾತುರ ತುಂಬಿದೆ ವರ್ಷ ನೇಗಿಲನು ಹಿಡಿದು ನಡೆಯುವನಾತ ಮಳೆ ಗಾಳಿಗೂ ಬೆಚ್ಚದೆ ದುಡಿವನೀತ ಪಂಕಜಾ.ಕೆ. ಮುಡಿಪು

ಪ್ರಕೃತಿ ವೈಭವ

ಪ್ರಕೃತಿ ವೈಭವ ನಿಶೆಯ  ಸೆರಗನು  ಮೆಲ್ಲನೆ ಸರಿಸಿ ಚೆಲು ಬಣ್ಣಗಳ ಬಾನಿನಂಗಳದಲಿ ಕಲಸಿ ಸಪ್ತವರ್ಣದ ತೆರನೇರಿ ಬಂದನು  ರವಿತೇಜ ಕೊಳದಲ್ಲಿ ಅರಳಿದ ನೈದಿಲೆಯ ಕಂಡು ಹಕ್ಕಿಗಳು ಸಂಭ್ರಮದಿಂದ  ಸ್ವಾಗತವ ಕೋರಿ ಚಿಲಿಪಿಲಿ ಗಾನವ ಹಾಡಿದವು ರವಿ ಮೂಡುವಾ ಸೊಬಗಿನ ನೋಟ ಬೆರಗು ಹುಟ್ಟಿಸುವ ಆ ಮನೋಹರ  ದೃಶ್ಯ ಕಾಣುವ ಕಣ್ಣಲಿ ಏನೋ ಕಾತರ ಹೂಗಳು  ಬಿರಿದರಳಿ ನಗುತ ತಲೆಬಾಗಿದೆ ದುಂಬಿಗಳ ಝೇಂಕಾರ ತುಂಬಿ  ಕನಸನೂರಿಗೆ ಕರೆದೊಯ್ಯುತಿದೆ  ಪ್ರಕೃತಿಯ  ಈ ಸುಂದರ ವೈಭವದ ನೋಟ ಪಂಕಜಾ.ಕೆ. ಮುಡಿಪು

ಬಳೆಗಾರ

ಚಿತ್ರ ಕವನ ಸ್ಪರ್ಧೆಗಾಗಿ ಬಳೆಗಾರ  ಬಳೆಗಾರ ಬಂದಿಹೆನು ಬಳೆಗಳನು ತಂದಿಹೆನು ಅಕ್ಕಯ್ಯ ಅಮ್ಮಯ್ಯ ಬನ್ನಿರೆಲ್ಲ ಚೆಲುವಾದ ಬಳೆಗಳನು ಕೊಳ್ಳಿರೆಲ್ಲ ಬಣ್ಣ ಬಣ್ಣದ ಬಳೆಗಳು ಹೊನ್ನ ಬಣ್ಣದ ಬಳೆಗಳು ಹೆಂಗಳೆಯರ ಮನ ತಣಿಸುವ  ಚೆಲು ಬಳೆಗಳು ನೋಡಿರಮ್ಮ ಮುತ್ತೈದೆ. ಸಂಕೇತದ ಬಳೆಗಳು ಬಿಳಿ ಕೆಂಪು ಹಸಿರು ನೀಲಿ ಬಣ್ಣಗಳಿದೆ ಚಿತ್ತಾಕರ್ಷಕ ಬಳೆಗಳನು ತಂದಿರುವೆ ಮುದ್ದಾದ ಕೈಗಳಲಿ ಶೋಭಿಸುವುದು ಘಲ್ ಘಲ್ ಎನ್ನುವ ಬಳೆಗಳು  ಕೈಗಳ  ಸೌಂದರ್ಯವ ಹೆಚ್ಚಿಸುವ ಬಳೆ ಕಂಗಳಲಿ ಕನಸುಗಳ ತುಂಬಿ ನಿಂತು ಚೌಕಾಶಿ ಮಾಡಿ ಕೊಳ್ಳುವ ಚೆಲು ಕನ್ಯೆಯರು ಕೈತುಂಬ ಬಳೆಗಳ ತೊಟ್ಟು ನಲಿದಾಡುವ  ಹೆಂಗಳೆಯರ ಮೋಹಕ ಚೆಲುವು ಘಲ್ ಘಲ್ ಬಳೆ ಧರಿಸುವ ಉತ್ಸ್ಸಾಹ ಕಣ್ಣು ಮನವ ಸೆಳೆಯುತಿದೆ ಪಂಕಜಾ.ಕೆ. ಮುಡಿಪು  ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಮುಕುಂದ

ಮುಕುಂದ ಸುಂದರ ವದನ ನಂದ ಕಿಶೋರ ದೇವಕಿ ಕಂದ ಬಾಲ ಮುಕುಂದ ಕೊಳನೂದುವ ಅರವಿಂದ ನಯನ ಕಂಗಳ ತುಂಬಿದೆ ನಿನ್ನದೆ ರೂಪ ಕಿವಿಗಳ ತುಂಬಿದೆ ನಿನ್ನಯ ಕೀರುತಿ ರಾಧೆಯ ಮನವನು ಕದ್ದ ಚೋರ ಬೆಣ್ಣೆ ಕಳ್ಳ ನು ನಮ್ಮ ಕಿಶೋರ ಕನಕನಿಗೆ  ಒಲಿದ  ಗೋವಿಂದ ಉಡುಪಿಯಲಿ ಪೂಜೆಗೊಳ್ಳುವ ಅರವಿಂದಾಕ್ಷ ಕರುಣಾಳು ಬಾ ಇಂದು ನಂದಕಿಶೋರ ಜಗದ ಜನರೆಲ್ಲ ಮೊರೆಯಿಟ್ಟಿಹರು ಕಂದ ಬಂದು ಉದ್ಧರಿಸು ಎಮ್ಮನು  ಹೇ ಮುರಾರಿ ಶರಣು ಬಂದವರ ಕಾಯುವೆ ನೀನು ಶರಣಾಗಿ ಶಿರ ಬಾಗಿರುವೆ ನಾನು ಅನುದಿನವೂ  ಎಡೆಬಿಡದೆ ಕಾಯೋ ಶ್ರೀ ಹರಿ ಪಂಕಜಾ.ಕೆ. ಮುಡಿಪು

ಜಡೆ ಕವನ. ಪ್ರಕೃತಿ ಕಲಾದೇಗುಲ ಬಳಗದಲ್ಲಿ ಅತ್ಯುತ್ತಮವೆಂದು ಆಯ್ಕೆ

 ಜಡೆ ಕವನ ದತ್ತ ಪದ.....ಸೋರುತಿಹುದು  ಮನೆಯ ಮಾಳಿಗೆ  ಪ್ರಕೃತಿ ಸೋರುತಿಹುದು ಮನೆಯ ಮಾಳಿಗೆ ಮಾಳಿಗೆಯಲಿ ಗೂಡು ಕಟ್ಟಿವೆ  ಹಕ್ಕಿಗಳು ಹಕ್ಕಿಗಳ ಮರಿಗಳು ಆಟವಾಡುತಿವೆ ನೀರಲಿ ನೀರು ಸುರಿದು ಒದ್ದೆಯಾಯಿತು ವಸುಂಧರೆಯ ಒಡಲು ವಸುಂಧರೆಯ ಒಡಲ ತುಂಬಾ ಚಿಗುರಿದೆ ಹಸಿರ ಸಿರಿ ಹಸಿರ ಸಿರಿಯನು ಕಂಡು ಮೈ ಮನದಲಿ ಪುಳಕ ಪುಳಕಗೊಂಡ ಮನ ನರ್ತಿಸುವ ನವಿಲು ನರ್ತಿಸುವ ನವಿಲು ಕೊಡುತಿದೆ ಮನಕೆ ಆನಂದ ಆನಂದದ  ಅಮಲು ಮೈ ಮರೆಸುತಿದೆ ಮೈಮರೆಸುವ  ಪ್ರಕೃತಿ ಸೊಬಗ ಸವಿಯುತ ನಿಂತೆ ನಿಂತು ಸುರಿಯುವ ಮಳೆಯ ನೋಡುತ ಬೆರಗಾದೆ ಬೆರಗಾದ  ನೋಟದಲಿ ಏನೋ ಅಮಲು ಅಮಲಿನಲಿ  ಎದ್ದು ನೋಡಲು  ನೀರು ಸೋರುತಿಹುದು ಪಂಕಜಾ ಕೆ ಮುಡಿಪು

ರಾಧೆಯ ವಿರಹ

ರಾದೆಯ  ವಿರಹ ಸಾಗಿದೆ ಬದುಕು ನಿನ್ನನು ಹುಡುಕುತ  ಯಮುನಾ ತೀರದ ತಟದಲ್ಲಿ ಕೊಳಲನು ಊದುತ ನಲಿದಾಡಿದ ದಿನಗಳು ಮಾಸದು ಎಂದಿಗೂ ಹೇ ಪ್ರಭುವೆ ನಿನ್ನಯ ನೆನಪಲಿ ದಿನಗಳು ಉರುಳಿದೆ ಹಾದಿಯ ಕಾಯುತ ಬಸವಳಿದೆ ಬರುವೆಯೋ ಎಂದಿಗೆ ತಿಳಿಯೆನು ನಾನು ಮರೆತೆಯಾ ನಿನ್ನ ರಾಧೆಯನು ಕನಸಲೂ ಮನಸಲೂ ನಿನ್ನದೇ ಧ್ಯಾನ ನಿತ್ಯವೂ ವಿರಹದಿ ನೋಯುತಿರುವೆ ವಿರಹದ ಉರಿಯನು ತಣಿಸಲು  ಬಾರೋ  ಬೇಗನೆ ಮುರಾರಿಯೇ ಕಾಡಿನ ಮರಗಳ ಎಡೆಯಲಿ ಸಾಗಿದೆ ಮಣ್ಣಿನ ದಾರಿಯು ನಿನ್ನೆಡೆಗೆ  ಹುಡುಕುತ  ಬಳಲಿದೆ ನನ್ನಯ ಮನವು  ದಾರಿಯ ತೋರೋ  ಮಾಧವನೆ ಪಂಕಜಾ.ಕೆ. ಮುಡಿಪು

ವರುಣನ ಅಬ್ಬರ

ವಾರಕ್ಕೊಂದು ಕವನ ಸ್ಪರ್ಧೆ ದತ್ತ ಪದ....ಕಾನನ. ..ಕಹಳೆ..ತಾಂಡವ..ಸಿಡಿಲು. .  ವರುಣನ ಅಬ್ಬರ ಅರಳಿರುವ ಹೂಗಳ ಗಂಧಗಳನು ಹೊತ್ತು ಕಾನನದ ಎಡೆಯಿಂದ ಬೀಸಿ ಬರುತಿದೆ ತಂಗಾಳಿ ಶುಕಪಿಕಗಳ ಗಾನದ ಮಾಧುರ್ಯ ತುಂಬಿ ಮುದುಡಿದ ಮನಗಳ ಅರಳಿಸುತ್ತಿದೆ ಮೈದುಂಬಿ ಮೂಡಣದ ಬಾನಲಿ ಬಂದಿತು ಚಿನ್ನದ ತಟ್ಟೆ ಬಾಂದಳದಿ ಬಣ್ಣಗಳ ಕಲಸಿ ಹೊಳೆಯುತಿದೆ ಭೂದೇವಿಯ ಮುಕುಟಕ್ಕೆ ಹಾಸಿದ ಮಂಜಿನತೆರೆ ಸರಿಸುತ ಬರುತಿದೆ ಬಾಸ್ಕರನ ಹೊಂಬಿಸಿಲು ಅಬ್ಬಾ ಏನಿದು ಬೆರಗಿನ ಈ ಸುಂದರ ನೋಟ ಪ್ರಕೃತಿ ದೇವಿಯ ಸೌಂದರ್ಯದ ಅನಾವರಣ ಕಣ್ಣು ಮನ ಸೆಳೆಯುವ ಮೋಹಕ ಚೆಲುವು ರಸಿಕರ ಮನದಲಿ ತುಂಬುತಿದೆ ಬಣ್ಣದ ಕನಸು ಎಲ್ಲಿಂದಲೋ ಕೇಳುತಿದೆ ಕಹಳೆಯ ಅಬ್ಬರದ ಧ್ವನಿ ತುಂಬಿತು ಬಾನಿನಲಿ ಕರಿಮೋಡಗಳ ದಂಡು ಸಿಡಿಲು ಗುಡುಗುಗಳ ಅಬ್ಬರದ ಸದ್ದು ತುಂಬಿ ಮುಸುಕಿದ ಕತ್ತಲೆಯ ಎಡೆಯಿಂದ ಚಿಮ್ಮಿತು ಮಿಂಚು ರುದ್ರ ತಾಂಡವ ನೃತ್ಯ ವಾಡುತ  ಸುರಿಯುತಿದೆ ಮಳೆ ನೀರ ಧಾರೆ ಹರುಷದ ಕಡಲಾಯಿತು ವಸುಂಧರೆಯ  ಮನ ವರುಣನ ಒಲವ ಸವಿದು ತೃಪ್ತಳಾಗಿ ತನನ ಪಂಕಜಾ.ಕೆ. ಮುಡಿಪು 19.4 2020

ಜಡೆ ಕವನಮೋಡದ ಜತೆ ಹನಿಗಳ ಮುತ್ತು ನವಪರ್ವ

ವಿಷಯ..ಜಡೆಕವನ ಶೀರ್ಷಿಕೆ ..ಮೋಡದ ಜತೆ ಹನಿಗಳ ಮುತ್ತು ಬಾನಂಗಳದಲಿ ತುಂಬಿದೆ ಮೋಡಗಳ  ಮುಸುಕು ಮುಸುಕು ಸರಿಯಲು ಹರಿಯಿತು ಮುತ್ತಿನ ಹನಿ ಹನಿಗಳ ಸ್ಪರ್ಶಕೆ ಭೂರಮೆಯು ಸಂತಸದಿ ನಲಿದು ನಲಿದ ಕ್ಷಣಗಳಲಿ  ಮನಕೆ ತುಂಬಿತು  ಹುರುಪು ಹುರುಪು  ಉತ್ಸ್ಸಾಹದಲಿ ಬಾನಿನಲಿ ಮೋಡಗಳಾಟ ಮೋಡಗಳಾಟದಲಿ ದಣಿದ ಹನಿಗಳ ಮುತ್ತು ಮುತ್ತು ಪಡೆದ ಚೆಲುವೆಯ  ನಾಚಿಕೆಯ ವೈಯಾರ ವೈಯಾರದಿ  ನಿಂತ ಸುಂದರಿಯ ಮೈಮಾಟ ಮೈಮಾಟದಲಿ ಮೈಮರೆಯಿತು  ಇನಿಯನ ಕಣ್ಣು ಕಣ್ಣೋಟದಲಿ ನೂರು ಭಾವನೆಗಳ ಸೆಳೆತ ಸೆಳೆತದಲಿ  ಸಂಗಾತಿಯ ಜತೆ ಮುದದ ಪಯಣ ಪಯಣದಲಿ ಒಬ್ಬರಿನ್ನೊಬ್ಬರು ಒಂದಾಗುವ ಭಾವ ಬಾವನೆಗಳ ಭಾರದಲಿ ಕುಣಿಯಿತು  ಮನಸು ನವಿಲು ನವಿಲ ನರ್ತನದ ತೆರದಲಿ ಹೊಮ್ಮಿತು ಪ್ರೀತಿ ಪ್ರೀತಿ ತುಂಬಿದ ಬಾಳು ಹರ್ಷದ ಕಡಲು ಕಡಲ ತೆರೆಗಳ ತೆರದಿ ನಲಿಯುತ್ತಿದೆ ಪ್ರೇಮಿಗಳ ಮನ ಪಂಕಜಾ.ಕೆ.

ಜೀವನ ಪಾವನ (ಭಾವಗೀತೆ) 18.4 2020 ಸ್ನೇಹಸಂಗಮ

ಜೀವನ ಪಾವನ (ಭಾವಗೀತೆ) ನೀ ಕೊಟ್ಟ ಜೀವನ ಅನುರಾಗ ಬಂಧನ ನಗುನಗುತ ಬಾಳಿದರೆ ಈ ಜನ್ಮ  ಪಾವನ  ಕಲ್ಲು ಮುಳ್ಳು ಏನೇ ಇರಲಿ ಹೂವಿನಂತೆ ಆಗಲಿ  ನಮ್ಮ ಬಾಳದೋಣಿಯಲ್ಲಿ  ಸಿಹಿಯೇ ಎಂದು ಕಾಣಲಿ   ಕಷ್ಟ ಸುಖ ಎರಡರಲ್ಲೂ ನೀನು ಜತೆಯಲ್ಲಿದ್ದರೆ  ಸ್ವರ್ಗ ಸುಖವ ಇಲ್ಲೇ ನಾವು  ಪಡೆಯಬಹುದು ಅಲ್ಲವೇ ಪ್ರೀತಿ  ಜೇನ ಸುರಿಸಿ ನನ್ನ ಮೈಯ ಮರೆಸಿಬಿಟ್ಟೆಯ ಬಾಳಿನಲ್ಲಿ ನಗುವ ತುಂಬಿ ಒಲವ ಸುಧೆಯ ಹರಿಸಿದೆ ನಿನ್ನ  ಒಡನಾಟದಲ್ಲಿ  ಸ್ವರ್ಗ ಸುಖವ ಕಾಣುವೆ ನಿತ್ಯ ಒಲವ ರಸವ ಕುಡಿದು ನಗುನಗುತ  ನಾವು ಬಾಳುವ ಪಂಕಜಾ.ಕೆ.  ಮುಡಿಪು

ಹೇಗಿರಲಿ ಕಾವ್ಯಕೂಟ ಬಳಗದಲ್ಲಿ ಉತ್ತಮ ವೆಂದು ಆಯ್ಕೆ18.4.2020

ಹೇಗಿರಲಿ ಮನದ ತುಂಬಾ  ದುಗುಡ ತುಂಬಿದೆ ನೀನು ಇಲ್ಲದೆ ಮಾಧವ ಮುರಳಿ ಗಾನದ ಸುಧೆಯ ಸವಿಯದೆ ಮನಸು ನೊಂದಿದೆ ಇನಿಯನೇ ಬರುವೆಯೆಂದು ದಾರಿ ಕಾಯುತ ದಿನಗಳುರುಳುವುದು ತಿಳಿಯದು ಕಣ್ಣ ನೋಟವು ಬತ್ತಿ ಹೋಯಿತು ನಿನ್ನ ದಾರಿಯ ಕಾಯುತ ಉಸಿರು ಉಸಿರಲೂ ನಿನ್ನ ನೆನೆಯುವೆ ಎಂದು ಬರುವೆಯೋ ಮಾಧವ ಪಂಕಜಾ.ಕೆ. ಮುಡಿಪು.

ಬಾರೋ ಮಾಧವ

ಬಾರೋ ಮಾಧವ ಮನದಿ ತುಂಬಿದ  ದುಗುಡ  ಕಳೆಯಲು ಬಾರೋ ಬೇಗನೆ ಮಾಧವ ಕೊಳಲನೂದೂತ  ಒಲವ ನೋಟದಿ  ಮನಕೆ  ತುಂಬಿಸು ಮುದವನು   ಯಮುನಾ ತೀರದ ಸುತ್ತುಮುತ್ತಲು  ನೀನೇ ಕಾಣುವೆ ಏತಕೋ ನನ್ನ ಒಲವನು ತಿಳಿದು ನೀನು ಹೊರಟು ಬಿಟ್ಟೆಯ ಕೇಶವ ಕಣ್ಣ ತುಂಬಿದ  ನೀರ ಒರೆಸಲು  ಕಾಯುತಿರುವೆನು ನಿನ್ನನು ನೆನಪ ಮಾಲೆಯು ತುಂಬಿ ಮನವನು ಕನಸನೂರಿಗೆ ಒಯ್ದಿತು ನೆನೆದ ಕೂಡಲೇ ಬರುವೆಯೆಂದು ಮಾತುಕೊಟ್ಟುದು ಮರೆತೆಯಾ ಎಂದು ಬರುವೆಯೋ ಕಾಯುತಿರುವೆನು ನಿನ್ನ ನೆನಪಲೇ ಮಾಧವ ಪಂಕಜಾ.ಕೆ. ಮುಡಿಪು

ವಿಷು ಹಬ್ಬ

ವಿಷು ಹಬ್ಬ ಬಂದಿತು ಬಂದಿತು ವಿಷುವಿನ ಹಬ್ಬ ತಂದಿತು ತಂದಿತು ಎಲ್ಕೆಡೆ ಕಬ್ಬ ಹೊಸ ಚಿಗುರನು ಹೊತ್ತು ನಿಂತಿದೆ ಪ್ರಕೃತಿ ಹಳೆಯ ಎಲೆಗಳ ಕಳೆದು ತೊಳೆಯುತು ವಿಕೃತಿ ಹಣ್ಣು ತರಕಾರಿ ರೈತನ ಬೆಳೆಗಳ ಸುಗ್ಗಿ ಸಿಹಿ ಪಾಯಸದ ಆಡಿಗೆಯ ಹುಗ್ಗಿ ನವ ಚೈತನ್ಯವು ತುಂಬಿದೆ ಎಲ್ಲೆಡೆ ಪ್ರಕೃತಿ ಒಲಿದರೆ  ಜೀವನವು ಹಾಲ್ನೊರೆ  ಮರಗಿಡಗಳ ಉಳಿಸಿ ಬೆಳೆಸಬೇಕು ಶುದ್ಧ ಗಾಳಿಯ ನಿತ್ಯ ಸವಿಯಬೇಕು ಪಂಕಜಾ.ಕೆ.

