Skip to main content

Posts

Showing posts from January, 2020

ಗಜಲ್ ಹುಚ್ಚು ಬಗ್ಗೆ

ಗಜಲ್   (ಹುಚ್ಚು ಬಗ್ಗೆ) ಮೂಡಣದಲಿ ಬೆಳಕಿನ ಕಿರಣಗಳು ಹರಡಿದೆ ನಲ್ಲ ಬಾನಿನಲಿ ಚೆಲು ಬಣ್ಣಗಳು  ಕಲಸಿದೆ ನಲ್ಲ ಪ್ರಕೃತಿಯ ಮಡಿಲಿನಲಿ ನಲಿದಾಡುವ ಹುಚ್ಚು ಆಶೆ ಮನದಲ್ಲಿ ಭೃಂಗಗಳ ಝೇಂಕಾರ ತುಂಬಿದೆ ನಲ್ಲ ಬಣ್ಣ ಬಣ್ಣದ ದುಂಬಿಗಳು ಹೂಗಳ ಸುತ್ತ ಹಾರಡುತಿವೆ ಹಸಿರು ಸೆರಗು ಹಾಸಿದ ಭೂರಮೆ ಕಣ್ಣ ಸೆಳೆದಿದೆ   ನಲ್ಲ ವಸುಂದರೆಯ ಒಡಲಿನಲಿ ಎಷ್ಟೆಲ್ಲಾ  ವೈಚಿತ್ರವಿದೆ ಅರಿಯುವ  ಮನಸು ಬೇಕಿದೆ  ನಲ್ಲ ಇಬ್ಬನಿಯ ಸ್ಪರ್ಶ ಹಿತಕೊಡುತ್ತಿದೆಯಲ್ಲ ಪಂಕಜಾ ಚಳಿಯು ಮೈ ಮನವ ಕೊರೆಯುತಿದೆ  ನಲ್ಲ ಪಂಕಜಾ.ಕೆ.

ಒಲವ ಗಾನ ಭಾವಗೀತೆ

ಕಾವ್ಯಕೂಟ ವಾಟ್ಸಪ್ ಬಳಗದಲ್ಲಿ  ಪ್ರಥಮ ಸ್ಥಾನ  ಪಡೆದ ನನ್ನ ಭಾವಗೀತೆ  ದತ್ತಪದ ಮನದಾಸೆ ಒಲವ ಗಾನ. (ಭಾವಗೀತೆ) ನಿನ್ನ ಒಲವ ಗಾನಕೆ ಮೈ ಮರೆತು ಎದೆ ತುಂಬಿದೆ ನಿನ್ನಲ್ಲೇ ಒಂದಾಗುವ ಆಸೆ ನನ್ನಲ್ಲೆಕೋ ಬಂದಿದೆ l ಪl ಮನವಿಂದು ಹಕ್ಕಿಯಾಗಿ ಹಾರಾಡಿದೆ ನೂರೊಂದು ನೆನಪುಗಳು ಇಂದೇಕೋ ಕಾಡಿದೆ ಬಾಳೊಂದು ಸುಂದರ ವನವಾಗಿದೆ ನೀಜತೆಯಲಿರಲು ಹೂವಿನ ಹಾಸಿಗೆಯಾಗಿದೆ ನನ್ನ ಮನದಾಸೆ ಹೇಳಲೇನು ನಲ್ಲ ನೀ ಬಂದು ನನ್ನೊಮ್ಮೆ ಬಿಗಿದಪ್ಪುವಿಯಲ್ಲ ಬಾಳಲ್ಲಿ ಚೆಲು ಹೂವುಗಳು ಅರಳಿಸುವಿಯಲ್ಲ ನಳನಳಿಸಿ  ಹೊಸ ಕಾಂತಿ ಚಿಮ್ಮಿಸುವೆಯಲ್ಲ ನನ್ನೊಡಲ ತುಂಬಾ ಹೊಸ ಕನಸ ಹಾಸಿರುವೆ ನೀ ನನ್ನ  ಬಾಳ ದೀವಿಗೆಯಾಗಿರುವೆ ಒಂದಾಗಿ ಅನುದಿನವೂ ಬಾಳಬೇಕಿದೆ ಅ ದೇವನೊಲುಮೆ ಜತೆಗಿರಲು ಭಯವೆಲ್ಲಿದೆ ನಿತ್ಯವೂ ಒಲವ ಸವಿಯ ಸವಿಯುವಾಸೆ ತಂಪುಗಾಳಿಯಲಿ ನಿನ್ನೊಡನೆ ಹೆಜ್ಜೆ ಹಾಕುವಾಸೆ ಮನದಿಂಗಿತವ ತಿಳಿಸಿ ನಿರಾಳವಾಗುವಾಸೆ ಅನುದಿನವೂ ನಗು ನಗುತ  ಬಾಳು ಸವೆಸುವಾಸೆ ಪಂಕಜಾ.ಕೆ.

ಹಿಡಿ ಅಕ್ಕಿ ಅನ್ನದ ಮಹತ್ವ

(ಚಿತ್ರಕವನ) ಸ್ಪರ್ಧೆಗಾಗಿ ಅನ್ನದ ಮಹತ್ವ ಹಿಡಿ ಅಕ್ಕಿ ಬೆಳೆಯುವ ಕಷ್ಟ ರೈತನಿಗೆ ಗೊತ್ತು ಅದರ ಕಷ್ಟ ನಷ್ಟ ಶ್ರೀಮಂತಿಕೆಯ ಮಹಲಿನಲಿದ್ದರೂ ಹಸಿವೆಯ ತಣಿಸಲು ಬೇಕು ಹಿಡಿ ಅಕ್ಕಿ ಅನ್ನವ ಬೆಳೆಯುವ ರೈತನ ಶ್ರಮ ಅರಿತರೆ ಮಾತ್ರ ತಿಳಿದೀತು ಅದರ ಬೆಲೆ ಬಿಸಿಲು ಮಳೆ ಗಾಳಿಯ ಸಹಿಸುವನೀತ ನಿತ್ಯವೂ ಕಾಯಕವ ಮಾಡುವ ಅನ್ನದಾತ ಬರಗಾಲ ಅತಿವೃಷ್ಠಿ ಗಳ ಅಬ್ಬರದ ಆಟ ದುಡಿದರೂ ದಕ್ಕದ  ಮಧ್ಯವರ್ತಿಗಳ ಕಾಟ ರೈತನ ಶ್ರಮವನ್ನು ಅರಿಯಬೇಕು ಅನ್ನದ ಮಹತ್ವವನ್ನು ತಿಳಿಯಬೇಕು ಮುಂದಿನ ಪೀಳಿಗೆಗೆ  ಅದನು  ತಿಳಿಸಬೇಕು ಅನ್ನದಾತನ ಹಿರಿಮೆ  ಅರಿಯಬೇಕು ಕಷ್ಟ ನಷ್ಟಗಳಿಗೆ ಒಡ್ಡುವನು ಕೊರಳು ಸುತ್ತಿದೆ ಸಾಲದ ಹೊರೆಯ ಉರುಳು ಅನ್ನ ಕೊಡುವ ರೈತನ ಶ್ರಮದ ಫಲ ಬೆಳೆದ ಬೆಳೆಗೆ ಸಿಗಬೇಕು  ಪ್ರತಿಫಲ ಪಂಕಜಾ.ಕೆ

ಮೌನಗೀತೆ ಚಿತ್ರ ಕವನ

ಚಿತ್ರ ಕವನ ಮೌನ ಗೀತೆ ಬಾನಲಿ ಹೊಳೆಯುವ  ದುಂಡನೆ ಚಂದಿರ ಸುತ್ತಲೂ ಪ್ರಭೆಯನು ಹರಡಿಹನು ಕತ್ತಲು ಕಳೆದು ಬೆಳಕನು ಹರಡಿ ಹಾಲಿನ ಹೊಳೆಯನು ಹರಿಸುವನು ಸಾಗರದಲೆಯಲಿ  ಬಿಂಬವ ತುಂಬಿ ನೈದಿಲೆಯೊಡನಾಡುತ ನಲಿಯುವನು ಏರಿದ ಅಲೆಗಳು ಉಬ್ಬುತ ಕುಣಿಯುವ ನೋಟವು ಕಣ್ಮನ ಸೆಳೆಯುವುದು ತಂಪಿನ ನೋಟವು ಇಂಪಿನ ಗಾನವು ರಸಿಕರ ಮನವನು ಸೆಳೆಯುವುದು ಕಡಲಿನ ಅಬ್ಬರ ಪ್ರಕೃತಿಯ ಸೊಬಗು ಮೌನ ಗೀತೆಯ ನುಡಿಸುವುದು ಪಂಕಜಾ. ಕೆ

ಹಾಯ್ಕುಗಳು

ಹಾಯ್ಕುಗಳು 1..ಅವನ ನಗು ಮನಸಿನಾಳದಲಿ ತುಂಬಿತು ನೋವು 2.. ಪ್ರೀತಿಯಲಿದೆ ನೋವು ನಿವಾರಿಸುವ ಔಷದವೊಂದು 3  ಯಾರಿಗಾಗಿಯೋ ದಿನನಿತ್ಯವೂ ನಾವು  ಬದಲಾಗುವುದು 4.ಪ್ರೀತಿಯೆಂದರೆ ಬಾಳಿನ ಸಾರ್ಥಕ್ಯದ ಅನುಭವವೇ ಪಂಕಜಾ.ಕೆ.

ಗಜಲ್ ಕಾವ್ಯನಂತರಂಗ

ಕಾವ್ಯಾಂತರಂಗ ಸ್ಪರ್ಧೆಗಾಗಿ ಗಜಲ್ ಬಾನಂಗಳದಲಿ ತಾರೆಗಳು ಚಂದಿರನಾಗಮನಕೆ ಕಾಯುತಿದೆ ಸಖಿ ಕೊಳದಲ್ಲಿ  ನೈದಿಲೆಗಳು ಅರಳಿ ನಗುತಿದೆ ಸಖಿ ನೀನು ಜತೆಯಲಿದ್ದಾಗ ದಿನಗಳು ಕ್ಷಣಗಳಾಗುತ್ತಿದ್ದವು ನೀನಿಲ್ಲದೆ ದಿನಗಳನ್ನು ಕಳೆಯುವುದು ಕಠಿಣವೆನಿಸುತ್ತಿದೆ ಸಖಿ ತಂಪುಗಾಳಿಯು ಕೂಡಾ ಮನವನ್ನು ತಣಿಸಲಾರದಾಗಿದೆ ನಾವಿಬ್ವರು ಒಂದಾಗಲು ದಿನಗಳನು ಎಣಿಸಬೇಕಾಗಿದೆ ಸಖಿ ರಾತ್ರಿಗಳೇ ಬರಲೇಬೇಡಿ ನೀವು ನನ್ನ ಮುತ್ತಿ ಕಾಡಲು ನಿದಿರೆಯಿಲ್ಲದೆ ಕಣ್ಣುಗಳು ಉರಿಯುತ್ತಿದೆ ಸಖಿ ಆಶೆಗಳ ಕುದುರೆಗಳು ನಿತ್ಯವೂ  ಬಂದು ಕೆಣಕುತಿವೆ ಮನಸನ್ನು ಕಡಿವಾಣ ಹಾಕಿ ಹಿಡಿದೆಳೆದು ಸಾಕಾಗಿದೆ ಸಖಿ ನಿನ್ನೊಡನಾಟವಿದ್ದಾಗ ಮನಸು ನವಿಲಂತೆ ಕುಣಿಯುತ್ತಿತ್ತು ಬಿಸಿಲಿಗೆ ಬಾಡಿದ ತರುಲತೆಯಂತಾಗಿದೆ ಸಖಿ ಬಾಳ ಪಯಣದಲಿ ಜತೆಯಾಗಿ ಸಾಗಬೇಕಲ್ಲ ಪಂಕಜಾ ಹಿರಿಯರ ಒಪ್ಪಿಗೆಯ ಮುದ್ರೆಗಾಗಿ ಕಾಯಬೇಕಾಗಿದೆ ಸಖಿ ಪಂಕಜಾ.ಕೆ.

ಒಲವ ತೇರು

ಭಾವಗೀತೆ  (ಕಾವ್ಯ ಕೂಟ ವಾಟ್ಸಪ್ ಬಳಗದಲ್ಲಿ ತೃತೀಯ  ಸ್ಥಾನ ಪಡೆದ ನನ್ನ ಭಾವಗೀತೆ)  ದತ್ತಪದ ಕರಿನೆರಳು ಒಲವ ತೇರು ಬಾಂದಳದಿ ಮಿನುಗುವ ಬೆಳ್ಳಿ ಚುಕ್ಕೆ ಗಳು ನಿನ್ನ ಕಣ್ಣೋಟದಂತೆ ಸೆಳೆಯುತಿದೆ ಕಗ್ಗತ್ತಲೆಯಲಿ   ಮಿಂಚೊಂದು ಸುಳಿದಂತೆ ನನ್ನ ಬರಡು ಬಾಳಿಗೆ ನೀ ಜತೆಯಾದೆ ನಿನ್ನೆದೆಯ ಬಾಂದಳದಿ ಮಿನುಗುವ ತಾರೆ ನಾನಾದೆ ನಿನ್ನ ಪ್ರೀತಿಯ ಜಲ ಸೋಕಿ ನಾ ನವಿಲಾದೆ ನಮ್ಮಿಬ್ಬರ ಈ ಒಲವ ಬಾಳ ತೇರಿನಲಿ ಮುನಿಸೆನ್ನುವ ಕರಿ ನೆರಳು ಸೋಕದಿರಲಿ ಕಷ್ಟ ಸುಖಗಳಲಿ ಜತೆಯಾಗಿ ಅನುದಿನವೂ  ಜೋಡಿ ಹಕ್ಕಿಗಳಂತೆ ಬಾಳೋಣ  ಪಂಕಜಾ.ಕೆ.

ರಾಧೆಯ ಸ್ವ ಗತ

ರಾಧೆಯ ಸ್ವಗತ ಬೊಗಸೆ ತುಂಬಾ ಒಲವ ತುಂಬಿ  ಕಾಯುತಿರುವೆನು ಮಾಧವ ಮುರಳಿ ನುಡಿಸಿ  ಮನವ  ಕದ್ದು ಎಲ್ಲಿ   ಓಡಿ  ಹೋದೆಯೋ ಮನದ  ತುಂಬಾ ನಿನ್ನ  ನೆನಪು ತುಂಬಿ  ನಿಂತು  ಕಾಡಿದೆ ಬೇಗ ಬಂದು  ಪ್ರೀತಿ  ತೋರಿ  ಮನವ  ತಣಿಸಬಾರದೇ ನೀನು ಇಲ್ಲದ ಬಾಳು ಇಂದು ಖಾಲಿ ಖಾಲಿಯಾಗಿದೆ ಬರುವೆ ಎಂದು ಮಾತು ಕೊಟ್ಟು ಎಲ್ಲಿ ಅಡಗಿ ಕುಳಿತೆಯೋ ಒಮ್ಮೆ ಬಂದು ನನ್ನ ಜತೆಯಲಿ ನಗುತ ಕೂಡಿ ಆಡಬಾರದೇ ಕಾಯುತಿರುವೆನು ನಿನ್ನ ಬರುವಿಗೆ ಬೊಗಸೆ ಕಂಗಳ ಅರಳಿಸಿ ಪಂಕಜಾ.ಕೆ

ಚುಟುಕು ಕರುಳು

. ಚುಟುಕು   ಕಾವ್ಯ ಕೂಟ ವಾಟ್ಸಪ್ ಬಳಗದಲ್ಲಿ  ತೃತೀಯ  ಬಹುಮಾನ ಪಡೆದ ನನ್ನ  ಚುಟುಕು ಕರುಳು ಅಯಾಸ  ಪರಿಹಾರಕ್ಕೆ ಬೇಕು ಮರಗಿಡಗಳ ನೆರಳು ಕುಸಿದಾಗ ಸಾಂತ್ವನಿಸಲು ಬೇಕು ಮಮತೆ ತುಂಬಿದ ಕರುಳು ಪಂಕಜಾ.ಕೆ.

ಬಿಳಿ ನೈದಿಲೇ

ಸ್ಪರ್ಧೆಗಾಗಿ ಬಿಳಿಯ ಕಮಲ ಚಿತ್ರ ಸ್ಪರ್ಧೆ ನೈದಿಲೆ ಬಿಳಿಯ ಕಮಲವು ಸ್ಪರ್ಧೆಗಿಳಿದಿದೆ  ಬೆಳದಿಂಗಳ ಜತೆಯಲಿ ಚಂದ್ರ ಕಾಂತಿಯು ಬೀಳುತಲಿರಲು ಮೊಗವ ಅರಳಿಸಿ ನಲಿದಿದೆ ಲಕ್ಷ್ಮಿ ದೇವಿಯ ಪಾದಕಮಲಕೆ ಅರ್ಪಣೆಯು ತಾನೆನುತಿದೆ ಶುಭ್ರ ಬಿಳಿಯಲಿ ನಗುತ ತಾನು ಬಾನ ಚಂದಿರನನ್ನು ಕರೆದಿದೆ ನಗುವ  ಬೀರುವ  ಮೊಗದ ಸೊಬಗಿಗೆ ಸಾಟಿಯಾವುದು ಇಲ್ಲವು ಪಂಕಜಾ.ಕೆ

ಸಾಗರದಲೆ

ಸಾಗರದಲೆ (ಸ್ಪರ್ಧೆಗಾಗಿ) ದತ್ತಪದ... ಅಂಬಿಗ ಬಾಳೆಂಬ  ಸಾಗರದಲಿ ಕಷ್ಟ ನಷ್ಟಗಳೆಂಬ ಅಲೆ ದಡ ಸೇರಲು ಕೈಹಿಡಿದು  ನಡೆಸುವೆಯ ಮಾಧವಾ ಏಳುಬೀಳುಗಳೆಂಬ ಮಾಯೆ ಭವಸಾಗರದಲಿ ಮುಳುಗುವ ನಾವೆ ಬಯಕೆಯ ಬಲೆಯಲಿ ಬಿದ್ದ ಮೀನು ಚಿತ್ತವಾಗಿದೆ ಚಂಚಲದ ಗೂಡು ಬಾಳೆಂಬ   ಕಡಲಲ್ಲಿ ಬದುಕಿನಾ ದೋಣಿಯು ಸುಳಿಯಲ್ಲಿ ಸಿಲುಕಿರಲು ಅಂಬಿಗನೆ ನಡೆಸು ಈ ಬಾಳ ನೌಕೆ ಕಷ್ಟಗಳ ಕರೆಯಲ್ಲಿ ದಾರಿಕಾಣದೆ ನೊಂದೆ ಕೈ ಹಿಡಿದು ನಡೆಸೆನ್ನ  ಓ ಜಗವ ಕಾಯುವ ತಂದೆ ಪಂಕಜಾ.ಕೆ.

ನವ ಪರ್ವ ಭಾವಗೀತೆ

ನವ ಪರ್ವ (ಭಾವಗೀತೆ) ತುಂಟ ನಗುವ ತುಂಬಿ ನಿಂತ ನಿನ್ನ ಕಣ್ಣು  ಸೆಳೆಯಿತು ಕುಡಿ ಮೀಸೆಯ ಸೆಳೆತದಲ್ಲಿ ಮನವು ಕಳೆದು ಹೋಯಿತು ನನ್ನ ಮನಕೆ ಲಗ್ಗೆಯಿಟ್ಟು ಮನವ ಕದ್ದ ಚೋರನೆ ಬಾಳ ದಾರಿಯಲ್ಲಿ ಬಂದು ನನ್ನ ಸೆಳೆದ ಮಾರನೇ ತುಂಟ  ಕಣ್ಣ ಭಾಷೆಯಲ್ಲೆ ನಿತ್ಯ ಕಾಡುತಿರುವೆಯಾ ನವನವೀನ ಭಾವದಲ್ಲಿ ಎನಿತು  ಹಾಡುತಿರುವೆಯಾ ಬಾಳ ದಾರಿಯಲ್ಲಿ ನಿಂದು  ಒಲವ ಹಾಡು ಹಾಡಿದೆ  ನಿನ್ನ ಒಲವ ಗಾನದಲ್ಲಿ ಮೈ ಮನವ ಮರೆಸಿದೆ ಹಾಲು ಜೇನು ಬೆರೆತಹಾಗೆ ಬಾಳ ಪಯಣಸಾಗಿದೆ ನಿತ್ಯ ಇರಲಿ ನಗೆಯ ಹೂವು ನಮ್ಮ ಬಾಳ  ದಾರಿಗೆ ಪಂಕಜಾ.ಕೆ

ಸುಗ್ಗಿ ಹಬ್ಬ ಜಾನಪದ ಶೈಲಿ

ಕಾವ್ಯ ಕೂಟ ವಾಟ್ಸಪ್ ಬಳಗದಲ್ಲಿ ದ್ವಿತೀಯ ಸ್ಥಾನ ಪಡೆದ ನನ್ನ ಕವನ ಸುಗ್ಗಿ ಹಬ್ಬ (ಜಾನಪದ ಶೈಲಿ) ಸುಗ್ಗಿಯ  ಸಂಭ್ರಮ  ಮೂಡೈತೆ ಮನೆಯಾಗ ಅರಮನೆಯ ವೈಭೋಗ ಕಾಣುತೈತೆ ಧರೆಯಾಗ ಅರಮನೆಯ ವೈಭೋಗ ಕಾಣುತೈತೆ ಧರೆಯಾಗ ಭೂತಾಯಿ ಬೆಳೆಕೊಟ್ಟು ನಗುತಾಳ ಗದ್ದೆಯ ಬಣದಲ್ಲಿ ತೆನೆ ತುಂಬಿ ಬಂದೈತೆ ತೆನೆತುಂಬಿ ಬಂದೈತೆ ನಮ್ಮವ್ವ ಭೂತಾಯಿ ನಮ್ಮನ್ನು ಹರಸ್ಯಾಳ ಮನೆಯಲ್ಲಿ ಬೆಳೆ ತುಂಬೈತೆ ನಮ್ಮವ್ವ ಮನೆತುಂಬಾ ಸಂತೋಷ ಹರಡೈತೆ ಮನೆತುಂಬಾ ಸಂತೋಷ  ಹರಡೈತೆ ನಮ್ಮವ್ವ ಶಿವ ಮೆಚ್ಚಿ ಕಣ್ಣು ಬಿಟ್ಯಾನ ಎಳ್ಳು ಬೆಲ್ಲಾ ಕೊಟ್ಟಾಳೆ ನಮ್ಮವ್ವ ಹುಗ್ಗಿಯ ಪಾಯಸ ಮಾಡವ್ವ ಹುಗ್ಗಿಯ ಪಾಯಸ ಮಾಡವ್ವ ನಮ್ಮವ್ವ ಮನೆದೇವರಿಗೆ  ನೈವೇದ್ಯ  ಇಡಬೇಕವ್ವ ಹಿಡಿಬೀಜ ಬಿತ್ತಿವ್ನಿ  ನಾನಂದು ನೋಡವ್ವ ಕಣಜ  ತುಂಬಾ  ಕಾಳು  ಕೊಟ್ಯಾನ ಮಾದೇವ ಕಣಜ ತುಂಬಾ ಕಾಳು ಕೊಟ್ಯಾನ ಮಾದೇವ ಹೊತ್ತಾರೆ ಮಾದೇವನ  ನೆನೆಯ ಬೇಕವ್ವ ಕಷ್ಟಕ್ಕೆ ಬೆಲೆ ಬಂದೈತ್ಯವ್ವ ಸಂತೋಷ ಸಂಭ್ರಮ ಪಡಬೇಕವ್ವ ಸಂಕ್ರಾಂತಿ ಹಬ್ಬದಿ  ಎಳ್ಳು ಬೆಲ್ಲಾ ಬೀರಿ ಮನೆ  ಮಂದಿಎಲ್ಲಾ ಹೊಸಬಟ್ಟೆ ತೊಟ್ಟು ನಲಿಯೋಣ ಬಾರೆವ್ವ ಸುಗ್ಗಿಯ ಸಂಭ್ರಮ ನೋಡವ್ವ ಪಂಕಜಾ.ಕೆ

ನಗೆ ಹನಿ ರಕ್ತದಾನ

ರಕ್ತದಾನ ರಕ್ತದಾನ ಮಾಡಿದರೆ ಪುಣ್ಯ ಅಂತಾರಲ್ರಿ  ಆದರೆ ಈಗ ನೋಡಿ ನೀವು ಯಾವುದೋ ಕಾಯಿಲೆ ಎಂದು ನರಳುತ್ತಿದ್ದಿರಲ್ರಿ   ಒಬ್ಬನಾದ್ರು ಹತ್ತಿರ ಬರುತ್ತಾನೋ ಪಂಕಜಾ. ಕೆ.

ಚುಟುಕು ನೆನಪಿನ ದೋಣಿ

ಚುಟುಕು ನೆನಪಿನ ದೋಣಿ ಕಾಗದದ ದೋಣಿಯನು ಮಾಡಿ ತೇಲಿ ಬಿಟ್ಟು ನಲಿದೆವು ಅಂದು ನೆನಪಿನ ದೋಣಿಯಲ್ಲಿ ತೇಲುತ ಬಾಲ್ಯದಾಟವ ನೆನಪಿಸುತ ಹಿಗ್ಗುತಿರುವೆವಿಂದು ಪಂಕಜಾ.ಕೆ.