ಲಾಲಿ ಹಾಡು ನವಪರ್ವ ಮೆಚ್ಚುಗೆ

ಸ್ಪರ್ಧೆಗಾಗಿ ದತ್ತ ಪದ ..ಲಾಲಿ ಜೋಗುಳ ಹಾಡುವೆ ಲಾಲಿ ಹಾಡುವೆ ನನ್ನ ಮುದ್ದು ಕಂದ ಕಣ್ಣಲ್ಲಿ ನಗುವ ಚೆಂದುಳ್ಳಿ ಚೆಲುವ ಮಲಗು ಮಲಗೆನ್ನ ಮುದ್ದು ಬಾಲ ಜೋ ಜೋ ಚಿತ್ತಾರದ ಸಿರಿ ಗೊಂಬೆ ನಕ್ಕಾಗ ಸಿರಿಗೌರಿ ಈ ಮನೆಯ ಬೆಳಕಾಗಿ ನೀ ಬಂದೆ ಮಲಗು ಮಲಗೆನ್ನ   ಸಿರಿದೇವಿಯೇ ಜೋ ಜೋ ಬಾನ ಚಂದಿರ ನಂತ ಮುದ್ದು ಮಗುವೇ ಲಾಲಿ ಹಾಡುವೆ ನಿನಗಾಗಿ ಜೋ ಜೋ ಪಂಕಜಾ.ಕೆ

ಮುಗ್ಧ ಮಕ್ಕಳು

ದಟ್ಟ ಪದ.   ಬಯಲು ಮುಗ್ಧ ಮಕ್ಕಳು  ದೂರದ ಬಯಲಿನಲಿ ಆಡುವ ಮಕ್ಕಳಾಟವ ನೋಡಿ ಮಾಡುತಿವೆ  ಮನಸಿಗೆ  ಅವು ಒಂದು ಮೋಡಿ ಬೇಧಬಾವವ ತಿಳಿಯದ ಮುದ್ದು  ಮುದ್ದು ಮಕ್ಕಳು ಆಟ ಪಾಠದಲಿ ಒಬ್ಬರಿಗೆ ಒಬ್ಬರು ಸಹಕಾರಿಗಳು ಬಡವ ಬಲ್ಲಿದ ಮೇಲು ಕೀಳೆಂಬ ಭೇದವಿಲ್ಲ ಎಲ್ಲರೂ ಒಂದಾಗಿ ಕುಣಿಯುತಿರುವರಲ್ಲ ಎಂತ ಅದ್ಬುತ  ಲೋಕ ಈ ಮಕ್ಕಳದು. ಹೇಳು ನಾವೂ ಇವರಂತಿರಬಾರದೆ ಹೇಳು ಚಿಂತೆ ಬೇಸರಗಳಿಲ್ಲದೆ ಹಕ್ಕಿಯಂತಿರುವುದು ಅವರ ಮನ ದ್ವೇಷ ಅಸೂಯೆ ದಳ್ಳುರಿಗಳಿಲ್ಲದ ಮುಗ್ದ ಮನ ಬೆಳೆದಂತೆ ಮೇಲು ಕೀಳೆಂಬ ತಾರತಮ್ಯವೇಕೋ ಅವರಲಿ ಬಿತ್ತಿರುವೆವೆ   ನಾವದನು ಅವರ ಮನದಲಿ ಮಗುವಿರುವ ಮನೆಯಲ್ಲಿ ನಿತ್ಯವೂ ನಗು ಕೋಪತಾಪಗಳ ದೂರ ಮಾಡುವುದವರ ನಗು ಬಯಲಿನಂತೆ  ವಿಶಾಲವಿರಬೇಕು  ಮನ ಮುಗ್ದ ಮಕ್ಜಳಂತೆ ಹಾಯಾಗಿ ಕಳೆಯಬೇಕು ಜೀವನ  ಪಂಕಜಾ.ಕೆ

ಮನದರಸನಿಗೊಂದು ಒಲವಿನ ಒಲೆ

ಮನದರಸನಿಗೊಂದು ಒಲವಿನ ಓಲೆ ನನ್ನರಸ  , ನಿನಗೆ ಗೊತ್ತೇ ನಿನ್ನ ಪರಿಚಯ ಯಾಗುವ  ಮೊದಲು ನಾನು ಶೂನ್ಯಳಾಗಿದ್ದೆ  . ನೀನೆಂದು ನನ್ನ ಮನದ ಗುಡಿಗೆ ಬಂದೆಯೋ ಅಂದಿನಿಂದವೇ ನನ್ನೆಲ್ಲಾ ಕನಸುಗಳು ನಿನ್ನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಆ ದಿನ ನಿನಗೂ ನನ್ನ ಮೇಲೆ ಮನಸು ಇದೆ ಎಂದು  ನನ್ನೊಡನೆ ಮಾತನಾಡುವಾಗ ಮಿಂಚಿದ ನಿನ್ನ ಕಣ್ಣು  ಕೆಂಪೇರಿದ ನಿನ್ನ ಮುಖ  ಕಂಡಾಗಳೇ ನನಗೆ ಅನಿಸಿತ್ತು,ಆದರೂ ನಿನ್ನ ಬಾಯಿಯಿಂದವೇ ಅದನ್ನು ಕೇಳುವ ಆಸೆಗೆ ನಿನ್ನ ಸಂದೇಶವನ್ನು ಹೊತ್ತು ತಂದ ನಮ್ಮಿಬ್ಬರ  ಸಹೋದ್ಯೋಗಿಯ ಜತೆ  ನಾನು ಅವರೇ ಅದನ್ನು ಹೇಳಲಿ ಎಂದು ಬಿಂಕ ತೋರಿಸಿದ್ದೆ .ಆದರೆ ನಿನ್ನದು ತುಂಬಾ ಸರಳ  ಸ್ವಭಾವ ಮರುದಿನವೇ ನೀನು ಒಂದು ಪತ್ರದಲ್ಲಿ  ನಿನ್ನೆಲ್ಲ ಪ್ರೀತಿ ಭಾವನೆಗಳನ್ನು ತುಂಬಿ ನಡುಗುವ ಕೈಗಳಿಂದ ನನ್ನೆಡೆಗೆ ಚಾಚಿ ನಿಂತ ಆ ಕ್ಷಣದ ನೆನಪು ಇಂದಿಗೂ ನನ್ನ ಮನದಲ್ಲಿ ಹಸಿರಾಗಿದೆ  ನಾವಿಬ್ವರು ಒಬ್ಬರೊಡನೆ  ಇನ್ನೂಬ್ಬರು ಮಾತನಾಡಿದ್ದೆ ಇಲ್ಲ ಆದರೂ ನಮ್ಮಿಬ್ಬರ ಹೃದಯವೂ ಒಂದಾಗಿತ್ತು ಅಲ್ಲವೇ. ಆ ದಿನ ನೀನು ನನ್ನ ತಂದೆಯವರ ಜತೆ ಮಾತಾಡಲೆಂದು  ಬಂದಾಗ ನೀನು ಹೇಳಿದ ಆ ಒಂದೇ ಮಾತು ನನ್ನ ಎದೆಯನ್ನು ಮೃದುಗೊಳಿಸಿ ನಿನ್ನ ಮೇಲೆ ಪ್ರೀತಿ ಮೂಡುವಂತೆ ಮಾಡಿತು ಅದೇನೆಂದು ನಾನು ನಿನಗೆ ನೆನಪಿಸುವ ಅಗತ್ಯ ಇಲ್ಲ ಅಲ್ಲವೇ . ನಮ್ಮ ಒಡನಾಟಕ್ಕೆ ಹಿರಿಯರ ಒಪ್ಪಿಗೆಯ ಮುದ್ರೆ ಬಿದ್ದುದೇ ತಡ ನೀನು ಹೇಗೆ ಬದಲಾಗಿಬಿಟ್ಟೆ ನನಗೆ ನಂಬಲೇ ಆಷಾಧ್ಯವಾಗಿತ್ತು .ಹೆಣ್ಣು

ಶಿಲ್ಪಕಲೆ

ಶಿಲ್ಪ ಕಲೆ ಬೇಲೂರು ಹಳೇಬೀಡು  ಶಿಲ್ಪ ಕಲೆಗಳ ಬೀಡು ಭವ್ಯ ಪರಂಪರೆಯ ಬಿಂಬಿಸುತಿದೆ  ನೋಡು  ಶಿಲ್ಪಕಲೆಯ ಜೀವಂತಿಕೆ ಸೆಳೆಯುತಿದೆ  ಕಣ್ಣುಗಳ ಮೈ ಮರೆಸುವ ಕಲೆ  ಜೀವಂತವಿರುವ ಭಾವ ಶಿಲ್ಪಿಯ  ಚಾತುರ್ಯವದು ಮೆಚ್ಚುಗೆಯ ಬಯಸದೆ ಶಿಲೆಯಲ್ಲಿ ಅರಳಿದೆ ಕಾವ್ಯ ಆತನ ಕೈಚಳಕ ಕ್ಕೆ ಸಾಟಿ ಎಲ್ಲಿ ಭಾವನೆಗಳು ನಲಿಯುತಿದೆ  ಅರಳುತಿದೆ ಮನಸು ಹೂವಾಗಿ ಕಲೆಯ ಬಲೆಯಲ್ಲಿಸಿಲುಕಿ ಮೈ  ಮನವು ಮರೆಯುತಿದೆ ಎನಿತು ಸೊಬಗಿನ ಬೀಡು ಈ ನಮ್ಮ ನಾಡು ಜೀವಂತಿಕೆ  ತುಂಬಿದೆ ಎಲ್ಲೆಲ್ಲೂ ನೋಡು ಕನ್ನಡ ನಾಡಿನ ಭವ್ಯತೆಯು ಅನಾವರಣವಾಗಿದೆ ದೇವಾಲಯದ ಗೋಡೆಯಲಿ ಶಿಲ್ಪಿಯ ಕೈಚಳಕದಲಿ ಪಂಕಜಾ.ಕೆ

ಕಾಮದಹನ

ಕಾಮದಹನ ಕಾಮನನು ದಹಿಸುತ ಪ್ರೇಮವನು ಬಿತ್ತುತ ಎಲ್ಲರೂ ಒಂದಾಗಿ ಮನೋಲ್ಲಾಸ ಪಡುತ ರಂಗಿನಾಟವ ಆಡುತಲಿ ಹೋಲಿಯಾಟವ ಆಡೋಣ ಮೇಲು ಕೀಳು ಎಂಬ ಭೇದಭಾವವವತೊರೆದು ಸಂಭ್ರಮದ ಆಚರಣೆಯಲಿ ಮನಕೆ ಮುದತುಂಬಿ  ಕಾಮನ ಬಿಲ್ಲಿನ ಬಣ್ಣಗಳ ಬಾಳಲಿ ತುಂಬಿ ಮೈ ಮರೆಯೋಣ  ಹೋಲಿಯಾಟದ  ಬಣ್ಣಗಳಲಿ ಎಲ್ಲೆಡೆಯೂ ಚೆಲ್ಲಿದೆ ಬಣ್ಣಗಳ ಓಕುಳಿ ಭಾವೈಕ್ಯತೆಯ ಸಂಕೇತ ಈ ರಂಗಿನಾಟ ಮನೆ ಮನಗಳಲಿ ತುಂಬುತಿದೆ ಸಂತೋಷ  ಪ್ರಕೃತಿಯಲಿ ತುಂಬಿದೆ  ನವೋಲ್ಲಾಸ ಹಾಸ  ಮಧುರಾನುಭವಗಳು ಮನಕೆ ತುಂಬಿ ಕಪಟ ವಂಚನೆ ದುರುಳತನವೆಂಬ ಕಾಮನನು ದಹಿಸಿ ಮನದ ವಿಕೃತಿಗಳ ಕಳೆದು ಅಂತರಂಗದ  ಶುದ್ದಿಯಲಿ ಪರಿಸರ ಸ್ನೇಹಿಯಾಗಿ  ಆಚರಿಸೋಣ ಹಬ್ಬ  ಪಂಕಜಾ.ಕೆ.

ನ್ಯಾನೊ ಕಥೆ ಉಪಾಯ ಸುಧಾ

ನ್ಯಾನೊ ಕಥೆ  ಉಪಾಯ ಆಕೆ ಬೆಂಗಳೂರಿನಲ್ಲಿ ಕಂಪನಿಯಲ್ಲಿ ಕೆಲಸ ಮಾಡುವ ಸ್ಪುರದ್ರೂಪಿ ಎಂದು ಹೇಳಲಾಗದಿದ್ದರೂ ಆಕರ್ಷಕ ಹುಡುಗಿ  ಅವಳ ಕೆಲಸಕ್ಕೆ ಇಂತಿಷ್ಟೇ ಸಮಯ ಅನ್ನುವ ನಿರ್ಬಂಧ ವಿಲ್ಲ ಕೆಲವೊಮ್ಮೆ ರಾತ್ರಿ 10 ಗಂಟೆವರೆಗೂ ಆಕೆ ಕೆಲಸ ಮಾಡಬೇಕಾಗಿದ್ದಿತು ಆದಿನ ಆಕೆ  ಆಫೀಸಿನಿಂದ ಹೊರಗೆ ಬರುವಾಗ 12 ಗಂಟೆಗೆ 10 ನಿಮಿಷ ಮಾತ್ರ ಬಾಕಿ ಇತ್ತು ಈ ನಡು  ರಾತ್ರಿಯಲ್ಲಿ ಆಕೆ ಮನೆಗೆ ಹೇಗೆ ಹೋಗುವುದು ಎಂದು ಚಡಪಡಿಸುತ್ತಿರುವಗಳೇ ಒಂದು ಟ್ಯಾಕ್ಸಿ ಹತ್ತಿರ ಬಂದು ಎಲ್ಲಿಗೆ ಹೋಗಬೇಕು ಮೇಡಂ ಎಂದು ವಿನಯದಿಂದ ವಿಚಾರಿಸಿದ ಆಕೆ ಈ ಟೈಮ್ ನಲ್ಲಿ ಕ್ಯಾಬ್ ಸಿಗುವುದು ಕಷ್ಟ ದೇವರೇ ಈತನನ್ನು ಕಳುಸಿರಬಹುದು ಎಂದು ತಾನು ಹೋಗಬೇಕಾಗಿರುವ ವಿಳಾಸವನ್ನು ಅವನಿಗೆ ತಿಳಿಸುತತ್ತಾಳೆ ಕೂಡಲೇ ಆತ ಹಿಂದಿನ ಸೀಟ್ ನ ಬಾಗಿಲು ತೆಗೆದು ಆಕೆಯನ್ನು ಕೂರಲು ಹೇಳುತ್ತಾನೆ ಆಕೆ ಕುಳಿತ ತಕ್ಷಣ ಟ್ಯಾಕ್ಷಿ ಮುಂದಕ್ಕೆ ಓಡುತ್ತದೆ ಟ್ಯಾಕ್ಷಿ ಹೋಗುವ ಸ್ಪೀಡ್ ಕಂಡು ಭಯಪಟ್ಟ ಆಕೆ ಡ್ರೈವರನಲ್ಲಿ ನಿಲ್ಲಿಸಲು ಹೇಳಿದರೂ ನಿಲ್ಲಿಸದೆ ಮುಂದಕ್ಕೆ ಓಡಿಸಿದ  ಆತ  ದಾರಿ ಮಧ್ಯದಲ್ಲಿ ಇನ್ನಿಬ್ಬರನ್ನು ಹತ್ತಿಸಿದ್ದು  ನೋಡಿ ಆಕೆ ಇನ್ನಷ್ಟು  ಭಯಗೊಂಡಳು  ಟ್ಯಾಕ್ಸಿ ತನ್ನ ಮನೆಯ ದಾರಿ ಬಿಟ್ಟು ಸ್ವಲ್ಪ ಮುಂದಕ್ಕೆ ಹೋಗುವುದು ಕಂಡು ಭಯಪಟ್ಟ ಆಕೆ ಡ್ರೈವರನನ್ನು ಕೇಳಿದರೂ ಆತ ಮೌನವಾಗಿ ಟ್ಯಾಕ್ಸಿ ಓಡಿಸುತ್ತಿದ್ದ ಇನ್ನೇನು ಸ್ವಲ್ಪ  ದೂರ ಹೋದರೆ ನಿರ್ಜನ ಪ್ರದೇಶ ಅದರ ಮದಲೇ ತಾನೇನಾದರು ಮಾಡಬೇಕು ಎಂ

ಪ್ರತೀಕಾರ ಕಥೆ ವಿಕ್ರಮ ಸ್ನೇಹ ಸಂಗಮ ತೃತೀಯ

ಪ್ರತೀಕಾರ.  (ಕಥೆ) ಅದೊಂದು ಸುಂದರ ಪ್ರಕೃತಿ ರಮ್ಯ ಸ್ಥಳ ಸುತ್ತಲೂ ಹಸಿರು ಗುಡ್ಡಗಳಿಂದ ತುಂಬಿ ನೋಡುಗರ ಕಣ್ಮನವನ್ನು ಸೆಳೆಯುತ್ತಿತ್ತು.              ಆ. ಕಾನನದ ಬದಿಯಲ್ಲಿ ಜುಳು ಜುಳು ಎಂದು ವರ್ಷಪೂರ್ತಿ ಹರಿಯುವ ಒಂದು ನದಿ ತನ್ನೊಡಲಲ್ಲಿ ಅನೇಕ ಜಲಚರಗಳಿಗೆ ಆಶ್ರಯ ಕೊಟ್ಟು ತೃಪ್ತಿಯಿಂದ ಹರಿದಾಡುತ್ತಿತ್ತು ಆ ನದಿಯ ದಂಡೆಯಲ್ಲಿ ಕುಳಿತರೆ ಎಂತಹ ಚಿಂತೆ ತಲೆನೋವು ಇದ್ದರೂ ತಕ್ಷಣ ಪರಿಹಾರವಾಗಿ ಮನಸಿಗೆ ಶಾಂತಿ ಸಿಗುತ್ತಿತ್ತು.              ಅದಕ್ಕೆ ಕಾರಣವೆಂದರೆ ಆ ಪ್ರದೇಶದಲ್ಲಿ ವಾಸಿಸುವ ನೂರಾರು ಹಕ್ಕಿಗಳ ಗಾನದ ಇಂಪು ,ನೀರಿನಲ್ಲಿ ಸ್ವಚ್ಛಂದವಾಗಿ ಈಜಾಡಿಕೊಂಡಿರುವ  ಸಣ್ಣ ಸಣ್ಣ ಮೀನುಗಳನ್ನು ಹಿಡಿಯಲು ಹಾರಿ ಬರುವ ಬೆಳ್ಳಕ್ಕಿಗಳ ಗುಂಪು, ನದಿಯಲ್ಲಿ ತೇಲಾಡುತ್ತಿರುವ ಬೆಳ್ಳನೆಯ ಹತ್ತಿಯಂತೆ ಕಾಣುವ ಹಂಸಗಳು, ಸುತ್ತಲ ಕಾಡು ಗಿಡಗಳಿಂದ ಬೀಸಿಬರುವ ತಂಗಾಳಿಯಲ್ಲಿ ಪಸರಿಸುವ ವಿವಿಧ ಬಗೆಯ ಹೂಗಳ ಗಂಧ ,ಹೂವಿಂದ ಹೂವಿಗೆ ಹಾರುವ ಚಿಟ್ಟೆಗಳು ಇವುಗಳೆಲ್ಲಾವನ್ನು ನೋಡುವುದೇ ಒಂದು ಹಬ್ಬ.             ವಸಂತ ಬೇಸಿಗೆಯ ರಜೆಯಲ್ಲಿ ತಪ್ಪದೆ ಅಲ್ಲಿಗೆ ಬಂದು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತು ನದಿಯ ನೀರಿನಲ್ಲಿ ಮನಸೋ ಇಚ್ಚೆ ಈಜಾಡಿ ತನ್ನ ಪೇಟೆಯ ಜಂಜಾಟಗಳನ್ನು ಕಳೆದು ಹಿಂತಿರುಗುತ್ತಿದ್ದ .ಆ ಸುಂದರ ಸ್ಥಳಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ ಒಂದು ದಿನ ಬೆಳಗ್ಗಿನ ಜಾವವೇ ಅಲ್ಲಿಯ ಕಾಡುಗುಡ್ಡಗಳನ್ನು ನೆಲಸಮ ಮಾಡುವ ಬುಲ್ಡೋಜರ್ ಗಳ ಕರ್ಕಶ

ಗಜಲ್ ನಿನ್ನ ಜತೆಯಲ್ಲಿದ್ದರೆ ಕಾವ್ಯಾಕುಟಾಫಲ್ಲಿ ಮೆಚ್ಚುಗೆ

ಗಜಲ್ ನಿನ್ನ ಜತೆಯಲ್ಲಿದ್ದರೆ ಪ್ರಪಂಚವೇ ಮರೆಯುವುದು ಸಖ ಕಣ್ಣೋಟದಲ್ಲಿ ತುಂಬಿದ ಅನುರಾಗಕ್ಕೆ ಮನಸೋಲುವುದು ಸಖ ಬಾಳ ಬಂಡಿಯ ಎಳೆಯಲು ನೀನಿರಲೇಬೇಕಲ್ಲವೇ ಸಖಿ? ನೀ ಕೊಡುವ ಪ್ರೀತಿ ವಿಶ್ವಾಸ ನನಗೆ ಉತ್ಸ್ಸಾಹ ತರುವುದು ಸಖ ದಿನವೂ ಪ್ರಕೃತಿಯ ಜತೆಯಲ್ಲಿ ನಲಿಯೋಣವೇ ಗೆಳತಿ? ನಗು ನಗುತ ಓಡಿಯಾಡಿದರೆ ಬಾಳು ಹೂವಿನ ಹಾಸಿಗೆ ಯಾಗುವುದು ಸಖ ಅನ್ನ ಗಾಳಿ ನೀರು ಪ್ರಕೃತಿ ಕೊಟ್ಟಿರುವ ವರವಲ್ಲವೇ ಹೇಳು? ಬೆಳೆಸಿ ಉಳಿಸುತ್ತ ಇದ್ದರೆ ಸಂತೋಷ  ಕಾಣಬಹುದು ಸಖ ನನ್ನ  ಒಡನಾಟ ನಿನಗೂ ಖುಷಿ ತಂದಿದೆಯಲ್ಲವೇ ಪಂಕಜಾ? ಹೊಗಳಿಕೆಯ ಮಾತುಗಳು ಹೊಸತನವನ್ನು ತುಂಬುವುದು ಸಖ ಪಂಕಜಾ.ಕೆ.