5 ನ್ಯಾನೊ ಕಥೆಗಳು

[10/01, 2:50 PM] pankajarambhat: ಸ್ವಾತಂತ್ರ್ಯ (ನ್ಯಾನೊ ಕಥೆ) ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯಬೇಕು . ಅವರಿಗೆ ಬೇಕಾದಂತೆ ಇರಲು  ಅವರಿಗೂ ಹಕ್ಕಿದೆ. ಎಂದು ಉದ್ದುದ್ದ ಭಾಷಣ ಬಿಗಿಯುತ್ತಾ ಚಪ್ಪಾಳೆ ಗಿಟ್ಟಿಸುತ್ತಿದ್ದ ಆತ ಮನೆಯಲ್ಲಿ ತನ್ನ ಹೆಂಡತಿ ಮಗಳಿಗೆ ನೂರಾರು ಕಟ್ಟುಪಾಡುಗಳನ್ನು ಹಾಕಿದ್ದ ಪಂಕಜಾ .ಕೆ [10/01, 2:53 PM] pankajarambhat: ವಧು (ವರ) ಪರೀಕ್ಷೆ (ನ್ಯಾನೊ ಕಥೆ) ವಧು ಪರೀಕ್ಷೆ ಮಾಡಿ ನೋಡಿದ ಹುಡುಗಿಯರಲ್ಲೆಲ್ಲಾ ಏನಾದರೂ ಒಂದು ಕುಂದು ಕೊರತೆಯನ್ನು ಕಂಡು ಹುಡುಗಿಯರನ್ನು ನಿರಾಕರಿಸುತ್ತಿದ್ದ ಆತನನ್ನು ಅದೊಂದು ದಿನ ನೋಡಿದ ಹುಡುಗಿಯೇ ಬೇಡವೆಂದು ಹೇಳಿದಾಗ ಆತನಿಗೆ ತಾನು ನಿರಾಕರಿಸಿದ ಹುಡುಗಿಯರ ಪರಿಸ್ಥಿತಿಯ ಅರಿವಾಯಿತು [10/01, 2:57 PM] pankajarambhat: ನ್ಯಾನೊ ಕಥೆ (ಗಂಡು ಮಗು)  ತಮಗೆ ಗಂಡು ಮಗುವೇ ಆಗಬೇಕು  ಎನ್ನುವ ಹುಚ್ಚಿನಲ್ಲಿ ಆತ ಪ್ರತೀಬಾರಿ ಹೆಂಡತಿ ಗರ್ಭ ದರಿಸಿದಾಗಳೂ ಹೆಣ್ಣೆಂದು ತಿಳಿದ ತಕ್ಷಣ ನಿರ್ದಾಕ್ಷಿಣ್ಯವಾಗಿ ಅಭಾರ್ಷನ್ ಮಾಡಿಸುತ್ತಿದ್ದ ಕೊನೆಗೂ ಗಂಡು ಮಗುವನ್ನು ಪಡೆಯುವಲ್ಲಿ ಸಫಲನಾದ ಆತ  ಈಗ ತನ್ನ ಮಗನಿಗೆ ಮದುವೆಗೆ  ಹೆಣ್ಣು ಹುಡುಕುವ ಭರದಲ್ಲಿ ಇದ್ದಾನೆ  ಪಂಕಜಾ. ಕೆ. [10/01, 3:02 PM] pankajarambhat: ತಾರತಮ್ಯ  (ನ್ಯಾನೊ ಕಥೆ) ಹೆಣ್ಣು ಮಗುವಿಗೇಕೆ ವಿದ್ಯೆ ಎಂದು  ಎಸ್ .ಎಸ್.ಎಲ್ ಸಿ. ಯಲ್ಲಿ ಉತ್ತಮ ಅಂಕ ಪಡೆದರೂ ಮಗಳನ್ನು ಮನೆಕೆಲಸಕ್ಕೆ ಹಚ್ಚಿದ ತಂದೆ ತಾಯಿಯರು 

ಮೋಹನ ಚಿತ್ರಕವನ

ಚಿತ್ರ ಕವನ      ಮೋಹನ ಎಲ್ಲಿ ಹೋದೆ ಚೆಲುವ ಕೃಷ್ಣ ಕಾಯುತಿರುವುದು ಕಾಣದೆ ನಿನ್ನ ದಾರಿ ಕಾದು ನಾನು ಸೋತು ಹೋದೆ ತಿಳಿಯದೆ ನಿನ್ನ ಮುರಳಿಗಾನದಲ್ಲಿ ನನ್ನ ಸೆಳೆದು ತಂದೆಯ ಅವಿತು ಈಗ ನೀನು ನನ್ನ  ಎನಿತು ಕಾಡುತಿರುವಿಯೋ ಶಲ್ಯೆಯನ್ನು ಎಳೆದು ನೀನು ತುಂಟತನವ ತೋರಿದೆ ನಾಚಿಕೆಯು ತುಂಬಿ  ನನ್ನ ಕೆನ್ನೆ ಕೆಂಪೇರಿದೆ ಬಯಕೆ ಬಿರಿದು ಎದೆಯ ತುಂಬಿ ತನುವು ನಿನ್ನ ಸೇರ ಬಯಸಿದೆ ಕಣ್ಣು ತುಂಬಾ ನಿನ್ನ ರೂಪ ತುಂಬಿ ನಿಂತು ಕಾಡಿದೆ ಹುಡುಗಾಟವಾಡಿ ನನ್ನ ಏಕೆ  ಹೀಗೆ  ಕಾಡುವೆ ಬೇಗ ಬಾರೋ ಕಾದು ಕಾದು ತನುವು ಶಕ್ತಿ ಕುಂದಿದೆ ಮುಖದ ನಗುವು ಕಣ್ಣ ಹೊಳಪು ಮಾಸದಿರಲಿ ಪ್ರಿಯನೇ ಕೆನ್ನೆ ತುಂಬಾ ಕೆಂಪು ಬಣ್ಣ ಹೊಸ ಕಾಂತಿ ತಂದಿದೆ ನಿನ್ನ ನೆನಪು ಮನವ  ತುಂಬಿ ನಿತ್ಯ ಕಾಡುತಿರುವುದು ಕೋಗಿಲೆಯ ಉಲಿತದಲ್ಲೂ ನಿನ್ನ ಮುರಳಿಗಾನವೇ ಕೇಳಿದೆ ಚೈತ್ರಮಾಸ  ಬಂದು ಈಗ ಮನವ ಕೆಣಕುತಿರುವುದು ನಿನ್ನ  ಬಿಸಿ ಅಪ್ಪುಗೆಯಲಿ ಕರಗಬೇಕು ಎನಿಸಿದೆ ಬಾರೋ ಬೇಗ ಮುರಳಿ ಲೋಲ ಮನವ ಕದ್ದ ಮೋಹನ ಕಾಯುತಿರುವ  ಕಷ್ಟವನ್ನು ನೀನು ತಿಳಿಯಲಾರೆಯಾ ಪಂಕಜಾ.ಕೆ.

ಹಾಸ್ಯ ಹನಿ

ಹಾಸ್ಯ ಹನಿಕವನ 1 ಏಟು ಅಂದು ನೀ ನನ್ನ ನೋಡಿದಾಗ ಕೆನ್ನೆ ಕೆಂಪಾಗಿತ್ತು ರಸಪೂರಿ ಸೇಬಿನಂತೆ ಇಂದು ನೀ ಕೊಟ್ಟ ಏಟಿಗೆ ಕೆನ್ನೆ ಕೆಂಪಾಗಿದೆ ಕೆಂಪು ಚೀನಿಕಾಯಿಯಿಂತೆ ಪಂಕಜಾ.ಕೆ. 2 ..ಉನ್ಮತ್ತ ನಿನ್ನ ತುಟಿಯಲ್ಲಿ ಸುರಿಯುತ್ತಿತ್ತು ಜೇನು ಅದರ ಸವಿಯ  ಸವಿಯಲೆಂದು ನಾನಾದೆ ಹೆಜ್ಜೇನು ಮಧುಪಾನದ ಅಮಲಿನಲಿ ಉನ್ಮತ್ತ ಆಗಿರುವೆ ಇಂದೀಗ.ಪಾನಮತ್ತ ಪಂಕಜಾ.ಕೆ.

ಹಾಸ್ಯ ಹನಿಕವನ.2

ಹಾಸ್ಯ ಹನಿ ಕವನ  1 .... ಏಟು ಚೆಲುವ ನಿನ್ನ ನೋಡಿದಂದು ಮನದಿ ಹರ್ಷ ಮೂಡಿತು ಕೆನ್ನೆ ತುಂಬಾ ಕೆಂಪು ತುಂಬಿ ಸೇಬಿನಂತೆ ಆಯಿತು ಇಂದು ನೀನು ಜಗಳವಾಡಿ ನನ್ನ ಮನವು ನೊಂದಿತು ನೀನು ಕೊಟ್ಟ ಏಟಿಗಿಂದು ಕೆನ್ನೆ ತುಂಬಾ ಕೆಂಪು ತುಂಬಿ ಚೀನಿಕಾಯಿಯಂತೆ ಆಯಿತು ಪಂಕಜಾ.ಕೆ.  2..ಉನ್ಮತ್ತ ನಿನ್ನ ತುಟಿಯಲಿ ಸುರಿಯುತಿತ್ತು  ಮಧುರಸದ ಜೇನು ಅದರ ಸವಿಯ ಸವಿಯಲೆಂದು ನಾನಾದೆ  ಹೆಜ್ಜೇನು ಮಧುಪಾನದ ಆಮಲಲಿ ಅಂದು ನಾನು ಉನ್ಮತ್ತ  ಇಂದೀಗ ನಾನಾದೆ ಒಬ್ಬ ಪಾನಮತ್ತ ಪಂಕಜಾ. ಕೆ.

ರಾಧೆಯ ಅಳಲು

ರಾದೆಯ ಅಳಲು ನಿನ್ನಯ ಕೊಳಲಿನ ನಾದಕೆ ಒಲಿದೆ ನಿನ್ನೊಡನಾಟದಿ  ನಿತ್ಯವೂ ನಲಿದೆ ಅಂದಿನ ಒಡನಾಟದ ಸುಂದರ ನೆನಪು ಇಂದಿಗೂ ಇರುವುದು ಮನದಲ್ಲಿ ಹಸಿರು ಯಮುನಾ  ನದಿಯ  ಆ  ತೀರ ಇಂದೀಗ ನೀನಿಲ್ಲದೆಅದು ಬಲು ದೂರ ಕಾಯುತಿರುವೆನು ಕೃಷ್ಣಾ ನಿನಗಾಗಿ ಎಂದು ಬರುವೆಯೋ ನೀನು ನನಗಾಗಿ ನೀನಿದ್ದಾಗ ಜೀವನ ಹಸಿರು ಭೂಮಿ ಇಂದೀಗ ಆಗಿದೆ  ಅದು ಮರುಭೂಮಿ ನೀನಿಲ್ಲದ ದಿನಗಳು ಬಲು ಘೋರ ತಿಳಿಯದೆ  ಹೇಳು ನಿನಗೆ ಅದು ಪೋರ ಮಾತುಕೊಟ್ಟಿರುವಿಯಲ್ಲಾ ಅಂದು ಕೃಷ್ಣ ಮಾತಿಗೆ ತಪ್ಪದೆ ಬೇಗ ಬಾ ಇಂದು ಕೃಷ್ಣ ನಿನಗೊಲಿದ   ಜೀವವಿದು ನೋಡು ಇನ್ನಾರಿಗೂ   ಒಲಿಯದದು  ಬಿಡು ನೀ ಬಲ್ಲೆ ನನ್ನ ಜೀವನದ ಕನಸು ಮಾಡಲಾರೆಯ ಅದರ ನನಸು ಪಂಕಜಾ.ಕೆ.

ಬಾನ ತೋರಣ

ಬಾನ ತೋರಣ  ಪಡುಗಡಲಲಿ ರವಿ ಮರೆಯಾಗುವ ನೋಟ ರಸಿಕರ ಕಣ್ಮನ ಸೆಳೆಯುವ ಮಾಟ ಬಾನಲಿ ಕಲಸಿದೆ ಚೆಲುವಿನ ಬಣ್ಣ ಸೆಳೆಯಿತು ಕವಿಮನಸಿನ ಕಣ್ಣ ಮುಸುಕಿದ ಮಬ್ಬಿಲಿ ಹೊಳೆಯುವ ಕಿರಣ ಕಡಲಲಿ ಕಟ್ಟಿದೆ ಬಣ್ಣದ ತೋರಣ ಚೆಲುವಿನ ರಂಗನು ಬಾನಲಿ ತುಂಬಿ ಪಡುಗಡಲಲಿ ರವಿ ತೆರಳಿದ ಉಷೆಯನು  ನಂಬಿ ಚೆಲುವಿನ ಚಿತ್ತಾರವ  ಬಾನಂಚಲಿ ಕಂಡು   ಕವಿಮನದಲಿ ಉಕ್ಕುತಿದೆ ಕವಿತೆಯ ದಂಡು ಪಂಕಜಾ.ಕೆ.

ತಿಂಗಳ ಬೆಳಕು

ತಿಂಗಳ ಬೆಳಕು ತಿಂಗಳ ಬೆಳಕಲಿ ಅಂಗಳ ಬದಿಯಲಿ  ಹಾಲಿನ ಹೊಳೆಯೇ ಹರಿಯುತಿದೆ ತಂಪಿನ  ಕಿರಣವು ಇಂಪಿನ ಗಾನವು ಮೈಮನವನ್ನು ಮರೆಸುತಿದೆ ಚಂದದ ಹೂಗಳು ಅಂದದಿ ಅರಳುತ ಕಂಪನು ಎಲ್ಲೆಡೆ ಹರಡುತಿದೆ ಕೊಳದಲಿ ಅರಳಿದ ತಳದಲಿ ನಲಿದಿಹ ನೈದಿಲೆ ನಗುವನು ಬೀರುತಿದೆ ಚಂದಿರ ಬರಲು ಕಂದರ ವಿರಲು ಮನದಲಿ ಸಂತಶ ತುಂಬುತಿದೆ ಬಾನಲಿ ಓಡುತ ಎಡೆಯಲಿ ಮಿನುಗುತ ರಸಿಕರ ಮನವನು ಸೆಳೆಯುತಿದೆ ಪಂಕಜಾ.ಕೆ

ಹಸಿರು ಜೀವದುಸಿರು

ಹಸಿರು ಜೀವದುಸಿರು  ಹಸಿರಿನ ಕಾಡಲಿ ವನಸಿರಿ ಮದ್ಯದಿ ತಣ್ಣನೆ ಗಾಳಿಯು ಬೀಸುತಿದೆ ಮೈಮನಕೆಲ್ಲಾ ಮುದವನು ತುಂಬುತ ಮನಸಿನ ತಾಪವ ಕಳೆಯುತಿದೆ ಹಸಿರಿನ ಬನದಲಿ ಉಸಿರಿನ ತಂಪಲಿ ಮೈಮನವೆಲ್ಲ ನಲಿಯುತಿದೆ ಕಣ್ಮನ ತುಂಬುವ ಕಾನನ ಸೊಬಗಲಿ ಮನಸಲಿ ಕನಸದು ಅರಳುತಿದೆ ಅಂದದ ಪ್ರಕೃತಿ ಚಂದದಿ ಅರಳಿ ಚೆಲುವಿನ ಕನಸನು ಬಿತ್ತುತಿದೆ ಹಸಿರಿನ ಸೆರಗನು ಹಾಸುತ ಪ್ರಕೃತಿಯು ಹೂಮನಕೆಲ್ಲ ಮುದವನು ತುಂಬುತಿದೆ ಪಂಕಜಾ.ಕೆ

ಮಂಗಳಾದೇವಿ ಸ್ತುತಿ

ಮಂಗಳಾ ದೇವಿ ಸ್ತುತಿ ಮಂಗಳವಾರದ ಶುಭದಿನದಂದು ಮಂಗಳಗೌರಿಯೇ  ನಿನಗೆ ನಮಿಸುವೆನು ಮಂಗಳವನ್ನೇ ತರುತಲಿ  ನಮಗೆ ಹರಸು ನೀ ನಮ್ಮನು ಓ ದೇವಿ ಅಂಗಳ ಸಾರಿಸಿ ರಂಗೋಲಿಯಿಟ್ಟು ನಿನ್ನಯ ಬರುವಿಗೆ  ಕಾದಿರುವೆ ತಟ್ಟೆಯ ತುಂಬಾ  ಬಗೆ ಬಗೆ ಹೂಗಳು ಅರ್ಚನೆಗಾಗಿ ಕೊಯ್ದಿರುವೆ ಕುಂಕುಮ ಅರ್ಪಿಸಿ ಹಾಡನುಹಾಡಿ ಚಂದದಿ ಪೂಜೆಯ  ಗೈಯುವೆನು ಅನುದಿನ ಹರಸುತ ವರಗಳ ಕೊಡುತ ನಮ್ಮನು ಕಾಯು ನೀ ದೇವಿ ಕರಗಳ ಮುಗಿಯುತ ಶಿರವನು ಬಾಗುತ ಅನುದಿನ ನಿನಗೆ ಪೊಡಮಡುವೆ ಕರುಣೆಯ ತೋರಿ ಅನುರತ ಕಾಯುತ ನಮ್ಮನು ಹರಸು ನೀ ದೇವಿ ಪಂಕಜಾ.ಕೆ

ಒಲವ ತೇರು ಭಾವಗೀತೆ

ಭಾವಗೀತೆ ಒಲವ ತೇರು ಬಾಂದಳದಿ ಮಿನುಗುವ ಬೆಳ್ಳಿ ಚುಕ್ಕೆ ಗಳು ನಿನ್ನ ಕಣ್ಣೋಟದಂತೆ ಸೆಳೆಯುತಿದೆ ಕಗ್ಗತ್ತಲೆಯಲಿ   ಮಿಂಚೊಂದು ಸುಳಿದಂತೆ ನನ್ನ ಬರಡು ಬಾಳಿಗೆ ನೀ ಜತೆಯಾದೆ ನಿನ್ನೆದೆಯ ಬಾಂದಳದಿ ಮಿನುಗುವ ತಾರೆ ನಾನಾದೆ ನಿನ್ನ ಪ್ರೀತಿಯ ಜಲ ಸೋಕಿ ನಾ ನವಿಲಾದೆ ನಮ್ಮಿಬ್ಬರ ಈ ಒಲವ ಬಾಳ ತೇರಿನಲಿ ಮುನಿಸೆನ್ನುವ ಕರಿ ನೆರಳು ಸೋಕದಿರಲಿ ಕಷ್ಟ ಸುಖಗಳಲಿ ಜತೆಯಾಗಿ ಅನುದಿನವೂ  ಜೋಡಿ ಹಕ್ಕಿಗಳಂತೆ ಬಾಳೋಣ  ಪಂಕಜಾ.ಕೆ.

ಒಲವ ಗಾನ ಭಾವಗೀತೆ

ಒಲವ ಗಾನ (ಭಾವಗೀತೆ) ನನ್ನ ನಿನ್ನ ಒಲವಿನ ಬೆಸುಗೆಗೆ ಸಮಯವು ಇಂದು  ಕೂಡಿ ಬಂದಿದೆ ಬಾಂದಳದಿ ಚಂದಿರ ತಾರೆಗಳನೊಡನಾಡುತ ಬೆಳದಿಂಗಳ  ಹೂಮಳೆ ಕರೆಯುತಿರುವನು ತಂಗಾಳಿಯು ನಮ್ಮೊಡನಾಟಕೆ  ಸಾಕ್ಷಿಯಾಗಿದೆ ಬಾ ನಲ್ಲೆ  ಸವಿಯೋಣ ಸ್ವರ್ಗ ಸುಖವನಿಲ್ಲೆ    ಭಾವನೆಗಳ ಭಾರದಲಿ ಮನಸು  ತುಂಬಿದೆ ನಿನ್ನೊಡನೆ ಸಪ್ತಪದಿ ತುಳಿಯುವ ಕಾಲ ಬಂದಿದೆ ದೇವದೇವತೆಗಳು ಬಾಂದಳದಿ ನಿಂತು ಹರಸುತಿಹರು ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಈ ಕೆಂಗುಲಾಬಿ ಮನಸು ಇಂದು  ನವಿಲಂತೆ ಕುಣಿಯುತಿದೆ  ನಿನ್ನಒಡನಾಟಕ್ಕೆ  ಸಮಯ ಸನ್ನಿಹಿತವಾಗಿದೆ ನಕ್ಕು ಬಿಡು ಒಮ್ಮೆ ನನ್ನೊಲವೇ  ಮನಸು ನಿರಾಳವಾಗುವಂತೆ ಒಲವ ಸವಿಯನು ಸವಿಯೋಣ ಬಾ ನಲ್ಲೆ ಅಂಗಳದಿ ಹಬ್ಬಿರುವ ಮಲ್ಲಿಗೆಯ ಬಳ್ಳಿ  ಮೈತುಂಬ ಹೂಗಳರಳಿಸಿ ಕಂಪಬೀರಿಹುದು ಮಂಗಲಾಕ್ಷತೆಯಲಿ ಸಪ್ತಪದಿಯ ತುಳಿದು ಬಂದೆ ನೀ ಎನ್ನ ಮನ ಮನೆಯ ಬೆಳಗಲೆಂದು ಒಲವ ತೇರನು ಎಳೆಯಲು ಜತೆಯಾಗಿ ಸಾಗೋಣ ಅನುರತವು ಸವಿ ಜೇನ ಹೊನಲ ಹರಿಸುವೆ ನಿನಗಾಗಿ ಪಂಕಜಾ.ಕೆ

ಚುಟುಕು ಸೋದರಿ

ಚುಟುಕು  ಸೋದರಿ ಪ್ರೀತಿ ವಿಶ್ವಾಸ ತುಂಬಿದ ತ್ಯಾಗಮಯಿ ಸರ್ವರನೂ ಪ್ರೀತಿಸುವ    ವಾತ್ಸಲ್ಯಮಯಿ ಒಡಹುಟ್ಟಿದವರ ಏಳಿಗೆಯನ್ನೇ ಬಯಸುವ ನಾರಿ ಅವಳೇ ಪ್ರತೀಮನೆಯಲಿರುವ ಸೋದರಿ ಪಂಕಜಾ.ಕೆ

ಹಸಿರು..ಉಸಿರು

ಚಿತ್ರಾಯಣ..32 ಹೆಸರು..ಹಸಿರು..ಉಸಿರು ಉಸಿರು... ಹಸಿರಿನ ಸಿರಿಯಲಿ ಉಸಿರಿನ ಬಲೆಯಲಿ ನಲಿಯುತಲಿರುವುದು ಮನೆಯೊಂದು ಸುತ್ತಲೂ ಹಸಿರಿನ ಬೆಟ್ಟಗುಡ್ಡಗಳು ತುಂಬಿ ಸ್ವರ್ಗವು ಧರೆಗಿಳಿದಂತೆ ತೋರುವುದು ಮುಂದಿನ ಅಂಗಳ ತುಂಬಾ ಬಿತ್ತಿದ ಬೆಳೆಯು ಹಸಿರಿನ ಹಾಸಿಗೆ ಹಾಸಿದ ತೆರದಿ ತೋರುವುದು  ಚಂದದ ಮನೆಯಲಿ ಅಂದದಿ ನಲಿಯುತ ಹಸಿರಿನ ಉಸಿರನು ಸವಿಯುತ ನಲಿಯೋಣ ಹಳ್ಳಿಯ ಮನೆಯದು ಚಂದದ ಬಂಧವು ಪ್ರಕೃತಿಯ ಮಡಿಲೇ ಸ್ವರ್ಗಸದೃಶ  ಜೀವನವು ನೀರಿಗೆ ಉಸಿರಿಗೆ ಬರವೇ ಇಲ್ಲದ ಪ್ರಕೃತಿ ರಮ್ಯ  ಸುಂದರ ತಾಣವದು ಬೆಳಗಿನ ಜಾವವೇ ಚುಮು ಚುಮು ಚಳಿಯಲಿ ಬಿಸಿ ಬಿಸಿ ಕಾಪಿಯ ಹೀರುವ ಆನಂದ ತಿಂಡಿಯ ತಿಂದು  ಗದ್ದೆಯಲ್ಲಿ ದುಡಿದು ಹಂಡೆಯ ಬಿಸಿನೀರಿನಲಿ ಮೀಯುವ ಸುಖ ಜಾಗಟೆ ಗಂಟೆಯ ಸದ್ದನು ಮಾಡಿ ಭಕುತಿಯಲಿ ದೇವರ ಪೂಜೆಯ ಮಾಡಿ ಬಿಸಿ ಬಿಸಿ ಊಟದ ಸವಿಯನು ಸವಿದು ನಿದ್ದೆಯ ಮತ್ತಲಿ ಮೈಯನು ಚಾಚಿ ಸಂಜೆಯ ಕಾಪಿಯಾ ಸಮಯಕೆ ಎದ್ದು ಒತ್ತಡವಿಲ್ಲದೆ ಬದುಕುವ ಚಂದ ಹವ್ಯಕರ ಹಳ್ಳಿಯ ಮನೆಯ ವೈಭೋಗದ ದೃಶ್ಯ ಪಂಕಜಾ.ಕೆ.