ವಿಮರ್ಶೆ ಗಜಲ್ ಬಗ್ಗೆ

[16/04, 5:08 PM] pankajarambhat: ಪಂಕಜಾ ರವರ ಗಜ಼ಲ್ ಉತ್ತಮ ಬಾಂಧವ್ಯದ ಕರೆ ನೀಡಿದೆ. ನಾನು ಜೊತೆಗೇ ಇದ್ದೇನೆ, ಕಷ್ಟ ಸುಖ ಎರಡೂ ಎದುರಿಸೋಣ. ಸಂತಸದ ಬಾಳಿರಲಿ ಮತ್ಸರದವರನ್ನ ಮರೆಯೋಣ, ನಗುವು ಬಾಳ ಜೀವಾಳವಗಲಿ,ಸಖ್ಯ ಬಯಸುವವರು ಜೊತೆಗಿರಲಿ ಸಾಕು ಎಂಬ ರೀತಿಯ ತಾಂತ್ರಿಕವಾಗಿ ಸರಿಯಾದ ಗಜಲ್ 🌷👌🌹 [16/04, 5:22 PM] pankajarambhat: ಪಂಕಜಾ ಅವರು ತಮ್ಮ  ಗಜಲ್ ನಲ್ಲಿ ಪ್ರಿಯಕರನು ತನ್ನ ಸಖಿಗೆ ಜೀವನದಲ್ಲಿ ಎದುರಾಗುವ ಸನ್ನಿವೇಶಗಳನ್ನು ಎದುರಿಸುವ ಹಾಗೂ  ಧೈರ್ಯ ನೀಡುವ ಸಂದೇಶವನ್ನು  ಸಾರಿದ್ದಾರೆ.    ಜೀವನದಲ್ಲಿ ಎದುರಾಗುವ ಚಿಂತೆ ಬೇಸರಗಳಿಗೆ ಎಡೆಮಾಡಿಕೊಡಬೇಡ, ಜೀವನವು ಕಷ್ಟ ಸುಖಗಳ ಸಂತೆ, ಇಲ್ಲಿ ಬಂದದ್ದನ್ನು ಎದುರಿಸು ನಾನಿರುವೆ ಹೆದರಬೇಡ ಎನ್ನುತ್ತಾರೆ.  ಇಲ್ಲಿ ಎಲ್ಲಡೆ ಮೋಹ, ಮಧ, ಮತ್ಸರಗಳೇ ತುಂಬಿವೆ ಆದರೂ ನೀ ಸಂತೋಷವನ್ನೇ ಹಂಚು, ಆದರೆ  ನಿನ್ನನ್ನು ನಿರ್ಲಕ್ಷಿಸುವವರಿಂದ ಮಾತ್ರ ದೂರ ಇರು ಎಂದು ತನ್ನ ಸಖಿಗೆ ಕಿವಿ ಮಾತು ಕೊಡುವ ಸಂದರ್ಭವನ್ನು ಗಜಲ್ ನಲ್ಲಿ ಸೆರೆಹಿಡಿದಿದ್ದಾರೆ.  ಚನ್ನಾಗಿ ಮೂಡಿ ಬಂದಿದೆ ಮೇಡಂ ಗಜಲ್.  ಧನ್ಯವಾದಗಳು 🙏 *ಮಲ್ಲು ವಗ್ಗರ್* [16/04, 5:22 PM] pankajarambhat: ಪಂಕಜ ರವರ ಗಝಲ್ ಮನದಲ್ಲಿ ಚಿಂತೆ ಬೇಸರಗಳಿಗೆ ಜಾಗ ನೀಡಬೇಡ ನಾನು ನಿನ್ನ ಜೊತೆಗಿರುವೆ ಎನ್ನುವ ಭರವಸೆ ಮಾತುಗಳಿಂದ ಗಝಲ್ ಪ್ರಾರಂಭ ಆಗಿದೆ ಜೀವನವೆನ್ನುವುದು ಕಷ್ಟ ಸುಖಗಳ ಸಂತೆ ಅದನ್ನು ಎದುರಿಸೋಣ ಮೋಹ,ಮದ,ಮತ್ಸರಳು

ಗಜಲ್ ಸ್ನೇಹ ಸಂಗಮದಲ್ಲಿ ಮೆಚ್ಚುಗೆ ಚಿಂತೆ ಬೇಸರ

ಗಜಲ್  ಮನದಲ್ಲಿ ಚಿಂತೆ ಬೇಸರಗಳಿಗೆ ಎಡೆ ಕೊಡಬೇಡ ಸಖಿ ನಿನ್ನೊಡನೆ ನಾನಿರುವೆ ಯೆನ್ನುವುದನ್ನು ಮರೆಯಬೇಡ ಸಖಿ ಜೀವನವೆಂದರೆ  ಕಷ್ಟಸುಖಗಳ ಸಂತೆಯಲ್ಲವೇ ಬಂದದ್ದನ್ನು ಎದುರಿಸಲು ಹೆದರಬೇಡ ಸಖಿ ಎಲ್ಲೆಡೆಯೂ ಹಬ್ಬಿದೆ ಮೋಹ ಮದ ಮತ್ಸ್ತರಗಳಜ್ವಾಲೆ ಉರಿ ತಣಿಸಿ ಸಂತೋಷ ಹಂಚುವುದನ್ನು ಬಿಡಬೇಡ ಸಖಿ ನಗು ನಗುತ ಇದ್ದರೆ  ಕಷ್ಟಗಳು ದೂರಾಗುವುದಲ್ಲವೇ ಪ್ರಯತ್ನಕ್ಕೆ ಫಲ ಸಿಗದಿದ್ದರೆ ಬೇಸರಿಸಬೇಡ ಸಖಿ ಎಲ್ಲರೊಡನೆ ಉತ್ತಮ  ಬಾಂಧವ್ಯ ಹೊಂದಿರಬೇಕು ಪಂಕಜಾ ನಿನ್ನನ್ನು ನಿರ್ಲಕ್ಷಿಸುವವರ ಜತೆ ಎಂದಿಗೂ ಸೇರಬೇಡ ಸಖಿ

ಜಾನಪದ ಗೀತೆ ನವಪರ್ವ ದಲ್ಲಿ ಮೆಚ್ಚುಗೆ ಪಡೆದ ಹಾಡು ತವರು

ಸ್ಪರ್ಧೆಗಾಗಿ ಜಾನಪದ ಗೀತೆ ತವರು ದೂರದ ಹಳ್ಳಿಲಿ ಇರುತೈತೆ ನನ್ ತವರು ಹಟ್ಟಿ ತುಂಬಾ ಹಸುಗಳು ತುಂಬೆಯ್ತೆ ಬೆಳಗಾತ ಅಪ್ಪಯ್ಯ ನೊರೆಹಾಲು ಕರೆದನ ಬಿಸಿ ಬಿಸಿ ದೋಸೆಗೆ  ಬೆಣ್ಣೆ ಮುದ್ದೆ ಹಾಕ್ಯಳ ನನ್ನಮ್ಮ  ಗಂಡನ ಮನೆಯಾಗ ಸುಖವಿದ್ರು ತವರಿನ ತಂಪ ನೆನೆದೈತೆ ನನ್ ಮನ ಗುಡ್ಡ ತಿರುಗಿದ ನೆನಪು ಕಾಡುತ್ತೆ ನೋಡವ್ವ ತೋಟದ ಬಾವಿಲಿ ಈಜಿದ್ದ ನೆನಪವ್ವ ಗಂಡನ ಮನೆಯಾಗೆ ಚೆಂದಾಗಿ ಬಾಳುತ್ತ ತವರಿನ ಕೀರ್ತಿಯ ಬೆಳಗೇನು ನನ್ನವ್ವ ಹಾಲುಂಡ ತವರಲ್ಲಿ ಸಿರಿ ದೇವಿ ನೆಲಸಲಿ ಕಣ್ತುಂಬ  ಹರಸಿ ಅರಸಿನ ಕುಂಕುಮ  ಭಾಗ್ಯ ನೀಡಣ್ಣ ಅಮ್ಮ ಅಪ್ಪ ಇಲ್ಲೆಂಬ ಕೊರಗ ಅಳಿಸಣ್ಣ ಪಂಕಜಾ.ಕೆ

ಗಜಲ್ ನದಿ ದಡದ ಮೇಲೆ

ಗಜಲ್ ನದಿ ದಡದ ಮೇಲೆ ಭುಜಕ್ಕೆ ಭುಜ ಹಚ್ಚಿ ನೀರಿಗೆ ಕಲ್ಲೆಸೆದದ್ದು ಮರೆತೆಯಾ ತರಂಗಗಳನ್ನೆಬ್ಬಿಸುವ ಅಲೆಗಳನು ಕಂಡು ಕುಣಿದದ್ದು ಮರೆತೆಯ ಕೈ ಕೈ ಹಿಡಿದು ದಂಡೆಗುಂಟ ಓಡಿಯಾಡಿದ್ದೇವಲ್ಲವೇ ಮುಳುಗುವ ರವಿಯನ್ನು ಕಂಡು ಕಣ್ಣೊಳಗೆ ಇಣುಕಿದ್ದು ಮರೆತೆಯಾ ಪ್ರೀತಿಯ  ಕಡಲಲ್ಲಿ ಮುಳುಗಿಸಿ ಹುಚ್ಚು ಹಿಡಿಸಿದೆಯಲ್ಲವೇ ನೀಲಾಗಸದ ಸೊಬಗನ್ನು ಸವಿಯುತ್ತಾ ತೋಳು ಬೆಸೆದದ್ದು ಮರೆತೆಯಾ ಮನದಾಳದ ನೋವುಗಳನ್ನು ನಿನ್ನೊಡನೆ ಹಂಚಿಕೊಂಡಿದ್ದೆಯಲ್ಲವೇ ಬರಡಾದ ಬದುಕಿಗೆ ಜೀವ ತುಂಬುವೆಯೆಂದಿದ್ದು ಮರೆತೆಯಾ ನನ್ನ ಪ್ರೀತಿಯನ್ನು ನಿರಾಕರಿಸಿ  ಹೇಳದೆ ಹೋಗಬಹುದೇ ಹೇಳು ಜೀವನಪೂರ್ತಿ ನಿನ್ನ ಜತೆಯಲ್ಲಿ ಇರುವೆನೆಂದಿದ್ದು ಮರೆತೆಯಾ ನಿನ್ನ ನೆನಪಿನಲ್ಲಿ ನಾನಿಂದು ಹುಚ್ಚನಾಗಿರುವೆ ತಿಳಿದಿದೆಯೇ ನಿನಗೆ ಆಕಾಶವೇ  ಮೈಮೇಲೆ ಬಿದ್ದರೂ ನಿನ್ನೊಡನೆ ಬರುವೆನೆಂದಿದ್ದು ಮರೆತೆಯಾ ಆಸೆಯ ದೀಪಕ್ಕೆ ತೈಲ ತುಂಬಿ ಉರಿಸಿದ್ದು ತಪ್ಪಲ್ಲವೇ ಪಂಕಜಾ ನಿನ್ನ ಹೆಸರಿನ ಜತೆ ನನ್ನ ಹೆಸರು ಸೇರಿಸಿ ಗೀಚಿದ್ದು ಮರೆತೆಯಾ ಪಂಕಜಾ.ಕೆ

ಹನಿಕವನ 2 ಅಕಾಶಕಾಯ ದೇವ ಸ್ಮರಣೆ

(ಹನಿಕವನ) ..1 ಅಕಾಶಕಾಯ ಕಾಣದ ಲೋಕದ ಬಾಣದ ತೆರದಲಿ ಇಣುಕುತ ಬರುತಿದೆ ಶಶಿ ಬಿಂಬ  ಕಣ್ಣನು ಮಿಟುಕಿಸಿ  ಸಣ್ಣನೆ ಹೊಳೆಯುತ ಬಣ್ಣನೆಗೆ ನಿಲುಕದೆ ಹೊಳೆಯುವವು ಪಂಕಜಾ ಕೆ 2..ದೇವ ಸ್ಮರಣೆ   ನಾಳಿನ ದಿನದಲಿ ಬಾಳಿನ ಗೊಳನು ಕಳೆಯಲು ದೇವನ ಬೇಡುತಿರಿ ಬಾಳಲಿ ನಲಿವನು ಹೇಳದೆ ಕೊಡುತಲಿ ಕಾವನು ಅವನು ಅನವರತ ಪಂಕಜಾ.ಕೆ

ಓ ಇನಿಯಾ ಭಾವಗೀತೆ

ಓ.ಇನಿಯಾ  (ಭಾವಗೀತೆ) ದತ್ತಪದ....ಸಂಗಮ ನೋಡಲ್ಲಿ ಭೂಮಿಬಾನು ಒಂದಾಗಿದೆ ನಮ್ಮಿಬ್ಬರ ಒಲವಿಗೆ ಸಾಕ್ಷಿಯಾಗಿದೆ   ತಂಪಾದಗಾಳಿಯು  ಮುದ ತಂದಿದೆ ನಿನ್ನೊಡನಾಟದಲ್ಲಿ ಮೈ ಮರೆತಿದೆ ಮೋಡದ ಮರೆಯಿಂದ ಬರುತಿಹನು ಶಶಿ ಬೆಳದಿಂಗಳ ಹಾಸಿಗೆಯದು ನಮಗಾಗಿದೆ ನಿನ್ನೊಲವ ಸವಿಯುತ್ತಾ ಜಗ ಮರೆತಿದೆ ರಸಿಕತನವು ಒಡಮೂಡಿ ತನು ಕುಣಿದಿದೆ ಮಾಮರದಿ ಕೋಗಿಲೆಯು ಕುಕಿಲಿಡುತಿದೆ ನವಿಲೊಂದು ನರ್ತನವ  ತಾ ಗೈದಿದೆ ಬಾ ನಲ್ಲ ಜತೆಯಾಗಿ ನಲಿಯೋಣವೇ ಕನಸುಗಳ ಕಾಣುತ್ತ ಕುಣಿಯೋಣವೇ ನದಿಯೊಂದು ಸಾಗರದಲಿ ಸಂಗಮಿಸಿದೆ ಒಲವಿಂದು ತನು ಮನಕೆ ಮುದ ತಂದಿದೆ ನಿನ್ನ ಜತೆಯಿರಲು ಬಾಳಿಂದು ಹೂವಾಗಿದೆ ಸ್ವರ್ಗವೇ ಧರೆಗಿಳಿದಂತೆ ನನಗಾಗಿದೆ ಓ ಇನಿಯಾ ನೀನಿರಲು ಬಾಳಲ್ಲಿ ನಗು ತುಂಬಿದೆ ಚೆಲುವಾದ ಹೂಗಳರಳಿ  ಮನ ತುಂಬಿದೆ ಬಾಳೆಲ್ಲಾ ಒಂದಾಗಿ ಬಾಳೋಣವೇ ಒಟ್ಟಾಗಿ  ದೇವರನು  ಬೇಡೋಣವೇ ಪಂಕಜಾ .ಕೆ.

ಬೇಡಿಕೆ

ಬೇಡಿಕೆ  ಬಾನು ತುಂಬಿದ ಕರಿಯ ಮುಗಿಲೆ ಸುರಿಸಲಾರೆಯ ಮಳೆಯನು  ಬಿರು ಬಿಸಿಲಿಗೆ ಹೊತ್ತಿ ಉರಿವ ಧರೆಗೆ ಉಣಿಸಲಾರೆಯ ತಂಪುಕಂಪಿನ ಉಸಿರನು ನೀರ ಸೆಲೆಯು ಅಳಿದು ಹೋಗಿದೆ  ಭೂಮಿ ಬಿರಿದು ಸಸ್ಯ ಸಂಕುಲ ಒಣಗಿದೆ ಒಮ್ಮೆ ನೀನು ಬಂದು ತುಂಬಿಸು ನೀರಸೆಲೆಯನು ಎಲ್ಲೆಡೆ ಕಾಯುತಿರುವುದು ಭೂಮಿತಾಯಿ  ನಿನ್ನ ಪ್ರೀತಿಯ ಅಪ್ಪುಗೆಗೆ ಎಂದು ನೀನು ಬಂದು ಸುರಿಸುವೆ ಒಲವ ಧಾರೆಯ ಸುಧೆಯನು ಬೇಡಿಕೊಳ್ಳುವೆ  ನಿನ್ನ ನಾನು ಸುರಿಸು ನೀರ ಧಾರೆಯ ಒಣಗಿಹೋಗಿರುವ ತರು ಲತೆಗಳಿಗೆ ತುಂಬು ಹಸಿರು ಉಸಿರನು ಪಂಕಜಾ  ಕೆ

ಹೇಗೆ ಮೆಚ್ಚಿಸಲಿ

ಹೇಗೆ ಮೆಚ್ಚಿಸಲಿ ಹೇಗೆ ಮೆಚ್ಚಿಸಲಿ ಈ ಮನುಜರ ಸೆಕೆಗಾಲ ಬಂತೆಂದರೆ ಸೆಕೆಸೆಕೆ  ಸಾಕಪ್ಪಾಸಾಕುಈಸೆಕೆಯಗೋಳು ಸುರಿಯುತ್ತಿದೆ ಮೈಯೆಲ್ಲಾ ಬೆವರು ಉರಿ ಬಿಸಿಲಿಗೆ ಹೊರಗೆ ಕಾಲಿಡಲೇಗೆ ಬರಬಾರದೆ  ವರುಣ ಬೇಗ ಇಳೆಗೆ ಹಿಡಿ ಶಾಪ ಹಾಕುತಲೆ ಸೆಕೆಯ ಸಹಿಸುವರು ಮಳೆಗಾಲ ಬಂತೆಂದರೆಸಾಕು ಖುಷಿ ಪಡುವರೆ ಇವರು ಎಂತ ಮಳೆಯಪ್ಪಾ ಇದು ಎನ್ನುವರು  ಹೊರಗೆ  ತಲೆ ಹಾಕುವುದು ಹೇಗೆ ಕೊಡೆ ಹಿಡಿದು ನಡೆದು ಸಾಕಾಯ್ತಲ್ಲ  ಯಾವಾಗ ಈ ಮಳೆ ಬಿಟ್ಟಿತೋ ಮಳೆಗೆ ಹಿಡಿಶಾಪ ಹಾಕುತ್ತಾ ದಿನಕಳೆಯುವರು ಬಂತದೋ ಚಳಿಗಾಲ  ನೋಡ ಖುಷಿಯಾಯಿತೆ ಮನುಜ ಈಗ ಹೇಳುವರು ಅಬ್ಬಾ ಏನು ಚಳಿ  ಹೊರಗೆ ಬಂದರೆಮಂಜು ಹನಿ ಗಡ ಗಡಗುಟ್ಟುತ್ತಿದೆ ಈ ದೇಹ ಚಾದರವ ಹೊದ್ದು ಮಲಗೆ ಇರುವ ಬೇಗ ಯಾವಾಗ ಮುಗಿದಿತೋ ಈ ಚಳಿಗಾಲ ಶಾಪ ಹಾಕುತ್ತಾ ಚಳಿಯ ಸಹಿಸುತಿಹರು ಹೇಗಪ್ಪಾ ಮೆಚ್ಚಿಸಲಿ ಜಗದ ಮನುಜರ ತಿಳಿಯದೆ ಕಂಗೆಟ್ಟು ಹೋಗಿರುವನು ಶಿವ ಪಂಕಜಾ.ಕೆ ಮುಡಿಪು

ನೀನಿರಲು

ನೀನಿರಲು ನಿನ್ನ ಕಣ್ಣಿನಲಿ ತುಂಬಿದ   ಹೊಳಪು ನನ್ನ ಮನಕೆ ತಂದಿತು ಬಿಸುಪು ಆ ಸೆಳೆಯುವ  ನಿನ್ನ ಕುಡಿ ನೋಟ ಮಾಡಿತು ತನುವಿಗೆ ಏನೋ ಮಾಟ ಕಳೆಯಿತು  ಮನಸಿನ ನೋವು ತುಂಬಿಸಿತು  ಮೈಯಲಿ ಕಾವು ಕಣ್ಣ ಹೊಳಪಿನ ಬಾಣಕೆ ನಾ ಸೋತೆ ಕನಸು  ಕಾಣುತ ನಾನಲ್ಲೆ  ಕೂತೆ ಬೀಸುವ  ಗಾಳಿಯು ಹಿತತಾರದು ನವಿಲ ನರ್ತನವು ಮನ ತಣಿಸದು ಕನಸು ನನಸಾಗಲು ಬಾ ನಲ್ಲೆ ಬೇಗ ನಿನಗಾಗಿ ಕಾಯುತಿರುವೆ ನಾ ಇಲ್ಲಿ ಈಗ ನೀನಿರಲು ಮನದಲ್ಲಿ ಮುದ ತುಂಬಿದೆ  ಬಾಳಲ್ಲಿ  ಚೆಲುವಾದ ಹೂವರಳಿದೆ ಪಂಕಜಾ.ಕೆ.

ಮಗು ಹನಿಕವನ

ಮಗು ಇರಬೇಕು ಮನೆಯಲೊಂದು ಪುಟ್ಟ ಪಾಪ ನಗುತ ಓಡಿಯಾಡುತ್ತಿದ್ದರೆ ಕಳೆಯುವುದುತಾಪ ನಿಷ್ಕಲ್ಮಶ ನಗುವಿನ ಮೊಗದ ಅಂದ ಕೊಡುವುದು ಮನಕೆ ಆನಂದ ಸವಿಜೊಲ್ಲ ಸುರಿಸಿ ನಗುವ ಬೊಚ್ಚುಬಾಯಿ ಕನಸಲ್ಲೂ ನಗುತ್ತಿರುವ  ಪುಟ್ಟ ಬಾಯಿ ತೊದಲು ನುಡಿಗಳಲಿದೆ ಏನು ಸೊಗಸು ಮನೆ ಮಂದಿಯರ ಕಟ್ಟಿ ಹಾಕುತ  ಸುಸ್ತು ಪುಟ್ಟ ಪಾಪುವಿನ ಅಳು ನಗು ಕಳೆಯುವುದು ಎಲ್ಲರ ಮುಖದ ಬಿಗು ಪಂಕಜಾ ಕೆ

ನಮ್ಮ ಶಾಲೆ ನವಪರ್ವ ಅತ್ಯುತ್ತಮ

ನಮ್ಮ ಶಾಲೆ  (ಮಕ್ಕಳ ಕವನ) ನಮ್ಮಯ ಶಾಲೆಯ ಅಂದದ ಪರಿಸರ ಎಲ್ಲರ ಮನವನು ಸೆಳೆಯುವುದು ಸುತ್ತಲೂ ಬೆಳೆಸಿದ ಕೈತೋಟದ ಚೆಲುವು ಮಕ್ಕಳ ಶ್ರಮವನು ತಿಳಿಸುವುದು ಪಾಠದ ಮೊದಲಿಗೆ  ಶಿಸ್ತಲಿ ನಿಲುತಲಿ ಗುರುವಂದನೆಯನು ಮಾಡುವೆವು ಶಿಕ್ಷಕರು ಕಲಿಸುವ ಪಾಠಗಳೆಲ್ಲವ ಕಲಿಯುತ ದಿನ ದಿನ ಬೆಳೆಯುವೆವು ಶಾಲೆಯ ಸುತ್ತಲೂ  ಇರುತಿಹ ಬಯಲಲಿ ಬಗೆ ಬಗೆ ಆಟವ ಆಡುವೆವು ತರ ತರ ಸ್ಪರ್ಧೆಯು ವಿಧ ವಿಧ ಕೂಟವು ಮಕ್ಕಳ ಮನವನು ಸೆಳೆಯುವುದು ದಿನವೂ ನಗಿಸುತ  ಪಾಠವ ಕಲಿಸುತ ಬಿಸಿ ಬಿಸಿ ಊಟವ  ಬಡಿಸುವರು ಓದಲು ಬರೆಯಲು ಕಲಿಸುತ ನಮ್ಮನು ಪ್ರಗತಿಯ ಪಥದಲಿ ನಡೆಸುವರು ಶಿಕ್ಷಕರೆಲ್ಲರು ಚಂದದಿ ಕಲಿಸುತ ಉತ್ತಮ ಶಿಕ್ಷಣ ನೀಡುವರು ಪರಿಸರ ಅರಿವನು ಮೂಡಿಸಿ ಮನದಲಿ ಪಠ್ಯೇತರ ಚಟುವಟಿಕೆಗಳ ನಡೆಸುವರು ನಮ್ಮಯ ಶಾಲೆಯಲಿ ಕಲಿಯುತ ನಾವು ಭಾರತ ಕೀರ್ತಿಯ ಹಬ್ಬಿಸುವೆವು ಪಂಕಜಾ.ಕೆ.

ಗಜಲ್ ಆಕಾಶ ಭೂಮಿ

ಗಜಲ್ ಆಕಾಶ ಭೂಮಿ ಎಂದಾದರೂ ಒಂದಾಗುವುದೇ  ಗೆಳತಿ ಸಮಾನಾಂತರ ರೇಖೆಗಳುಒಂದನ್ನೊಂದು ಸೇರುವುದೇ ಗೆಳತಿ ಆಡಬಾರದ ಮತೆಲ್ಲಾ ಆಡಿ ನೋಯಿಸಿದೆ ನೀನು ಮುರಿದ ಮನಸು ಜೋಡಿಸಲು ಸಾಧ್ಯವಾಗುವುದೇ ಗೆಳತಿ ಮಾಡಬಾರದ ತಪ್ಪು ನಾನೇನು ಮಾಡಿದೆ ಹೇಳು ಕಾರಣವೇ ಇಲ್ಲದೆ ದ್ವೇಷಿಸುವುದು ಸರಿಕಾಣುವುದೇ ಗೆಳತಿ ನನ್ನ ಮನಸನ್ನು ನಿನ್ನೊಡನೆ ತೆರದಿಟ್ಟೆ ಯಲ್ಲ  ನೀನು ಹೀಗೆ ಬೆನ್ನಿಗೆ ಚೂರಿ ಹಾಕಬಹುದೇ  ಗೆಳತಿ ನಂಬಿಕೆಗೆ ದ್ರೋಹ ಬಗೆಯುವುದು ತಪ್ಪಲ್ಲವೇ ಪಂಕಜಾಳ  ಮನಸನ್ನು ನೋಯಿಸಬಹುದೇ ಗೆಳತಿ ಪಂಕಜಾ.ಕೆ

ಗಜಲ್ ಬಾಳಿನಂಗಳದಲ್ಲಿ

ಗಜಲ್ ಬಾಳಿನಂಗಳದಲ್ಲಿ ಹೊಸಚಿಗುರು ತುಂಬಿದೆ ಸಖ ವಸಂತನಾಗಮನದಿಂದ ಹರುಷ ತಂದಿದೆ ಸಖ ಹೂವುಗಳು  ದುಂಬಿಗಳ ಆಕರ್ಷಿಸುತಿವೆ ಮೈ ಮನಕೆ ಹುರುಪು ತುಂಬುತಿದೆ ಸಖ ಮೂಡಣದಲ್ಲಿ ರವಿ ಮೂಡುವ ಸೊಬಗು ನೋಡು ಬಾನಿನಲಿ ಬಣ್ಣಗಳ ಕಲಸಿ ಮುದ ಕೊಡುತಿದೆ  ಸಖ ಪ್ರಕೃತಿ ಸೌಂದರ್ಯದಲಿ ತುಂಬಿದೆ ವಿಸ್ಮಯ  ಮುಂಜಾನೆಯ ನೋಟ ಕಣ್ಣು ಸೆಳೆಯುತಿದೆ ಸಖ ಕೊಳದಲ್ಲಿ ಅರಳಿದೆ ತಾವರೆ ಪಂಕಜಾ ನಿನ್ನ ಮನಸಿನಂತೆ ಶುಭ್ರವಾಗಿದೆ  ಸಖ ಪಂಕಜಾ. ಕೆ

ಸಹೋದ್ಯೋಗಿ ನ್ಯಾನೊ ಕಥೆ

ಸಹೋದ್ಯೋಗಿ  ನ್ಯಾನೊ ಕಥೆ ಆತ ಕೆಲಸಕ್ಕೆ ಸೇರಿದ ಹೊಸತು, ಕೆಲಸದ ಬಗ್ಗೆಯಾಗಲಿ ಹಣದ ವ್ಯವಹಾರದ ಬಗ್ಗೆಯಾಗಲಿ, ಏನೊಂದು ತಿಳಿಯದ ಮುಗ್ಧ .ಆದಿನ  ಸಾಯಂಕಾಲ ಆತನಿಗೆ ಲೆಕ್ಕದಲ್ಲಿ  ಸ್ವಲ್ಪ ವ್ಯತ್ಯಾಸ ಬಂತು .ಆತ ಏನು ಮಾಡುವುದೆಂದು ತಿಳಿಯದೆ   ತನ್ನ  ಸಹೋದ್ಯೋಗಿಯ ಮುಖ  ನೋಡಿದ. ಆತ ತನಗೇನೂ  ಸಂಬಂದ ವಿಲ್ಲದಂತೆ ಇರುವುದು ಕಂಡು ತಾನು ಇದನ್ನು ಹೇಳಿದರೆ ಹೇಗೋ ಎಂದು ಆ ದಿನ ತನ್ನ ಕೈಯಿಂದಲೇ ದುಡ್ಡು ಹಾಕಿ ಅಕೌಂಟ್ ಸರಿಪಡಿಸಿಕೊಟ್ಟ ಆದರೆ ಮರುದಿನವೂ ಇದೆ ಪುನರಾವೃತ್ತಿ ಆದದ್ದು ನೋಡಿ ಆತ ತನ್ನ ಸಹೋದ್ಯೋಗಿಯಲ್ಲಿ ಈ ವ್ಯವಹಾರ ನನಗೆ ಸ್ವಲ್ಪ ಹೇಳಿಕೊಡಿ ಎಂದದ್ದೇ ತಡ,ಆತ ಬಾಯಿಗೆ ಬಂದಂತೆ ಬೈದದ್ದು ಅಲ್ಲದೆ ಎಲ್ಲಾ ವನ್ನು ಅವನ ಹತ್ತಿರ ಬಿಸಾಡಿ ಎಲ್ಲಾ ನೀನೇ ನೋಡು ಎಂದು ಹೇಳಿದ್ದು ನೋಡಿ ಕಕ್ಕಾಬಿಕ್ಕಿಯಾದ ಆತ ತಾಳ್ಮೆ ಕಳೆದುಕೊಳ್ಳದೆ, ಆದಿನವೇ ತನ್ನ  ಗೆಳೆಯನ ಬಗ್ಗೆ ಈ ವಿಷಯ ಚರ್ಚಿಸಿ  ಮರುದಿನದಿಂದಲೇ ಹಣದ ಪೆಟ್ಟಿಗೆಗೆ ಬೀಗ ಹಾಕುವ ಪರಿಪಾಠ ಮಾಡಿದ  ಮತ್ತೆಂದೂ ಆತನಿಗೆ ಲೆಕ್ಕ ತಪ್ಪಲಿಲ್ಲ  ಪಂಕಜಾ.ಕೆ

ಪಂಚಪದ. ಬೆಂಕಿ.

ಪಂಚಪದ ಬೆಂಕಿ 1..ಬೆಂಕಿ ನಂದಿಸಲು ನೀರು ಸಾಕು .ಉರಿ ತಣಿಸಲು ಸಾಂತ್ವನ ಬೇಕು 2..ದ್ವೇಷದ ಬೆಂಕಿ ಹೊತ್ತಿದವರನ್ನೇ ಮೊದಲು ಸುಡುವುದು 3..ಬಡತನದ ಬೆಂಕಿಯಲಿ ಸುಟ್ಟರೂ ಅಮ್ಮನ ಮನ ಮಕ್ಕಳ ಒಳಿತನ್ನು ಬಯಸುವುದು 4..ಮಾತಿನ ಬೆಂಕಿ ಮನೆ ಸುಟ್ಟಿತು  ಕೋಪದ ಬೆಂಕಿ ತನ್ನನ್ನೇ ಸುಟ್ಟಿತು 5..ಸುಡುವ ಬೆಂಕಿಯ ಜ್ವಾಲೆಯಿಂದ ಹೆಣ್ಣಿನ ಪಾತಿರ್ವತ್ಯದ ಪರೀಕ್ಷೆ  ಪಂಕಜಾ.ಕೆ

ಚುಟುಕು 2ಬಾಳುಬಂಗಾರ ...ಪ್ರಕೃತಿ

1ಚುಟುಕು  ಬಾಳು ಬಂಗಾರ ಹೊಗಳಿಕೆ ಹೊನ್ನ ಶೂಲವಾದೀತು ತೆಗಳಿಕೆ ಬೆಂಕಿಯ ಬಲೆಯಾದೀತು ಎರಡನ್ನು ಸಮಾನ ಸ್ವೀಕರಿಸಿದರೆ ಬಾಳು ಬಂಗಾರವಾದೀತು ಚುಟುಕು 2 ಪ್ರಕೃತಿ  ಪ್ರಕೃತಿಯ ಮಡಿಲು ಸ್ವರ್ಗ ಕಲ್ಪವೃಕ್ಷದ ನೀರು ಅಮೃತ ಶುದ್ಧ ಗಾಳಿ ನೀಡುವ ಪ್ರಕೃತಿ ಮಾನವನ ದುರಾಸೆಗೆ ವಿಕೃತಿ ಪಂಕಜಾ.ಕೆ.

ರಾಮ ಶ್ಯಾಮ ಅತ್ಯುತ್ತಮ ನೀತಿ ಕಥೆ ನವಪರ್ವ ಬಳಗ

ರಾಮಶ್ಯಾಮ ಒಂದು ಊರಿನಲ್ಲಿ ರಾಮ ಶಾಮ. ಎಂಬ ಇಬ್ಬರು ಗೆಳೆಯರು ಇದ್ದರು. ರಾಮ ಮೃದು ಸ್ವಭಾವದವ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ .ಶ್ಯಾಮ ತಾನಾಯಿತು ತನ್ನ ಓದಾಯಿತು  ಎಂದು ಇರುವವ ಒಂದು ದಿನ ಅವರು ಶಾಲೆಗೆ ಹೋಗುವ ದಾರಿಯಲ್ಲಿ ಅಜ್ಜನೊಬ್ಬ ಮಾರ್ಗದಾಟಲು ತುಂಬಾ ಕಷ್ಟಪಡುವುದು ಕಂಡು ರಾಮ ಅವನಿಗೆ ಮಾರ್ಗ ದಾಟಲು ಮಾಡುತ್ತಾನೆ  .ಇದರಿಂದ ಖುಷಿಪಟ್ಟು ಆ ಮುದುಕರು ರಾಮನನ್ನು ಹರಸುತ್ತಾರೆ ಶ್ಯಾಮ ಇದಾವುದನ್ನು ಗಮನಿಸದೆ ಶಾಲೆಗೆ ಹೊರಟು ಹೋಗುತ್ತಾನೆ. ಆ ದಿನ ರಾಮ ಶಾಲೆಗೆ ಬರುವಾಗ ತಡವಾಗಿರುತ್ತದೆ  ಟೀಚರ್ ಕೋಪದಿಂದ ರಾಮನನ್ನು ಬೈಯುತ್ತಾರೆ ರಾಮ ತಾನು ವೃದ್ಧಾರನ್ನು ಮಾರ್ಗದಾಟಿಸಿ  ಬಂದ ಕಾರಣ ತಡವಾಯಿತೆಂದು  ಹೇಳುತ್ತಾನೆ ಇದನ್ನು ತಿಳಿದ ಶಿಕ್ಷರಿಗೆ ರಾಮನ ಗುಣ ಕಂಡು ಖುಷಿಯಾಗುತ್ತದೆ ಎಲ್ಲರೂ ರಾಮನಂತೆ ಕೈಯಲ್ಲಾಗದವರಿಗೆ ಸಹಾಯ ಮಾಡಬೇಕು ಎಂದು ಶಿಕ್ಷಕಿ ವಿದ್ಯಾರ್ಥಿಗಳಿಗೆ ಹೇಳಿ  ರಾಮನನ್ನು ಅಭಿನಂದಿಸುತ್ತಾರೆ ಪಂಕಜಾ ಕೆ

ಗೆಳೆತನ ಕಲಾದೇಗುಲ fb ಗ್ರೂಪ್ ಉತ್ತಮ

ಸ್ಪರ್ಧೆಗಾಗಿ ದತ್ತಪದ. ಸ್ನೇಹದ ಕಡಲಲ್ಲಿ ಮುಸ್ಸಂಜೆ ಹೊತ್ತಿನಲಿ ಗೆಳೆತನ ಎಲ್ಲಿಯೋ  ಹುಟ್ಟಿ ಎಲ್ಲಿಯೋ ಬೆಳೆದು ಜತೆಯಾದೆ ನೀ ನನ್ನ ಕನಸುಗಳ ಸೆಳೆದು ನೋಯುವ ಮನಸಿಗೆ  ತಂಗಾಳಿಯಾದೆ ನೀನು ನಿನ್ನೊಲವ ಸಾಂತ್ವನಕೆ ಮೈಮರೆತೆ ನಾನು ಏಕಾಂತದ ಒಂಟಿತನಕೆ ಜತೆಯಾದೆಯಲ್ಲ ಕನಸಿನ ಗೋಪುರವ ನೀ ಕಟ್ಟಿದೆಯಲ್ಲ ಹೊಸತನವ  ತುಂಬುತಾ ಮನಸೂರೆಗೊಂಡೆ ನಿನ್ನ ಸ್ನೇಹವೆಂಬ ಅಮೃತದ ಜಲದಲ್ಲಿ ನಾ ಮುದಗೊಂಡೆ ಮುಂಗಾರು ಮಳೆಯಂತೆ ತಂಪು ನಿನ್ನ ಸ್ನೇಹ ನನ್ನೆದೆಯ ತುಂಬಾ  ಅನುರಣಿಸಿದೆ ನಿನ್ನ ಸ್ನೇಹ ಮಧುರಾನುಭೂತಿಯಲಿ ಮುಳುಗಿಸಿದೆ ನಿನ್ನ ಸ್ನೇಹ ಕತ್ತಲೆಯ ಬಾಳಿಗೆ ಪೂರ್ಣ ಚಂದಿರನ ತಂಪು ನಿನ್ನಸ್ನೇಹ ಗೆಳೆತನವೆಂಬ ದೋಣಿಯಲಿರುವ ತಂಪು ಬಾಳದೋಣಿಯಲೂ ಅದರದೇ ಇಂಪು ಕಷ್ಟ ಸುಖ ಎಲ್ಲಕ್ಕೂ ಜತೆಯಾಗುವ ನಂಟು ಬಿಡಿಸಲಾರದ ಬಂಧ ಸ್ನೇಹದಾ ಗಂಟು ಸ್ನೇಹದ ಕಡಲಲ್ಲಿ ಮುಸ್ಸಂಜೆ ಹೊತ್ತಿನಲಿ ಕಂಡ ಕನಸಿಗೆ ನೀಹಿಡಿದೆ ಕನ್ನಡಿ ನೊಂದ ಮನಸಿಗೆ ನೀ ಬರೆದೆ ಮುನ್ನುಡಿ ನಗುವ ಹಿಂದಿನ ನೋವ ಮರೆಸುತಿದೆ ಸ್ನೇಹ ಕತ್ತಲೆಯ ಹಾದಿಗೆ  ಮುಂಬೆಳಕು ಸ್ನೇಹ ಪಂಕಜಾ ಕೆ.