ಹೀಗಿರಲಿ ನಮ್ಮ ಹೊಸ ವರ್ಷ

ಲಲಿತ ಪ್ರಬಂಧ  ಹೀಗಿರಲಿ ನಿಮ್ಮ ಹೊಸವರ್ಷ ವ್ಯವಹಾರದ ಅನುಕೂಲಕ್ಕಾಗಿ ಪಾಶ್ಚಿಮಾತ್ಯ ಕ್ಯಾಲೆಂಡರ್ ಅತ್ಯಗತ್ಯವಾಗಿದೆ ಅದನ್ನೇ ಹೊಸವರ್ಷವೆಂದು ಆಚರಿಸುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕವಾದ ಮಧ್ಯರಾತ್ರಿಯ ಪಾರ್ಟಿ ಕುಡಿತ ಕುಣಿತ ಗಳಲ್ಲಿ ಕಾಲಕಳೆದು ಪಟಾಕಿ ಸಿಡಿಸಿ ಅಜ್ಜನ ಪ್ರತಿಕೃತಿಯನ್ನು ಸುಟ್ಟು ಪರಿಸರ ಮಲಿನ ಮಾಡದೆ  ಹೊಸವರ್ಷದಾಗಮನವನ್ನು ಸಾರುವ ಪ್ರಕೃತಿ ಮಾತೆಯನ್ನು ಪ್ರೀತಿಸುತ್ತಾ  ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ನೆಲಜಲ ಉಳಿಸುವ ಬಗ್ಗೆ ಮನಸ್ಸು ಮಾಡಿ ಅದಕ್ಕಾಗಿ ಶ್ರಮಿಸಬೇಕು             ಹೊಸವರ್ಷದಲ್ಲಿ ಕಳೆದ ವರ್ಷದ ನಮ್ಮ ಬದುಕಿನ ಸಿಂಹಾವಲೋಕನ  ಮಾಡಿ ಕಳೆದ ವರ್ಷದ ನಮ್ಮ ಅನುಭವಗಳೇನು ಒಳ್ಳೆಯದು ಕೆಟ್ಟದರ ಬಗ್ಗೆ ವಿಮರ್ಶಿಸಿ ಈ ವರ್ಷ ನಾವೇನು ಮಾಡಬೇಕು ನಾವೇನು ಮಾಡಬಾರದು ಎಂದು ನಿರ್ಧರಿಸಿ  ಭವಿಷ್ಯದ ಜೀವನ ಉತ್ರಮವಾಗಿ ಸಾಗುವಂತೆ ಮುನ್ನಡೆದರೆ ಬದುಕು ಇನ್ನಷ್ಟು ಖುಷಿಯಿಂದ ತುಂಬಬಹುದು ಹೊಸ ವರ್ಷದಲ್ಲಿ ಗತಕಾಲದ ಘಟನೆಗಳನ್ನು ಮೆಲುಕು ಹಾಕಿ ಅವುಗಳಿಂದ ಕಲಿತು ಸಂಭ್ರಮದಿಂದ ಮುನ್ನಡೆಯಬೇಕು                            ಹೊಸವರ್ಷದಾಗಮನ ಸಾರುವ ಪ್ರಕೃತಿ ಮೈತುಂಬಿ ಹಸುರುಡುಗೆಯುಟ್ಟು ನವೋಲ್ಲಾಸದಿಂದ ನಲಿಯುವ ವಾತಾವರಣವಿರುವ ದಿನ  ಬೇವು ಬೆಲ್ಲವನ್ನು ಹಂಚಿ ಎಲ್ಲರೊಡನೆ ಪ್ರೀತಿವಿಶ್ವಾಸದಿಂದ ಕೂಡಿ ಸಂಭ್ರಮದಿಂದ ಆಚರಿಸಬೇಕು ನಮ್ಮ ಸಂಸ್ಕೃತಿಯನ್ನು ಈ ಮೂಲಕ ನಾವು ಉಳಿಸಿ ಬೆಳೆಸಬೇಕು ಹೊಸವರ್ಷದ ಕನಸುಗಳು ನನಸಾಗಲು

ನ್ಯಾನೊ ಕಥೆ ವೃದ್ಧಾಶ್ರಮ

(ನ್ಯಾನೊ ಕಥೆ )  ವೃದ್ಧಾಶ್ರಮ ಅತ್ತೆ ಮಾವ ಇಲ್ಲಿ ಯಾಕೆ ಅವರನ್ನು ವೃದ್ಧಾಶ್ರಮಕ್ಕೆ ಹಾಕೋಣ  ಎಂದು ನಿತ್ಯ ಸವಿತಾ  ತನ್ನ ಗಂಡನ ಜತೆ ಜಗಳವಾಡುತ್ತಿದ್ದಳು  . ಸಂದೇಶ್  ಪ್ರತೀಬಾರಿಯು ನನ್ನ ಅಮ್ಮ ಅಪ್ಪ ನನ್ನನ್ನು ತುಂಬಾ ಕಷ್ಟಪಟ್ಟು ಸಾಕಿ ವಿದ್ಯೆ ಬುದ್ದಿ ಕಲಿಸಿ ನನ್ನನ್ನು ಒಂದು ನೆಲೆಗೆ ತಂದಿದ್ದಾರೆ, ಇಂದು ಈಗ ನಾವು ತಿನ್ನುವ ಅನ್ನ ಅವರ ಭಿಕ್ಷೆ ನೆನಪಿರಲಿ ಎಂದು ಹೇಳುತ್ತಿದ್ದ . ಪ್ರತೀಬಾರಿ ಜಗಳವಾದಾಗಳೂ ಅವರ  ಮಗ ಸುಕೇಶ್ ಅವರಿಬ್ಬರ ಮದ್ಯೆ ಮೂಕ ಪ್ರೇಕ್ಷಕನಾಗಿದ್ದ ,ಅವನಿಗೆ ಅಜ್ಜ ಅಜ್ಜಿಯರೆಂದರೆ  ಬಹಳ ಪ್ರೀತಿ ,ಆದರೆ ಇನ್ನೂ ಚಿಕ್ಕವನಾದ್ದರಿಂದ ತಂದೆ ತಾಯಿಯರು ಜಗಳ ಮಾಡುವಾಗ ಏನನ್ನು ಹೇಳದೆ ಮೌನವಾಗಿರುತ್ತಿದ್ದ.ಅವನ ಮನಸ್ಸು ಮಾತ್ರ ತಾಯಿಯ ಮಾತುಗಳನ್ನು ವಿರೋಧಿಸುತ್ತಿತ್ತು .ಕೊನೆಗೊಮ್ಮೆ ಹೆಂಡತಿ  ಕಾಟ ಸಹಿಸಲಾರದೆ ತನ್ನ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿ ಬಿಡಲು ಸಂದೇಶ್  ಹೊರಟ ತಕ್ಷಣ ಸುಕೇಶ್ ತನ್ನ ಅಮ್ಮನ ಕೈಯನ್ನು ಹಿಡಿದು ಅಮ್ಮ ನಾಳೆ ನೀನು ಮುದುಕಿಯಾದಮೇಲೆ ನಾನೂ ನಿನ್ನನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ, ಈಗಲೇ ಹೋಗಿ ಅಲ್ಲಿ ಸೀಟ್ ಮಾಡಿ ಇಡುತ್ತೇನೆ ಆಗದೆ ಎಂದು ಕೇಳುತ್ತಾನೆ ಇದನ್ನು ಕೇಳಿದ ಸವಿತಾ ಒಂದು ಕ್ಷಣ ದಿಗ್ಬ್ರಾಂತಳಾಗುತ್ತಾಳೆ ಮರುಕ್ಷಣವೇ ತನ್ನ ಗಂಡನನ್ನು ಕರೆದು ಅತ್ತೆಮಾವ ನಮ್ಮೊಡನೆಯೇ ಇರಲಿ ವೃದ್ಧಾಶ್ರಮಕ್ಕೆ ಅವರನ್ನು ಸೇರಿಸುವುದು ಬೇಡ ಎನ್ನುತ್ತಾಳೆ ಆದರೆ ಸಂದೇಶ್ ಹೆಂಡತಿಗೆ ನಾಳೆ ಪುನ ನ

ಸ್ನೇಹ ಸಂಗಮದಲ್ಲಿ ಮೆಚ್ಚುಗೆ ಹದಗೆಟ್ಟ ಬದುಕು

ಹದಗೆಟ್ಟ ಬದುಕು ಅಲ್ಲೊಂದು ಮುಗ್ಧಮನದ ಕೂಸು ಬಾಲ್ಯದಾಟವ ಆಡುವ ವಯಸು ತಂದೆ ತಾಯಿಯರ ಮುದ್ದಿನ ಕುವರಿ ಭವಿಷ್ಯದ  ಕನಸು ಕಾಣುವ  ಲಹರಿ ಅರಳಿ ನಗಬೇಕಾದ ಚೆಲುವಾದ  ಹೂವು ಕಾಮುಕರ ತುಳಿತದಲಿ ಸಿಕ್ಕಿ ಪಟ್ಟಳು ನೋವು ಕಾಮಾಂಧರಿಗಿಲ್ಲವೇ ಇನಿತು ಕರುಳು ಕೊಡಬೇಕು ಅವರಿಗೆ ಶಿಕ್ಷೆ ಉರುಳು ಮುಗ್ಧ ಮಗುವನ್ನೂ ಬಿಡದ ಕಾಮಾಂಧರೆ ನಿಮ್ಮ ಅಕ್ಕಾ ತಂಗಿಯರೂ ಹೆಣ್ಣಲ್ಲವೇ ನೆನೆಸಿರಿ ನಿಮ್ಮ ಮನೆಯ ಹೆಣ್ಣು ಮಕ್ಕಳನೊಮ್ಮೆ ಕಾಣಬಹುದೇನೋ ನೀವು ನಿಮ್ಮಲ್ಲಿ ನಿಮ್ಮನ್ನೇ ಹದ್ದಿನ ಕಣ್ಣಿನಲ್ಲಿ ಇರಿಯಬೇಡಿ ಅವಳ ನಿಮ್ಮ ಮನೆ ಮಗಳೆಂದು  ತಿಳಿಯಿರಿ ಅವಳ ಅತ್ಯಾಚಾರದಲಿ ನರಳಿದ ಕಂದಮ್ಮಗಳು ಸಹಜ ಬದುಕು ಅವರಿಗೆ ಸಾಧ್ಯವೇ ಹೇಳು ಕತ್ತಲಾದ ಅವರ ಬದುಕು ಸರಿಪಡಿಸಲಾದೀತೆ ಹೆತ್ತವರ ದುಃಖ ಕಣ್ಣೀರ ಒರೆಸಲಾದೀತೆ ಮಾನವ ನೀನು ಆಗಬೇಕು ನಿಜ ಮಾನವ ಅತ್ಯಾಚಾರದ ಕಪಿಮುಷ್ಟಿಯಿಂದ ರಕ್ಷಿಸಿ  ಮೆರೆಯಬೇಕು ನಿಮ್ಮ ತನವ ಪಂಕಜಾ.ಕೆ.

ನಾನೆಂದರೆ

ನಾನೆಂದರೆ ನಾನೆಂದರೇನು ಯೋಚನೆಗೆ ಬಿದ್ದೆ ನಾನು ಉತ್ಸಾಹ ಹುರುಪು ತುಂಬಿದ ಬೆಲೂನು ಚಿಕ್ಕ ಚಿಕ್ಕ ವಿಷಯಕ್ಕೂ ಒಡೆದು ಹೋಗುವ ಮನ ಪ್ರಕೃತಿ ಪ್ರೀತಿಯಲಿ ನಿತ್ಯ ನಲಿವ ತನನನ ನನ್ನೊಳಗೆ ಅವಿತಿಹನೊಬ್ಬ ಮೃದುಮನದ  ಕವಿ ಉಣಿಸುತಿಹನು ದಿನ ದಿನವೂ ಕವಿತೆಯ ಸವಿ ನೋವೋ   ನಲಿವೋ ಆಗುವುದು ಕವಿತೆ ರಾಗ ತಾಳಗಳಿಲ್ಲದಿದ್ದರೂ ಹೊಮ್ಮುವುದು ಕವಿತೆ ಜಗಳ ಕದನಗಳೆಂದರೆ  ಮಾರು ದೂರ ಪ್ರೀತಿ ಪ್ರೇಮಕೆ  ನಲಿವ ಹಾರ ಹಲವರಲ್ಲಿ ನಾನೊಬ್ಬಳಾಗಲಾರೆ ಸಾಧಿಸುವ ಛಲವಿರುವ ಛಲಗಾತಿ ಬಾರೆ ಪಂಕಜಾ. ಕೆ.