ಬಾಳ ಪಯಣ. ಕೊಡಗು ಗ್ರೂಪ್ fb ಯಲ್ಲಿ ಅತ್ಯುತ್ತಮ

ಸ್ಪರ್ಧೆಗಾಗಿ ದತ್ತಪದ...ಕಣ್ಣಲ್ಲೇ ಕರೆದೆ ಎದೆಯಲ್ಲಿ ಕಾಲೂರಿದೆ ಬಾಳ ಪಯಣ ಬಾಳ ಪಯಣದ ತಿರುವಿನಲಿ ನೀನಂದು ಸಿಕ್ಕೆ ಒಲವ ಸುರಿಸುತ ಬರಿದೆ ನನ್ನೆಡೆಗೆ ನಕ್ಕೆ ಮೈಮನವು ಹೊಸತನದ ಅಲೆಯಲ್ಲಿ ತೇಲಾಡಿತು ಮದುರಾನುಭೂತಿಯಲಿ ತನುಮನವು ಓಲಾಡಿತು ನಸು ನಗುವ ಬೀರುತ್ತ ನೀ ನನ್ನ ನೋಡಿದಾಗ ನಾಚಿಕೆಯ ತೆರೆಯೊಂದು ಅಲ್ಲಿ ಸರಿದಾಡಿತು ಕಣ್ಣಲ್ಲೇ ಕರೆದೆ ಎದೆಯಲ್ಲಿ ಕಾಲೂರಿದೆ ಮನವಿಂದು ಏಕೋ ತಲ್ಲಣಿಸಿದೆ ನಿನ್ನೊಲವಿನ   ಕರೆಗೆ  ಮನ ಸೋತಿದೆ ಮೌನವಾಗಿ ಮಿಡಿದಿದೆ ನನ್ನ  ಈ ಹೃದಯ ಬಾಳಿನಾಗಸದಲ್ಲಿ ಬೆಳ್ಳಿ ಚಂದಿರನಂತೆ ನೀಬಂದೆ ಮನದಂಗಳದಲಿ ಚೆಲು ಕನಸ ನೀ ಬಿತ್ತಿದೆ ಮಿತವಾದ ಮಾತಿನಲಿ ಹಿತವಾದ ಒಲವಿನಲಿ  ಮನವನ್ನು  ನಿನ್ನೆಡೆಗೆ ಸೆಳೆದೊಯ್ದೆಯಲ್ಲ ಸಮರಸವ ಜೀವನವು  ನೆಮ್ಮದಿಯ ತಂದಿರಲು ಮನವಿಂದು  ಸಂತಸದ ಗೂಡಾಯಿತು ಪಂಕಜಾ.ಕೆ

ಗುರು ರಾಘವೇಂದ್ರ ಭಕ್ತಿಗೀತೆ

ಭಕ್ತಿಗೀತೆ ಗುರು ರಾಘವೇಂದ್ರ ತುಂಗಾನದಿಯ ತೀರವಾಸಿ ವರಮಂತ್ರಾಲಯ ನಿವಾಸಿ ಪರಮಪಾವನ ಗುರುರಾಘವೇಂದ್ರ ಅಂಧಾಕಾರದಿ ಮುಳುಗಿರುವೆ ದಾರಿಕಾಣದೆ ನಿನ್ನ ನಂಬಿರುವೆ ಕಷ್ಟಗಳ ಪರಿಹರಿಸು ಗುರು ರಾಘವೇಂದ್ರ ಬೃಂದಾವನದಲಿ  ನೆಲೆಸಿರುವೆ ಕರೆದಾಗಬರುವೆಯೆಂದು ನಂಬಿರುವೆ ನಿನ್ನ ಚರಣಕ್ಕೆ ಶರಣು ಬಂದಿರುವೆ ಗುರುರಾಯ ಗುರುವಾರದ ಶುಭದಿನದಂದು ಚಂದದಲಿ ನಿನ್ನ ಧ್ಯಾನಿಸಿ ಭಜಿಸುವೆ ಮಂಗಳ ಮೂರುತಿ ರಂಗನದಾಸರಾಘವೇಂದ್ರ  ಕಂಗೆಟ್ಟು ಶರಣು ಬಂದವರ ಪೊರೆಯುವೆ ನೆಲೆಸೆನ್ನ ಹೃದಯ ಮಂದಿರದಲ್ಲಿ ಗುರುವೆ ಬೆಳಗಿಸು ಮನದಲಿ ಜ್ಞಾನಜ್ಯೋತಿಯ ತಂದೆ  ಬಂದು ಬಳಗವು ನೀನೇ ಇಷ್ಟಮಿತ್ರನೂ ನೀನೇ ಭಕ್ತರ ಮೊರೆಯನು ಆಲಿಸುವ ಕಾಮಧೇನುವೆ  ನೀನೇ ಗತಿಯೆಂದು ಶರಣು ಬಂದಿರುವೆ ಗುರುರಾಯ ಪಂಕಜಾ.ಕೆ

ಮನೆಯಲ್ಲೇ.ಲಾಕ್ (ಲೇಖನ)ನವಪರ್ವ ದಲ್ಲಿ ಅತ್ಯತ್ತಮ

ಮನೆಯಲ್ಲೇ ಲಾಕ್ (ಲೇಖನ) ಅಯ್ಯೋ ಏನ್ರಿ ಇದು ಮನೆಯಲ್ಲಿ ನಾವೆಲ್ಲಾ.ಒಟ್ಟಿಗೆ ಜತೆಯಾಗಿ ಇದ್ದೇವೆ  ಅಂತ  ಅಷ್ಟೇ. ಒಬ್ಬೊಬ್ಬರು ಒಂದೊಂದು ಕೊಠಡಿಯಲ್ಲಿ ಕುಳಿತು ಮೊಬೈಲ್ ಕೈಯಲ್ಲಿ ಹಿಡಿದರೆ ಪ್ರಪಂಚವೇ ಮರೆತು ಹೋಗುತ್ತದೆ ಅಲ್ಲವೇ ?ಮನೆಯ ಹೆಂಗಸರಿಗೆ ಮಾತ್ರ ತಪ್ಪದ ಕೆಲಸದ ಗಂಟು  ನೋಡ್ರಿ .ಎಲ್ಲರೂ ಮನೆಯಲ್ಲೇ ಇರುವುದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮನೆಕೆಲಸ  ಎಂದು ಬಿಡುವಿಲ್ಲದೆ ಸೋತ ಆಕೆಗೆ  ತನಗಾಗಿ ಸಿಗುವ ಸಮಯ ಅತ್ಯಲ್ಪ   ಕಣ್ರೀ. ಒಟ್ಟಿಗೆ ಊಟ ತಿಂಡಿಗೇನೋ ಕುಳಿತರೂ ಕೈಯಲ್ಲಿರುವ ಮೊಬೈಲ್ ತನ್ನೆಡೆಗೆ ಅವರೆಲ್ಲರ ಮೊಗವ ಸೆಳೆದುದು ನೋಡಿ ನಿಟ್ಟುಸಿರು ಬಿಡೋದೇ ಆಯ್ತು ಕಣ್ರೀ          ನಿಮಗೇನ್ರಿ ಮನೆಯಲ್ಲಿ ಆರಾಮ ಎನ್ನುವವರಿಗೆ  ಮನೆ ಗೃಹಿಣಿ ಕಷ್ಟ ಒಂದು ದಿನ ಮನೆಯಲ್ಲಿದ್ದರೆ ಮಾತ್ರ ತಿಳಿದೀತು ನೋಡ್ರಿ. ಲಾಕ್ ಡೌನ್ನಿಂದ  ಮನೆಕೆಲಸಕ್ಕೆ ಜನ ಇಲ್ಲ   ಗ್ರಿಹಿಣಿ ಯ ಕೆಲಸಕ್ಕೆ ಲಾಕ್ ಡೌನ್ ಇಲ್ಲಾ ಕಣ್ರೀ.ಎಲ್ಲಾ ಕೆಲಸ ಒಬ್ಬಳೇ ಮಾಡಬೇಕು  ನೋಡ್ರಿ. ಸಾಕಪ್ಪಾ ಸಾಕು ಅನಿಸಿ ಬಿಟ್ಟೆತಿ  ಕಣ್ರೀ ಆದಷ್ಟು ಬೇಗ ಈ ಮಾರಿ ಹೋಗಲಿ ಅನ್ನಿಸಿದೆ ನೋಡ್ರಿ.  ಮನೆ ಎಂದಿನಂತೆ ನಗು ನಗುತಿರಲಿ ಅಂತ ದಿನಾ ದೇವರಲ್ಲಿ ಬೇಡೋದೇ ಆಯ್ತು  ಕಣ್ರೀ  ಪಂಕಜಾ.ಕೆ

ಭಾಸ್ಕರ

ಭಾಸ್ಕರ  ಮರಗಳೆಡೆಯಲಿ  ತೂರಿ ಬರುತಲಿ ಬೆರಗ ಬೆಳಗಿನ ಸವಿಯ ತುಂಬುತ ಅರುಣರಾಗವ  ಪಸರಿಸುತ ಬಂದ ಧರೆಯೆಡೆಗೆ ಬಾನ ಬಯಲಿಗೆ ಬಣ್ಣ ಹಚ್ಚುತ ಸೌಮ್ಯ ಕಿರಣವ ತುಂಬಿ ಗಗನದಿ ಇಳೆಗೆ ಮುತ್ತನಿಕ್ಕುತ ಬಂದ  ಬೇಗದಲಿ ಏನು ಚೆಲುವದು ಎಂಥಾ ಬೆರಗದು ಬಾನು ಬುವಿಯಲಿ ತುಂಬಿ  ನಿಂತಿದೆ ದಿನಕರನ ಉದಯದಲಿ ಮೈಯ ಮರೆತಿರಲು ಬೀರಿದ ಹೂಗಳು ಗಂಧ ಚೆಲ್ಲಿವೆ ಹರಿಸಿ ಮಧುರಸವ  ಮೆಲ್ಲಗೆ ದುಂಬಿಗಳಾಕರ್ಷಣೆಗೆ ತಲೆಯ ತೂಗುತಿವೆ ಕವಿದ ಕತ್ತಲೆ ಕರಗಿ ಹೋಯಿತು ಸುರಿದ ಬೆಳ್ಳಗೆ ಬೆಳಕ ನೋಡುತ ಬಾನ ರಾಜನು ತಾನೆನುತ ನಗುತಿಹನು ಪಂಕಜಾ.ಕೆ.

ಚುಟುಕು ಸಂತೃಪ್ತಿ

ಚುಟುಕು ಸಂತೃಪ್ತಿ ಗಂಡ ಮಕ್ಕಳ ಮುಖದ ನಗು  ಕಳೆಯುವುದು  ಮನಸಿನ ಬಿಗು ಮನೆ ಮಂದಿಯರ ಸಂತೃಪ್ತ ಜೀವನ ಗೃಹಿಣಿ ಯ ಕೆಲಸಕ್ಕೆ ಸಂದ ಬಹುಮಾನ ಪಂಕಜಾ.ಕೆ.ಮುಡಿಪು

ಬರವಣಿಗೆ. ( ನವ ಪರ್ವ)

ದತ್ತ ಪದ ...ಕೈಗೆ ಸಿಕ್ಕರೆ ಪೆನ್ನು ಹಾಳೆ ಬರವಣಿಗೆ ಕೈಗೆ ಸಿಕ್ಕಿದರೆ ಪೆನ್ನು ಹಾಳೆ ಬರೆಯುವೆ ಅಕ್ಷರಗಳ ಸಾಲೆ ಮೈಮನಕೆ ಪುಳಕ ವೆಬ್ಬಿಸುವ ಓಲೆ ಮನದ ಭಾವನೆಗಳನೆಲ್ಲಾ ಅಕ್ಷರವಾಗಿಸಿ ಜೋಡಿಸುವೆ ಕವನಗಳೆಂಬ ಮುತ್ತಿನ ಮಾಲೆ ಗೆರೆಗಳನು ಎಳೆಯುತ ಬಿಡಿಸುವೆನು ಹಾಳೆಯ ತುಂಬೆಲ್ಲಾ ಚಂದದ ಚಿತ್ರಗಳ ಸಾಲೇ ಬೆರಗಿನ ಪ್ರಕೃತಿಯ ಸುಂದರ ಚಿತ್ರ ಹರಿದು ಬರುವುದು ಹಾಳೆಯ ತುಂಬಾ ಕಣ್ಣು ಮನ ತುಂಬುವ ಚಿತ್ರ ಬರಹ ಓದುತಲಿದ್ದರೆ  ಮೈ ನವಿರೇಳಿಸುವ ಭಾವ ಮನಸಿನಾಳದ ನೋವುಗಳ ಬಿಚ್ಚಿಡುತ ದುರಂತ ಜೀವನದ ನಾಯಕಿಯ ಪಾತ್ರ ಕೈಗೆ ಸಿಕ್ಕರೆ.ಪೆನ್ನು ಹಾಳೆ  ಮೈ ಮರೆವೆ ನನ್ನನ್ನು ನಾನೇ ಕನಸನೂರಿಗೆ ಪಯಣ ವ ನಾ ಕಟ್ಟಿ ಕೊಡುವೆ ನಾ ಬರೆಯುವ ಪದಪುಂಜಗಳು ಭಾವನೆಗಳು ತುಂಬಿದ ಗಣಿಗಳು ಮನಸಿಗೆ ಬಂದುದ ಗೀಚುತ ಖುಶಿ.ಪಡುವೆ ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ಮಾಸ್ಟರ್

ಸಂಗಾತಿ ನನ್ನ ಸಾವಿತ್ರಿ ಕವನ ಸಂಕಲನದ ಒಂದು ಕವನ

ಜತೆಗಾತಿ (ಸಂಗಾತಿ) ಬಾಂದಳದಿ ಮೂಡಿ ಬಂದ ಶಶಿಯಂತೆ ನೀ ಬಂದೆ ಹಾಲು ಜೇನಿನ ಸವಿಯನು ನೀ ತಂದೆ ನನ್ನ ಬಾಳಿನಂಗಳದಲಿ ನಿನ್ನ ಕಾಲ್ಗೆಜ್ಜೆಯ ಧ್ವನಿ  ನನ್ನ ಹೃದಯದ ವೀಣೆಯನು ಮೀಟಿ  ತುಂಬಿಸಿತು  ಮನದಲ್ಲಿ ಸಂತಸದ ಸವಿ ಚಂದಿರನ  ನಾಚಿಸುವ ನಿನ್ನ  ಮುಖಾರವಿಂದ ನಗುವಾಗ ಮುತ್ತುಗಳು ಉದುರಿದಂತೆ ಒಲವ ಗಾನವ ಹಾಡುತಿದೆ ಹಕ್ಕಿಯಂತೆ ನಿನ್ನ ಕಣ್ಣೋಟ ನಕ್ಷತ್ರದಂತೆ ಅದಕೆ ಸ್ಪರ್ಧೆಯು ನಿನ್ನ ಮೂಗು ಬೊಟ್ಟು ಉಸುರುತಿದೆ ಮನಕೆ ಒಂದು ಗುಟ್ಟು ಹೆಣ್ಣೇ ನೀ ನನ್ನ ಮನವ ಕದ್ದೆ ವೈಯಾರದಲಿ ನಿಂದು ಮುದ ತಂದೆ ಮೈ.ಮನಕೆ ನನ್ನ ಮನೆ ಮನವ ತುಂಬಿ ಬಾಳಲ್ಲಿ ಹರಿಸಿದೆ ಸವಿಜೇನ ಹೊಳೆ ನಿನ್ನ ಜತೆಯಲಿರುವ ಒಂದೊಂದು ಕ್ಷಣವೂ ಮಧುಹೀರುವಾನಂದ ನನ್ನ. ಮನಕೆ ಸಂಗಾತಿ ನೀ ಜತೆಯಲಿರಲು ಸ್ವರ್ಗ ಬೀರಿನ್ನೇಕೆ ಸವಿಯೋಣ ಬಾ ನಲ್ಲೆ ಸ್ವರ್ಗದಾ ಸುಖವನಿಲ್ಲೆ ಪಂಕಜಾ.ಕೆ

ಗೃಹಿಣಿ ನ್ಯಾನೊ ಕಥೆ

ಗೃಹಿಣಿ  (ನ್ಯಾನೊ ಕಥೆ) ತನ್ನಮನಸ್ಸಿಗೆ ವಿರುದ್ಧವಾಗಿ ತಂದೆ ತಾಯಿಯರ ಒತ್ತಾಯಕ್ಕೆ ಸಂಜೀವಿಯನ್ನು ಮದುವೆಯಾದ ರಾಜೀವ ,ಒಮ್ಮೆಯೂ ಆಕೆಯೊಡನೆ ಸಂಸಾರ  ಮಾಡಲಿಲ್ಲ .ಆದರೆ ಸಂಜೀವಿ ಅತ್ತೆ ಮಾವನಿಗೆ ಈ ವಿಷಯ ತಿಳಿಯದಂತೆ ಜಾಣ್ಮೆಯಿಂದ ಸಂಸಾರ ಮಾಡುತ್ತಾ ಗಂಡನ ಬೇಕು  ಬೇಡಗಳನ್ನು ಮೌನವಾಗಿ ನೋಡಿಕೊಳ್ಳುತ್ತ  ಗೃಹಿಣಿ ಯ ಕರ್ತವ್ಯ  ನಿರ್ವಹಿಸುತ್ತಾ ಇದ್ದಳು . ಒಂದು ದಿನ ಆಕೆ  ಯಾವುದೋ ಕಾರಣಕ್ಕೆ  ತಾಯಿ ಮನೆಗೆ ಹೋದವಳು ಲಾಕ್ ಡೌನ್ ನಿಂದಾಗಿ ಅಲ್ಲಿಯೇ ಇರುವಂತಾಯಿತು. ಆಗ  ರಾಜೀವನಿಗೆ ತನ್ನ ಹೆಂಡತಿ ತಾನು  ಅವಳನ್ನು ನಿರ್ಲಕ್ಷಿಸಿದರೂ  ತನ್ನ ಸಂಸಾರವನ್ನು ಎಷ್ಟು ಚೆನ್ನಾಗಿ ನೋಡಿ ಕೊಂಡಿದ್ದಳು  ಎಂದು ತಿಳಿದು ಆಕೆಯ ಬಗ್ಗೆ ಅಭಿಮಾನ ಉಕ್ಕಿ ಬಂತು. ಪಂಕಜಾ.ಕೆ

ಕಡಲ ಹಕ್ಕಿ ಶರ ಷಟ್ಪದಿ

ಶರ ಷಟ್ಪದಿ         *ಕಡಲ ಹಕ್ಕಿ*         *~~~~~~~~*  ಕಡಲಿನ  ಸೊಬಗನು ಬಿಡದೆಯೆ ನೋಡಲು  ದಡದಲಿ ಕುಳಿತಿಹೆ ಮೈಮರೆತು|  ಒಡನೆಯೆ ಬೀಸಿತು ಸಡಗರದಿಂದಲಿ ಮೃಡನೊಲು ಕುಣಿಯುತ ಬಿರುಗಾಳಿ||  ಮಲಿನವುಯಿಲ್ಲದ ಸಲಿಲವು ತುಂಬಿದ ಜಲವನು ನೋಡುತ ಮೈಮರೆತೆ|  ನಲಿವನು ಹೆಚ್ಚಿಸಿ ಬಲವನು ಕರುಣಿಸಿ ಗೆಲುವನು ಮನದಲಿ ತುಂಬಿಸಿತು||   ತಿಳಿಬಿಳಿ*ಹಕ್ಕಿಯು ಸುಳಿಯುತ ಬಂದಿತು ಬಳಿಯಲಿ ನರ್ತನ ಮಾಡುತಲಿ ಸೆಳೆಯಿತು*ಮನವನು ಫಳಫಳ ಹೊಳೆಯುತ ಒಲವಿನ ನೋಟವ ಬೀರುತಲಿ ರಚನೆ..ಪಂಕಜಾ ಕೆ

ಗಜಲ್ ನದಿ ದಡದ ಮೇಲೆ

ಗಜಲ್ ನದಿ ದಡದ ಮೇಲೆ ಭುಜಕ್ಕೆ ಭುಜ ಹಚ್ಚಿ ನೀರಿಗೆ ಕಲ್ಲೆಸೆದದ್ದು ಮರೆತೆಯಾ ತರಂಗಗಳನ್ನೆಬ್ಬಿಸುವ ಅಲೆಗಳನು ಕಂಡು ಕುಣಿದದ್ದು ಮರೆತೆಯ ಕೈ ಕೈ ಹಿಡಿದು ದಂಡೆಗುಂಟ ಓಡಿಯಾಡಿದ್ದೇವಲ್ಲವೇ ಮುಳುಗುವ ರವಿಯನ್ನು ಕಂಡು ಕಣ್ಣೊಳಗೆ ಇಣುಕಿದ್ದು ಮರೆತೆಯಾ ಪ್ರೀತಿಯ  ಕಡಲಲ್ಲಿ ಮುಳುಗಿಸಿ ಹುಚ್ಚು ಹಿಡಿಸಿದೆಯಲ್ಲವೇ ನೀಲಾಗಸದ ಸೊಬಗನ್ನು ಸವಿಯುತ್ತಾ ತೋಳು ಬೆಸೆದದ್ದು ಮರೆತೆಯಾ ಮನದಾಳದ ನೋವುಗಳನ್ನು ನಿನ್ನೊಡನೆ ಹಂಚಿಕೊಂಡಿದ್ದೆಯಲ್ಲವೇ ಬರಡಾದ ಬದುಕಿಗೆ ಜೀವ ತುಂಬುವೆಯೆಂದಿದ್ದು ಮರೆತೆಯಾ ನನ್ನ ಪ್ರೀತಿಯನ್ನು ನಿರಾಕರಿಸಿ  ಹೇಳದೆ ಹೋಗಬಹುದೇ ಹೇಳು ಜೀವನಪೂರ್ತಿ ನಿನ್ನ ಜತೆಯಲ್ಲಿ ಇರುವೆನೆಂದಿದ್ದು ಮರೆತೆಯಾ ನಿನ್ನ ನೆನಪಿನಲ್ಲಿ ನಾನಿಂದು ಹುಚ್ಚನಾಗಿರುವೆ ತಿಳಿದಿದೆಯೇ ನಿನಗೆ ಆಕಾಶವೇ  ಮೈಮೇಲೆ ಬಿದ್ದರೂ ನಿನ್ನೊಡನೆ ಬರುವೆನೆಂದಿದ್ದು ಮರೆತೆಯಾ ಆಸೆಯ ದೀಪಕ್ಕೆ ತೈಲ ತುಂಬಿ ಉರಿಸಿದ್ದು ತಪ್ಪಲ್ಲವೇ ಪಂಕಜಾ ನಿನ್ನ ಹೆಸರಿನ ಜತೆ ನನ್ನ ಹೆಸರು ಸೇರಿಸಿ ಗೀಚಿದ್ದು ಮರೆತೆಯಾ ಪಂಕಜಾ.ಕೆ

ಕೃತಘ್ನ ಕಥೆ

ಬೋರ್ಗರೆಯುವ ಕಡಲ ದಂಡೆಯಲ್ಲಿ ಕುಳಿತು  ಹಾರಿ ಬರುತ್ತಿರುವ ಅಲೆಗಳನ್ನು ನೋಡುತ್ತಾ ಅದರ ಏಳು ಬೀಳುಗಳನ್ನು  ಕಣ್ಣು ತುಂಬಿಕೊಳ್ಳುತ್ತಿದ್ದರೂ ಸಂಕಷ್ಟಿಯ ಮನಸ್ಸು ಬೆಳಗ್ಗಿನ ಘಟನೆಯನ್ನೇ ಪದೇ ಪದೇ  ನೆನಪು ಮಾಡುತ್ತಾ ದುಃಖಿಸುತ್ತಿತ್ತು . ಆ ಘಟನೆ ಮನಸಿನ ಪಟಲದಲ್ಲಿ ಬಂದ ಕೂಡಲೇ ಸಂಕಷ್ಟಿಯ ಸುಂದರ ಕಣ್ಣುಗಳು ಕೊಳಗಳಾದವು ದುಃಖವನ್ನು ಹತ್ತಿಕ್ಕಲು ಆಗದೆ ಆಕೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭ ಮಾಡಿದಳು              ಸಂಕಷ್ಟಿ ಅಲ್ಲಿ ಕುಳಿತ  ಕ್ಷಣ ದಿಂದಲೂ ಅವಳನ್ನು ಗಮನಿಸುತ್ತಿದ್ದ ಸೂರಜ್ ಅವಳು ಅಳುವುದನ್ನು ಕಂಡು ಏನಾಗಿರಬಹುದು ಪಾಪ ಆಗಿನಿಂದ ಒಂಟಿಯಾಗಿ ಕುಳಿತು ದುಃಖಿಸುತ್ತಿದ್ದಾಳೆ  ಎಂದು ಆಲೋಚಿಸುತ್ತ ಅವಳನ್ನೇ ನೋಡುತ್ತಿದ್ದನು .ಸಂಕಷ್ಟಿ ಅಳುವುದು ನೋಡಿ ಒಂದಿಬ್ಬರು ಪಡ್ಡೆ ಹುಡುಗರು  ಅವಳನ್ನೇ ನೋಡುತ್ತಾ ತಿರುಗಾಡುವುದು ಕಂಡು ಇನ್ನು ತಡಮಾಡಿದರೆ ಅನಾಹುತವಾದೀತು ಎಂದು ತಿಳಿದ ಸೂರಜ್ ಅವಳ ಸಮೀಪಕ್ಕೆ ಬರುತ್ತಾನೆ.ಸೂರಜ್ ಬರುವುದು ಕಂಡು ಪಡ್ಡೆ ಹುಡುಗರ ದಂಡು ಕಣ್ಮರೆಯಾಗುತ್ತದೆ.ಸಂಕಷ್ಟಿ ಇದು ಯಾವದನ್ನು  ಗಮನಿಸದೆ ಕಣ್ಣಿಗೆ ಕೈ ಹಚ್ಚಿ ಅಳುತ್ತಲೇ ಇರುವುದು ಕಂಡು ಸೂರಜ್ ನಿಧಾನವಾಗಿ ಆಕೆಯನ್ನು ಕರೆದ .ಆತನ ಕರೆ  ಕೇಳಿ ಬೆಚ್ಚಿ ಕಣ್ಣು ಬಿಟ್ಟ ಸಂಕಷ್ಟಿಗೆ ತನ್ನ ಮೇಲಧಿಕಾರಿಯನ್ನು ಕಂಡು ಗಾಬರಿಯಾಯಿತು .ಆಕೆ ಕೂಡಲೇ ಎದ್ದು ಸರ್ ನೀವಿಲ್ಲಿ ಎಂದು ನಗುವ ಪ್ರಯತ್ನ  ಮಾಡಿದಳು.              ಸೂರಜ್ ಅವಳನ್ನು ಕುಳಿತುಕೊಳ್ಳಲು ಹೇ

ಓ ಇನಿಯಾ ಭಾವಗೀತೆ

ಓ.ಇನಿಯಾ  (ಭಾವಗೀತೆ) ದತ್ತಪದ....ಸಂಗಮ ನೋಡಲ್ಲಿ ಭೂಮಿಬಾನು ಒಂದಾಗಿದೆ ನಮ್ಮಿಬ್ಬರ ಒಲವಿಗೆ ಸಾಕ್ಷಿಯಾಗಿದೆ   ತಂಪಾದಗಾಳಿಯು  ಮುದ ತಂದಿದೆ ನಿನ್ನೊಡನಾಟದಲ್ಲಿ ಮೈ ಮರೆತಿದೆ ಮೋಡದ ಮರೆಯಿಂದ ಬರುತಿಹನು ಶಶಿ ಬೆಳದಿಂಗಳ ಹಾಸಿಗೆಯದು ನಮಗಾಗಿದೆ ನಿನ್ನೊಲವ ಸವಿಯುತ್ತಾ ಜಗ ಮರೆತಿದೆ ರಸಿಕತನವು ಒಡಮೂಡಿ ತನು ಕುಣಿದಿದೆ ಮಾಮರದಿ ಕೋಗಿಲೆಯು ಕುಕಿಲಿಡುತಿದೆ ನವಿಲೊಂದು ನರ್ತನವ  ತಾ ಗೈದಿದೆ ಬಾ ನಲ್ಲ ಜತೆಯಾಗಿ ನಲಿಯೋಣವೇ ಕನಸುಗಳ ಕಾಣುತ್ತ ಕುಣಿಯೋಣವೇ ನದಿಯೊಂದು ಸಾಗರದಲಿ ಸಂಗಮಿಸಿದೆ ಒಲವಿಂದು ತನು ಮನಕೆ ಮುದ ತಂದಿದೆ ನಿನ್ನ ಜತೆಯಿರಲು ಬಾಳಿಂದು ಹೂವಾಗಿದೆ ಸ್ವರ್ಗವೇ ಧರೆಗಿಳಿದಂತೆ ನನಗಾಗಿದೆ ಓ ಇನಿಯಾ ನೀನಿರಲು ಬಾಳಲ್ಲಿ ನಗು ತುಂಬಿದೆ ಚೆಲುವಾದ ಹೂಗಳರಳಿ  ಮನ ತುಂಬಿದೆ ಬಾಳೆಲ್ಲಾ ಒಂದಾಗಿ ಬಾಳೋಣವೇ ಒಟ್ಟಾಗಿ  ದೇವರನು  ಬೇಡೋಣವೇ ಪಂಕಜಾ .ಕೆ.

ಸೆರೆಹಿಡಿದ ಭಾವನೆ

ಸೆರೆಹಿಡಿದ ಭಾವನೆ ಮುಚ್ಚಿದ ಕರಗಳೆಡೆಯಿಂದ ಇಣುಕುವ ಕಣ್ಣೋಟ ನಿನ್ನನೇ ನೋಡುತ್ತಾ ನಗುವ ಚೆಲು ನೋಟ ಕಣ್ಣು ತುಟಿಗಳಲಿ ಹೊಮ್ಮುತ್ತಿದೆ ನಸುನಗು ಮನದ ಭಾವನೆಗಳ ಹೊರಸೂಸುತ್ತಿದೆ ಚೆಲುನಗು ಕುಂಚದಲಿ ಸೆರೆಹಿಡಿದ ಭಾವನೆಗಳೆಲ್ಲ ಅದ್ಬುತ ಕಲಾಕಾರನೇ ನೀ ನನ್ನ ನಲ್ಲ ನಿನ್ನ ಕುಂಚದಲಿ  ಕಂಡೆ ನನ್ನನೇ ಒಲವ ಭಾಷೆಯ ತಿಳಿದೆ ನಾ ಮೆಲ್ಲನೆ ಕಣ್ಣ ನೋಟದಲಿ ಭಾವನೆಗಳ ಸೆಳೆತ ಮನದಲಿ ತುಂಬಿದೆ  ನಿನ್ನದೆಯ ಉಲಿತ  ನನ್ನದೇ ಭಾವನೆಗಳು ಚಿತ್ರದಲ್ಲಿ ತುಂಬಿದೆ ಮನಸು ನಿನ್ನೊಡನಾಟದ ಕ್ಷಣಗಳ ನೆನೆದಿದೆ ಹೇಳಬೇಕೆಂದಿದ್ದೆ ನಿನಗೆ ಅಂದೆ ನನ್ನ ಮನದ ಭಾವನೆಗಳ  ಬರಿದೆ ಕಂಗಳ ನೋಟದಲಿ ಮಧುರ ಭಾವನೆ ಕಮ್ನನೆ ನಾಚಿಕೆ ತೆರೆಯ ಸರಿಸುತ ನಗು ನೀ  ಸುಮ್ಮನೆ ಒಲವ ರಸವ ಸುರಿಸುತ್ತಾ ಬಾ ನಲ್ಲ  ನಿನ್ನ ಕುಂಚದಲಿ ನನ್ನನ್ನೇ ತಿಳಿದೆಯಲ್ಲ  ಪಂಕಜಾ. ಕೆ.

ಪ್ರಕೃತಿಯ ಬಂಧ ಭಾವಗೀತೆ 19..4.2020 ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟ

ಪ್ರಕೃತಿಯ ಬಂಧ (ಭಾವಗೀತೆ) ಆಹಾ ಎಂತಹ ಚೆಲುವಿನ ನೋಟ ಪ್ರಕೃತಿಯ ಸಿರಿಯಲಿದೆ ಏನೋ ಮಾಟ ಮೂಡಣ ಬಾನಲಿ ಮೂಡುವ ರವಿ ಕಲಸಿದ ಚೆಲು ಬಣ್ಣಗಳ ಸವಿ ಅರಳಿದ ಹೂಗಳ ಗಂಧದ ಕಂಪು ಬೀಸುವ ಗಾಳಿಯು ತರುತಿದೆ ತಂಪು ಹಾಡುವ ಕೋಗಿಲೆ ಗಾನದ ಇಂಪು ಮೈಮನಕೆಲ್ಲಾ ತುಂಬಿತು ಹುರುಪು ಹಳತನು  ಕಳೆದು ಹೊಸತನು ತುಂಬಿ ಚಿಗುರಿದೆ ಮಾಮರ ಎಲೆಗಳ ಉದುರಿಸಿ ಕುಣಿಯುವ ನವಿಲಿನ ಅಂದವ ನೋಡಿ ಮನಕದು ಮಾಡಿತು ಏನೋ ಮೋಡಿ ಕೊಳದಲಿ ಆಡುವ ಮೀನುಗಳಾಟ ಅರಳಿದ ನೈದಿಲೆ ಸೆಳೆದಿದೆ ನೋಟ ಹಾರಾಡುವ ಹಕ್ಕಿಗಳ ದಂಡಿನ ಸೊಬಗು ಕಾಣುವ ಕಣ್ಣಿಗೆ ತಂದಿತು ಬೆರಗು  ಪ್ರಕೃತಿಯ ಮಡಿಲಲಿ ನಲಿಯುತ ಮನವು ಕಳೆಯಿತು  ಮನಸಿನ ಎಲ್ಲಾ  ನೋವು ಪಂಕಜಾ.ಕೆ.

ಹಾಯ್ಕುಗಳು

ಹಾಯ್ಕುಗಳು ಬೇಸಿಗೆಯಲಿ ಎಳನೀರು ಅಮೃತ ಬಾಯಾರಿಕೆಗೆ ಬತ್ತಿದ ಬಾವಿ ತಿಳಿಯಪಡಿಸಿತು ಬೇಸಿಗೆ ಕಾಲ ಚೈತ್ರ ಬರಲು ತುಂಬಿತು ಚಿಗುರೆಲೆ ಮನಕೆ ತಂಪು ಉರಿ ಬಿಸಿಲು ತಲೆಯ ಸುಡುತಿದೆ ಇಳೆ ದಿಗಿಲು ನೀರು ಉಳಿಸಿ ಪರಿಸರ ರಕ್ಷಿಸಿ ಜೀವ ಉಳಿಸಿ ಪಂಕಜಾ.ಕೆ.

ಮರಳಿ ಗೂಡಿಗೆ ನ್ಯಾನೊ ಕಥೆ

ಮರಳಿ ಗೂಡಿಗೆ ಹಳ್ಳಿಯೆಂದರೆ ಮೂಗು ಮುರಿಯುತ್ತಿದ್ದ ಆತ ತನ್ನ ತಂದೆಯ  ಜತೆ ಜಗಳವಾಡಿ  ಬೆಂಗಳೂರಿನಲ್ಲಿ  ದೊಡ್ಡ ಮನೆ ಮಾಡಿ  ಹಳ್ಳಿಯನ್ನು ಮರೆತಿದ್ದ.  ಇದ್ದಕ್ಕಿದ್ದಂತೆ ಆತ ಕೆಲಸಮಾಡುತ್ತಿದ್ದ ಕಂಪನಿ ನಷ್ಟವನ್ನು ಭರಿಸಲಾರದೆ ಮುಳುಗುವ ಹಂತಕ್ಕೆ ಬಂದಿದ್ದರಿಂದ ಹೆಚ್ಚಿನ ಕೆಲಸಗಾರರನ್ನು ತೆಗೆದು ಹಾಕಿದ್ದರು ಅವರಲ್ಲಿ ಆತನೂ ಒಬ್ಬ . ಕಂಗಾಲಾಗಿದ್ದ ಆ ಹೊತ್ತಿನಲ್ಲಿಯೇ  ಬಿ. ಬಿ .ಎಂ.ಸಿ ಯವರ ನೋಟಿಸ್ ನೋಡಿದ ಆತ ಧರೆಗಿಳಿದು ಹೋದ ಇದ್ದೊಂದು ಸೂರೂ  ಮೆಟ್ರೋ ಎನ್ನುವ ದೈತ್ಯನ ಪಾಲಾದಾಗ ಆತನಿಗೆ  ಹಳ್ಳಿಯ ನೆನಪಾಯಿತು ಪಂಕಜಾ.ಕೆ.

ಧೈರ್ಯ ನ್ಯಾನೊ ಕಥೆ

ಧೈರ್ಯ  (ನ್ಯಾನೊ ಕಥೆ) ಅಮವಾಸ್ಯೆಯ ಕಡು ಕತ್ತಲು.ಆಕೆ ಮನೆಯಲ್ಲಿ ಒಂಟಿಯಾಗಿದ್ದಳು ಆಕೆಯ ಪತಿ ಆ ದಿನ ತಾನೇ ಕೆಲಸದ ಕಾರಣದಿಂದ  ಬೇರೆ ಊರಿಗೆ ಹೋಗಿದ್ದ ಆಕೆಗೆ ಬಗಾಯವಾಗುತ್ತಿದ್ದರೂ ಬಾಗಿಲನ್ನೆಲ್ಲಾ ಭದ್ರಪಡಿಸಿ ಬೇಗನೆ ನಿದ್ದೆ ಮಾಡೋಣವೆಂದು ಯೋಚಿಸುತ್ತಿರುವಾಗ ಯಾರೋ ಬಾಗಿಲನ್ನು ತೆರೆಯುತ್ತಿರುವಂತೆ ಶಬ್ಧವಾಯಿತು ಆಕೆ ಒಂದು ಕ್ಷಣ ಭಯಗೊಂಡರೂ ಮರುಕ್ಷಣವೇ ಧೈರ್ಯ ತಂದುಕೊಂಡು  ಗಂಡ ಮತ್ತು ಪೊಲೀಸರಿಗೆ ಫೋನ್ ಮಾಡುತ್ತಾಳೆ ಇನ್ನೇನು ಅವರು ಬಾಗಿಲು ಮುರಿದೇ ಬಿಟ್ಟರೋ ಎಂದು ಆಕೆ ಭಯದಿಂದ  ಬೆಡ್ ರೂಮಿನ ಬಾಗಿಲು ಚಿಲಕ ಹಾಕಿ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದಳು ಅಷ್ಟರಲ್ಲಿ ಅವಳ ಮೊಬೈಲ್ಗೆ ಪೊಲೀಸರು ಇಬ್ಬರೂ ಫೋನ್  ಮಾಡಿ ಮೇಡಂ ನೀವು ಚೆನ್ನಾಗಿ ನಿದ್ದೆ ಮಾಡಿ ಭಯಬೇಡ ಕಳ್ಳರನ್ನು ನಾವು ಹಿಡಿದಿದ್ದೇವೆ ನೀವು ನಾಳೆ ಸ್ಟೇಶನ್ ಗೆ ಬಂದು ಒಂದು  ಕಂಪೈಂಟ್ ಕೊಡಿ ಎಂದು ಹೇಳಿದ್ದು ಕೇಳಿ ಆಕೆ ನಿಟ್ಟುಸಿರು ಬಿಟ್ಟಳು ಅಷ್ಟರಲ್ಲಿ ಗಂಡನೂ ಕರೆಮಾಡಿ ವಿಚಾರಿಸಿ ನಾಳೆ ಬೆಳಿಗ್ಗೆಯೇ ಆದಷ್ಟು ಬೇಗ ಬರುತ್ತೇನೆ ದೈರ್ಯದಿಂದಿರು ನಿದ್ದೆ ಮಾಡು ಎಂದು ಹೇಳಿ ಸಮಾಧಾನ ಪಡಿಸುತ್ತಾನೆ  ಆದರೆ ಆಕೆಗೆ ಬೆಳಗಿನ ಜಾವಾದ ವರೆಗೆ ನಿದ್ದೆಯೇ ಬರಲಿಲ್ಲ ಬೆಳಗಾದ ಮೇಲೆ ಆಕೆ ಭಯದಿಂದವೇ ತನ್ನ ಕೆಲಸ ಮುಗಿಸಿ ಬಾಗಿಲು ತೆಗೆದು   ಪೊಲೀಸ್ ಸ್ಟೇಶನ್ ಗೆ ಹೋಗುತ್ತಾಳೆ ತುಂಬಾ ದಿವಸದಿಂ ದ ಹಿಡಿಯಲು ಪ್ರಯತ್ನಿಸಿದರೂ ಸಿಗದೆ ಇದ್ದ ಕಳ್ಳರು  ನಿಮ್ಮಿಂದಾಗಿ ಸಿಕ್ಕಿ ಬಿದ್ದರು  ಎಂದು

ಜ್ಞಾನ ಜ್ಯೋತಿ ಕ್ಷಿಪ್ರ ಕವನ ಸ್ಪರ್ಧೆ ದತ್ತಪದ ಹಣತೆ

ಕ್ಷಿಪ್ರ ಕವನ ಸ್ಪರ್ಧೆಗಾಗಿ ದತ್ತಪದ. ..ಹಣತೆ ಜ್ಞಾನ ಜ್ಯೋತಿ ಮನದ ತಮವನು  ಕಳೆದು ಹಾಕುತ ಜ್ಞಾನ ಜ್ಯೋತಿಯ ಉರಿಸಿರಿ ಜಗದ ಜನರಿಗೆ  ಒಳಿತು ಬಯಸುತ ಹಣತೆ  ಬೆಳಗುತ ನಮಿಸಿರಿ ದೇವ ದೇವನ ಕರುಣೆಯಿರಲದು ಬಾಳ ಕಷ್ಟವು ತೊಲಗದೇ ದಿವ್ಯ ಶಕ್ತಿಯ ನಂಬಿ ಬೇಡಲು ಕರುಣೆ ತೋರದೆ ಇರುವನೇ ಮನದಿ ತುಂಬಿದ  ಅಸುರ ಭಾವವು ಉರಿದು ಹೋಗಲಿ ಬೆಳಕಲಿ ಜಗದ ಕತ್ತಲೆ  ಕಳೆದು ಬಾಳಲಿ ಸುಜ್ಞಾನದ ಬೆಳಕು ಉರಿಯಲಿ ಪ್ರೀತಿ ಕರುಣೆ ಮಾನವೀಯತೆ ತುಂಬಿ ತುಳುಕಲಿ ಎಲ್ಲೆಡೆ ನಾನು ನನ್ನದು ಎಂಬ ಭಾವವು  ತೊಳೆದು ಹೋಗಲಿ ಮೆಲ್ಲನೆ ಕಿರಿದು ಹಣತೆಯು ಬೆಳಗುವಂದದಿ ನಮ್ಮ ಬಾಳದು ಬೆಳಗಲಿ ದೇವ ಕರುಣೆಯ ಜಲವು ಸುರಿಯುತ ಜಗದ ಜನರನು ಕಾಯಲಿ ಪಂಕಜಾ.ಕೆ

ಹಗಲು ರಾತ್ರಿ

ಹಗಲು..ರಾತ್ರಿ.. ಕತ್ತಲ ತೆರೆಯನು ಸರಿಸುತ ಧರೆಗೆ ಬೆಳಕನು ಹರಡುತಬಂದನು ಬುವಿಗೆ ಬಾನಲಿ ಕಲಸಿದ ಚೆಲುವಿನ ಬಣ್ಣ ಹರಡಿತು ಎಲ್ಲೆಡೆ ರವಿತೇಜನ ಕಿರಣ ಮುಸುಕಿದ ಮಂಜಿನ ತೆರೆಯದು ಸರಿದು ಹಬ್ಬಿತು ಎಲ್ಲೆಡೆ  ಸುಂದರ ಬೆಳಗು ಅರಳುವ ಹೂಗಳ ಪರಿಮಳ ತುಂಬಿ ಮಧುವನು ಹೀರಲು ಬರುತಿವೆ ದುಂಬಿ ಎಲ್ಲೆಡೆ ತುಂಬಿತು  ಬೆಳಕಿನ ಕಿರಣ ನೆನೆಯಿತು ಮನಸು ದೇವನ ಕರುಣ ಚಿಲಿಪಿಲಿ ಗುಟ್ಟುತ ಹಾರುವ ಹಕ್ಕಿಗಳ ದಂಡು ಮನದಲಿ ತುಂಬಿತು  ಹರುಷದ  ತುಂಡು ಮನಸಿನ ತಮವನು ಕಳೆಯುತ ಬರಲು ಮೈಮನವೆಲ್ಲಾ ತುಂಬಿತು ಅಮಲು ಬಿಸಿಲಿನ ತಾಪಕೆ ಹರಿಯಿತು ಮೈಯಲಿ ಬೆವರು ತಂಪಿನ ಗಾಳಿಯು  ತಂದಿತು ಹುರುಪು  ನಿಶೆಯೊಡನಾಡಲು ತೆರಳಲು ರವಿಯು ಹರಡಿತು  ಇಳೆಯಲಿ ಕತ್ತಲ ಸೆರಗು ಕತ್ತಲ ಸೆರಗನು  ಸರಿಸುತ ಶಶಿಯು ತಾರೆಗಳನೊಡನಾಡುತ  ತುಂಬಿದ ಬೆಳಕು ಚಂದಿರ ತಂಪಲಿ ನಲಿಯಿತು ತನುವು  ಸೆಳೆಯಿತು ಬೆಳದಿಂಗಳು ರಸಿಕರ ಮನವ ಹೊಳೆಯುವ ಚಂದ್ರನ ಮೊಗವನು ಕಂಡು ಅರಳಿತು ನೈದಿಲೆ ಕೊಳದಲಿ ನಿಂದು ಪಂಕಜಾ ಕೆ.