ಕಥನ ಕವನ ಬೆಳೆಯುವ ಸಿರಿ ಕಾವ್ಯಕೂಟ ದಲ್ಲಿ ಮೆಚ್ಚುಗೆ

ಕಥನ ಕವನ ಬೆಳೆಯ ಸಿರಿ ಪುಟ್ಟ ಮಗುವು ಆಟವಾಡುತ ಅಜ್ಜ ಅಜ್ಜಿಯ ಮಡಿಲಿನಲ್ಲಿ ಬೆಳೆಯತೊಡಗಿತು ವಂಶಕುಡಿಯ ಬೆಳೆಸುವಲ್ಲಿ ಸುಖವ ಕಾಣುತ ಹಿರಿಯರಿದ್ದರು ಮುದ್ದು ಮಗುವಿನ ಆಟ ಪಾಠ ಮನಕೆ ಹಿಗ್ಗು ತರುತಲಿರಲು ಬೆಳೆದ ಮಗುವು ಶಾಲೆಗೆಂದು ಹೊರಟು ಬಿಟ್ಟಿತು ಅಜ್ಜ ಅಜ್ಜಿ ಬಿತ್ತಿದಂತ ಉತ್ತಮ ಸಂಸ್ಕಾರ ಮಗುವಿನಲ್ಲಿ ಬೆಳೆಯ ತೊಡಗಿತು ಮೃದು ಮನದ ಚೆಲುವ ಮಗುವು ಅಜ್ಜ ಅಜ್ಜಿಯ ಮಡಿಲಿನಲ್ಲಿ ಬೆಳೆಯತೊಡಗಿತು  ತಂದೆ ತಾಯಿ ಮುದುಕರಾಗ ಲು ಪ್ರೀತಿಯಿಂದ ಅವರ ಕಂಡು ಚಂದದಿಂದ  ಅವರ  ಕೂಡಿ ಬಾಳಿ ಹೆಸರ ಗಳಿಸಿದ ಬಿತ್ತಿ ದಂತೆ ಬೆಳೆಯು ಎಂಬ ಸತ್ಯವನ್ನು ಜಗಕೆ ಸಾರಿದ ಪಂಕಜಾ. ಕೆ

ಕಾಗೆ

ಕಾಗೆ ಬೆಳಗಿನ ಜಾವವೇ  ಬೇಗನೆ ಏಳುತ ಪರಿಸರ ಶುಚಿಯನು ಮಾಡುವುದು ಕಾಳನು ಕಂಡರೆ ಕಾ ಕಾ ಎನುತ ತನ್ನಯ ಬಳಗವ ಕರೆಯುವುದು ಮರದಲ್ಲಿ ಕುಳಿತು ಕತ್ತನು ಕೊಂಕಿಸಿ ಕಸವನು ಸೇರಿಸಿ ಸುಂದರ ಮನೆಯನು ಕಟ್ಟುವುದು ತನ್ನಯ ಮನೆಯಲಿ  ಕೋಗಿಲೆ ಮರಿಗೂ ಕಾವನು ಕೊಡುತ ಬೆಳೆಸುವುದು ಕಪ್ಪನೆ ಇದ್ದರೂ ಚೊಕ್ಕಟ ವಿರುವ ಗುಣವನು ತಾನು ಕಲಿತಿಹುದು ಏನೇ ಕಂಡರೂ ಬಳಗವ ಕರೆಯುತ ಹಂಚಿಯೇ ಅದನು ತಿನ್ನುವುದು  ಕಾಗೆಯ ಕಂಡರೆ  ಅನಿಷ್ಟವೆನುತ ದೂರಕೆ ಓಡಿಸುತ್ತಿರುವರು ಶ್ರಾದ್ಧದ ದಿನದಲಿ ಕಾಗೆಯ ಕರೆಯುತ ಕಾ ಕಾ ಎನುತ ಕಾಯುವರು ಸ್ವಾರ್ಥ ಬುದ್ಧಿಯ ಮನುಜ ಕಲಿವನೆ ನಿನ್ನಯ ಒಳ್ಳೆಯ ಗುಣಗಳನು ಹಕ್ಕಿಗಳಲ್ಲಿ ನೀನೆ ಗುಣದಲಿ ಶ್ರೇಷ್ಠವಾಗಿರುವೆಯಲ್ಲ ಕೊಡದಿಹರೇಕೆ  ಮನ್ನಣೆ ಯನ್ನು ಜಗದ ಜನರು ನಿನಗೆ ಪಂಕಜಾ.ಕೆ

ನಿನ್ನ ಕುಂಚದಲಿ ಕಂಡೆ ನನ್ನ ನೆ

ಕವನ ಸ್ಪರ್ಧೆಗೆ ಶೀರ್ಷಿಕೆ..ನಿನ್ನ ಕುಂಚದಲ್ಲಿ ಕಂಡೆ ನನ್ನನ್ನೇ ಮುಚ್ಚಿದ ಕರಗಳೆಡೆಯಿಂದ ಇಣುಕುವ ಕಣ್ಣೋಟ ನಿನ್ನನೇ ನೋಡುತ್ತಾ ನಗುವ ಚೆಲು ನೋಟ ಕಣ್ಣು ತುಟಿಗಳಲಿ ಹೊಮ್ಮುತ್ತಿದೆ ನಸುನಗು ಮನದ ಭಾವನೆಗಳ ಹೊರಸೂಸುತ್ತಿದೆ ಚೆಲುನಗು ಕುಂಚದಲಿ ಸೆರೆಹಿಡಿದ ಭಾವನೆಗಳೆಲ್ಲ ಅದ್ಬುತ ಕಲಾಕಾರನೇ ನೀ ನನ್ನ ನಲ್ಲ ನಿನ್ನ ಕುಂಚದಲಿ  ಕಂಡೆ ನನ್ನನೇ ಒಲವ ಭಾಷೆಯ ತಿಳಿದೆ ನಾ ಮೆಲ್ಲನೆ ಕಣ್ಣ ನೋಟದಲಿ ಭಾವನೆಗಳ ಸೆಳೆತ ಮನದಲಿ ತುಂಬಿದೆ  ನಿನ್ನದೆಯ ಉಲಿತ  ನನ್ನದೇ ಭಾವನೆಗಳು ಚಿತ್ರದಲ್ಲಿ ತುಂಬಿದೆ ಮನಸು ನಿನ್ನೊಡನಾಟದ ಕ್ಷಣಗಳ ನೆನೆದಿದೆ ಹೇಳಬೇಕೆಂದಿದ್ದೆ ನಿನಗೆ ಅಂದೆ ನನ್ನ ಮನದ ಭಾವನೆಗಳ  ಬರಿದೆ ಕಂಗಳ ನೋಟದಲಿ ಮಧುರ ಭಾವನೆ ಕಮ್ನನೆ ನಾಚಿಕೆ ತೆರೆಯ ಸರಿಸುತ ನಗು ನೀ  ಸುಮ್ಮನೆ ಒಲವ ರಸವ ಸುರಿಸುತ್ತಾ ಬಾ ನಲ್ಲ  ನಿನ್ನ ಕುಂಚದಲಿ ನನ್ನನ್ನೇ ತಿಳಿದೆಯಲ್ಲ  ಪಂಕಜಾ. ಕೆ.

ಅಮೃತ ಭುವಿಯಲ್ಲಿ ದುಡಿವ ನೇಗಿಲಯೋಗಿ

..ಅಮೃತ  ಭುವಿಯಲ್ಲಿ ದುಡಿವ ನೇಗಿಲಯೋಗಿ ಭೂತಾಯಿ ಮಡಿಲಿಗೆ ಹಸಿರ ಹೊದಿಕೆಯ ಹೊದಿಸಿ ಉಣಿಸುವನು ನಮಗೆ ಅನ್ನದಾತ ಕೋಳಿಕೂಗುವ ಮುನ್ನ ನೇಗಿಲನು ಹೊತ್ತು ಹೊಲದಲ್ಲಿ ಉಳುತ ಹಾಡುವನು ರೈತ ಬಿಸಿಲು ಮಳೆ ಗಾಳಿಗೆಲ್ಲಾ ಅಂಜದೆಯೇ ಅಳುಕದೆಯೇ ದುಡಿಯುವನು ನಿತ್ಯ ನಮ್ಮ ಅನ್ನದಾತ ಅತಿವೃಷ್ಠಿ ಅನಾವೃಷ್ಟಿಗಳ ಕಾಟ ನಿತ್ಯವೂ  ಎಡೆಬಿಡದೆ ದುಡಿದರೂ  ಪ್ರಕೃತಿ ಮುನಿದರೆ ಮಾಡಬೇಕು ಉಪವಾಸ ಕಾಯಕವೇ ಕೈಲಾಸ ಎನುತ ದುಡಿಯುವ ಕರ್ಮಯೋಗಿ ಈತ ಅಮೃತ ಭುವಿಯಲ್ಲಿ ದುಡಿಯುವ ನೇಗಿಲಯೋಗಿ ದುಡಿಮೆಯೇ ದೇವರೆಂದು ತಿಳಿದಾತ ಉಣಿಸುವನು ನಮಗೆ ಈತ ನಮ್ಮ ಅನ್ನದಾತ ಎಂದೆಂದೂ ಸುಖಿಯಾಗಿರಲಿ ಈತ ನಮ್ಮ ಭಾಗ್ಯದಾತ ಪಂಕಜಾ.ಕೆ.

ಸತ್ಯವಂತರ ಕಾಲ. ಸ್ನೇಹ ಸಂಗಮ ಬಳಗದಲ್ಲಿ ಮೆಚ್ಚುಗೆ ಪಡೆದ ಕವನ

ಸತ್ಯವಂತರ ಕಾಲ ಅದೆಂತ  ಕಾಲವಿತ್ತು ಅಂದು ಸತ್ಯನೀತಿ ನ್ಯಾಯದಲಿ ನಡೆದು ಗುರಿ ಸೇರುವ ತವಕ ಒಬ್ಬರಿಗಿನೊಬ್ಬರು  ಸಹಕರಿಸಿ ಒಗ್ಗಟ್ಟಿನಲಿ ಕೂಡಿ ಬಾಳುತ್ತಿದ್ದ ಕಾಲ ಸತ್ಯಕ್ಕೆ ಜಯ ವೆನ್ನುವಂತಿದ್ದ ದಿನ ಪ್ರೀತಿ ವಿಶ್ವಾಸ ನಂಬಿಕೆಯ ಗೂಡು ಕಡಿಯಲಾರದ ಭಾಂಧವ್ಯದ ನಾಡು ದಟ್ಟ ದರಿದ್ರತೆಯಲ್ಲೂ ಸತ್ಯವನು ಬಿಡದವರು ಅಮಿಷಕೆ ಸೋಲದ ದೃಢ ಮನ ಪ್ರಾಣಕ್ಕೆ ಪ್ರಾಣಕೊಡುವ ಮುಗ್ಧ ಜನ ಇಂದೀಗ ಅಪರೂಪ ಇಂಥಹ ಜನ ನಿತ್ಯವೂ ಕಾಣುತ್ತಿದೆ ಕೊಲೆ ಸುಲಿಗೆ ಹಸು ಕಂದಮ್ಮಗಳನ್ನೂ  ಬಿಡದ ಕಾಮಾಂಧತೆ ಅನ್ಯಾಯ ಅನಾಚಾರಗಳು ತುಂಬಿ ಬದುಕು ದುರ್ಭರವಾಗುತಿದೆ ಕಳೆದು ಹೋದ ಕಾಲ  ಬಂದೀತೆ ಇನ್ನೊಮ್ಮೆ ಪಂಕಜಾ.ಕೆ.

ಒಲವಿನ ಕುಡಿ

ಒಲವಿನ ಕುಡಿ ನಮ್ಮಿಬ್ಬರ ಒಲವಿಗೆ ಸಾಕ್ಷಿಯಾಗಿ ಅವತರಿಸಿ ಬಂದ ಈ ಮುದ್ದು ಕಂದ ನಮ್ಮ ಬಾಳಿಗೆ ಬೆಳಕಾಗುವ ಆನಂದ ಎಂದೆಂದೂ ನೀ ನಗುತ್ತಿರು ನನ್ನೊಡಲ ಕಂದ ನನ್ನೆದೆಯ ಬಾಂದಳಕೆ ನೀ ಬೆಳಕಾಗಿ ಬಂದೆ ನಮ್ಮ ಪ್ರೇಮಕೆ ನೀ ಪ್ರತೀಕವನಿತ್ತೆ ನನ್ನೊಲವೇ ಕೊಡುವೆ ನಿನಗೆ  ಈ ಸವಿ ಮುತ್ತನಿಲ್ಲೆ ಪ್ರೀತಿಯ ಮುತ್ತೊಂದ ಹಣೆಗೆ ಒತ್ತಿ ಕೊಡುವೆ  ನಿನಗೆ ನನ್ನೆದೆಯ ಅಮೃತ ಬಾ ಮಗುವೇ ನೀ ನಮ್ಮ   ಮನೆ ಬೆಳಗುವ ಜ್ಯೋತಿ  ತಾಯ್ತನದ ಭಾರದಲಿ ನಲಿದಾಡುವ ಮಾತೇ ಮೈ ಮನದ ನೋವ ಕಳೆಯಲು ನಿನ್ನೊಡಲ ಪ್ರೀತಿಗಿದೋ ಕೊಡುವೆ  ನಿನಗೆ ನನ್ನ ಈ ಸವಿ ಮುತ್ತ ಅರಸಿ  ಪಂಕಜಾ.ಕೆ.