ನನ್ನಾತ್ಮ ಬಂಧು ನವಪರ್ವ ದಲ್ಲಿ ಮೆಚ್ಚುಗೆ

ನನ್ನಾತ್ಮ ಬಂಧು ನನ್ನೆದೆಯ ಬಾಂದಳದಿ ನೆಲೆಸಿರುವೆ ನೀನು ಕನಸಲ್ಲೂ ಮನಸಲ್ಲು ತುಂಬಿರುವೆ ನೀನು ಓ ನನ್ನ ಆತ್ಮಬಂಧುವೆ ಕರುಣೆಯಲಿ ನೋಡು ಕೈ ಹಿಡಿದು ನೀ ನಡೆಸು ಈ ಬಾಳ ನೌಕೆ ಎಲ್ಲೆಲ್ಲೂ ತುಂಬಿಹುದು ಸ್ಮಶಾನ ಮೌನ ಮನದಾಳದಲ್ಲೆಲ್ಲಿಯೋ ಭೀತಿಯಾ ತಾಣ  ಕೈಮುಗಿದು ಬೇಡುವೆನು ಕರುಣೆಯಲಿ ಕಾಯು ಕಷ್ಟಗಳ ಕಡಿದೊಗೆದು ಇಷ್ಟಗಳ ನೀಡು ಅಣುರೇಣು ತೃಣ ಗಳಲಿ ನೀ ನಿರುವೆ ತಂದೆ ಬಂದೊಮ್ಮೆ ಉದ್ಧರಿಸು ಜಗವನ್ನು  ಇಂದೇ ದಟ್ಟಕಾನನದಲ್ಲಿ ದಾರಿಕಾಣದೆ ನಿಂತಿರುವೆ  ದೀಪವನು ಬೆಳಗಿಸಿ ದಾರಿ ತೊರೆಮಗೆ ತಂದೆ ಮಂಗಳ ಮೂರುತಿ ನಿನಗೆ ಶರಣೆಂಬೆ ನಾನು ಪರಿಹರಿಸು ಕಷ್ಟಗಳ  ಅನುದಿನವೂ ನೀನು ಕಾಲಕಾಲಕ್ಕೆ ಅವತರಿಸಿ ಜಗವನುದ್ದರಿಸಿದೆ ಬೇಗದಲಿ ಬಂದೀಗ ಉದ್ಧರಿಸು ನನ್ನಾತ್ಮ ಬಂಧು ಭಕ್ತಿಯಲಿ ಬೇಡಲು ಕೊಡುವೆ  ನೀನೆಲ್ಲವೂ ಸಕಲರಿಗೆ ಒಳಿತನ್ನು ನೀ ಮಾಡೆಯಾ  ಪಂಕಜಾ. ಕೆ.

ಬಡತನ. ನವಪರ್ವ ಫೌಂಡೇಷನ್ ಅಲ್ಲಿ ಅತ್ಯುತ್ತಮ ವೆಂದು ಆಯ್ಜೆ

ಚಿತ್ರಕವನ ಸ್ಪರ್ಧೆಗಾಗಿ ಬಡತನ ಬಡತನದ ಬದುಕಿನಲಿ ಹಸಿವನಿಂಗಿಸಲೆಂತು ಕೈ ಚಾಚಿ ಬೇಡುತಿರುವುದು ಮುದ್ದು ಬಾಲೆ ಪುಡಿಗಾಸು ಸಿಕ್ಕಿದರೂ ತಣಿಯದಾಗಿದೆ ಹಸಿವು ಸಂತೈಸಲೇಗೆ ತನ್ನ  ಒಡಹುಟ್ಟಿದವಳ ಆರೈಕೆ   ಇಲ್ಲದೆಯೇ ಮೈಕೈಗಳಲಿ ತುಂಬಿದೆ ಕೊಳೆ ತಬ್ಬಲಿಯು  ಈ ಕಂದಮ್ಮ ನೋಡುವರಾರು ಚಿಕ್ಕಾಸು ಸಿಕ್ಕಿದರೂ ಖುಷಿ ಪಡುವ ಜೀವಿಗಳು ಮನವಾರೆ ಹರಸುವರು ಕಾಸುಕೊಟ್ಟವರ ತಂದೆ ತಾಯಿಗಳಿಲ್ಲ ಬಂಧು ಬಳಗಗಳಿಲ್ಲ ಅಲೆಮಾರಿ ಜೀವನವು ಇವರದಾಯ್ತಲ್ಲ ಕೊಟ್ಟಿರುವ ಕಾಸಿನಲಿ ಬಡತನದ ಬೇಗೆಯಲಿ ನಲುಗುತಿವೆ ಪುಟ್ಟ ಕಂದಮ್ಮಗಳು ಕರುಣೆಯಿಂದ ಕಾಯುವ ದೇವ ಕಣ್ಣನು ಮುಚ್ಚಿರಲು ಹಸನಾದೀತೆ ಇವರ ಬಾಳು ಪಂಕಜಾ.ಕೆ

ಹನಿಕವನ 2

(ಹನಿಕವನ) ..ಸ್ನೇಹ ಸಂಗಮ ದಲ್ಲಿ ಮೆಚ್ಚುಗೆ ಅಕಾಶಕಾಯ ಕಾಣದ ಲೋಕದ ಬಾಣದ ತೆರದಲಿ ಇಣುಕುತ ಬರುತಿದೆ ಶಶಿ ಬಿಂಬ  ಕಣ್ಣನು ಮಿಟುಕಿಸಿ  ಸಣ್ಣನೆ ಹೊಳೆಯುತ ಬಣ್ಣನೆಗೆ ನಿಲುಕದೆ ಹೊಳೆಯುವವು ಪಂಕಜಾ ಕೆ 2..ದೇವ ಸ್ಮರಣೆ   ನಾಳಿನ ದಿನದಲಿ ಬಾಳಿನ ಗೊಳನು ಕಳೆಯಲು ದೇವನ ಬೇಡುತಿರಿ ಬಾಳಲಿ ನಲಿವನು ಹೇಳದೆ ಕೊಡುತಲಿ ಕಾವನು ಅವನು ಅನವರತ ಪಂಕಜಾ.ಕೆ

ಹಣ್ಣಿಮೆ ಚಂದಿರ (ಶರ ಷಟ್ಪದಿ)

ಹುಣ್ಣಿಮೆ ಚಂದಿರ  (ಶರ ಷಟ್ಪದಿ) ಹುಣ್ಣಿಮೆ ಬರುತಲಿ ತಣ್ಣನೆ ಹೊಳೆಯುತ ಚಿಣ್ಣರ ಮನವನು ಸೆಳೆಯುವನು ಸಣ್ಣಗೆ ಬೆಳೆಯುತ ಬಣ್ಣವ ಬಳಿಯದೆ ಕಣ್ಣಿಗೆ ತಂಪನು ಕೊಡುತಿಹನು ಮೋಡಗಳೆಡೆಯಲಿ ಕಾಡಿನ  ಬದಿಯಲಿ ಹಾಡಿತು  ಹಕ್ಕಿಯು ರಾಗದಲಿ ಹಾಡುವ ಹಕ್ಕಿಯ ನೋಡುತಲಿರಲದು ಕಾಡಿತು ನೆನಪದು ಮನದಲ್ಲಿ ಬೆರಗನು ತುಂಬುತ ಕೊರಗನು ಕಳೆಯುತ ಭರದಲಿ  ಸಾಗುವ ಬಾನಿನಲಿ ಸರಿಯಿತು ಮೋಡವು ಬಿರಿಯಿತು ಬೆಳಕದು ಹರಿಯಿತು ಜಗದಲಿ  ಹೊಂಬೆಳಕು ಪಂಕಜಾ.ಕೆ

ನಾಟಕ ರಚನೆ ಕೊರೊನಾ ಜಾಗೃತಿ ಸಾಹಿತ್ಯ ಸಂಕ್ರಾಂತಿ

ಸಾಹಿತ್ಯ ಸಂಕ್ರಾಂತಿ ಸ್ಪರ್ಧೆಗಾಗಿ  ನಾಟಕ ರಚನೆ  ಕೊರೊನಾ ಜಾಗೃತಿ ದೃಶ್ಯ .1 ವಿಮಾನ ನಿಲ್ದಾಣದ ಹೊರಗೆ  ವೈಭವ್ ನ ತಂದೆ ಸಂಕೇತ್ ತಾಯಿ  ಸರ್ವಾಣಿಹಾಗೂ ಇನ್ನೊಂದು ಕಡೆ ರಾಜುವಿನ  ತಂದೆ  ಮಲ್ಲೇಶ್ ತಾಯಿ. ದುರ್ಗಾ  ಕಾತರದಿಂದ ಕಾಯುತ್ತಿರುವುದು ಸಂಕೇತ್. ...ಈಗ ಎಲ್ಲಾ ಕಡೆ ಕೊರೊನಾ ಇರುವುದರಿಂದ ನಮ್ಮ ಮಗ ವೈಭವ್ ಆದಷ್ಟು ಬೇಗ ಊರಿಗೆ ಬಂದರೆ ಒಳ್ಳೆಯದು ಸರ್ವಾಣಿ...ಹೌದು ನಮಗೆ ಇರುವವ ಒಬ್ಬ ಮಗ ದೇವರು ಅವನನ್ನು ಚೆನ್ನಾಗಿ ಇಟ್ಟಿರಲಿ ಯಾವಾಗ ಅವನನ್ನು ನೋಡುವೇನೋ ಎಂದು ಮನಸು ತುಡಿಯುತ್ತಿದೆ ಅಷ್ಟರಲ್ಲಿ ವಿಮಾನ ನಿಲ್ದಾಣದಿಂದ ವೈಭವ್ ಹೊರಗೆ ಬರುವುದು ಕಂಡು ಸಂಕೇತ್..ಆಗೋ ನಿನ್ನ ಮಗ ಬಂದ ಇನ್ನು ನೀನು ಉಂಟು ಅವನು ಉಂಟು ಈ ಪಾಪದ ಪ್ರಾಣಿಯ ನೆನಪು  ಆಗುತ್ತದೋ ಇಲ್ಲವೋ  (ನಗು) ಸರ್ವಾಣಿ..ಹೋಗಿ ನೀವೊಬ್ಬರು ಇಲ್ಲಿಯೂ ನನ್ನನ್ನು ಕೆಣಕದಿದ್ದರೆ ನಿಮಗೆ ಆಗೋಲ್ಲವೇ ( ಹುಸಿ ಮುನಿಸಿನಲ್ಲಿ) ಸಂಕೇತ್..ಹತ್ತಿರ ಬಂದು ಬಾ ಮಗನೇ  (ಕೈ ಚಾಚುತ್ತಾರೆ ಹಸ್ತಲಾಘವಕ್ಕಾಗಿ) ಸಂಕೇತ್  (ದೂರದಿಂದವೇ) ಅಮ್ಮ ಅಪ್ಪ ನೀವಿಬ್ಬರೂ ನಿಮ್ಮ ಕಾರಲ್ಲಿ ಹೊರಡಿ  ನಾನು ಸ್ವಲ್ಪ ಕೆಲಸ ಮುಗಿಸಿ ಬರುತ್ತೇನೆ ಸರ್ವಾಣಿ..ಏನು ಕೆಲಸವೋ ಮಗ ನಾವು ಕಾಯುತ್ತೇವೆ ಒಟ್ಟಿಗೆ ಹೋಗೋಣ  ಸಂಕೇತ್..ಹೌದು ಮಗು ನಿನಗಾಗಿ ಅಮ್ಮ ಎಷ್ಟು ಹೊತ್ತಿನಿಂದ ಕಾಯುತ್ತಿದ್ದಾರೆ ನೆನಪಿದೆಯೇ  ಹತ್ತಿರ ಬಾ ಅಮ್ಮನನ್ನು ತಬ್ಬಿಕೊ ವೈಭವ್.ಅಪ್ಪಾ ನಾನಿನ್ನು ಈಗ ತಾನೇ ಬರುತ್ತಾ ಇದ್ದೇನೆ ಅದೆಲ್ಲಾ ಮ

ಚುಟುಕು 3

(ಚುಟುಕು...) ಬೇವು..ಮಾವು ಬಾಳಿನಲಿ ಬರಬಹುದು ಕಷ್ಟ ನಷ್ಟಗಳೆಂಬ ಬೇವು ಸಹನೆಯಲಿ ಇದ್ದರೆ ಪಡೆಯಬಹುದು ಸಿಹಿ ಮಾವು 2. ಗೆಲುವು ಪ್ರೇಮ ಪಕ್ಷಿಗಳಂತೆ ಇರಬೇಕು ಎಂದೆಂದೂ  ನಾವು ಕಷ್ಟ ಸುಖಗಳಲಿ  ಜತೆಯಾಗಿಸಾಗುತಲಿದ್ದರೆ ಗೆಲುವು 3..ಕರುಳು ಅಯಾಸ  ಪರಿಹಾರಕ್ಕೆ ಬೇಕು ಮರಗಿಡಗಳ ನೆರಳು ಕುಸಿದಾಗ ಸಾಂತ್ವನಿಸಲು ಬೇಕು ಮಮತೆ ತುಂಬಿದ ಕರುಳು ಪಂಕಜಾ.ಕೆ.

ಚುಟುಕು ಹೊಸವರ್ಷ

ಚುಟುಕು ಹೊಸವರ್ಷ ಹೊಸವರ್ಷದ ಪ್ರಾರಂಭ ಯುಗಾದಿ ಹೊಸ ಪರ್ವಕ್ಕೆ  ಇಂದಿನಿಂದ ನಾಂದಿ ಬಿಡಬೇಕು ಹಳೆಯ ದ್ವೇಷ ಕೋಪತಾಪ ಕಳೆಯಬೇಕು ಮಾನವನಿಗೆ ಅಂಟಿದ  ಪಾಪ ಶಾಪ ಪಂಕಜಾ.ಕೆ

ಮಾಡಿದ ಪಾಪ ಹನಿಕವನ

,ಮಾಡಿದ ಪಾಪ (ಹನಿಕವನ) ದತ್ತಪದ ದೂರದೃಷ್ಟಿ ದೂರ ದೃಷ್ಟಿಯನಿಟ್ಟು  ಹಸಿರು ಗಿಡಗಳನೆಟ್ಟು ನೀರ ಉಳಿಸುತಲಿದ್ದರೆ ಬರುತಿತ್ತೆ ನಮಗೆ ಈ ಸ್ಥಿತಿ ಕಾಡು ಗುಡ್ಡ ಗಳ. ಕಡಿದು ನಾಡಾಗಿಸಿದ ಮನುಜ ಮಾಡಿದ ಪಾಪದ.ಫಲಕೆ ಕೊರೊನಾದಂತ ಮಾರಕ  ರೋಗಜಗಕೆ  ಪಂಕಜಾ.ಕೆ

ಮೊಸದಾಟ ನ್ಯಾನೊ ಕಥೆ

ಮೊಸದಾಟ (ನ್ಯಾನೊ ಕಥೆ) ಧೀರಜನನ್ನು ನಂಬಿ ಕೆಲಸ ಸಿಗುವ ಆಸೆಗೆ ಮನೆಯಲ್ಲೂ ತಿಳಿಸದೆ ಬಂದ ಸಂಜೀವಿಗೆ ಟ್ರೈನ್ ನಲ್ಲಿ ಆತನನ್ನು ಕಂಡ ಹುಡುಗಿ ಕೆನ್ನೆಗೆ ಬಿಗಿದು ಪೊಲೀಸರನ್ನು ಕರೆದಾಗಲೇ   ತಾನೆಂಥ ಮೋಸದ ಜಾಲದಲ್ಲಿ ಬಿದ್ದಿದ್ದೆ ಎನ್ನುವ ಅರಿವಾಯಿತು ದೇವರು ದೊಡ್ಡವನು ಪಂಕಜಾ.ಕೆ.

ಪ ದಿಂದ ಪ:ಹರೆ

ಪ:--ಪಹರೆ ಪರಿಶುದ್ಧ ಭಕ್ತಿಯಲಿ ಪಾರ್ವತಿಯ ಸ್ತುತಿಸುತ್ತ ಪಿತೃಗಳ ಸೇವೆಯನು ಮಾಡಬೇಕು ಪೀಡಿಸುವ ಜನರಿಗೆ ಪುಕ್ಕಟೆ ಸಲಹೆಯಿದು ಪೂಜ್ಯರನು ಗೌರವಿಸಿದರೆ ಪೃಥ್ವಿಶನ ದಯೆಯಿಂದ ಒಳಿತಾಗುವುದು ಪೆದ್ದುತನ ತೋರದೆಯೇ ಪೇಚಿನಲಿ ಸಿಕ್ಕದೆಯೇ ಪೈಪೋಟಿಯಲ್ಲಿ ಜೀವನ ಕಳೆಯಬೇಕು ಪೊಗಳಿಕೆಗೆ ಬಲಿಯಾಗದೆ ಪೋಷಣೆಯ ಮಾಡುತ್ತ ಪೌರ್ಣಮಿಯ ಬೆಳಕಲ್ಲಿ ಪಂಕಜಾಳ  ಬದುಕಿಗೆ ಫ:ರೆಯನಿತ್ತು   ನೀ ಕಾಯಬೇಕು ಪಂಕಜಾ ಕೆ.

ವಸಂತಮಾಸ

ವಸಂತ ಮಾಸ ವಸಂತಮಾಸವು ಬಂದಿಹುದು ಹರುಷದ ಹೊನಲನು ತಂದಿಹುದು ಚೈತ್ರದ ಚಿಗುರು  ಎಲ್ಲೆಡೆ ಹಬ್ಬಿಹುದು ಶಾರ್ವರಿ ಸಂವತ್ಸರ ಬಂದಿಹುದು ಮಾಮರದಲ್ಲಿ ತುಂಬಿದೆ ಚಿಗುರು ಹೂಗಳ ಅರಳಿಸಿ ನಿಂತಿದೆ ಬೇವು ಹೊಸವರ್ಷದಾಗಮನಕೆ ತೆರೆದಿದೆ ಪ್ರಕೃತಿ ಕಳೆಯಲಿ ಎಲ್ಲರ ಮನಸಿನ ವಿಕೃತಿ ಹಬ್ಬಿದೆ ಎಲ್ಲೆಡೆ ಕೊರೊನಾ ಭೀತಿ ಕಳೆಯಲಿ ಶಾರ್ವರಿ ಮನಸಿನ ಭೀತಿ ಮನೆಯಲಿ ಕುಳಿತೆ ಹಬ್ಬವು ಇರಲಿ ಕೊರೊನಾ ರೋಗವು ಹರಡದೆ ಇರಲಿ ಬೇವು ಬೆಲ್ಲದ ಮಿಶ್ರಣ ಸವಿಯೋಣ ಎಲ್ಲರಿಗೆ  ಶುಭವನು ಹಾರೈಸೋಣ ಸುಖ ದುಃಖಗಳ  ಸಮಾನ ಕಾಣೋಣ  ದೇವರ ನೆನೆಯುತ ಕಾಣದ ವೈರಿಯ ನೂಕೋಣ ಪಂಕಜಾ.ಕೆ

ಒಲವೇ ಜೀವನ ಭಾವಗೀತೆ ಕಾವ್ಯಾಂತರಂಗ 29 3 2020 ತೃತೀಯ

ಕಾವ್ಯಾಂತರಂಗ ಸ್ಪರ್ಧೆಗಾಗಿ ಒಲವೇ ಜೀವನ (ಭಾವಗೀತೆ) ಈ ಭೂಮಿ ಈ ಬಾನು ನಮಗಾಗಿದೆ ಒಂದಾಗಿ ನಲಿಯಲು ಸಮಯ ಬಂದಿದೆ/ ಬಾನಿನಲಿ ಚಂದಿರನು ನಗುತ್ತಿರುವನು ಬೆಳದಿಂಗಳ ಮಳೆಯನ್ನು ಸುರಿಸುತಿಹನು ಮಾರುತನು ಬೀಸುತಿಹನು ತಂಗಾಳಿಯ ಒಲವರಸ  ಸವಿಯುತ್ತಾ ಮೈ ಮರೆಯುವ ಹೂವೊಂದು ಅರಳಿ. ನಗುತಿರುವುದು ದುಂಬಿಗಳ  ಆಕರ್ಷಿಸುತ ತಲೆದೂಗುವುದು ಅರಳಿರುವ ಮಲ್ಲಿಗೆಯ  ಪರಿಮಳವು ಮೈಮನಕೆ ತುಂಬುತಿದೆ ಉಲ್ಲಾಸವು ಮಧುಮಾಸ ಬಂದಿಹುದು ಬಾ ನಲ್ಲನೆ ತನಿರಸವ ಉಣಿಸೊಮ್ಮೆ ನೀ ಸುಮ್ಮನೆ ಬಾಳೊಂದು ನಂದನವನವಾಗಿದೆ ನಾವಿಬ್ಬರೊಂದಾಗಿ ನಲಿಯೋಣವೇ ಪಂಕಜಾ.ಕೆ

ಬಾಳ ಪಯಣ (ಸ್ನೇಹ ಸಂಗಮ 2.4.2020)

ಬಾಳ ಪಯಣ ಬಾಳ ಪಯಣದ ತಿರುವಿನಲಿ ನೀನಂದು ಸಿಕ್ಕೆ ಒಲವ ಸುರಿಸುತ ಬರಿದೆ ನನ್ನೆಡೆಗೆ ನಕ್ಕೆ ಮೈಮನವು ಹೊಸತನದ ಅಲೆಯಲ್ಲಿ ತೇಲಾಡಿತು ಮದುರಾನುಭೂತಿಯಲಿ ತನುಮನವು ಓಲಾಡಿತು ನಸು ನಗುವ ಬೀರುತ್ತ ನೀ ನನ್ನ ನೋಡಿದಾಗ ನಾಚಿಕೆಯ ತೆರೆಯೊಂದು ಅಲ್ಲಿ ಸರಿದಾಡಿತು ಬಾಳಿನಾಗಸದಲ್ಲಿ ಬೆಳ್ಳಿ ಚಂದಿರನಂತೆ ನೀಬಂದೆ ಮನದಂಗಳದಲಿ ಚೆಲು ಕನಸ ನೀ ಬಿತ್ತಿದೆ ಮಿತವಾದ ಮಾತಿನಲಿ ಹಿತವಾದ ಒಲವಿನಲಿ  ಮನವನ್ನು  ನಿನ್ನೆಡೆಗೆ ಸೆಳೆದೊಯ್ದೆಯಲ್ಲ ಸಮರಸವ ಜೀವನವು  ನೆಮ್ಮದಿಯ ತಂದಿರಲು ಮನವಿಂದು ಸಂತಸದ ಗೂಡಾಯಿತು ಪಂಕಜಾ.ಕೆ

ಗಜಲ್. ಗಾಲಿ ಕಳಚಿದ ಗಾಡಿ ಕಾವ್ಯಾಂತರಂಗ ಸ್ಪರ್ಧೆಯಲ್ಲಿ ಪ್ರಥಮ

ದತ್ತಪದ....ಗಾಲಿ ಕಳಚಿದ ಗಾಡಿ ಗಜಲ್ ನವನವೀನ  ಕನಸುಗಳ ಹೊತ್ತು ಬಂದಿರುವೆ ನಿನಗಾಗಿ ನವೋಲ್ಲಾಸದಿ ನಲಿಯುವ ಕ್ಷಣಕೆ ಕಾದಿರುವೆ ನಿನಗಾಗಿ ಮದುರಸದ ಬಟ್ಟಲು ನನ್ನೊಡಲ ತುಂಬಾ ತುಂಬಿದೆ ಅನುರಾಗವ ನಿರೀಕ್ಷಿಸುತ  ನಿಂತಿರುವೆ ನಿನಗಾಗಿ  ಗಾಲಿ   ಕಳಚಿದ ಗಾಡಿಯಂತಾಗಿದೆ  ಜೀವನ ಬಾಳಿನಲ್ಲಿ ಬಂದ  ಕಷ್ಟಗಳ ಸಹಿಸಿರುವೆ ನಿನಗಾಗಿ ಬದುಕ ಬಂಡಿಯ ಎಳೆಯಲು ನೀನು ಬರುವೆಯಲ್ಲವೇ ಮುರುಕು ಮಂಟಪದಲ್ಲಿ  ಕುಳಿತಿರುವೆ  ನಿನಗಾಗಿ ಜೀವನಕ್ಕೆ ಒಂದು  ಗುರಿ ಬೇಕಲ್ಲವೇ  ಪಂಕಜಾ ಛಲದಿಂದ ಮುನ್ನಡೆದು ಬದುಕ ಗೆಲ್ಲುವೆ ನಿನಗಾಗಿ ಪಂಕಜಾ.ಕೆ.

ಬೇಡಿಕೆ. ಭಕ್ತಿಗೀತೆ

ಬೇಡಿಕೆ ನಿನ್ನ ನಾಮ ಸ್ಮರಣೆ ನಿರುತ ಮನದಲಿರಲು ಎನಿತು ಧನ್ಯಳೋ ಹರಿಯೇ ನಂಬಿದೆ ನಿನ್ನ ಹೇ ಮುರಾರಿಯೇ ಮನೆಯಲ್ಲೇ ಇರುವೆ ಮನತುಂಬ ನೀ ನಿಂದು ಅನುದಿನವು  ಪಾಮರಳ  ನೀ ಕಾಯೋ ಹರಿಯೇ ಊರೆಲ್ಲ ಸ್ಮಶಾನವಾಗಿದೆ ಜನರು ಭೀತಿಯಲಿ ನಲುಗುತಿಹರು ಬಂದ ಕಷ್ಟವು ಸರಾಗ ಕಳೆದು ಬದುಕು ಪಾವನಗೊಳಿಸು ಹರಿಯೇ ಅನುದಿನವೂ ಕೈ ಮುಗಿದು ಬೇಡುವೆ  ಕಳೆದು ಬಿಡು ಮನದ ಭಯವ ತುಂಬಿ ಬಿಡು ಜೀವನೋತ್ಸಾಹವ ಬಂದಂತೆ ಹೊರಟು ಹೋಗಲಿ ಮಾರಿ ಕೊರೊನ ಬೇಡುವೆನು ಹೇ ಕರುಣಾಕರ ನೀನಲ್ಲದೆ ಅನ್ಯ ಗತಿಯಿಲ್ಲ ತಂದೆ ನೊಂದವರ ಉದ್ಧರಿಸಿ ಸಲಹು  ಕರುಣೆಯಲಿ  ಕಾಯೋ ಮೃತ್ಯುಂಜಯ ಪಂಕಜಾ.ಕೆ

ಜೀವನ ಶರ ಷಟ್ಪದಿ

ಜೀವನ (ಶರ ಷಟ್ಪದಿ) ನನ್ನಯ ಬಾಳದು ನಿನ್ನಯ ಜತೆಯಲಿ ಹೊನ್ನಿನ ತೆರದಲಿ ಹೊಳೆಯುವುದು ಬಣ್ಣವು *ತುಂಬಿದ*  ಹಣ್ಣಿನ ತೆರದಲಿ ಮುನ್ನಿನ ದಿನಗಳು ಕಳೆಯುವುದು ಕಾಡುಗಳೆಡೆಯಲಿ ನಾಡಿನ ಬದಿಯಲಿ ಬೀಡಲಿ ಜೀವನ ಸಾಗುವದು ಕಾಡಿದ ನೆನಪನು ಬಾಡಲು ಬಿಡುತಲಿ *ಹಾಡುತ* ದಿನಗಳು *ಕಳೆಯುವುವು*   ಪ್ರೀತಿಯ ತೋರುತ ನೀತಿಯ *ಕಲಿಯುತ*  ಭೀತಿಯ *ಕಾಣದೆ* ಕಳೆಯುವುದು   ಖ್ಯಾತಿಯ ಬಯಸದೆ ಮಾತಿಗೆ ತಪ್ಪದ ರೀತಿಯ ನಡೆಯಲಿ ಸಾಗುವರು ಬಣ್ಣನೆ ಮಾಡುತ  ಸಣ್ಣಗೆ ನಗುತಲಿ ಕಣ್ಣಲಿ ಒಲವನು ಸುರಿಸುವರು   ಹೆಣ್ಣಿನ ಮನವನು ತಣ್ಣಗೆ ತಿಳಿಯುತ ಬಣ್ಣವ ಬಾಳಿಗೆ ತುಂಬುವರು ನಾಳೆಯ ದಿನದಲಿ ಬಾಳಿನ ನೆಮ್ಮದಿ ಸಾಲವ ಮಾಡದೆ ದುಡಿಯುವರು ಸೋಲಿನ ದಿನಗಳು ಕಾಲನ  ತೆರದಲಿ ಬಾಳನು ಕಾಡಲು ಸುಖವಿಹುದೆ ಪಂಕಜಾ.ಕೆ

ನಾರಿಕೇಳ ಚಿತ್ರಕವನ ಕಾವ್ಯಾಕುಟ ಬಳಗದಲ್ಲಿ ಉತ್ತಮ 30..3.2020

ನಾರಿಕೇಳ ಭೂಲೋಕದ ಕಲ್ಪವೃಕ್ಷ ನೀನಾದೆಯೇ ನಿನಗಿರುವ ಹೆಸರದು ಓ ನಾರಿಕೇಳ   ಮುಕ್ಕೋಟಿ ದೇವರು ನೆಲೆನಿಂತಿಹರು ಬಿರುಗಾಳಿ ಬಂದರೂ ಅಲ್ಲಾಡದು ಮದುವೆ ಮಂಟಪಕೆ  ನಿನ್ನದೇ ಗರಿ ದೇವರ ಸೇವೆಗೆ ಬೇಕು ನಿನ್ನದೇ ಫಲ ತಂಪಾದ ಪಾನೀಯ ಅಮೃತವು ರುಚಿಯಾದ ಊಟಕ್ಕೆ ಬೇಕಲ್ಲ ಕಾಯಿ ತುರಿ ಗೂಡಿಸಲಾ ಮನೆಗಳಿಗೆ ಸಾಕಲ್ಲ ನಿನ್ನ ಗರಿ  ಬಡವನ ದಾರಿಗೆ ದಾರಿ ದೀಪ ನೀ ಬಿಸಿನೀರ ಸ್ನಾನಕ್ಕೆ  ಕಟ್ಟಿಗೆಯಾದೆ ಸ್ವಚ್ಛತೆಗೆ ನೀನಾದೆ ಪೊರಕೆಯಾಗಿ ಬೇಕಿದ್ದರೆ ಮಾಡಬಹುದಲ್ಲ ಹುರಿ ಹಗ್ಗ ಚಳಿಗಾಲಕ್ಕೆ ಉರುವಲು ನೀನಾದೆ ತಂಪಾದ ಪಾನೀಯ ಮುದ ತಂದಿದೆ ದೇವಲೋಕದ ಅಮೃತಕ್ಕೆ ಸಮನಾಗಿದೆ ಬೇಸಿಗೆಯ ಬಿಸಿಲು ಮೈ ಸುಡುತಿರೆ ಆಮೃತದ ಒಡಲು ಬಾಯರಿಕೆಯ ತಣಿಸಿದೆ ತಲೆಗೆರವ ತೈಲವು ತಂಪಾಗಿದೆ ಕಣ್ತುಂಬ ನಿದ್ದೆ ಯನು ಅದು ಕೊಟ್ಟಿದೆ ನೀರನ್ನು ಮಾತ್ರವೇ ನಾ ಕೊಟ್ಟರೂ ನೀಕೊಡುವೆ ಸಕಲವನು  ಕಲ್ಪವೃಕ್ಷವೇ ಪಂಕಜಾ ಕೆ

ಗೆಳೆತನ 30.3.2020

ಗೆಳೆತನ ಎಲ್ಲಿಯೋ  ಹುಟ್ಟಿ ಎಲ್ಲಿಯೋ ಬೆಳೆದು ಜತೆಯಾದೆ ನೀ ನನ್ನ ಕನಸುಗಳ ಸೆಳೆದು ನೋಯುವ ಮನಸಿಗೆ  ತಂಗಾಳಿಯಾದೆ ನೀನು ನಿನ್ನೊಲವ ಸಾಂತ್ವನಕೆ ಮೈಮರೆತೆ ನಾನು ಏಕಾಂತದ ಒಂಟಿತನಕೆ ಜತೆಯಾದೆಯಲ್ಲ ಕನಸಿನ ಗೋಪುರವ ನೀ ಕಟ್ಟಿದೆಯಲ್ಲ ಹೊಸತನವ  ತುಂಬುತಾ ಮನಸೂರೆಗೊಂಡೆ ನಿನ್ನ ಸ್ನೇಹವೆಂಬ ಅಮೃತದ ಜಲದಲ್ಲಿ ನಾ ಮುದಗೊಂಡೆ ಮುಂಗಾರು ಮಳೆಯಂತೆ ತಂಪು ನಿನ್ನ ಸ್ನೇಹ ನನ್ನೆದೆಯ ತುಂಬಾ  ಅನುರಣಿಸಿದೆ ನಿನ್ನ ಸ್ನೇಹ ಮಧುರಾನುಭೂತಿಯಲಿ ಮುಳುಗಿಸಿದೆ ನಿನ್ನ ಸ್ನೇಹ ಕತ್ತಲೆಯ ಬಾಳಿಗೆ ಪೂರ್ಣ ಚಂದಿರನ ತಂಪು ನಿನ್ನಸ್ನೇಹ ಗೆಳೆತನವೆಂಬ ದೋಣಿಯಲಿರುವ ತಂಪು ಬಾಳದೋಣಿಯಲೂ ಅದರದೇ ಇಂಪು ಕಷ್ಟ ಸುಖ ಎಲ್ಲಕ್ಕೂ ಜತೆಯಾಗುವ ನಂಟು ಬಿಡಿಸಲಾರದ ಬಂಧ ಸ್ನೇಹದಾ ಗಂಟು ಕಂಡ ಕನಸಿಗೆ ನೀಹಿಡಿದೆ ಕನ್ನಡಿ ನೊಂದ ಮನಸಿಗೆ ನೀ ಬರೆದೆ ಮುನ್ನುಡಿ ನಗುವ ಹಿಂದಿನ ನೋವ ಮರೆಸುತಿದೆ ಸ್ನೇಹ ಕತ್ತಲೆಯ ಹಾದಿಗೆ  ಮುಂಬೆಳಕು ಸ್ನೇಹ ಪಂಕಜಾ ಕೆ.

ಮುಂಜಾನೆ (ನವಪರ್ವ ಫೌಂಡೇಷನ್ ಬಳಗ ದಲ್ಲಿ ಅತ್ಯುತ್ತಮ ಸ್ಥಾನ)

ಮುಂಜಾನೆ ಬಾನಲಿ ಚೆಲುವಿನ ಚಿತ್ತಾರವ ಬಿಡಿಸಿ ಓಡುತ ಬಂದನು ಮೂಡಣದಿ ರವಿತೇಜ ಬೆಳಗಿನ ಬೆರಗನು ನೋಡುವ ಬಾಲೆ ಪ್ರಕೃತಿಯ ಸೊಬಗಿದು ಚಂದದ ಲೀಲೆ ಬಾಂದಳದಲ್ಲಿ  ಸೂರ್ಯ ಚಂದ್ರರ ಆಟ ಆಗಸ ತುಂಬಾ ಹರಡಿದ ಬಣ್ಣದ ನೋಟ ಮಾಗಿಯ ಚಳಿಗಾಳಿಯು ಬೀಸುತಿದೆ ಇಬ್ಬನಿ ಮುತ್ತಿನ ತೆರದಲಿ ಸುರಿಯುತಿದೆ ಹಸಿರ ಹುಲ್ಲಿನ ಹಾಸಿಗೆಯಲಿ ಮುತ್ತಿನ ಮಣಿ ರವಿತೇಜನ ಸ್ಪರ್ಶಕೆ ನಾಚುವ ಗಣಿ ಭೂರಮೆಯಲಿ ಬಿರಿದರಳಿದೆ ಸೌಂದರ್ಯ ಕಾಣುವ ಮನದಲಿ  ಏನೋ ಆನಂದ ಮೌನಗೀತೆಯ ನುಡಿಸುತ ನಿಂತಿದೆ ಪ್ರಕೃತಿ ಕಳೆಯುತ್ತಿದೆ ಮೈಮನದ ವಿಕೃತಿ ಬೆಳಗಿನ ಬೆರಗಿನಲಿ ಮೈತುಂಬಿದೆ   ಪ್ರಕೃತಿಯ ರಮಣೀಯತೆ ಸವಿಯುವ  ಕಣ್ಣಲ್ಲಿದೆ ಮನ ಮೋಹಕತೆ ಪಂಕಜಾ.ಕೆ.

ದುರಾಶೆ (ಸ್ನೇಹ ಸಂಗಮ 3ರ್ಡ್. ಪ್ರೈಜ್

ದುರಾಶೆ. (ದತ್ತಪದ ಭಗ್ನ) ಮೂಡಣದ ಬಾನಿನಲಿ ರವಿಮೂಡುತಿರಲು ಬಾನಿನಂಗಳದಲ್ಲಿ ಕಲಸಿದೆ ಚೆಲು ರಂಗಿನೆಸಳು ಹಕ್ಕಿಗಳ ಇಂಚರದಲಿ ಮೈ ಮರೆತಿರಲು ಹಿತವಾದ ತಂಗಾಳಿ ತರುತಿದೆ ಮನಕೆ ನಲಿವು ಅರಳಿರುವ ಹೂಗಳ ಘಮಲು ತನುಮನಕೆ ತುಂಬುತಿದೆ ಅಮಲು ಜುಳು ಜುಳು ಹರಿಯುವ ನದಿಯ ನೀರು ಕೊರೆದಿಹನು ಮನುಜ ಎಲ್ಲೆಡೆಯೂ ಬೋರು ಭಗ್ನಗೊಂಡಿದೆ ಭೂತಾಯಿ ಒಡಲು ಕ್ರೂರಿ ಮನುಜನ ದುರಾಶೆಗೆ ಆಗಿದೆ ಬಟ್ಟಬಯಲು ಉಸಿರಿಗೆ ಹಸಿರಾಗಿತ್ತು ಅಂದು ಆ ಕಾಡು ಕಟ್ಟಿರುವನು ಇಂದು ಕಾಂಕ್ರೀಟ್ ಕಾಡು ಮಲಿನವಾಗಿಹುದು ಪ್ರಕೃತಿ ಇಂದು ಬದುಕದಾರಿಯಲಿ ತುಂಬಿದೆ ಮುಳ್ಳು ಒಂದು  ಭೂತಾಯಿಯ ಸಹನೆ ಕಟ್ಟೆಯೊಡೆದಿದೆ ಮನುಜನ ದುರಾಶೆಗೆ ತಡೆಯೊಡ್ಡಿದೆ ಇನ್ನಾದರೂ ಎಚ್ಚೆತ್ತುಕೊ ಮನುಜ ಪ್ರಕೃತಿ ಉಳಿವಿನಲಿ ನಿನ್ನ ಉಳಿವು ಇದು ನಿಜ ಪಂಕಜಾ.ಕೆ

ರೈತ (ಶರ ಷಟ್ಪಧಿ)

ರೈತ..(ಶರ ಷಟ್ಪದಿ) ಇಷ್ಟದ ಕಾಯಕ ನಿಷ್ಠೆಯಲಿರುತಲಿ ಕಷ್ಟವ ಗಣಿಸದೆ  ಮಾಡುವನು ಇಷ್ಟರ ಜತೆಯಲಿ ದುಷ್ಟರ ಕೆಡವುತ ನಷ್ಟವ ನೋಡದೆ ದುಡಿಯುವನು ಹೊಲವನು ವುಳುತಲಿ ಬೆಳೆಯನು ಬೆಳೆಯಲು ಗೆಳೆಯನ ಜತೆಯಲಿ  ದುಡಿಯುವನು ಕಳೆಯನು ತೆಗೆಯುತ ಬಳಗದ ಜತೆಯಲಿ ನಲಿಯುತ ದಿನಗಳ ಕಳೆಯುವನು ಮಣ್ಣಿನ ಜತೆಯಲಿ ಹೊನ್ನಿನ ತೆರದಲಿ ಮುನ್ನಿನ ದಿನಗಳ ಕಳೆಯುವನು ಕಣ್ಣಲಿ ನೋಡುತ ಮಣ್ಣಲಿ ದುಡಿಯುತ ತಣ್ಣನೆ ಕಾಯಕ ಮಾಡುವನು ಹೊತ್ತಿನ ತುತ್ತಿಗೆ ಬಿತ್ತಿದ ಬೆಳೆಯನು ಕತ್ತಿಲಿ ಕೊಯ್ಯುತ ನಲಿಯುವನು ಗತ್ತನು ತೋರದೆ ಕತ್ತನುಯೆತ್ತುತ ಕತ್ತಲೆ  ಕೊಳೆಯನು ತೊಳೆಯುವನು ಪಂಕಜಾ.ಕೆ.