ಜನವರಿ 2020 ಸ್ನೇಹ ಸಂಗಮ ಬಳಗದಲ್ಲಿ ಉತ್ತಮ ವೆಂದು ಆಯ್ಕೆಯಾದ ಕವನ

ಜನವರಿ  2020  ಬಂದಿತು ಇಪ್ಪತ್ತು ಇಪ್ಪತ್ತು ವರ್ಷ ಪ್ರಕೃತಿಯಲೇನಿದೆ ಹೊಸತನದ  ಹರ್ಷ ಮೂಡಣದಲಿ ಮೂಡಿದ ರವಿ ಎಂದಿನಂತೆ ಜಗಕೆ ಪಸರಿಸಿದ ಬೆಳಕಿನ ಸವಿ ಪ್ರಕೃತಿಯಲಿ ಎಲ್ಲಿದೆ ಬದಲಾವಣೆ ಗೋಡೆಯ ಕ್ಯಾಲೆಂಡರ್ ಮೂಲೆ ಸೇರಿದ್ದೊಂದೇ ಬದಲಾವಣೆ  ಪ್ರಕೃತಿ  ಮಾತೆ ಚಿಗುರಿ ನಲಿಯುವ ದಿನ ನವ  ವಸಂತನಾಗಮನದ ದಿನ ಆಚರಿಸಬೇಕು ಸಂಭ್ರಮದಿಂದ ಹೊಸವರ್ಷವನು ಆ ದಿನ ಬೇವು ಬೆಲ್ಲಗಳ ಹಂಚಿ  ಎಲ್ಲರೊಡನಾಡಿ ನಲಿವ ದಿನ ಕುಡಿತ ಕುಣಿತದಲ್ಲಿ ಪರಿಸರ ಹಾಳು ಡಿಸೆಂಬರ್ 31 ರ ಮಧ್ಯರಾತ್ರಿಯ ಗೋಳು ಹೊಸ ವರ್ಷವೆಂದು ಆಚರಿಸುವರು ಆ ಕ್ಷಣವ ಪ್ರಕೃತಿಯ ಬದಲಾವಣೆಗೆ ಕಾಯಬೇಡವೆ ಮಾನವ ಯುಗಾದಿಯ ಆ ಶುಭದಿನ ಪ್ರಕೃತಿಯ ಜತೆ ನಲಿಯೋಣ ಹೊಸವರ್ಷ ದ ಸಂಭ್ರಮವನ್ನು ಪ್ರಕೃತಿಯ ಜತೆ ಆಚರಿಸೋಣ ಪಂಕಜಾ.ಕೆ.

ಚುಟುಕು

(ಚುಟುಕು...) ಬೇವು..ಮಾವು ಬಾಳಿನಲಿ ಬರಬಹುದು ಕಷ್ಟ ನಷ್ಟಗಳೆಂಬ ಬೇವು ಸಹನೆಯಲಿ ಇದ್ದರೆ ಪಡೆಯಬಹುದು ಸಿಹಿ ಮಾವು ಪ್ರೇಮ ಪಕ್ಷಿಗಳಂತೆ ಇರಬೇಕು ಎಂದೆಂದೂ  ನಾವು ಕಷ್ಟ ಸುಖಗಳಲಿ  ಜತೆಯಾಗಿಸಾಗುತಲಿದ್ದರೆ ಗೆಲುವು ಪಂಕಜಾ.ಕೆ

ಶಾಯರಿಗಳು

[28/12/2019, 2:03 PM] pankajarambhat: ಶಾಯರಿ  ನಾಳೆ ಇಂದು ಮಾಡಬೇಕಿದ್ದ ಕೆಲಸ ನಾಳೆ ಮಾಡೋಣವೆಂದು ಉದಾಸೀನ ಮಾಡಿದ ಆ ನಾಳೆ ಎನ್ನುವುದು  ಜೀವ ಹೋಗುವತನಕ ಬರಲೇ ಇಲ್ಲ ಪಂಕಜಾ.ಕೆ. [28/12/2019, 2:08 PM] pankajarambhat: ಶಾಯರಿ ಕಣ್ಣೋಟ ತನ್ನನ್ನೇ ನೋಡುವ ಆಕೆಯನ್ನು ಕಂಡು ಖುಷಿಯಿಂದ ಸಿಳ್ಳೆ  ಹೊಡೆದ ಗುಂಡ ಕೆನ್ನೆ ಚುರುಕ್  ಎಂದಾಗಲೇ ಗೊತ್ತಾಗಿದ್ದು ಅಕೆಯದು ಮೆಳ್ಳೆಕಣ್ಣು ಪಂಕಜಾ.ಕೆ [28/12/2019, 2:09 PM] pankajarambhat: ಶಾಯರಿ ಬೆಡಗಿ ಆತನ  ಬಣ್ಣ  ಬಣ್ಣದ ಮಾತುಗಳಿಗೆ ಮರುಳಾಗಿ ಸಾಕಿ ಸಲಹಿ ವಿದ್ಯೆ ಕಲಿಸಿದ ಹೆತ್ತವರನ್ನು ಬಿಟ್ಟು ಅವನ   ಜತೆಯಲ್ಲಿ ಮನೆ   ಬಿಟ್ಟ  ಹುಡುಗಿ ಇಂದೀಗ ಕೆಂಪು ದೀಪದ ಬೆಡಗಿ ಪಂಕಜಾ.ಕೆ

ಪ್ರಕೃತಿ ಐಸಿರಿ

ಪ್ರಕೃತಿ ಐಸಿರಿ ಹಸಿರು ಗುಡ್ಡ ಬೆಟ್ಟಗಳ ಬೆಳಕು ಜುಳು ಜುಳು ಹರಿಯುವ  ತೊರೆಯ ಝಳಕು ಹಾಡುವ ಕೋಗಿಲೆಯ ಗಾನದ ಇಂಪು ಅರಳಿರುವ ಹೂಗಳ ಗಂಧದ ಕಂಪು ಪ್ರಕೃತಿ ಸಾನಿಧ್ಯದಲಿರಲು ಮೈ ಮನಕೆ ಪುಳಕ ತುಂಬುತಿದೆ ಮನದಲ್ಲಿ ಕನಸುಕಾಣುವ ತವಕ ಭೂರಮೆಯ ಸೌಂದರ್ಯ ಸವಿಯುವ ಆನಂದ ಬೀಸುವ  ತಂಗಾಳಿಯಲಿ ಮನಕೆ ತುಂಬುತಿದೆ ಮುದ ಹಸಿರ ಸಿರಿಯಲಿ ಪವಡಿಸಿರಲು ಹಕ್ಕಿಗಳ ಚಿಲಿ ಪಿಲಿಗಾನದ ಜೋಗುಳ ಎನಿತು ಚೆಲುವಿನ  ನೋಟ  ತುಂಬಿದೆ ಈ ಬುವಿಯಲಿ ಚೆಲುವ ಸವಿಯುತ್ತಾ   ಪ್ರಕೃತಿಯಲಿ ನಲಿ ಪಂಕಜಾ .ಕೆ.

ಕತ್ತಲೆ ಬೆಳಕಿನಾಟ ಗ್ರಹಣದ ಬಗ್ಗೆ

ಕತ್ತಲೆ ಬೆಳಕಿನಾಟ  (ಚಿತ್ರ ಕವನ) ರಾತ್ರಿಯ ಕತ್ತಲ ಸೆರಗನು ಸರಿಸಿ ಬೆಳಕಿನ ಕಿರಣವ ಬುವಿಯಲಿ ಹರಡಿ ಬಂದನು ಭರದಲಿ ರವಿತೇಜ ಭೂರಮೆಯೊಡಲಿಗೆ ಚೈತನ್ಯವ ತುಂಬಿ ಮುಚ್ಚಿದ ಅಂಧಾಕಾರವ ಸರಿಸುತ ಬಾಂದಳಕೆಲ್ಲಾ ಬಣ್ಣವ ತುಂಬುತ  ಬಂದ  ನಿತ್ಯವೂ ಜಗವನು ಬೆಳಗುವನಾತ ಕತ್ತಲು ಬೆಳಕಿನ ಆಡುತ ಲಿರುವ ದಣಿವೆ ಇಲ್ಲದೆ ದುಡಿಯುವನೀತ  ಭೂರಮೆಯೊಡಲನು ಪೊರೆಯುವ ದೇವ ಮುಚ್ಚಿದ ಅಂಧಕಾರವ ಸರಿಸುವ ಧೀರ ಚೈತನ್ಯದ ಚಿಲುಮೆಯು ಈ  ಬಾವ ಬಡವ ಧನಿಕನೆಂಬ ಭೇದವು ಇಲ್ಲದೆ ಎಲ್ಲರ ಮನೆ ಮನಗಳ ಒಳಗಡೆ ತೂರಿ ತನ್ನಯ ಕಿರಣಗಳಿಂದ ನೇವರಿಸುವ ಸ್ನೇಹಿ ರಾತ್ರಿಯ ಕತ್ತಲ ಸೆರಗನು ಸರಿಸಿ ಬೆಳಕಿನ ಕಿರಣವ ಎಲ್ಲೆಡೆ ಚೆಲ್ಲುತ ಬರುತಿರಲು ಮುತ್ತಿತು ರವಿಯನು ಕೇತು ಹಿಡಿಯಿತು ಸೂರ್ಯನಿಗೆ ಗ್ರಹಣ ಗಿಡಮರಗಳು  ಸ್ತಬ್ಧ ವಾಗುತಲಿರಲು ಗಾಳಿಯು ತನ್ನಯ ಚಲನೆಯ ನಿಲ್ಲಿಸಿತು ಎಲ್ಲೆಡೆ ಮುಸುಕಿತು ಮುಸ್ಸಂಜೆಯ ಕತ್ತಲು ಕ್ಷಣದಲಿ ಆಯಿತು ಮೋಕ್ಷ   ಸೃಷ್ಟಿಯ ಸೊಬಗಿದು ಚೆಲುವಿನ ನೋಟ ಬಾನಿಗೆ ಕಂಕಣ ತೊಡಿಸುವ ಆಟ ಮೈಯನು ಮರೆಸುವ  ಅಕಾಶಕಾಯಗಳಾಟ   ಪಂಕಜಾ. ಕೆ

ಮುಸುಕಿದ.ಮಬ್ಬು

ಮುಸುಕಿದ ಮಬ್ಬು ನಿತ್ಯವೂ ಸುತ್ತಿತಿರುವೆ ಜಗವ ನೀನು ಚಂದ್ರ ತಾರೆಗಳೆಲ್ಲಾ  ನಿನ್ನ ಕಕ್ಷೆಯಲ್ಲೇ ಕಾಂತಿಯುತ ಕಿರಣವ ಬೀರಿ ಜಗವ ಬೆಳಗಿವೆ ನಿತ್ಯ ನೀನು ನಿನ್ನ ಸೌಂದರ್ಯವ  ಕಂಡು ಸಹಿಸಲಾರದೆ ಜಗಳವಾಡಲುನಿನ್ನ ಮುತ್ತಿರುವನೆ  ಚಂದ್ರ? ಜಗವು ಮುಳುಗಿತು ಒಂದು ಕ್ಷಣ ಕತ್ತಲಲ್ಲಿ ನೀನಿಲ್ಲದಿರೆ ಜಗಕೆ ಬಲವೆಲ್ಲಿ? ಅಪ್ಪಿದನೆ ಶಶಿ ನಿನ್ನ ಪ್ರೇಮದಲಿ ತೊಡಿಸಿ ಕಂಕಣವ ಪ್ರೀತಿಯಲಿ ಬಾನ ಬಯಲಲಿ ನಿಮ್ಮಿಬ್ಬರಾಟ ಬರಿ ಕಣ್ಣಿನಲ್ಲಿ ನೋಡಲು ದೃಷ್ಟಿ ನಾಶ ಪಂಕಜಾ.ಕೆ.

ಜಡೆ ಕವನ

ವಿಷಯ..ಜಡೆಕವನ ಶೀರ್ಷಿಕೆ ..ಮೋಡದ ಜತೆ ಹನಿಗಳ ಮುತ್ತು ಬಾನಂಗಳದಲಿ ತುಂಬಿದೆ ಮೋಡಗಳ  ಮುಸುಕು ಮುಸುಕು ಸರಿಯಲು ಹರಿಯಿತು ಮುತ್ತಿನ ಹನಿ ಹನಿಗಳ ಸ್ಪರ್ಶಕೆ ಭೂರಮೆಯು ಸಂತಸದಿ ನಲಿದು ನಲಿದ ಕ್ಷಣಗಳಲಿ  ಮನಕೆ ತುಂಬಿತು  ಹುರುಪು ಹುರುಪು  ಉತ್ಸ್ಸಾಹದಲಿ ಬಾನಿನಲಿ ಮೋಡಗಳಾಟ ಮೋಡಗಳಾಟದಲಿ ದಣಿದ ಹನಿಗಳ ಮುತ್ತು ಮುತ್ತು ಪಡೆದ ಚೆಲುವೆಯ  ನಾಚಿಕೆಯ ವೈಯಾರ ವೈಯಾರದಿ  ನಿಂತ ಸುಂದರಿಯ ಮೈಮಾಟ ಮೈಮಾಟದಲಿ ಮೈಮರೆಯಿತು  ಇನಿಯನ ಕಣ್ಣು ಕಣ್ಣೋಟದಲಿ ನೂರು ಭಾವನೆಗಳ ಸೆಳೆತ ಸೆಳೆತದಲಿ  ಸಂಗಾತಿಯ ಜತೆ ಮುದದ ಪಯಣ ಪಯಣದಲಿ ಒಬ್ಬರಿನ್ನೊಬ್ಬರು ಒಂದಾಗುವ ಭಾವ ಬಾವನೆಗಳ ಭಾರದಲಿ ಕುಣಿಯಿತು  ಮನಸು ನವಿಲು ನವಿಲ ನರ್ತನದ ತೆರದಲಿ ಹೊಮ್ಮಿತು ಪ್ರೀತಿ ಪ್ರೀತಿ ತುಂಬಿದ ಬಾಳು ಹರ್ಷದ ಕಡಲು ಕಡಲ ತೆರೆಗಳ ತೆರದಿ ನಲಿಯುತ್ತಿದೆ ಪ್ರೇಮಿಗಳ ಮನ ಪಂಕಜಾ.ಕೆ.

ಋಣ

.    ಋಣ ಮರಗಿಡಗಳ ಕಡಿದು ನಾಡಾಗಿಸಿಹರು ಮಳೆಯುಮುನಿದು ಬರಡಾಯಿತು ಭೂಮಿ ನೀರ ಸೆಳೆಯು ಅಳಿಯುತಲಿಹುದು ನೀರೆ ನೀರಿಗಾಗಿ ಅಲೆಯುತಲಿರುವಳು ಕೊಡವ ಹಿಡಿದು ನೀರಿಗಾಗಿ ಅಲೆದಾಟ ಎಲ್ಲಿಹುದು ನೀರಸೆಳೆ ತಿಳಿಯದೆ ಸುತ್ತಾಟ ಚಳಿಗಾಲದ ಈ ದಿನಗಳಲಿ ಸೆಖೆಯ ಝಳ  ಭಾಸ್ಕರನು ಸುರಿಸುತಿಹನು ಕೆಂಡದ ಮಳೆ ಹನಿ ನೀರಿಗಾಗಿ ಬಾಯಿ ಬಿಡುವ ಪರಿಸ್ಥಿತಿ ಪ್ರಕೃತಿ ನಾಶದಿಂದಾಗಿದೆ ಈ ಸ್ಥಿತಿ ಪ್ರಕೃತಿ ನಾಶವಾದರೆ ಉಳಿಯಬಹುದೇ ನಮ್ಮ ಜೀವ ಉಳಿಸಿ ಬೆಳೆಸಬೇಕು ಪ್ರಕೃತಿ ಸಿರಿಯ  ಬೇಗ ಸ್ವಚ್ಛ ಗಾಳಿ ಪರಿಸರದಲಿ ವಿಹರಿಸಲು ಆನಂದ ಶುದ್ಧಜಲಮೂಲವ ಉಳಿಸಿದರೆ ಚಂದ ಪ್ರಕೃತಿ ಕೊಟ್ಟ ಕೊಡುಗೆಯಿದು ನಮಗಾಗಿ ಇಡಬಾರದು  ಪ್ರಕೃತಿ ಮಾತೆಯ ಋಣವ ಬಾಕಿಯಾಗಿ ಪಂಕಜಾ.ಕೆ.

ಗಜಲ್ ಮೋಹಬ್ಬತ್ ಬಗ್ಗೆ ಸ್ನೇಹ ಸಂಗಮ ಬಳಗದಲ್ಲಿ ಮೆಚ್ಚುಗೆ ಪಡೆದ ಗಜಲ್

ಗಜಲ್ ನಿನ್ನೊಡನಾಟದಲ್ಲಿ ದಿನಗಳು ಕ್ಷಣಗಳಾಗುತಿದೆ ಇನಿಯಾ ಬಾಳೊಂದು ನಂದನ ವನದಂತೆ ಆಗಿದೆ ಇನಿಯಾ ನಮ್ಮ ಒಲವಿಗೆ ಸಾಕ್ಷಿಯಾಗುತಿದೆ ಈ ಭಾನು ತಂಗಾಳಿಯ ತಂಪಿನಲಿ ನಿನ್ನೊಡನೆ ನಲಿಯ ಬೇಕೆನಿಸಿದೆ ಇನಿಯಾ ನಿನ್ನ ಮೊಹಬ್ಬತ್ ನ ಸವಿಯ ನಿತ್ಯ ಸವಿದಿರುವೆನಲ್ಲ ಪ್ರೀತಿಯ ಸವಿ ನೀರಿನಲಿ ಮುಳುಗಬೇಕೆನಿಸಿದೆ ಇನಿಯಾ ಬೆಳದಿಂಗಳು ಹಾಲು ಚೆಲ್ಲಿದಂತೆ  ಸುರಿಯುತಿದೆ ಈ ರಾತ್ರಿಯಲ್ಲಿ  ತನುವು ನಿನ್ನ ಸಾಂಗತ್ಯ ಬಯಸಿದೆ ಇನಿಯಾ ಒಬ್ಬರಿನ್ನೊಬ್ಬರು ಅರಿತು ಬಾಳಿದರೆ ಸ್ವರ್ಗವಲ್ಲವೇ ಪಂಕಜಾ ಕಷ್ಟ ಸುಖಗಳಲಿ ಜತೆಯಾಗಿರಬೇಕೆನಿಸಿದೆ ಇನಿಯಾ ಪಂಕಜಾ.ಕೆ.

ದತ್ತಪದ ಗಜಲ್ ಕಾವ್ಯಾಕುಟ ಬಳಗದಲ್ಲಿ ಪ್ರಥಮ ಬಹುಮಾನ ಪಡೆದ ಗಜಲ್

ದತ್ತಪದಗಜಲ್. (....ತಂಗಾಳಿ ಸಮಯ  ತೊಗಟೆ ಇರಲಿ ಬೇಕಿತ್ತು) ನಮ್ಮಿಬ್ಬರ ಒಡನಾಟ ಮಾಗಲು ಸಮಯ ಬೇಕಿತ್ತು ನಾ ನಿನ್ನ  ಮನವ ತಿಳಿಯಲು  ಕಾಯ ಬೇಕಿತ್ತು ಮೊದಲ ನೋಟದಲ್ಲೇ   ನಾನು ಸೋತಿದ್ದೆ ನಿನಗೆ ನಾಚಿಕೆಯ ತೆರೆ ಸರಿಸಿ ನಿನ್ನೊಡನೆ ನಲಿಯಬೇಕಿತ್ತು  ಮರದ ತೊಗಟೆಯಂತೆ ಭಾವನೆಗಳು ಕಿತ್ತು ಬರುತಿದೆ ಪ್ರೀತಿ ಸಿಂಚನದಿಂದ ಒಲವು ಸುರಿಯ  ಬೇಕಿತ್ತು ಬೀಸುವ ತಂಗಾಳಿಯು ಪಿಸುಗುಡುವಂತಾಗುತ್ತಿದೆ ಏಕಾಂತದಿ ಒಲವ ಒಲೆಯ ನಿನ್ನೆದೆಯಮೇಲೆ ಬರೆಯ ಬೇಕಿತ್ತು ಬಾನ ಬಯಲಲಿ ಚಂದಿರನು ನಗುತ್ತಿರುವನಲ್ಲವೇ ನಮ್ಮಿಬ್ಬರ ಮುನಿಸು ಕರಗಿದ ಖುಷಿಯ ಸವಿಯ  ಬೇಕಿತ್ತು ಪ್ರೀತಿಯ ತನಿರಸವು ಇರಲಿ ಎಂದೆಂದೂ ನಮ್ಮ ಬಾಳಲಿ ನಿತ್ಯವೂ  ಜತೆಯಾಗಿ  ದಿನವ ಕಳೆಯ ಬೇಕಿತ್ತು  ನಿನ್ನ ಆಧರಗಳ ಮಧುರಸಕೆ ಸಾಟಿಯಾವುದು ಪಂಕಜಾ ಸವಿಯಲು ಬಿಡದೆ ನೀನೇಕೆ ನನ್ನೆದೆಯ ಇರಿಯ ಬೇಕಿತ್ತು ಪಂಕಜಾ.ಕೆ

ಮೂಕಾಂಬಿಕಾ ಭಕ್ತಿಗೀತೆ

ಮೂಕಾಂಬಿಕಾ ಭಕ್ತಿಗೀತೆ ಕೊಡಚಾದ್ರಿ ತಪ್ಪಲಲಿ ದಟ್ಟ ಕಾಡಿನ ಮಧ್ಯದಲಿ ನೆಲೆಸಿರುವ ತಾಯಿ ಮೂಕಾಂಬಿಕೆ ದುಷ್ಟರನು ಶಿಕ್ಷಿಸುತ ಶಿಷ್ಟರನು ಪೊರೆಯಲೆಂದು ಅವತಾರವೆತ್ತಿರುವ ದೇವಿ ಮೂಕಾಂಬಿಕೆ ಮೂಕಾಸುರನ ಸಂಹರಿಸಿ ಕೋಲ ಮಹರ್ಷಿಗಳಿಗೆ ಅನುಗ್ರಹಿಸಿ ಕೊಲ್ಲೂರ ಪುರದಲ್ಲಿ  ನೆಲೆನಿಂತೆಯೇ ಆದಿಶಂಕರರಿಗೆ ಒಲಿದು ಸಕಲ ಜೀವಗಳ ರಕ್ಷಿಸುವ ಆದಿಶಕ್ತಿ  ರೂಪತಾಳಿದ ಮೂಕಾಂಬಿಕೆ ನೆನೆಯುವೆನು ಅನುದಿನವು ಕರುಣೆಯಲಿ  ಕಾಯಮ್ಮ ನಮ್ಮನ್ನು ಜಗದಂಬಿಕೆ  ಕೋಟಿ ದೇವರಿಗೆ ಸಮವೆಂದು ಅರ್ಚಿಸುವರು ನಿನ್ನನ್ನು ಕರುಣೆಯಲಿ ನೋಡಮ್ಮ ಜಗದಂಬಿಕೆ ಪಂಕಜಾ.ಕೆ

ಒಲವ ನಿವೇದನೆ ಚಿತ್ರ ಕವನ ಸ್ನೇಹ ಸಂಗಮ ಬಳಗದಲ್ಲಿ ಉತ್ತಮ

ಒಲವ ನಿವೇದನೆ ನಿನ್ನನು ನೋಡಿದ ನನ್ನಯ ಮನವದು ತಣ್ಣಗೆ ಕಣಿಯಿತು ನವಿಲಂತೆ ಕಣ್ಣಲಿ  ಬಯಕೆಯು ಹೊನ್ನಿನ ತೆರದಲಿ ನಿನ್ನನು ಸೇರಲು ಬಂದಿಹೆನು ಒಲವನು  ಸುರಿಸುತ ಬಲವನು ಕೊಡುತ ಛಲದಲಿ ಸೇರುವೆ ಮನದನ್ನೇ ಕನಸಲಿ  ಕಾಡುತ ಮನಸಲಿ ನಿಲ್ಲುತ ತರು ನೀ ಎನಗೆ ಶುಭವನ್ನೇ ನಿನ್ನೊಡನಾಟವೇ ನನ್ನೆದೆ ತುಂಬಿದೆ ನನ್ನಯ ಉಸಿರೇ ನೀನಾದೆ ಕಣ್ಣಲಿ ನಿನ್ನಯ ಬಣ್ಣವ ತುಂಬಿಹೆ ಮುನ್ನಿನ ವಿಷಯವ ಅರುಹುವೆನು ಚಂದದ ಹೂವನು ಅಂದದಿ ಹಿಡಿದು ಮಂಡಿಯ ನೂರುತ ಕಾದಿರುವೆ ಮುಂದೆಯೇ ನಿಲ್ಲುತ ಮುಂದಿನ ದಿನದಲಿ ಚಂದದಿ ಜೀವನ ನಡೆಸುವ ಬಾ ಮೋಹದ ಅಮಲಲಿ  ಬಯಕೆಯ ಬಲೆಯಲಿ ಸಿಲುಕುತ ನಾನು ನರಳಿರುವೆ ಒಲವನು ಸುರಿಸಿ ನಲಿವನು ಹರಿಸಿ ಬಾಳನು ಬೆಳಗಲು ಬಾರೇ ಸಖಿ ಪಂಕಜಾ.ಕೆ.